- ಮಲ್ಲಿಕಾರ್ಜುನ ತಿಪ್ಪಾರ
ರಾಜೇಶ್ ದೊಡ್ಡ ಕಂಪನಿಯೊಂದರಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾನೆ. ಕೈ ತುಂಬ ಸಂಬಳ. ಆದರೂ ಆತನಿಗೆ ಸಂತೋಷವೇ ಇಲ್ಲಘಿ. ಯಾವಾಗಲೂ ಭವಿಷ್ಯದ ಚಿಂತೆ. ಮುಂದೆ ಹಾಗಾದರೆ, ಹೀಗಾದರೆ ಎಂಬ ಕೊರಗು. ಆತನ ಹೆಂಡತಿ ಸುಮಾ ಮಾತ್ರ ತುಂಬ ಪ್ರಾಕ್ಟಿಕಲ್. ಭವಿಷ್ಯದ ಬಗ್ಗೆ ವಿನಾಕಾರಣ ಯೋಚಿಸದೆ, ಭಯಭೀತಗೊಳ್ಳದೇ ವರ್ತಮಾನದ ಬದುಕನ್ನು ಸಂತೋಷವಾಗಿ ಕಳೆಯುವ ಗುಣದವಳು. ತನ್ನ ಗಂಡನಿಗೆ, ಈ ಕ್ಷಣದ ಸಂತೋಷ ಅನುಭವಿಸು, ಯಾಕೆ ಸುಮ್ಮನೇ ಭವಿಷ್ಯದ ಬಗ್ಗೆ ಯೋಚಿಸಿ ಈಗಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತೀಯಾ ಎಂದು ಹೇಳುತ್ತಲೇ ಇರುತ್ತಾಳೆ.
***
ಸುರೇಶ್ ಎಂಬಿಎ ೈನಲ್ ಇಯರ್‌ನಲ್ಲಿ ಓದುತ್ತಿದ್ದಾನೆ. ಆತನಿಗೂ ಯಾವಾಗಲೂ ಭವಿಷ್ಯದ ಬಗ್ಗೆಯೇ ಕಾಳಜಿ. ಪರೀಕ್ಷೆ ಬಗ್ಗೆ ವಿಪರೀತ ಭಯ. ೇಲ್ ಆದರೆ ಏನು ಮಾಡುವುದು ಎನ್ನುವಂಥ ಪ್ರಶ್ನೆಗಳ ಮೂಟೆಯನ್ನು ತಲೆಯಲ್ಲಿ ತುಂಬಿಕೊಂಡು, ಓದಿನ ಮೇಲೂ ಏಕಾಗ್ರತೆ ಸಾಧಿಸಲು ಆಗುತ್ತಿಲ್ಲ. ಆತನ ಗೆಳೆಯ ಸುಜಿತ್ ಮಾತ್ರಘಿ, ಪರೀಕ್ಷೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಈ ಕ್ಷಣದಲ್ಲಿ ಓದುವುದಷ್ಟೇ ಮುಖ್ಯ ಎಂದು ಭಾವಿಸಿ, ಅದನ್ನು ಆನಂದಿಸುತ್ತಲೇ ಮಾಡುತ್ತಾನೆ. ಸುರೇಶ್‌ನಿಗೆ ಸುಜಿತ್ ತಿಳಿ ಹೇಳುತ್ತಾನೆ; ಪರೀಕ್ಷೆಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡ. ನಮ್ಮ ಕೆಲಸ ಚೆನ್ನಾಗಿ ಓದುವುದು. ಹಾಗಂತ ಬರೀ ಓದುವುದಲ್ಲ; ಎಂಜಾಯ್ ಮಾಡುತ್ತಾ ಓದುವುದು. ಹಾಗೆ ಮಾಡಿದರೆ, ನಿನಗೆ ಭಯ ಇರುವುದಿಲ್ಲಘಿ. ಸುಮ್ಮನೆ ಯಾಕೆ ಏನೇನೊ ನಿನ್ನಷ್ಟಕ್ಕೆ ನೀನು ಯೋಚನೆ ಮಾಡಿಕೊಂಡು, ಈ ಕ್ಷಣದ ಸಂತೋಷ ಹಾಳು ಮಾಡಿಕೊಳ್ಳುತ್ತೀಯಾ ಎನ್ನುತ್ತಾನೆ.
***
ಈ ತರಹದ ಸಮಸ್ಯೆಯ ಸುಳಿಯಲ್ಲಿ ಬಹಳಷ್ಟು ಜನರು ಸಿಲುಕಿಕೊಂಡಿದ್ದಾರೆ. ಮುಂದೆ ಆಗಬಹುದಾದ ಇಲ್ಲವೇ ಘಟಿಸಲು ಸಾಧ್ಯವೇ ಇಲ್ಲದಂಥ ಸಂಗತಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತೇವೆ. ಅದೇ ವೇಳೆಯಲ್ಲಿ ಈ ಹೊತ್ತಿನಲ್ಲಿ ನಮಗೆ ದೊರೆಯಬಹುದಾದ ಚಿಕ್ಕ, ಪುಟ್ಟ ಸಂತೋಷ, ನೆಮ್ಮದಿಗಳನ್ನೆಲ್ಲ ಮರೆತು, ನಮ್ಮ ಇಡೀ ಜೀವನವನ್ನು ಗೋಳುಮಯ ಮಾಡಿಕೊಳ್ಳುತ್ತೇವೆ. ಇಂಥ ಸಂದರ್ಭದಲ್ಲಿ ಭಗವಾನ್ ಬುದ್ಧ ಹೇಳಿದ ಮಾತು ಹೆಚ್ಚು ಆಪ್ತವಾಗುತ್ತದೆ. ‘ಭೂತಕಾಲದಲ್ಲಿ ವಾಸಿಸಬೇಡ, ಭವಿಷ್ಯದ ಬಗ್ಗೆ ಚಿಂತಿಸಬೇಡ; ಈ ಕ್ಷಣದ ಬಗ್ಗೆ ಮನಸ್ಸಿನ ಮೇಲೆ ಏಕಾಗ್ರತೆಯನ್ನು ಸಾಧಿಸು’ ಎನ್ನುತ್ತಾರೆ ಬುದ್ಧಘಿ. ಅಂದರೆ, ನಾವು ಈಗ ಏನು ಮಾಡುತ್ತಿದ್ದೇವೊ ಅದನ್ನೇ ಅಚ್ಚುಕಟ್ಟಾಗಿ, ಯಾವುದಕ್ಕೂ ಚ್ಯುತಿ ಬಾರದಂತೆ ಮಾಡಿಬಿಡಬೇಕು. ಅದು ಬಿಟ್ಟುಘಿ, ಅಯ್ಯೊ ನನಗೆ ಹಿಂದೆ ಹೀಗೆ ಆಗಿತ್ತಲ್ಲ ಎಂಬ ಕೊರಗನ್ನು ವರ್ತಮಾನಕ್ಕೆ ಅನ್ವಯಿಸಿಕೊಂಡು ಕುಳಿತುಕೊಳ್ಳಬಾರದು. ಇದರಿಂದ ನಿಮ್ಮ ಈಗಿನ ಕೆಲಸಗಳ್ಯಾವುವೂ ಸುಗಮವಾಗಿ ಮುಗಿಯುವುದಿಲ್ಲಘಿ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮನಸ್ಸಿನ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಹಾಗೆಯೇ, ಭವಿಷ್ಯದ ಬಗ್ಗೆ ವಿನಾಕಾರಣ ಅತಿಯಾಗಿ ಚಿಂತಿಸುವುದು ಒಳ್ಳೆಯದಲ್ಲಘಿ. ಕಾರಣವಿಲ್ಲದ ಭಯಪಡುವುದು ತರವಲ್ಲಘಿ. ಹಾಗಂತ, ಭವಿಷ್ಯದ ಕುರಿತು ಯೋಚಿಸುವುದೇ ತಪ್ಪು ಎಂದಲ್ಲಘಿ. ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಳ್ಳಿಘಿ, ಗುರಿಗಳನ್ನು ಹಾಕಿಕೊಳ್ಳಿಘಿ. ಆದರೆ, ಭಯಗೊಳ್ಳಬೇಡಿ. ಮೇಲಿಂದ ಮೇಲೆ ಆ ಕುರಿತು ಚಿಂತಿಸುವುದು ಮತ್ತು ಅದರಲ್ಲೇ ಕೊರಗುವುದು ವ್ಯಸನವಾಗಬಾರದಷ್ಟೇಘಿ.
ಹಾಗಾದರೆ, ಈ ಕ್ಷಣದಲ್ಲಿ ಬದುಕುವುದು ಹೇಗೆ? ಈ ಪ್ರಶ್ನೆಗೆ ಜರ್ಮನಿಯ ಖ್ಯಾತ ಟೆನ್ನಿಸ್ ತಾರೆ ಏಂಜಿಲಿಕ್ ಕೆರ್ಬರ್ ಅವರ ಮಾತುಗಳು ಉತ್ತರ ನೀಡಬಲ್ಲವು. ‘‘ಯಾವುದೇ ಸಮಸ್ಯೆಘಿ, ಸಂಗತಿಗಳನ್ನು ತುಂಬಾ ಸಂಕೀರ್ಣಗೊಳಿಸಲು ಹೋಗಬೇಡಿ. ರಿಲಾಕ್ಸ್ ಆಗಿರಲು ಪ್ರಯತ್ನಿಸಿ, ಪ್ರತಿ ಕ್ಷಣವನ್ನು ಎಂಜಾಯ್ ಮಾಡಿ ಮತ್ತು ಅದರ ಸದ್ಬಳಕೆ ಮಾಡಿಕೊಳ್ಳಿ,’’ ಎಂದೆನ್ನುವ ಕೆರ್ಬರ್ ಮಾತುಗಳಲ್ಲಿ ಸತ್ಯವಿದೆ. ನಾವೆಲ್ಲರೂ ತಮ್ಮ ಜೀವನದ ಪ್ರತಿ ಕ್ಷಣಗಳನ್ನು ಸಂಕೀರ್ಣಗೊಳಿಸುತ್ತಲೇ ಹೋಗುತ್ತೇವೆ. ತುಂಬ ಸರಳವಾಗಿ ಬಗೆಹರಿಯಬಹುದಾದ ಸಮಸ್ಯೆಯನ್ನು ಗುಡ್ಡ ಮಾಡಿಟ್ಟು ಬಿಡುತ್ತೇವೆ. ಅಯ್ಯೋ ಹೀಗಾಯ್ತಲ್ಲ ಎಂದು ಕರಬುತ್ತೇವೆ. ಸರಳವಾಗಿ ಮುಗಿಯಬಹುದಾದ ಯಾವುದೋ ಕೆಲಸವನ್ನು ತುಂಬ ದಿನಗಳವರೆಗೆ ಎಳೆದುಕೊಂಡು ಹೋಗುತ್ತೇವೆ. ನಮಗೆ ನಾವೇ ಕಲ್ಪಿತ ಶತ್ರುಗಳನ್ನುಘಿ ಸೃಷ್ಟಿಸಿಕೊಂಡು, ಅವರಿಂದಾಗುವ ಅಪಾಯವನ್ನು ಊಹೆ ಮಾಡಿಕೊಂಡು, ಈಗಿನ ಜೀವನದ, ಈ ಕ್ಷಣದ ಸಂತೋಷವನ್ನು ಕೈ ಚೆಲ್ಲಿ ಬಿಡುತ್ತೇವೆ.
‘ಸಮಯ ಮತ್ತು ಅಲೆಗಳು ಯಾರಿಗೂ ಕಾಯುವುದಿಲ್ಲ’ ಎಂಬ ಮಾತಿದೆ. ಅಂದರೆ, ಪ್ರತಿ ಕ್ಷಣವೂ ಅತ್ಯಮೂಲ್ಯಘಿ. ಅಂಥ ಕ್ಷಣವನ್ನು ಗೋಳಾಟದಿಂದ, ಇನ್ನಾವುದೇ ಭಯದಿಂದ ಕಳೆದುಕೊಳ್ಳುವುದು ಬೇಡ. ಆ ಕ್ಷಣವನ್ನು ಸಂಪೂರ್ಣವಾಗಿ ಅನುಭವಿಸಿ. ವರ್ತಮಾನವೇ ನಿಜವಾದ ಬದುಕು ಎಂಬುದನ್ನು ಅರಿತುಕೊಳ್ಳಿಘಿ. ಈ ಹಿಂದೆ ಆಗಿ ಹೋದ ಘಟನೆಗಳನ್ನು ಈಗ ಮತ್ತೆ ತರಲಾಗುವುದಿಲ್ಲಘಿ. ಹಾಗೆಯೇ, ಮುಂದೆ ಬರಬಹುದಾದುದನ್ನು ತಡೆಯಲಾಗುವುದಿಲ್ಲ. ವಾಸ್ತವ ಹೀಗಿರುವಾಗ ನಾವೇಕೆ, ಈ ಕ್ಷಣದ ಸಂತೋಷವನ್ನು ಹಾಳು ಮಾಡಿಕೊಳ್ಳಬೇಕು ಹೇಳಿ? ನೀವು ಮಾಡುವ ಪ್ರತಿ ಕೆಲಸವನ್ನು ಸಂತೋಷದಿಂದ ಮಾಡಿ, ಪ್ರೀತಿಯಿಂದ ಮಾಡಿ. ಆಗ ಅದರಲ್ಲಿ ದೊರೆಯುವ ಆನಂದ ಪದಗಳಿಗೂ ನಿಲುಕದ್ದುಘಿ. ಅದನ್ನು ಅನುಭವಿಸಿಯೇ ಸವಿಯಬೇಕು. ನಾವು ಯಾವಾಗ, ಬದುಕಿನ ಪ್ರತಿ ಕ್ಷಣವನ್ನು ಅನುಭವಿಸುತ್ತೇವೆಯೋ ಆಗಲೇ ನೆಮ್ಮದಿ ದೊರೆಯುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿಘಿ.
ಪ್ರತಿ ಕ್ಷಣ ಆನಂದಿಸುವುದು ಹೇಗೆ?
- ಸದ್ಯ ನೀವು ಮಾಡುವ ಕೆಲಸದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿ. ಆ ನಿಟ್ಟಿನಲ್ಲಿ ಮನಸ್ಸನ್ನು ತರಬೇತುಗೊಳಿಸಿ.
- ಖಾಲಿಯಾಗಿ ಇರಬೇಡಿ. ಏನಾದರೂ ಮಾಡುತ್ತಲೇ ಇರಿ ಮತ್ತು ಆ ಪ್ರಕ್ರಿಯೆಯನ್ನು ಅನುಭವಿಸಿ.
- ಪ್ರತಿ ಕ್ಷಣವನ್ನು ವರ್ತಮಾನದಲ್ಲೇ ಅನುಭವಿಸುವ ಮತ್ತು ರಿಲಾಕ್ಸ್ ಆಗುವ ತಂತ್ರಗಳನ್ನು ಕರಗತ ಮಾಡಿಕೊಳ್ಳಿ
- ನಿಮ್ಮ ಸುತ್ತಲಿನ ಬಗ್ಗೆ ಗಮನವಿರಲಿ. ಅಂದರೆ, ದೃಶ್ಯಗಳು, ಧ್ವನಿ, ವಾಸನೆ, ವ್ಯಕ್ತಿಗಳು.. ಇತ್ಯಾದಿ.
- ಇತರರ ಮಾತುಗಳನ್ನು ಗಮನವಿಟ್ಟು ಕೇಳಿ. ಸಂಗೀತವನ್ನು ಆಲಿಸಿ. ಅಷ್ಟೇ ಯಾಕೆ, ವೌನವನ್ನೂ ಗಮನವಿಟ್ಟುಕೊಂಡೇ ಅನುಭವಿಸಿ.
- ನೀವು ತಿನ್ನುವ ಆಹಾರವನ್ನು ಸಂತೋಷವಾಗಿಯೇ ತಿನ್ನಿಘಿ. ಆಗ ಸಿಗುವ ಆನಂದವೇ ಬೇರೆ.
(ಈ ಲೇಖನ ಬೋಧಿವೃಕ್ಷದ ಮಾರ್ಚ್ 4ನೇ ತಾರಿಖಿನ ಸಂಚಿಕೆಯಲ್ಲಿ ಪ್ರಕಟವಾಗಿದೆ)
http://www.bodhivrukshaepaper.com/Details.aspx?id=977&boxid=16579717

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ