- ಮಲ್ಲಿಕಾರ್ಜುನ ತಿಪ್ಪಾರ
ಈಗೇನಿದ್ದರೂ ವಿಡಿಯೊಗಳ ಕಾಲ. ಎಲ್ಲವೂ ವಿಡಿಯೊಮಯ. ನಿಮಗನ್ನಿಸಿದ್ದನ್ನು ಪಠ್ಯ ಅಥವಾ ಚಿತ್ರದ ಮೂಲಕವೇ ಹೇಳಬೇಕು ಎನ್ನುವ ಕಾಲ ಈಗಿಲ್ಲ. ಕೈಯಲ್ಲಿರುವ ಸ್ಮಾರ್ಟ್‌ಫೋನ್ ಮೂಲಕ ನಿಮಗನ್ನಿಸಿದ್ದನ್ನು ಚಿಕ್ಕ ವಿಡಿಯೊ ಮಾಡಿಯೋ ಅಥವಾ ನೀವು ನೋಡಿದ್ದ ಸ್ಥಳ, ಘಟನೆ ಮತ್ತಿತರ ಸಂಗತಿಯನ್ನು ವಿಡಿಯೊ ಮಾಡಿ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿಷೇರ್ ಮಾಡಿಕೊಂಡರೆ ಸಾಕು. ಸಹಸ್ರಾರು ಜನರು ಅದನ್ನು ನೋಡುತ್ತಾರೆ; ತಮಗನ್ನಿಸಿದ್ದನ್ನು ಕಮೆಂಟ್ ರೂಪದಲ್ಲಿಫೀಡ್‌ಬ್ಯಾಕ್ ನೀಡುತ್ತಾರೆ. ಹಾಗಾಗಿ, ಇದು ‘ವಿಡಿಯೊ ಜಮಾನ’ ಎಂದು ಹೇಳಿದರೆ ತಪ್ಪಲ್ಲ.
ಈಗ ವಿಡಿಯೊ ಆಧರಿತ ಆ್ಯಪ್‌ಗಳೇ ಸಾಕಷ್ಟಿವೆ. ಆದರೆ, ಯೂಟ್ಯೂಬ್ ಒದಗಿಸುವ ಸೇವೆ ಮಾತ್ರ ಅನನ್ಯವಾಗಿರುತ್ತದೆ ಮತ್ತು ಗುಣಮಟ್ಟದಿಂದ ಕೂಡಿರುತ್ತದೆ. ಹಾಗಾಗಿ, ವಿಡಿಯೊ ಪ್ರಪಂಚದಲ್ಲಿಈಗಲೂ ಯೂಟ್ಯೂಬ್ ಅನಭಿಷಿಕ್ತ ದೊರೆಯ ರೀತಿಯಲ್ಲಿದೆ. ಯೂಟ್ಯೂಬ್ ಅನ್ನೋದು ವಿಡಿಯೊಗಳ ಸಮುದ್ರ. ಅಲ್ಲಿ, ಸಿನಿಮಾದಿಂದ ಹಿಡಿದು ಕಾರ್ ಕ್ಲೀನ್ ಹೇಗೆ ಮಾಡೋದು ಎಂದು ಹೇಳುವ ನಾನಾ ರೀತಿಯ, ನಾನಾ ವರ್ಗದ, ನಾನಾ ವಿಷಯದ ವಿಡಿಯೊಗಳು ಇವೆ. ಬೇಕು, ಬೇಡದ್ದು ಎಲ್ಲವಿಡಿಯೊಗಳು ನಿಮಗೆ ದೊರೆಯುತ್ತವೆ. ಯಾವುದನ್ನು ನೋಡಬೇಕು, ಯಾವುದನ್ನು ನೋಡಬಾರದು ಎಂಬುದು ನಿಮಗೆ ಬಿಟ್ಟದ್ದು. ಹೀಗೆ, ಯೂಟ್ಯೂಬ್‌ನಲ್ಲಿನೋಡಿದ ವಿಡಿಯೊಗಳನ್ನು ನಿಮ್ಮ ಡೆಸ್ಕ್‌ಟಾಪ್ ಇಲ್ಲವೇ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಮಾಡಿಕೊಳ್ಳವುದು ಹೇಗೆ? ಯಾಕೆಂದರೆ, ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನು ಯೂಟ್ಯೂಬ್ ನಿಮಗೆ ನೀಡುವುದಿಲ್ಲ.
ಯೂಟ್ಯೂಬ್‌ನಿಂದ ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅನೇಕ ಆ್ಯಪ್‌ಗಳಿವೆ. ಆದರೆ, ಇವುಗಳ ಹೊರತಾಗಿಯೂ ಸಿಂಪಲ್ ಆದ ಸ್ಟೆಪ್‌ಗಳ ಮೂಲಕ ಸ್ಮಾರ್ಟ್‌ಫೋನ್‌ಲ್ಲಿಯೂಟ್ಯೂಬ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ಸಿಂಪಲ್ ಆಗಿ ಇಲ್ಲಿವಿವರಿಸಲಾಗಿದೆ.
ಫೋನ್‌ನಲ್ಲಿಡೌನ್‌ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ....
- ಯೂಟ್ಯೂಬ್ ಆ್ಯಪ್‌ಗೆ ಹೋಗಿ. ನೀವು ಡೌನ್‌ಲೋಡ್ ಮಾಡಿಕೊಳ್ಳಲು ಇಚ್ಛಿಸಿರುವ ವಿಡಿಯೊ ಅನ್ನು ಓಪನ್ ಮಾಡಿಕೊಳ್ಳಿ
- ವಿಡಿಯೊ ಓಪನ್ ಮಾಡಿದ ಮೇಲೆ, ಪ್ಲೇನಲ್ಲಿರುವ ವಿಡಿಯೊವನ್ನು ಪಾಜ್ ಮಾಡಿ. ಆಗ ವಿಡಿಯೊ ಕೆಳಗೆ ನೀವು ಷೇರ್ ಬಟನ್ ನೋಡಬಹುದು.
- ಆ ಷೇರ್ ಬಟನ್ ಮೇಲೆ ಕ್ಲಿಕ್ ಮಾಡಿ. ಆಗ ಕಾಪಿ ಲಿಂಕ್ ಎಂಬ ಆಪ್ಷನ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಆ ಲಿಂಕ್ ಕಾಪಿ ಮಾಡಿಕೊಳ್ಳಿ.
- ಲಿಂಕ್ ಕಾಪಿ ಮಾಡಿಕೊಂಡ ಮೇಲೆ ನಿಮ್ಮ ಕ್ರೋಮ್ ಬ್ರೌಸರ್‌ಗೆ ಹೋಗಿ.
- ಬ್ರೌಸರ್‌ನಲ್ಲಿಹೊಸ ಟ್ಯಾಬ್ ಓಪನ್ ಮಾಡಿ, ಕಾಪಿ ಮಾಡಿಕೊಂಡ ಲಿಂಕ್ ಅನ್ನು ಸರ್ಚ್ ಬಾಕ್ಸ್‌ನಲ್ಲಿಪೇಸ್ಟ್ ಮಾಡಿ.
- ನೀವು ಆಯ್ಕೆ ಮಾಡಿದ ವಿಡಿಯೊ ಬ್ರೌಸರ್‌ನಲ್ಲಿತೆರೆದುಕೊಳ್ಳುತ್ತದೆ.
- ವಿಡಿಯೊ ಓಪನ್ ಆದ ಮೇಲೆ, ಯೂಟ್ಯೂಬ್‌ನಲ್ಲಿರುವ y ಅಕ್ಷ ರದ ಹಿಂದೆ ಕರ್ಸರ್ ತೆಗೆದುಕೊಂಡು ಬನ್ನಿ
- ಆ ನಂತರ ಯೂಟ್ಯೂಬ್ ಅಕ್ಷ ರ ಹಿಂದಿರುವ ಎಲ್ಲವನ್ನು ಅಳಸಿ ಹಾಕಿ.
- http://m. ಅಳಸಿ ಹಾಕಿದ ಮೇಲೆ, ಯುಟೂಬ್ ಪದಕ್ಕಿಂತ ಮುಂಚೆ ಅದೇ ಜಾಗದಲ್ಲಿ ss ಟೈಪ್ ಮಾಡಿ.
- ಇಷ್ಟಾದ ಮೇಲೆ ಸರ್ಚ್ ಮೇಲೆ ಕ್ಲಿಕ್ ಮಾಡಿ. ಆಗ ಹೊಸ ಲಿಂಕ್ ತೆರೆದುಕೊಳ್ಳುತ್ತದೆ.
ಇಷ್ಟು ಮಾಡಿದ ಮೇಲೆ ನೀವು ಆಯ್ಕೆ ಮಾಡಿಕೊಂಡಿದ್ದ ವಿಡಿಯೊ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದೇ ಪದ್ಧತಿಯನ್ನು ನೀವು ಡೆಸ್ಕ್‌ಟಾಪ್ ಬಳಸಿಕೊಂಡು ಯೂಟ್ಯೂಬ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆ್ಯಪ್‌ಗಳನ್ನು ಬಳಸಿಕೊಂಡಿಯೂ ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿಯೇ ಸಾಕಷ್ಟು ಆ್ಯಪ್‌ಗಳೂ ಇವೆ. ಆದರೆ ಎಲ್ಲಕ್ಕಿಂತ ಮೇಲು ಎಂದರೆ, ಈ ಮೇಲೆ ಹೇಳಿದ ಸಿಂಪಲ್ ಟಿಫ್ಸ್ ಬಳಸಿಕೊಂಡು ವಿಡಿಯೊ ಡೌನ್‌ಲೋಡ್ ಮಾಡಿಕೊಳ್ಳುವುದು. ಇದರಿಂದ ಅನಗತ್ಯವಾಗಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ತಪ್ಪುತ್ತದೆ.
ಯೂಟ್ಯೂಬ್ ಬಗ್ಗೆ ನಿಮಗೆ ಗೊತ್ತಾ?
- 2005 ಫೆಬ್ರವರಿ 14ರಂದು ಯೂಟ್ಯೂಬ್ ಅನ್ನು ಸ್ಟಿವ್ ಚೆನ್, ಚಾದ್ ಹರ್ಲಿ ಮತ್ತು ಜಾವೆದ್ ಕರೀಮ್ ಎಂಬುವರು ಆರಂಭಿಸಿದರು.
- ಜಗತ್ತಿನಲ್ಲೇ 2ನೇ ಅತಿ ಹೆಚ್ಚು ಭೇಟಿ ನೀಡುವವರ ವೆಬ್‌ಸೈಟ್ ಎಂಬ ಖ್ಯಾತಿ ಇದೆ.
- 1,300,000,000 ಇದು ಯೂಟ್ಯೂಬ್ ಬಳಕೆದಾರರ ಸಂಖ್ಯೆ.
- ಪ್ರತಿ ದಿನ 5 ಕೋಟಿ ವಿಡಿಯೊಗಳನ್ನು ಜಗತ್ತಿನಾದ್ಯಂತ ನೋಡಲಾಗುತ್ತದೆ.
- ನಿತ್ಯ 3 ಕೋಟಿ ಜನರು ಯೂಟ್ಯೂಬ್‌ಗೆ ಭೇಟಿ ನೀಡುತ್ತಾರೆ.
- ಒಟ್ಟು ಯೂಟ್ಯೂಬ್ ನೋಡುವವರ ಪೈಕಿ ಅರ್ಧದಷ್ಟು ಜನರು ಮೊಬೈಲ್ ಬಳಕೆದಾರರಾಗಿದ್ದಾರೆ.
ಈ ಲೇಖನವು ವಿಜಯ ಕರ್ನಾಟಕದ 2019ರ ಡಿಸೆಂಬರ್ 23ರ ಸಂಚಿಕೆಯಲ್ಲಿ ಪ್ರಕಟವಾಗಿದೆ.