''ಫೋನ್ ತುಂಬಾ ಬಿಸಿಯಾಗುತ್ತದೆ,'' ಎಂದು ನಿಮ್ಮ ಸ್ನೇಹಿತರು ಆಗಾಗ ದೂರುವುದನ್ನು ನೀವು ಕೇಳಿರುತ್ತೀರಿ. ಅಲ್ಲದೇ, ನೀವು ಕೂಡ ಅದೇ ರೀತಿ ಹೇಳಿರುತ್ತೀರಿ. ಇದು ಸ್ಮಾರ್ಟ್‌ಫೋನ್ ಬಳಕೆದಾರರ ಸಾಮಾನ್ಯ ದೂರು. ವಿಶೇಷವಾಗಿ ಫೋನ್ ರಿಜಾರ್ಜ್ ಮಾಡುವಾಗ, ಗೇಮ್ ಆಡುವಾಗ, ಸ್ಟ್ರೀಮಿಂಗ್ ಕಂಟೆಂಟ್ ನೋಡುವಾಗ ಫೋನ್ ವಿಪರೀತ ಎನ್ನುವಷ್ಟರ ಮಟ್ಟಿಗೆ ಬಿಸಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಸಾಮರ್ಥ್ಯವಿರುವ ಬ್ಯಾಟರಿಗಳನ್ನು ಎಲ್ಲ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಒದಗಿಸುತ್ತಿವೆ. ಈಗೀಗ 4000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಗಳು ಸಾಮಾನ್ಯ ಎನ್ನುವಂತಾಗಿದೆ. ಇಷ್ಟು ದೊಡ್ಡ ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಫೋನ್‌ಗಳನ್ನು ಚಾರ್ಜ್ ಮಾಡುವಾಗ ಫೋನ್ ಬಿಸಿ ನಮ್ಮ ಅನುಭವಕ್ಕೆ ಬರುತ್ತದೆ. ಹಾಗಾದರೆ, ಫೋನ್ ಮಿತಿಮೀರಿ ಬಿಸಿಯಾಗಲು ಕಾರಣ ಏನು ಎಂದು ಹುಡುಕತ್ತಾ ಹೊರಟರೆ ಅನೇಕ ಅಂಶಗಳು ನಮ್ಮ ಗಮನಕ್ಕೆ ಬರುತ್ತವೆ. ಆ ಪೈಕಿ, ಫೋನ್‌ನ ಹಾರ್ಡ್‌ವೇರ್ ಸಮಸ್ಯೆ, ಥರ್ಡ್ ಪಾರ್ಟಿ ಚಾರ್ಜರ್ ಬಳಕೆ, ಅನವಶ್ಯಕ ಆ್ಯಪ್‌ಗಳು ಬಳಕೆ... ಹೀಗೆ ನಾನಾ ಕಾರಣಗಳಿಂದಾಗಿ ಫೋನ್ ಬಿಸಿಯಾಗುತ್ತಲೇ ಇರುತ್ತದೆ. ಆದರೆ, ಫೋನ್ ಬಿಸಿಯಾಗಿದೆ ಎಂದು ನೀವು ಮಂಡೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಲವು ಟಿಫ್ಸ್‌ಗಳನ್ನು ಅನುಸರಿಸಿದರೆ ಫೋನ್ ಬಿಸಿಯಾಗುವುದನ್ನು ಕಡಿಮೆ ಮಾಡಬಹುದು.
ಬಿಸಿಲು ತಪ್ಪಿಸಿ
ಬಹಳ ಸಮಯದವರೆಗೆ ಸ್ಮಾರ್ಟ್‌ಫೋನ್ ಮೇಲೆ ಬಿಸಿಲು ಬೀಳದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅದು ಸ್ಮಾರ್ಟ್‌ಫೋನ್ ಬಿಸಿಯಾಗಲು ಕಾರಣವಾಗುತ್ತದೆ. ಅದರಲ್ಲೂ ಪ್ಲ್ಯಾಸ್ಟಿಕ್ ವಿನ್ಯಾಸ ಹೊಂದಿರುವ ಫೋನ್‌ಗಳು ಇನ್ನೂ ಹೆಚ್ಚಿಗೆ ಬಿಸಿಯಾಗಬಹುದು. ಅಧ್ಯಯನದ ವರದಿಯೊಂದ ಪ್ರಕಾರ, ದೀರ್ಘ ಸಮಯದವರೆಗೆ ಸ್ಮಾರ್ಟ್‌ಫೋನ್ ಬಿಸಿಲಿಗೆ ತೆರೆದುಕೊಂಡರೆ ಅದರ ಟಚ್‌ಸ್ಕ್ರೀನ್ ಕಾರ್ಯನಿರ್ವಹಣೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದಯಂತೆ. ಹಾಗಾಗಿ, ಮೊಬೈಲ್‌ಗಳನ್ನು ಸಾಧ್ಯವಾದಷ್ಟು ಬ್ಯಾಗ್‌ಗಳಲ್ಲಿ ಇಡಲು ಪ್ರಯತ್ನಿಸಿ. ಅದರಲ್ಲೂ ಚರ್ಮದ ಬ್ಯಾಗ್‌ಗಳಲ್ಲಿದ್ದರೂ ಇನ್ನೂ ಬೆಟರ್.
ಚಾರ್ಜಿಂಗ್ ಮಾಡುವಾಗ ಹುಷಾರ್
ಚಾರ್ಜಿಂಗ್ ಮಾಡುವಾಗ ಫೋನ್ ಒಂದಿಷ್ಟು ಉಷ್ಣಾಂಶವನ್ನು ಹೊರ ಹಾಕುತ್ತದೆ. ಹಾಗಾಗಿ, ಫೋನ್ ಸ್ವಲ್ಪ ಗಾಳಿಗೆ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು. ಚಾರ್ಜ್ ಮಾಡುವಾಗ ಅದನ್ನು ಬೆಡ್ ಅಥವಾ ಸೋಫಾ ಮೇಲೆ ಇಟ್ಟರೆ, ಉತ್ಪತ್ತಿಯಾಗುವ ಉಷ್ಣಾಂಶವನ್ನು ಹೊರ ಹಾಕಲು ಸಾಧ್ಯವಾಗುವುದಿಲ್ಲ. ಹಾಗಾದಾಗ ಫೋನ್‌ನ ಶಾಖ ಇನ್ನೂ ಹೆಚ್ಚಾಗತೊಡಗುತ್ತದೆ. ಚಾರ್ಜ್ ಮಾಡುವಾಗ ಫೋನ್ ಅನ್ನು ಗಟ್ಟಿ ಮೇಲ್ಮೈ ಹೊಂದಿರುವ ವಸ್ತುವಿನ ಮೇಲೆ ಇಡುವುದು ಒಳ್ಳೆಯದು.
ಬ್ಯಾಕ್ ಕೇಸ್ ತೆಗೆಯರಿ
ಫೋನ್ ಸುರಕ್ಷ ತೆಗೋಸ್ಕರ ಸಾಮಾನ್ಯವಾಗಿ ಎಲ್ಲರೂ ಬ್ಯಾಕ್ ಕೇಸ್ ಹಾಕಿರುತ್ತಾರೆ. ಆದರೆ, ಇದು ಚಾರ್ಜಿಂಗ್ ಮಾಡುವಾಗ ಫೋನ್‌ನ ಉಷ್ಣಾಂಶ ಹೆಚ್ಚಾಗಲು ಕಾರಣವಾಗುತ್ತದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಚಾರ್ಜ್ ಮಾಡುವಾಗ ಹ್ಯಾಂಡ್‌ಸೆಟ್‌ನ ಬ್ಯಾಕ್ ಕೇಸ್ ತೆಗೆಯಿರಿ. ಇದರಿಂದ ಫೋನ್ ಹೀಟ್ ಆಗುವುದು ತಡೆಯಬಹುದು ಮತ್ತು ಕೂಲ್ ಆಗಿ ಇಡಲು ಸಾಧ್ಯವಾಗುತ್ತದೆ.
ರಾತ್ರಿ ಪೂರ್ತಿ ಚಾರ್ಜಿಂಗ್ ಮಾಡಬಹುದೇ?
ಈ ಅಂಶವು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಅನ್ವಯಿಸುವುದಿಲ್ಲ. ಯಾಕೆಂದರೆ, ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳನ್ನು ರಾತ್ರಿಯಿಡಿ ಚಾರ್ಜಿಂಗ್ ಇಟ್ಟರೂ ಫೋನ್ ಹೀಟ್ ಆಗುವುದಾಗಲೀ, ಬ್ಯಾಟರಿ ನಷ್ಟವಾಗುವುದು ಆಗಲಿ ಆಗುವುದಿಲ್ಲ. ಯಾಕೆಂದರೆ, ಬ್ಯಾಟರಿ ಚಾರ್ಜಿಂಗ್ ಆದ ತಕ್ಷ ಣ ಅದಕ್ಕೆ ಕರೆಂಟ್ ಪ್ರಸರಣ ತಡೆಯಾಗುವಂತೆ ವ್ಯವಸ್ಥೆ ರೂಪಿಸಲಾಗಿರುತ್ತದೆ. ಆದರೆ, ಇದೇ ಮಾತನ್ನು ಹಳೆ ಮಾದರಿಯ ಫೋನ್‌ಗಳಿಗೆ ಹೇಳುವಂತಿಲ್ಲ. ವಿಶೇಷವಾಗಿ ಬೇಸಿಕ್ ಫೋನ್‌ಗಳಲ್ಲಿ ಇಂಥ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ, ರಾತ್ರಿಯಿಡಿ ಫೋನ್ ಅನ್ನು ಚಾರ್ಜಿಂಗ್ ಮಾಡಿದರೆ ಹೆಚ್ಚು ಹೀಟ್ ಆಗುವು ಸಾಧ್ಯತೆ ಹೆಚ್ಚಿರುತ್ತದೆ.
ಆ್ಯಪ್‌ಗಳ ಬಗ್ಗೆ ಇರಲಿ ಎಚ್ಚರ
ನಮ್ಮ ಸ್ಮಾರ್ಟ್‌ಫೋನ್‌ಗಳ ಆ್ಯಪ್‌ಗಳಿಂದ ತುಂಬಿ ಹೋಗಿರುತ್ತವೆ. ಬೇಕಾದ್ದು, ಬೇಡವಾದ ಎಲ್ಲ ಆ್ಯಪ್‌ಗಳನ್ನು ನಾವು ಡೌನ್‌ಲೋಡ್ ಮಾಡಿಕೊಂಡಿರುತ್ತೇವೆ. ಹೀಗೆ ಡೌನ್‌ಲೋಡ್ ಮಾಡಿಕೊಂಡ ಆ್ಯಪ್‌ಗಳ ಪೈಕಿ ಅನೇಕ ಆ್ಯಪ್‌ಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುತ್ತಲೇ ಇರುತ್ತವೆ ಮತ್ತು ಅವು ಬ್ಯಾಟರಿ ಪವರ್ ಅನ್ನು ಕಬಳಿಸುವ ಜತೆಗೆ ಫೋನ್ ಹೀಟ್ ಆಗಲು ತಮ್ಮ ಕೊಡುಗೆಯನ್ನು ನೀಡುತ್ತವೆ. ಹಾಗಾಗಿ, ಕೆಲಸಕ್ಕೆ ಬಾರದ ಮತ್ತು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುವ ಆ್ಯಪ್ ಅನ್ನು ಅನ್‌ಇನ್ಸ್‌ಟಾಲ್ ಮಾಡುವುದು ಇದಕ್ಕೆ ಇರುವ ಪರಿಹಾರ.
ಥರ್ಡ್ ಪಾರ್ಟಿ ಚಾರ್ಜರ್ ಬೇಡ
ಥರ್ಡ್ ಪಾರ್ಟಿ ಚಾರ್ಜರ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ನಿಮ್ಮ ಫೋನ್ ಯಾವ ಕಂಪನಿಯದ್ದು ಇರುತ್ತದೆ ಅದೇ ಕಂಪನಿ ಒದಗಿಸುವ ಚಾರ್ಜರ್‌ಗಳನ್ನು ಬಳಸುವುದು ಸೂಕ್ತ. ಇಲ್ಲದಿದ್ದರೆ ಬ್ಯಾಟರಿ ಮತ್ತು ಚಾರ್ಜರ್ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಬ್ಯಾಟರಿ ಹೆಚ್ಚಿನ ಪ್ರಮಾಣದಲ್ಲಿ ಹೀಟ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಸ್ಟ್ರೀಮಿಂಗ್ ಕಂಟೆಂಟ್
ಫೋನ್ ಬಿಸಿಯಾಲು ಸ್ಟ್ರೀಮಿಂಗ್ ಕಂಟೆಂಟ್ ಕೂಡ ಕಾರಣವಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ನೀವು ಯೂಟೂಬ್ ಅಥವಾ ನೆಟ್‌ಫ್ಲಿಕ್ಸ್‌ನಲ್ಲಿ ಗಂಟೆಗಳ ಕಾಲ ಸ್ಟ್ರೀಮಿಂಗ್ ಕಂಟೆಂಟ್ ನೋಡುತ್ತಿದ್ದರೆ ಹೀಟ್ ಜನರೇಟ್ ಆಗುತ್ತದೆ. ಇದಕ್ಕೆ ಕಾರಣ; ಫೋನ್ ಪ್ರೊಸೆಸರ್ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ಉಷ್ಣಾಂಶ ಹೆಚ್ಚಾಗುತ್ತದೆ.
ಫೋನ್ ಯಾಕೆ ಬಿಸಿಯಾಗುತ್ತದೆ?
ಫೋನ್ ಯಾಕೆ ಬಿಸಿಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸರಳವಾಗಿದೆ. ಫೋನ್ ಬಿಸಿ ಮಾಡುವ ನಿಜವಾದ 'ಅಪರಾಧಿ'ಗಳೆಂದರೆ ಬ್ಯಾಟರಿ, ಪ್ರೊಸೆಸರ್ ಮತ್ತು ಸ್ಕ್ರೀನ್. ಈ ಮೂರು ಘಟಕಗಳು ಉಷ್ಣಾಂಶವನ್ನು ಹೊರ ಹಾಕುತ್ತಲೇ ಇರುತ್ತವೆ. ಬ್ಯಾಟರಿಯೊಳಗಿನ ರಾಸಾಯನಿಕಗಳು ವಿದ್ಯುತ್ ಅನ್ನು ಉತ್ಪಾದಿಸಿ ನೀಡುವಾಗ ಬಿಸಿ ಸಹಜ. ಅದೇ ರೀತಿ, ಪ್ರೊಸೆಸರ್ ಮಾಹಿತಿಯನ್ನು ಅತ್ಯಂತ ವೇಗದಲ್ಲಿ ವರ್ಗಾವಣೆ ಮಾಡುತ್ತದೆ. ಸ್ಕ್ರೀನ್ ಬೆಳಕಳನ್ನು ಹೊರ ಚೆಲ್ಲುತ್ತದೆ. ಹೀಗಾಗಿ, ಈ ಎಲ್ಲ ಘಟಕಗಳು ತಮ್ಮ ಕಾರ್ಯವನ್ನು ನಿರ್ವಹಿಸುವಾಗ ಉಷ್ಣಾಂಶ ಹೊರ ಹಾಕುತ್ತವೆ ಮತ್ತು ಅದರ ಒಟ್ಟು ಬಿಸಿ ಅನುಭವ ನಮಗಾಗುತ್ತದೆ. ಈ ಮೂರು ಘಟಕಗಳು ಮಾತ್ರವಲ್ಲದೆ ಇನ್ನು ಅನೇಕ ಅಂಶಗಳು ಫೋನ್ ಹೀಟ್ ಆಗಲು ಕಾರಣಗಳಾಗುತ್ತದೆ. ಈ ಲೇಖನವು ವಿಜಯ ಕರ್ನಾಟಕಲ್ಲಿ ಪ್ರಕಟವಾಗಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ