ಭಾನುವಾರ, ಮೇ 2, 2021

Nandurbar DM Dr Rajendra Bharud: 'ಪ್ರಾಣವಾಯು' ನೀಡಿದ ನಂದೂರಬಾರ್ ಡಿಸಿ ಡಾ.ರಾಜೇಂದ್ರ ಭಾರೂಡ್

ಕೋವಿಡ್ಬಿಕ್ಕಟ್ಟಿನ ನಡುವೆ ಆಕ್ಸಿಜನ್ಉತ್ಪಾದನೆಯಲ್ಲಿಜಿಲ್ಲೆಯನ್ನೇ ಸ್ವಾವಲಂಬಿಯಾಗಿಸಿರುವ ನಂದೂರಬಾರ್ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ಅವರ ಜೀವನಗಾಥೆ ಸ್ಫೂರ್ತಿದಾಯಕ. 

 

- ಮಲ್ಲಿಕಾರ್ಜುನ ತಿಪ್ಪಾರ
ಇಡೀ ದೇಶವೇ ಕೋವಿಡ್ಎರಡನೇ ಅಲೆಗೆ ಕೊಚ್ಚಿ ಹೋಗುತ್ತಿದೆ. ವ್ಯವಸ್ಥೆಯ ವೈಫಲ್ಯದ ಪರಿಣಾಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕದೇ ಜನರು ಸಾವಿಗೀಡಾಗುತ್ತಿದ್ದಾರೆ; ಸ್ಮಶಾನಗಳು ಗಿಜಿಗಿಡುತ್ತಿವೆ; ದೂರದೃಷ್ಟಿ ಮತ್ತು ಸಿದ್ಧತೆಯ ಕೊರತೆಯ ಫಲವಾಗಿ ಇಡೀ ದೇಶ ಅನಾಥಪ್ರಜ್ಞೆಯನ್ನು ಎದುರಿಸುತ್ತಿದೆ. ಇದರ ನಡುವೆ ಮಹಾರಾಷ್ಟ್ರದ ನಂದೂರಬಾರ್ಜಿಲ್ಲೆಮಾತ್ರ ವಿಭಿನ್ನವಾಗಿ ನಿಂತಿದೆ; ಸೋಂಕನ್ನು ಸಮರ್ಥವಾಗಿ ನಿಭಾಯಿಸುತ್ತಿದೆ.

ದೂರದೃಷ್ಟಿ ಮತ್ತು ದಕ್ಷತೆಯ ಜಿಲ್ಲಾಧಿಕಾರಿಯೊಬ್ಬರಿದ್ದರೆ ಒಂದು ಜಿಲ್ಲೆಯ ವ್ಯವಸ್ಥೆಯು ಯಾವ ರೀತಿ ಕಾರ್ಯನಿರ್ವಹಿಸಬಲ್ಲದು ಎಂಬುದಕ್ಕೆ ನಂದೂರ್ಬಾರ್ಜಿಲ್ಲೆ ದೃಷ್ಟಾಂತ. ಮಹಾರಾಷ್ಟ್ರದಲ್ಲಿ ಆಕ್ಸಿಜನ್ಕೊರತೆಯಿಂದ ಜನರು ಸಾಯುತ್ತಿದ್ದ ಸಂದರ್ಭದಲ್ಲಿ ನಂದೂರಬಾರ್ಎಂಬ ಬುಡಕಟ್ಟು ಜನರೇ ಹೆಚ್ಚಿರುವ ಜಿಲ್ಲೆ ಆಕ್ಸಿಜನ್ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ಚಿಕಿತ್ಸೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲು ಯಶಸ್ವಿಯಾಗಿದೆ. ನಂದರೂಬಾರ್ಯಶಸ್ಸಿನ ಹಿಂದೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ಮತ್ತು ಅವರ ತಂಡದ ಪರಿಶ್ರಮವಿದೆ; ದೂರದೃಷ್ಟಿಯ ಚಿಂತನೆಯಿದೆ. ಸ್ವತಃ ವೈದ್ಯರಾಗಿರುವ ರಾಜೇಂದ್ರ ಅವರಿಗೆ ಕೊರೊನಾದಿಂದ ಉಂಟಾಗಬಹುದಾದ ಅಪಾಯದ ಸ್ಪಷ್ಟತೆ ಇತ್ತು. ತಮ್ಮ ಆಡಳಿತದ ಜಿಲ್ಲೆಯನ್ನು ಕೊರೊನಾ ಎದುರಿಸಲು ಎಲ್ಲರಿಗಿಂತಲೂ ಮುಂಚೆಯೇ ಸನ್ನದ್ಧ ಮಾಡಿ, ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ ಕೋವಿಡ್‌-19 ಸ್ಫೋಟವಾಗುವ ಮುಂಚೆ ನಂದೂರಬಾರ್ಜಿಲ್ಲೆಯಲ್ಲಿಒಂದೂ ಲಿಕ್ವಿಡ್ಆಕ್ಸಿಜನ್ತಯಾರಿಕಾ ಘಟಕಗಳು ಇರಲಿಲ್ಲ. ಕೋವಿಡ್ಕೇಸ್ಗಳು ಇಳಿಕೆಯಾಗುತ್ತಿದ್ದಂತೆ ಸೆಪ್ಟೆಂಬರ್ನಲ್ಲಿ ಡಾ. ರಾಜೇಂದ್ರ ಅವರು ನಂದೂರಬಾರ್ಜಿಲ್ಲಾಸ್ಪತ್ರೆಯಲ್ಲಿ 85 ಲಕ್ಷ  ರೂ. ವೆಚ್ಚದಲ್ಲಿ ಲಿಕ್ವಿಡ್ಆಕ್ಸಿಜನ್ಘಟಕ ಸ್ಥಾಪಿಸಿದರುಈ ವರ್ಷದ ಜನವರಿ ಮತ್ತು ಫೆಬ್ರವರಿಯಲ್ಲಿಮತ್ತೆ ಎರಡು ಘಟಕಗಳನ್ನು ನಿರ್ಮಿಸಿದರು. ಪರಿಣಾಮ ಜಿಲ್ಲೆಯಲ್ಲಿ ಪ್ರತಿ ನಿಮಿಷಕ್ಕೆ 2,400 ಲೀಟರ್ಲಿಕ್ವಿಡ್ಆಕ್ಸಿಜನ್ಉತ್ಪಾದನೆಯ ಸಾಮರ್ಥ್ಯವನ್ನು ಪಡೆದುಕೊಂಡಿತು. ಮೊದಲನೇ ಅಲೆ ವೇಳೆ ಜಿಲ್ಲೆಯಲ್ಲಿ 190 ಕೇಸ್ಗಳಿದ್ದವು. ಆದರೆ, ಸೋಂಕಿನ ಅಪಾಯದ ಬಗ್ಗೆ ಮತ್ತು ದೂರದೃಷ್ಟಿಯ ಚಿಂತನೆಯಿಂದಾಗಿ ಡಾ. ಭಾರೂಡ್ಅವರು ಆಕ್ಸಿಜನ್ಉತ್ಪಾದನೆಯಲ್ಲಿಇಡೀ ಜಿಲ್ಲೆಯನ್ನೇ ಸ್ವಾವಲಂಬಿಯಾಗಿಸಿದರು.

ಮಹಾರಾಷ್ಟ್ರದಲ್ಲಿ ಯಾವಾಗ ಕೋವಿಡ್ಎರಡನೇ ಅಲೆ ತೀವ್ರವಾಯಿತೋ ಈ ಬುಡಕಟ್ಟು ಜಿಲ್ಲೆಯಲ್ಲಿ24 ಗಂಟೆಯೊಳಗೆ 1,200 ಪ್ರಕರಣಗಳು ಪತ್ತೆಯಾದವು. ಆದರೆ, ಆಕ್ಸಿಜನ್ಕೊರತೆಯಿಂದಾಗಿಯೇ ಯಾವುದೇ ಸಾವು ನೋವು ಸಂಭವಿಸಲಿಲ್ಲ. ಸರಕಾರಿ ಘಟಕಗಳಿಂದ ಪ್ರತಿ ನಿಮಿಷಕ್ಕೆ 1,800 ಲೀ., ಖಾಸಗಿ ಕಂಪನಿಗಳಿಂದ ನಿಮಿಷಕ್ಕೆ 1,200 ಲೀ. ಲಿಕ್ವಿಡ್ಆಕ್ಸಿಜನ್ಉತ್ಪಾದನೆ ಸಾಧ್ಯವಾಗಿದೆ. ಜನರು ಇಡೀ ಜಿಲ್ಲಾಡಳಿತವನ್ನು ಹಾಡಿ ಹೊಗಳುತ್ತಿದ್ದಾರೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಭಾರೂಡ್ಮತ್ತು ಅವರ ತಂಡದ  ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಾರಂಭಿಸಿದೆ.

ದಿಲ್ಲಿ, ಮುಂಬಯಿ, ಬೆಂಗಳೂರಿನಂಥ ಮೆಟ್ರೋ ಸಿಟಿಗಳೇ ಆಕ್ಸಿಜನ್ಕೊರತೆಯಿಂದ ಬಳಲುತ್ತಿವೆ. ಈ ನಗರಗಳಲ್ಲಿ ಹೆಜ್ಜೆ ಹೆಜ್ಜೆಗೂ ಆಸ್ಪತ್ರೆಗಳಿದ್ದರೂ ಕೋವಿಡ್ಸೋಂಕಿತ ಗಂಭೀರ ರೋಗಿಗಳಿಗೆ ಪ್ರಾಣವಾಯು ಸಿಗುತ್ತಿಲ್ಲ; ಪ್ರಾಣ ಉಳಿಸಲಾಗುತ್ತಿಲ್ಲ. ಅಂಥದ್ದರಲ್ಲಿ ಅಷ್ಟೇನೂ ಸಂಪನ್ಮೂಲಗಳು ಇಲ್ಲದೇ ಬುಡಕಟ್ಟು ಜಿಲ್ಲೆಯೊಂದು ಆಕ್ಸಿಜನ್ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿರುವುದು ಇವರ ಕರ್ತೃತ್ವ ಶಕ್ತಿಗೆ ಉದಾಹರಣೆಯಾಗಿದೆ. ತಮ್ಮ ದೂರದೃಷ್ಟಿಯ ಆಡಳಿತದಿಂದಾಗಿ ಪ್ರಸಿದ್ಧಿಯಾಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಭಾರೂಡ್ಅವರ ಜೀವನ ಕತೆಯೂ ಯಾವುದೇ ಥ್ರಿಲ್ಲರ್ಸಿನಿಮಾಗಿಂತಲೂ ಕಡಿಮೆ ಇಲ್ಲ. ಪ್ರತಿಭಾವಂತ ಯಾವುದೇ ವಿದ್ಯಾರ್ಥಿಗೆ ಅವರ ಜೀವನಯಶೋಗಾಥೆ ಸೂಧಿರ್ತಿ.

ರಾಜೇಂದ್ರ ಭಾರೂಡ್‌ 1988ರ ಜನವರಿ 7ರಂದು ಮಹಾರಾಷ್ಟ್ರದ ಧುಳೆ ಜಿಲ್ಲೆಯ ಸಕ್ರಿ ತಾಲೂಕಿನ ಸಾಮೋಡೆ ಹಳ್ಳಿಯಲ್ಲಿ ಜನಿಸಿದರು. ತಂದೆ ಬಂಡು ಭಾರೂಡ್‌, ತಾಯಿ ಕಮಲಾಬಾಯಿ. ಒಟ್ಟು ಮೂವರು ಮಕ್ಕಳು. ರಾಜೇಂದ್ರ ಕಮಲಾಬಾಯಿ ಗರ್ಭದಲ್ಲಿದ್ದಾಗಲೇ ಬಂಡು ಇಹಲೋಕ ತ್ಯಜಿಸಿದರು. ಇಂದಿಗೂ ತಂದೆ ನೋಡಲು ಯಾವ ರೀತಿ ಇದ್ದರು ಎಂಬುದು ರಾಜೇಂದ್ರಗೆ ಗೊತ್ತಿಲ್ಲ! ಅವರ ತಂದೆಯ ಒಂದೂ ಫೋಟೊ ಅವರ ಬಳಿಯಿಲ್ಲ. ಅಷ್ಟು ಕಡು ಬಡತನದಲ್ಲಿರಾಜೇಂದ್ರ ಅವರು ಬೆಳೆದು ಬಂದಿದ್ದಾರೆ.

ಬಡತನವನ್ನೇ ಹಾಸಿ ಹೊದ್ದುಕೊಂಡಿದ್ದ ಕುಟುಂಬ ನಿರ್ವಹಣೆ ಕಷ್ಟವೇ ಆಗಿತ್ತು. ತಾಯಿ ಮತ್ತು ಅಜ್ಜಿ ಇಬ್ಬರು ಸೇರಿ ಮೂವರು ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದರು. ಇವರಿಬ್ಬರೂ ದೇಸಿ ಸಾರಾಯಿಯನ್ನು ತಯಾರಿಸಿ ಮಾರಾಟ ಮಾಡಿ ಕುಟುಂಬವನ್ನು ಸಾಕುತ್ತಿದ್ದರು. ದಿನಕ್ಕೆ ನೂರು ರೂಪಾಯಿ ಸಿಗುತ್ತಿತ್ತು. ಕಬ್ಬಿನ ರವದಿಯಿಂದ ಮಾಡಿದ ಒಂದು ಸಣ್ಣ ಗುಡಿಸಲೇ ಇವರಿಗೆ ಅರಮನೆಯಾಗಿತ್ತು. ಅಂಥ ಕಡುಬಡತನದಲ್ಲೇ ಬೆಳೆದ ರಾಜೇಂದ್ರ ವೈದ್ಯರಾಗಿ, ಐಎಸ್ಐ ಅಧಿಕಾರಿಯಾಗುವವರೆಗಿನ ಸಾಧನೆಯನ್ನು ಅಕ್ಷ ರಗಳಲ್ಲಿಹಿಡಿದಿಡಲು ಸಾಧ್ಯವಿಲ್ಲ.

ರಾಜೇಂದ್ರ ಮತ್ತು ಅವರ ಸಹೋದರಿ ಅದೇ ಹಳ್ಳಿಯ ಜಿಲ್ಲಾ ಪರಿಷತ್ಶಾಲೆಗೆ ಹೋಗುತ್ತಿದ್ದರು. ಮತ್ತೊಬ್ಬ ಸಹೋದರ ಬುಡಕಟ್ಟು ಶಾಲೆಯಲ್ಲಿ ಕಲಿಯುತ್ತಿದ್ದರು. ರಾಜೇಂದ್ರ ಅವರು 5ನೇ ತರಗತಿಯಲ್ಲಿದ್ದಾಗ, ಅವರಲ್ಲಿದ್ದ ವಿಶಿಷ್ಟ ಪ್ರತಿಭೆಯನ್ನು ಶಿಕ್ಷಕರೊಬ್ಬರು ಗುರುತಿಸಿ, ತಾಯಿಗೆ ತಿಳಿಸಿದರು. ಯಾವುದೇ ಕಾರಣಕ್ಕೂ ರಾಜೇಂದ್ರ ವಿದ್ಯಾಭ್ಯಾಸವನ್ನು ಕಡಿತಗೊಳಿಸಿದಂತೆ ಕೇಳಿಕೊಂಡಿದ್ದರು. ಅಂದು ಅವರ ಕಂಡ ಪ್ರತಿಭೆ ಇಂದು ಜಗದ್ವಿಖ್ಯಾತವಾಗುತ್ತಿದೆ! ಬಳಿಕ ರಾಜೇಂದ್ರ ಅವರು ಜವಾಹರ ನವೋದಯ ವಿದ್ಯಾಲಯಕ್ಕೆ ಸೇರಿಕೊಂಡರು. ಈ ಶಾಲೆ ಅವರಿದ್ದ ಹಳ್ಳಿಯಿಂದ 15 ಕಿ.ಮೀ. ದೂರದಲ್ಲಿತ್ತು. ತಾಯಿ ಈಗಲೂ ದೇಸಿ ಸಾರಾಯಿ ಮಾರಾಟ ಮಾಡಿ ಮಕ್ಕಳ ಶಾಲೆ ಮತ್ತು ಕುಟಂಬದ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಇತ್ತು. ಆದರೆ, ನವೋದಯ ಶಾಲೆಯಿಂದ ರಾಜೇಂದ್ರ ಅವರ ಭವಿಷ್ಯವೇ  ಬದಲಾಯಿತು.

ಗಣಿತ ಮತ್ತು ವಿಜ್ಞಾನ ವಿಷಯಗಳತ್ತ ಆಸಕ್ತಿ ಬೆಳೆಸಿಕೊಂಡ ರಾಜೇಂದ್ರ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುತ್ತಿದ್ದರು. 10 ಮತ್ತು 12ನೇ ತರಗತಿ ಬೋರ್ಡ್ಎಕ್ಸಾಮ್ನಲ್ಲಿ ಟಾಪರ್ಆಗಿದ್ದರು. ಪರಿಣಾಮ ವಿದ್ಯಾರ್ಥಿ ವೇತನ ಪಡೆದುಕೊಂಡು ಮುಂಬೈನ ಸೇಠ್ಜಿಎಸ್ಮೆಡಿಕಲ್ಕಾಲೇಜ್ಗೆ ಪ್ರವೇಶ ಪಡೆದುಕೊಂಡರು. ಬಾಲ್ಯದಿಂದಲೂ ಅವರಿಗೆ ವೈದ್ಯನಾಗಬೇಕೆಂಬ ಕನಸು. ಆದರೆ, ಅರಿವು ಹೆಚ್ಚಾಗುತ್ತಾ ಹೋದಂತೆ ತನ್ನ ಸುತ್ತಮುತ್ತ ಇರುವ ಜನರಿಗೆ ಜಾಗೃತಿ ಮೂಡಿಸುವುದು ಅಗತ್ಯ ಎಂಬುದನ್ನು ಮನಗಂಡ ರಾಜೇಂದ್ರ ಅವರು ವೈದ್ಯರಾದರೂ ನಾಗರಿಕ ಆಡಳಿತ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಹಾಗಾಗಿಯೇ ಎಂಬಿಬಿಎಸ್ಓದುತ್ತಿರುವಾಗಲೇ ನಾಗರಿಕ ಸೇವಾ ಪರೀಕ್ಷೆಗೂ ತಯಾರಿ ಮಾಡಲಾರಂಭಿಸಿದರು. ಪಟ್ಟಾಗಿ ಕೂತು ಯುಪಿಎಸ್ಸಿ ಎಕ್ಸಾಮ್ಗೆ ಸಿದ್ಧತೆ ಮಾಡಿಕೊಂಡರು. ವೈದ್ಯ ಕೋರ್ಸ್ಗೆ ಸಂಬಂಧಿಸಿದ ಅಧ್ಯಯನದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾಗಿರುವ ಅಧ್ಯಯನವನ್ನು ಮುಂದುವರಿಸಿದರು. ಇದಕ್ಕಾಗಿ ಕಠಿಣ ಪರಿಶ್ರಮಪಟ್ಟರು.

ಯುಪಿಎಸ್ಸಿ ಎಕ್ಸಾಮ್ರಿಸಲ್ಟ್ಗೊತ್ತಾಗುವ ಹೊತ್ತಿಗೆ ರಾಜೇಂದ್ರ ಹಳ್ಳಿಯಲ್ಲಿದ್ದರು. ಅವರ ತಾಯಿಗೆ ಮಗ ಯಾವ ಪರೀಕ್ಷೆಯನ್ನು ಪಾಸು ಮಾಡಿದ್ದಾನೆಂಬುದರ ಬಗ್ಗೆ ಸಣ್ಣ ಕಲ್ಪನೆಯೂ ಇರಲಿಲ್ಲ. 2012ರಲ್ಲಿ ಫರೀದಾಬಾದ್ನಲ್ಲಿ ಐಆರ್ಎಸ್ಅಧಿಕಾರಿಯಾಗಿ ನಿಯುಕ್ತಿಗೊಂಡರು. ಈ ವೇಳೆ, 2ನೇ ಬಾರಿಗೆ ಯುಪಿಎಸ್ಸಿ ಎಕ್ಸಾಮ್ಬರೆದು, ಐಎಎಸ್ಹುದ್ದೆಗೆ ಆಯ್ಕೆಯಾದರು. 2015ರಲ್ಲಿ ನಾಂದೇಡ್ಜಿಲ್ಲೆಯಲ್ಲಿ ಅಸಿಸ್ಟೆಂಟ್ಕಲೆಕ್ಟರ್ಆಗಿ ಕೆಲಸ ಆರಂಭಿಸಿದರು. ಬಳಿಕ 2017ರಲ್ಲಿ ಸೋಲಾಪುರ ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದರು. 2018ರಲ್ಲಿ ಅವರನ್ನು ನಂದೂರಬಾರ್ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಯಿತು.

ತಮ್ಮ ಸಂಘರ್ಷದ ಬದುಕಿನ ಜೀವನದ ಸಾರವನ್ನೇ ಸೃಜನಶೀಲ ಸಾಹಿತ್ಯವಾಗಿಸಿರುವ ರಾಜೇಂದ್ರಮಿ ಏಕ್ಸ್ವಪ್ನ ಪಹಿಲ್‌’ ಎಂಬ ಕೃತಿಯನ್ನು ರಚಿಸಿದ್ದಾರೆ. ಇದರಲ್ಲಿ ಮೂವರು ಮಕ್ಕಳನ್ನು ಬೆಳೆಸಲು ತಮ್ಮ ತಾಯಿ ಪಟ್ಟ ಕಷ್ಟ, ಸಂಘರ್ಷದ ಬದಕನ್ನು ಚಿತ್ರಿಸಿದ್ದಾರೆ. ರಾಜೇಂದ್ರ ಅವರು ಈಗ ತಾಯಿ, ಪತ್ನಿ ಮತ್ತು ಮಕ್ಕಳ ಜತೆ ಸರಕಾರ ನೀಡಿರುವ ಕ್ವಾರ್ಟರ್ಸ್ನಲ್ಲಿದ್ದಾರೆ. ನಂದೂರಬಾರ್ಜಿಲ್ಲಾಧಿಕಾರಿಯಾಗುವ ಮುಂಚೆ ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅಲ್ಲೆಲ್ಲ ತಮ್ಮ ದಕ್ಷ  ಕಾರ್ಯನಿರ್ವಹಣೆಯ ದಟ್ಟ ಪ್ರಭಾವವನ್ನು ಬಿಟ್ಟು ಬಂದಿದ್ದಾರೆ. ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಬಡವರು, ನಿರ್ಗತಿಕರ ಬದುಕನ್ನು ಸಹನೀಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿಯೇ ಈಗಲೂ ಅವರನ್ನು ಜನರು ಸ್ಮರಿಸಿಕೊಳ್ಳುತ್ತಾರೆ. ಇಂಥ ಜಿಲ್ಲಾಧಿಕಾರಿ ಪ್ರತಿ ಜಿಲ್ಲೆಗೆ ಸಿಕ್ಕರೆ ಕೋವಿಡ್ಏನು, ಯಾವುದೇ ಸಮಸ್ಯೆಯನ್ನೂ ಆಡಳಿತ ಅನಾಯಸವಾಗಿ ಎದುರಿಸಬಹುದು.



ಕಾಮೆಂಟ್‌ಗಳಿಲ್ಲ: