ಅಮೆರಿಕದ 45ನೇ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅವರು ಸದಾ ವಿವಾದದಿಂದಲೇ ಸುದ್ದಿಯಾಗಿದ್ದು, ಇದೀಗ ತಮ್ಮ ಅವಧಿಯ ಕೊನೆಯ ಹಂತದಲ್ಲಿವಾಗ್ದಂಡನೆಗೆ ಗುರಿಯಾಗುತ್ತಿದ್ದಾರೆ. ಅಮೆರಿಕ ಸಂಸತ್ತಿನ 230 ವರ್ಷಗಳ ಇತಿಹಾದಲ್ಲಿಈ ವರೆಗೆ ಟ್ರಂಪ್ ಅವರನ್ನು ಸೇರಿಸಿಕೊಂಡು ಐವರು ಅಧ್ಯಕ್ಷರು ವಾಗ್ದಂಡನೆ ಪ್ರಕ್ರಿಯೆಗೊಳಪಟ್ಟಿದ್ದಾರೆ. ಆದರೆ, ಯಾವ ಅಧ್ಯಕ್ಷರ ವಿರುದ್ಧವೂ ವಾಗ್ದಂಡನೆ ಸಂಪೂರ್ಣವಾಗಿ ಗೆಲುವು ಕಂಡಿಲ್ಲ. ಟ್ರಂಪ್ ಪ್ರಕರಣದಲ್ಲೂಇದೇ ಫಲಿತಾಂಶವನ್ನು ನಿರೀಕ್ಷಿಸಬಹುದು.
ಟ್ರಂಪ್ ವಿರುದ್ಧ ವಾಗ್ದಂಡನೆ ಯಶಸ್ವಿಯಾಗಬೇಕಿದ್ದರೆ 'ನಂಬರ್ ಗೇಮ್' ಮುಖ್ಯ ಪಾತ್ರವಹಿಸುತ್ತದೆ. ಈ ಆಟದಲ್ಲಿಟ್ರಂಪ್ ಗೆಲುವು ಸಾಧಿಸಬಹುದು. ಆದರೆ, ಅವರ ವಿರುದ್ಧದ ಆರೋಪಗಳಂತೂ ನಿಷ್ಕರ್ಷೆಯಲ್ಲಿಇರಲಿವೆ ಮತ್ತು ಇತಿಹಾಸದಲ್ಲಿದಾಖಲಾಗಲಿವೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಜ್ಞಾವಂತ ಪ್ರಜಾಪ್ರಭುತ್ವ ಎನಿಸಿಕೊಂಡಿರುವ ಅಮೆರಿಕದಲ್ಲಿತಪ್ಪು ಮಾಡಿದರೆ ಅಧ್ಯಕ್ಷರೂ ಶಿಕ್ಷೆಯನ್ನು ಅನುಭವಿಸಬೇಕು ಎಂಬ ಸಂದೇಶವನ್ನಂತೂ ಟ್ರಂಪ್ ಪ್ರಕರಣ ಇಡೀ ಜಗತ್ತಿಗೇ ರವಾನಿಸಿದೆ.
ಸಂವಿಧಾನ ಏನು ಹೇಳುತ್ತದೆ?
ಅವಧಿಪೂರ್ವ ಅಧ್ಯಕ್ಷರನ್ನು ಹುದ್ದೆಯಿಂದ ಕೆಳಗಿಳಿಸಲು ಕಾಂಗ್ರೆಸ್‌ಗೆ ಅಮೆರಿಕ ಸಂವಿಧಾನ ಸಂಪೂರ್ಣ ಅಧಿಕಾರ ನೀಡಿದೆ. ಆದರೆ, ಅದಕ್ಕೆ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿಒಪ್ಪಿಗೆ ನೀಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅಧ್ಯಕ್ಷರ ವಿರುದ್ಧ, ದೇಶದ್ರೋಹ, ಭ್ರಷ್ಟಾಚಾರ, ಗಂಭೀರ ಸ್ವರೂಪದ ಅಪರಾಧ ಮತ್ತು ದುಷ್ಕೃತ್ಯದಂಥ ಪ್ರಕರಣಗಳಿರಬೇಕು. ಆದರೆ, ಈ ಆರೋಪಗಳನ್ನು ಯಾವ ರೀತಿ ವ್ಯಾಖ್ಯಾನಿಸಬೇಕು ಎಂಬುದನ್ನು ಸಂವಿಧಾನ ಸ್ಪಷ್ಪಡಿಸಿಲ್ಲ. ಇದಕ್ಕಾಗಿಯೇ ಸ್ಟ್ಯಾಂಡರ್ಡ್ ಎನ್ನಬಹುದಾದ ಯಾವುದೇ ಮಾನದಂಡಗಳಿಲ್ಲ. ಹಾಗಾಗಿ ಬಹುತೇಕ ಸಂದರ್ಭದಲ್ಲಿಅಧ್ಯಕ್ಷರ ವಿರುದ್ಧದ ವಾಗ್ದಂಡನೆಗಳಿಗೆ ಸೋಲಾಗಿದೆ. ಹೀಗಿದ್ದೂ, ಬಲಿಷ್ಠ ರಾಷ್ಟ್ರವೊಂದರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಮುಖ್ಯಸ್ಥರನ್ನು ವಾಗ್ದಂಡನೆಗೆ ಗುರಿಪಡಿಸುವ ಸಾಧ್ಯತೆಯನ್ನು ಮಾತ್ರ ತೆರೆದಿಟ್ಟಿದೆ.
ಟ್ರಂಪ್ ವಿರುದ್ಧ 2 ಆರೋಪ
1. ಅಧಿಕಾರದ ದುರುಪಯೋಗ. ಅಧ್ಯಕ್ಷ ಮರು ಆಯ್ಕೆಗೆ ವಿದೇಶಿ ಸರಕಾರದ ನೆರವು.
2. ವಾಗ್ದಂಡನೆ ಪ್ರಕ್ರಿಯೆಯಲ್ಲಿಕಾಂಗ್ರೆಸ್ ಕಾರ್ಯ ನಿರ್ವಹಣೆಗೆ ಅಡ್ಡಿ ಆರೋಪ
ಮುಂದೆ ಏನಾಗುತ್ತದೆ?
ಸಂಸತ್ತಿನಲ್ಲಿ(ಹೌಸ್ ಆಫ್ ರಿಪ್ರಸೆಂಟೆಟೀವ್) ಟ್ರಂಪ್ ವಿರುದ್ಧ ವಾಗ್ದಂಡನೆಗೆ ಒಪ್ಪಿಗೆ ಸಿಕ್ಕಿದೆ. ಟ್ರಂಪ್ ಅವರು ಶಿಕ್ಷೆ ಎದುರಿಸಬೇಕಿದ್ದರೆ ಅದಕ್ಕೆ ಅಮೆರಿಕದ ಸೆನೆಟ್ ಒಪ್ಪಿಗೆ ನೀಡಬೇಕಾಗುತ್ತದೆ. ಸಂಸತ್ತಿನಲ್ಲಿಡೆಮಾಕ್ರಟ್‌ಗಳ ಪಾರಮ್ಯವಿದ್ದರೆ, ಸೆನೆಟ್‌ನಲ್ಲಿರಿಪಬ್ಲಿಕನ್ನರ ಸಂಖ್ಯೆ ಹೆಚ್ಚಿದೆ. ಹಾಗಾಗಿ, ಸೆನೆಟ್‌ನಲ್ಲಿಈ ವಾಗ್ದಂಡನೆಗೆ ಸೋಲಾಗಬಹುದು. ಹಾಗಾಗಿ ಅಷ್ಟು ಸರಳವಾಗಿ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಸೆನೆಟ್‌ನಲ್ಲಿರಿಪಬ್ಲಿಕನ್ನರ ನಾಯಕರಾಗಿರುವ ಮಿಚ್ ಮೆಕ್‌ಕೆನ್ನಾಲ್ ಅವರು, ವಿಚಾರಣೆ ವೇಳೆ ಅಧ್ಯಕ್ಷರ ತಂಡದೊಂದಿಗೆ ರಿಪಬ್ಲಿಕನ್ ಸೆನೆಟರ್‌ಗಳು ಸಂಪೂರ್ಣ ಸಹಕಾರದೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದ್ದರು. ಇದೀಗ ಸೆನೆಟ್‌ನಲ್ಲಿವಾಗ್ದಂಡನೆಗೆ ಸಂಬಂಧಿಸಿದ ನಿಯಮಗಳನ್ನು ರಚಿಸಬೇಕಾದ ಹೊಣೆಗಾರಿಕೆ ಮೆಕ್‌ಕೆನ್ನಾಲ್ ಮೇಲಿದೆ.
ವಾಗ್ದಂಡನೆ ಪ್ರಕ್ರಿಯೆ ಹೀಗಿದೆ
- ಅಮೆರಿಕ ಹೌಸ್ ಆಫ್ ರಿಪ್ರಸೆಂಟೇಟಿವ್‌ನಲ್ಲಿಗೆದ್ದಿರುವ ವಾಗ್ದಂಡನೆ ಇನ್ನು ಸೆನೆಟ್‌ಗೆ ವರ್ಗಾವಣೆಯಾಗುತ್ತದೆ.
- ಸೆನೆಟ್‌ನಲ್ಲಿಸುದೀರ್ಘ ವಿಚಾರಣೆ ನಡೆಯುತ್ತದೆ. ಬಳಿಕ, ಅಧ್ಯಕ್ಷರ ವಿರುದ್ಧದ ವಾಗ್ದಂಡನೆಯನ್ನು ಮತಕ್ಕೆ ಹಾಕಲಾಗುತ್ತದೆ.
- ಒಂದು ವೇಳೆ, ಸೆನೆಟ್‌ನಲ್ಲಿಟ್ರಂಪ್ ವಿರುದ್ಧ ಮೂರನೇ ಎರಡಕ್ಕಿಂತ ಕಡಿಮೆ ಮತ ಬಿದ್ದರೆ ಅವರು ಅವರು ಶಿಕ್ಷೆಯಿಂದ ಪಾರಾಗಲಿದ್ದಾರೆ.
- ಟ್ರಂಪ್‌ಗೆ ಶಿಕ್ಷೆಯ ಪರವಾಗಿ ಮೂರನೇ ಎರಡಕ್ಕಿಂತ ಹೆಚ್ಚು ಅಂದರೆ ಶೇ.67ರಷ್ಟು ಮತ ಬಿದ್ದರೆ ಅವರು ತಮ್ಮ ಹುದ್ದೆಯಿಂದ ಕೆಳಗಿಳಯಬೇಕಾಗುತ್ತದೆ.
ಎಷ್ಟು ದಿನಗಳ ಕಾಲ ನಡೆಯಲಿದೆ?
- ಒಟ್ಟಾರೆ 126 ಗಂಟೆಗಳ ಕಾಲ ವಾಗ್ದಂಡನೆ ಪ್ರಕ್ರಿಯೆ ನಡೆಯಲಿದೆ
- ಡಿಸೆಂಬರ್ 18: ಈಗಾಗಲೇ ಹೌಸ್ ಆಫ್ ರಿಪ್ರಸೆಂಟೆಟೀವ್‌ನಲ್ಲಿವಾಗ್ದಂಡನೆಗೆ ಒಪ್ಪಿಗೆ ದೊರೆತಿದೆ.
- 2020 ಜನವರಿ 6: ರಿಪಬ್ಲಿಕನ್ನರೇ ಹೆಚ್ಚಾಗಿರುವ ಸೆನೆಟ್‌ನಲ್ಲಿವಿಚಾರಣೆ ಆರಂಭ. ವಾಗ್ದಂಡನೆಯ ಪ್ರಕ್ರಿಯೆಯೆ ನಿಯಮ, ಮಾರ್ಗದರ್ಶಿ ಸೂತ್ರಗಳನ್ನು ನಿಗದಿಪಡಿಸಲಾಗುವುದು.
- 2020 ಜನವರಿ 7: ಮುಖ್ಯ ನ್ಯಾಯಮೂರ್ತಿ ರಾಬರ್ಟ್ಸ್ ಮತ್ತು ಸೆನೆಟರ್‌ಗಳು ತೀರ್ಪುಗಾರರಾಗಿ ಪ್ರಮಾಣ ಸ್ವೀಕಾರ
- 2020 ಜನವರಿ 9: ಹೌಸ್ ಪ್ರಾಸೆಕ್ಯೂಟರ್‌ಗಳು ಮತ್ತು ಶ್ವೇತಭವನದ ಅಧಿಕಾರಿಗಳು ಪ್ರತಿ 24 ಗಂಟೆಗೆ ತಮ್ಮ ವಾದಗಳನ್ನು ಮಂಡಿಸುತ್ತಾರೆ.
- ಈ ಒಟ್ಟಾರೆ ಪ್ರಕ್ರಿಯೆ ಮುಗಿಯಲು ವಾರ ಬೇಕಾಗಬಹುದು. ಆದರೆ, ಅಮೆರಿಕ ಅಧ್ಯಕ್ಷರ ಪ್ರೈಮರಿ ಎಲೆಕ್ಷನ್ ಹೊತ್ತಿಗೆ ಈ ಪ್ರಕ್ರಿಯೆ ಮುಗಿಯಬೇಕೆಂದು ಡೆಮಾಕ್ರಟ್‌ಗಳು ಬಯಸುತ್ತಿದ್ದಾರೆ.
ಟ್ರಂಪ್ ರಾಜೀನಾಮೆ ನೀಡ್ತಾರಾ?
ಇಲ್ಲ. ಸದ್ಯಕ್ಕೆ ಇಲ್ಲ. ಸಂಸತ್ತಿನ ಜನಪ್ರತಿನಿಧಿಗಳ ಮನೆಯಲ್ಲಿಮಾತ್ರ ವಾಗ್ದಂಡನೆಗೆ ಒಪ್ಪಿಗೆ ದೊರೆತಿದೆ. ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕಿದ್ದರೆ ಸಂಸತ್ತಿನ ಮತ್ತೊಂದು ಹೌಸ್ ಸೆನೆಟ್ ಕೂಡ ಒಪ್ಪಿಗೆ ನೀಡಬೇಕು. ಆದರೆ, ಈಗಿರುವ ಲೆಕ್ಕಾಚಾರ ಪ್ರಕಾರ ಅಷ್ಟು ಸುಲಭವಲ್ಲ. ಟ್ರಂಪ್ ವಾಗ್ದಂಡನೆಗೆ ಸೆನೆಟ್ ಕೂಡ ಮೂರನೇ ಎರಡರಷ್ಟು ಮತ ಹಾಕಬೇಕು. ಆದರೆ, ಇಷ್ಟೊಂದು ಮತಗಳು ದೊರೆಯುವುದು ಕಷ್ಟ. ಯಾಕೆಂದರೆ, ಸೆನೆಟ್‌ನಲ್ಲಿರಿಪಬ್ಲಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸೆನೆಟ್‌ನಲ್ಲಿರುವ 45 ಡೆಮಾಕ್ರಟ್ ಹಾಗೂ ಇಬ್ಬರು ಸ್ವತಂತ್ರ ಸದಸ್ಯರ ಜತೆಗೆ 53 ರಿಪಬ್ಲಿಕನ್ನರ ಪೈಕಿ ಕನಿಷ್ಠ 20 ರಿಪಬ್ಲಿಕನ್ನರಾದರೂ ವಾಗ್ದಂಡನೆ ಪರವಾಗಿ ಮತ ಹಾಕಬೇಕು. ಆಗ ಮಾತ್ರ ಟ್ರಂಪ್ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಈಗಿನ ಪರಿಸ್ಥಿತಿ ನೋಡಿದರೆ, ಡೆಮಾಕ್ರಟ್‌ಗಳ ಪೈಕಿಯೇ ಇಬ್ಬರು ಕೈಕೊಡುವ ಎಲ್ಲಸಾಧ್ಯತೆ ಇದೆ.
ಉಪಾಧ್ಯಕ್ಷ ಅಧ್ಯಕ್ಷ?
ಸದ್ಯದ ಲೆಕ್ಕಾಚಾರ ಪ್ರಕಾರ ಟ್ರಂಪ್ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವುದು ಅಸಂಭವ. ಸೆನೆಟ್‌ನಲ್ಲಿವಾಗ್ದಂಡನೆಗೆ ಸೋಲಾಗುವ ಎಲ್ಲಸಾಧ್ಯತೆಗಳಿವೆ. ಹೀಗಿದ್ದೂ ಒಂದು ವೇಳೆ, ವಾಗ್ದಂಡನೆಗೆ ಗುರಿಯಾಗಿ ಟ್ರಂಪ್ ಅಧಿಕಾರ ಬಿಟ್ಟು ಕೊಟ್ಟರೆ ಆಗ ಅಮೆರಿಕ ಅಧ್ಯಕ್ಷರು ಯಾರು ಆಗ್ತಾರೆ? ಅಲ್ಲಿನ ಸಂವಿಧಾನ ಪ್ರಕಾರ, ಸರಕಾರದ ಉಳಿದ ಅವಧಿಯವರೆಗೆ ಉಪಾಧ್ಯಕ್ಷರಾದವರು ಅಧ್ಯಕ್ಷರಾಗಿರುತ್ತಾರೆ. ಅಂದರೆ,ಉಪಾಧ್ಯಕ್ಷ ಮೈಕ್ ಪೆನ್ಸ್ ಅಧ್ಯಕ್ಷರಾಗಲಿದ್ದಾರೆ. ಆದರೆ, ಸದ್ಯಕ್ಕಂತೂ ಇದು ಸಾಧ್ಯವಿಲ್ಲ!
ರಾಜಕೀಯ ಪರಿಣಾಮವೇನು?
ಟ್ರಂಪ್ ವಿರುದ್ಧ ವಾಗ್ದಂಡನೆ ರಾಜಕೀಯ ಪರಿಣಾಮ ಬಗ್ಗೆ ಕೂಡ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಟ್ರಂಪ್ ಹೇಳಿರುವ ಪ್ರಕಾರ, ಈ ವಾಗ್ದಂಡನೆ ಡೆಮಾಕ್ರಟ್‌ಗಳಿಗೆ ಹಿನ್ನಡೆಯುಂಟು ಮಾಡಲಿದ್ದು, ಅಧ್ಯಕ್ಷೀಯ ಚುನಾವಣೆ ವೇಳೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಹಾಗೆ ನೋಡಿದರೆ, ಇದು ಎರಡು ಅಗಲಿನ ಕತ್ತಿಯ ನಡಿಗೆಯೇ ಆಗಿದೆ. ಮುಂದಿನ ವರ್ಷ ನವೆಂಬರ್ 20ರ ಹೊತ್ತಿಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಟ್ರಂಪ್ ಎರಡನೇ ಅವಧಿಗೆ ಮರು ಆಯ್ಕೆ ಬಯಸಿದ್ದಾರೆ. ಒಂದು ವೇಳೆ, ವಾಗ್ದಂಡನೆ ಅವರ ಪರವಾಗಿ ಸಹಾನುಭೂತಿ ಸೃಷ್ಟಿಸಿದರೆ ಖಂಡಿತವಾಗಿಯೂ ಅವರ ಗೆಲುವಿಗೆ ಇದು ಕಾರಣವಾಗಲಿದೆ. ಹಾಗೆಯೇ, ಡೆಮಾಕ್ರಟ್‌ಗಳ ರೀತಿಯಲ್ಲಿಅಮೆರಿಕದ ಜನ ಕೂಡ ಯೋಚನೆ ಮಾಡಿದ್ದಾದರೆ, ಖಂಡಿತವಾಗಿಯೂ ಟ್ರಂಪ್ ಹಿನ್ನಡೆಯಾಗಲಿದೆ.
ಐವರು ಅಧ್ಯಕ್ಷರ ವಿರುದ್ಧ ವಾಗ್ದಂಡನೆ
- ಭ್ರಷ್ಟಾಚಾರ ಆರೋಪ ಹೊತ್ತಿದ್ದ ಅಧ್ಯಕ್ಷ ಜೇಮ್ಸ್ ಬ್ಯೂಕ್ಯಾನನ್ ಅವರ ವಿರುದ್ಧ 1860ರಲ್ಲಿವಾಗ್ದಂಡನೆ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಅವರು ಶಿಕ್ಷೆಯಿಂದ ಪಾರಾಗಿದ್ದರು.
- ಟೆನ್ಯೂರ್ ಆಫೀಸ್ ಕಾಯಿದೆ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ1868ರಲ್ಲಿಆಂಡ್ರೋ ಜಾನ್ಸನ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ನಡೆದಿತ್ತು. ಕೇವಲ ಒಂದು ಮತದ ಅಂತರದಲ್ಲಿಅವರು ವಾಗ್ದಂಡನೆಯಿಂದ ಪಾರಾಗಿದ್ದರು.
- 1974ರಲ್ಲಿಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ವಿರುದ್ಧವೂ ವಾಗ್ದಂಡನೆ ನಡೆದಿತ್ತು. ಅಧಿಕಾರದ ದುರುಪಯೋಗ ಸೇರಿದಂತೆ ನಾನಾ ಕಾರಣಗಳಿಂದ ವಾಗ್ದಂಡನೆ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಇನ್ನೇನು ತನಿಖೆ ಮುಗಿಯುವ ಹಂತದಲ್ಲಿಅವರು ರಾಜೀನಾಮೆ ನೀಡಿದ್ದರಿಂದ ವಾಗ್ದಂಡನೆ ಕೈ ಬಿಡಲಾಗಿತ್ತು.
- 1998ರಲ್ಲಿಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ವಾಗ್ದಂಡನೆ ಪ್ರಕ್ರಿಯೆಗೆ ಒಳಗಾಗಬೇಕಾಯಿತು. ವಿಚಾರಣೆಯಲ್ಲಿಅವರು ನಿರ್ದೋಷಿ ಎಂದು ಸಾಬೀತಾಗಿ, ವಾಗ್ದಂಡನೆ ವಿರುದ್ಧ ಗೆಲುವು ಸಾಧಿಸಿದ್ದರು.
- 2019ರಲ್ಲಿ ಹಾಲಿ ಅಧ್ಯಕ್ಷ ಟ್ರಂಪ್ ವಿರುದ್ಧವೂ ವಾಗ್ದಂಡನೆ ಪ್ರಕ್ರಿಯೆ ನಡೆಯುತ್ತಿದೆ. ಮರು ಆಯ್ಕೆಗೆ ವಿದೇಶಿ ಸರಕಾರಗಳ ನೆರವು ಸೇರಿದಂತೆ ಇನ್ನಿತರ ಆರೋಪಗಳನ್ನು ಅವರು ಎದುರಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ