ಸೋಮವಾರ, ನವೆಂಬರ್ 18, 2019

Data Backup: ಡೇಟಾ ಬ್ಯಾಕ್‌ ಅಪ್‌ ಮಾಡಿಕೊಳ್ಳುವುದು ಹೇಗೆ?

ಮಲ್ಲಿಕಾರ್ಜುನ ತಿಪ್ಪಾರಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿಸಿಕ್ಕಾಪಟ್ಟೆ ಮೆಮೊರಿ ಇರುತ್ತದೆ. ಆದರೆ, ಬಜೆಟ್‌ ಫೋನ್‌ಗಳಲ್ಲಿಈ ಸೌಲಭ್ಯ ಅಷ್ಟಾಗಿ ದೊರೆಯುವುದಿಲ್ಲ. ಅಂಥ ಸಂದರ್ಭದಲ್ಲಿಬಳಕೆದಾರರು ಬ್ಯಾಕ್‌ಅಪ್‌ ಮತ್ತು ರಿಸ್ಟೋರ್‌ ಆ್ಯಪ್‌ಗಳನ್ನು ಬಳಸಿಕೊಂಡು ತಮ್ಮ ಅಮೂಲ್ಯವಾದ ಮಾಹಿತಿಯನ್ನು ಸೇವ್‌ ಮಾಡಿಟ್ಟುಕೊಳ್ಳಬಹುದು.

ಮೊನ್ನೆಯಷ್ಟೇ ಗೂಗಲ್‌ ಸಂಸ್ಥೆ, ಬಳಕೆದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ 'ಗೂಗಲ್‌ ಒನ್‌' ಎಂಬ ಹೊಸ ಬ್ಯಾಕ್‌ಅಪ್‌ ಮತ್ತು ರಿಸ್ಟೋರ್‌ ಆ್ಯಪ್‌ ಬಿಡುಗಡೆ ಮಾಡಿದೆ. ಇದನ್ನು ಬಳಸಿಕೊಂಡು ಬಳಕೆದಾರರು ತಮ್ಮ ಗೂಗಲ್‌ ಡ್ರೈವ್‌ನಲ್ಲಿ ಡೇಟಾವನ್ನು ಉಳಿಸಿಕೊಳ್ಳಬಹುದು. ಫೋಟೊಗಳಿಂದ ಹಿಡಿದು ಡಾಕ್ಯುಮೆಂಟ್‌ಗಳವರೆಗೂ ಇಲ್ಲಿಬ್ಯಾಕ್‌ಅಪ್‌ ಮಾಡಿಕೊಳ್ಳಬಹುದಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿಗೂಗಲ್‌ ಒನ್‌ ಬಳಸಿಕೊಂಡು ಡೇಟಾ ಹೇಗೆ ಸೇವ್‌ ಮಾಡಿಕೊಳ್ಳಬಹುದು ಮತ್ತು ಅತ್ಯುತ್ತಮ ಬ್ಯಾಕ್‌ಅಪ್‌ ಆ್ಯಪ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಗೂಗಲ್‌ ಒನ್‌ನಲ್ಲಿ ಬ್ಯಾಕ್‌ಅಪ್‌ ಹೇಗೆ ಮಾಡೋದು?ಮೊದಲಿಗೆ ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ಗೂಗಲ್‌ ಒನ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಆನಂತರ, ನಿಮ್ಮ ಗೂಗಲ್‌ ಐಡಿ ಮತ್ತು ಪಾಸ್ವರ್ಡ್‌ ಬಳಸಿಕೊಂಡು ಗೂಗಲ್‌ ಒನ್‌ ಆ್ಯಪ್‌ ಓಪನ್‌ ಮಾಡಿ. ಸ್ಟೋರೇಜ್‌ ಪ್ಲ್ಯಾನ್‌ ಆಯ್ಕೆ ಮಾಡಿಕೊಳ್ಳಿ. ಆನಂತರ ಆ್ಯಪ್‌ನ ಹೋಮ್‌ ಸೆಕ್ಷನ್‌ನಲ್ಲಿರುವ ಬ್ಯಾಕ್‌ಅಪ್‌ ಆಪ್ಷನ್‌ ಮೇಲೆ ಟ್ಯಾಪ್‌ ಮಾಡಿ. ಆಗ ಅದು ನೀವು ಸೇವ್‌ ಮಾಡಿಟ್ಟುಕೊಳ್ಳಬೇಕೆಂದಿರುವ ಕಂಟೆಂಟ್‌ ಬಗ್ಗೆ ಕೇಳುತ್ತದೆ. ಬಳಿಕ ಅಲ್ಲಿರುವ ಆಯ್ಕೆಗಳನ್ನು ಸೆಲೆಕ್ಟ್ ಮಾಡಿಕೊಂಡು ನೆಕ್ಸ್ಟ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಆ ಬಳಿಕ ಮತ್ತೆ ಬ್ಯಾಕ್‌ಅಪ್‌ ಮೇಲೆ ಟ್ಯಾಪ್‌ ಮಾಡಿ, ಆಗ ಬ್ಯಾಕ್‌ಅಪ್‌ ಪ್ರಕ್ರಿಯೆ ಆರಂಭವಾಗುತ್ತದೆ ಮತ್ತು ಪ್ರಕ್ರಿಯೆ ಮುಕ್ತಾಯದವರೆಗೂ ಕಾಯಿರಿ.

ರಿಸ್ಟೋರ್‌ ಮಾಡುವ ಹಂತಗಳು:ಆ್ಯಪ್‌ ಹೋಮ್‌ ಸೆಕ್ಷನ್‌ನಲ್ಲಿರುವ ರಿಸ್ಟೋರ್‌ ಆಪ್ಷನ್‌ ಮೇಲೆ ಟ್ಯಾಪ್‌ ಮಾಡಿ. ಆಗ ನಿಮಗೆ ಅಲ್ಲಿಲಭ್ಯ ಇರುವ ಎಲ್ಲಬ್ಯಾಕ್‌ಅಪ್‌ ಡೇಟಾ ಡಿಸ್‌ಪ್ಲೇ ಆಗುತ್ತದೆ. ನಿಮಗೆ ಯಾವ ಡೇಟಾ ರಿಸ್ಟೋರ್‌ ಆಗಬೇಕು ಆ ಡೇಟಾ ಮುಂದಿರುವ ರಿಸ್ಟೋರ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಆಗ ರಿಸ್ಟೋರ್‌ ಪ್ರಕ್ರಿಯೆ ಆರಂಭವಾಗುತ್ತದೆ.

ನಿಮಗೆ ಈ ವಿಷಯ ನೆನಪಿರಲಿ- ಮೂಲ ಸ್ಟೋರೇಜ್‌ ಸೌಲಭ್ಯ 15 ಜಿಬಿ ಮಾತ್ರ ಇರುತ್ತದೆ. ಅಂದರೆ, ನೀವು ಯಾವುದೇ ಡೇಟಾವನ್ನು 15 ಜಿಬಿವರೆಗೆ ಸೇವ್‌ ಮಾಡಿಟ್ಟುಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಜಿಬಿ ಅಗತ್ಯವಾದರೆ ದುಡ್ಡು ಕೊಟ್ಟು ಖರೀದಿಸಬೇಕಾಗುತ್ತದೆ.ಅತ್ಯುತ್ತಮ ಬ್ಯಾಕ್‌ಅಪ್‌ ಆ್ಯಪ್‌ಗಳು

ಜಿ ಕ್ಲೌಡ್‌ ಬ್ಯಾಕ್‌ಅಪ್‌: ಆ್ಯಂಡ್ರಾಯ್ಡ್‌ ಸಾಧನಗಳಲ್ಲಿ ಬ್ಯಾಕ್‌ ಆ್ಯಪ್‌ ಜನಪ್ರಿಯವಾಗಿದೆ. ಗೂಗಲ್‌ ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಒಂದು ಜಿಬಿವರೆಗೆ ಬ್ಯಾಕ್‌ಅಪ್‌ಗೆ ಅವಕಾಶ ಕಲ್ಪಿಸುವ ಈ ಆ್ಯಪ್‌ಗೆ ನಿಮ್ಮ ಸ್ನೇಹಿತರನ್ನು ಆಹ್ವಾನಿಸಿದರೆ ಈ ಸ್ಥಳಾವಕಾಶ ಹೆಚ್ಚಾಗುತ್ತಾ ಹೋಗುತ್ತದೆ.

ಸೂಪರ್‌ ಬ್ಯಾಕ್‌ಅಪ್‌: ನಿಮ್ಮ ಫೋನ್‌ನ ಡೇಟಾ, ಆ್ಯಫ್ಸ್‌, ಕಾಂಟಾಕ್ಟ್ ಕಾಲ್‌ ಲಾಗ್‌ ಇತ್ಯಾದಿ ಮಾಹಿತಿಯನ್ನು ಸೇವ್‌ ಮಾಡಿಟ್ಟುಕೊಳ್ಳಲು ಈ ಆ್ಯಪ್‌ ನೆರವು ನೀಡುತ್ತದೆ. ನಿಮ್ಮ ಫೋನ್‌ನಲ್ಲಿಇನ್ಸ್‌ಟಾಲ್‌ ಮಾಡಿಕೊಳ್ಳಲಾಗುವ ಹೊಸ ಆ್ಯಪ್‌ಗಳ ಡೇಟಾವನ್ನು ಸ್ವಯಂ ಆಗಿ ದಾಖಲಿಸಿಕೊಳ್ಳುತ್ತದೆ.

ಹೆಲಿಯಂ: ಎಸ್‌ಡಿ ಕಾರ್ಡ್‌, ಕಂಪ್ಯೂಟರ್‌ ಮತ್ತು ಕ್ಲೌಡ್‌ ಬ್ಯಾಕ್‌ಅಪ್‌ ಡೇಟಾ ಸಂಗ್ರಹಿಸಲು ಸಹಾಯ ಮಾಡುವ ಈ ಆ್ಯಪ್‌ನಿಂದ ಮಾಹಿತಿಯನ್ನು ಎಲ್ಲಿಬೇಕಾದರೂ ಅತ್ಯಂತ ಸುಲಭವಾಗಿ ಅಕ್ಸೆಸ್‌ ಮಾಡಬಹುದು.

ಗೋ ಬ್ಯಾಕ್‌ಅಪ್‌ ಮತ್ತು ರಿಸ್ಟೋರ್‌ ಪ್ರೊ: ಇದು ಕೂಡ ಅತ್ಯುತ್ತಮ ಆ್ಯಪ್‌ ಆಗಿದ್ದು ಉಚಿತ ಆವೃತ್ತಿಯಲ್ಲಿನೀವು ನಿಮ್ಮ ಎಸ್‌ಎಂಎಸ್‌ ಮತ್ತು ಎಂಎಂಎಸ್‌ ಫೈಲ್‌ಗಳನ್ನು ಬ್ಯಾಕ್‌ಅಪ್‌ ಮಾಡಿಟ್ಟುಕೊಳ್ಳಬಹುದು. ಇನ್ನೂಹೆಚ್ಚಿನ ಸೌಲಭ್ಯಕ್ಕಾಗಿ ನೀವು ಇದರ ಖರೀದಿ ಆವೃತ್ತಿಯನ್ನು ಬಳಸಿಕೊಳ್ಳಬಹುದು.

ಈಜಿ ಆ್ಯಪ್‌ ಟೂಲ್‌ಬಾಕ್ಸ್‌: ಗೂಗಲ್‌ ಪ್ಲೇಸ್ಟೋರ್‌ನಲ್ಲಿಈ ಆ್ಯಪ್‌ ಕೂಡ ನಿಮಗೆ ಉಚಿತವಾಗಿ ದೊರೆಯುತ್ತದೆ. ಡೇಟಾ ಬ್ಯಾಕ್‌ಅಪ್‌ ಮಾಡಲು ಈ ಆ್ಯಪ್‌ ಚಿಕ್ಕ ಚಿಕ್ಕ ಟೂಲ್‌ಗಳನ್ನು ಒದಗಿಸುತ್ತದೆ. ಕ್ಲೌಡ್‌ ಬ್ಯಾಕ್‌ಅಪ್‌, ಎಸ್‌ಡಿ ಕಾರ್ಡ್‌ ಬ್ಯಾಕ್‌ಅಪ್‌ಗೂ ಇದು ಅವಕಾಶ ಕಲ್ಪಿಸಿಕೊಡುತ್ತದೆ.

ಸಿಎಂ ಬ್ಯಾಕ್‌ಅಪ್‌: ಇದು ತುಂಬ ಜನಪ್ರಿಯ ಆ್ಯಪ್‌. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿಇದಕ್ಕೆ 4.7 ರೇಟಿಂಗ್‌ ಇದೆ ಅಂದರೆ ಅದರ ಜನಪ್ರಿಯತೆಯನ್ನು ತಿಳಿಯಬಹುದು. ಫೋನ್‌ನಲ್ಲಿರುವ ಕಾಂಟಾಕ್ಟ್ ಸಂದೇಶಗಳು, ಕಾಲ್‌ ಲಾಗ್‌, ಫೋಟೊಗಳು, ಬ್ರೌಸರ್‌ ಬುಕ್‌ಮಾರ್ಕ್‌ಗಳನ್ನು ಸುಲಭವಾಗಿ ಬ್ಯಾಕ್‌ಅಪ್‌ ಮಾಡಿಕೊಳ್ಳಬಹುದು. ಅಂದಾಜು 50 ದಶಲಕ್ಷ ಬಳಕೆದಾರರು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ: