ಸೋಮವಾರ, ನವೆಂಬರ್ 25, 2019
Google Adsense: ಹಣ ಸಂಪಾದಿಸುವುದು ಹೇಗೆ?
-ಮಲ್ಲಿಕಾರ್ಜುನ ತಿಪ್ಪಾರ
ನಮ್ಮ ಊಹೆ, ತರ್ಕ ಮೀರಿ ತಂತ್ರಜ್ಞಾನ ನಮ್ಮನ್ನು ಆವರಿಸಿಕೊಂಡಿದೆ. ತಂತ್ರಜ್ಞಾನ ಸಾಧನಗಳಿಲ್ಲದೆ ನಮ್ಮ ಜೀವನ ದುಸ್ತರವಾಗಿಬಿಡುತ್ತದೆ. ಅಷ್ಟರ ಮಟ್ಟಿಗೆ ನಾವು ಗ್ಯಾಜೆಟ್‌ಗಳ ಗುಲಾಮರಾಗಿದ್ದೇವೆ. ತಂತ್ರಜ್ಞಾನ ಮತ್ತು ಗ್ಯಾಜೆಟ್‌ಗಳ ಬಳಕೆಯು ಖರ್ಚಿನ ಬಾಬತ್ತೂ ಹೌದು. ನಿಮಗೆ ಅತ್ಯುತ್ತಮ ಸೇವೆ ಬೇಕು ಎಂದಾದರೆ ಹೆಚ್ಚೆಚ್ಚು ಹಣ ನೀಡಬೇಕಾಗುತ್ತದೆ. ಆದರೆ, ಇದೇ ಗ್ಯಾಜೆಟ್ ಅಥವಾ ತಂತ್ರಜ್ಞಾನ ಇಟ್ಟುಕೊಂಡು ನೀವು ಹಣ ಸಂಪಾದಿಸಬಹುದು ಗೊತ್ತಾ? ನಮ್ಮ ಬಹುತೇಕ ವರ್ಚುವಲ್ ಅವಶ್ಯಕತೆಗಳನ್ನು ಗೂಗಲ್ ಸರ್ಚ್ ಎಂಜಿನ್ ಪೂರೈಸುತ್ತಿದೆ ಅಲ್ಲವೇ, ಅದೇ ಸರ್ಚ್ ಎಂಜಿನ್ ನಿಮಗೆ ಹಣ ಗಳಿಸುವ ದಾರಿಯನ್ನು ಕೂಡ ತೋರಿಸುತ್ತದೆ. ಇದಕ್ಕೆ ನಿಮ್ಮಲ್ಲಿರುವ ಪ್ರತಿಭೆ ಮತ್ತು ಕಠಿಣ ಪರಿಶ್ರಮ ಇದ್ದರೆ ಸಾಕು. ಆನ್‌ಲೈನ್‌ನಲ್ಲಿ ಹಣ ಗಳಿಸುವುದಕ್ಕೆ ಗೂಗಲ್ ಒದಗಿಸುವ ಟೂಲ್ ನಿಮ್ಮ ನೆರವಿಗೆ ಬರುತ್ತದೆ.
ಗೂಗಲ್ ಆ್ಯಡ್ ಸೆನ್ಸ್ ಗೂಗಲ್ ಕಂಪನಿಯ ಆನ್‌ಲೈನ್ ಜಾಹೀರಾತು ನೆಟ್ವರ್ಕ್ ಆಗಿದೆ. ವೆಬ್ ಮಾಸ್ಟರ್ ಮೂಲಕ ಹಣ ಗಳಿಸುವುದಕ್ಕಾಗಿ ಗೂಗಲ್ ಆ್ಯಡ್ ಸೆನ್ಸ್ ಅತಿದೊಡ್ಡ ಆನ್‌ಲೈನ್ ಪಬ್ಲಿಷರ್ ನೆಟ್ವರ್ಕ್ ಎಂದು ಗುರುತಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿಆನ್‌ಲೈನ್ ಮೂಲಕ ಹಣ ಸಂಪಾದನೆ ಮಾಡುವುದು ಹೆಚ್ಚು ಜನಪ್ರಿಯವಾಗುತ್ತಿದೆ. ಬಹಳಷ್ಟು ಪ್ರತಿಭಾನ್ವಿತರು ತಮ್ಮಲ್ಲಿರುವ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಹಾಗಂತ, ಆನ್‌ಲೈನ್‌ನಲ್ಲಿ ಹಣ ಗಳಿಸುವುದು ತುಂಬಾ ಸರಳವಾದ ಅಥವಾ ಸುಲಭ ಮಾರ್ಗ ಎಂದೇನೂ ಭಾವಿಸಬೇಕಿಲ್ಲ.
ಗೂಗಲ್ ಯಾಕೆ ದುಡ್ಡು ಕೊಡುತ್ತದೆ?ಹೌದು ಗೂಗಲ್ ಯಾಕೆ ಹಣ ನೀಡುತ್ತದೆಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಲಿಕ್ಕೂ ಸಾಕು. ಆದರೆ, ಇದರಲ್ಲೇನೂ ಅಂಥ ನಿಗೂಢ ರಹಸ್ಯವೇನೂ ಇಲ್ಲ. ಇದರಲ್ಲಿಎರಡು ವಿಧಾನಗಳಿವೆ. ಮೊದಲನೆಯದು- ಆ್ಯಡ್ ವರ್ಡ್ಸ್. ಇದರಲ್ಲಿ ಜಾಹೀರಾತುದಾರರು ತಮ್ಮ ಪ್ರಾಡಕ್ಟ್ ಗಳನ್ನು ಪ್ರಮೋಟ್ ಮಾಡಲು ಮುಂದಾಗುತ್ತಾರೆ. ಎರಡನೆಯದು- ಆ್ಯಡ್ ಸೆನ್ಸ್. ಗೂಗಲ್ ಆ್ಯಡ್ ಸೆನ್ಸ್ ಎಂಬ ಪೋ›ಗ್ರಾಮ್ ಮೂಲಕ ಪಬ್ಲಿಷರ್ ಸೈಟ್‌ಗಳಲ್ಲಿ ಜಾಹೀರಾತುಗಳು ಪ್ರಕಟಗೊಳ್ಳುತ್ತವೆ ಮತ್ತು ಆ ಮೂಲಕ ಪಬ್ಲಿಷರ್ಸ್ ಹಣ ಗಳಿಸಲು ಅವಕಾಶ ಸೃಷ್ಟಿಯಾಗುತ್ತದೆ.
ಆ್ಯಡ್ ಸೆನ್ಸ್ ಹೇಗೆ ಕೆಲಸ ಮಾಡುತ್ತದೆ?
ನಾವು ಈ ಆ್ಯಡ್ ಸೆನ್ಸ್ ಫೀಚರ್ ಅನ್ನು ವೆಬ್ ಸೈಟ್, ಬ್ಲಾಗ್ಸ್, ಫೋರಮ್ಸ್, ಮೊಬೈಲ್ ಯೂಟ್ಯೂಬ್, ಸರ್ಚ್ ಎಂಜಿನ್ ಇತ್ಯಾದಿಗಳಲ್ಲಿಬಳಸಬಹುದಾಗಿದೆ. ಗೂಗಲ್ ಆ್ಯಡ್ ಸೆನ್ಸ್ ಸಿಪಿಸಿ ಆಧರಿತ ಪಬ್ಲಿಷರ್ ನೆಟ್ವರ್ಕ್ ಆಗಿದೆ. ಸಿಪಿಸಿ ಎಂದರೆ- ಕಾಸ್ಟ್ ಪರ್ ಕ್ಲಿಕ್ ಅಂತ ಅರ್ಥ. ನಿಮ್ಮ ವೆಬ್ ಪೇಜ್‌ನಲ್ಲಿ ಕಾಣಿಸಿಕೊಳ್ಳುವ ಜಾಹೀರಾತು ಮೇಲೆ ಎಷ್ಟು ಕ್ಲಿಕ್‌ಗಳಾಗುತ್ತವೆ ಎಂಬುದರ ಮೇಲೆ ಆ್ಯಡ್ ಸೆನ್ಸ್ ಹಣ ದೊರೆಯುವಂತೆ ಮಾಡುತ್ತದೆ. ಗೂಗಲ್ ಸಿಪಿಸಿ ರೇಟ್ ವೆಬ್ ಸೈಟಿನಿಂದ ವೆಬ್ ಸೈಟಿಗೆ, ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲವೆಬ್‌ಸೈಟ್‌ಗಳು, ಜನಪ್ರಿಯ ಬ್ಲಾಗರ್‌ಗಳು ಮತ್ತು ಯುಟ್ಯೂಬ್ ಚಾನೆಲಿಗರು ಈ ಆ್ಯಡ್ ಸೆನ್ಸ್ ಬಳಸುತ್ತಾರೆ.
ಗೂಗಲ್ ಯಾಕೆ ಹಣ ನೀಡುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಕಷ್ಟವೇನಲ್ಲ. ಜಗತ್ತಿನಲ್ಲೇ ಗೂಗಲ್ ಅತ್ಯಂತ ಉತ್ಕೃಷ್ಟ ವೆಬ್ ಬೇಸ್ಡ್ ಕಂಪನಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಗೂಗಲ್‌ನಿಂದ ಸರ್ಚ್ ಎಂಜಿನ್, ಜಿಮೇಲ್, ಯೂಟ್ಯೂಬ್, ಬ್ಲಾಗರ್, ಮ್ಯಾಫ್ಸ್, ಡ್ರೈವ್ಸ್, ಪಿಕಾಸಾ ಮತ್ತಿತರ ಸೇವೆಗಳು ದೊರೆಯುತ್ತವೆ. ಮತ್ತು ಇವುಗಳನ್ನು ಜಗತ್ತಿನಾದ್ಯಂತ ಬಹಳಷ್ಟು ಜನರು ಬಳಸುತ್ತಾರೆ ಕೂಡ. ಹಾಗಾಗಿ ಎಲ್ಲ ಬ್ರಾಂಡ್‌ಗಳು, ಕಂಪನಿಗಳು ತಮ್ಮ ಪ್ರಾಡಕ್ಟ್‌ಗಳನ್ನು ಗೂಗಲ್ ಮೂಲಕ ಪ್ರಮೋಟ್ ಮಾಡಲು ಮುಂದಾಗುತ್ತಾರೆ. ಇದಕ್ಕಾಗಿಯೇ ಗೂಗಲ್ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅಸಂಖ್ಯ ಜಾಹೀರಾತುದಾರರಿಗೆ ಸಮಾನ ಅವಕಾಶ ಕಲ್ಪಿಸುವ ಕೆಲಸವನ್ನು ಈ ಆ್ಯಡ್ ಸೆನ್ಸ್ ಮಾಡುತ್ತದೆ.
ಹಾಗೆಯೇ, ಉತ್ಕೃಷ್ಟ ವೆಬ್ ಸೈಟ್‌ಗಳು, ಬ್ಲಾಗ್‌ಗಳು, ಯೂಟ್ಯೂಬ್ ಚಾನೆಲ್‌ಗಳಿಗೆ ಅವಕಾಶವನ್ನು ಕಲ್ಪಿಸುತ್ತದೆ. ಒಟ್ಟಾರೆ ಹೇಳಬೇಕೆಂದರೆ, ಈ ಗೂಗಲ್ ಆ್ಯಡ್ ಸೆನ್ಸ್ ಜಾಹೀರಾತುದಾರರು ಮತ್ತು ಪಬ್ಲಿಷರ್ಸ್ ನಡುವೆ ಮೂರನೇ ಪಾರ್ಟಿಯಾಗಿ ಕೆಲಸ ಮಾಡುತ್ತದೆ.
ಅಳವಡಿಸಿಕೊಳ್ಳುವುದು ಹೇಗೆ?ನಿಮ್ಮ ಬ್ಲಾಗ್ ಅಥವಾ ವೆಬ್‌ಸೈಟ್‌ಗೆ ಆ್ಯಡ್ ಸೆನ್ಸ್ ಅಳವಡಿಸಿಕೊಳ್ಳಲು ಮಾಡಬೇಕಾದದ್ದು ಇಷ್ಟೇ. (ಜಿಮೇಲ್ ಆ್ಯಡ್‌ಸೆನ್ಸ್) www.google.com/adsense/start ಹೋಗಿ ನಿಮ್ಮ ಯುಟ್ಯೂಬ್ ಚಾನೆಲ್ ಅಥವಾ ವೆಬ್ ಸೈಟ್ ಯುಆರ್‌ಎಲ್ ಸೇರಿಸಿ. ಬಳಿಕ ಅಲ್ಲಿ ಕೇಳಲಾಗುವ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ, ಅಪ್ಲಿಕೇಷನ್ ಸಬ್ಮಿಟ್ ಮಾಡಿ. ಒಂದೊಮ್ಮೆ ಬ್ಲಾಗ್‌ಗಳಿಗೆ ಆ್ಯಡ್ ಸೆನ್ಸ್ ಸೇರಿಸಬೇಕಿದ್ದರೆ, ಬ್ಲಾಗರ್ ಡ್ಯಾಶ್ ಬೋರ್ಡ್‌ಗೆ ಹೋಗಿ ಮತ್ತು ಅಲ್ಲಿರುವ ಆ್ಯಡ್ ಸೆನ್ಸ್ ಮೂಲಕ ನೇರವಾಗಿ ಸೈನ್‌ಅಪ್ ಆಗಿ. ಇಷ್ಟು ಮಾಡಿದರೆ ನಿಮಗೆ ಜಾಹೀರಾತು ಪ್ರದರ್ಶನವಾಗುತ್ತದೆ ಎಂದರ್ಥವಲ್ಲ. ಗೂಗಲ್ ಟೀಮ್ ಎಲ್ಲವನ್ನೂ ಪರೀಕ್ಷಿಸಿ ಓಕೆ ಮಾಡಿದ ಬಳಿಕವಷ್ಟೇ ಅದು ಕೆಲಸ ಮಾಡುತ್ತದೆ ಮತ್ತು ನಿಮಗೆ ಹಣ ದೊರೆಯುತ್ತದೆ.
ಈ ಲೇಖನವು ವಿಜಯ ಕರ್ನಾಟಕದ ಟೆಕ್ ನೌ ಪುಟದಲ್ಲಿ 2019ರ ನವೆಂಬರ್ 25ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

History of Cricket: ಕ್ರಿಕೆಟ್ ರೂಪಾಂತರದ ರೋಚ'ಕತೆ'
- ಮಲ್ಲಿಕಾರ್ಜುನ ತಿಪ್ಪಾರ
ಕ್ರಿಕೆಟ್ ಅನ್ನು ಧರ್ಮದ ರೀತಿಯಲ್ಲಿಆರಾಧಿಸುವ ಭಾರತದಲ್ಲಿಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಹಾಗೂ ಭಾರತೀಯ ತಂಡದ ನಡುವೆ ಹಗಲು-ರಾತ್ರಿ ಟೆಸ್ಟ್ ಕ್ರಿಕೆಟ್ ನಡೆಯುತ್ತಿದೆ. ಇದು ಜನರ ಅಭಿರುಚಿಗೆ ಅನುಗುಣವಾಗಿ ಕ್ರಿಕೆಟ್ ಕಾಣುತ್ತಿರುವ ರೂಪಾಂತರಕ್ಕೆ ಸಾಕ್ಷಿ. ಆಂಗ್ಲರಿಂದ 18ನೇ ಶತಮಾನದಲ್ಲಿಪರಿಚಯವಾದ ಈ ‘ಸಭ್ಯ ಆಟ’, ಆಯಾ ಕಾಲ ಘಟ್ಟದ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿದೆ. ಐದು ದಿನದ ಟೆಸ್ಟ್, ಏಕ ದಿನ, 20ಟ್ವೆಂಟಿ, 10 ಓವರ್... ಹೀಗೆ ಕ್ರಿಕೆಟ್ ತನ್ನ ಸ್ವರೂಪವನ್ನು ಬದಲಿಸಿಕೊಂಡು ಜನರ ಮನಸ್ಸನ್ನು ಗೆಲ್ಲುತ್ತಿದೆ. ಬದಲಾವಣೆಯ ಪಿಚ್‌ನಲ್ಲಿಕ್ರಿಕೆಟ್ ಬೆಳೆದು ಬಂದ ಬಗೆ ಇಲ್ಲಿದೆ.
ಟೆಸ್ಟ್ ಕ್ರಿಕೆಟ್‌ನ ಟೆಸ್ಟ್!
‘ಟೆಸ್ಟ್ ಕ್ರಿಕೆಟ್’ ಕ್ರಿಕೆಟ್‌ನ ಅತ್ಯುತ್ತಮ ಮಾದರಿ ಇದು. ಒಬ್ಬ ಆಟಗಾರನ ಕ್ರಿಕೆಟ್ ಕೌಶಲಗಳು ಅನಾವರಣಗೊಳ್ಳುವುದೇ ಟೆಸ್ಟ್ ಕ್ರಿಕೆಟ್‌ನಲ್ಲಿಎನ್ನುವುದು ಪಂಡಿತರ ಅಭಿಪ್ರಾಯ. ಐದು ದಿನಗಳ ಕಾಲ ನಡೆಯುವ ಕ್ರಿಕೆಟ್ ಅಷ್ಟೇ ‘ಸಭ್ಯ’ ಆಟವೂ ಹೌದು. ಫುಟ್ಬಾಲ್, ಹಾಕಿ, ರಗ್ಬಿ ಸೇರಿದಂತೆ ಇತರ ತಂಡ ಆಟಗಳಲ್ಲಿರುಧಿವಂತೆ ಇಲ್ಲಿಹೊಡಿ, ಬಡಿಯಂಥ ಮನೋಧಿಭೂಮಿಕೆ ಇರುವುದಿಲ್ಲ. ಕ್ರಿಕೆಟ್ ಆಟ ಎನ್ನುವುದು ತನ್ನ ಪಾಡಿಗೆ ತಾನು ಹರಿದುಧಿಕೊಂಡು ಹೋಗುವ ಪ್ರಶಾಂತ ನದಿ ಇದ್ದ ಹಾಗೆ(ಇತ್ತೀಚಿನ ವರ್ಷಗಳಲ್ಲಿಈ ಸಭ್ಯ ಆಟಕ್ಕೆ ಮಸಿ ಬಳಿಯುವ ಘಟನೆಗಳು ನಡೆಯುತ್ತಿವೆ ಎಂಬುದು ಬೇರೆ ಮಾತು). ಕ್ರಿಕೆಟ್ ಇತಿಹಾಸವನ್ನು ಕೆದಕುತ್ತಾ ಹೋದರೆ ಅದು ನಿಮ್ಮನ್ನು 18ನೇ ಶತಮಾನಕ್ಕೆ ಕರೆದೊಯ್ಯುತ್ತದೆ. ಆಂಗ್ಲರ ನಾಡಿನಲ್ಲಿಜನಿಸಿದ ಈ ಕ್ರಿಕೆಟ್ ಆ ನಂತರ, ಭಾರತವೂ ಸೇರಿದಂತೆ ಇಂಗ್ಲೆಂಡ್‌ನ ವಸಾಹತುಶಾಹಿ ನಾಡುಗಳಲ್ಲಿಜನಪ್ರಿಯಧಿಗೊಂಡಿತು. 1877ರ ಮಾರ್ಚ್ 15ರಿಂದ 19ರ ವರೆಗೆ ಜಗತ್ತಿನ ಮೊದಲ ಅಧಿಕೃತ ಟೆಸ್ಟ್ ಕ್ರಿಕೆಟ್ ನಡೆಧಿಯಿತು. ಇಂಗ್ಲೆಂಡ್ ಮತ್ತು ಆಸ್ಪ್ರೇಲಿಯಾ ನಡುವೆ ಆಸ್ಪ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿನಡೆದ ಈ ಪಂದ್ಯದಲ್ಲಿಇಂಗ್ಲೆಂಡ್ 45 ರನ್‌ಗಳಿಂದ ಗೆಲುವು ಸಾಧಿಸಿತು. ವಿಚಿತ್ರ ಎಂದರೆ, 1977ರಲ್ಲಿಟೆಸ್ಟ್ ಕ್ರಿಕೆಟ್‌ಗೆ 100 ವರ್ಷ ತುಂಬಿದ ಸಂದರ್ಭದಲ್ಲಿಇಂಗ್ಲೆಂಡ್ ಮತ್ತು ಆಸ್ಪ್ರೇಲಿಯ ನಡುವೆ ನಡೆದ ಪಂದ್ಯದಲ್ಲಿಆಸ್ಪ್ರೇಲಿಯಾ 45 ರನ್‌ಗಳಿಂದ ಗೆಲವು ಸಾಧಿಸಿತು! ಸದ್ಯ ಭಾರತೀಯ ಕ್ರಿಕೆಟ್ ತಂಡ ಪಟ್ಟಿಯಲ್ಲಿಅಗ್ರಸ್ಥಾನಿ.
ಟ್ವೆಂಟಿ 20 ಯುಗಾರಂಭ
ಐದು ದಿನಗಳ ಟೆಸ್ಟ್ ಕ್ರಿಕೆಟ್‌ನಿಂದ ಒಂದು ದಿನದ ಕ್ರಿಕೆಟ್‌ನ ಅನುಭವ ಹಾಗೂ ಆಟದ ಸವಿಯನ್ನು ಸವಿಯುತ್ತಿದ್ದ ಜನರಿಗೆ ಅದು ಕೂಡ ದೀರ್ಘ ಅವಧಿಯ ಕ್ರಿಕೆಟ್ ಅನಿಸಲಾರಂಭಿಸಿತು. ಆಗ ಇದಕ್ಕೆ ಪರ್ಯಾಯ ಹುಟ್ಟಿಕೊಂಡಿದ್ದೇ ಟ್ವೆಂಟಿ 20 ಕ್ರಿಕೆಟ್ ಮಾದರಿ. ಟ್ವೆಂಟಿ20 ಮಾದರಿಯ ದೇಸಿ ಟೂರ್ನಿಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ 2003ರಲ್ಲಿಪರಿಚಯಿಸಿತು. ಈ ಮಾದಧಿರಿಯ ಕ್ರಿಕೆಟ್‌ನಲ್ಲಿಎರಡೂ ತಂಡಗಳು ತಲಾ 20 ಓವರ್‌ಗಳ ಕ್ರಿಕೆಟ್ ಆಡುತ್ತವೆ. ಆ ಬಳಿಕ ಐಸಿಸಿ ಮಾದರಿಗೆ ಅಧಿಕೃತ ಮುದ್ರೆಯನ್ನು ಒತ್ತಿತು. ಮೂರು ಗಂಟೆಗಳಲ್ಲಿಈ ಆಟ ಮುಗಿದು ಬಿಡುತ್ತದೆ. ಈಗ ಟ್ವೆಂಟಿ20 ಅತ್ಯಂತ ಜನಪ್ರಿಯ ಕ್ರಿಕೆಟ್ ಮಾದರಿಯಾಗಿದ್ದು, ಅಂತಾಧಿರಾಷ್ಟ್ರೀಯ ಕ್ರಿಕೆಟ್ ಆಡುವ ಬಹುತೇಕ ರಾಷ್ಟ್ರಗಳು ಈ ಮಾದರಿಯನ್ನು ಅಳವಡಿಸಿಕೊಂಡಿವೆ. 2007ರಿಂದ ಐಸಿಸಿ 20ಟ್ವೆಂಟಿ ವಿಶ್ವ ಕಪ್ ಕೂಡ ಪರಿಚಯಿಸಿತು. ಭಾರತ ಕ್ರಿಕೆಟ್ ತಂಡ ಮೊದಲ ವಿಶ್ವ ಚಾಂಪಿಯನ್ ಆಯಿತು. ಪ್ರತಿ ಎರಡು ವರ್ಷಕ್ಕೊಮ್ಮೆ ವಿಶ್ವಕಪ್ ಪಂದ್ಯಾವಳಿ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿಟ್ವೆಂಟಿ20 ಕ್ರಿಕೆಟ್ ಬದಲಿಗೆ ಟೆನ್10 ಕ್ರಿಕೆಟ್ ಕೂಡ ಆಡಲಾಗುತ್ತಿದೆ. ಹಲವು ಕ್ರಿಕೆಟ್ ಅಕಾಡೆಮಿ ಮತ್ತು ಸ್ಥಳೀಯ ಟೂರ್ನಾಧಿಮೆಂಟ್‌ಗಳಲ್ಲಿಈ ಮಾದರಿಯ ಕ್ರಿಕೆಟ್ ಆಟ ಬಳಕೆಯಲ್ಲಿದೆ.
ಜರ್ಸಿ ರೂಪಾಂತರ
ಈಗ ಬಣ್ಣಬಣ್ಣದ ಜರ್ಸಿ ತೊಟ್ಟು ಆಡುವ ಕ್ರಿಕೆಟ್ ಆಟಗಾರರು ಹಿಂದೊಮ್ಮೆ ಏಕದಿನ ಕ್ರಿಕೆಟ್ ಆಗಲಿ, ಟೆಸ್ಟ್ ಕ್ರಿಕೆಟ್ ಆಗಲಿ ಬಿಳಿ ಬಣ್ಣದ ಜರ್ಸಿ ತೊಟ್ಟು ಆಡಬೇಕಿತ್ತು. ಆದರೆ, ಕಾಲದ ಅಗತ್ಯ ಮತ್ತು ಕ್ರೀಡೆಯ ಉನ್ನತೀಕರಣದ ಭಾಗವಾಗಿ 1951ರಲ್ಲಿಒಂದು ದಿನದ ಕ್ರಿಕೆಟ್ ಆರಂಭವಾಯಿತು. 1971ರಲ್ಲಿಮೊದಲ ಅಂತಾರಾಷ್ಟ್ರೀಯ ಏಕ ದಿನ ಪಂದ್ಯ ನಡೆಯಿತು. ಮುಂದೆ 1992ರ ವಿಶ್ವ ಕಪ್‌ವರೆಗೂ ಒಂದು ದಿನದ ಕ್ರಿಕೆಟ್‌ನಲ್ಲಿಆಟಗಾರರು ಬಿಳಿ ಬಣ್ಣದ ಜರ್ಸಿ ತೊಡುತ್ತಿದ್ದರು. ಆ ನಂತರ ಬಣ್ಣಬಣ್ಣದ ಜರ್ಸಿ ತೊಡಲು ಅವಕಾಶ ಕಲ್ಪಿಸಲಾಯಿತು. ಒಂದೊಂದು ರಾಷ್ಟ್ರ ಒಂದೊಂದು ಬಣ್ಣಕ್ಕೆ ಅಂಟಿಕೊಂಡಿವೆ. ಭಾರತೀಯ ಕ್ರಿಕೆಟ್ ತಂಡ ನೀಲಿ ಬಣ್ಣ ಹಾಗೂ ಅದಕ್ಕೆ ಹೊಂದುವ ಬಣ್ಣದ ಜರ್ಸಿಗಳನ್ನು ತೊಡುತ್ತದೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಂತೂ ತೀರಾ ಇತ್ತೀಚಿನವರೆಗೂ ಕೇವಲ ಬಿಳಿ ಬಣ್ಣದ ಜರ್ಸಿ ತೊಟ್ಟು ಕೊಳ್ಳಬೇಕಿತ್ತು. ಆದರೆ, ಇದೀಗ ಟೆಸ್ಟ್‌ನಲ್ಲೂಬಿಳಿ ಬಣ್ಣದ ಜರ್ಸಿ ಮೇಲೆ ಆಟಗಾರರ ಹೆಸರು ಮತ್ತು ನಂಬರ್ ಮುದ್ರಿಸಲಾಗುತ್ತಿದೆ.
ಐಪಿಎಲ್ ಎಂಬ ಕಮಾಲ್
ಕ್ರಿಕೆಟ್‌ನ ಲೆಕ್ಕಾಚಾರ ಮತ್ತು ಗ್ರಾಮರ್ ಬದಲಿಸಿ ಕ್ರಾಂತಿಕಾರಿ ಬದಲಾವಣೆಯೇ ಐಪಿಎಲ್. ಇದರ ಹುಟ್ಟಿಗೆ ಖಾಸಗಿ ಕ್ರಿಕೆಟ್ ಟೂರ್ನಿ ಐಸಿಎಲ್(ಇಂಡಿಯನ್ ಕ್ರಿಕೆಟ್ ಲೀಗ್) ಕಾರಣವಾಯಿತು. ಆದರೆ, ಇದಕ್ಕಾವುದೇ ಅಧಿಕೃತ ಮಾನ್ಯತೆ ಇರಲಿಲ್ಲ. ಆದರೂ, ಹಲವು ಆಟಗಾರರು, ಕ್ರಿಕೆಟ್ ಮಂಡಳಿ ಸದಸ್ಯರು ಈ ಲೀಗ್‌ನ ಭಾಗವಾಗತೊಡಗಿದರು. ಆಗ ಬಿಸಿಸಿಐ ‘ಇಂಡಿಯನ್ ಪ್ರಿಮೀಯರ್ ಲೀಗ್-ಐಪಿಎಲ್’ ಪರಿಚಯಿಸಿತು. ಇದಕ್ಕೀಗ ಯಶಸ್ವಿ ಟೂರ್ನಮೆಂಟ್ ಎಂಬ ಹೆಗ್ಗಳಿಕೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್ ರಾಷ್ಟ್ರಗಳ ನಡುವೆ ನಡೆದರೆ, ಐಪಿಎಲ್ ರಾಷ್ಟ್ರಗಳ ಗಡಿಗಳನ್ನೇ ಅಳಿಸಿ ಹಾಕಿತು. ಅಂತಾರಾಷ್ಟ್ರೀಯ ಆಟಗಾರರು ಐಪಿಎಲ್ ಭಾಗವಾಗಿ ಆಡ ತೊಡಗಿದ್ದರಿಂದ ಕ್ರಿಕೆಟ್‌ಗೆ ಹೊಸ ಖದರ್ ಬಂತು. 2008ರಲ್ಲಿಆರಂಭವಾದ ಐಪಿಎಲ್ ಈ ವರೆಗೆ 12 ಆವೃತ್ತಿ ಕಂಡಿದೆ. ಹಣಕಾಸಿನ ವ್ಯವಹಾರದಲ್ಲೂಐಪಿಎಲ್ ಎಲ್ಲಆಟಗಳಿಗಿಂತ ಮುಂದಿದೆ! 2019ರ ಐಪಿಎಲ್ ಬ್ರ್ಯಾಂಡ್ ಮೌಲ್ಯ 6.9 ಬಿಲಿಯನ್ ಡಾಲರ್ ಅಂದರೆ 47,500 ಕೋಟಿ ರೂ.! 2015ರ ಐಪಿಎಲ್ ಆವೃತ್ತಿ ಭಾರತದ ಜಿಡಿಪಿ 1150 ಕೋಟಿ ರೂಪಾಯಿ ಕಾಣಿಕೆ ನೀಡಿದೆಯಂತೆ! ಸದ್ಯ ಎಂಟು ತಂಡಗಳು ಐಪಿಎಲ್ ಆಡುತ್ತಿವೆ. ಮುಂಬೈ ಇಂಡಿಯನ್ಸ್ ನಾಲ್ಕು ಬಾರಿ ಟೈಟಲ್ ಗೆಲ್ಲುವ ಮೂಲಕ ಅಗ್ರಸ್ಥಾನಿಯಾಗಿದೆ. ಐಪಿಎಲ್ ಮಾದರಿಯಲ್ಲೇ ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿಅನೇಕ ಲೀಗ್‌ಗಳು ಹುಟ್ಟಿಕೊಂಡಿವೆ. ಭಾರತದಲ್ಲೇ ಕೆಪಿಎಲ್, ಟಿಪಿಎಲ್‌ನಂಥ ಅನೇಕ ರಾಜ್ಯಮಟ್ಟದ ಟ್ವೆಂಟ್20 ಲೀಗ್‌ಗಳು ಜನ್ಮ ತಳೆದಿವೆ. ಇಷ್ಟೆಲ್ಲದರೂ ಹೊರತಾಗಿಯೂ ಐಪಿಎಲ್ ಏನೂ ವಿವಾದ ಮುಕ್ತವಾಗಿಲ್ಲ. ಮ್ಯಾಚ್ ಫಿಕ್ಸಿಂಗ್‌ನಂಥ ಕಳಂಕಗಳು ಮೆತ್ತಿಕೊಂಡಿವೆ.
ಏಕ ದಿನ ಹುಟ್ಟಿದ್ದೇ ಭಾರತದಲ್ಲಿ!
5 ದಿನಗಳ ಕಾಲ ಆಡುವ ಟೆಸ್ಟ್ ಕ್ರಿಕೆಟ್ ಜನರಿಗೆ ಬೋರ್ ಎನಿಸುವ ಭಾವ ಎಲ್ಲೆಡೆ ಆವರಿಸುವ ಸಮಯದಲ್ಲೇ ಏಕ ದಿನ ಕ್ರಿಕೆಟ್ ಮಾದರಿ ಆರಂಭವಾಯಿತು. ಆ ಬಳಿಕ, ಹಗಲು-ರಾತ್ರಿ ಪಂದ್ಯ ಆಡುವುದನ್ನು ರೂಪಿಸಿಕೊಳ್ಳಲಾಯಿತು. ನಿಮಗೊಂದು ವಿಷ್ಯ ಗೊತ್ತಾ..? ವಿಶ್ವದ ಮೊದಲ ಏಕ ದಿನ ಪಂದ್ಯ ನಡೆದಿದ್ದು ಭಾರತದಲ್ಲೇ! ಹೌದು, 1951ರಲ್ಲಿಕೇರಳದ ತ್ರಿಪ್ಪುನಿಥುರಾ ಎಂಬ ಸಣ್ಣ ಪಟ್ಟಣದಲ್ಲಿಮಾಜಿ ಕ್ರಿಕೆಟಿಗ ಕೆ.ವಿ.ಕೇಳಪ್ಪನ್ ಅವರು ಮೊದಲ ಬಾರಿಗೆ ಒಂದು ದಿನದ ಕ್ರಿಕೆಟ್ ಆರಂಭಿಸಿದರು. ನಂತರ ಇದೇ ಮಾದರಿಯನ್ನು 1962 ಮೇ 2ರಂದು ಇಂಗ್ಲಿಷ್ ಕೌಂಟಿ ಕ್ರಿಕೆಟ್ ತಂಡಗಳು ಅಳವಡಿಸಿಕೊಂಡವು. ಬಳಿಕ 1971ರಲ್ಲಿಮೊದಲ ಅಂತಾರಾಷ್ಟ್ರೀಯ ಏಕ ದಿನ ಕ್ರಿಕೆಟ್ ಪಂದ್ಯವನ್ನು ಆಸ್ಪ್ರೇಲಿಯಾದ ಮೇಲ್ಬೋರ್ನ್‌ನಲ್ಲಿಆಡಿಸಲಾಯಿತು. ಆಸ್ಪ್ರೇಲಿಯಾ ಉದ್ದಿಮೆದಾರ ಕೆರಿ ಪಾರ್ಕರ್ ಒಂದು ದಿನದ ಮಾದರಿ ಕ್ರಿಕೆಟ್‌ಗೆ ವಾಣಿಜ್ಯ ಸ್ಪರ್ಶ ನೀಡಿದರು. ಅಲ್ಲದೇ ಹಗಲು-ರಾತ್ರಿ ಪಂದ್ಯಕ್ಕೂ ಕಾರಣರಾದರು. ಜತೆಗೆ, ವಿಶ್ವ ಏಕ ದಿನ ಕ್ರಿಕೆಟ್ ಪಂದ್ಯ ಕೂಡ ಆರಂಭವಾಯಿತು. 1979ರಲ್ಲಿಮೊದಲ ವಿಶ್ವ ಕಪ್ ಪಂದ್ಯಾವಳಿ ಆರಂಭವಾಯಿತು. ಮೊದಲ ಎರಡು ಪಂದ್ಯಾವಳಿಯಲ್ಲಿ ವೆಸ್ಟ್ ಇಂಡೀಸ್ ವಿಶ್ವ ಚಾಂಪಿಯನ್ ಆಯಿತು. 1983ರ ವರ್ಲ್ಡ್ ಕಪ್‌ನಲ್ಲಿಯಾರೂ ಊಹಿಸದ ರೀತಿಯಲ್ಲಿಭಾರತ ಚಾಂಪಿಯನ್ ಆಗಿ, ವೆಸ್ಟ್ ಇಂಡೀಸ್ ಹ್ಯಾಟ್ರಿಕ್ ಕನಸನ್ನು ನುಚ್ಚುನೂರು ಮಾಡಿತು.
ಓವರ್‌ಗಳು ಬದಲಾದವು
ಐದು ದಿನಗಳ ಟೆಸ್ಟ್‌ನಲ್ಲಿದಿನಕ್ಕೆ ಕನಿಷ್ಠ 90 ಓವರ್ ಇಲ್ಲವೇ ಆರು ಗಂಟೆಗಳ ಕಾಲ ಕ್ರಿಕೆಟ್ ಆಡಲಾಗುತ್ತದೆ. ಆದರೆ, ಏಕ ದಿನದಲ್ಲಿಗರಿಷ್ಠ 50 ಓವರ್‌ಗಳ ಕ್ರಿಕೆಟ್ ಆಡಬಹುದು. ಏಕ ದಿನ ಪಂದ್ಯ ಪರಿಚಯಗೊಂಡಾಗ ಅದು ಗರಿಷ್ಠ 60 ಓವರ್ ಆಡಬಹುದಿತ್ತು. ಆ ಮೇಲೆ ಅದನ್ನು 40 ಓವರ್‌ಗಳಿಗೆ ಇಳಿಸಲಾಯಿತು. ಈಗ ಅಂತಿಮವಾಗಿ 50 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಟ್ವೆಂಟಿ20 ಕ್ರಿಕೆಟ್‌ನಲ್ಲಿಗರಿಷ್ಠ 20 ಓವರ್ ಆಡಲಾಗುತ್ತದೆ.
ಪಿಂಕ್ ಬಾಲು ಡೇ ಆ್ಯಂಡ್ ನೈಟು
ಟೆಸ್ಟ್ ಕ್ರಿಕೆಟ್ ಅನ್ನು ಹಗಲು ಹೊತ್ತಲ್ಲಿಮಾತ್ರ ಆಡಲಾಗುತ್ತಿತ್ತು. ಆದರೆ, 2015ರಿಂದ ಇತ್ತೀಚೆಗೆ ಹಗಲು-ರಾತ್ರಿ(ಡೇ ಆ್ಯಂಡ್ ನೈಟ್) ಆಡಲಾಗುತ್ತಿದೆ. ಟೆಸ್ಟ್ ಕ್ರಿಕೆಟ್ ಜನಪ್ರಿಯಗೊಳಿಸುವ ಭಾಗವಾಗಿಯೇ ಈ ಮಾದರಿ ಅನುಸರಿಸಲಾಗುತ್ತಿದೆ. ಮೊದಲ ಹಗಲು-ರಾತ್ರಿ ಟೆಸ್ಟ್ ಕ್ರಿಕೆಟ್ 2015ರ ನವೆಂಬರ್ 27ರಿಂದ ಡಿಸೆಂಬರ್ 1ರ ವರೆಗೆ ನ್ಯೂಜಿಲೆಂಡ್ ಮತ್ತು ಆಸ್ಪ್ರೇಲಿಯಾ ನಡುವೆ ಓವಲ್‌ನ ಅಡಿಲೇಡ್ ಕ್ರೀಡಾಂಗಣದಲ್ಲಿನಡೆಯಿತು. ಆ ನಂತರ ಒಂದೊಂದು ರಾಷ್ಟ್ರಗಳು ಈ ಹೊಸ ಮಾದರಿ ಟೆಸ್ಟ್ ಕ್ರಿಕೆಟ್ ಆಡಲು ಮುಂದಾಗುತ್ತಿವೆ. ಸದ್ಯ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಹಗಲು ರಾತ್ರಿ ಟೆಸ್ಟ್ ಕ್ರಿಕೆಟ್ ಚಾಲ್ತಿಯಲ್ಲಿದೆ. ಇನ್ನು ಈ ಮಾದರಿಯ ಕ್ರಿಕೆಟ್‌ನಲ್ಲಿರೆಡ್ ಬಾಲ್ ಬದಲಿಗೆ ಪಿಂಕ್ ಬಳಸಲಾಗುತ್ತಿದೆ. ಒನ್ ಡೇ ಕ್ರಿಕೆಟ್‌ನಲ್ಲಿವೈಟ್ ಬಾಲ್ ಬಳಕೆಯಾಗುತ್ತದೆ.
ಈ ಲೇಖನವು ವಿಜಯ ಕರ್ನಾಟಕದ 23 ನವೆಂಬರ್ 2019ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಸೋಮವಾರ, ನವೆಂಬರ್ 18, 2019
Data Backup: ಡೇಟಾ ಬ್ಯಾಕ್ ಅಪ್ ಮಾಡಿಕೊಳ್ಳುವುದು ಹೇಗೆ?
ಮಲ್ಲಿಕಾರ್ಜುನ ತಿಪ್ಪಾರಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿಸಿಕ್ಕಾಪಟ್ಟೆ ಮೆಮೊರಿ ಇರುತ್ತದೆ. ಆದರೆ, ಬಜೆಟ್ ಫೋನ್‌ಗಳಲ್ಲಿಈ ಸೌಲಭ್ಯ ಅಷ್ಟಾಗಿ ದೊರೆಯುವುದಿಲ್ಲ. ಅಂಥ ಸಂದರ್ಭದಲ್ಲಿಬಳಕೆದಾರರು ಬ್ಯಾಕ್‌ಅಪ್ ಮತ್ತು ರಿಸ್ಟೋರ್ ಆ್ಯಪ್‌ಗಳನ್ನು ಬಳಸಿಕೊಂಡು ತಮ್ಮ ಅಮೂಲ್ಯವಾದ ಮಾಹಿತಿಯನ್ನು ಸೇವ್ ಮಾಡಿಟ್ಟುಕೊಳ್ಳಬಹುದು.
ಮೊನ್ನೆಯಷ್ಟೇ ಗೂಗಲ್ ಸಂಸ್ಥೆ, ಬಳಕೆದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ 'ಗೂಗಲ್ ಒನ್' ಎಂಬ ಹೊಸ ಬ್ಯಾಕ್‌ಅಪ್ ಮತ್ತು ರಿಸ್ಟೋರ್ ಆ್ಯಪ್ ಬಿಡುಗಡೆ ಮಾಡಿದೆ. ಇದನ್ನು ಬಳಸಿಕೊಂಡು ಬಳಕೆದಾರರು ತಮ್ಮ ಗೂಗಲ್ ಡ್ರೈವ್‌ನಲ್ಲಿ ಡೇಟಾವನ್ನು ಉಳಿಸಿಕೊಳ್ಳಬಹುದು. ಫೋಟೊಗಳಿಂದ ಹಿಡಿದು ಡಾಕ್ಯುಮೆಂಟ್‌ಗಳವರೆಗೂ ಇಲ್ಲಿಬ್ಯಾಕ್‌ಅಪ್ ಮಾಡಿಕೊಳ್ಳಬಹುದಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿಗೂಗಲ್ ಒನ್ ಬಳಸಿಕೊಂಡು ಡೇಟಾ ಹೇಗೆ ಸೇವ್ ಮಾಡಿಕೊಳ್ಳಬಹುದು ಮತ್ತು ಅತ್ಯುತ್ತಮ ಬ್ಯಾಕ್‌ಅಪ್ ಆ್ಯಪ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಗೂಗಲ್ ಒನ್‌ನಲ್ಲಿ ಬ್ಯಾಕ್‌ಅಪ್ ಹೇಗೆ ಮಾಡೋದು?ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಗೂಗಲ್ ಒನ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಆನಂತರ, ನಿಮ್ಮ ಗೂಗಲ್ ಐಡಿ ಮತ್ತು ಪಾಸ್ವರ್ಡ್ ಬಳಸಿಕೊಂಡು ಗೂಗಲ್ ಒನ್ ಆ್ಯಪ್ ಓಪನ್ ಮಾಡಿ. ಸ್ಟೋರೇಜ್ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಿ. ಆನಂತರ ಆ್ಯಪ್‌ನ ಹೋಮ್ ಸೆಕ್ಷನ್‌ನಲ್ಲಿರುವ ಬ್ಯಾಕ್‌ಅಪ್ ಆಪ್ಷನ್ ಮೇಲೆ ಟ್ಯಾಪ್ ಮಾಡಿ. ಆಗ ಅದು ನೀವು ಸೇವ್ ಮಾಡಿಟ್ಟುಕೊಳ್ಳಬೇಕೆಂದಿರುವ ಕಂಟೆಂಟ್ ಬಗ್ಗೆ ಕೇಳುತ್ತದೆ. ಬಳಿಕ ಅಲ್ಲಿರುವ ಆಯ್ಕೆಗಳನ್ನು ಸೆಲೆಕ್ಟ್ ಮಾಡಿಕೊಂಡು ನೆಕ್ಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಆ ಬಳಿಕ ಮತ್ತೆ ಬ್ಯಾಕ್‌ಅಪ್ ಮೇಲೆ ಟ್ಯಾಪ್ ಮಾಡಿ, ಆಗ ಬ್ಯಾಕ್‌ಅಪ್ ಪ್ರಕ್ರಿಯೆ ಆರಂಭವಾಗುತ್ತದೆ ಮತ್ತು ಪ್ರಕ್ರಿಯೆ ಮುಕ್ತಾಯದವರೆಗೂ ಕಾಯಿರಿ.
ರಿಸ್ಟೋರ್ ಮಾಡುವ ಹಂತಗಳು:ಆ್ಯಪ್ ಹೋಮ್ ಸೆಕ್ಷನ್‌ನಲ್ಲಿರುವ ರಿಸ್ಟೋರ್ ಆಪ್ಷನ್ ಮೇಲೆ ಟ್ಯಾಪ್ ಮಾಡಿ. ಆಗ ನಿಮಗೆ ಅಲ್ಲಿಲಭ್ಯ ಇರುವ ಎಲ್ಲಬ್ಯಾಕ್‌ಅಪ್ ಡೇಟಾ ಡಿಸ್‌ಪ್ಲೇ ಆಗುತ್ತದೆ. ನಿಮಗೆ ಯಾವ ಡೇಟಾ ರಿಸ್ಟೋರ್ ಆಗಬೇಕು ಆ ಡೇಟಾ ಮುಂದಿರುವ ರಿಸ್ಟೋರ್ ಬಟನ್ ಮೇಲೆ ಕ್ಲಿಕ್ ಮಾಡಿ. ಆಗ ರಿಸ್ಟೋರ್ ಪ್ರಕ್ರಿಯೆ ಆರಂಭವಾಗುತ್ತದೆ.
ನಿಮಗೆ ಈ ವಿಷಯ ನೆನಪಿರಲಿ- ಮೂಲ ಸ್ಟೋರೇಜ್ ಸೌಲಭ್ಯ 15 ಜಿಬಿ ಮಾತ್ರ ಇರುತ್ತದೆ. ಅಂದರೆ, ನೀವು ಯಾವುದೇ ಡೇಟಾವನ್ನು 15 ಜಿಬಿವರೆಗೆ ಸೇವ್ ಮಾಡಿಟ್ಟುಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಜಿಬಿ ಅಗತ್ಯವಾದರೆ ದುಡ್ಡು ಕೊಟ್ಟು ಖರೀದಿಸಬೇಕಾಗುತ್ತದೆ.
ಅತ್ಯುತ್ತಮ ಬ್ಯಾಕ್‌ಅಪ್ ಆ್ಯಪ್‌ಗಳು
ಜಿ ಕ್ಲೌಡ್ ಬ್ಯಾಕ್‌ಅಪ್: ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಬ್ಯಾಕ್ ಆ್ಯಪ್ ಜನಪ್ರಿಯವಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಒಂದು ಜಿಬಿವರೆಗೆ ಬ್ಯಾಕ್‌ಅಪ್‌ಗೆ ಅವಕಾಶ ಕಲ್ಪಿಸುವ ಈ ಆ್ಯಪ್‌ಗೆ ನಿಮ್ಮ ಸ್ನೇಹಿತರನ್ನು ಆಹ್ವಾನಿಸಿದರೆ ಈ ಸ್ಥಳಾವಕಾಶ ಹೆಚ್ಚಾಗುತ್ತಾ ಹೋಗುತ್ತದೆ.
ಸೂಪರ್ ಬ್ಯಾಕ್‌ಅಪ್: ನಿಮ್ಮ ಫೋನ್‌ನ ಡೇಟಾ, ಆ್ಯಫ್ಸ್, ಕಾಂಟಾಕ್ಟ್ ಕಾಲ್ ಲಾಗ್ ಇತ್ಯಾದಿ ಮಾಹಿತಿಯನ್ನು ಸೇವ್ ಮಾಡಿಟ್ಟುಕೊಳ್ಳಲು ಈ ಆ್ಯಪ್ ನೆರವು ನೀಡುತ್ತದೆ. ನಿಮ್ಮ ಫೋನ್‌ನಲ್ಲಿಇನ್ಸ್‌ಟಾಲ್ ಮಾಡಿಕೊಳ್ಳಲಾಗುವ ಹೊಸ ಆ್ಯಪ್‌ಗಳ ಡೇಟಾವನ್ನು ಸ್ವಯಂ ಆಗಿ ದಾಖಲಿಸಿಕೊಳ್ಳುತ್ತದೆ.
ಹೆಲಿಯಂ: ಎಸ್‌ಡಿ ಕಾರ್ಡ್, ಕಂಪ್ಯೂಟರ್ ಮತ್ತು ಕ್ಲೌಡ್ ಬ್ಯಾಕ್‌ಅಪ್ ಡೇಟಾ ಸಂಗ್ರಹಿಸಲು ಸಹಾಯ ಮಾಡುವ ಈ ಆ್ಯಪ್‌ನಿಂದ ಮಾಹಿತಿಯನ್ನು ಎಲ್ಲಿಬೇಕಾದರೂ ಅತ್ಯಂತ ಸುಲಭವಾಗಿ ಅಕ್ಸೆಸ್ ಮಾಡಬಹುದು.
ಗೋ ಬ್ಯಾಕ್‌ಅಪ್ ಮತ್ತು ರಿಸ್ಟೋರ್ ಪ್ರೊ: ಇದು ಕೂಡ ಅತ್ಯುತ್ತಮ ಆ್ಯಪ್ ಆಗಿದ್ದು ಉಚಿತ ಆವೃತ್ತಿಯಲ್ಲಿನೀವು ನಿಮ್ಮ ಎಸ್‌ಎಂಎಸ್ ಮತ್ತು ಎಂಎಂಎಸ್ ಫೈಲ್‌ಗಳನ್ನು ಬ್ಯಾಕ್‌ಅಪ್ ಮಾಡಿಟ್ಟುಕೊಳ್ಳಬಹುದು. ಇನ್ನೂಹೆಚ್ಚಿನ ಸೌಲಭ್ಯಕ್ಕಾಗಿ ನೀವು ಇದರ ಖರೀದಿ ಆವೃತ್ತಿಯನ್ನು ಬಳಸಿಕೊಳ್ಳಬಹುದು.
ಈಜಿ ಆ್ಯಪ್ ಟೂಲ್‌ಬಾಕ್ಸ್: ಗೂಗಲ್ ಪ್ಲೇಸ್ಟೋರ್‌ನಲ್ಲಿಈ ಆ್ಯಪ್ ಕೂಡ ನಿಮಗೆ ಉಚಿತವಾಗಿ ದೊರೆಯುತ್ತದೆ. ಡೇಟಾ ಬ್ಯಾಕ್‌ಅಪ್ ಮಾಡಲು ಈ ಆ್ಯಪ್ ಚಿಕ್ಕ ಚಿಕ್ಕ ಟೂಲ್‌ಗಳನ್ನು ಒದಗಿಸುತ್ತದೆ. ಕ್ಲೌಡ್ ಬ್ಯಾಕ್‌ಅಪ್, ಎಸ್‌ಡಿ ಕಾರ್ಡ್ ಬ್ಯಾಕ್‌ಅಪ್‌ಗೂ ಇದು ಅವಕಾಶ ಕಲ್ಪಿಸಿಕೊಡುತ್ತದೆ.
ಸಿಎಂ ಬ್ಯಾಕ್‌ಅಪ್: ಇದು ತುಂಬ ಜನಪ್ರಿಯ ಆ್ಯಪ್. ಗೂಗಲ್ ಪ್ಲೇ ಸ್ಟೋರ್‌ನಲ್ಲಿಇದಕ್ಕೆ 4.7 ರೇಟಿಂಗ್ ಇದೆ ಅಂದರೆ ಅದರ ಜನಪ್ರಿಯತೆಯನ್ನು ತಿಳಿಯಬಹುದು. ಫೋನ್‌ನಲ್ಲಿರುವ ಕಾಂಟಾಕ್ಟ್ ಸಂದೇಶಗಳು, ಕಾಲ್ ಲಾಗ್, ಫೋಟೊಗಳು, ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ಸುಲಭವಾಗಿ ಬ್ಯಾಕ್‌ಅಪ್ ಮಾಡಿಕೊಳ್ಳಬಹುದು. ಅಂದಾಜು 50 ದಶಲಕ್ಷ ಬಳಕೆದಾರರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ಬುಧವಾರ, ನವೆಂಬರ್ 13, 2019
Keep Children Safe: ಅಪಾಯಕಾರಿ ವಸ್ತುಗಳು ಮಕ್ಕಳ ಕೈಗೆ ಸಿಗದಂತಿರಲಿ
- ಮಲ್ಲಿಕಾರ್ಜುನ ತಿಪ್ಪಾರ
ಮನೆ ತುಂಬ ಮಕ್ಕಳು ಆಟ ಆಡಿಕೊಂಡು, ಓಡಾಡಿಕೊಂಡಿರೋದನ್ನು ನೋಡೋದೇ ಖುಷಿ ಮತ್ತು ಚಂದ. ಆದರೆ, ಸ್ವಲ್ಪವೇ ಎಚ್ಚರ ತಪ್ಪಿದರೂ ಪೋಷಕರ ಈ ಖುಷಿ ಕ್ಷಣದಲ್ಲೇ ಮಾಯವಾಗಿ ಕಣ್ಣೀರು ಸುರಿಸಬೇಕಾಗುತ್ತದೆ.
ಇದಕ್ಕೆ ತಾಜಾ ಉದಾಹರಣೆ ಎಂದರೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದುರ್ಗದ ಹಳ್ಳಿಯಲ್ಲಿ ಅಗಸ್ತ್ಯ ಎಂಬ 3 ವರ್ಷದ ಮಗುವೊಂದು ಜ್ಯೂಸ್ ಎಂದು ಭಾವಿಸಿ ಕ್ರಿಮಿನಾಶಕ ಸೇವಿಸಿ ಮೃತಪಟ್ಟ ಪ್ರಕರಣ. ಈ ರೀತಿಯ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ನಾಣ್ಯ ನುಂಗಿದ ಮಗು, ಮೇಲಿಂದ ಮಗು ಬಿದ್ದ ಸಾವು, ಆಡಲು
ಹೋಗಿ ಸಂಪ್‌ಗೆ ಬಿದ್ದ ಮಗು ಇತ್ಯಾದಿ ಸುದ್ದಿಗಳನ್ನು ನೀವು ಓದಿರುತ್ತೀರಿ. ಇವೆಲ್ಲವೂ ಪೋಷಕರು ಎಚ್ಚರ ತಪ್ಪಿದಾಗ, ಬೇಜವಾಬ್ದಾರಿಯಿಂದ ಇದ್ದಾಗ ನಡೆದ ದುರ್ಘಟನೆಗಳೇ ಆಗಿರುತ್ತವೆ. ಹಾಗಾಗಿ, ಮಕ್ಕಳ ಪಾಲನೆ, ಪೋಷಣೆಯಲ್ಲಿ ಅದರಲ್ಲೂ ಐದು ವರ್ಷದೊಳಗಿನ ಮಕ್ಕಳ ವಿಷಯದಲ್ಲಿ ಹೆಚ್ಚು ಜಾಗರೂಕವಾಗಿರಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.
ಮಕ್ಕಳಿಗೆ ಹಾನಿಯುಂಟು ಮಾಡುವ ಯಾವುದೇ ವಸ್ತುಗಳು ಅವರ ಕೈಸಿಗದಂತೆ ನೋಡಿಕೊಂಡರೆ ನೀವು ಅರ್ಧ ಗೆದ್ದಂತೆ. ಹಾಗಾದರೆ, ಮಕ್ಕಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ? ಇದಕ್ಕೇನೂ ಮಹಾ ಜ್ಞಾನ ಬೇಕಾಗಿಲ್ಲ; ಒಂದಿಷ್ಟು ಸಾಮಾನ್ಯ ಜ್ಞಾನ ಇದ್ದರೆ ಸಾಕು. ಮಗುವಿಗೆ ಅಪಾಯ ತಂದೊಡ್ಡಬಹುದಾದ ವಸ್ತುಗಳನ್ನು ಗುರುತಿಸಿದರೆ ಸಾಕು. ನೀರು ಮತ್ತು ಬೆಂಕಿ ಹತ್ತಿರ ಮಕ್ಕಳು ಸುಳಿಯದಂತೆ ನೋಡಿಕೊಳ್ಳಬೇಕು. ಯಾವಾಗಲೂ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ
ಇಟ್ಟರೆ ಸಂಭಾವ್ಯ ಯಾವುದೇ ಅಪಾಯವನ್ನು ತಪ್ಪಿಸಬಹುದು.
ಅಪಾಯಕಾರಿ ವಸ್ತುಗಳು ಮಕ್ಕಳ ಕೈಗೆ ಸಿಗದಿರಲಿ
ನಾಣ್ಯ, ಬಟನ್, ಕ್ವಾಯಿನ್ ಬ್ಯಾಟರಿ: ಮಕ್ಕಳ ಗಂಟಲಲ್ಲಿ ನಾಣ್ಯ ಸಿಕ್ಕಿ ಹಾಕಿಕೊಂಡು ಅಸು ನೀಗಿದ ಉದಾಹರಣೆಗಳಿವೆ. ಹಾಗಾಗಿ ನಾಣ್ಯಗಳಿಂದ ದೂರ ಇರಲಿ. ಬಟನ್ (ಗುಂಡಿ), ಕ್ವಾಯಿನ್ ಗಾತ್ರದ ಬ್ಯಾಟರಿ ಸಿಗದಂತಿರಲಿ. ಸಿಂಗಿಂಗ್ ಗ್ರೀಟಿಂಗ್ ಕಾರ್ಡ್ಸ್, ರಿಮೋಟ್ ಕಂಟ್ರೋಲ್, ವಾಚ್‌ಗಳು, ಹಿಯರಿಂಗ್ ಸಾಧನಗಳು, ಡಿಜಿಟಲ್ ಸ್ಕೇಲ್ಸ್, ಥರ್ಮೋ ಮೀಟರ್ಸ್, ಕ್ಯಾಲ್ಕುಲೇಟರ್, ಆಟಿಕೆಗಳು, ಲೈಟ್ ಅಪ್ ಬಟನ್ಸ್‌ಗಳಲ್ಲಿ ಕ್ವಾಯಿನ್ ಗಾತ್ರದ ಬ್ಯಾಟರಿಗಳು ಇರುತ್ತವೆ.
ಆಟಿಕೆಗಳು: ಮ್ಯಾಗ್ನೆಟ್ ಮತ್ತು ಕ್ವಾಯಿನ್ ಬ್ಯಾಟರಿಗಳಿಲ್ಲದ ಆಟಿಕೆಗಳೂ ಮಕ್ಕಳ ಪ್ರಾಣಕ್ಕೆ ಎರವಾಗಬಹುದು. ಗಟ್ಟಿಮುಟ್ಟಾದ ಆಟಿಕೆಗಳಿರಲಿ. ಆಟಿಕೆಯ ಭಾಗಗಳು ಸುಲಭವಾಗಿ
ಕಿತ್ತು ಬರುವಂತಿರಬಾರದು. ಆಟಿಕೆಗಳಲ್ಲಿರುವ ಮ್ಯಾಗ್ನೆಟ್‌ಗಳನ್ನು ತೆಗೆದಿಡಿ. ಹೈ ಪವರ್ ಮ್ಯಾಗ್ನೆಟ್‌ಗಳು ಹೆಚ್ಚು ಅಪಾಯಕಾರಿ.
ಬಾತ್‌ಟಬ್ಸ್, ಟಾಯ್ಲೆಟ್ಸ್, ಬಕೆಟ್: ಮಕ್ಕಳನ್ನು ಒಂಟಿಯಾಗಿ ಬಾತ್‌ಟಬ್‌ಗೆ ಬಿಡಬೇಡಿ. ನಿಮ್ಮ ಬಾತ್‌ರೂಮ್ ಬಾಗಿಲುಗಳು ಯಾವಾಗಲೂ ಮುಚ್ಚಿರಲಿ. ಟಾಯ್ಲೆಟ್ ಸೀಟ್ ಕವರ್ ಆಗಿರಲಿ. ಆಯ ತಪ್ಪಿ ಕಮೋಡ್‌ನೊಳಗೆ ಮಕ್ಕಳ ಬಿದ್ದ ಉದಾಹರಣೆಗಳಿವೆ. ನೀರು ತುಂಬಿದ ದೊಡ್ಡ ಗಾತ್ರ ಬಕೆಟ್‌ಗಳತ್ತ ಹೋಗದಂತೆ ನೋಡಿಕೊಳ್ಳಿ.
ಔಷಧಗಳು, ಟ್ಯಾಬ್ಲೆಟ್ಸ್: ಮಕ್ಕಳ ಕೈಗೆ ಟ್ಯಾಬ್ಲೆಟ್, ಟಾನಿಕ್ ಬಾಟಲ್‌ಗಳು ಮತ್ತಿತರ ಔಷಧಗಳು ಸಿಗದಂತಿರಲಿ. ಮಕ್ಕಳ ಮುಂದೆ ನೀವು ಔಷಧವಾಗಲಿ, ಟ್ಯಾಬ್ಲೆಟ್ ಆಗಲಿ ಸೇವಿಸಲು ಹೋಗಬೇಡಿ. ಮಗು ನಿಮ್ಮನ್ನು ಅನುಕರಿಸುವ ಸಾಧ್ಯತೆ ಹೆಚ್ಚು.
ಬಾತ್‌ರೂಂ ಕ್ಲೀನರ್‌ಗಳು: ಸಾಬೂನುಗಳು, ಬ್ಲೀಚಿಂಗ್, ಬಾತ್‌ರೂಂ ಕ್ಲೀನ್‌ಗೆ ಬಳಸುವ ಇತರ ಯಾವುದೇ ರಾಸಾಯನಿಕ ಪದಾರ್ಥಗಳು ಮಕ್ಕಳಿಗೆ ನಿಲುಕದಂತೆ ನೋಡಿಕೊಳ್ಳಿ.
ವಸ್ತುಗಳು ಬೀಳದಂತಿರಲಿ: ಮಗು ಎಂದ ಮೇಲೆ ಅದು ಮನೆ ತುಂಬ ಓಡಾಡಿಕೊಂಡಿರುತ್ತದೆ. ಹಾಗಾಗಿ, ಯಾವುದೇ ವಸ್ತುಗಳು ಸುಲಭವಾಗಿ ನೆಲಕ್ಕೆ ಬೀಳದಂತೆ ಇರಲಿ. ಇಲ್ಲದಿದ್ದರೆ ಆಟವಾಡುವ ಹುಮ್ಮಸ್ಸಿನಲ್ಲಿ ಮನೆಯ ಯಾವುದೇ ವಸ್ತು ಹಿಡಿದು ಜಗ್ಗಿದರೆ ಅದು ಅದರ ಮೇಲೆ ಬೀಳುವ ಸಾಧ್ಯತೆಗಳಿರುತ್ತವೆ. ಅಂದರೆ ಫರ್ನಿಚರ್, ಟಿವಿಗಳು, ಡ್ರೆಸರ್ಸ್, ಬುಕ್‌ಗಳು ಇತ್ಯಾದಿ.
ವಾಲ್ ಪ್ಲಗ್, ವೈರ್, ಚಾರ್ಜರ್: ಈ ವಿಷಯದಲ್ಲಿ ಪೋಷಕರು ಬಹಳ ಎಚ್ಚರವಾಗಿರಬೇಕು. ಮಕ್ಕಳಿಗೆ ವಾಲ್‌ಪ್ಲಗ್‌ಗಳು, ಎಲೆಕ್ಟ್ರಿಕಲ್ ವೈರ್, ಮೊಬೈಲ್ ಚಾರ್ಜರ್‌ಗಳು ಎಟುಕದಂತಿರಲಿ. ಬಾತ್‌ಟಬ್, ಸಿಂಕ್‌ಗಳ ಹತ್ತಿರ ಎಲೆಕ್ಟ್ರಿಕಲ್ ಸಲಕರಣೆಗಳು ಇರದಿರಲಿ. ಮಕ್ಕಳಿಗೆ ಯಾವುದ ಸ್ವಿಚ್‌ಗಳನ್ನು ಆನ್ ಅಥವಾ ಆಫ್ ಮಾಡಲು ಹೇಳಬೇಡಿ.
ಚಾಕು, ಹರಿತ ವಸ್ತುಗಳು: ಮಕ್ಕಳಿಗೆ ಅಡಿಗೆ ಮನೆ ಯಾವಾಗಲೂ ಕುತೂಹಲದ ಕಣಜ. ಅಲ್ಲಿರುವ ಚಾಕು ಮತ್ತು ಇತರೆ ಹರಿತವಾದ ವಸ್ತುಗಳು ಅವರ ಕೈಗೆ ಸಿಗದಿರಲಿ. ಚೂಪಾದ ಪೆನ್ಸಿಲ್‌ಗಳು ಒಮ್ಮೊಮ್ಮೆ ಮಕ್ಕಳಿಗೆ ಗಾಯವುಂಟು ಮಾಡಬಹುದು. ಪೆನ್ಸಿಲ್ ಹೇಗೆ ಬಳಸಬೇಕು ಎಂಬುದನ್ನು ಹೇಳಿಕೊಡಬೇಕು.
ಗ್ಯಾಸ್ ಸಿಲಿಂಡರ್, ಸ್ಟೋವ್: ಅಡುಗೆ ಮನೆಯಲ್ಲಿರುವ ಸ್ಟೋವ್ ಹತ್ತಿರ ಮಕ್ಕಳು ಸುಳಿಯದಂತೆ ನೋಡಿಕೊಳ್ಳಿ. ಹಾಗೆಯೇ ಅಡುಗೆ ಸಿಲಿಂಡರ್‌ಗಳು ಕೂಡ ಮಕ್ಕಳಿಗೆ ಗೊತ್ತಾಗದಂತೆ ಇರಲಿ.
ಕ್ರಿಮಿನಾಶಕ, ಪೆಟ್ರೋಲ್: ಈ ವಿಷಯದಲ್ಲಿ ಹೆಚ್ಚು ಜಾಗೂರಕರಾಗಿರಬೇಕು. ಕ್ರಿಮಿನಾಶಕಗಳು, ಬೆಳೆಗೆ ಸಿಂಪಡಿಸುವ ಇತರೆ ಯಾವುದೇ ರಾಸಾಯನಿಕಗಳು ದೂರವಿಡಿ. ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹ ಬಾಟಲ್‌ಗಳು ಮಕ್ಕಳ ಕಣ್ಣಿಗೆ ಬೀಳದಂತಿರಲಿ.
ಎತ್ತರ ಏರದಿರಲಿ: ಮಕ್ಕಳು ಒಂಟಿಯಾಗಿ ಸ್ಟೆಪ್‌ಗಳು, ಮಾಳಿಗೆ ಮೇಲೆ ಹೋಗದಂತೆ ನೋಡಿಕೊಳ್ಳಿ. ಆಡುತ್ತಾ ಮೇಲಿಂದ ಬಿದ್ದರೆ ಅಪಾಯ ಗ್ಯಾರಂಟಿ.
ಈ ವರದಿಯು ವಿಜಯ ಕರ್ನಾಟಕದ 2019ರ ನವೆಂಬರ್ 13ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಸೋಮವಾರ, ನವೆಂಬರ್ 11, 2019
Dark Mode: ಜಿ ಮೇಲ್ ಡಾರ್ಕ್ ಮೋಡ್‌ಗೆ ಬದಲಿಸುವುದು ಹೇಗೆ?
- ಮಲ್ಲಿಕಾರ್ಜುನ ತಿಪ್ಪಾರ
ದಿನಗಳೆದಂತೆ ಈ 'ಡಾರ್ಕ್ ಮೋಡ್' ಕೂಡ 'ಡಾರ್ಕ್ ಹಾರ್ಸ್' ರೀತಿಯಲ್ಲೇ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮೋಡಿ ಮಾಡುತ್ತಿದೆ. ಬಹುತೇಕ ಆ್ಯಪ್‌ಗಳು ಇದೀಗ 'ಡಾರ್ಕ್ ಮೋಡ್'ಗೆ ಫೀಚರ್ ಅಳವಡಿಸಿಕೊಳ್ಳುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂದರೆ- ವಾಟ್ಸ್‌ಆ್ಯಪ್. ಈ ಆ್ಯಪ್ ಕೂಡ ಡಾರ್ಕ್ ಮೋಡ್ ಫೀಚರ್ ಅನ್ನು ಪರಿಚಯಿಸುತ್ತಿದೆ. ಅಂದರೆ, ಬಳಕೆದಾರರು ಡಾರ್ಕ್ ಮೋಡ್‌ಗೆ ಮರುಳಾಗಿದ್ದು, ಅಂಥ ಸೇವೆಯನ್ನು ಎಲ್ಲಆ್ಯಪ್‌ಗಳಿಂದಲೂ ನಿರೀಕ್ಷಿಸುತ್ತಿದ್ದಾರೆ ಎಂದಾಯಿತು.
ಈಗಾಗಲೇ ಗೂಗಲ್ ಕೂಡ ಗೂಗಲ್ ಮ್ಯಾಫ್ಸ್, ಜಿಮೇಲ್ ಸೇರಿದಂತೆ ತನ್ನ ಅನೇಕ ಉತ್ಪನ್ನಗಳಿಗೆ ಡಾರ್ಕ್ ಮೋಡ್ ಪರಿಚಯಿಸಿದ್ದು, ಬಳಕೆದಾರರ ಮೆಚ್ಚುಗೆ ಗಳಿಸಿದೆ. ಆದರೆ, ಬಹಳಷ್ಟು ಜನರಿಗೆ ಈ ಡಾರ್ಕ್ ಮೋಡ್ ಅನ್ನು ಹೇಗೆ ಸಕ್ರಿಯಗೊಳಿಸಬೇಕೆಂಬುದು ಗೊತ್ತಿರುವುದಿಲ್ಲ. ಈ ಹಿನ್ನೆಲೆಯಲ್ಲಿಜಿಮೇಲ್ ಅನ್ನು ಡಾರ್ಕ್ ಮೋಡ್‌ಗೆ ಬದಲಿಸುವುದು ಹೇಗೆಂದು ತಿಳಿದುಕೊಳ್ಳೋಣ. ಆಂಡ್ರಾಯ್ಡ್, ಮೊಬೈಲ್ ಮತ್ತು ಡೆಸ್ಕ್‌ಟಾಪ್‌ಗಳೆರಡಲ್ಲೂಜಿಮೇಲ್‌ಗೆ ಡಾರ್ಕ್ ಮೋಡ್ ಲಭ್ಯವಿದೆ.
ಡೆಸ್ಕ್‌ಟಾಪ್‌ನಲ್ಲಿಡಾರ್ಕ್ ಮೋಡ್
ಸ್ಮಾರ್ಟ್‌ಫೋನ್, ಟ್ಯಾಬ್‌ಗಿಂತ ಡೆಸ್ಕ್‌ಟಾಪ್(ಕಂಪ್ಯೂಟರ್)ನಲ್ಲೇ ನೀವು ಹೆಚ್ಚಾಗಿ ಜಿಮೇಲ್ ಬಳಸುತ್ತಿದ್ದಿರಿ ಮತ್ತು ಜಿಮೇಲ್ ಅನ್ನು ಡಾರ್ಕ್ ಮೋಡ್‌ಗೆ ಹೇಗೆ ಬದಲಿಸುವುದು ಗೊತ್ತಿಲ್ಲಎಂದರೆ ಹೀಗೆ ಮಾಡಿ: ಜಿಮೇಲ್.ಕಾಮ್‌ಗೆ ಹೋಗಿ. ನಿಮ್ಮ ಖಾತೆ ತೆರೆಯಿರಿ. ಜಿಮೇಲ್ ಪೇಜ್‌ನ ಬಲಗಡೆಯ ಮೇಲಗಡೆ ಪ್ರೊಫೈಲ್ ಪಿಕ್ಚರ್ ಕೆಳಗಿರುವ 'ಸೆಟ್ಟಿಂಗ್ಸ್' ಮೇಲೆ ಕ್ಲಿಕ್ ಮಾಡಿ. ಬಳಿಕ 'ಥೀಮ್ಸ್' ಸೆಲೆಕ್ಟ್ ಮಾಡಿಕೊಳ್ಳಿ. ಬಳಿಕ ನಿಮಗೆ ಥೀಮ್‌ಗಳಿರುವ ಥಂಬ್‌ನೇಲ್‌ಗಳು ಕಾಣ ಸಿಗುತ್ತವೆ ಅಲ್ಲವೇ? ಅವುಗಳನ್ನು ಸ್ಕ್ರಾಲ್ ಮಾಡಿ ಆಗ ಬ್ಲ್ಯಾಕ್ ಥಂಬ್‌ನೇಲ್(ಚಿತ್ರ) ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಜಿಮೇಲ್ ಡಾರ್ಕ್ ಮೋಡ್‌ಗೆ ಹೊರಳುತ್ತದೆ.
ಆಂಡ್ರಾಯ್ಡ್‌ನಲ್ಲಿ ಹೇಗೆ ಮಾಡೋದು?
ನಿಮ್ಮ ಫೋನ್‌ನಲ್ಲಿನೂತನ ಜಿಮೇಲ್ ಆ್ಯಪ್ ಇನ್ಸ್‌ಟಾಲ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಅಲ್ಲಿ, ಜಿಮೇಲ್ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ. ಒಂದೊಮ್ಮೆ ಅಪ್‌ಡೇಟ್ ಬಟನ್ ಅಲ್ಲಿಕಾಣದಿದ್ದರೆ ಹೊಚ್ಚ ಹೊಸ ಆ್ಯಪ್ ಇದೆ ಎಂದರ್ಥ.
ಫೈನ್, ಈಗ ಡಾರ್ಕ್ ಮೋಡ್‌ಗೆ ಮಾರ್ಪಾಡಿಸುವುದು ನೋಡೋಣ; ಒಂದು ವೇಳೆ ನೀವು ಆಂಡ್ರಾಯ್ಡ್ 10 ಸಿಸ್ಟಮ್ ಇದ್ದರೆ ಅದರಲ್ಲಿವೈಡ್ ಡಾರ್ಕ್ ಥೀಮ್ ಸಕ್ರಿಯವಾಗಿರುತ್ತದೆ ಮತ್ತು ಆ್ಯಪ್ ಸ್ವಯಂ ಆಗಿ ಹೊಸ ಲುಕ್‌ಗೆ ಮಾರ್ಪಾಡುಗೊಳ್ಳುತ್ತದೆ. ಇಲ್ಲದಿದ್ದರೆ ಇದನ್ನು ನೀವು ಮ್ಯಾನ್ಯುಯಲ್ ಆಗಿ ಮಾಡಿಕೊಳ್ಳಬೇಕು.
ಜಿಮೇಲ್‌ನ ಆ್ಯಪ್ ಎಡಗಡೆಯ ಮೇಲ್ಭಾಗದಲ್ಲಿರುವ ಮೆನ್ಯು ಐಕಾನ್ ಮೇಲೆ ಟ್ಯಾಪ್ ಮಾಡಿದ ಬಳಿಕ ಸ್ಕ್ರಾಲ್ ಡೌನ್ ಮಾಡಿ ಆಗ ಸೆಟ್ಟಿಂಗ್ಸ್ ಕಾಣುತ್ತದೆ; ಅದರ ಮೇಲೆ ಟ್ಯಾಪ್ ಮಾಡಿ. ಬಳಿಕ ಜನರಲ್ ಸೆಟ್ಟಿಂಗ್ಸ್ ಮೇಲೆ ಟ್ಯಾಪ್ ಮಾಡಿ; ಇಲ್ಲಿನೀವು ಜಿಮೇಲ್ ಥೀಮ್ ಅನ್ನು ಲೈಟ್, ಡಾರ್ಕ್ ಅಥವಾ ಸಿಸ್ಟಮ್ ಡಿಫಾಲ್ಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಗಮನಿಸಬೇಕಾದ ಸಂಗತಿ ಏನೆಂದರೆ, ಈ ಡಾರ್ಕ್ ಮೋಡ್ ಆಂಡ್ರಾಯ್ಡ್ ಪೈ ಅಥವಾ ಅದಕ್ಕೂ ಮೊದಲಿನ ಓಎಸ್‌ಗಳಲ್ಲಿಲಭ್ಯವಿಲ್ಲ. ಹಾಗಿದ್ದೂ, ಡೆಸ್ಕ್‌ಟಾಪ್ ಮೋಡ್‌ನಲ್ಲಿಡಾರ್ಕ್ ಮೋಡ್ ಬಳಸಬಹುದು. ಈ ಆಯ್ಕೆ ನಿಮಗೆ ಆಂಡ್ರಾಯ್ಡ್ ಕ್ರೋಮ್ ಹಾಗೂ ಫೈರ್‌ಫಾಕ್ಸ್ ಪ್ರಿವಿವ್ಯೂನಲ್ಲಿದೊರೆಯುತ್ತದೆ.ಘ್ಕಿ
ಐಒಎಸ್‌ನಲ್ಲಿ ಆಕ್ಟಿವೇಟ್ ಮಾಡೋದು?
ಐಒಎಸ್‌ಗೆ ಇನ್ನೂ ಜಿಮೇಲ್ ಡಾರ್ಕ್ ಮೋಡ್ ಪರಿಚಯಿಸಿಲ್ಲ. ಆ್ಯಪಲ್ ಈ ಫೀಚರ್ ಅನ್ನು ಸರ್ವರ್ ಸೈಡ್‌ನಲ್ಲಿಆಕ್ಟಿವೇಟ್ ಮಾಡದ ಹೊರತು ಬಳಕೆದಾರರಿಗೆ ದೊರೆಯುವುದಿಲ್ಲ. ಒಂದೊಮ್ಮೆ ಅದು ಐಒಎಸ್‌ಗೂ ಪರಿಚಯಗೊಂಡರೆ ಸ್ವಯಂ ಆಗಿ ನಿಮ್ಮ ಐಫೋನ್ ಸಿಸ್ಟಮ್ ವೈಡ್ ಡಾರ್ಕ್ ಮೋಡ್‌ಗೆ ಬದಲಾಗುತ್ತದೆ. ಇಲ್ಲದಿದ್ದರೆ, ಜಿಮೇಲ್ ಮೆನ್ಯುಗೆ ಹೋಗಿ, ಅಲ್ಲಿಂದ ಸೆಟ್ಟಿಂಗ್ಸ್ ಹೋಗಿ ಮತ್ತು ಥೀಮ್ ಮೇಲೆ ಟ್ಯಾಪ್ ಮಾಡಿ ಡಾರ್ಕ್ ಸೆಲೆಕ್ಟ್ ಮಾಡಿಕೊಂಡರೆ ಸಾಕು.
ಯಾಕೆ ಡಾರ್ಕ್ ಮೋಡ್?
ಗೂಗಲ್ ಸಂಸ್ಥೆಯೇ ಸಂಶೋಧನೆ ನಡೆಸಿದ್ದು, ವೈಟ್ ಪಿಕ್ಸೆಲ್‌ಗಳಿಗಿಂತಲೂ ಡಾರ್ಕರ್ ಪಿಕ್ಸೆಲ್‌ಗಳು ಕಡಿಮೆ ಪವರ್ ಬಳಸಿಕೊಳ್ಳುತ್ತವೆ. ಅಂದರೆ, ಡಾರ್ಕ್ ಮೋಡ್‌ನಲ್ಲಿಜಿಮೇಲ್ ಬಳಸಿದರೆ ನಿಮ್ಮ ಫೋನ್ ಬ್ಯಾಟರಿ ಕೂಡ ದೀರ್ಘ ಕಾಲದವರೆಗೂ ಇರುತ್ತದೆ. ಜತೆಗೆ, ನಿಮ್ಮ ಕಣ್ಣಿಗೂ ದಣಿವಾಗುವುದಿಲ್ಲಎಂಬುದು ನೆನಪಿರಲಿ.
This article has been published in VK on 11 November 2019
ಡಾರ್ಕ್ ಮೋಡ್ ಎಂಬ ಡಾರ್ಕ್ ಹಾರ್ಸ್!

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
-
ನನ್ನೊಳಗಿನ ಭಾವನೆಗಳಿಗೆ ಹಚ್ಚಬೇಕಿದೆ ಬಣ್ಣ, ಹಸಿರಾಗುವ ನೆಪದಲ್ಲಿ ಕೊಸರಾಡುವ ಕನಸುಗಳಿಗೆ ಕಟ್ಟಬೇಕಿದೆ ಬೇಲಿ. ಹಾರಬೇಕಿದೆ ಮುಗಿಲೇತ್ತರಕ್ಕೆ ಎಲ್ಲ ನಿಯಮ ಮೀರಿ ಗೆಲ್ಲಬೇಕ...
-
ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ, ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು, ಬಿಕ...
-
ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ ಸ್ಥೈರ್ಯ ತುಂಬಿ ಬೆಳೆಸಿದಾಕೆ, ಬರೀ ಸೋಲು ಕಂಡುವನಿಗೆ ಗೆಲುವಿನ ದಾರಿ ತೋರಿಸಿದಾಕೆ.. ಅವ್ವ ಗೆದ್ದು ಬಂದಾಗ... ಮರೆಯಲ್ಲಿ ನಿಂತು ಆನಂದ...