ಸೋಮವಾರ, ನವೆಂಬರ್ 25, 2019

History of Cricket: ಕ್ರಿಕೆಟ್‌ ರೂಪಾಂತರದ ರೋಚ'ಕತೆ'

- ಮಲ್ಲಿಕಾರ್ಜುನ ತಿಪ್ಪಾರ

ಕ್ರಿಕೆಟ್‌ ಅನ್ನು ಧರ್ಮದ ರೀತಿಯಲ್ಲಿಆರಾಧಿಸುವ ಭಾರತದಲ್ಲಿಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಹಾಗೂ ಭಾರತೀಯ ತಂಡದ ನಡುವೆ ಹಗಲು-ರಾತ್ರಿ ಟೆಸ್ಟ್‌ ಕ್ರಿಕೆಟ್‌ ನಡೆಯುತ್ತಿದೆ. ಇದು ಜನರ ಅಭಿರುಚಿಗೆ ಅನುಗುಣವಾಗಿ ಕ್ರಿಕೆಟ್‌ ಕಾಣುತ್ತಿರುವ ರೂಪಾಂತರಕ್ಕೆ ಸಾಕ್ಷಿ. ಆಂಗ್ಲರಿಂದ 18ನೇ ಶತಮಾನದಲ್ಲಿಪರಿಚಯವಾದ ಈ ‘ಸಭ್ಯ ಆಟ’, ಆಯಾ ಕಾಲ ಘಟ್ಟದ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿದೆ. ಐದು ದಿನದ ಟೆಸ್ಟ್‌, ಏಕ ದಿನ, 20ಟ್ವೆಂಟಿ, 10 ಓವರ್‌... ಹೀಗೆ ಕ್ರಿಕೆಟ್‌ ತನ್ನ ಸ್ವರೂಪವನ್ನು ಬದಲಿಸಿಕೊಂಡು ಜನರ ಮನಸ್ಸನ್ನು ಗೆಲ್ಲುತ್ತಿದೆ. ಬದಲಾವಣೆಯ ಪಿಚ್‌ನಲ್ಲಿಕ್ರಿಕೆಟ್‌ ಬೆಳೆದು ಬಂದ ಬಗೆ ಇಲ್ಲಿದೆ.

ಟೆಸ್ಟ್‌ ಕ್ರಿಕೆಟ್‌ನ ಟೆಸ್ಟ್‌!
‘ಟೆಸ್ಟ್‌ ಕ್ರಿಕೆಟ್‌’ ಕ್ರಿಕೆಟ್‌ನ ಅತ್ಯುತ್ತಮ ಮಾದರಿ ಇದು. ಒಬ್ಬ ಆಟಗಾರನ ಕ್ರಿಕೆಟ್‌ ಕೌಶಲಗಳು ಅನಾವರಣಗೊಳ್ಳುವುದೇ ಟೆಸ್ಟ್‌ ಕ್ರಿಕೆಟ್‌ನಲ್ಲಿಎನ್ನುವುದು ಪಂಡಿತರ ಅಭಿಪ್ರಾಯ. ಐದು ದಿನಗಳ ಕಾಲ ನಡೆಯುವ ಕ್ರಿಕೆಟ್‌ ಅಷ್ಟೇ ‘ಸಭ್ಯ’ ಆಟವೂ ಹೌದು. ಫುಟ್ಬಾಲ್‌, ಹಾಕಿ, ರಗ್ಬಿ ಸೇರಿದಂತೆ ಇತರ ತಂಡ ಆಟಗಳಲ್ಲಿರುಧಿವಂತೆ ಇಲ್ಲಿಹೊಡಿ, ಬಡಿಯಂಥ ಮನೋಧಿಭೂಮಿಕೆ ಇರುವುದಿಲ್ಲ. ಕ್ರಿಕೆಟ್‌ ಆಟ ಎನ್ನುವುದು ತನ್ನ ಪಾಡಿಗೆ ತಾನು ಹರಿದುಧಿಕೊಂಡು ಹೋಗುವ ಪ್ರಶಾಂತ ನದಿ ಇದ್ದ ಹಾಗೆ(ಇತ್ತೀಚಿನ ವರ್ಷಗಳಲ್ಲಿಈ ಸಭ್ಯ ಆಟಕ್ಕೆ ಮಸಿ ಬಳಿಯುವ ಘಟನೆಗಳು ನಡೆಯುತ್ತಿವೆ ಎಂಬುದು ಬೇರೆ ಮಾತು). ಕ್ರಿಕೆಟ್‌ ಇತಿಹಾಸವನ್ನು ಕೆದಕುತ್ತಾ ಹೋದರೆ ಅದು ನಿಮ್ಮನ್ನು 18ನೇ ಶತಮಾನಕ್ಕೆ ಕರೆದೊಯ್ಯುತ್ತದೆ. ಆಂಗ್ಲರ ನಾಡಿನಲ್ಲಿಜನಿಸಿದ ಈ ಕ್ರಿಕೆಟ್‌ ಆ ನಂತರ, ಭಾರತವೂ ಸೇರಿದಂತೆ ಇಂಗ್ಲೆಂಡ್‌ನ ವಸಾಹತುಶಾಹಿ ನಾಡುಗಳಲ್ಲಿಜನಪ್ರಿಯಧಿಗೊಂಡಿತು. 1877ರ ಮಾರ್ಚ್‌ 15ರಿಂದ 19ರ ವರೆಗೆ ಜಗತ್ತಿನ ಮೊದಲ ಅಧಿಕೃತ ಟೆಸ್ಟ್‌ ಕ್ರಿಕೆಟ್‌ ನಡೆಧಿಯಿತು. ಇಂಗ್ಲೆಂಡ್‌ ಮತ್ತು ಆಸ್ಪ್ರೇಲಿಯಾ ನಡುವೆ ಆಸ್ಪ್ರೇಲಿಯಾದ ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿನಡೆದ ಈ ಪಂದ್ಯದಲ್ಲಿಇಂಗ್ಲೆಂಡ್‌ 45 ರನ್‌ಗಳಿಂದ ಗೆಲುವು ಸಾಧಿಸಿತು. ವಿಚಿತ್ರ ಎಂದರೆ, 1977ರಲ್ಲಿಟೆಸ್ಟ್‌ ಕ್ರಿಕೆಟ್‌ಗೆ 100 ವರ್ಷ ತುಂಬಿದ ಸಂದರ್ಭದಲ್ಲಿಇಂಗ್ಲೆಂಡ್‌ ಮತ್ತು ಆಸ್ಪ್ರೇಲಿಯ ನಡುವೆ ನಡೆದ ಪಂದ್ಯದಲ್ಲಿಆಸ್ಪ್ರೇಲಿಯಾ 45 ರನ್‌ಗಳಿಂದ ಗೆಲವು ಸಾಧಿಸಿತು! ಸದ್ಯ ಭಾರತೀಯ ಕ್ರಿಕೆಟ್‌ ತಂಡ ಪಟ್ಟಿಯಲ್ಲಿಅಗ್ರಸ್ಥಾನಿ.





ಟ್ವೆಂಟಿ 20 ಯುಗಾರಂಭ
ಐದು ದಿನಗಳ ಟೆಸ್ಟ್‌ ಕ್ರಿಕೆಟ್‌ನಿಂದ ಒಂದು ದಿನದ ಕ್ರಿಕೆಟ್‌ನ ಅನುಭವ ಹಾಗೂ ಆಟದ ಸವಿಯನ್ನು ಸವಿಯುತ್ತಿದ್ದ ಜನರಿಗೆ ಅದು ಕೂಡ ದೀರ್ಘ ಅವಧಿಯ ಕ್ರಿಕೆಟ್‌ ಅನಿಸಲಾರಂಭಿಸಿತು. ಆಗ ಇದಕ್ಕೆ ಪರ್ಯಾಯ ಹುಟ್ಟಿಕೊಂಡಿದ್ದೇ ಟ್ವೆಂಟಿ 20 ಕ್ರಿಕೆಟ್‌ ಮಾದರಿ. ಟ್ವೆಂಟಿ20 ಮಾದರಿಯ ದೇಸಿ ಟೂರ್ನಿಯನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ 2003ರಲ್ಲಿಪರಿಚಯಿಸಿತು. ಈ ಮಾದಧಿರಿಯ ಕ್ರಿಕೆಟ್‌ನಲ್ಲಿಎರಡೂ ತಂಡಗಳು ತಲಾ 20 ಓವರ್‌ಗಳ ಕ್ರಿಕೆಟ್‌ ಆಡುತ್ತವೆ. ಆ ಬಳಿಕ ಐಸಿಸಿ ಮಾದರಿಗೆ ಅಧಿಕೃತ ಮುದ್ರೆಯನ್ನು ಒತ್ತಿತು. ಮೂರು ಗಂಟೆಗಳಲ್ಲಿಈ ಆಟ ಮುಗಿದು ಬಿಡುತ್ತದೆ. ಈಗ ಟ್ವೆಂಟಿ20 ಅತ್ಯಂತ ಜನಪ್ರಿಯ ಕ್ರಿಕೆಟ್‌ ಮಾದರಿಯಾಗಿದ್ದು, ಅಂತಾಧಿರಾಷ್ಟ್ರೀಯ ಕ್ರಿಕೆಟ್‌ ಆಡುವ ಬಹುತೇಕ ರಾಷ್ಟ್ರಗಳು ಈ ಮಾದರಿಯನ್ನು ಅಳವಡಿಸಿಕೊಂಡಿವೆ. 2007ರಿಂದ ಐಸಿಸಿ 20ಟ್ವೆಂಟಿ ವಿಶ್ವ ಕಪ್‌ ಕೂಡ ಪರಿಚಯಿಸಿತು. ಭಾರತ ಕ್ರಿಕೆಟ್‌ ತಂಡ ಮೊದಲ ವಿಶ್ವ ಚಾಂಪಿಯನ್‌ ಆಯಿತು. ಪ್ರತಿ ಎರಡು ವರ್ಷಕ್ಕೊಮ್ಮೆ ವಿಶ್ವಕಪ್‌ ಪಂದ್ಯಾವಳಿ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿಟ್ವೆಂಟಿ20 ಕ್ರಿಕೆಟ್‌ ಬದಲಿಗೆ ಟೆನ್‌10 ಕ್ರಿಕೆಟ್‌ ಕೂಡ ಆಡಲಾಗುತ್ತಿದೆ. ಹಲವು ಕ್ರಿಕೆಟ್‌ ಅಕಾಡೆಮಿ ಮತ್ತು ಸ್ಥಳೀಯ ಟೂರ್ನಾಧಿಮೆಂಟ್‌ಗಳಲ್ಲಿಈ ಮಾದರಿಯ ಕ್ರಿಕೆಟ್‌ ಆಟ ಬಳಕೆಯಲ್ಲಿದೆ.

ಜರ್ಸಿ ರೂಪಾಂತರ
ಈಗ ಬಣ್ಣಬಣ್ಣದ ಜರ್ಸಿ ತೊಟ್ಟು ಆಡುವ ಕ್ರಿಕೆಟ್‌ ಆಟಗಾರರು ಹಿಂದೊಮ್ಮೆ ಏಕದಿನ ಕ್ರಿಕೆಟ್‌ ಆಗಲಿ, ಟೆಸ್ಟ್‌ ಕ್ರಿಕೆಟ್‌ ಆಗಲಿ ಬಿಳಿ ಬಣ್ಣದ ಜರ್ಸಿ ತೊಟ್ಟು ಆಡಬೇಕಿತ್ತು. ಆದರೆ, ಕಾಲದ ಅಗತ್ಯ ಮತ್ತು ಕ್ರೀಡೆಯ ಉನ್ನತೀಕರಣದ ಭಾಗವಾಗಿ 1951ರಲ್ಲಿಒಂದು ದಿನದ ಕ್ರಿಕೆಟ್‌ ಆರಂಭವಾಯಿತು. 1971ರಲ್ಲಿಮೊದಲ ಅಂತಾರಾಷ್ಟ್ರೀಯ ಏಕ ದಿನ ಪಂದ್ಯ ನಡೆಯಿತು. ಮುಂದೆ 1992ರ ವಿಶ್ವ ಕಪ್‌ವರೆಗೂ ಒಂದು ದಿನದ ಕ್ರಿಕೆಟ್‌ನಲ್ಲಿಆಟಗಾರರು ಬಿಳಿ ಬಣ್ಣದ ಜರ್ಸಿ ತೊಡುತ್ತಿದ್ದರು. ಆ ನಂತರ ಬಣ್ಣಬಣ್ಣದ ಜರ್ಸಿ ತೊಡಲು ಅವಕಾಶ ಕಲ್ಪಿಸಲಾಯಿತು. ಒಂದೊಂದು ರಾಷ್ಟ್ರ ಒಂದೊಂದು ಬಣ್ಣಕ್ಕೆ ಅಂಟಿಕೊಂಡಿವೆ. ಭಾರತೀಯ ಕ್ರಿಕೆಟ್‌ ತಂಡ ನೀಲಿ ಬಣ್ಣ ಹಾಗೂ ಅದಕ್ಕೆ ಹೊಂದುವ ಬಣ್ಣದ ಜರ್ಸಿಗಳನ್ನು ತೊಡುತ್ತದೆ. ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಂತೂ ತೀರಾ ಇತ್ತೀಚಿನವರೆಗೂ ಕೇವಲ ಬಿಳಿ ಬಣ್ಣದ ಜರ್ಸಿ ತೊಟ್ಟು ಕೊಳ್ಳಬೇಕಿತ್ತು. ಆದರೆ, ಇದೀಗ ಟೆಸ್ಟ್‌ನಲ್ಲೂಬಿಳಿ ಬಣ್ಣದ ಜರ್ಸಿ ಮೇಲೆ ಆಟಗಾರರ ಹೆಸರು ಮತ್ತು ನಂಬರ್‌ ಮುದ್ರಿಸಲಾಗುತ್ತಿದೆ.

ಐಪಿಎಲ್‌ ಎಂಬ ಕಮಾಲ್‌
ಕ್ರಿಕೆಟ್‌ನ ಲೆಕ್ಕಾಚಾರ ಮತ್ತು ಗ್ರಾಮರ್‌ ಬದಲಿಸಿ ಕ್ರಾಂತಿಕಾರಿ ಬದಲಾವಣೆಯೇ ಐಪಿಎಲ್‌. ಇದರ ಹುಟ್ಟಿಗೆ ಖಾಸಗಿ ಕ್ರಿಕೆಟ್‌ ಟೂರ್ನಿ ಐಸಿಎಲ್‌(ಇಂಡಿಯನ್‌ ಕ್ರಿಕೆಟ್‌ ಲೀಗ್‌) ಕಾರಣವಾಯಿತು. ಆದರೆ, ಇದಕ್ಕಾವುದೇ ಅಧಿಕೃತ ಮಾನ್ಯತೆ ಇರಲಿಲ್ಲ. ಆದರೂ, ಹಲವು ಆಟಗಾರರು, ಕ್ರಿಕೆಟ್‌ ಮಂಡಳಿ ಸದಸ್ಯರು ಈ ಲೀಗ್‌ನ ಭಾಗವಾಗತೊಡಗಿದರು. ಆಗ ಬಿಸಿಸಿಐ ‘ಇಂಡಿಯನ್‌ ಪ್ರಿಮೀಯರ್‌ ಲೀಗ್‌-ಐಪಿಎಲ್‌’ ಪರಿಚಯಿಸಿತು. ಇದಕ್ಕೀಗ ಯಶಸ್ವಿ ಟೂರ್ನಮೆಂಟ್‌ ಎಂಬ ಹೆಗ್ಗಳಿಕೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ರಾಷ್ಟ್ರಗಳ ನಡುವೆ ನಡೆದರೆ, ಐಪಿಎಲ್‌ ರಾಷ್ಟ್ರಗಳ ಗಡಿಗಳನ್ನೇ ಅಳಿಸಿ ಹಾಕಿತು. ಅಂತಾರಾಷ್ಟ್ರೀಯ ಆಟಗಾರರು ಐಪಿಎಲ್‌ ಭಾಗವಾಗಿ ಆಡ ತೊಡಗಿದ್ದರಿಂದ ಕ್ರಿಕೆಟ್‌ಗೆ ಹೊಸ ಖದರ್‌ ಬಂತು. 2008ರಲ್ಲಿಆರಂಭವಾದ ಐಪಿಎಲ್‌ ಈ ವರೆಗೆ 12 ಆವೃತ್ತಿ ಕಂಡಿದೆ. ಹಣಕಾಸಿನ ವ್ಯವಹಾರದಲ್ಲೂಐಪಿಎಲ್‌ ಎಲ್ಲಆಟಗಳಿಗಿಂತ ಮುಂದಿದೆ! 2019ರ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ 6.9 ಬಿಲಿಯನ್‌ ಡಾಲರ್‌ ಅಂದರೆ 47,500 ಕೋಟಿ ರೂ.! 2015ರ ಐಪಿಎಲ್‌ ಆವೃತ್ತಿ ಭಾರತದ ಜಿಡಿಪಿ 1150 ಕೋಟಿ ರೂಪಾಯಿ ಕಾಣಿಕೆ ನೀಡಿದೆಯಂತೆ! ಸದ್ಯ ಎಂಟು ತಂಡಗಳು ಐಪಿಎಲ್‌ ಆಡುತ್ತಿವೆ. ಮುಂಬೈ ಇಂಡಿಯನ್ಸ್‌ ನಾಲ್ಕು ಬಾರಿ ಟೈಟಲ್‌ ಗೆಲ್ಲುವ ಮೂಲಕ ಅಗ್ರಸ್ಥಾನಿಯಾಗಿದೆ. ಐಪಿಎಲ್‌ ಮಾದರಿಯಲ್ಲೇ ಕ್ರಿಕೆಟ್‌ ಆಡುವ ರಾಷ್ಟ್ರಗಳಲ್ಲಿಅನೇಕ ಲೀಗ್‌ಗಳು ಹುಟ್ಟಿಕೊಂಡಿವೆ. ಭಾರತದಲ್ಲೇ ಕೆಪಿಎಲ್‌, ಟಿಪಿಎಲ್‌ನಂಥ ಅನೇಕ ರಾಜ್ಯಮಟ್ಟದ ಟ್ವೆಂಟ್‌20 ಲೀಗ್‌ಗಳು ಜನ್ಮ ತಳೆದಿವೆ. ಇಷ್ಟೆಲ್ಲದರೂ ಹೊರತಾಗಿಯೂ ಐಪಿಎಲ್‌ ಏನೂ ವಿವಾದ ಮುಕ್ತವಾಗಿಲ್ಲ. ಮ್ಯಾಚ್‌ ಫಿಕ್ಸಿಂಗ್‌ನಂಥ ಕಳಂಕಗಳು ಮೆತ್ತಿಕೊಂಡಿವೆ.

ಏಕ ದಿನ ಹುಟ್ಟಿದ್ದೇ ಭಾರತದಲ್ಲಿ!
5 ದಿನಗಳ ಕಾಲ ಆಡುವ ಟೆಸ್ಟ್‌ ಕ್ರಿಕೆಟ್‌ ಜನರಿಗೆ ಬೋರ್‌ ಎನಿಸುವ ಭಾವ ಎಲ್ಲೆಡೆ ಆವರಿಸುವ ಸಮಯದಲ್ಲೇ ಏಕ ದಿನ ಕ್ರಿಕೆಟ್‌ ಮಾದರಿ ಆರಂಭವಾಯಿತು. ಆ ಬಳಿಕ, ಹಗಲು-ರಾತ್ರಿ ಪಂದ್ಯ ಆಡುವುದನ್ನು ರೂಪಿಸಿಕೊಳ್ಳಲಾಯಿತು. ನಿಮಗೊಂದು ವಿಷ್ಯ ಗೊತ್ತಾ..? ವಿಶ್ವದ ಮೊದಲ ಏಕ ದಿನ ಪಂದ್ಯ ನಡೆದಿದ್ದು ಭಾರತದಲ್ಲೇ! ಹೌದು, 1951ರಲ್ಲಿಕೇರಳದ ತ್ರಿಪ್ಪುನಿಥುರಾ ಎಂಬ ಸಣ್ಣ ಪಟ್ಟಣದಲ್ಲಿಮಾಜಿ ಕ್ರಿಕೆಟಿಗ ಕೆ.ವಿ.ಕೇಳಪ್ಪನ್‌ ಅವರು ಮೊದಲ ಬಾರಿಗೆ ಒಂದು ದಿನದ ಕ್ರಿಕೆಟ್‌ ಆರಂಭಿಸಿದರು. ನಂತರ ಇದೇ ಮಾದರಿಯನ್ನು 1962 ಮೇ 2ರಂದು ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ ತಂಡಗಳು ಅಳವಡಿಸಿಕೊಂಡವು. ಬಳಿಕ 1971ರಲ್ಲಿಮೊದಲ ಅಂತಾರಾಷ್ಟ್ರೀಯ ಏಕ ದಿನ ಕ್ರಿಕೆಟ್‌ ಪಂದ್ಯವನ್ನು ಆಸ್ಪ್ರೇಲಿಯಾದ ಮೇಲ್ಬೋರ್ನ್‌ನಲ್ಲಿಆಡಿಸಲಾಯಿತು. ಆಸ್ಪ್ರೇಲಿಯಾ ಉದ್ದಿಮೆದಾರ ಕೆರಿ ಪಾರ್ಕರ್‌ ಒಂದು ದಿನದ ಮಾದರಿ ಕ್ರಿಕೆಟ್‌ಗೆ ವಾಣಿಜ್ಯ ಸ್ಪರ್ಶ ನೀಡಿದರು. ಅಲ್ಲದೇ ಹಗಲು-ರಾತ್ರಿ ಪಂದ್ಯಕ್ಕೂ ಕಾರಣರಾದರು. ಜತೆಗೆ, ವಿಶ್ವ ಏಕ ದಿನ ಕ್ರಿಕೆಟ್‌ ಪಂದ್ಯ ಕೂಡ ಆರಂಭವಾಯಿತು. 1979ರಲ್ಲಿಮೊದಲ ವಿಶ್ವ ಕಪ್‌ ಪಂದ್ಯಾವಳಿ ಆರಂಭವಾಯಿತು. ಮೊದಲ ಎರಡು ಪಂದ್ಯಾವಳಿಯಲ್ಲಿ ವೆಸ್ಟ್‌ ಇಂಡೀಸ್‌ ವಿಶ್ವ ಚಾಂಪಿಯನ್‌ ಆಯಿತು. 1983ರ ವರ್ಲ್ಡ್‌ ಕಪ್‌ನಲ್ಲಿಯಾರೂ ಊಹಿಸದ ರೀತಿಯಲ್ಲಿಭಾರತ ಚಾಂಪಿಯನ್‌ ಆಗಿ, ವೆಸ್ಟ್‌ ಇಂಡೀಸ್‌ ಹ್ಯಾಟ್ರಿಕ್‌ ಕನಸನ್ನು ನುಚ್ಚುನೂರು ಮಾಡಿತು.

ಓವರ್‌ಗಳು ಬದಲಾದವು
ಐದು ದಿನಗಳ ಟೆಸ್ಟ್‌ನಲ್ಲಿದಿನಕ್ಕೆ ಕನಿಷ್ಠ 90 ಓವರ್‌ ಇಲ್ಲವೇ ಆರು ಗಂಟೆಗಳ ಕಾಲ ಕ್ರಿಕೆಟ್‌ ಆಡಲಾಗುತ್ತದೆ. ಆದರೆ, ಏಕ ದಿನದಲ್ಲಿಗರಿಷ್ಠ 50 ಓವರ್‌ಗಳ ಕ್ರಿಕೆಟ್‌ ಆಡಬಹುದು. ಏಕ ದಿನ ಪಂದ್ಯ ಪರಿಚಯಗೊಂಡಾಗ ಅದು ಗರಿಷ್ಠ 60 ಓವರ್‌ ಆಡಬಹುದಿತ್ತು. ಆ ಮೇಲೆ ಅದನ್ನು 40 ಓವರ್‌ಗಳಿಗೆ ಇಳಿಸಲಾಯಿತು. ಈಗ ಅಂತಿಮವಾಗಿ 50 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಟ್ವೆಂಟಿ20 ಕ್ರಿಕೆಟ್‌ನಲ್ಲಿಗರಿಷ್ಠ 20 ಓವರ್‌ ಆಡಲಾಗುತ್ತದೆ.

ಪಿಂಕ್‌ ಬಾಲು ಡೇ ಆ್ಯಂಡ್‌ ನೈಟು
ಟೆಸ್ಟ್‌ ಕ್ರಿಕೆಟ್‌ ಅನ್ನು ಹಗಲು ಹೊತ್ತಲ್ಲಿಮಾತ್ರ ಆಡಲಾಗುತ್ತಿತ್ತು. ಆದರೆ, 2015ರಿಂದ ಇತ್ತೀಚೆಗೆ ಹಗಲು-ರಾತ್ರಿ(ಡೇ ಆ್ಯಂಡ್‌ ನೈಟ್‌) ಆಡಲಾಗುತ್ತಿದೆ. ಟೆಸ್ಟ್‌ ಕ್ರಿಕೆಟ್‌ ಜನಪ್ರಿಯಗೊಳಿಸುವ ಭಾಗವಾಗಿಯೇ ಈ ಮಾದರಿ ಅನುಸರಿಸಲಾಗುತ್ತಿದೆ. ಮೊದಲ ಹಗಲು-ರಾತ್ರಿ ಟೆಸ್ಟ್‌ ಕ್ರಿಕೆಟ್‌ 2015ರ ನವೆಂಬರ್‌ 27ರಿಂದ ಡಿಸೆಂಬರ್‌ 1ರ ವರೆಗೆ ನ್ಯೂಜಿಲೆಂಡ್‌ ಮತ್ತು ಆಸ್ಪ್ರೇಲಿಯಾ ನಡುವೆ ಓವಲ್‌ನ ಅಡಿಲೇಡ್‌ ಕ್ರೀಡಾಂಗಣದಲ್ಲಿನಡೆಯಿತು. ಆ ನಂತರ ಒಂದೊಂದು ರಾಷ್ಟ್ರಗಳು ಈ ಹೊಸ ಮಾದರಿ ಟೆಸ್ಟ್‌ ಕ್ರಿಕೆಟ್‌ ಆಡಲು ಮುಂದಾಗುತ್ತಿವೆ. ಸದ್ಯ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಹಗಲು ರಾತ್ರಿ ಟೆಸ್ಟ್‌ ಕ್ರಿಕೆಟ್‌ ಚಾಲ್ತಿಯಲ್ಲಿದೆ. ಇನ್ನು ಈ ಮಾದರಿಯ ಕ್ರಿಕೆಟ್‌ನಲ್ಲಿರೆಡ್‌ ಬಾಲ್‌ ಬದಲಿಗೆ ಪಿಂಕ್‌ ಬಳಸಲಾಗುತ್ತಿದೆ. ಒನ್‌ ಡೇ ಕ್ರಿಕೆಟ್‌ನಲ್ಲಿವೈಟ್‌ ಬಾಲ್‌ ಬಳಕೆಯಾಗುತ್ತದೆ.


ಈ ಲೇಖನವು ವಿಜಯ ಕರ್ನಾಟಕದ 23 ನವೆಂಬರ್ 2019ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಕಾಮೆಂಟ್‌ಗಳಿಲ್ಲ: