ದೇವರು ಸರ್ವವ್ಯಾಪಿ, ನಿರಾಕಾರ, ನಿರ್ಗುಣ. ಆದರೆ, ಈ ದೇವಮಾನವರು, ಬಾಬಾಗಳು, ಗುರೂಜಿಗಳು ಎಲ್ಲಿಂದ ಬರುತ್ತಾರೋ?
ದೇವರ ಹೆಸರಲ್ಲಿ ಮುಗಟಛಿ, ದುರ್ಬಲ ಮನಸ್ಸಿನ ಜನರನ್ನು ಮೋಸ ಮಾಡಿ, ತಮ್ಮ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುವ ಇವರಿಗೆ
ನಮ್ಮ ರಾಜಕಾರಣಿಗಳು ಬೆಂಗಾವಲಾಗಿ ನಿಂತು ಬಿಡುತ್ತಾರೆ. ದೇವರ ಹೆಸರಲ್ಲಿ ಅತ್ಯಾಚಾರ, ಅನಾಚಾರ, ಎಲ್ಲ ಪಾಪ
ಕರ್ಮ ಮಾಡಿ, ಅದರಿಂದ ಬಚಾವಾಗಲು ಆಡಳಿತದ ನೆರವು ಪಡೆಯುತ್ತಾರೆ. ಆಡಳಿತಗಾರರು, ರಾಜಕಾರಣಿಗಳಿಗೆ ದೇವಮಾನವರ ಹಿಂದಿರುವ ‘ಕುರಿ ಮಂದೆ’ ಮತದಾರರ ಮೇಲೆ ಕಣ್ಣು. ಎಲ್ಲಕ್ಕಿಂತ ಹೆಚ್ಚಾಗಿ ಇವರ ಅನಾಚಾರ ರಕ್ಷಿಸಿಕೊಳ್ಳಲು ಅವರ ನೆರವು. ಇದೊಂದು ರೀತಿ ಕೊಡು- ಕೊಳ್ಳುವಿಕೆಯ ಭ್ರಷ್ಟ್ರ ಪ್ರಕ್ರಿಯೆ. ಹರ್ಯಾಣದ ಸ್ವಯಂಘೋಷಿತ ದೇವಮಾನವ ಸಂತ ರಾಮ್‌ಪಾಲ್ ಬಂಧನದ ಘಟನೆಯನ್ನೇ ನೋಡಿ. ಈ ನೆಲದ ಕಾನೂನನ್ನು ಗೌರವಿಸದಷ್ಟು ದಾರ್ಷ್ಟ್ಯ ಪ್ರದರ್ಶಿಸುತ್ತಾನೆ. ತನಗಾಗಿ ಖಾಸಗಿ ಸೇನೆಯನ್ನು ಸಾಕಿಕೊಳ್ಳುತ್ತಾನೆಂದರೆ ಆತ ಎಷ್ಟು ಹಣವಂತನಾಗಿರಬೇಕು? ಆಧ್ಯಾತ್ಮ, ದೇವರ ಹೆಸರಲ್ಲಿ
ಎಷ್ಟೊಂದು ಸುಲಿಗೆ ಮಾಡಿರಬೇಕು? ಇಷ್ಟೆಲ್ಲ ಮಾಡಬೇಕಿದ್ದರೆ ರಾಜಕಾರಣಿಗಳ ನೆರವು ಇರಲೇಬೇಕು. ಯಾಕೆಂದರೆ ಸ್ವತಂತ್ರ
ಸಂವಿಧಾನ ಹೊಂದಿರುವ ಭಾರತದಂಥ ದೇಶದಲ್ಲಿ ಒಬ್ಬ ಖಾಸಗಿ ವ್ಯಕ್ತಿ ಏಕಾಂಗಿಯಾಗಿ, ಇಡೀ ವ್ಯವಸ್ಥೆಯನ್ನು ಮೀರಿ ಬೆಳೆಯಲು ಸಾಧ್ಯವಿಲ್ಲ. ಇಲ್ಲಿ ದೇವಮಾನವರು ಅಥವಾ ಸೋ ಕಾಲ್ಡ್ ಗುರೂಜಿಗಳು ಹಾಗೂ ರಾಜಕಾರಣಿಗಳು ಜಂಟಿಯಾಗಿ
ಹೆಜ್ಜೆ ಹಾಕುತ್ತಾರೆ.
ಸಂತ ರಾಮ್‌ಪಾಲ್‌ನಂಥ ಘಟನೆಗಳು ಕೇವಲ ಭಾರತದಲ್ಲಿ ಮಾತ್ರ ನಡೆಯುತ್ತವೆ ಅಂದುಕೊಳ್ಳಬೇಡಿ. ಇವು ಸರ್ವವ್ಯಾಪಿ. ರಾಮ್‌ಪಾಲ್ ಬಂಧನ ಕುರಿತು ನಡೆದ ೨ ದಿನಗಳ ಹೈಡ್ರಾಮಾ ನಿಮಗೆ ಅಮೆರಿಕದ ಟೆಕ್ಸಾಸ್‌ನ ವಾಕೋ ಘಟನೆಯನ್ನೂ ನೆನೆಪಿಸಬಹುದು. ೧೯೯೩ರಲ್ಲಿ ಬ್ರಾಂಚ್ ದ್ರಾವಿಡಿಯನ್ಸ್ ಧಾರ್ಮಿಕ ಗುಂಪು ಮತ್ತು ಪೊಲೀಸರ ಮಧ್ಯೆ ೫೨ ದಿನಗಳ
ಕಾಳಗ ನಡೆದಿತ್ತು. ವಾಕೋದ ಮೌಂಟ್ ಕಾರ್ಮೆಲ್ ಸೆಂಟರ್ ನಲ್ಲಿ ತನ್ನ ಬೆಂಬಲಿಗರನ್ನು ಗುರಾಣಿ ರೀತಿಯಲ್ಲಿ ಬ್ರಾಂಚ್ ದ್ರಾವಿಡಿಯನ್ಸ್‌ನ ಮುಖ್ಯಸ್ಥ ಡೇವಿಡ್ ಕೊರೆಶ್ ಬಳಸಿಕೊಂಡಿದ್ದ. ಅಂತಿಮವಾಗಿ ೫೨ನೇ ದಿನ ಆತ ಶರಣಾಗುವ ಮೂಲಕ ಪ್ರಕರಣ ಅಂತ್ಯ ಕಂಡಿತ್ತು.
‘ಎಕನಾಮಿಕ್ಸ್ ಟೈಮ್ಸ್’ಗೆ ನೀಡಿದ ಹೇಳಿಕೆಯಲ್ಲಿ ಆರೆಸ್ಸೆಸ್ ಚಿಂತಕ ಕೆ.ಎನ್.ಗೋವಿಂದಾಚಾರ್ಯ ಅವರು ಈ ದೇವಮಾನವರು ಮತ್ತು ರಾಜಕಾರಣಿಗಳ ನಡುವಿನ ಅಪವಿತ್ರ ಮೈತ್ರಿಯನ್ನು ಧ್ವನಿಸುತ್ತಾರೆ. ‘ರಾಜಕೀಯ ಪಕ್ಷಗಳು ಮತ್ತು ಈ
ದೇವಮಾನವರು ಪರಸ್ಪರ ಒಪ್ಪಿತ ಮಾರ್ಗದಲ್ಲಿ ಸಾಗುತ್ತಾರೆ. ಪಕ್ಷಗಳು ದೇವಮಾನವರ ಜನಪ್ರಿಯತೆಯನ್ನು ತಮಗೆ ಅನುಕೂಲಕರ ಸರಕಾಗಿಸಿಕೊಂಡರೆ, ದೇವಮಾನವರು ಇವರಿಂದ ವ್ಯವಸ್ಥೆಯ ಮಾನ್ಯತೆ ಪಡೆದುಕೊಳ್ಳುತ್ತಾರೆ. ಇದೊಂದು ಅವಕಾಶವಾದಿತನ ಮತ್ತು ಅಂತಿಮವಾಗಿ ಇಂಥ ಪ್ರಕರಣಗಳು ತೀರಾ ಕೆಟ್ಟದಾಗಿ ಅವಸಾನ ಕಾಣುತ್ತವೆ’.
ಇದನ್ನು ಇನ್ನಷ್ಟು ಸರಳವಾಗಿ ಉದಾಹರಣೆ ಸಹಿತ ಹೇಳುವುದಾದರೆ, ಇಂದಿರಾ ಗಾಂಧಿ ಅವರಿಗೆ ಯೋಗ ಗುರುವಾಗಿದ್ದ ಬ್ರಹ್ಮಚಾರಿ ಧೀರೇಂದ್ರ ಹಾಗೂ ಮತ್ತೊಬ್ಬ ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ. ಇವರಿಬ್ಬರೂ ‘ಅವಕಾಶವಾದಿತನದ ಪ್ರಮುಖ ಶಿಲ್ಪಿಗಳು’. ೧೯೭೫-೭೭ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಈ
ಬ್ರಹ್ಮಚಾರಿ ಧೀರೇಂದ್ರ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ. ಈತನನ್ನು ಆಗ ’ಛಿ ಐ್ಞಜಿಚ್ಞ ್ಕಟ್ಠಠಿಜ್ಞಿ’
(ರಾಸ್‌ಪುಟಿನ್ ರಷ್ಯಾದ ರೋಮನೋವ್ಸ್ ರಾಜಕೀಯ ಮನೆತನಕ್ಕೆ ಸಲಹೆಗಾರ. ಎಲ್ಲಕ್ಕಿಂತ ಹೆಚ್ಚಾಗಿಈತಕೂಡ ದೇವಮಾನವ. ಚ್ಟ ಘೆಜ್ಚಿಟ್ಝ ಐಐ ರಷ್ಯಾ ಸೇನೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಾಗ ಈ ರಾಸ್ ಪುಟಿನ್ ಆತನಿಗೆ ಪ್ರಮುಖ
ಸಲಹೆಗಾರನಾಗಿ, ರಷ್ಯಾದ ನಿರಂಕು ಶಪ್ರಭುತ್ವ ಅವನತಿಗೆ ಕಾರಣನಾದ) ಎಂದೇ ಕುಖ್ಯಾತಿ ಯಾಗಿದ್ದ. ಈ ಧೀರೇಂದ್ರ ಕೂಡ
ಇಂದಿರಾ ಗಾಂಧಿಯ ಒಂಚೂರು ಅವನತಿಗೂ ಕಾರಣನಾದ. ರಾಜಕೀಯ ವ್ಯವಸ್ಥೆ ಬಳಸಿಕೊಂಡು ತನ್ನ ಸಾಮ್ರಾಜ್ಯ ವಿಸ್ತರಿಸಿದ. ಅದೇ ರೀತಿ, ಚಂದ್ರಸ್ವಾಮಿಗೂ ನಿಕಟವಾದ ರಾಜಕೀಯ ನಂಟು ಇತ್ತು. ಈತನ ಆಶ್ರಮದ ಮೇಲೆ ದಾಳಿ ಮಾಡಿದಾಗ ಶಸಾಉಸಉ ದಲ್ಲಾಳಿಗಳಿಗೆ ೧೧ ದಶಲಕ್ಷ ಡಾಲರ್ ಪಾವತಿಸಿದ ಅಸಲಿ ದಾಖಲೆಗಳು ಸಿಕ್ಕಿದ್ದವು! ಅಂದರೆ, ಈ
ದೇವಮಾನವರು, ಗುರೂಜಿಗಳು ಕೇವಲ ಆಧ್ಯಾತ್ಮ ಬೋಧಿಸುವುದು, ಅನುಯಾಯಿಗಳನ್ನು ವಂಚಿಸುವುದು ಮಾತ್ರ ಮಾಡುತ್ತಿರಲಿಲ್ಲ. ಪಕ್ಕಾ ವ್ಯಾಪಾರಿಗಳು. ಭಾರತದ ಪಾರಂಪರಿಕ ಜ್ಞಾನವಾದ ಯೋಗ, ಆಧ್ಯಾತ್ಮವನ್ನು ಮಾರಾಟದ ಸರಕಾಗಿಸಿದವರು. ಆಯು ರ್ವೇದ ಪದ್ಛಿಧಿತಿಔಷಧಗಳನ್ನು ಮಾರಿದ ವರು. ಕೋಟಿ ಕೋಟಿ ಹಣ ಬಾಚಿ, ತಮ್ಮ ಸಾಮ್ರಾಜ್ಯ ವಿಸ್ತರಿಸಿ ಕೊಂಡವರು. ಮತ್ತೆ ಇದಕ್ಕೆಲ್ಲ ರಾಜ ಕಾರಣಿಗಳ ಬೆಂಬಲ ಇದ್ದೇ ಇರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!
ಬ್ರಹ್ಮಚಾರಿ ಧೀರೇಂದ್ರ, ಚಂದ್ರಸ್ವಾಮಿ ಯಂಥ ಖ್ಚಚ್ಞಚ್ಝಟ್ಠ ಜ್ಞಿಠಿ ಪಟ್ಟಿ ಚಿಕ್ಕದೇನಿಲ್ಲ. ಈ ಪಟ್ಟಿಗೆ ಸ್ವಾಮಿ ಸದಾಚಾರಿ, ಜ್ಞಾನ ಚೈತನ್ಯ, ಗುರ್ಮಿತ್ ರಾಮ್ ರಹೀಂ ಸಿಂಗ್, ಆಸಾರಾಮ್ ಬಾಪು, ನಿತ್ಯಾನಂದ ಸ್ವಾಮಿ, ಪ್ರೇಮಾನಂದ, ಇಚ್ಛಾಧಾರಿ ಸಂತ ಸ್ವಾಮಿ ಭೀಮಾನಂದ ಮಹಾರಾಜ್... ಹೀಗೆ ಪಟ್ಟಿ ಬೆಳೆಯುತ್ತದೆ. ಇವರೆಲ್ಲರೂ ಕೇವಲ ಅತ್ಯಾಚಾರ, ಕೊಲೆ, ಅನಾಚಾರಕ್ಕಾಗಿ
ಸುದ್ದಿಯಲ್ಲಿದ್ದವರಲ್ಲ. ಇವರು ಕಟ್ಟಿದ ಹಣದ ಸಾಮ್ರಾಜ್ಯ ಕೂಡ ಇವರನ್ನು ಕುಖ್ಯಾತಿಗೆ ತಳ್ಳಿದೆ. ಇವರಿಗಾರಿಗೂ ನಮ್ಮ
ನೆಲದ ಕಾನೂನು, ಕಟ್ಟಳೆ, ವ್ಯವಸ್ಥೆ ಬಗ್ಗೆ ಕಿಂಚಿತ್ ಗೌರವ ಇಲ್ಲ. ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಲ್ಲೆ ಎಂಬ ಹುಸಿ
ವಿಶ್ವಾಸಕ್ಕೆ ಇದೇ ರಾಜಕಾರಣಿಗಳು, ಭ್ರಷ್ಟ ವ್ಯವಸ್ಥೆ ನೀರೇರೆದಿರುತ್ತದೆ. ಇದೆಲ್ಲದರ ಜತೆಗೆ ನಮ್ಮ ಈ ಮೂಢ ಜನರ ಕುರುಡು ನಂಬಿಕೆ ಅವರಿಗೆಲ್ಲ ಎಲ್ಲಿಲ್ಲದ ಬಲ ತಂದುಕೊಡುತ್ತದೆ. ಹಾಗಾಗಿಯೇ ಅವರು, ಒಂದು ಚೌಕಟ್ಟಿನೊಳಗೇ ಇದ್ದುಕೊಂಡು, ಅದಕ್ಕೆ ಮತ್ತೊಂದು ಚೌಕಟ್ಟು ಹಾಕುವ ವಿಫಲ ಯತ್ನಕ್ಕೆ ಮುಂದಾಗುತ್ತಾರೆ. ಸಂತ ರಾಮ್‌ಪಾಲ್ ವಿಷಯದಲ್ಲೂ ಆಗಿದ್ದು ಇದೆ.
ಇದು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅಂಟಿದ ಜಾಢ್ಯವಲ್ಲ. ಮುಸ್ಲಿಂ, ಕ್ರೈಸ್ತ ಧರ್ಮವೂ ಸೇರಿದಂತೆ ಎಲ್ಲದರಲ್ಲೂ ಇಂಥ ಕಿರಾತಕರು ಇದ್ದೇ ಇರುತ್ತಾರೆ. ರಾಜಕೀಯ ನಂಟನ್ನು ತಮ್ಮ ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳುತ್ತಾ ರೆಂಬುದಕ್ಕೆ ದೆಹಲಿಯ ಸಯ್ಯದ್ ಅಹ್ಮದ್ ಬುಖಾರಿ ಉದಾಹರಣೆ. ೨೦೦೧ ಸೆಪ್ಟೆಂಬರ್ ೩ರಂದು ಪೊಲೀಸ್ ಅಧಿಕಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಖಾರಿ ಹಾಗೂ ಹಬಿಬ್‌ವುರ್ ರೆಹಮಾನ್ ವಿರುದಟಛಿ ಪ್ರಕರಣ ದಾಖಲಾಗಿದೆ. ಇವರ ವಿರುದಟಛಿ ದೆಹಲಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದರೂ ಇವರನ್ನು ಬಂಧಿಸಿ ಕೋರ್ಟ್‌ಗೆ ಹಾಜರಪಡಿಸಲು ದೆಹಲಿ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಇದಕ್ಕೆಲ್ಲ ಏನು ಕಾರಣ? ನೆಲದ ಕಾನೂನು ಧಿಕ್ಕರಿಸುವಂತೆ ಪ್ರೇರೇಪಿಸುವ ಶಕ್ತಿಗಳು ಯಾವುವು ಎಂಬುದನ್ನು ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಮತ್ತೆ ಕೆಲವು ಬಾಬಾಗಳು, ದೇವಮಾ ನವರು, ಗುರೂಜಿಗಳು ತುಂಬಾ ಸೌಜನ್ಯ ಮುಖವಾಡ ಧರಿಸಿಕೊಂಡು ತಮ್ಮ
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾವುದಾದರೊಂದು ರಾಜಕೀಯ ಪಕ್ಷದಲ್ಲೇ ಗುರುತಿಸಿಕೊಂಡು ಬಿಡುತ್ತಾರೆ.
ಇವರು ಕೂಡ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವುದರ ಜತೆಗೆ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಇಂಥವರು ಇನ್ನೂಡೇಂಜರ್!
ಭಾರತದಲ್ಲೇಕೆ ಈ ಗುರೂಜಿ, ದೇವಮಾನವರತ್ತ ಜನರು ಅಷ್ಟೊಂದು ಆಕರ್ಷಿತರಾಗುತ್ತಾರೆ? ಎನ್ನುವುದರ ಕುರಿತು ವರದಿಗಾರ ಸೌತಿಕ್ ಬಿಸ್ವಾಸ್ ಬಿಬಿಸಿಗೆ ಬರೆದಿದ್ದಾರೆ. ಅದರಲ್ಲಿ ಅವರು ಹೇಳುತ್ತಾರೆ- ‘ತೀವ್ರವಾಗಿ ನಗರೀಕರಣಗೊಳ್ಳುತ್ತಿರುವ
ಈ ದೇಶದ ಜನರ ಮಹತ್ವಾಕಾಂಕ್ಷೆ, ಗೊಂದಲ, ಹತಾಶೆಗೆ ಮದ್ದು ನೀಡುವ ರೀತಿಯಲ್ಲಿ ಈ ಗುರೂಜಿಗಳು ಗೋಚರವಾಗುತ್ತಾರೆ. ಈ ಗುರೂಜಿಗಳು, ದೇವಮಾನವರು ನಮ್ಮ ಜೀವನದಲ್ಲಿ ದೊಡ್ಡ ಸಂತೋಷವನ್ನು ತಂದು ಕೊಡಬಲ್ಲರು ಎಂಬ ಕಾರಣಕ್ಕೆ ಆಕರ್ಷಿತರಾಗುತ್ತಾರೆ. ತಮ್ಮ ಕುಟುಂಬದ ಅನಾರೋಗ್ಯಪೀಡಿತರನ್ನು ಮ್ಯಾಜಿಕ್‌ನಿಂದ ಸರಿ ಮಾಡಬಲ್ಲರು ಎಂಬ ನಂಬಿಕೆ. ಗುಜರಾತ್‌ನ ಸಬರ್ ಕಾಂತಾ ಜಿಲ್ಲೆಯಲ್ಲಿ ಒಬ್ಬ ಗುರು, ಮ್ಯಾಜಿಕ್‌ನಿಂದಲೇ ರೋಗಪೀಡಿತರನ್ನು ಗುಣ ಮಾಡುತ್ತೇನೆ ಎಂದು ನಂಬಿಸಿದ್ದ. ಆತನಿಗೆ ಸಾವಿರಾರು ಅನುಯಾಯಿಗಳು. ಇವರಲ್ಲಿ ಅನೇಕರು ಸತ್ತರೂ ಆತನ ಮೇಲೆ ನಂಬಿಕೆಯೇನೂ ಕುಂದಲಿಲ್ಲ’.
ಓಕೆ.. ಈ ಗುರೂಜಿಗಳು, ದೇವಮಾನವರು ತಮ್ಮ ಹಿತಾಸಕ್ತಿಗೆ ತಂತ್ರ ಹೆಣೆಯುತ್ತಾರೆ ಎಂದಿಟ್ಟುಕೊಳ್ಳೋಣ. ಆದರೆ, ಈ ಜನರಿಗೇನಾಗಿದೆ? ಒಬ್ಬ ಢೋಂಗಿ ಬಾಬಾ, ಗುರೂಜಿ, ದೇವಮಾನವರ ಸಲುವಾಗಿ ಪ್ರಾಣ ಬಿಡಲು ಮುಂದಾಗುತ್ತಾರೆ ಅಂದರೆ ಅದೆಂಥ ಮೂಢರು. ಇನ್ನೂ ದುರಂತ ಎಂದರೆ, ಹೀಗೆ ಯಾವುದೇ ವಿವೇಚನೆ ಇಲ್ಲದೆ ಇವರಿಗೆ ಶರಣು ಹೋಗುವವರು ಎಲ್ಲ ಬಲ್ಲವರು! ಆಧುನಿಕ ಪರಿಭಾಷೆಯಲ್ಲಿ ಇವರನ್ನು ವಿದ್ಯಾವಂತರು (ಬುದ್ದಿವಂತರು?) ಎಂದು ಕರೆಯುತ್ತಾರೆ. ಇವರಿಗೂ ಗೊತ್ತು. ಆತ ಸುಳ್ಳು ಹೇಳುತ್ತಿದ್ದಾನೆ. ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ ಎಂಬುದು. ಇನ್ನು ಒಂದಿಷ್ಟು ಜನರಿದ್ದಾರೆ. ಇವರು ಅನಕ್ಷರಸ್ಥರು. ದುರ್ಬಲ ಮನಸ್ಸಿನವರು. ಮೂಢನಂಬಿಕೆಯುಳ್ಳವರು. ಇವರಿಂದಾಗಿಯೂ ಈ ರಾಮ್‌ಪಾಲ್‌ನಂಥ ಬಾಬಾಗಳು,
ದೇವಮಾನವರಿಗೆ ಶಕ್ತಿ ಬಂದು ಬಿಡುತ್ತದೆ. ಆದರೆ, ಇವರೆಲ್ಲರೂ ಯಾವುದೋ‘ಜಾದೂ’ವೊಂದರ ನಿರೀಕ್ಷೆಯಲ್ಲಿ ದೇವಮಾನವರ ಪದತಲಕ್ಕೆ ಬಂದು ಬಿಡುತ್ತಾರೆ. ಇಂಥದ್ದಕ್ಕೆ ಕಡಿವಾಣ ಹಾಕಬೇಕಿದ್ದರೆ ಮೊದಲು ನಾನು ದೇವಮಾನವ, ನಿಮ್ಮ ಕಷ್ಟಗಳನ್ನು ಸರಿ ಮಾಡುತ್ತೇನೆಂದು ನಂಬಿಸುವ ಗುರೂಜಿ, ಬಾಬಾಗಳನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ಆದರೆ, ಕೊಡಿಸೋರು ಯಾರು? ಈ ಕೆಲಸ ಮಾಡಬೇಕಾದವರೇ ಅವರ ಜತೆ ಸೇರಿಕೊಂಡಿರುವಾಗ ಅದು ಹೇಗೆ ಸಾಧ್ಯ? ಸಾಧ್ಯ ಇಲ್ಲ ಎಂದಾದರೆ, ರಾಮ್‌ಪಾಲ್ ಬಂಧನದಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಒಂದಿಷ್ಟು ಜನರು ತಮ್ಮ ಪ್ರಾಣವನ್ನು ಪುಗ್ಸಟ್ಟೆಯಾಗಿ ಕಳೆದುಕೊಳ್ಳುತ್ತಲೆ ಇರುತ್ತಾರೆ. ಕೊನೆಪಕ್ಷ, ದೇವರು- ನಂಬಿಕೆಗಳಲ್ಲಿ ಸಮಾಧಾನ ಕಂಡು
ಕೊಳ್ಳುವುದಕ್ಕೆ ತಮಗೆ ಮಧ್ಯವರ್ತಿಗಳ ಅವಶ್ಯವಿಲ್ಲ ಅಂತ ಜನರಾದರೂ ಎಚ್ಚೆತ್ತು ಇಂಥ ತಥಾಕಥಿತ ದೇವಮಾನವರಿಂದ
ದೂರವಾಗುವುದು ಸಾಧ್ಯವಾದರೆ ಮಾತ್ರವೇ ಪರಿಹಾರದ ದಾರಿ ತೆರೆದುಕೊಳ್ಳುತ್ತದೆ.
(ಈ ಲೇಖನ ಕನ್ನಡಪ್ರಭದ ೨೦೧೪ ನವೆಂಬರ್ ನ ೨೧ರ ಸಂಚಿಕೆಯಲ್ಲಿ ಪ್ರಕಟವಾಗಿದೆ)