ಮಲ್ಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಲ್ಲ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಫೆಬ್ರವರಿ 13, 2007

ಪ್ರೀತಿ...


ಪ್ರೀತಿ ಎಂಬ ಎರಡೂವರೆ ಅಕ್ಷರ

ಆಶೆ ಆಕಾಂಕ್ಷೆಗಳು ಆಗರ


ಹೆಣ್ಣಿನ ಅಂತರಾಳ

ಹೊಕ್ಕು ನೋಡವ ತವಕ

ಒಮ್ಮೊಮ್ಮೆ ಎಟುಕಿತು..

ಮತ್ಚೋಮ್ಮೆ ಕುಟುಕೀತು..


ಪ್ರತಿ ಜೀವಿಯೂ ಬಯಸುವುದೂ

ಬೊಗಸೆಯಷ್ಟು ಹಿಡಿ ಪ್ರೀತಿಯನ್ನ

ಸಿಗದಿದ್ದರೆ ಜೀವನವೇ ಚಿತ್ರಾನ್ನ..!


ಸಹಿಸಿಕೊಂಡಷ್ಟು ಪ್ರೀತಿ ಸಹನೀಯ

ಇಲ್ಲದಿದ್ದರೇ ಜೀವನವೇ ನಿರಸ..

ಆಗದರಲಿ ಹಾಗೆ...

ಬೆಳಗಲಿ ಪತಿ ಪ್ರೇಮಿಯ ಹೃದಯ ಹಣತೆ


ಸಾಗಲಿ ಪ್ರೇಮಿಗಳ ನಿತ್ಯ ನೂತನ

ಜೀವನ ಪ್ರೇಮ ಕೊನೆಯಾಗದರಲಿ

ಎಲ್ಲಿಯೂ ನಿಲ್ಲದಿರಲಿ..



-ಮಲ್ಲಿಕಾರ್ಜುನ್


ಶುಕ್ರವಾರ, ಜನವರಿ 12, 2007

ಪ್ರೇಮ ದಿಗಂತ

ಪ್ರೇಮ ದಿಗಂತದತ್ತ
ಹಾರುತ್ತಿವೇ ಹಕ್ಕಿಗಳು
ರೆಕ್ಕೆ ಚಾಚುತ್ತ..
ಪಟ ಪಟನೆ ಬಡಿದು
ಏನೋ ಹೇಳುತಿವೆ
ನಿನ್ನ ಕಣ್ಣ ರೆಪ್ಪೆಗಳು...
ಹಕ್ಕಿಗೋ ಆಕಾಶವೇ
ಅವಕಾಶ..
ನಿನ್ನ ಕಣ್ಣಿಗೆ ನನ್ನೆದೆಯ
ಶೋಧ..
ಗೆಳತಿ,
ಹೃದಯದ ಹೆಬ್ಬಾಗಿಲು ಕಣ್ಣು
ಅಂದಿದ್ದು ನಿನ್ನ ನೋಡಿಯೇ ?
ಭಾವನೆಗಳು ಮಾಹಪೂರ
ನಿನ್ನ ಕಣ್ಣ ಸಾಗರ
ನನಗದೇ ನಿತ್ಯ ನಾಗರ..
-ಮಲ್ಲ

ಬೇಸರವೇಕೆ ಬೆಡಗಿ


ಜೀವನಾ ನಿಕೃಷ್ಟ ಅಲ್ಲ
ಸಾವು ಖಚಿತ,
ತಂದಕೋಬ್ಯಾಡ ಮುಂಚಿತ
ಬ್ಯಾಸರ್ ಯಾಕ್ ಬೆಡಗಿ..


ಪ್ರೀತಿ ಅಂದ್ರ್ ಅಲ್ಲ ಅಸಹ್ಯ
ಅದು ಜೀವನ್ಮುಖಿ
ತಿಳ್ಕೋ ಚಂದ್ರಮುಖಿ
ಬ್ಯಾಸರ್ ಯಾಕ್ ಬೆಡಗಿ..

ಪ್ರೀತಿಗೂ ನೀತಿಗೂ ಅಂತ್ರ
ಅಂತ್ ನೀ ಅಳುತ ಕುಂತ್ರ
ಇದ್ದ ಬಾಳು ಬೇಳಕಾಗತೈತೇನು ?
ಬ್ಯಾಸರ್ ಯಾಕ್ ಬೆಡಗಿ..
-ಮಲ್ಲ





ಶನಿವಾರ, ಜನವರಿ 6, 2007

ಮುಂಗಾರಿನ ನೆನಪು...


ಧೋ ಎಂದು ಸುರಿಯುವ
ಮುಂಗಾರು ಮಳೆಗೆ
ನನ್ನವಳ ನೆನಪು ಉಮ್ಮಳಿಸುತ್ತಿದೆ,
ಕೈ-ಕೈ ಹಿಡಿದು ಮಳೆಯಲ್ಲಿ ಹಾಕಿದ ಹೆಜ್ಜೆಗಳು
ಎದೆಯಲ್ಲಿ ಅಚ್ಚಳಿಯದೇ ಉಳಿದಿವೆ.

ಮುಂಗಾರಿನ ಮಳೆಗೆ ಹೆಣೆದ ಕನಸುಗಳು
ಇನ್ನೂ ಹಾಗೆ ಇವೆ, ನೀರ ನಿಂತ ಮಡಿಗಳಂತೆ
ಕಟ್ಟೆಯೊಡೆದು ನೀರು ಜೀನುಗುವಂತೆ
ಈಗಲೋ ಆಗಲೋ ಒಮ್ಮೊಮ್ಮೆ ಇಣಕುತ್ತಿವೆ.
ಗೂಡಿನಿಂದ ಮರಿಹಕ್ಕಿ ಗೋಣು ಹೊರ ಹಾಕಿದಂತೆ

ಮುಂಗಾರಿನಲ್ಲಿ ಅಲ್ಲವೇ ನಾನವಳಿಗೆ
ಕೊಟ್ಟದ್ದು ಮೊದಲ ಮುತ್ತು...
ಆಕೆ ನಾಚಿ ನೀರಾಗಿದ್ದು, ಎಲ್ಲವೂ ನೆನಪಾಗಿ ಕಾಡುತ್ತಿದೆ.

ಹಸಿಯಾದ ರಸ್ತೆಯಲ್ಲಿ ನಡೆಯಾಗದೂ
ನಡೆಯದೇ ಇರಲಾಗದೂ
ಕೈ ಹಾಕಿ ಮಾಡಿದ ಆಣೆ ಪ್ರಮಾಣಗಳು
ಮುಂಗಾರಿನ ಮಳೆಯಲ್ಲಿ ಅಲ್ಲವೇ
ಮತ್ತೆ ಏಕೆ ಮರೆತಳು....?

-ಮಲ್ಲಿಕಾರ್ಜುನ