ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ , ಅಂತಾರಾಷ್ಟ್ರೀಯ ಸಕ್ರಿಯ ಫುಟ್ಬಾಲಿಗರ ಪೈಕಿ ಅತಿ ಹೆಚ್ಚು ‘ಗೋಲ್’ ಬಾರಿಸಿದವರ ಪಟ್ಟಿಯಲ್ಲಿಮೆಸ್ಸಿಯನ್ನೇ ಮೀರಿಸಿದ್ದಾರೆ!
ಮಲ್ಲಿಕಾರ್ಜುನ ತಿಪ್ಪಾರ
ಆರಾಧಿಸುವ ವ್ಯಕ್ತಿಯ ಸಾಧನೆಯನ್ನು ನೀವೇ ಹಿಂದಿಕ್ಕಿ ಮುನ್ನಡೆದರೆ ಆಗ ಆಗುವ ಆನಂದವನ್ನು ಅಭಿವ್ಯಕ್ತಿಸಲಾದೀತೆ? ಏನಿದ್ದರೂ ಆ ಅನುಭವವನ್ನು ಅನುಭವಿಸಬೇಕಷ್ಟೇ. ಇಂಥದ್ದೇ ಮನಸ್ಥಿತಿಯಲ್ಲಿದ್ದಾರೆ ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆತ್ರಿ.
‘ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗ’ ಎಂದು ಗುರುತಿಸಿಕೊಳ್ಳುತ್ತಿರುವ ಅರ್ಜೆಂಟೀನಾದ ಆಟಗಾರ ಲಿಯೋನೆಲ್ ಮೆಸ್ಸಿ ಸಾಧನೆಯನ್ನು ನಮ್ಮ ಸುನಿಲ್ ಹಿಂದಿಕ್ಕಿದ್ದಾರೆ. ಸಕ್ರಿಯ ಫುಟ್ಬಾಲ್ ಆಟಗಾರರ ಪೈಕಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲ್‌ಗಳನ್ನು ಗಳಿಸಿದವರು ಪಟ್ಟಿಯಲ್ಲಿಪೋರ್ಚುಗಲ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ(103) ಅಗ್ರ ಸ್ಥಾನದಲ್ಲಿದ್ದರೆ, ಲಿಯೋನೆಲ್ ಮೆಸ್ಸಿ 72 ಗೋಲುಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರು. ಈಗ ಭಾರತದ ಸುನಿಲ್ ಬಾಂಗ್ಲಾದೇಶದ ವಿರುದ್ಧ ಏಷ್ಯಾ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ2 ಗೋಲು ಬಾರಿಸಿ, ತಮ್ಮ ಗೋಲುಗಳ ಸಂಖ್ಯೆಯನ್ನು 74ಕ್ಕೆ ಹೆಚ್ಚಿಸಿಕೊಂಡು, ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈವರೆಗೆ ಅವರು 117 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.
ಅಂತಾರಾಷ್ಟ್ರೀಯ ಗೋಲುಗಳ ಪಟ್ಟಿಯಲ್ಲಿಮೆಸ್ಸಿಯನ್ನು ಅವರು ಹಿಂದೆ ಹಾಕುತ್ತಿದ್ದಂತೆ, ಮೆಸ್ಸಿಗಿಂತ ಯೇ ಶ್ರೇಷ್ಠ ಎಂಬ ವಾದ ಸೋಷಿಯಲ್ ಮೀಡಿಯಾಗಳಲ್ಲಿಜೋರಾಗಿತ್ತು. ಇದಕ್ಕೆಲ್ಲಉತ್ತರ ನೀಡಿರುವ ಸುನಿಲ್, ‘‘ಮೆಸ್ಸಿಯ ಅಸಂಖ್ಯ ಅಭಿಮಾನಿಗಳಲ್ಲಿನಾನೂ ಒಬ್ಬ. ನನ್ನ ಮತ್ತು ಅವರ(ಮೆಸ್ಸಿ) ಮಧ್ಯೆ ಹೋಲಿಕೆ ಸರಿಯಲ್ಲ,’’ ಎಂದಿದ್ದಾರೆ. ‘‘ಲಿಯೋನೆಲ್ ಮೆಸ್ಸಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ, ಕೈ ಕುಲುಕಿ ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳುವೆ,’’ ಎನ್ನುವ ಅವರಿಗೆ ಅದು ಪಕ್ಕಾ ಫ್ಯಾನ್‌ಬಾಯ್ ಮೊಮೆಂಟ್!
ಕ್ರಿಕೆಟ್‌ನ್ನೇ ಉಸಿರಾಡುವ ಭಾರತದಂಥ ರಾಷ್ಟ್ರದಲ್ಲಿಫುಟ್ಬಾಲ್ ಆಟಗಾರರೊಬ್ಬರ ಈ ಸಾಧನೆಗೆ ಹೆಚ್ಚಿನ ಮಹತ್ವವಿದೆ. ಕ್ರಿಕೆಟ್‌ನ ಅಬ್ಬರದಲ್ಲಿಫುಟ್ಬಾಲ್ ಸೇರಿದಂತೆ ಇತರ ಆಟಗಳಿಗೆ ಪ್ರಾಧಾನ್ಯ, ಪ್ರಾಯೋಜಕತ್ವ ಸಿಗುವುದು ಕಷ್ಟ. ಹಾಗಿದ್ದೂ, ಹಲವು ಗುಂಪು ಆಟಗಾರರು ಮತ್ತು ಅಥ್ಲೀಟ್‌ಗಳು ದೇಶದ ಕೀರ್ತಿಯನ್ನು ಆಗಾಗ ಗಗನಕ್ಕೆ ಏರಿಸುತ್ತಲೇ ಇರುತ್ತಾರೆ. ಅಂಥ ಅಭಿಮಾನದ ಕ್ಷ ಣಕ್ಕೆ ಸುನಿಲ್ ಈಗ ಕಾರಣವಾಗಿದ್ದಾರೆ.
ದಂತಕತೆ ಬೈಚುಂಗ್ ಭುಟಿಯಾ ಬಳಿಕ ಸುನಿಲ್ ಛೆತ್ರಿ ಭಾರತೀಯ ಫುಟ್ಬಾಲ್ ನೊಗವನ್ನು ಸಮರ್ಥವಾಗಿ ಎಳೆಯುತ್ತಿದ್ದಾರೆ. ಇಂಡಿಯನ್ ಸೂಪರ್ ಲೀಗ್(ಐಸಿಎಲ್)ನಲ್ಲಿಬೆಂಗಳೂರು ಫುಟ್ಬಾಲ್ ಕ್ಲಬ್(ಬಿಎಫ್‌ಸಿ) ಪರವಾಗಿಯೂ ಆಡುತ್ತಿರುವ ‘ಕ್ಯಾಪ್ಟನ್ ಫೆಂಟಾಸ್ಟಿಕ್’ ಸುನೀಲ್ ಛೆತ್ರಿ ಹುಟ್ಟಿದ್ದು ಈಗಿನ ತೆಲಂಗಾಣದ ಸಿಕಂದರಾಬಾದ್‌ನಲ್ಲಿ1984ರ ಆಗಸ್ಟ್ 3ರಂದು. ತಂದೆ ಕೆ.ಬಿ.ಛೆತ್ರಿ, ತಾಯಿ ಸುಶೀಲಾ. ತಂದೆ ಭಾರತೀಯ ಸೇನೆಯಲ್ಲಿಎಲೆಕ್ಟ್ರಾನಿಕ್ಸ್ ಆ್ಯಂಡ್ ಮೆಕಾನಿಕಲ್ ಎಂಜಿನಿಯರ್ ಅಧಿಕಾರಿ. ಸುನಿಲ್ ಅವರು ತಂದೆ ಅವರೂ ಭಾರತೀಯ ಸೇನೆಯ ಪರವಾಗಿ ಫುಟ್ಬಾಲ್ ಆಡಿದ್ದಾರೆ. ತಾಯಿ ಸುಶೀಲಾ ಹಾಗೂ ಅವರ ಇಬ್ಬರು ಅವಳಿ ಸಹೋದರಿಯರು ನೇಪಾಳದ ಮಹಿಳಾ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಆಡುತ್ತಿದ್ದರು. ತಂದೆ ತಾಯಿ ಇಬ್ಬರೂ ಫುಟ್ಬಾಲ್ ಆಟಗಾರರು; ಸುನಿಲ್‌ಗೆ ಫುಟ್ಬಾಲ್ ರಕ್ತಗತ.
ತಂದೆ ಸೇನೆಯಲ್ಲಿಅಧಿಕಾರಿಯಾಗಿದ್ದರಿಂದಾಗಿ ಸುನಿಲ್ ಶಾಲಾ ಶಿಕ್ಷ ಣ ಒಂದೇ ರಾಜ್ಯಕ್ಕೆ ಸಿಮೀತವಾಗಲಿಲ್ಲ. ಸಿಕ್ಕಿಮ್‌ನ ಗ್ಯಾಂಗ್ಟಕ್‌ನ ಬಹಾಯಿ ಸ್ಕೂಲ್, ಪಶ್ಚಿಮ ಬಂಗಾಳದ ಡಾರ್ಜೀಲಿಂಗ್ ಬೆತ್ನೀಸ್ ಸ್ಕೂಲ್, ಕೋಲ್ಕೊತಾದ ಲೊಯೊಲಾ ಸ್ಕೂಲ್ ಮತ್ತು ದಿಲ್ಲಿಯ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿಶಾಲಾ ಶಿಕ್ಷ ಣವನ್ನು ಪೂರೈಸಿದ್ದಾರೆ. ಕೋಲ್ಕೊತಾದ ಅಶುತೋಷ ಕಾಲೇಜ್‌ನಲ್ಲಿಪ್ರವೇಶ ಪಡೆದು, 12ನೇ ತರಗತಿಯಲ್ಲಿಓದುತ್ತಿದ್ದಾಗಲೇ 2001ರಲ್ಲಿಮಲೇಷ್ಯಾದಲ್ಲಿಆಯೋಜಿಸಲಾಗಿದ್ದ ಏಷ್ಯನ್ ಸ್ಕೂಲ್ ಚಾಂಪಿಯನ್‌ಶಿಪ್‌ಗೆ ಭಾರತೀಯ ತಂಡಧಿವನ್ನು ಪ್ರತಿನಿಧಿಸುವ ಅವಕಾಶ ಒದಗಿ ಬಂತು. ಕಾಲೇಜು ಶಿಕ್ಷ ಣಧಿಧಿಧಿವನ್ನು ಅರ್ಧಕ್ಕೆ ಮೊಟಕುಧಿಗೊಳಿಸಧಿಬೇಕಾಧಿಯಿತು. ಮುಂದಿನ ನಾಲ್ಕೈದು ವರ್ಷದಲ್ಲಿಅವರು ಭಾರತೀಯ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಪ್ರವೇಶ ಪಡೆದರು. ನಂತರ ನಡೆದಿದ್ದೆಲ್ಲಇತಿಹಾಸ.
ಸುನಿಲ್ ತಮ್ಮ ಬಹುಕಾಲದ ಗೆಳತಿ ಸೋನಂ ಭಟ್ಟಾಚಾರ್ಯ ಅವರನ್ನು 2017ರಲ್ಲಿಮದುವೆಯಾದರು. ಈ ಸೋನಮ್ ಬೇರೆ ಯಾರೂ ಅಲ್ಲ. ರಾಷ್ಟ್ರೀಯ ಫುಟ್ಬಾಲ್ ತಂಡದ ಮಾಜಿ ಆಟಗಾರ, ಮೋಹನ್ ಬಗಾನ್ ತಂಡದ ದಂತಕತೆ ಸುಬ್ರತ ಭಟ್ಟಾಚಾರ್ಯ ಅವರ ಪುತ್ರಿ. ಇವರು ಛೆತ್ರಿ ಮೆಂಟರ್ ಕೂಡ. ಸುನಿಲ್ ಅವರ ಆಟ ಹಾಗೂ ವ್ಯಕ್ತಿತ್ವದ ಮೇಲೆ ಅವರ ತಾಯಿ ದಟ್ಟ ಪ್ರಭಾವ ಬೀರಿದ್ದಾರೆಂಬುದು ಅವರ ಮಾತುಗಳನ್ನು ಕೇಳಿದರೆ ಅರಿವಾಗುತ್ತದೆ. ‘‘ಆಟದ ಬಗ್ಗೆ ಹೇಳುವುದಾದರೆ ಅದು ನನ್ನ ತಂದೆ, ತಾಯಿಂದಲೇ ಆರಂಭವಾಗುತ್ತದೆ, ವಿಶೇಷವಾಗಿ ನನ್ನ ತಾಯಿ. ತಾಯಿಯೊಂದಿಗೆ ಕೇರಂ, ಚೆಸ್, ಚೀನೀಸ್ ಚೆಕರ್ಸ್ ಮತ್ತು ಇತರ ಹೊರಾಂಗಣ ಕ್ರೀಡೆಗಳನ್ನು ಆಡುವುದು ತೀರಾ ಸಾಮಾನ್ಯವಾಗಿತ್ತು. ನನಗೆ 13 ವರ್ಷವಾಗೋವರೆಗೂ ಈ ಯಾವುದೇ ಆಟದಲ್ಲೂನನ್ನ ತಾಯಿಯನ್ನು ಸೋಲಿಸಲು ನನ್ನಿಂದಾಗಲಿಲ್ಲ. ಅವರೂ ಎಂದು ಸೋಲಲು ಒಪ್ಪುತ್ತಿರಲಿಲ್ಲ. ಸೋಲು ಒಪ್ಪಿಕೊಳ್ಳದಿರುವ ಗುಣ ನನ್ನ ತಾಯಿಯಿಂದಲೇ ಬಂದಿದೆ ನನಗೂ ಬಂದಿದೆ,’’ ಎನ್ನುತ್ತಾರೆ ಅವರು. ಬೈಚುಂಗ್ ಭುಟಿಯಾ ಅವರಿಂದಲೂ ಸಾಕಷ್ಟು ಕಲಿತಿದ್ದೇನೆ. ಅವರ ಸರಳ ವ್ಯಕ್ತಿತ್ವ ತುಂಬಾ ಇಷ್ಟ ಎನ್ನುತ್ತಾರೆ ಅವರು.
ರಾಷ್ಟ್ರೀಯ ತಂಡದ ಪರವಾಗಿ ಅತಿ ಹೆಚ್ಚು ಪಂದ್ಯಗಳು ಹಾಗೂ ಗೋಲು ಬಾರಿಸಿರುವ ದಾಖಲೆಯನ್ನು ಹೊಂದಿರುವ ಸುನಿಲ್‌ಅವರು ತಮ್ಮ ವೃತ್ತಿಪರ ಫುಟ್ಬಾಲ್ ಆಟವನ್ನು 2002ರಲ್ಲಿಏಷ್ಯಾದ ಹಳೆಯ ಕ್ಲಬ್‌ಗಳಲ್ಲಿಒಂದಾಗಿರುವ ಮೋಹನ್ ಬಗಾನ್ ಕ್ಲಬ್‌ನೊಂದಿಗೆ ಆರಂಭಿಸಿಧಿದರು. ಬಳಿಕ ಜೆಸಿಟಿ ಕ್ಲಬ್‌ಗೆ ವಲಸೆ ಬಂದು, 48 ಪಂದ್ಯಗಳಲ್ಲಿ21 ಗೋಲು ಬಾರಿಸಿ ಗಮನ ಸೆಳೆದರು. 2010ರಲ್ಲಿಮೇಜರ್ ಲೀಗ್ ಸಾಕರ್‌ನಲ್ಲಿಕನ್ಸಾಸ್ ಸಿಟಿ ವಿಜಾರ್ಡ್ಸ್‌ನೊಂದಿಗೆ ಗುರುಧಿತಿಸಿಧಿಕೊಂಡರು. ಈ ಮೂಲಕ ವಿದೇಶದ ಕ್ಲಬ್ ಪರವಾಗಿ ಆಟವಾಡಿದ ಭಾರತೀಯ ಉಪಖಂಡದ ಮೂರನೇ ಆಟಗಾರ ಎನಿಸಿಕೊಂಡರು. ಅಲ್ಲಿಂದ ಹಿಂದಿರುಗಿದ ಬಳಿಕ ಚಿರಾಗ್ ಯುನೈಟೆಡ್, ಮೋಹನ್ ಬಗಾನ್ ಪರವಾಗಿ ಐ ಲೀಗ್‌ನಲ್ಲಿಆಡಿದರು. ಮತ್ತೆ ವಿದೇಶಕ್ಕೆ ತೆರಳಿ ಪೋರ್ಚುಗಲ್‌ನ ಸ್ಪೋರ್ಟಿಂಗ್ ಕ್ಲಬ್ ಸೇರಿದರು. 2005ರಲ್ಲಿಭಾರತೀಯ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಸೇರಿ, ತಮ್ಮ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿದರು. ಈ ಪಂದ್ಯದಲ್ಲಿಅವರು ತಮ್ಮ ಮೊದಲ ಅಂತಾರಾಷ್ಟ್ರೀಯ ಗೋಲು ಹೊಡೆದರು.
ಸುನಿಲ್ ಛೆತ್ರಿ ಅವರ ನೆರವಿನಿಂದಾಗಿ ಭಾರತ ತಂಡವು 2007, 2009 ಮತ್ತು 2012ರಲ್ಲಿನೆಹರು ಕಪ್ ಮತ್ತು 2011ರ ಎಸ್‌ಎಎಫ್‌ಎಫ್ ಚಾಂಪಿಯನ್ಶಿಪ್ ಗೆದ್ದುಕೊಂಡಿತು. 2008ರ ಏಷ್ಯನ್ ಫುಟ್ಬಾಲ್ ಕಾನೆಧಿಡೆರಷನ್(ಎಎಫ್‌ಸಿ) ಚಾಲೆಂಜ್ ಕಪ್ ಗೆಲ್ಲುವಲ್ಲಿಯೂ ಅವರ ಪಾತ್ರ ಮಹತ್ವದ್ದಾಗಿತ್ತು. ಈ ಗೆಲುವಿನಿಂದಾಗಿಯೇ ಭಾರತವು 27 ವರ್ಷಗಳ ಬಳಿಕ ಎಎಫ್‌ಸಿ ಏಷ್ಯನ್ ಕಪ್ ಪಂದ್ಯಾವಳಿಯಲ್ಲಿಆಡಲು ಅರ್ಹತೆ ಪಡೆದುಕೊಂಡಿತು. 2007, 2011, 2013, 2014, 2017 ಮತ್ತು 2019 ಹೀಗೆ ದಾಖಲೆಯ ಆರು ಬಾರಿ ಎಐಎಫ್‌ಎಫ್(ಆಲ್ ಇಂಡಿಯಾ ಫುಟ್ಬಾಲ್ ಫೆಡರೆಷನ್) ವರ್ಷದ ಆಟಗಾರ ಎಂದು ಅವರನ್ನು ಹೆಸರಿಸಲಾಗಿದೆ. 2014ರಲ್ಲಿಇವರ ನೇತೃತ್ವದಲ್ಲಿಬೆಂಗಳೂರು ಫುಟ್ಬಾಲ್ ಕ್ಲಬ್ ಚೊಚ್ಚಿಲ ಋುತುವಿನಲ್ಲಿಪ್ರಶಸ್ತಿ ಗೆದ್ದುಕೊಂಡಿತು.
ಭಾರತದಲ್ಲಿಕ್ರಿಕೆಟ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟ ಫುಟ್ಬಾಲ್. 36 ವರ್ಷದ ಸುನಿಲ್ ಭಾರಧಿತೀಯ ಫುಟ್ಬಾಲ್ ತಂಡದ ಧ್ರುವತಾರೆ. ಹೊಸ ಪೀಳಿಗೆಯ ಆಟಗಾರರಿಗೆ ಅವರು ರೋಲ್‌ಮಾಡೆಲ್. ಭಾರತದ ಕ್ರೀಡಾಕ್ಷೇತ್ರದ ಪ್ರಮುಖ ಪ್ರಶಸ್ತಿ ಅರ್ಜುನ್ ಅವಾರ್ಡ್‌ಧಿ (2011), ದೇಶದ ನಾಲ್ಕನೇ ಅತ್ಯುಚ್ಚ ನಾಗರಿಕ ಪ್ರಶಸ್ತಿ ಪದ್ಮಶ್ರೀ ಮತ್ತು ದಿಲ್ಲಿಫುಟ್ಬಾಲ್ ಅಸೋಷಿಯೇಷನ್‌ನ ಫುಟ್ಬಾಲ್ ರತ್ನ ಅವಾರ್ಡ್ ಸಾಧನೆಯ ಕಿರೀಟಧಿವನ್ನು ಅಲಂಕರಿಸಿವೆ. ಶಾರುಖ್ ಖಾನ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಇಷ್ಟಪಡುವ ಅವರಿಗೆ ಸಂಗೀತ ಕೇಳುವುದು ಸಿಕ್ಕಾಪಟ್ಟೆ ಇಷ್ಟ. ಹಾಬಿಯಾಗಿ ಕ್ರಿಕೆಟ್, ಬ್ಯಾಡ್ಮಿಂಟ್, ಟೆನ್ನಿಸ್ ಕೂಡ ಆಡುತ್ತಾರೆ. ಬೆಂಗಳೂರು ಎಫ್‌ಸಿ ಮೂಲಕ ಅವರು ಕನ್ನಡ ನಾಡಿಗೆ ಇನ್ನಷ್ಟು ಹತ್ತಿರವಾಗಿದ್ದೆರಂಬುದೂ ನಮಗೆ ಹೆಮ್ಮೆಯೇ ಸರಿ.