ಶೋಷಿತರ ಪರ ನಿಲ್ಲುವ ನ್ಯಾಯವಾದಿಯ
ಕತೆಯ ಸಿನಿಮಾ
‘ಜೈ ಭೀಮ್’ ಸದ್ದು ಮಾಡುತ್ತಿದೆ. ನೈಜ ಕತೆಯನ್ನಾಧರಿಸಿದ ಈ ಚಿತ್ರದ ಅಸಲಿ ಹೀರೊ ಜಸ್ಟೀಸ್ ಕೆ.ಚಂದ್ರು.
- ಮಲ್ಲಿಕಾರ್ಜುನ ತಿಪ್ಪಾರ
ದೃಶ್ಯ ಮಾಧ್ಯಮದ ಬಹು ಸಾಧ್ಯತೆಗಳನ್ನು
ಬಳಸಿಕೊಳ್ಳುವುದಲ್ಲಿ ತಮಿಳು ಚಿತ್ರರಂಗದ್ದು ಎತ್ತಿದ ಕೈ. ನೈಜ ಕತೆಗಳನ್ನು ಬೆಳ್ಳಿತೆರೆಗೆ
ಅನ್ವಯಿಸಿ, ಜನರಿಗೆ ನಾಟುವಂತೆ ದಾಟಿಸುವ ಕಲೆಯನ್ನು ಕರಗತ ಮಾಡಿಕೊಂಡಿದೆ.
ಈಗ ಸೂರ್ಯ ನಟನೆಯ ‘ಜೈ ಭೀಮ್’ ಸಿನಿಮಾ ಕೂಡ ಇದೇ ನೆಲೆಯಲ್ಲಿ ರೂಪುಗೊಂಡಿದ್ದು, ನೈಜ ಕತೆಯಾಧರಿಸಿ
ಇತರ ಸಿನಿಮಾಗಳಿಗಿಂತ ಭಿನ್ನವಾಗಿ ನಿಂತಿದೆ. ಅಪರಿಮಿತ ಅಧಿಕಾರ ಹೊಂದಿರುವ
ಪೊಲೀಸ್ ವ್ಯವಸ್ಥೆ ತನ್ನ ಸಂವೇದನೆ ಕಳೆದುಕೊಂಡು, ಅಪ್ರಮಾಣಿಕವಾಗಿ, ಅಧಿಕಾರದ ದರ್ಪದಿಂದ ವರ್ತಿಸಿದಾಗ ಧ್ವನಿ ಇಲ್ಲದವರು,
ಸಮಾಜದಲ್ಲಿಯಾವ ರೀತಿಯಲ್ಲಿಶೋಷಣೆಗೊಳಗಾಗುತ್ತಾರೆ, ನಿರ್ದೋಷಿಗಳು
ಹೇಗೆ ಬಲಿಯಾಗುತ್ತಾರೆಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.
ಈ ಚಿತ್ರದಲ್ಲಿಮುಖ್ಯ ಪಾತ್ರ
ನ್ಯಾಯವಾದಿ ಚಂದ್ರು.
ಈ ಪಾತ್ರವನ್ನು ನಟ ಸೂರ್ಯ ಪರಕಾಯ ಪ್ರವೇಶ ಮಾಡಿದ್ದು, ವಿಮರ್ಶಕರಿಂದಲೂ ಮೆಚ್ಚುಗೆ ದೊರೆತಿದೆ. ಇದಿಷ್ಟು ‘ರೀಲ್’ ಕತೆಯಾದರೆ, ಸೈಡ್ವಿಂಗ್ನಲ್ಲಿ ‘ರಿಯಲ್ ಕತೆ’ಯನ್ನು ಬಿಚ್ಚುತ್ತಾ ಹೋದರೆ ಅದು ಇನ್ನೊಂದು ರೋಮಾಂಚನ.
ಚಿತ್ರದ ಮುಖ್ಯ ಪಾತ್ರವಾಗಿರುವ ಚಂದ್ರು, ನಿಜ ಜೀವನದ ಜಸ್ಟೀಸ್
ಕೆ. ಚಂದ್ರು. ಮದ್ರಾಸ್
ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ದಕ್ಷ ತೆಯಿಂದ ಕೆಲಸ
ಮಾಡಿದ ವ್ಯಕ್ತಿ ಅವರು. ತಮಿಳುನಾಡಿನಲ್ಲಿ ತುಂಬ ಹೆಸರಿದೆ. ಆದರೆ, ‘ಜೈ ಭೀಮ್’ ತೆರೆಗೆ ಬರುವವರೆಗೂ
ಜ.ಕೆ. ಚಂದ್ರು ಅವರ ಬಗ್ಗೆ ತಮಿಳುನಾಡಿನಾಚೆ ಅಷ್ಟೇನೂ
ಗೊತ್ತಿರಲಿಲ್ಲ.
ಕೆ.ಚಂದ್ರು
ಅವರು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ
ಅದ್ವಿತೀಯ ಕೆಲಸ ಮಾಡಿದ್ದಾರೆ. ಸಾಮಾನ್ಯಧಿವಾಗಿ ಒಬ್ಬ ಜಡ್ಜ್
ತಮ್ಮ ಅವಧಿಯಲ್ಲಿ 10 ಸಾವಿರದಿಂದ 20 ಸಾವಿರದವರೆಗೆ ಕೇಸ್ಗಳನ್ನು ಇತ್ಯರ್ಥಪಡಿಸುತ್ತಾರೆ.
ಆದರೆ, ಜ. ಚಂದ್ರು ತಮ್ಮ ಆರೂವರೆ
ವರ್ಷಗಳ ಅವಧಿಯಲ್ಲಿ90 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ,
ಕ್ಷೀಪ್ರ ನ್ಯಾಯದಾನ ಮಾಡಿದ್ದಾರೆ.
ಕೆಂಪು ಗೂಟದ ಕಾರನ್ನು ಯಾರು
ಬಳಸಬೇಕು ಎಂಬ ಬಗ್ಗೆ ಚರ್ಚೆಗಳು ನಡೆದೇ ಇವೆ. ಕೋರ್ಟ್ ಆದೇಶದ
ಪ್ರಕಾರ, ಕೆಲವು ಸಂವಿಧಾನಬದ್ಧ ಹುದ್ದೆ ಅಲಂಕರಿಸಿದವರನ್ನು ಹೊರತುಪಡಿಸಿ
ಉಳಿದವರಿಗೆ ಈ ಸೇವೆ ಇಲ್ಲ. ಈ ಬಗ್ಗೆ ಆದೇಶವಾಗುವುದಕ್ಕಿಂತ ಮುಂಚೆಯೇ ಚಂದ್ರು
ತಮ್ಮ ಕಾರಿನ ಕೆಂಪು ದೀಪವನ್ನು ತೆಗೆಸಿದ್ದರು. ವಕೀಲರು ನ್ಯಾಯಾಧೀಶರನ್ನು
ಉದ್ದೇಶಿಸಿ ಬಳಸುವ ‘ಮೈ ಲಾರ್ಡ್’ ಪದವನ್ನು
ತಮಗೆ ಬಳಸದಂತೆ ಸೂಚಿಸಿದ್ದರು! ಇದೆಲ್ಲವೂ ಅವರ ಸರಳತೆಯನ್ನು ಬಹಿರಂಗಗೊಳಿಸುತ್ತದೆ.
2006ರಲ್ಲಿಚಂದ್ರು ಮದ್ರಾಸ್
ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
2009ರಲ್ಲಿಕಾಯಂ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಯಿತು. ಅವರ ಸರಳತೆಗೆ ಮತ್ತೊಂದು ಉದಾಹರಣೆ ಎಂದರೆ, ಅವರು ನ್ಯಾಯಮೂರ್ತಿಯಾಗಿ
ನಿವೃತ್ತಿಯಾದ ದಿನ ಬೆಳಗ್ಗೆ ಸರಕಾರಿ ಕಾರ್ ಉಪಯೋಗಿಸಿದ್ದರೆ,
ಸಾಯಂಕಾಲ ಸರಕಾರಿ ಕಾರನ್ನು ಬಿಟ್ಟು ಲೋಕಲ್ ಟ್ರೈನ್ನಲ್ಲಿಮನೆಗೆ ಪ್ರಯಾಣಿಸಿದ್ದರು. ಸರಳತೆ, ಪ್ರಮಾಣಿಕತೆ, ಬದ್ಧತೆ ಹಾಗೂ ನಿಸ್ವಾರ್ಥ ಮೌಲ್ಯಗಳು ಅವರನ್ನು
ಒಬ್ಬ ಪರಿಪೂರ್ಣ ನ್ಯಾಯಮೂರ್ತಿಯಾಗಿ ಮಾಡಿದ್ದಲ್ಲದೆ, ಒಬ್ಬ ಕ್ರೂಸೆಡರ್
ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಯಿತು.
ನ್ಯಾಯಮೂರ್ತಿಯಾಗುವ ಮೊದಲು
ಅವರು ಮದ್ರಾಸ್
ಹೈಕೋರ್ಟ್ನಲ್ಲಿವಕೀಲಿಕೆ ಮಾಡುತ್ತಿದ್ದರು.
ಆಗಲೂ ಅಷ್ಟೇ ವಕೀಲರಾಗಿ ಸಮಾಜದಲ್ಲಿನ ಬಡವರು, ಬುಡಕಟ್ಟು
ಜನಾಂಗದವರು, ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕಾನೂನು ಸೇವೆಯನ್ನು ಒದಗಿಸಿದ್ದಾರೆ.
ಒಂದು ಪೈಸೆ ತೆಗೆದುಕೊಳ್ಳದೇ ಅವರ ಪರವಾಗಿ ಹೋರಾಡಿದ್ದಾರೆ. ‘ಜೈ ಭೀಮ್’ ಚಿತ್ರದಲ್ಲಿಅಳವಡಿಸಿಧಿಕೊಳ್ಳಲಾಗಿಧಿರುವುದು ಅವರ
ವೃತ್ತಿ ಬದುಕಿನ ಒಂದು ಎಪಿಸೋಡ್ ಅಷ್ಟೇ.
ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬನನ್ನು
ಪೊಲೀಸರು ಕಳ್ಳತನದ
(ಸುಳ್ಳು ಪ್ರಕರಣ) ಆರೋಪದ ಮೇಲೆ ಬಂಧಿಸುತ್ತಾರೆ.
ಮಾಡದೇ ಇರುವ ತಪ್ಪನ್ನು ಒಪ್ಪಿಕೊಳ್ಳುವಂತೆ ಕಿರುಕುಳ ನೀಡುತ್ತಾರೆ. ಇದರಿಂದ ಆತ ಸತ್ತು ಹೋಗುಧಿತ್ತಾನೆ. ಕೇಸ್ ಮುಚ್ಚಿ ಹಾಕುವುದಕ್ಕಾಗಿ ಆರೋಪಿ ಪರಾರಿಧಿಯಾಗಿದ್ದಾನೆಂಬ ಕತೆ ಕಟ್ಟುತ್ತಾರೆ. ಆದರೆ, ಮೃತನ ಪತ್ನಿ ನಂಬುವುದಿಲ್ಲ. ಆಕೆಗೆ ಕಂಡಿದ್ದೇ ಈ ನ್ಯಾಯವಾದಿ ಚಂದ್ರು. ಪ್ರಕರಣವನ್ನು ಕೈಗೆತ್ತಿಕೊಳ್ಳುವ
ಅವರು 13 ವರ್ಷ ಹೋರಾಡಿ, ಆರೋಪಿ ಪೋಲೀಸರಿಗೆ
14 ವರ್ಷ ಕಾಲ ಜೈಲು ಶಿಕ್ಷೆಯಾಗುವಂತೆ ಮಾಡುತ್ತಾರೆ. ಈ ಕೇಸಿಧಿನಿಂದ ಹಿಂದೆ ಸರಿಯಲು ಸಾಕಷ್ಟು ಆಮಿಷಗಳನ್ನು ಒಡ್ಡಿದರೂ ಚಂದ್ರು ತಮ್ಮ ಬದ್ಧತೆಯನ್ನು
ಎಲ್ಲೂಬಿಟ್ಟುಕೊಡುಧಿವುದಿಲ್ಲ, ಹಣ ತುಂಬಿದ ಸೂಟ್ಕೇಸ್ ಅನ್ನೇ ರೂಮಿನಿಂದ ಆಚೆ ಎಸೆದಂಥ ಘಟನೆಗಳಿವೆ.
ಇಂಥ ಹತ್ತಾರು ಕತೆಗಳು, ಪ್ರಕರಣಗಳು ಅವರಲ್ಲಿವೆ.
ತಮಿಳುನಾಡಿನ ತಿರುಚಿರಾಪಳ್ಳಿ
ಜಿಲ್ಲೆಯ ಶ್ರೀರಂಗಮ್ನ ಮಧ್ಯಮ ವರ್ಗದ ಕುಟುಂಬದಲ್ಲಿ1951 ಮೇ 8ರಂದು ಜನಿಸಿದರು. ಸತ್ಯದ ಪರವಾಗಿ ಹೋರಾಟ ಅವರಿಗೆ ವಿದ್ಯಾರ್ಥಿ
ದೆಸೆಯಿಂದಲೇ ಬಂದ ಗುಣ. ಕಾಲೇಜಿನಲ್ಲಿದ್ದಾಧಿಗಲೇ ಸಿಪಿಎಂ ವಿದ್ಯಾರ್ಥಿ
ನಾಯಕರಾಗಿದ್ದರು. ಇದರಿಂದಾಗಿ ಚೆನ್ನೈನಲ್ಲಿಲೋಯೋಲಾ ಕಾಲೇಜ್ನಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾಯಿತು. ವಿದ್ಯಾರ್ಥಿಗಳ ಹೋರಾಟದ
ನಾಯಕತ್ವ ವಹಿಸಿಕೊಂಡಿದ್ದಕ್ಕಾಗಿ ಲೋಯೋಲಾ ಕಾಲೇಜ್ ಆಡಳಿತ ಮಂಡಳಿ ಇವರನ್ನು
ಕಾಲೇಜಿನಿಂದ ಹೊರ ಹಾಕಿತು. ನಂತರ ಅವರು ಕ್ರಿಶ್ಚಿಯನ್ ಕಾಲೇಜ್ನಲ್ಲಿಅಧ್ಯಯನ ಮುಂದುವರಿಸಬೇಕಾಯಿತು.
ವಿದ್ಯಾರ್ಥಿ ನಾಯಕನಾಗಿ, ಟ್ರೇಡ್
ಯೂನಿಯನ್ ನಾಯಕನಾಗಿ ಅವರು ಇಡೀ ತಮಿಳುನಾಡನ್ನು ಲಾರಿ
ಮತ್ತು ಬಸ್ಗಳ ಮೂಲಕವೇ ಸುತ್ತಿದ್ದಾರೆ; ಜನರನ್ನು
ಸಂಘಟಿಸಿದ್ದಾರೆ. ಈ ಸಂದರ್ಭದಲ್ಲಿದಲಿತರು, ಕಾರ್ಮಿಕರು,
ಕೃಷಿ ಕಾರ್ಮಿಕರು, ಟ್ರೇಡ್ ಯೂನಿಯನ್ ನಾಯಕರನ್ನು ಭೇಟಿ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ.
ಈ ವ್ಯವಸ್ಥೆಯು ಶಕ್ತಿಹೀನರನ್ನು ಹೇಗೆ ಶೋಷಣೆ ಮಾಡುತ್ತದೆ ಎಂಬ ಸ್ಪಷ್ಟವಾದ ಪರಿಕಲ್ಪನೆ,
ಅನುಭವ ಅವರಿಗಾಗಿದೆ.
ಚಂದ್ರು ಅವರು ವಕೀಲಿ ವೃತ್ತಿಗೆ
ಬರಲು ಅಣ್ಣಾ ವಿವಿ ವಿದ್ಯಾರ್ಥಿಯೊಬ್ಬ ಪೊಲೀಸರ ಲಾಠಿ ಏಟಿಗೆ ಮೃತಪಟ್ಟ ಘಟನೆ ಕಾರಣವಾಯಿತು. ಈ ಘಟನೆಯ
ತನಿಖೆಗೆ ಎಂ ಕರುಣಾನಿಧಿ ಅವರು ಹೆಚ್ಚುವರಿ ನ್ಯಾಯಧಿಮೂರ್ತಿ ನೇತೃತ್ವದಲ್ಲಿಆಯೋಗ ನೇಮಕ ಮಾಡಿದ್ದರು.
ಈ ಆಯೋಗದ ಎದುರು ಚಂದ್ರು ಅವರು ವಿದ್ಯಾರ್ಥಿಗಳ ಪರವಾಗಿ ಹಾಜರಾಗಿಧಿದ್ದರು.
ಅವರ ವಾದ ಮಂಡನೆ ಮತ್ತು ಜಾಣತನವನ್ನು ಗುರುತಿಸಿದ ನ್ಯಾಯಧಿಮೂರ್ತಿ, ಕಾನೂನು ವೃತ್ತಿಗೆ ಬರುವಂತೆ ಸೂಚಿಸಿದರು. ಪರಿಣಾಮ ಚಂದ್ರು
1973ರಲ್ಲಿಕಾನೂನು ಕಾಲೇಜಿಗೆ ದಾಖಲಾದರು. ಆದರೆ,
ಹಾಸ್ಟೆಲ್ ಪ್ರವೇಶಧಿವನ್ನು ನಿರಾಕರಿಸಲಾಯಿತು.
ವಿದ್ಯಾರ್ಥಿ ನಾಯಕರಾಗಿ ಅವರು ಕೈಗೊಂಡ ಹೋರಾಟಗಳೇ ಇದಕ್ಕೆ ಕಾರಣವಾಗಿತ್ತು.
ಆದರೆ, ಪಟ್ಟು ಸಡಿಲಿಸದ ಅವರು ಮೂರು ದಿನ ಉಪವಾಸ ಸತ್ಯಾಗ್ರಹ
ಕೈಗೊಂಡರು. ಅಂತಿಮವಾಗಿ ಅಧಿಕಾರಿಗಳು ಹಾಸ್ಟೆಲ್ ಪ್ರವೇಶ ನೀಡಬೇಕಾಯಿತು
ಕಾಲೇಜಿನಲ್ಲಿದ್ದಾಗಲೇ ಬಡವರಿಗೆ
ಕಾನೂನು ಸೇವೆ ಒದಗಿಸಲಾರಂಭಿಸಿದರು. ಬಡವರು, ಶೋಷಿತರಿಗೆ ಕಾನೂನು
ಸೇವೆಯನ್ನು ಒದಗಿಸುತ್ತಿದ್ದ ರಾವ್ ಆಂಡ್ ರೆಡ್ಡಿ
ಸಂಸ್ಥೆಯನ್ನು ಸೇರಿದರು. 8 ವರ್ಷ ಇಲ್ಲಿಕೆಲಸ ಮಾಡಿ, ಸ್ವತಂತ್ರವಾಗಿ ವಕೀಲಿಕೆಯನ್ನು ಆರಂಭಿಸಿದರು. ತಮಿಳುನಾಡು ಬಾರ್
ಕೌನ್ಸಿಲ್ಗೆ ಆಯ್ಕೆಯಾದ ಅತ್ಯಂತ ತರುಣ ನ್ಯಾಯವಾದಿ ಎನಿಸಿಕೊಂಡರು.
ಇದರ ಮಧ್ಯೆಯೇ, ಶ್ರೀಲಂಕಾ ವಿಷಯದಲ್ಲಿ ರಾಜೀವ್
ಗಾಂಧಿ ಆಡಳಿತ ನಡೆದುಕೊಂಡ ರೀತಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯದಿಂದಾಗಿ ಸಿಪಿಎಂ
ಪಕ್ಷ ವನ್ನೂ ತೊರೆದರು.
ಮದ್ರಾಸ್ ಹೈಕೋರ್ಟ್
ನ್ಯಾಯಮೂರ್ತಿಯಾಗಿ ಕ್ಷೀಪ್ರವಾಗಿ ನ್ಯಾಯದಾನ ಮಾಡಿದ್ದೂ ಮಾತ್ರವಲ್ಲದೇ ಹಲವು ಐತಿಹಾಸಿಕ
ತೀರ್ಪುಗಳನ್ನು ನೀಡಿದ್ದಾರೆ. ಆ ಪೈಕಿ ಮಹಿಳೆಯರಿಗೆ ಅರ್ಚಕರಾಗಲು ಅವಕಾಶ
ಕಲ್ಪಿಸುವುದು, ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿಕೆಲಸ ಮಾಡುತ್ತಿದ್ದ
25 ಸಾವಿರ ಬಡ ಹೆಣ್ಣುಮಕ್ಕಳಿಗೆ ಉದ್ಯೋಗ ಭದ್ರತೆ ಒದಗಿಸುವ ತೀರ್ಪು ಸೇರಿದಂತೆ
ಅನೇಕ ಜನಪರ ತೀರ್ಪುಗಳನ್ನು ನೀಡಿದ್ದಾರೆ. ನ್ಯಾಯವಾದಿಯಾಗಿದ್ದಾಗ ಪಾಲಿಸಿಕೊಂಡಿದ್ದ
ಶೋಷಿತರಿಗೆ ಧ್ವನಿಯಾಗುವ ಕೆಲಸವನ್ನು ನ್ಯಾಯಾಧೀಶಧಿರಾದಾಗಲೂ ಮುಂದುವರಿಸಿಕೊಂಡು ಬಂದು,
2013ರಲ್ಲಿನಿವೃತ್ತರಾದರು.
ಅವರು ಕೇವಲ ಒಬ್ಬ ನ್ಯಾಯವಾದಿ, ಜಸ್ಟಿಸ್
ಮಾತ್ರವಲ್ಲದೆ ಬರಹಗಾರರೂ ಹೌದು. ನಿವೃತ್ತಿಯಾದ ಮೇಲೂ ಹಲವು
ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ;
ಪುಸ್ತಕಗಳನ್ನು ಬರೆದಿದ್ದಾರೆ. Listen to My Case!: When Women
Approach the Courts of Tamil Naduಅವರ ಇತ್ತೀಚಿನ ಕೃತಿ. ಈ ಪುಸ್ತಕದಲ್ಲಿ ಚಂದ್ರು ಅವರು, ನ್ಯಾಯಕ್ಕಾಗಿ ಹೋರಾಡಿದ
20 ಮಹಿಳೆಯರ ಬಗ್ಗೆ ಬರೆದಿದ್ದಾರೆ.
ಜಸ್ಟೀಸ್ ಕೆ.ಚಂದ್ರು ಅವರಂಥ
ಬದ್ಧತೆಯುಳ್ಳ ನ್ಯಾಯವಾದಗಳು, ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾದರೆ ಬಹುಶಃ
ದೀನ ದಲಿತರಿಗೆ, ಬಡವರಿಗೆ, ಕಾನೂನು ಎಂಬುದು ಗಗನಕುಸುಮವಾಗಲಾರದು.