ಶನಿವಾರ, ಜುಲೈ 26, 2008

ಏನೋ ಆಗಿದೆ


ಏನೋ ಆಗಿದೆ
ನನಗಿಂದು
ಮುಂಗಾರು ಮೊದಲ
ಮಳೆ ಬಿದ್ದ ನೆಲದ
ಸುವಾಸನೆಯಂತೆ
ಹರಡಿದೆ ಮನವು
ಬರಿದಾಗಿದ್ದ ಭಾವಗಳು
ಮತ್ತೆ ಮೆಲ್ಲನೆ
ಚಿಗುರೊಡೆದಿವೆ
ಸೂರ್ಯನತ್ತ ಚಾಚಿ
ಮೊಗ್ಗಾಗಿ ಹೂ
ಬಿರಿಯಲು ಎದೆಯೊಳಗೆ
ಏನೋ ಉಲ್ಲಾಸ,
ಸಂಭ್ರಮದ ನರ್ತನ
ಕಾಣದ ಹೃದಯವ
ಕಾಣಲು ಕಾತರಿಸಿವೆ
ಕಣ್ಣಗಳೆರಡು
ಮುಗಿಲಾಚೆ ಮಲಗಿ
ಭೂ ಅಂಚಿನಲ್ಲಿ
ಅಸ್ತಂಗತವಾಗಲು
ಗರಿಗೆದರಿವೆ ಬಯಕೆಗಳು

5 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Its very impressive. I think its ok if we repost this blog.


loan rates

ಅನಾಮಧೇಯ ಹೇಳಿದರು...

wah! super
-athmeeya

-ಮಲ್ಲಿಕಾರ್ಜುನ ಕಲ್ಲೇದೇವರ ಹೇಳಿದರು...

ನಿಮಗೆ ಮುದ ನೀಡುತ್ತಿರುವ ನಿಮ್ಮ ಸಾಹಿತ್ಯದನಲ್ಲಿನ ಕವನಗಳು ಓದಿದವರಿಗೂ ಮುದ ನೀಡುತ್ತವೆ. ಇಂತಹ ಸಾವಿರಾರು ಕವನಗಳು ನಿಮ್ಮ ಸಾಹಿತ್ಯದಲ್ಲಿ ಮೂಡಿ ಬರಲಿ ಎಂದು ಹರಿಸುತ್ತ.....

ನಿಮ್ಮ ಸ್ನೇಹಿತ
-ಮಲ್ಲು ಕಲ್ಲೇದೇವರ

ವೀರೆಶ ಹಿರೇಮಠ ಹೇಳಿದರು...

ಸೊಗಸಾಗಿದೆ ಮಲ್ಲಿಕಾರ್ಜೂನ್

ತೇಜಸ್ವಿನಿ ಹೆಗಡೆ ಹೇಳಿದರು...

ಮುಗಿಲಾಚೆ ಮಲಗಿ
ಭೂ ಅಂಚಿನಲ್ಲಿ
ಅಸ್ತಂಗತವಾಗಲು
ಗರಿಗೆದರಿವೆ ಬಯಕೆಗಳು
ತುಂಬಾ ಚೆನ್ನಾಗಿವೆ ಈ ಸಾಲುಗಳು.