ಗುರುವಾರ, ನವೆಂಬರ್ 22, 2007

ಸ್ತಬ್ಧಚಿತ್ರ

ಈ ಬಾಲ್ಯವೇ ಹಾಗೇ
ಭಾವನೆಗಳ ಬರಹಕ್ಕೆ ನಿಲುಕದ
ನೀಲಾಕಾಶ... ಎತ್ತ ನೋಡಿದತ್ತ
ಆದಿ-ಅಂತ್ಯವಿಲ್ಲದ ಸ್ತಬ್ದಚಿತ್ರ.

ಊರೂ ಹೊಡೆದು, ಊರಲ್ಲಿ ಭಾಷಣ ಬೀಗಿದು
ಮೊದಲ ಬಹುಮಾನ ತಂದದ್ದು,
ಶಿಕ್ಷಕರು ತಲೆ ನೇವರಿದ ನೆನಪು
ಈಗಲೂ ಹಚ್ಚು-ಹಸಿರು, ನವ-ನವೀರು.

ಚೇಳು ಕಡಿಸಿಕೊಂಡಿದ್ದು, ನೋವು ಮರೆಸಲು
ಅವ್ವ ಕಥೆ ಹೇಳಿದ್ದು, ಅವಳ ತೊಡೆಯ
ಮೇಲೆ ನಿದ್ದೆ ಹೊಗಿದ್ದು, ಈಗಲೂ ಚೇಳು
ಎಂದಾಗಲೆಲ್ಲ ಒತ್ತರಿಸುತ್ತದೆ ಮಾಸಿದ ನೆನಪು.

ಅಕ್ಕಳನ್ನು ಕಾಡಿದ್ದು, ತಂಗಿಯನ್ನು ಪೀಡಿಸಿದ್ದು,
ಅವ್ವಳಿಂದ ಬೈಯಿಸಿಕೊಂಡಿದ್ದು, ಗೆಳೆಯನಿಗೆ
ಹೊಡಿದಿದ್ದು, ಮತ್ತೆ ರಮಿಸಿದ್ದು, ಎಲ್ಲವೂ ಹಾಗೆ
ಇದೆ, ಗೆರೆ ಕೊರೆದ ಚಿತ್ರಗಳಂತೆ.

ಮನೆಯ ಎದುರಿಗಿದ್ದ ಟ್ರ್ಯಾಕ್ಟರ್ ಇಂಜಿನ್ ಕ್ಲಚ್ ಒತ್ತಿ
ಕಂಪೌಂಡ್ ಗೋಡೆಗೆ ಡಿಕ್ಕಿ ಹೊಡಿಸಿ, ಬಿಳಿಸಿದ್ದು, ಅಪ್ಪನಿಂದ
ಬಾಸುಂಡೆ ಏಟು ಬೀಗಿಸಿಕೊಂಡಿದ್ದು, ಇನ್ನೂ ಹಾಗೇ
ಇದೆ, ಮೊನ್ನೆ ನಡೆದ ಘಟನೆಯಂತೆ.

ಸ್ಕ್ರ್ಯೂ ಬಿಗಿಯಲು ಬಾರದೇ ಸ್ಕ್ರ್ಯೂಡ್ರೈವರ್
ಅಂಗೈ ಸೇರಿದ್ದು, ಅದ್ನೋಡಿ ಮೇಸ್ತ್ರಿ
ಕೆನ್ನೆಗೆ ಬಾರಿಸಿದ್ದು, ಕಣ್ಣೀರ್ ಕಪಾಳಕ್ಕೆ ಇಳಿದಿದ್ದು,
ರಸ್ತೆ ಬದಿಯಲ್ಲಿ ಗ್ಯಾರೆಜ್ ಕಂಡಾಗಲೆಲ್ಲ
ನೆನಪು ಕಣ್ತೆರೆಯುತ್ತದೆ.

ಇಂದಿನ ವರ್ಣಮಯ ಬದುಕಿನ
ನಡುವೆ, ಅಂದಿನ ಬಾಲ್ಯದ ಕಪ್ಪು-ಬಿಳಪು
(ವಿ)ಚಿತ್ರಗಳು ಈಗ ಬರೀ ಚಿತ್ರ, ಸ್ತಬ್ಧಚಿತ್ರ.

4 ಕಾಮೆಂಟ್‌ಗಳು:

Anu ಹೇಳಿದರು...

Good narration of your childhood in words..

jomon varghese ಹೇಳಿದರು...

ಇಂದಿನ ವರ್ಣಮಯ ಬದುಕಿನ ನಡುವೆ, ಅಂದಿನ ಬಾಲ್ಯದ ಕಪ್ಪು-ಬಿಳಪು(ವಿ)ಚಿತ್ರಗಳು ಈಗ ಬರೀ ಚಿತ್ರ ಸ್ತಬ್ಧಚಿತ್ರ.ಈ ಮಾತು ನೂರರಷ್ಟು ಸತ್ಯ. ಕವನ ತುಂಬಾ ಇಷ್ಟವಾಯಿತು. ನೆನಪುಗಳ ಮಾತು ಮಧುರ...

ಸಂತೋಷಕುಮಾರ ಹೇಳಿದರು...

ತುಂಬ ಚೆನ್ನಾಗಿದೆ.. ನನ್ನ ಬಾಲ್ಯವೂ ನೆನೆಪಿಗೆ ಬಂತು..

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

Thanks, revan, jomon and santosh