ಶುಕ್ರವಾರ, ಡಿಸೆಂಬರ್ 5, 2014

ಸಾಮ್ರಾಜ್ಯಶಾಹಿ ನರಕ, ಈ ‘ದೇವಮಾನವ’ರ ಲೋಕ

ದೇವರು ಸರ್ವವ್ಯಾಪಿ, ನಿರಾಕಾರ, ನಿರ್ಗುಣ. ಆದರೆ, ಈ ದೇವಮಾನವರು, ಬಾಬಾಗಳು, ಗುರೂಜಿಗಳು ಎಲ್ಲಿಂದ ಬರುತ್ತಾರೋ?
ದೇವರ ಹೆಸರಲ್ಲಿ ಮುಗಟಛಿ, ದುರ್ಬಲ ಮನಸ್ಸಿನ ಜನರನ್ನು ಮೋಸ ಮಾಡಿ, ತಮ್ಮ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುವ ಇವರಿಗೆ
ನಮ್ಮ ರಾಜಕಾರಣಿಗಳು ಬೆಂಗಾವಲಾಗಿ ನಿಂತು ಬಿಡುತ್ತಾರೆ. ದೇವರ ಹೆಸರಲ್ಲಿ ಅತ್ಯಾಚಾರ, ಅನಾಚಾರ, ಎಲ್ಲ ಪಾಪ
ಕರ್ಮ ಮಾಡಿ, ಅದರಿಂದ ಬಚಾವಾಗಲು ಆಡಳಿತದ ನೆರವು ಪಡೆಯುತ್ತಾರೆ. ಆಡಳಿತಗಾರರು, ರಾಜಕಾರಣಿಗಳಿಗೆ ದೇವಮಾನವರ ಹಿಂದಿರುವ ‘ಕುರಿ ಮಂದೆ’ ಮತದಾರರ ಮೇಲೆ ಕಣ್ಣು. ಎಲ್ಲಕ್ಕಿಂತ ಹೆಚ್ಚಾಗಿ ಇವರ ಅನಾಚಾರ ರಕ್ಷಿಸಿಕೊಳ್ಳಲು ಅವರ ನೆರವು. ಇದೊಂದು ರೀತಿ ಕೊಡು- ಕೊಳ್ಳುವಿಕೆಯ ಭ್ರಷ್ಟ್ರ ಪ್ರಕ್ರಿಯೆ. ಹರ್ಯಾಣದ ಸ್ವಯಂಘೋಷಿತ ದೇವಮಾನವ ಸಂತ ರಾಮ್‌ಪಾಲ್ ಬಂಧನದ ಘಟನೆಯನ್ನೇ ನೋಡಿ. ಈ ನೆಲದ ಕಾನೂನನ್ನು ಗೌರವಿಸದಷ್ಟು ದಾರ್ಷ್ಟ್ಯ ಪ್ರದರ್ಶಿಸುತ್ತಾನೆ. ತನಗಾಗಿ ಖಾಸಗಿ ಸೇನೆಯನ್ನು ಸಾಕಿಕೊಳ್ಳುತ್ತಾನೆಂದರೆ ಆತ ಎಷ್ಟು ಹಣವಂತನಾಗಿರಬೇಕು? ಆಧ್ಯಾತ್ಮ, ದೇವರ ಹೆಸರಲ್ಲಿ
ಎಷ್ಟೊಂದು ಸುಲಿಗೆ ಮಾಡಿರಬೇಕು? ಇಷ್ಟೆಲ್ಲ ಮಾಡಬೇಕಿದ್ದರೆ ರಾಜಕಾರಣಿಗಳ ನೆರವು ಇರಲೇಬೇಕು. ಯಾಕೆಂದರೆ ಸ್ವತಂತ್ರ
ಸಂವಿಧಾನ ಹೊಂದಿರುವ ಭಾರತದಂಥ ದೇಶದಲ್ಲಿ ಒಬ್ಬ ಖಾಸಗಿ ವ್ಯಕ್ತಿ ಏಕಾಂಗಿಯಾಗಿ, ಇಡೀ ವ್ಯವಸ್ಥೆಯನ್ನು ಮೀರಿ ಬೆಳೆಯಲು ಸಾಧ್ಯವಿಲ್ಲ. ಇಲ್ಲಿ ದೇವಮಾನವರು ಅಥವಾ ಸೋ ಕಾಲ್ಡ್ ಗುರೂಜಿಗಳು ಹಾಗೂ ರಾಜಕಾರಣಿಗಳು ಜಂಟಿಯಾಗಿ
ಹೆಜ್ಜೆ ಹಾಕುತ್ತಾರೆ.
ಸಂತ ರಾಮ್‌ಪಾಲ್‌ನಂಥ ಘಟನೆಗಳು ಕೇವಲ ಭಾರತದಲ್ಲಿ ಮಾತ್ರ ನಡೆಯುತ್ತವೆ ಅಂದುಕೊಳ್ಳಬೇಡಿ. ಇವು ಸರ್ವವ್ಯಾಪಿ. ರಾಮ್‌ಪಾಲ್ ಬಂಧನ ಕುರಿತು ನಡೆದ ೨ ದಿನಗಳ ಹೈಡ್ರಾಮಾ ನಿಮಗೆ ಅಮೆರಿಕದ ಟೆಕ್ಸಾಸ್‌ನ ವಾಕೋ ಘಟನೆಯನ್ನೂ ನೆನೆಪಿಸಬಹುದು. ೧೯೯೩ರಲ್ಲಿ ಬ್ರಾಂಚ್ ದ್ರಾವಿಡಿಯನ್ಸ್ ಧಾರ್ಮಿಕ ಗುಂಪು ಮತ್ತು ಪೊಲೀಸರ ಮಧ್ಯೆ ೫೨ ದಿನಗಳ
ಕಾಳಗ ನಡೆದಿತ್ತು. ವಾಕೋದ ಮೌಂಟ್ ಕಾರ್ಮೆಲ್ ಸೆಂಟರ್ ನಲ್ಲಿ ತನ್ನ ಬೆಂಬಲಿಗರನ್ನು ಗುರಾಣಿ ರೀತಿಯಲ್ಲಿ ಬ್ರಾಂಚ್ ದ್ರಾವಿಡಿಯನ್ಸ್‌ನ ಮುಖ್ಯಸ್ಥ ಡೇವಿಡ್ ಕೊರೆಶ್ ಬಳಸಿಕೊಂಡಿದ್ದ. ಅಂತಿಮವಾಗಿ ೫೨ನೇ ದಿನ ಆತ ಶರಣಾಗುವ ಮೂಲಕ ಪ್ರಕರಣ ಅಂತ್ಯ ಕಂಡಿತ್ತು.
‘ಎಕನಾಮಿಕ್ಸ್ ಟೈಮ್ಸ್’ಗೆ ನೀಡಿದ ಹೇಳಿಕೆಯಲ್ಲಿ ಆರೆಸ್ಸೆಸ್ ಚಿಂತಕ ಕೆ.ಎನ್.ಗೋವಿಂದಾಚಾರ್ಯ ಅವರು ಈ ದೇವಮಾನವರು ಮತ್ತು ರಾಜಕಾರಣಿಗಳ ನಡುವಿನ ಅಪವಿತ್ರ ಮೈತ್ರಿಯನ್ನು ಧ್ವನಿಸುತ್ತಾರೆ. ‘ರಾಜಕೀಯ ಪಕ್ಷಗಳು ಮತ್ತು ಈ
ದೇವಮಾನವರು ಪರಸ್ಪರ ಒಪ್ಪಿತ ಮಾರ್ಗದಲ್ಲಿ ಸಾಗುತ್ತಾರೆ. ಪಕ್ಷಗಳು ದೇವಮಾನವರ ಜನಪ್ರಿಯತೆಯನ್ನು ತಮಗೆ ಅನುಕೂಲಕರ ಸರಕಾಗಿಸಿಕೊಂಡರೆ, ದೇವಮಾನವರು ಇವರಿಂದ ವ್ಯವಸ್ಥೆಯ ಮಾನ್ಯತೆ ಪಡೆದುಕೊಳ್ಳುತ್ತಾರೆ. ಇದೊಂದು ಅವಕಾಶವಾದಿತನ ಮತ್ತು ಅಂತಿಮವಾಗಿ ಇಂಥ ಪ್ರಕರಣಗಳು ತೀರಾ ಕೆಟ್ಟದಾಗಿ ಅವಸಾನ ಕಾಣುತ್ತವೆ’.
 ಇದನ್ನು ಇನ್ನಷ್ಟು ಸರಳವಾಗಿ ಉದಾಹರಣೆ ಸಹಿತ ಹೇಳುವುದಾದರೆ, ಇಂದಿರಾ ಗಾಂಧಿ ಅವರಿಗೆ ಯೋಗ ಗುರುವಾಗಿದ್ದ ಬ್ರಹ್ಮಚಾರಿ ಧೀರೇಂದ್ರ ಹಾಗೂ ಮತ್ತೊಬ್ಬ ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ. ಇವರಿಬ್ಬರೂ ‘ಅವಕಾಶವಾದಿತನದ ಪ್ರಮುಖ ಶಿಲ್ಪಿಗಳು’. ೧೯೭೫-೭೭ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಈ
ಬ್ರಹ್ಮಚಾರಿ ಧೀರೇಂದ್ರ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ. ಈತನನ್ನು ಆಗ ’ಛಿ ಐ್ಞಜಿಚ್ಞ ್ಕಟ್ಠಠಿಜ್ಞಿ’
(ರಾಸ್‌ಪುಟಿನ್ ರಷ್ಯಾದ ರೋಮನೋವ್ಸ್ ರಾಜಕೀಯ ಮನೆತನಕ್ಕೆ ಸಲಹೆಗಾರ. ಎಲ್ಲಕ್ಕಿಂತ ಹೆಚ್ಚಾಗಿಈತಕೂಡ ದೇವಮಾನವ. ಚ್ಟ ಘೆಜ್ಚಿಟ್ಝ ಐಐ ರಷ್ಯಾ ಸೇನೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಾಗ ಈ ರಾಸ್ ಪುಟಿನ್ ಆತನಿಗೆ ಪ್ರಮುಖ
ಸಲಹೆಗಾರನಾಗಿ, ರಷ್ಯಾದ ನಿರಂಕು ಶಪ್ರಭುತ್ವ ಅವನತಿಗೆ ಕಾರಣನಾದ) ಎಂದೇ ಕುಖ್ಯಾತಿ ಯಾಗಿದ್ದ. ಈ ಧೀರೇಂದ್ರ ಕೂಡ
ಇಂದಿರಾ ಗಾಂಧಿಯ ಒಂಚೂರು ಅವನತಿಗೂ ಕಾರಣನಾದ. ರಾಜಕೀಯ ವ್ಯವಸ್ಥೆ ಬಳಸಿಕೊಂಡು ತನ್ನ ಸಾಮ್ರಾಜ್ಯ ವಿಸ್ತರಿಸಿದ. ಅದೇ ರೀತಿ, ಚಂದ್ರಸ್ವಾಮಿಗೂ ನಿಕಟವಾದ ರಾಜಕೀಯ ನಂಟು ಇತ್ತು. ಈತನ ಆಶ್ರಮದ ಮೇಲೆ ದಾಳಿ ಮಾಡಿದಾಗ ಶಸಾಉಸಉ ದಲ್ಲಾಳಿಗಳಿಗೆ ೧೧ ದಶಲಕ್ಷ ಡಾಲರ್ ಪಾವತಿಸಿದ ಅಸಲಿ ದಾಖಲೆಗಳು ಸಿಕ್ಕಿದ್ದವು! ಅಂದರೆ, ಈ
ದೇವಮಾನವರು, ಗುರೂಜಿಗಳು ಕೇವಲ ಆಧ್ಯಾತ್ಮ ಬೋಧಿಸುವುದು, ಅನುಯಾಯಿಗಳನ್ನು ವಂಚಿಸುವುದು ಮಾತ್ರ ಮಾಡುತ್ತಿರಲಿಲ್ಲ. ಪಕ್ಕಾ ವ್ಯಾಪಾರಿಗಳು. ಭಾರತದ ಪಾರಂಪರಿಕ ಜ್ಞಾನವಾದ ಯೋಗ, ಆಧ್ಯಾತ್ಮವನ್ನು ಮಾರಾಟದ ಸರಕಾಗಿಸಿದವರು. ಆಯು ರ್ವೇದ ಪದ್ಛಿಧಿತಿಔಷಧಗಳನ್ನು ಮಾರಿದ ವರು. ಕೋಟಿ ಕೋಟಿ ಹಣ ಬಾಚಿ, ತಮ್ಮ ಸಾಮ್ರಾಜ್ಯ ವಿಸ್ತರಿಸಿ ಕೊಂಡವರು. ಮತ್ತೆ ಇದಕ್ಕೆಲ್ಲ ರಾಜ ಕಾರಣಿಗಳ ಬೆಂಬಲ ಇದ್ದೇ ಇರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!
ಬ್ರಹ್ಮಚಾರಿ ಧೀರೇಂದ್ರ, ಚಂದ್ರಸ್ವಾಮಿ ಯಂಥ ಖ್ಚಚ್ಞಚ್ಝಟ್ಠ ಜ್ಞಿಠಿ ಪಟ್ಟಿ ಚಿಕ್ಕದೇನಿಲ್ಲ. ಈ ಪಟ್ಟಿಗೆ ಸ್ವಾಮಿ ಸದಾಚಾರಿ, ಜ್ಞಾನ ಚೈತನ್ಯ, ಗುರ್ಮಿತ್ ರಾಮ್ ರಹೀಂ ಸಿಂಗ್, ಆಸಾರಾಮ್ ಬಾಪು, ನಿತ್ಯಾನಂದ ಸ್ವಾಮಿ, ಪ್ರೇಮಾನಂದ, ಇಚ್ಛಾಧಾರಿ ಸಂತ ಸ್ವಾಮಿ ಭೀಮಾನಂದ ಮಹಾರಾಜ್... ಹೀಗೆ ಪಟ್ಟಿ ಬೆಳೆಯುತ್ತದೆ. ಇವರೆಲ್ಲರೂ ಕೇವಲ ಅತ್ಯಾಚಾರ, ಕೊಲೆ, ಅನಾಚಾರಕ್ಕಾಗಿ
ಸುದ್ದಿಯಲ್ಲಿದ್ದವರಲ್ಲ. ಇವರು ಕಟ್ಟಿದ ಹಣದ ಸಾಮ್ರಾಜ್ಯ ಕೂಡ ಇವರನ್ನು ಕುಖ್ಯಾತಿಗೆ ತಳ್ಳಿದೆ. ಇವರಿಗಾರಿಗೂ ನಮ್ಮ
ನೆಲದ ಕಾನೂನು, ಕಟ್ಟಳೆ, ವ್ಯವಸ್ಥೆ ಬಗ್ಗೆ ಕಿಂಚಿತ್ ಗೌರವ ಇಲ್ಲ. ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಲ್ಲೆ ಎಂಬ ಹುಸಿ
ವಿಶ್ವಾಸಕ್ಕೆ ಇದೇ ರಾಜಕಾರಣಿಗಳು, ಭ್ರಷ್ಟ ವ್ಯವಸ್ಥೆ ನೀರೇರೆದಿರುತ್ತದೆ. ಇದೆಲ್ಲದರ ಜತೆಗೆ ನಮ್ಮ ಈ ಮೂಢ ಜನರ ಕುರುಡು ನಂಬಿಕೆ ಅವರಿಗೆಲ್ಲ ಎಲ್ಲಿಲ್ಲದ ಬಲ ತಂದುಕೊಡುತ್ತದೆ. ಹಾಗಾಗಿಯೇ ಅವರು, ಒಂದು ಚೌಕಟ್ಟಿನೊಳಗೇ ಇದ್ದುಕೊಂಡು, ಅದಕ್ಕೆ ಮತ್ತೊಂದು ಚೌಕಟ್ಟು ಹಾಕುವ ವಿಫಲ ಯತ್ನಕ್ಕೆ ಮುಂದಾಗುತ್ತಾರೆ. ಸಂತ ರಾಮ್‌ಪಾಲ್ ವಿಷಯದಲ್ಲೂ ಆಗಿದ್ದು ಇದೆ.
ಇದು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅಂಟಿದ ಜಾಢ್ಯವಲ್ಲ. ಮುಸ್ಲಿಂ, ಕ್ರೈಸ್ತ ಧರ್ಮವೂ ಸೇರಿದಂತೆ ಎಲ್ಲದರಲ್ಲೂ ಇಂಥ ಕಿರಾತಕರು ಇದ್ದೇ ಇರುತ್ತಾರೆ. ರಾಜಕೀಯ ನಂಟನ್ನು ತಮ್ಮ ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳುತ್ತಾ ರೆಂಬುದಕ್ಕೆ ದೆಹಲಿಯ ಸಯ್ಯದ್ ಅಹ್ಮದ್ ಬುಖಾರಿ ಉದಾಹರಣೆ. ೨೦೦೧ ಸೆಪ್ಟೆಂಬರ್ ೩ರಂದು ಪೊಲೀಸ್ ಅಧಿಕಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಖಾರಿ ಹಾಗೂ ಹಬಿಬ್‌ವುರ್ ರೆಹಮಾನ್ ವಿರುದಟಛಿ ಪ್ರಕರಣ ದಾಖಲಾಗಿದೆ. ಇವರ ವಿರುದಟಛಿ ದೆಹಲಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದರೂ ಇವರನ್ನು ಬಂಧಿಸಿ ಕೋರ್ಟ್‌ಗೆ ಹಾಜರಪಡಿಸಲು ದೆಹಲಿ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಇದಕ್ಕೆಲ್ಲ ಏನು ಕಾರಣ? ನೆಲದ ಕಾನೂನು ಧಿಕ್ಕರಿಸುವಂತೆ ಪ್ರೇರೇಪಿಸುವ ಶಕ್ತಿಗಳು ಯಾವುವು ಎಂಬುದನ್ನು ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.
 ಮತ್ತೆ ಕೆಲವು ಬಾಬಾಗಳು, ದೇವಮಾ ನವರು, ಗುರೂಜಿಗಳು ತುಂಬಾ ಸೌಜನ್ಯ ಮುಖವಾಡ ಧರಿಸಿಕೊಂಡು ತಮ್ಮ
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾವುದಾದರೊಂದು ರಾಜಕೀಯ ಪಕ್ಷದಲ್ಲೇ ಗುರುತಿಸಿಕೊಂಡು ಬಿಡುತ್ತಾರೆ.
ಇವರು ಕೂಡ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವುದರ ಜತೆಗೆ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಇಂಥವರು ಇನ್ನೂಡೇಂಜರ್!
ಭಾರತದಲ್ಲೇಕೆ ಈ ಗುರೂಜಿ, ದೇವಮಾನವರತ್ತ ಜನರು ಅಷ್ಟೊಂದು ಆಕರ್ಷಿತರಾಗುತ್ತಾರೆ? ಎನ್ನುವುದರ ಕುರಿತು ವರದಿಗಾರ ಸೌತಿಕ್ ಬಿಸ್ವಾಸ್ ಬಿಬಿಸಿಗೆ ಬರೆದಿದ್ದಾರೆ. ಅದರಲ್ಲಿ ಅವರು ಹೇಳುತ್ತಾರೆ- ‘ತೀವ್ರವಾಗಿ ನಗರೀಕರಣಗೊಳ್ಳುತ್ತಿರುವ
ಈ ದೇಶದ ಜನರ ಮಹತ್ವಾಕಾಂಕ್ಷೆ, ಗೊಂದಲ, ಹತಾಶೆಗೆ ಮದ್ದು ನೀಡುವ ರೀತಿಯಲ್ಲಿ ಈ ಗುರೂಜಿಗಳು ಗೋಚರವಾಗುತ್ತಾರೆ. ಈ ಗುರೂಜಿಗಳು, ದೇವಮಾನವರು ನಮ್ಮ ಜೀವನದಲ್ಲಿ ದೊಡ್ಡ ಸಂತೋಷವನ್ನು ತಂದು ಕೊಡಬಲ್ಲರು ಎಂಬ ಕಾರಣಕ್ಕೆ ಆಕರ್ಷಿತರಾಗುತ್ತಾರೆ. ತಮ್ಮ ಕುಟುಂಬದ ಅನಾರೋಗ್ಯಪೀಡಿತರನ್ನು ಮ್ಯಾಜಿಕ್‌ನಿಂದ ಸರಿ ಮಾಡಬಲ್ಲರು ಎಂಬ ನಂಬಿಕೆ. ಗುಜರಾತ್‌ನ ಸಬರ್ ಕಾಂತಾ ಜಿಲ್ಲೆಯಲ್ಲಿ ಒಬ್ಬ ಗುರು, ಮ್ಯಾಜಿಕ್‌ನಿಂದಲೇ ರೋಗಪೀಡಿತರನ್ನು ಗುಣ ಮಾಡುತ್ತೇನೆ ಎಂದು ನಂಬಿಸಿದ್ದ. ಆತನಿಗೆ ಸಾವಿರಾರು ಅನುಯಾಯಿಗಳು. ಇವರಲ್ಲಿ ಅನೇಕರು ಸತ್ತರೂ ಆತನ ಮೇಲೆ ನಂಬಿಕೆಯೇನೂ ಕುಂದಲಿಲ್ಲ’.
ಓಕೆ.. ಈ ಗುರೂಜಿಗಳು, ದೇವಮಾನವರು ತಮ್ಮ ಹಿತಾಸಕ್ತಿಗೆ ತಂತ್ರ ಹೆಣೆಯುತ್ತಾರೆ ಎಂದಿಟ್ಟುಕೊಳ್ಳೋಣ. ಆದರೆ, ಈ ಜನರಿಗೇನಾಗಿದೆ? ಒಬ್ಬ ಢೋಂಗಿ ಬಾಬಾ, ಗುರೂಜಿ, ದೇವಮಾನವರ ಸಲುವಾಗಿ ಪ್ರಾಣ ಬಿಡಲು ಮುಂದಾಗುತ್ತಾರೆ ಅಂದರೆ ಅದೆಂಥ ಮೂಢರು. ಇನ್ನೂ ದುರಂತ ಎಂದರೆ, ಹೀಗೆ ಯಾವುದೇ ವಿವೇಚನೆ ಇಲ್ಲದೆ ಇವರಿಗೆ ಶರಣು ಹೋಗುವವರು ಎಲ್ಲ ಬಲ್ಲವರು! ಆಧುನಿಕ ಪರಿಭಾಷೆಯಲ್ಲಿ ಇವರನ್ನು ವಿದ್ಯಾವಂತರು (ಬುದ್ದಿವಂತರು?) ಎಂದು ಕರೆಯುತ್ತಾರೆ. ಇವರಿಗೂ ಗೊತ್ತು. ಆತ ಸುಳ್ಳು ಹೇಳುತ್ತಿದ್ದಾನೆ. ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ ಎಂಬುದು. ಇನ್ನು ಒಂದಿಷ್ಟು ಜನರಿದ್ದಾರೆ. ಇವರು ಅನಕ್ಷರಸ್ಥರು. ದುರ್ಬಲ ಮನಸ್ಸಿನವರು. ಮೂಢನಂಬಿಕೆಯುಳ್ಳವರು. ಇವರಿಂದಾಗಿಯೂ ಈ ರಾಮ್‌ಪಾಲ್‌ನಂಥ ಬಾಬಾಗಳು,
ದೇವಮಾನವರಿಗೆ ಶಕ್ತಿ ಬಂದು ಬಿಡುತ್ತದೆ. ಆದರೆ, ಇವರೆಲ್ಲರೂ ಯಾವುದೋ‘ಜಾದೂ’ವೊಂದರ ನಿರೀಕ್ಷೆಯಲ್ಲಿ ದೇವಮಾನವರ ಪದತಲಕ್ಕೆ ಬಂದು ಬಿಡುತ್ತಾರೆ. ಇಂಥದ್ದಕ್ಕೆ ಕಡಿವಾಣ ಹಾಕಬೇಕಿದ್ದರೆ ಮೊದಲು ನಾನು ದೇವಮಾನವ, ನಿಮ್ಮ ಕಷ್ಟಗಳನ್ನು ಸರಿ ಮಾಡುತ್ತೇನೆಂದು ನಂಬಿಸುವ ಗುರೂಜಿ, ಬಾಬಾಗಳನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ಆದರೆ, ಕೊಡಿಸೋರು ಯಾರು? ಈ ಕೆಲಸ ಮಾಡಬೇಕಾದವರೇ ಅವರ ಜತೆ ಸೇರಿಕೊಂಡಿರುವಾಗ ಅದು ಹೇಗೆ ಸಾಧ್ಯ? ಸಾಧ್ಯ ಇಲ್ಲ ಎಂದಾದರೆ, ರಾಮ್‌ಪಾಲ್ ಬಂಧನದಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಒಂದಿಷ್ಟು ಜನರು ತಮ್ಮ ಪ್ರಾಣವನ್ನು ಪುಗ್ಸಟ್ಟೆಯಾಗಿ ಕಳೆದುಕೊಳ್ಳುತ್ತಲೆ ಇರುತ್ತಾರೆ. ಕೊನೆಪಕ್ಷ, ದೇವರು- ನಂಬಿಕೆಗಳಲ್ಲಿ ಸಮಾಧಾನ ಕಂಡು
ಕೊಳ್ಳುವುದಕ್ಕೆ ತಮಗೆ ಮಧ್ಯವರ್ತಿಗಳ ಅವಶ್ಯವಿಲ್ಲ ಅಂತ ಜನರಾದರೂ ಎಚ್ಚೆತ್ತು ಇಂಥ ತಥಾಕಥಿತ ದೇವಮಾನವರಿಂದ
ದೂರವಾಗುವುದು ಸಾಧ್ಯವಾದರೆ ಮಾತ್ರವೇ ಪರಿಹಾರದ ದಾರಿ ತೆರೆದುಕೊಳ್ಳುತ್ತದೆ.

(ಈ ಲೇಖನ ಕನ್ನಡಪ್ರಭದ ೨೦೧೪   ನವೆಂಬರ್ ನ ೨೧ರ ಸಂಚಿಕೆಯಲ್ಲಿ ಪ್ರಕಟವಾಗಿದೆ)


ಜಯಂತಿಗಳಿಗೆ ವ್ಯಾಖ್ಯಾನ, ಇದ್ಯಾವ ಮೋದಿ ವಿಧಾನ?

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಾಕಿರುವ ಇತ್ತೀಚಿನ ಟ್ರೆಂಡ್ ಎಂದರೆ ಮಹಾಪುರುಷರ ಜಯಂತಿ ಹಾಗೂ ನಿರ್ಣಾಯಕ ಇಸ್ವಿಗಳೊಂದಿಗೆ ಅಭಿಯಾನವೊಂದನ್ನು ತಳುಕು ಹಾಕುತ್ತಿರುವುದು. ಗಾಂಧಿ ಜಯಂತಿ ಸ್ವಚ್ಛ ಭಾರತದ ಬದಟಛಿತೆಗಿರಲಿ ಎಂದು ಬ್ರಾಂಡ್ ಮಾಡಿದ್ದಾರೆ. ಗಾಂಧೀಜಿ ಆಫ್ರಿಕಾದಿಂದ ಭಾರತಕ್ಕೆ ಮರಳಿದ ೧೯೧೫ರ ಇಸ್ವಿ ಇಟ್ಟುಕೊಂಡು, ೨೦೧೫ರಲ್ಲಿ ಅದಕ್ಕೆ ನೂರು ವರ್ಷಗಳಾಗುತ್ತವೆ ಎನ್ನುತ್ತ ತಾಯ್ನೆಲದಿಂದ ದೂರವಿರುವ ಅನಿವಾಸಿಗಳ ಒಳಗೊಳ್ಳುವಿಕೆಗೆ ಏನೋ ಯೋಜನೆ ಹರವಿಡುತ್ತಾರೆ. ಜೆಪಿ ಜನ್ಮ ದಿನಾಚರಣೆಯಂದು ಸಂಸದರ ಗ್ರಾಮ ದತ್ತು ಯೋಜನೆಗೆ ಚಾಲನೆ ಕೊಡುತ್ತಾರೆ. ಬಿಜೆಪಿ ಸರ್ಕಾರವೆಂದರೆ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ ಹೀಗೆ ಕೆಲ ಮಹನೀಯರನ್ನಷ್ಟೇ ಸಡಗರದಿಂದ ನೆನಪಿಸಿಕೊಂಡೀತು ಎಂದುಕೊಂಡಿದ್ದ ರಾಜಕೀಯ ವಿರೋಧಿಗಳಿಗೆ ಹಾಗೂ ಮೋದಿಯ ಕಟ್ಟರ್ ಬೆಂಬಲಿಗರಿಗೆ ಸಮಾನ ರೀತಿಯಲ್ಲಿ ಆಶ್ಚರ್ಯ ಹುಟ್ಟಿಸಿರುವ ಈ ಹೊಸ ಐಡಿಯಾದ ಜಾಯಮಾನ ಏನಿದ್ದಿರಬಹುದು?


----ಮೊದಲಿಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ, ನಂತರ ಮಹಾತ್ಮ ಗಾಂಧಿ ಜಯಂತಿ, ಜೆಪಿ ಜನ್ಮದಿನಾಚರಣೆ
ಇದೀಗ ನೆಹರು ಮತ್ತು ಇಂದಿರಾ ಗಾಂಧಿ ಜಯಂತಿ!
ಏನೆಂದರೆ, ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡು ನಾಲ್ಕೈದು ತಿಂಗಳಲ್ಲಿ ಈ ಜಯಂತಿಗಳಿಗೆಲ್ಲ ಹೇಗೆ ಟ್ವಿಸ್ಟ್ ಕೊಡುತ್ತಿದ್ದಾರೆ ನೋಡಿ. ಶಿಕ್ಷಕರ ದಿನಾಚರಣೆಯಲ್ಲಿ ಇಡೀ ದೇಶಾದ್ಯಂತ ಮಕ್ಕಳ ಜತೆ ಸಂವಾದ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರೆ, ಮಹಾತ್ಮ ಗಾಂಧಿ ಜಯಂತಿಯಂದು ತಮ್ಮ ‘ಸ್ವಚ್ಛ ಭಾರತ ಆಂದೋಲನ’ಕ್ಕೆ ಗುರಿಯಾಗಿಸಿಕೊಂಡರು. ಒಂದು ಪೀಳಿಗೆಯನ್ನು ಬಹುವಾಗಿ ಕಾಡಿದ ಮತ್ತು ಪ್ರೇರೇಪಿಸಿದ ಜಯಪ್ರಕಾಶ್ ನಾರಾಯಣ್
ಅವರ ಜಯಂತಿಯಂದು ‘ಸಂಸದ ಆದರ್ಶ ಗ್ರಾಮ ಯೋಜನೆ’ ಪ್ರಕಟಿಸುವ ಮೂಲಕ ಅವರ ಜನ್ಮ ದಿನಾಚರಣೆಗೂ ಹೊಸ
ಆಯಾಮ ಕೊಟ್ಟರು. ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದು, ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಜಯಂತಿಯನ್ನು ಸ್ವಚ್ಛ ಭಾರತ ಆಂದೋಲನ ಉದ್ದೇಶ ಈಡೇರಿಕೆಗೆ ಬಳಸಿಕೊಳ್ಳಲು ಅವರು ಹಿಂಜರಿಯುತ್ತಿಲ್ಲ ಎಂಬುದು! ಇದು ಕಾಂಗ್ರೆಸಿಗರಿಗೆ ಆಶ್ಚರ್ಯ ತರುವುದು ಸಹಜವಾದರೂ ಸ್ವತಃ ಬಿಜೆಪಿಯವರಿಗೆ ಮೋದಿಯ
ನಡೆ ಹುಬ್ಬೇರಿಸುವಂತೆ ಮಾಡಿದೆ. ಮೋದಿ ಎಲ್ಲ ರಾಷ್ಟ್ರೀಯ ನಾಯಕರ ಜಯಂತಿಗಳನ್ನು ಹೈಜಾಕ್ ಮಾಡುತ್ತಿದ್ದಾರೆ. ಆದರೆ
ಅದು ಒಳ್ಳೆಯ ಕೆಲಸಕ್ಕಾಗಿ ಎನ್ನುವುದಕ್ಕಾಗಿ ಅವರ ಈ ನಡೆಗೆ ಸ್ವಾಗತವೂ ದೊರೆಯುತ್ತಿದೆ.
ಅದೇನೆ ಇರಲಿ. ಮೋದಿಯ ಎಷ್ಟೇ ಪ್ರಬಲ ವಿರೋಧಿಗಳಾದರೂ ಸದ್ಯದ ಮಟ್ಟಿಗೆ ಮೋದಿ ಸಾಗುತ್ತಿರುವ ದಿಕ್ಕು ಮತ್ತು ಅವರು ಕೈಗೊಳ್ಳುತ್ತಿರುವ ನಿರ್ಣಯಗಳ ಬಗ್ಗೆ ತೀವ್ರ ಅಭಿಮಾನ ವ್ಯಕ್ತಪಡಿಸದಿದ್ದರೂ, ಪ್ರಬಲ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂಬುದಂತೂ ನಿಜ. ನಾವು ಇಷ್ಟು ದಿನ ಎಲ್ಲ ರಾಷ್ಟ್ರೀಯ ನಾಯಕರ ಜನ್ಮ ದಿನಾಚರಣೆ ಮತ್ತು ಪುಣ್ಯ ತಿಥಿಗಳನ್ನು ಆಚರಿಸಿಕೊಂಡು ಬರುತ್ತಿರುವುದನ್ನು ನೋಡಿದ್ದೇವೆ. ಅದು ತುಂಬಾ ಕ್ಲೀಷೆ ಮತ್ತು ರೂಟಿನ್ ಆಗಿರುವಂಥದ್ದಾಗಿತ್ತು. ಸರ್ಕಾರಿ ನೌಕರರಿಗೆ ಮತ್ತೊಂದು ರಜೆ. ನಾಯಕರಿಗೆ ಒಂದೆಡೆ ಸೇರಿ ಒಂದಿಷ್ಟು ಮಾತುಕತೆಯಾಡಲು ಸಿಗುವ ವೇಳೆ. ಇವಿಷ್ಟು ಬಿಟ್ಟು ಬೇರೇನು ಇತ್ತು ಹೇಳಿ? ಆದರೆ, ಮೋದಿ ಮಾತ್ರ ಜನ್ಮ ದಿನಾಚರಣೆಯ ನೆಪದಲ್ಲಿ ದೇಶಕ್ಕೆ ಒಂದಿಷ್ಟು ಉಪಯೋಗವಾಗುವ ಕೆಲಸ ಮಾಡಲು ಶ್ರೀಸಾಮಾನ್ಯನಿಂದ ಹಿಡಿದು ಎಲ್ಲರೂ ಒಳಗೊಳ್ಳುವಂತೆ ಮಾಡುತ್ತಿದ್ದಾರೆ! ಹಾಗಾಗಿಯೇ ಇದನ್ನು ಮೋದಿ ಅವರ ‘ಜಯಂತಿ ರಾಜಕೀಯ ನಡೆ’ ಎಂದು ವಿಶ್ಲೇಷಿಸಬಹುದೇನೋ?
ಇತ್ತೀಚಿನ ದಿನಗಳಲ್ಲಿ ಎಲ್ಲ ರಾಷ್ಟ್ರೀಯ ನಾಯಕರನ್ನು ಕೆಲವು ಪಕ್ಷಗಳು, ಕೆಲವು ಜಾತಿಗಳು, ಸಮುದಾಯಗಳಿಗೆ ತಮಗೇ ಸಂಬಂಧಿಸಿದ್ದವರು ಎಂಬಂತೆ ವರ್ತಿಸುತ್ತಿವೆ. ಈ ಮಿಥ್ ಅನ್ನು ತೊಡೆದು ಹಾಕಿ, ರಾಷ್ಟ್ರೀಯ ನಾಯಕರು ಯಾರೇ ಆಗಿರಲಿ
ಅವರು ದೇಶದ ಹೆಮ್ಮೆ ಎಂಬ ಪ್ರಜ್ಞೆಯನ್ನು ನಾಜೂಕಾಗಿ ಬಿತ್ತುತ್ತಿದ್ದಾರೆ. ಹಾಗೆ ನೋಡಿದರೆ ಅವರಿಗೂ ಈ ಅನಿವಾರ್ಯತೆ
ಇದೆ. ಒಂದೂ ಕಾಲು ಶತಮಾನ ಇತಿಹಾಸವಿರುವ ಕಾಂಗ್ರೆಸ್ ಗೆ ಸಹಜವಾಗಿಯೇ ನಾಯಕರನ್ನು ಆರಾಧಿಸುವ, ಅವರನ್ನು
ವೈಭವೀಕರಿಸುವ ಅಗಾಧ ಸಾಧ್ಯತೆಗಳಿವೆ. ಅಂಥ ಸಾಧ್ಯತೆಗಳು ಬಿಜೆಪಿಗೆ ಇಲ್ಲ. ದೀನ್ ದಯಾಳ್ ಉಪಾಧ್ಯಾಯ, ಶ್ಯಾಮ್
ಪ್ರಸಾದ್ ಮುಖರ್ಜಿ, ವೀರ ಸಾವರ್ಕರ್ ಇವರನ್ನೆಲ್ಲ ಒಂದು ಹಂತದವರೆಗೆ ರಿಬ್ರಾಂಡ್ ಮಾಡಬಹುದಾದರೂ ಅಲ್ಲಿ ಸೈದಾಟಛಿಂತಿಕ ಚರ್ಚೆಗಳ ಗದ್ದಲವೇ ಹೆಚ್ಚಾಗಿಬಿಡುವ ಅಪಾಯವಿದೆ. ಬಹುಶಃ ಈ ಕಾರಣದಲ್ಲೇ ಮೋದಿ ‘ಎಲ್ಲರನ್ನೂ, ಎಲ್ಲ ವಿಚಾರಧಾರೆಯವರನ್ನೂ ಒಳಗೊಳ್ಳಬಲ್ಲ’ ವ್ಯಕ್ತಿತ್ವಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಇದಕ್ಕೆ ವಿರೋಧಿ ಪಾಳೆಯಕ್ಕಿಂತ ಹೆಚ್ಚಾಗಿ, ಸ್ವಪರಿವಾರದವರ ಪ್ರತಿಕ್ರಿಯೆಗಳು ಹೇಗೆ ಬರಬಹುದು ಎಂಬ ಆಧಾರದಲ್ಲಿಯೇ ಮೋದಿಯವರ ಮುಂದಿನ ‘ಬ್ರಾಂಡಿಂಗ್’ ನೆರವೇರಲಿದೆ.
ಈ ಬ್ರಾಂಡ್ ದರ್ಬಾರ್‌ನಲ್ಲಿ ಮೋದಿ ಚಾಕಚಕ್ಯತೆಯನ್ನು ಗಮನಿಸಬೇಕು. ಒಂದು ವ್ಯಕ್ತಿ ಇಲ್ಲವೇ ವಸ್ತು ಹಲವು ಅಂಶಗಳನ್ನು ಪ್ರತಿನಿಧಿಸುವಂಥದ್ದು. ಅದರಲ್ಲಿ ಕೆಲವು ತಕರಾರಿಗೆ- ವಿವಾದಗಳಿಗೆ ಕಾರಣವಾಗಿದ್ದಿರಬಹುದು. ಆದರೆ ಅದನ್ನೇ ಮುಂದಿರಿಸಿಕೊಂಡು ಆ ವ್ಯಕ್ತಿ-ವಸ್ತುವನ್ನೇ ದೂರ ಮಾಡಿ, ಆ ಮೂಲಕ ಪರೋಕ್ಷವಾಗಿ ಆ ವ್ಯಕ್ತಿ-ವಿಷಯಗಳಲ್ಲಿ ಆಸಕ್ತಿ ಇರುವ ಜನಸಮೂಹದಿಂದಲೂ ದೂರವಾಗಿಬಿಡುವುದು ಬುದಿಟಛಿವಂತಿಕೆ ಅಲ್ಲ ಎಂಬುದನ್ನು ಗುಜರಾತ್‌ನ ವ್ಯಾಪಾರಿ
ಮಿದುಳು ಅರ್ಥಮಾಡಿಕೊಂಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಹಾಗಾಗಿಯೇ ಸೈದಾಟಛಿಂತಿಕವಾಗಿ ಗಾಂಧೀಜಿಯವರನ್ನು ಆರ್
ಎಸ್‌ಎಸ್ ಹಲವು ವಿಚಾರಗಳಲ್ಲಿ ವಿರೋಧಿಸಿಕೊಂಡು ಬಂದಿದ್ದರೂ ಅದೇ ಗಾಂಧಿಯವರ ಜನ್ಮದಿನವನ್ನು ಒಂದಂಶಕ್ಕೆ
ಬ್ರಾಂಡ್ ಮಾಡುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಗಾಂಧೀಜಿಯವರನ್ನು ಸೆಕ್ಯುಲರ್- ಕಮ್ಯುನಲ್ ಚರ್ಚೆಯ
ಚೌಕಟ್ಟಿನಲ್ಲಿಟ್ಟು ಜನ್ಮೇಪಿ ಪರ-ವಿರೋಧ ಮಾಡಿಕೊಂಡಿರಬಹುದು. ಆದರೆ ಸ್ವಚ್ಛತೆ, ಗ್ರಾಮ ಸ್ವರಾಜ್ಯ ಇಂಥ ಕಲ್ಪನೆಗಳೆಲ್ಲ ಕಮ್ಯುನಿಸ್ಟರಿಗೂ ಕೇಸರಿ ಪಡೆಯವರಿಗೂ ಒಟ್ಟೊಟ್ಟಿಗೇ ಒಪ್ಪಿತವಾಗಬಲ್ಲ ಅಂಶ. ಬೇರೆ ಚೌಕಾಶಿ ಏಕೆ, ಗಾಂಧಿ ಎಂದರೆ ಸ್ವಚ್ಛತೆಗೆ ಆದರ್ಶ ಎಂದಿಟ್ಟುಕೊಳ್ಳೋಣ ಎಂಬ ಸರಳ ಸಂದೇಶ ತಲುಪಿಸಿರುವ ಮೋದಿ ಸೆಕ್ಯುಲರ್- ಕಮ್ಯುನಲ್ ಡಿಬೇಟ್‌ನ ಚಕ್ರವ್ಯೆಹದಿಂದ ಹೊರಬಂದು ನಕ್ಕಿದ್ದಾರೆ!
ಮುಂದಿನ ದಿನಗಳಲ್ಲಿ ಮೋದಿ ಇನ್ನಷ್ಟು ಇತಿಹಾಸ ಪುರುಷರನ್ನು ಬ್ರಾಂಡ್ ದರ್ಬಾರಿಗೆ ಸೇರಿಸಿಕೊಂಡಾರು. ಸೈದಾಟಛಿಂತಿಕವಾಗಿ ವಿರೋಧಿ ಗುಂಪಿನಲ್ಲಿರುವ ಇತಿಹಾಸ ಪುರುಷರೂ ಜಯಂತಿ ಸಂಭ್ರಮದ ಪರಿಧಿಗೆ ಬರಬಹುದೇನೋ? ಆದರೆ ಒಂದಂತೂ ನಿಶ್ಚಿತ. ಅಂಥ ಯಾವುದೇ ವ್ಯಕ್ತಿಗಳನ್ನು ಬ್ರಾಂಡ್ ಮಾಡುವಾಗ, ಅವರಲ್ಲಿನ ಯಾವ ವಿಚಾರ ತನ್ನ ಮಾತೃಸಂಸ್ಥೆಯ ವಿಚಾರಗಳಿಗೆ ಸರಿಹೊಂದುವುದೋ, ಅದನ್ನಷ್ಟೇ ವೈಭವೀಕರಿಸುವಕೆಲಸವನ್ನಂತೂಮಾಡಿಯೇ
ಮಾಡುತ್ತಾರೆ.
ಈಗಾಗಿರುವ ಕೆಲವು ಜಯಂತಿಗಳ ಆಚರಣೆಯನ್ನು ಮುಂದಿಟ್ಟುಕೊಂಡು ನೋಡಿದರೆ ಮೋದಿ ಮುಂದೆ ಇನ್ನೂ ಅನೇಕ ರಾಷ್ಟ್ರೀಯ ಹಾಗೂ ಪ್ರಾದೇಶಿಕ ನಾಯಕರ ಜನ್ಮದಿನಾಚರಣೆಗಳನ್ನು ಮತ್ತಷ್ಟು ವೈವಿಧ್ಯದಿಂದ ಆಚರಿಸುವ
ಸಾಧ್ಯತೆಗಳಿವೆ. ಹಾಗೆಂದು ಇವು ಕೇವಲ ಉದಾತ್ತತೆ ಪ್ರತೀಕ ಮಾತ್ರವೇ? ಇಲ್ಲ. ದೀರ್ಘಾವಧಿಯಲ್ಲಿ ಬಿಜೆಪಿಗೆ ಲಾಭ ತರಬಲ್ಲ
ಸಾಧನವನ್ನಾಗಿಯೂ ಇದನ್ನು ಬಳಸಿಕೊಳ್ಳಬಹುದು. ಪ್ರಾದೇಶಿಕವಾಗಿ ತಳ ಊರುವುದಕ್ಕೆ, ಆ ಪ್ರದೇಶದ ಜನರನ್ನು
ತಮ್ಮವರನ್ನಾಗಿಸಿಕೊಳ್ಳುವುದಕ್ಕೆ ಇರುವ ಉತ್ತಮ ಮಾರ್ಗ ಎಂದರೆ ಸ್ಥಳೀಯ ಐಕಾನ್‌ಗಳನ್ನು ಗೌರವಿಸುವುದು. ಉದಾಹರಣೆಗೆ ಕೇರಳದಲ್ಲಿ ನಾರಾಯಣ ಗುರುಗಳ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಅಭಿಯಾನವೊಂದಕ್ಕೆ ಬಳಸಿಕೊಳ್ಳುವ ಯೋಜನೆ ಹಾಕಿಕೊಂಡರೆ ಸಹಜವಾಗಿಯೇ ಬಿಜೆಪಿಗೂ ಸ್ವಲ್ಪಮಟ್ಟದ ಶಹಭಾಸ್‌ಗಿರಿ, ಮೆಚ್ಚುಗೆಗಳು
ಸಂದಾಯವಾಗುತ್ತವೆ. ಹೀಗೆ ಬೇರೆ ಬೇರೆ ವಿಚಾರ ಲಹರಿಯವರನ್ನುಸೀಮಿತ ಚೌಕಟ್ಟಿನಲ್ಲಿಯೇ ತನ್ನವರೆಂದು ಸ್ವೀಕರಿಸಿ, ಅವರ ಜನ್ಮದಿನಗಳಿಗೆ ಅಭಿಯಾನದ ರೂಪ ಕೊಟ್ಟರೂ ಅಷ್ಟರಮಟ್ಟಿಗೆ ಬಿಜೆಪಿಗೆ ಆ ಪ್ರಾದೇಶಿಕ ನೆಲೆಗಳಲ್ಲಿ ಒದಗಬಹುದಾದ ಸ್ವೀಕೃತ ಮನೋಭಾವವೂ ರೂಪುಗೊಳ್ಳುತ್ತದೆ. ಅಂಬೇಡ್ಕರ್, ರವಿಂದ್ರನಾಥ್ ಠಾಗೋರ್, ಜ್ಯೋತಿ ಬಸು, ಸ್ವಾಮಿ ವಿವೇಕಾನಂದ, ಮದರ್ ತೆರೆಸಾ, ಡಾ. ಎಪಿಜೆ ಅಬ್ದುಲ್ ಕಲಾಂ, ಇಂದಿರಾ ಗಾಂಧಿ, ನೆಹರು, ಜೆ.ಎನ್. ಟಾಟಾ, ಗುರು ನಾನಕ್, ಅಬ್ದುಲ್ ಗಫಾರ್ ಖಾನ್, ಬಸವ, ಬುದಟಛಿ, ಕಬೀರ್... ಹೀಗೆ ನಾನಾ ಮೇರು ವ್ಯಕ್ತಿಗಳ ದಿನಾಚರಣೆಯನ್ನು ಅವರ ವ್ಯಕ್ತಿತ್ವದ ಒಂದು ಭಾಗವನ್ನು ಸಮಗ್ರಗೊಳಿಸಿ ರಾಷ್ಟ್ರೀಯ ಹಿತಾಸಕ್ತಿಗೆ ಅನುವಾಗುವಂತೆ ಕಾರ್ಯಕ್ರಮ ರೂಪಿಸಿಕೊಳ್ಳಲು ಮುಂದಾಗಬಹುದು. ಆಗ ಸಹಜವಾಗಿಯೇ ಜನರಲ್ಲೂ ಮೋದಿಯ ಭಿನ್ನತೆಗೆ ಒಂದಿಷ್ಟು ಮೆಚ್ಚುಗೆ ವ್ಯಕ್ತವಾಗಿ ಅದು ಅವರ ಪ್ರತಿನಿಧಿಸುವ ಪಕ್ಷಕ್ಕೂ ಒಳ್ಳೆ ಯ ಮೈಲೆಜ್ ತಂದುಕೊಡಬಲ್ಲದು. ಅದಾಗಲೇ, ಸ್ವತಃ ಶ್ರಮವರಿಯದ ವರ್ಕೊಹಾಲಿಕ್ ಎಂಬ ಇಮೇಜ್ ಪಡೆದುಕೊಂಡಿರುವ ಮೋದಿ, ಆ ವರ್ಚಸ್ಸಿಗೆ ದೀರ್ಘಾವಧಿಯಲ್ಲಿ ನ್ಯಾಯ ದೊರಕಿಸಬೇಕೆಂದರೆ ಅವರೊಂದಿಗಿನ
ಸಂಸದರೂ ಕೆಲಸ ಮಾಡಬೇಕು ತಾನೇ?
ಒಂದಂಶದ ನಿರ್ದಿಷ್ಟ ಉದ್ದೇಶವನ್ನು ಹೊತ್ತ ಮಹಾಪುರುಷರ ಜನ್ಮದಿ ಾಚರಣೆಗಳು ವಾಸ್ತವದಲ್ಲಿ ಸಂಸದರ ಮೇಲೆ ಜವಾಬ್ದಾರಿಯೊಂದನ್ನು ಹೊರೆಸುತ್ತವೆ. ಉದಾಹರಣೆಗೆ, ಮುಂದಿನ ವರ್ಷ ಜಯಪ್ರಕಾಶ ನಾರಾಯಣರ ಜನ್ಮದಿನಾಚರಣೆ ಬರುತ್ತಲೇ ಮಾಧ್ಯಮವು, ಸಂಸದರು ದತ್ತು ತೆಗೆದುಕೊಂಡ ಗ್ರಾಮಗಳ ಸ್ಥಿತಿ ಸುಧಾರಿಸಿದೆಯೇ ಇಲ್ಲವೇ ಎಂಬ ವರದಿ- ವಿಶ್ಲೇಷಣೆಗಳಿಗೆ ಗಮನ ಕೊಡುತ್ತದೆ. ಈ ಬಗೆಯಲ್ಲಿ ಕೆಲವು ಕೆಲಸಗಳನ್ನು ಮಾಡಲೇಬೇಕಾದ ಒತ್ತಡವನ್ನು, ನೆಪ ಹೇಳಲಿಕ್ಕಾಗದ ಪರಿಸ್ಥಿತಿಯನ್ನು ಮೋದಿ ತಮ್ಮ ಸಹೋದ್ಯೋ ಗಿಗಳ ಪಾಲಿಗೆ ನಿರ್ಮಿಸುವ ಬುದಿಟಛಿವಂತ ನಡೆ ಇಟ್ಟಿದ್ದಾರಾ?
ಮೋದಿ ಅವರ ರಾಷ್ಟ್ರೀಯ ನಾಯಕರ ಜನ್ಮದಿನಾಚರಣೆ ಕಾರ್ಯಸೂಚಿಗಳು ಇನ್ನಷ್ಟು ಪ್ರಭಾವಶಾಲಿಯಾಗಬೇಕಾದರೆ
ಅದು ಆ ವರ್ಷಕ್ಕೆ ಮಾತ್ರ ಸೀಮಿತವಾಗಬಾರದು. ಜೆಪಿ ಜಯಂತಿಯಂದು ಘೋಷಿಸಿದ ‘ಸಂಸದ ಆದರ್ಶ ಗ್ರಾಮ
ಯೋಜನೆ’ ಮುಂದಿನ ವರ್ಷ ಬರುವಷ್ಟರಲ್ಲಿ ಮತ್ತೊಂದು ಯೋಜನೆಗೆ ವೇದಿಕೆಯಾಗಬಾರದು. ಈಗ ಆರಂಭಿಸಿದ
ಪ್ರಯತ್ನ ಮುಂದುವರಿಯುತ್ತಲೇ ಇದ್ದರೆ ಅದಕ್ಕೊಂದು ಸಂಪೂರ್ಣತೆ ದಕ್ಕುತ್ತದೆ ಮತ್ತು ಅದು ವಿಸ್ತಾರಗೊಳ್ಳುತ್ತದೆ.
ಯಾಕೆಂದರೆ, ಈ ಹಿಂದಿನ ಸರ್ಕಾರಗಳು ತುಂಬಾ ಉತ್ಸಾಹದಲ್ಲಿ ಯೋಜನೆಗಳನ್ನು ಪ್ರಕಟಿಸುತ್ತಿದ್ದವು ಮತ್ತು ಅಷ್ಟೇ
ಉದಾಸೀನತೆಯಿಂದ ಮರೆಯುತ್ತಿದ್ದವು. ಈ ಪ್ರಕ್ರಿಯೆ ಮತ್ತೆ ಪುನಾರ್ವತನೆಯಾಗುತ್ತಿತ್ತೇ ಹೊರತು ಯೋಜನೆ ಫಲಪ್ರದ
ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮೋದಿ ಅವರು ಅದೇ ರೀತಿ ನಡೆದು ಕೊಂಡರೆ ಅವರು ಈ ಹೊಸ ಪ್ರಯತ್ನಕ್ಕೆ ಅರ್ಥವೇ
ಇರುವುದಿಲ್ಲ. ಹತ್ತರೊಳಗೆ ಹನ್ನೊಂದಾಗುತ್ತದಷ್ಟೇ.
ಚುನಾವಣೆ ವೇಳೆ ಪಕ್ಕಾ ಒಂದು ಪಕ್ಷದ ವಕ್ತಾರ ಹಾಗೂ ಅದು ಸಾರುವ ಸಿದಾಟಛಿಂತದ ಪ್ರಬಲ ಪ್ರತಿಪಾದಕರಂತೆ
ಕಾಣುತ್ತಿದ್ದ ಮೋದಿ, ಪ್ರಧಾನಿಯಾದ ಮೇಲೆ ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾತುಗಳನ್ನಾಡುತ್ತಿದ್ದಾರೆ. ಇದು
ಅವರನ್ನು ವಿರೋಧಿಸುತ್ತ ಬಂದಿದ್ದ ಕೆಲವರಲ್ಲೂ ಒಂದಿಷ್ಟು ಸಹಾನುಭೂತಿಗೆ ಕಾರಣವಾಗಿದೆ. ಆದರೆ, ಒಬ್ಬ ವ್ಯಕ್ತಿಯ
ಅಧಿಕಾರ ವಿಶ್ಲೇಷಣೆಗೆ ಐದಾರು ತಿಂಗಳು ತುಂಬಾ ಚಿಕ್ಕದುಇನ್ನೂ ಒಂದಿಷ್ಟು ಸಮಯ ಕೊಟ್ಟು ನೋಡಿದರೆ ಅವರ
ನಿಜವಾದ ಕಾರ್ಯಸೂಚಿ ಗೋಚರವಾಗಬಹುದು. ಆದರೆ, ಸದ್ಯದ ಮಟ್ಟಿಗೆ ರಾಷ್ಟ್ರೀಯ ನಾಯಕರ ಜನ್ಮ ದಿನಾಚರಣೆ
ಕ್ಲೀಷೆಯನ್ನು ತೊಡೆದು ಹಾಕಿ ಅದಕ್ಕೊಂದು ನವ ಚೈತನ್ಯ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಅದಕ್ಕಾದರೂ ನಾವು ಅವರನ್ನು ಮೆಚ್ಚಲೇಬೇಕು.

(ಈ ಲೇಖನ ಕನ್ನಡಪ್ರಭದ 2014ರ ಅಕ್ಟೋಬರ್ 15 ಸಂಚಿಕೆಯಲ್ಲಿ ಪ್ರಕಟವಾಗಿದೆ)

ಪಾಕಿಸ್ತಾನ: ಕೊನೆಯಿಲ್ಲದ ಕದನದ ಈಗಿನ ತಾರಾಗಣ
ಪಾಕಿಸ್ತಾನದಲ್ಲಿ ಅರಾಜಕತೆ ಎಂಬುದು ಯಾವತ್ತಿಗೂ ಹೊಸ ಸುದ್ದಿ ಅನ್ನಿಸುವುದಿಲ್ಲ. ಪ್ರತಿಬಾರಿಯ ಆಂತರಿಕ ಕಲಹಗಳಲ್ಲಿ ಪಾತ್ರಗಳು ಬದಲಾಗುತ್ತಿರುತ್ತವೆ ಅಷ್ಟೆ. ಈ ಬಾರಿ ಅಲ್ಲಿನ ಮುಖ್ಯಪಾತ್ರಗಳಲ್ಲಿರುವವರು ತಾಹಿರುಲ್ ಖಾದ್ರಿ ಎಂಬ ಧರ್ಮಗುರು, ಇಮ್ರಾನ್ ಖಾನ್ ಎಂಬ ಒಂದು ಕಾಲದ ಕ್ರಿಕೆಟಿಗ ಹಾಗೂ ಈಗಿನ ರಾಜಕಾರಣಿ ಮತ್ತು ನವಾಜ್
ಷರೀಫ್. ಈ ವ್ಯಕ್ತಿಗಳ ಜಾತಕ ಓದುತ್ತ ಪಾಕಿಸ್ತಾನದ ಪ್ರಸ್ತುತ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದು.

ಧರ್ಮಗುರುವಿಗೆ ಅಧಿಕಾರದ ಕನಸು ಬಿದ್ದೊಡೆ...
ಪಾಕ್ ಪ್ರಧಾನಿ ಷರೀಫ್ ಅವರ ಕುರ್ಚಿಗೆ ಸಂಚಕಾರ ತರಲು ಇಮ್ರಾನ್ ಖಾನ್ ಜತೆ ಜಂಟಿ ಕಾರ್ಯಾಚಾರಣೆ ನಡೆಸುತ್ತಿರುವ ತಾಹಿರುಲ್ ಖಾದ್ರಿ ಒಂದು ಕಾಲದಲ್ಲಿ ಷರೀಫ್ ಅವರಿಗೆ ಬೇಕಾದ ವ್ಯಕ್ತಿ! ಷರೀಫ್ ಅವರ ತಂದೆ ಮೊಹಮ್ಮದ್ ಅವರು ಕಬ್ಬಿಣ ಮತ್ತು ಸ್ಟೀಲ್ ಕೈಗಾರಿಕಾ ಸಮೂಹದ ಅಧ್ಯಕ್ಷರಾಗಿದ್ದಾಗ ಆಸ್ಪತ್ರೆ ಮತ್ತು ಫೌಂಡ್ರಿಸ್ ಆವರಣದಲ್ಲಿ ನಿರ್ಮಿಸಲಾಗಿದ್ದ ಮಸೀದಿಗಾಗಿ ಒಬ್ಬ ವಿದ್ವಾಂಸರನ್ನು ಹುಡುಕುತ್ತಿದ್ದರು. ಅವರ ಕಣ್ಣಿಗೆ ಬಿದ್ದಿದ್ದು ಇದೇ ಖಾದ್ರಿ. ಮುಂದೆ ನವಾಜ್ ಷರೀಫ್ ಪಂಜಾಬ್ ಸಚಿವರಾದಾಗ, ಟಿವಿಯಲ್ಲಿ ಖಾದ್ರಿ ಅವರ ಅಧ್ಯಾತ್ಮಿಕ ಕಾರ್ಯಕ್ರಮ ಪ್ರಸಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಎಂದರೆ, ಷರೀಫ್ ಜತೆ ಆ ಮಟ್ಟಿಗಿನ ಸಾಮೀಪ್ಯ ಹೊಂದಿದ್ದ ಖಾದ್ರಿ ಯಾಕೆ ಅವರು ವಿರುದಟಛಿ ತಿರುಗಿ ಬಿದ್ದಿದ್ದಾರೆ? ಇದರಲ್ಲಿ ನಿಜವಾಗಲೂ ಏನಾದರೂ ತಾರ್ಕಿಕ ವಿಚಾರಗಳಿವೆಯಾ? ಮೇಲ್ನೋಟಕ್ಕೆ ಚುನಾಯಿತ ಸರ್ಕಾರದ ವಿರುದಟಛಿದ ‘ದಂಗೆ’ ಎಬ್ಬಿಸುವ ಹುನ್ನಾರದಂತೆ ಕಂಡರೂ ಖಾದ್ರಿ ಅವರ ಹೋರಾಟದಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆಯಿದೆ. ಇದೇ ಮಾತನ್ನು ಇಮ್ರಾನ್ ಖಾನ್ ಅವರಿಗೆ ಅನ್ವಯಿಸುವುದು ಕಷ್ಟ. ಖಾದ್ರಿ ಇಸ್ಲಾಂ ವಿದ್ವಾಂಸರಾದರೂ ಮತಾಂಧರಲ್ಲ. ಇಸ್ಲಾಮ್‌ನ ನಿಜವಾದ ಸಂದೇಶವನ್ನು ಪಾಕ್ ಯುವ ಜನರಿಗೆ ಹೆಚ್ಚು ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದಾರೆ. ಇದರಿಂದಾಗಿಯೇ ಕೆನಡಾದ ‘ಮಾನಸಪುತ್ರ’ರಂತಾಗಿರುವ ಖಾದ್ರಿ ಮಾತಿಗೆ ಪಾಕ್‌ನ ಯುವ ಜನ ಮರಳಾಗಿದ್ದಾರೆ. ಸದಾ ಯುದಟಛಿದ ಭೀತಿಯಲ್ಲಿ, ಅರಾಜಕತೆ ನೆರಳಲ್ಲಿ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ಅಲ್ಲಿನ ಜನರಿಗೆ ಖಾದ್ರಿ ಹೇಳುತ್ತಿರುವ ಮಾತುಗಳು ಮನಸ್ಸಿಗೆ ತಟ್ಟಲಾರಂಭಿಸಿವೆ. ಅವರ ಬೆಂಬಲಕ್ಕಾಗಿ ಬೀದಿಗಿಳಿಯುತ್ತಿದ್ದಾರೆ.
ಇಸ್ಲಾಮ್ ವಿದ್ವಾಂಸ ಎಂಬ ಖ್ಯಾತಿಯಿದ್ದರೂ ಕೂಡಾ ಖಾದ್ರಿಯೇನೂ ‘ಅಧಿಕಾರ ಬೇಡ ಎನ್ನುವ ತ್ಯಾಗಿ’ಯಲ್ಲ. ಈಗಿನ ಅವರ ಹೋರಾಟ ಮೇಲ್ನೋಟಕ್ಕೆ ಭ್ರಷ್ಟ ಹಾಗೂ ಅಕ್ರಮ ಮಾರ್ಗದಿಂದ ಚುನಾಯಿತರಾಗಿರುವ ಸರ್ಕಾರವನ್ನು ಕಿತ್ತೊಗೆಯುವುದು. ಚುನಾವಣೆ ಸುಧಾರಣೆ ತರುವುದು. ಆದರೆ, ಅಂತರಾಳದಲ್ಲಿ ಅವರಿಗೆ ಅಧಿಕಾರದ ದರ್ಬಾರ್ ನಡೆಸುವ ಉಮೇದು ಇದೆ. ಈಗ ಎಷ್ಟೇ ಅವರು ಸೇನೆಯ ಜೊತೆ ನೆಂಟಸ್ತನ ಇಲ್ಲ, ಅಧಿಕಾರದ ವ್ಯಾಮೋಹ ಇಲ್ಲ ಎನ್ನಬಹುದು. ಆದರೆ, ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾಗದು. ಅವರ ಇತಿಹಾಸವನ್ನು ಗಮನಿಸಿದರೆ ಇದನ್ನು ಪುಷ್ಟೀಕರಿಸುತ್ತದೆ. ೧೯೮೧ರಲ್ಲಿ ತೆಹ್ರಿಕ್ ಮಿನ್ಹಾಜುಲ್ಕು ರಾನ್ ಪಕ್ಷ ಕಟ್ಟಿದ್ದರು. ಈ ಪಕ್ಷದ ಉದ್ದೇಶ ನಿಜವಾದ ಪ್ರಜಾಪ್ರಭುತ್ವ, ಆರ್ಥಿಕ ಪ್ರಗತಿ, ಮಾನವ ಹಕ್ಕಗಳ ರಕ್ಷಣೆ,
ನ್ಯಾಯದಾನ, ಮಹಿಳೆ ಮತ್ತು ಅಲ್ಪಸಂಖ್ಯಾತರ ರಕ್ಷಣೆಯಾಗಿತ್ತು. ಆದರೆ, ಅದ್ಯಾಕೋ ಪಾಕ್ ಜನರು ಆಗ ಇವರನ್ನು ನಂಬಲಿಲ್ಲ. ಅದಕ್ಕೂ ಕಾರಣವಿದೆ. ಖಾದ್ರಿ ಅವರು ಸ್ವಲ್ಪ ಉದಾರಿ ಎನ್ನಬಹುದಾದ ಸುನ್ನಿ ಪಂಗಡದ ಬರ್ಲೇವಿ ಒಳಪಂಗಡಕ್ಕೆ ಸೇರಿದವರು. ಇದು ಇತರರು ಅವರನ್ನು ಅನುಮಾನದಿಂದ ನೋಡುವಂತಾಗಲು ಕಾರಣವಾಯಿತು. ೧೯೯೦ ಮತ್ತು ೧೯೯೩ರಲ್ಲಿ ಖಾದ್ರಿ ಅವರ ರಾಜಕೀಯ ಪ್ರಯತ್ನಗಳು ವಿಫಲಗೊಂಡವು. ೧೯೯೫ರಲ್ಲಿ ರಾಜಕೀಯ ತೊರೆದರು. ಆದರೆ, ೧೯೯೯ರಲ್ಲಿ ಜನರಲ್ ಪರ್ವೇಜ್ಮು ಷರಫ್ ಸೇನಾ ಕ್ಷೀಪ್ರ ಕ್ರಾಂತಿಯಲ್ಲಿ ಪಾಕ್ ಅಧ್ಯಕ್ಷರಾದರು. ಆಗ ಅವರೊಂದಿಗೆ ಬೆಳೆದ ಸ್ನೇಹದ ಫಲವಾಗಿ ೨೦೦೨ರಲ್ಲಿ ನ್ಯಾಷನಲ್ ಅಸೆಂಬ್ಲಿಯ ಸದಸ್ಯರಾದರು. ಆಗಲೇ ಖಾದ್ರಿ ಅವರಿಗೆ ಸೇನೆಯ ಒಳ ದಾರಿಗಳು ಗೊತ್ತಾಗಿದ್ದು. ಖಾದ್ರಿಗೆ ಧಾರ್ಮಿಕ ವ್ಯವಹಾರಗಳ ಸಚಿವರಾಗುವ ಬಯಕೆ ಇತ್ತು. ಆದರೆ, ಸಾಧ್ಯವಾಗಲಿಲ್ಲ. ಕೊನೆಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ೨೦೦೫ರಲ್ಲಿ ಕೆನಡಾಕ್ಕೆ ವಲಸೆ ಹೋದರು. ಇದೆಲ್ಲವನ್ನು ಗಮನಿಸದರೆ ಪಾಕ್ ರಾಜಕೀಯ, ಅಧಿಕಾರದ ಪಡಸಾಲೆಯಲ್ಲಿ ‘ಕಾಯಂವಾಸಿ’ಯಾಗುವ ಅವರ ಬಯಕೆ ಇದ್ದೇ ಇದೆ ಎಂಬುದು ವೇದ್ಯ. ಹಾಗಾಗಿ, ಇಮ್ರಾನ್ ಖಾನ್ ಜತೆಗೂಡಿ ಷರೀಫ್ ಅವರ ರಾಜಿನಾಮೆಗೆ ಹೋರಾಟದ ಸ್ವರೂಪ ನೀಡಿದ್ದಾರೆ ಎಂಬ ಆರೋಪಗಳಿವೆ.

ಇಮ್ರಾನ್ ಖಾನ್ ಪಾಕ್‌ನ ಕೇಜ್ರಿವಾಲಾ?
೧೯೯೨ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಇಮ್ರಾನ್ ಖಾನ್. ಅಂದಿನಿಂದ ಈವರೆಗೂ ಪಾಕ್ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ, ಕ್ರಿಕೆಟಿಗರಾಗಿ ಈಗಲೂ ಇಮ್ರಾನ್ ಖಾನ್ ಪಾಕಿಸ್ತಾನದ ಹೀರೋ. ರಾಜಕೀಯದಲ್ಲೂ ಅದೇ ‘ನಾಯಕ’ನಾಗುವ ಹುಮ್ಮಸ್ಸಿನಲ್ಲಿ ಸ್ವಲ್ಪ ಆತುರಕ್ಕೆ ಬಿದ್ದಿದ್ದಾರೆ ಅನ್ನಿಸುತ್ತದೆ. ಒಂದು ರೀತಿಯಲ್ಲಿ ನಮ್ಮ ಅರವಿಂದ್ ಕೇಜ್ರಿವಾಲ್ ಅವರಿಗೂ ಇವರನ್ನು ೋಲಿಸಬಹುದು. ಪಾಕ್‌ನ ನಗರವಾಸಿಗಳ ಬೆಂಬಲ ಇರುವಇಮ್ರಾನ್ ಅವರ ಪಾರ್ಟಿ ಆಫ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ)2೦೧೩ರ ನ್ಯಾಷನಲ್ ಅಸೆಂಬ್ಲಿ ಚುನಾವಣೆಯಲ್ಲಿ ೩೪ ಸ್ಥಾನ ಗೆದ್ದಿದೆ. ಇದೇ ಉತ್ಸಾಹದಲ್ಲಿ ಸೇನೆಯ ಬೆಂಬಲದೊಂದಿಗೆ ಸದ್ಯ ಪಾಕ್‌ನಲ್ಲಿ ಹೋರಾಟಕ್ಕಿಳಿದಿದ್ದಾರೆ. ಆದರೆ, ಅವರ ಈ ನಡೆ ಅವರ ಬೆಂಬಲಿಗರಲ್ಲಿ ಸಮಾಧಾನ ತಂದಿಲ್ಲ. ಇಮ್ರಾನ್ ಖಾನ್ ಅವರ ಹೋರಾಟ ಅರಾಜಕತೆ ಮತ್ತು ಸೇನಾಡಳಿತಕ್ಕೆ ದಾರಿ ಮಾಡಿಕೊಡುತ್ತಿದೆ ಎಂಬುದು ಅವರ ಆರೋಪ. ಆದರೆ, ಇಮ್ರಾನ್ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಸದ್ಯ ಇಮ್ರಾನ್ ಹೆಗಲ ಮೇಲೆ ಬಂದೂಕು ಇಟ್ಟು ಸೇನೆ ಷರೀಫ್‌ರತ್ತ ಗುಂಡು ಹಾರಿಸುತ್ತಿದೆ. ಖಾದ್ರಿ ಮತ್ತು ಇಮ್ರಾನ್ ಅವರು ಸೇನೆ ಜತೆ ನಂಟಿಲ್ಲ ಎಂದು ಎಷ್ಟೇ ಹೇಳಿದರೂ ಯಾರೂ ನಂಬಲಾರರು. ಯಾಕೆಂದರೆ, ಸದ್ಯದ ರಾಜಕೀಯ ಬಿಕ್ಕಟ್ಟು ಬಗೆಹರಿಸಲು ಅವರು ಸಂಧಾನಕಾರರನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಸೇನಾಧಿಕಾರಿಯನ್ನೇ! ಪಾಕ್ ಸೇನೆಗೂ
ಷರೀಫ್ ತಮ್ಮ ಮೇಲೆ ಸವಾರಿ ಮಾಡುವುದು ಸಹಿಸಿಕೊಳ್ಳಲಾಗುತ್ತಿಲ್ಲ. ಇದು ಈಗಾಗಲೇ ಷರೀಫ್ ಅವರ ಭಾರತದ ಭೇಟಿ ವೇಳೆ ಜಗಜ್ಜಾಹೀರಾಗಿದೆ. ಪ್ರಧಾನಿ ಯಾಗಲೇಬೇಕು ಎಂಬ ಅದಮ್ಯ ಬಯಕೆ ಹೊಂದಿರುವ ಖಾನ್, ೨೦೧೩ರ ಚುನಾವಣೆಯನ್ನು ‘ಫೇಕ್ ಮ್ಯಾಂಡೆಟ್’ ಎನ್ನುತ್ತಾ, ಷರೀಫ್ ಅವರ ರಾಜಿನಾಮೆ ಹಾಗೂ ಹೊಸದಾಗಿ ಚುನಾವಣೆಯ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆಲ್ಲ ತೆರೆಮರೆಯಲ್ಲಿ ಸೇನೆಯ ಕರಾಮತ್ತು ಇದ್ದೇ ಇದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವು ಸ್ಥಾನಗಳ ಬಗ್ಗೆ ಮರು ಎಣಿಕೆಯನ್ನು ಇಮ್ರಾನ್ ಬಯಸಿದ್ದರು. ಆದರೆ, ಇದು ಸಾಧ್ಯವಾಗಿರಲಿಲ್ಲ. ಇದಕ್ಕೆಲ್ಲ ಕಾರಣ ಷರೀಫ್ ಎಂಬುದು ಅವರ ಗುಮಾನಿ. ಈಗತಮ್ಮ ಸ್ವಹಿತಾಸಕ್ತಿ ಮತ್ತು ಸೇನೆಯ ಆಸಕ್ತಿಗಳೆರಡನ್ನು ಸೇರಿಸಿ ಕೊಂಡು ಷರೀಫ್ ಅವರಿಗೆ ಮಗ್ಗುಲು ಮುಳ್ಳಾಗುತ್ತಿದ್ದಾರೆ.

ಷರೀಫ್‌ಗೆ ಸಾಮ್ರಾಜ್ಯ ಉಳಿಸಿಕೊಳ್ಳುವ ತವಕ 
೨೦೧೩ಕ್ಕೆ ಮುಂಚೆ ಪಾಕ್ ಜನ ಇವರ ಮೇಲಿಟ್ಟಿದ್ದ ವಿಶ್ವಾಸ ಈಗ ಉಳಿದಿಲ್ಲ. ಇದು ಪ್ರಧಾನಿ ಷರೀಫ್ ಅವರ ಸ್ವಯಂಕೃತ ಅಪರಾಧ. ಷರೀಫ್ ಅವರ ಅತಿಯಾದ ಸ್ವಜನ ಪಕ್ಷಪಾತ ಮತ್ತು ಅತಿಯಾದ ಭ್ರಷ್ಟಾಚಾರ ಜನರಲ್ಲಿ ಭ್ರಮನಿರಸನಕ್ಕೆ ಕಾರಣ. ಷರೀಫ್ ಅವರ ನೀತಿ ಯಾವಾಗಲೂ ಬಿಸಿನೆಸ್ ಪರವಾಗಿರುತ್ತ ವೆ ಎಂಬುದು ಗೊತ್ತಿರುವ ಸಂಗತಿ. ಪಾಕಿಸ್ತಾನದಲ್ಲಿರುವ ಸಕ್ಕರೆ, ಉಕ್ಕು ಸೇರಿದಂತೆ ಸುಮಾರು ಕೈಗಾರಿಕೆಗಳು ಇವರು ಮತ್ತು ಇವರ ಸಂಬಂಧಿಕರ ಹಿಡಿತದಲ್ಲಿವೆ. ಹಾಗೆ ನೋಡಿದರೆ ಇಡೀ ಕೈಗಾರಿಕೋದ್ಯಮ ಇವರ ಅಂಗೈಯಲ್ಲಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ. ಚುನಾವಣೆಯ ಮುಂಚೆ ‘ಅಂಗೈಯಲ್ಲಿ ಆಕಾಶ’ ತೋರಿಸುವ ಭರವಸೆ ನೀಡಿದ್ದ ಷರೀಫ್ ಅದರತ್ತ ಕಿಂಚಿತ್ ಪ್ರಯತ್ನ ಮಾಡಿಲ್ಲ. ಇದುವರೆಗೆ ಒಂದೇ ಒಂದು ಕಾಯ್ದೆಯನ್ನು ಅವರು ಜಾರಿಗೆ ತಂದಿಲ್ಲ. ಅವರ ಆಡಳಿತ ನಿಷ್ಕ್ರಿಯತೆ ಎಷ್ಟಿದೆ ಎಂದರೆ, ಇದುವರೆಗೂ ಪ್ರಮುಖ ಖಾತೆಗಳಿಗೆ ಸಚಿವರನ್ನೇ ನೇಮಿಸಿಲ್ಲ! ಷರೀಫ್ ಅವರ ಸ್ವಜನ ಪಕ್ಷಪಾತಕ್ಕೆ ಮಿತಿಯೇ ಇಲ್ಲ. ಇರುವ ಮಂತ್ರಿಗಳ ಪೈಕಿ ಬಹುತೇಕರು ಅವರ ಸಂಬಂಧಿಕರೇ ಇದ್ದಾರೆ. ಅವರ ವಿರುದಟಛಿ ಭ್ರಷ್ಟಾಚಾರ ಆರೋಪಗಳು ಹೇರಳ. ಎಲ್ಲಕ್ಕಿಂತ ಹೆಚ್ಚಾಗಿ ಸೇನೆಯ ಜತೆ ಷರೀಫ್ ಅವರು ಸಂಘರ್ಷಕ್ಕಿಳಿದಿದ್ದು ಈಗಿನ ಪರಿಸ್ಥಿತಿಗೆ ಕಾರಣ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಷರೀಫ್ ಬಂದಿದ್ದು ಕೂಡಾ ಯಡವಟ್ಟಾಗಿದೆ. ಸದ್ಯಕ್ಕಂತೂ ಅತ್ತ ಸೇನೆಯ ಜತೆಗೂ ಸಂಬಂಧ
ನೆಟ್ಟಗಿಲ್ಲ, ಇತ್ತ ಜನರು ತಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಂಡಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ ಷರೀಫ್. ಪಾಕ್ ಸಂಸತ್ತು ಷರೀಫ್ ಬೆನ್ನಿಗೆ ನಿಂತಿದೆಯಾದರೂ ಅದು ಎಷ್ಟು ದಿನ ಎಂಬುದು ಯಾರಿಗೂ ಗೊತ್ತಿಲ್ಲ. ಅಲ್ಲದೆ, ಅವರ ಎದುರಾಳಿ ಜನರಲ್ ಪರ್ವೇಜ್ಮು ಷರ‌್ರಫ್ ಕೂಡಾ ಖಾದ್ರಿ ಜೊತೆ ಕೈಜೋಡಿಸಿದ್ದಾರೆ.
------
ಮೂರು ಮುಖ್ಯ ಪಾತ್ರಗಳು ಹೀಗಿರಲಾಗಿ ಪಾಕಿಸ್ತಾನದ ಭವಿಷ್ಯದ ಕುರಿತ ಭರತವಾಕ್ಯ ಏನು? ಉತ್ತರ: ಥರಹೇವಾರಿ ಪಾತ್ರಗಳ ಆಟ ಮತ್ತು ಪಾಕ್ ಸಂಘರ್ಷ ಎರಡಕ್ಕೂಕನ್‌ಕ್ಲೂಷನ್ ಇಲ್ಲ!

(ಈ ಲೇಖನ 10-09-2014ರಲ್ಲಿ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.)