poem ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
poem ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಮೇ 18, 2021

Mirza Ghalib: ಯಾವಾಗ ಪ್ರೀತಿಸಬೇಕು?

 ಯಾರೋ ಗಾಲಿಬನಿಗೆ ಕೇಳಿದರು

ಯಾವಾಗ ಪ್ರೀತಿಸಬೇಕು..?
ಮದುವೆಗೆ ಮೊದಲೋ
ಇಲ್ವೇ ಮದುವೆಯ ನಂತರ...!
ಗಾಲಿಬ್ ಹೇಳಿದ
ಯಾವಾಗಲಾದರೂ ಪ್ರೀತಿಸಿ
ಆದರೆ, ಹೆಂಡತಿಗೆ ಗೊತ್ತಾಗಬಾರದಷ್ಟೇ
~ ಅನಾಮಿಕ
ಕನ್ನಡಕ್ಕೆ : ಮಂಜುಳ ಕಿರುಗಾವಲು



ಬುಧವಾರ, ಡಿಸೆಂಬರ್ 30, 2020

Jhumka Earring- ನೀನೇ ಗೆಲ್ಲುವೆ ಬಿಡು

ಹೇ ಜುಮುಕಿಯೇ, ಅವಳ ಕಿವಿಯಲ್ಲಿ ಓಲಾಡಲು ಲೈಸೆನ್ಸ್ ಯಾರು ಕೊಟ್ಟರು ನಿನಗೆ ?

ಅವಳು ಕೂದಲು
ತೀಡಿದಾಗೊಮ್ಮೆ
ಲೋಲಕವಾಗುವೆಯಲ್ಲ
ಅಣುಕಿಸುತ ನನ್ನ ?
ಅವಳ ಮುಂಗುರಳ
ಹೊಯ್ದಾಟಕ್ಕೂ
ನಿನ್ನ ಓಲಾಟಕ್ಕೂ
ಸ್ಪರ್ಧೆ ನಡೆದರೆ
ನೀನೇ ಗೆಲ್ಲುವೆ ಬಿಡು
~ ಮಲ್ಲಿಕಾರ್ಜುನ ತಿಪ್ಪಾರ



ಬುಧವಾರ, ಡಿಸೆಂಬರ್ 23, 2020

Poem: ಸೂಚನೆಯಾದರೂ ಏನು?

 ಹಗಲು ರಾತ್ರಿ ಒಂದಾಗುವ ಆ ಸಂಜೆಯ 

ನಸುಗೆಂಪಲ್ಲಿ ಹೊಳೆಯುವ ನಿನ್ನ 

ನಯನಗಳು ಕೆಣಕುತ್ತಿವೆ ಏನನ್ನೋ?


ಉಲಿಯುವ ಹಕ್ಕಿಗಳ ಸ್ವರ ಮೇಳ

ಹಿನ್ನೆಲೆಯಲ್ಲಿ ಏನೋ

ಸಂಕೇತಿಸುತ್ತಿವೆ ನಿನ್ನ ತುಟಿಗಳು?


ತಂಗಾಳಿ ಸೋಕಿ ನರ್ತಿಸುವ

ನಿನ್ನ ಮುಂಗುರುಳು ನೀಡುತ್ತಿರುವ

ಮುನ್ಸೂಚನೆಯಾದರೂ ಏನು?


ಹಗಲು ಸತ್ತು, ರಾತ್ರಿ ಹುಟ್ಟಿ

ತಿಂಗಳ ಬೆಳಕು ಚೆಲ್ಲಿ

ಬಳಿದುಕೊಳ್ಳುವುದಾದರೂ ಏನು?

- ಮಲ್ಲಿಕಾರ್ಜುನ ತಿಪ್ಪಾರ