ಸಲಿಂಗ ಕುಟುಂಬದ ಹಿನ್ನೆಲೆ ಹೊಂದಿರುವ ಸನ್ನಾ ಮರಿನ್ ತಮ್ಮ ಆರಂಭದ ದಿನಗಳಲ್ಲಿಬೇಕರಿಯಲ್ಲಿಕೆಲಸ ಮಾಡುತ್ತಿದ್ದರು...
- ಮಲ್ಲಿಕಾರ್ಜುನ ತಿಪ್ಪಾರ
ಡಿಸೆಂಬರ್ ಹತ್ತಕ್ಕಿಂತ ಮೊದಲು 'ಸನ್ನಾ ಮರಿನ್' ಎಂಬ ಯುವತಿಯ ಬಗ್ಗೆ ಫಿನ್ಲೆಂಡ್ ಬಿಟ್ಟು ಹೊರ ಜಗತ್ತಿಗೆ ಅಷ್ಟೇನೂ ಗೊತ್ತಿರಲಿಲ್ಲ. ಆದರೆ, 34 ವರ್ಷ ವಯಸ್ಸಿನಲ್ಲೇ ಫಿನ್ಲೆಂಡ್‌ನ ಪ್ರಧಾನಿ ಹುದ್ದೆಗೇರಿರುವ ಈ ಯುವತಿಯ ಬಗ್ಗೆ ಈ ಇಡೀ ಜಗತ್ತೇ ಈಗ ಮಾತನಾಡುತ್ತಿದೆ. ತೀರಾ ಚಿಕ್ಕ ವಯಸ್ಸಿಗೇ ಪ್ರಧಾನಿ ಹುದ್ದೆಗೇರಿದರು ಎಂಬ ಕಾರಣಕ್ಕಲ್ಲ; ಬದಲಿಗೆ ಅವರಲ್ಲಿರುವ ನಾಯಕತ್ವ, ಬದ್ಧತೆಗಾಗಿ. ಹಾಗೆಯೇ, ಸದ್ಯ ಸೇವೆ ಸಲ್ಲಿಸುತ್ತಿರುವ ಪ್ರಧಾನಿಗಳ ಪೈಕಿ ಇವರೇ ಅತ್ಯಂತ ಕಿರಿಯ ಪ್ರಧಾನಿ. ಸನ್ನಾ ನಂತರದ ಕಿರಿಯ ಸ್ಥಾನದ ಪ್ರಧಾನಿಗಳ ಸಾಲಿನಲ್ಲಿನ್ಯೂಜಿಲೆಂಡ್‌ನ ಪ್ರಧಾನಿ ಜಸಿಂದಾ ಆರ್ಡೇನ್(39) ಮತ್ತು ಉಕ್ರೇನಿಯನ್ ಪ್ರಧಾನಿ ಒಲೆಕ್ಸಿಯ ಹಂಚರಕ್(35) ಇದ್ದಾರೆ.
ಸಂಸದೀಯ ಜನಪ್ರತಿನಿಧಿ ಪ್ರಜಾಪ್ರಭುತ್ವ ಹೊಂದಿರುವ ಫಿನ್ಲೆಂಡ್‌ನಲ್ಲಿಮೊದಲಿನಿಂದಲೂ ಮಹಿಳೆಯರು ರಾಜಕಾರಣದಲ್ಲಿಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಹುಶಃ ಜಗತ್ತಿನಲ್ಲೇ ಪ್ರಥಮ ಬಾರಿಗೆ ಮಹಿಳೆಯರಿಗೆ ಅನಿಯಂತ್ರಿತ ಸ್ವಾತಂತ್ರ್ಯ ಹಾಗೂ ಮತದಾನದ ಹಕ್ಕು ನೀಡಿದ ಕೀರ್ತಿ ಫಿನ್ಲೆಂಡ್‌ಗೆ ಸಲ್ಲುತ್ತದೆ. ಅದರ ಪರಿಣಾಮವೇ ಈ ವರೆಗೆ ಮೂವರು ಮಹಿಳೆಯರು ಫಿನ್ಲೆಂಡ್‌ನ ಪ್ರಧಾನಿಯಾಗಲು ಸಾಧ್ಯವಾಗಿದೆ. ಈಗ ಪ್ರಧಾನಿಯಾಗಿರುವ ಸನ್ನಾ ಮರಿನ್ ನೇತೃತ್ವದ ಸರಕಾರದ ಸಂಪುಟದ ಒಟ್ಟು 14 ಸಚಿವರ ಪೈಕಿ 9 ಮಹಿಳೆಯರಿದ್ದಾರೆ! ಅದರರ್ಥ, ಫಿನ್ಲೆಂಡ್ ರಾಜಕೀಯದಲ್ಲಿಮಹಿಳೆ ಮತ್ತು ಪುರುಷರ ನಡುವಿನ ವ್ಯತ್ಯಾಸ ತೀರಾ ತೆಳುವು. ಹಾಗಾಗಿಯೇ, ಸನ್ನಾ ಮರಿನ್‌ನಂಥ ಯುವತಿ ಚಿಕ್ಕ ವಯಸ್ಸಿಗೇ ಪ್ರಧಾನಿಯಾಗಲು ಸಾಧ್ಯವಾಗುತ್ತದೆ.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿಯ ನಾಯಕಿ ಮತ್ತು ಪ್ರಧಾನಿಯಾಗಿದ್ದ ಆಂಟ್ಟಿ ರಿನ್ನಾ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಾಗ ಪಕ್ಷದ ಕಣ್ಣಿಗೆ ಬಿದ್ದಿದ್ದೇ ಸಾರಿಗೆ ಸಚಿವೆಯಾಗಿದ್ದ ಈ ಸನ್ನಾ ಮರಿನ್. ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಜತೆಗೆ ಇನ್ನೂ ನಾಲ್ಕು ಪಕ್ಷಗಳು ಸೇರಿ ರಚಿಸಿಕೊಂಡಿರುವ ಸರಕಾರದ ನೇತೃತ್ವವನ್ನು ಸನ್ನಾ ವಹಿಸಿದ್ದಾರೆ. ಚಿಕ್ಕ ವಯಸ್ಸಿಗೇ ರಾಜಕಾರಣದಲ್ಲಿಪಳಗಿರುವ ಸನ್ನಾ ಅವರ ಆರಂಭದ ದಿನಗಳೇನೂ ಅತ್ಯುತ್ತಮವಾಗಿರಲಿಲ್ಲ. ಕಾಲೇಜು ಶಿಕ್ಷಣ ಮುಗಿದ ಕೂಡಲೇ 2006ರಲ್ಲಿಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಯುವ ವಿಭಾಗವನ್ನು ಸೇರಿ, 2010ರಿಂದ 2012ರವರೆಗೆ ಅದರ ಮೊದಲ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.

2008ರಲ್ಲಿನಡೆದ ಫಿನ್ನಿಷ್ ಮುನ್ಸಿಪಲ್ ಚುನಾವಣೆಗೆ ಸನ್ನಾ ಸ್ಪರ್ಧಿಸಿದ್ದರು. 'ಪ್ರಥಮ ಚುಂಬನಂ ದಂತ ಭಗ್ನಂ' ಎಂಬಂತೆ ಅವರಿಗೆ ಸೋಲು ಎದುರಾಯಿತು. ಮಧ್ಯೆ ಸ್ವಲ್ಪ ಬಿಡುವು ತೆಗೆದುಕೊಂಡು ಮತ್ತೆ 2012ರಿಂದ ರಾಜಕಾರಣದಲ್ಲಿಪೂರ್ಣ ಪ್ರಮಾಣದಲ್ಲಿಸನ್ನಾ ಸಕ್ರಿಯರಾದರು. 27ನೇ ವಯಸ್ಸಿನಲ್ಲೇ ಟ್ಯಾಂಪೇರ್ ಸಿಟಿ ಕೌನ್ಸಿಲ್‌ಗೆ ಆಯ್ಕೆಯಾದರು. ಇದು ಅವರ ರಾಜಕೀಯ ಜೀವನಕ್ಕೆ ಬಹುದೊಡ್ಡ ತಿರುವು ನೀಡಿತ್ತು. ಅಷ್ಟೇ ಅಲ್ಲದೆ, ಅವರು ಇಲ್ಲಿಂದ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಅವರ ರಾಜಕೀಯ ಪಯಣವು ಪ್ರಧಾನಿಯ ಹುದ್ದೆಯವರೆಗೆ ಟಾಪ್ ಗೇರ್‌ನಲ್ಲಿಓಡಿತು. 2013ರಿಂದ 2017ರ ವರೆಗೂ ಸಿಟಿ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದರು. 2017ರಲ್ಲಿಪುನಃ ಆಯ್ಕೆಯಾದರು. ಆ ಮೇಲೆ ಟ್ಯಾಂಪೇರ್ ಪ್ರಾದೇಶಿಕ ಅಸೆಂಬ್ಲಿಯ ಸದಸ್ಯರಾಗಿದ್ದರು. ಇದೇ ಸಮಯದಲ್ಲಿ2013-16ವರೆಗೆ ಪಿರ್ಕಾನ್ಮಾ ರಿಜನಲ್ ಕೌನ್ಸಿಲ್‌ನ ಮೇಂಬರ್ ಕೂಡ ಆಗಿದ್ದರು.
30ನೇ ವರ್ಷದಲ್ಲಿಅಂದರೆ, 2014ರಲ್ಲಿಸನ್ನಾ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿಯ ಎರಡನೇ ಡೆಪ್ಯುಟಿ ಚೇರ್ಮನ್ನರಾಗಿ ಆಯ್ಕೆಯಾದರು. 2015ರಲ್ಲಿಪಿರ್ಕಾನ್ಮಾ ಪ್ರದೇಶದ ಪ್ರತಿನಿಧಿಯಾಗಿ ಫಿನ್ಲೆಂಡ್ ಸಂಸತ್ತಿಗೆ ಅಡಿಯಿಟ್ಟರು. ನಾಲ್ಕು ವರ್ಷಗಳ ಬಳಿಕ ಪುನಃ ಆಯ್ಕೆಗೊಂಡ ಸನ್ನಾ, 2019ರ ಜೂನ್ 6ರಂದು ಸಾರಿಗೆ ಮತ್ತು ಸಂವಹನ ಇಲಾಖೆಯ ಸಚಿವೆಯಾಗಿ ನೇಮಕಗೊಂಡರು.
ಹಂತ ಹಂತವಾಗಿ ರಾಜಕೀಯದಲ್ಲಿಮೇಲೇರಿದ ಸನ್ನಾ ಮರಿನ್‌ಗೆ ಚಿಕ್ಕ ವಯಸ್ಸಿಗೇ ದೇಶದ ಪ್ರಧಾನಿಯಾಗಬಹುದೆಂಬ ಸಣ್ಣ ಸುಳಿವು ಕೂಡ ಆರಂಭದ ದಿನಗಳಲ್ಲಿಇರಲಿಲ್ಲವೇನೋ? ಆದರೆ, ಅವರ ಬದ್ಧತೆ ಮತ್ತು ದೇಶದೆಡೆಗಿನ ಕಾಳಜಿ, ಸಮ್ಮಿಶ್ರ ಸರಕಾರವನ್ನು ಕರೆದೊಯ್ಯುವ ಛಾತಿ ಅವರನ್ನು ಇಂದು ದೇಶದ ಉನ್ನತ ಹುದ್ದೆಯವರೆಗೂ ಕರೆ ತಂದಿದೆ. ಸನ್ನಾಗಿಂತ ಮೊದಲ ಪ್ರಧಾನಿಯಾಗಿದ್ದ ರಿನ್ನಾ ಅವರು ಪೋಸ್ಟಲ್ ಮುಷ್ಕರವನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿಅವರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು.
ಸನ್ನಾ ಮರಿನ್ ಅವರಿಗೇನೂ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲ; ಶ್ರೀಮಂತರೂ ಅಲ್ಲ. 1985 ನವೆಂಬರ್ 16ರಂದು ಸನ್ನಾ ಮರಿನ್ ಅವರು ಹೆಲ್ಸಿಂಕಿಯಲ್ಲಿಜನಸಿದರು. ತಂದೆ ಕುಡುಕನಾಗಿದ್ದ. ಹೀಗಾಗಿ ತಂದೆ-ತಾಯಿಗಳಿಬ್ಬರು ಸನ್ನಾ ತೀರಾ ಚಿಕ್ಕವಳಿದ್ದಾಗಲೇ ಬೇರೆ ಬೇರೆಯಾದರು. ಆಗ ಇಡೀ ಕುಟುಂಬ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿತ್ತು. ತಾಯಿ ಮತ್ತು ತಾಯಿಯ ಗೆಳತಿ(ಸಂಗಾತಿ)ಯ ಪೋಷಕತ್ವದಲ್ಲಿಸನ್ನಾ ಬೆಳೆದರು. ಸನ್ನಾ ಅವರದ್ದು ರೇನ್‌ಬೋ ಫ್ಯಾಮಿಲಿ(ಎಲ್‌ಜಿಬಿಟಿ ಕಮ್ಯುನಿಟಿ). ತಮ್ಮ ಈ ಕುಟುಂಬದ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶವಿರಲಿಲ್ಲ. ಫಿನ್ಲೆಂಡ್ ಸಮಾಜದಲ್ಲಿಸಲಿಂಗ ಕುಟುಂಬಗಳು ನಿಷಿದ್ಧವಾಗಿವೆ. ಇಂಥ ಸಾಮಾಜಿಕ ಪರಿಸ್ಥಿತಿಯಲ್ಲಿಸನ್ನಾ ಅವರ ಮೇಲಾದ ಪರಿಣಾಮ ಬಗ್ಗೆ ನಾವು ಊಹಿಸಬಹುದು.
ಮಗುವಾಗಿ ತಾವು ಎದುರಿಸಿದ ಆ ದಿನಗಳನ್ನು ಅವರದ್ದೇ ಮಾತಿನಲ್ಲಿಹೇಳುವುದಾದರೆ, ಅವರಿಗೆ ಅದು ಸಂಪೂರ್ಣ ನಿಶ್ಶಬ್ಧ ರೀತಿಯ ಅನುಭವ. ಇದು ಅವರಿಗೆ ಅಸಮರ್ಥತೆಯ ಭಾವನೆಯನ್ನು ತಂದುಕೊಡುತ್ತಿತ್ತು. ಅವರನ್ನು ಒಂದು ಕುಟುಂಬ ರೀತಿಯಲ್ಲಿಅಥವಾ ಇನ್ನುಳಿದವರ ಜತೆ ಸರಿಸಮಾನವಾಗಿ ನೋಡುವ ಸ್ಥಿತಿಯಲ್ಲಿಫಿನ್ಲೆಂಡ್ ಸಮಾಜ ಇಲ್ಲ. ಆದರೆ, ಇದಾವುದೂ ಸನ್ನಾ ಅವರ ಆತ್ಮವಿಶ್ವಾಸವನ್ನು ಕುಂದಿಸಲಿಲ್ಲ. ತಮಗೆ ಬೇಕಾದದ್ದನ್ನು ಸಾಧಿಸುವ ಛಲಕ್ಕೆ ಅಡ್ಡಿಯಾಗಲಿಲ್ಲ.
ತಮ್ಮ ಆರಂಭದ ದಿನಗಳನ್ನು ಬಹುತೇಕ ಅವರು ಬೇಕರಿಯಲ್ಲಿಕೆಲಸ ಮಾಡುತ್ತಾ ಕಳೆದರು. ವಿಶೇಷ ಎಂದರೆ, ಅವರ ಕುಟುಂಬದಲ್ಲಿವಿಶ್ವವಿದ್ಯಾಲಯ ಮೆಟ್ಟಿಲು ತುಳಿದ ಮೊದಲ ವ್ಯಕ್ತಿ ಇವರು. ಸನ್ನಾ ಅವರ ಪ್ರತಿ ಸಾಹಸಕ್ಕೂ ತಾಯಿಯಿಂದ ಬೆಂಬಲ ದೊರೆಯುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ರಾಜಕಾರಣದ ಆಚೆಯೂ ಕೌಟುಂಬಿಕ ಜೀವನಕ್ಕೆ ಹೆಚ್ಚು ಮಹತ್ವ ನೀಡುವ ಸನ್ನಾ, ಮಾರ್ಕೋಸ್ ರಾಯ್ಕೊನೆನ್ ಎಂಬವರನ್ನು ವಿವಾಹವಾಗಿದ್ದು, 2018ರ ಜನವರಿಯಲ್ಲಿಅವರು ಎಮ್ಮಾ ಎಂಬ ಹೆಣ್ಣು ಮಗುವಿನ ತಾಯಿಯಾದರು. ಮಗುವಿಗೆ ಈಗ 22 ತಿಂಗಳು. ಸೋಷಿಯಲ್ ಮೀಡಿಯಾದಲ್ಲಿಗರ್ಭಿಣಿಯಾದಾಗಿನಿಂದ ಹಿಡಿದು ತಾಯಿಯಾಗುವವರೆಗಿನ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಆ ಮೂಲಕ ವೃತ್ತಿನಿರತ ತಾಯಿಯಾಗುವ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.
ಯುನಿವರ್ಸಿಟಿ ಆಫ್ ಟ್ಯಾಂಪೇರ್‌ನಿಂದ ಪದವಿ ಪಡೆದಿರುವ ಸನ್ನಾ ಫಿನ್ನಿಷ್, ಇಂಗ್ಲಿಷ್ ಮತ್ತು ಸ್ವೀಡಿಷ್ ಭಾಷೆಗಳಲ್ಲಿಸರಾಗವಾಗಿ ಮಾತನಾಡುತ್ತಾರೆ. ಹೊರಾಂಗಣ ಚಟುವಟಿಕೆಗಳೆಂದರೆ ತುಂಬ ಇಷ್ಟ. ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿರುವ ಸನ್ನಾ ಎದುರು ಆಡಳಿತವೇನೂ ಸುಲಭವಾಗಿಲ್ಲ. ಪೋಸ್ಟಲ್ ಮುಷ್ಕರದಿಂದಾಗಿ ಮುನಿಸಿಕೊಂಡಿರುವ ಮೈತ್ರಿ ಪಕ್ಷಗಳನ್ನು ಒಂದೇ ದಿಕ್ಕಿನಡಿ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಇದೆ. ಸರಕಾರದ ಬಗ್ಗೆ ಜನರು ಕಳೆದುಕೊಂಡಿರುವ ವಿಶ್ವಾಸವನ್ನು ಮತ್ತೆ ಗಳಿಸುವ ದಾರಿ ಕೂಡ ಅಷ್ಟು ಸುಲಭವಾಗಿಲ್ಲ. ಹಾಗಾಗಿ, ತೀರಾ ಚಿಕ್ಕ ವಯಸ್ಸಿಗೇ ಪ್ರಧಾನಿಯಾಗಿರುವ ಸನ್ನಾ ಇದೆಲ್ಲವನ್ನೂ ನಿಭಾಯಿಸಬಲ್ಲರೇ ಎಂಬ ಪ್ರಶ್ನೆಗೆ ಅವರು ಆತ್ಮವಿಶ್ವಾಸದಿಂದಲೇ, ''ನನ್ನ ವಯಸ್ಸು ಅಥವಾ ಲಿಂಗದ ಬಗ್ಗೆ ಎಂದೂ ಯೋಚಿಸುವುದಿಲ್ಲ,'' ಎನ್ನುತ್ತಾರೆ. ಅಂದರೆ, ರಾಜಕಾರಣವೇ ಇರಲಿ, ಆಡಳಿತ ರಂಗವೇ ಇರಲಿ ನೀವು ಹೇಗೆ ವರ್ತಿಸುತ್ತೀರಿ, ನಿಮ್ಮ ಸಾಮರ್ಥ್ಯವನ್ನು ಹೇಗೆ ಪ್ರತಿಷ್ಠಾಪಿಸುತ್ತೀರಿ ಎಂಬುದಷ್ಟೇ ಮಹತ್ವದ್ದಾಗಿರುತ್ತದೆ. ಬಾಕಿ ಎಲ್ಲವೂ ನಗಣ್ಯ ಎಂಬುದನ್ನು ಅವರ ಮಾತುಗಳು ಧ್ವನಿಸುತ್ತವೆ.
ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಭಿನ್ನವಾಗಿರುವ ಫಿನ್ಲೆಂಡ್ ದೇಶದ ಚುಕ್ಕಾಣಿ ಹಿಡಿದಿರುವ ಸನ್ನಾ ಮರಿನ್, ಜಗತ್ತಿನ ಯುವತಿಯರಿಗೆ ಹೊಸ ರೋಲ್ ಮಾಡೆಲ್ ಅಂದರೆ ತಪ್ಪಲ್ಲ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ