ಮುಂಬಯಿಗರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹೆಸರು ಗೊತ್ತಿರುತ್ತದೆಯೋ.. ಇಲ್ಲ ವೋ; ಆದರೆ, ಪೊಲೀಸ್ ಕಮಿಷನರ್ ಹೆಸರು ಮಾತ್ರ ಎಲ್ಲರ ನಾಲಿಗೆ ಮೇಲಿರುತ್ತದೆ. ಮುಂಬಯಿಗೆ ಕಮಿಷನರೇ ಮುಖ್ಯಮಂತ್ರಿ! ಇಂಥ ಹುದ್ದೆಗೆ ಇನ್ನೂ ಹೆಚ್ಚಿನ ಘನತೆಯನ್ನು ತಂದುಕೊಟ್ಟವರು ರಾಕೇಶ್ ಮಾರಿಯಾ.
ಛಿ ಛಿಟಟ್ಝಛಿ’ ್ಚಟಞಞಜಿಜಿಟ್ಞಛ್ಟಿ ಎಂದೇ ಖ್ಯಾತರಾಗಿರುವ ಐಪಿಎಸ್ ಅಕಾರಿ ರಾಕೇಶ್ ಅವರದ್ದು ಜನಪರ ಪೊಲೀಸ್ ವೃತ್ತಿ. ಜನರಿಗೆ ಕಮಿಷನರ್ ಕಚೇರಿಯನ್ನು ಮುಕ್ತವಾಗಿಸಿ ಅವರ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿಸಿದ್ದ ಅಕಾರಿ ಇವರು. ಇಂಥ ರಾಕೇಶ್ ಮಾರಿಯಾ ಅವರು ಸುದ್ದಿಯ ಕೇಂದ್ರಬಿಂದುವಾಗಿರುವುದು ಶೀನಾ ಬೋರಾ ನಿಗೂಢ ಕೊಲೆ ಪ್ರಕರಣದಲ್ಲಿ. ತನಿಖೆಯನ್ನು ಅವರು ಚುರುಕುಗೊಳಿಸುತ್ತಿದ್ದಂತೆ ಪೊಲೀಸ್ ಕಮಿಷನರ್ ಹುದ್ದೆಯಿಂದ ಅವರನ್ನು ಮಹಾರಾಷ್ಟ್ರದ ಡೈರೆಕ್ಟರ್ ಜನರಲ್(ಹೋಮ್‌ಗಾರ್ಡ್ಸ್)ಹುದ್ದೆಗೆ ವರ್ಗ ಮಾಡಲಾಯಿತು. ಇದು ಮಾ‘್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ಾರಿ ಚರ್ಚೆಗೆ ಕಾರಣವಾಯಿತು.
ಹಾಗೆ ನೋಡಿದರೆ, ರಾಕೇಶ್ ಮಾರಿಯಾ ಅವರು ಕೈ ಹಾಕಿದ ಪ್ರಕರಣಗಳೆಲ್ಲವೂ ಸೆನ್ಸೇಷನಲ್ ಆದಂಥವು. ಇದುವರೆಗೆ ಅವರು ‘ೇದಿಸಿರುವ ಅನೇಕ ಪ್ರಕರಣಗಳು ಅಪರಾ‘ ಜಗತ್ತಿನಲ್ಲಿ ಮೈಲಿಗಲ್ಲಾಗಿವೆ.
2003ರ ಗೇಟ್ ವೇ ಆಫ್ ಇಂಡಿಯಾ ಮತ್ತು ಜವೇರಿ ಬಜಾರ್ ಅವಳಿ ಸೋಟ ಪ್ರಕರಣ, ಸಂಜಯ್ ದತ್ ಪ್ರಕರಣ, ನೀರಜ್ ಗ್ರೋವರ್ ಕೊಲೆ ಪ್ರಕರಣಗಳನ್ನು ‘ೇದಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ, 26 / 11 ರ ಮುಂಬಯಿ ದಾಳಿಯಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ ಕಸಬ್‌ನ ವಿಚಾರಣೆಯನ್ನು ಕೂಡ ಇದೇ ಅಕಾರಿ ಮಾಡಿದ್ದು. ಕಸಬ್ ಬಾಯಿಂದಲೇ ಪಾಕಿಸ್ತಾನದ ಹಿನ್ನೆಲೆಯನ್ನು ಅವರು ಬಿಚ್ಚಿಟ್ಟಿದ್ದರು.
ಆರೋಪಿಗಳನ್ನು ‘ಥರ್ಡ್ ಡಿಗ್ರಿ’ಯ ಮೂಲಕ ವಿಚಾರಣೆ ಮಾಡುತ್ತಾರೆಂಬ ಆರೋಪ ರಾಕೇಶ್ ಮಾರಿಯಾ ಅವರ ಮೇಲಿದೆ. ಆದರೆ, ಇದನ್ನು ಅವರು ತಳ್ಳಿ ಹಾಕುತ್ತಾರೆ. ‘‘ಅದೆಲ್ಲವೂ ಸುಳ್ಳು. ಆರೋಪಿಗಳನ್ನು ಕೇವಲ ಹೊಡೆದು, ಹಿಂಸಿಸಿ ಬಾಯಿಬಿಡಿಸಲು ಸಾ‘್ಯವಿಲ್ಲ. ಅವರ ಮಾನಸಿಕ ಸ್ಥಿತಿಯನ್ನು ಅವಲೋಕಿಸಿ ವಿಚಾರಣೆ ನಡೆಸುತ್ತೇನೆ. ಹೀಗೆ ಮಾಡುವುದರಿಂದಲೇ ಸತ್ಯ ಹೊರಬರಲು ಸಾ‘್ಯ,’’ ಎನ್ನುತ್ತಾರೆ.
6 ಅಡಿ ಎತ್ತರದ ಆಜಾನುಬಾಹು ರಾಕೇಶ್ ಮಾರಿಯಾ ನಿಜಾರ್ಥದಲ್ಲಿ ‘ಡೈನಾಮಿಕ್ ಪೊಲೀಸ್ ಆಫೀಸರ್.’ ಅವರನ್ನು ಜನರು ಮಾತ್ರ ಆರಾಸುವುದಲ್ಲ, ಪೇದೆಯಿಂದ ಹಿಡಿದು ಹಿರಿಯ ಅಕಾರಿಗಳವರೆಗೂ ಅವರು ಅಚ್ಚುಮೆಚ್ಚು. ಅವರಿಗೆ ತಡರಾತ್ರಿ ಕೂಡ ಪೇದೆಗಳು ಫೋನ್ ಮಾಡಬಹುದು.
ಮಹಾರಾಷ್ಟ್ರದ ‘ಯೋತ್ಪಾದನೆ ನಿಗ್ರಹ ದಳ(ಎಟಿಎಸ್) ಎಸಿಪಿ ಸಂಜಯ್ ಕದಮ್ ಅವರು ರಾಕೇಶ್ ಮಾರಿಯಾ ಅವರನ್ನು ‘ಷರ್ಲಾಕ್ ಹೋಮ್ಸ್’ಗೆ ಹೋಲಿಸುತ್ತಾರೆ. 1994ರಲ್ಲಿ ಡಾ.ಜಲಿಸ್ ಅನ್ಸಾರಿಯನ್ನು ಸಿಬಿಐ ಬಂಸಿತ್ತು. ‘ಡಾ. ಬಾಂಬ್ ಆಫ್ ಬಾಂಬೆ’ ಎಂಬ ಕುಖ್ಯಾತಿ ಇದ್ದ ಈತನಿಂದ ಬಾಯಿ ಬಿಡಿಸಲು ಸಾ‘್ಯವಾಗಿರಲಿಲ್ಲ. ಆಗ ಸಿಬಿಐ ಮೊರೆ ಹೋಗಿದ್ದು ಇದೇ ರಾಕೇಶ್ ಮಾರಿಯಾ ಅವರನ್ನು. ಆಗ ಕ್ರೈಮ್ ಬ್ರಾಂಚ್‌ನಲ್ಲಿ ಡಿಸಿಪಿ ಆಗಿದ್ದ ಮಾರಿಯಾ, ಅ‘ರ್ ಗಂಟೆಯೊಳಗೆ ಅನ್ಸಾರಿ ಬಾಯಿ ಬಿಡಿಸಿದ್ದರು. 1989ರಿಂದ 1994ರ ಅವಯಲ್ಲಿ ಸಂ‘ವಿಸಿದ ಗುರುದ್ವಾರ ಮತ್ತು ಪೊಲೀಸ್ ಸ್ಟೇಷನ್‌ಗಳ ಸೋಟದ ತಪ್ಪೊಪ್ಪಿಗೆಯನ್ನು ನೀಡಿದ್ದ ಆತ. ಇದು ರಾಕೇಶ್ ಅವರ ಚುರುಕು ವಿಚಾರಣೆಗೆ ಹಿಡಿದ ಕೈಗನ್ನಡಿ. ನೋಡಲು ರಫ್ ಆಗಿ ಕಂಡರೂ ಆಂತರ್ಯದಲ್ಲಿ ಮೆದುವಾಗಿದ್ದಾರೆ. ಕೆಲಸದ ವಿಷಯ ಬಂದರೆ ಅವರು ಕಠಿಣವಾಗಿ ವರ್ತಿಸುತ್ತಾರೆ.
ಸ್ವತಃ ಷರ್ಲಾಕ್ ಹೋಮ್ಸ್‌ನ ಅಭಿಮಾನಿಯಾಗಿರುವ ರಾಕೇಶ್ ಅವರದ್ದು ಅಗಾ‘ವಾದ ಓದು. ಇಂಗ್ಲಿಷ್, ಉರ್ದು ಮತ್ತು ಪಂಜಾಬಿ ‘ಾಷೆಗಳ ಮೇಲೂ ಹಿಡಿತವಿದೆ. ಈ ‘ಾಷಾಜ್ಞಾನ ಕಸಬ್ ವಿಚಾರಣೆ ವೇಳೆ ನೆರವಾಯಿತು ಅವರಿಗೆ. ಬ್ಯಾಸ್ಕೆಟ್ ಬಾಲ್ ಮತ್ತು ಫುಟ್‌ಬಾಲ್ ಆಡುತ್ತಾರೆ. ಎಷ್ಟೋ ಬಾರಿ ಪೇದೆಗಳೊಂದಿಗೆ ಫುಟ್‌ಬಾಲ್ ಆಡಿದ್ದಿದೆ.
ಇಂಥ ಖಡಕ್ ಅಕಾರಿ ರಾಕೇಶ್ ಅವರು ಮುಂಬಯಿ ಪೊಲೀಸ್ ಕಮಿಷನರ್ ಆದಾಗ ತುಂಬ ಖುಷಿಪಟ್ಟರು. ‘‘ಬಾಂದ್ರಾದ ಗಲ್ಲಿಗಳಲ್ಲಿ ಬರಿಗಾಲಿನಲ್ಲೇ ಫುಟ್‌ಬಾಲ್ ಆಡಿಕೊಂಡಿದ್ದ ಹುಡುಗನ ಕನಸು ನನಸಾಯಿತು,’’ ಎಂದು ಮಾ‘್ಯಮಗಳಿಗೆ ಪ್ರತಿಕ್ರಿಯಿಸಿದ್ದರು.
ಆದರೆ, ಮಾರಿಯಾ ಅವರು ಕಮಿಷನರ್ ಆಗಿ ಆಯ್ಕೆಯಾಗಿದ್ದು ಕೂಡ ಅಷ್ಟು ಸರಳವಾಗೇನಲ್ಲ. ಈ ಹುದ್ದೆಗಾಗಿ, ಈಗ ಕಮಿಷನರ್ ಆಗಿರುವ ಅಹ್ಮದ್ ಜಾವೇದ್, ಮತ್ತೊಬ್ಬ ಹಿರಿಯ ಅಕಾರಿ ವಿಜಯ್ ಕಾಂಬಳೆ ಆಗ ತೀವ್ರ ಸ್ಪರ್‘ೆಯೊಡ್ಡಿದ್ದರು. ಅಲ್ಲದೆ, ರಾಜೀನಾಮೆ ನೀಡುವ ಬೆದರಿಕೆ ಕೂಡ ಹಾಕಿದ್ದರು. ಅಂದಿನ ಕಾಂಗ್ರೆಸ್ ಮತ್ತು ಎನ್‌ಸಿಪಿ ನೇತೃತ್ವದ ಸರಕಾರ, ಅಳೆದೂ ಸುರಿದೂ ಮಾರಿಯಾ ಅವರನ್ನು ಅಂತಿಮ ಕ್ಷಣದಲ್ಲಿ ಕಮಿಷನರ್ ಆಗಿ ನೇಮಕ ಮಾಡಿತ್ತು. ಪರಿಸ್ಥಿತಿ ಹೇಗಿತ್ತು ಎಂದರೆ, ಅವರು ಅಕಾರ ಸ್ವೀಕರಿಸಿ ಅ‘ರ್ ಗಂಟೆ ತಮ್ಮ ಅಕಾರಿಗಳೊಂದಿಗೆ ಮಾತುಕತೆಯಾಡುವಷ್ಟೂ ಸಮಯವಿರಲಿಲ್ಲ. ಅಂಥ ನಾಜೂಕಿನ ಸಂದ‘ರ್ದಲ್ಲಿ ಅವರು ಕಮಿಷನರ್ ಆಗಿ, ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.
ರಾಕೇಶ್ ಅವರು ಹುಟ್ಟಿದ್ದು 1957 ಜನವರಿ 19ರಂದು. ದೇಶ ಇಬ್ಭಾಗವಾದಾಗ ಇವರ ತಂದೆ ಪಾಕಿಸ್ತಾನದಿಂದ ಮುಂಬಯಿಗೆ ವಲಸೆ ಬಂದರು. ಅವರು ಚಿತ್ರ ನಿರ್ಮಾಪಕರೂ ಹೌದು. ಮನಸ್ಸು ಮಾಡಿದ್ದರೆ ರಾಕೇಶ್ ಅವರು ಅದೇ ಕ್ಷೇತ್ರದಲ್ಲಿ ಮುಂದುವರಿಯಬಹುದಿತ್ತು. ಆದರೆ, ಪೊಲೀಸ್ ವೃತ್ತಿ ಆಯ್ದುಕೊಂಡ ಅವರೇ ಈಗ ಅನೇಕ ಬಾಲಿವುಡ್ ಸಿನಿಮಾಗಳಿಗೆ ಸೂರ್ತಿಯಾಗಿದ್ದಾರೆ. 2004ರಲ್ಲಿ ತೆರೆಗೆ ಬಂದ ‘ಬ್ಲಾಕ್ ಫ್ರೈಡೇ’, ‘ಮ್ಯಾಕ್ಸಿಮಮ್ ಸಿಟಿ’, 2008ರಲ್ಲಿ ತೆರೆ ಕಂಡ ‘ಎ ವೆನ್ಸ್‌ಡೇ’, 2013ರಲ್ಲಿ ತೆರೆಕಂಡ ‘ದಿ ಅಟ್ಯಾಕ್ಸ್ ಆಫ್ 26/11’, ‘ದಿ ಸೀಜ್’ ಚಿತ್ರಗಳು ಇವರ ವ್ಯಕ್ತಿತ್ವವನ್ನೇ ಕೇಂದ್ರೀಕರಿಸಿವೆ. ಈ ಸಿನಿಮಾಗಳಲ್ಲಿ ಬಿಂಬಿತವಾಗಿರುವ ಪ್ರಮುಖ ತನಿಖಾಕಾರಿಯ ಚಿತ್ರಣಕ್ಕೆ ಇವರೇ ಸೂರ್ತಿ. ರಾಕೇಶ್ ಮತ್ತು ಪ್ರೀತಿ ದಂಪತಿಗೆ ಕುನಾಲ್ ಮತ್ತು ಕ್ರಿಶ್ ಮಕ್ಕಳಿದ್ದಾರೆ. ಇವರ ತಂದೆಯ ಚಿತ್ರ ನಿರ್ಮಾಣ ಕಂಪನಿ ಕಲಾನಿಕೇತನ ಇವರ ಒಡೆತನದಲ್ಲೇ ಇದೆ.
1981ರ ಬ್ಯಾಚ್‌ನ ಐಪಿಎಸ್ ಅಕಾರಿಯಾದ ರಾಕೇಶ್ ಅವರು ಮಹಾರಾಷ್ಟ್ರದ ಅಕೋಲಾ ಮತ್ತು ಬುಲ್ದಾನಾ ಜಿಲ್ಲೆಗಳ ಸಹಾಯಕ ಜಿಲ್ಲಾ ರಕ್ಷಣಾಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಪೊಲೀಸ್ ವೃತ್ತಿಯ ಪರಿಯೊಳಗೆ ಬಂದರು. ನಂತರ ಅವರು, 1986ರಲ್ಲಿ ಮುಂಬಯಿಗೆ ವರ್ಗವಾದರು. 1993ರಲ್ಲಿ ಟ್ರಾಫಿಕ್‌ನ ಡೆಪ್ಯುಟಿ ಪೊಲೀಸ್ ಕಮಿಷನರ್ ಆಗಿದ್ದರು. 2014 ಫೆಬ್ರವರಿ 15ರಂದು ಮುಂಬಯಿ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡರು.
ರಾಕೇಶ್ ಅವರೇನೂ ವಿವಾದಗಳಿಂದ ಮುಕ್ತರಾಗಿಲ್ಲ. ಮುಂಬಯಿ ದಾಳಿ ವೇಳೆ ಮೃತಪಟ್ಟ ಅಶೋಕ ಕಾಮ್ಟೆ ಸಾವಿಗೆ ಇವರೇ ಕಾರಣ ಎಂದು ಕಾಮ್ಟೆ ಪತ್ನಿ ವಿನಿತಾ ಆರೋಪಿಸಿದ್ದರು. ಇತ್ತೀಚೆಗಷ್ಟೇ ‘ಾರಿ ಸುದ್ದಿಗೆ ಕಾರಣವಾಗಿದ್ದ ಲಲಿತ್ ಮೋದಿ ಅವರನ್ನು ‘ೇಟಿ ಮಾಡಿದ ಆರೋಪ ಅವರಿಗೆ ಎದುರಾಗಿತ್ತು. ಈ ಬಗ್ಗೆ ಸ್ಪಷ್ಟನೆಯನ್ನೂ ಅವರು ಮುಖ್ಯಮಂತ್ರಿ ಫಡ್ನವಿಸ್‌ಗೆ ನೀಡಿದ್ದಾರೆ. ಇದೀಗ ಶೀನಾ ಬೋರಾ ಕೊಲೆ ಪ್ರಕರಣವನ್ನು ‘ೇದಿಸಿದರೂ ವಿವಾದ ಅವರ ಬೆನ್ನು ಬಿಟ್ಟಿಲ್ಲ. ಇನ್ನೂ ಅನೇಕ ವಿವಾದಗಳು ಇವರ ಸುತ್ತ ಗಿರಕಿ ಹೊಡೆಯುತ್ತಲೇ ಇವೆ.
- Mallikarjun Tippar
(This article published in VK on 13th sept 2015 )

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ