- ಮಲ್ಲಿಕಾರ್ಜುನ ತಿಪ್ಪಾರ
ವಾಟ್ಸ್‌ಆ್ಯಪ್ ಈಗ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ. ನಮ್ಮೆಲ್ಲರ ಅಗತ್ಯಗಳನ್ನು ಪೂರೈಸುವ ಮೂಲಸೌಕರ್ಯ ಎನಿಸಿಕೊಂಡಿದೆ. ವಾಟ್ಸ್‌ಆ್ಯಪ್ ಇಲ್ಲದ ಬದುಕನ್ನು ನೆನೆಸಿಕೊಳ್ಳುವುದು ಕಷ್ಟ. ಅಷ್ಟರ ಮಟ್ಟಿಗೆ ವಾಟ್ಸ್‌ಆ್ಯಪ್ ನಮ್ಮ ಬದುಕಿನ ಅವಿಭಾಜ್ಯವಾಗಿದೆ.
ಸಂವಹನದ ಜತೆಗೆ ನಿತ್ಯದ ನಮ್ಮ ಕೆಲಸಗಳಿಗೆ ಅನುಕೂಲವಾಗುವ ರೀತಿಯಲ್ಲಿವಾಟ್ಸ್‌ಆ್ಯಪ್ ಅನೇಕ ಫೀಚರ್‌ಗಳನ್ನು ಒಳಗೊಂಡಿದೆ. ಆ ಪೈಕಿ ‘ವಾಟ್ಸ್‌ಆ್ಯಪ್ ವೆಬ್’ ಕೂಡ ಒಂದು. ಅಂದರೆ, ನಿಮ್ಮ ವಾಟ್ಸ್‌ಆ್ಯಪ್
ಅನ್ನು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲೇ ಬಳಸುವುದು. ಇದರಿಂದ ವಾಟ್ಸ್‌ಆ್ಯಪ್ ಮೂಲಕ ನಡೆಯುವ ನಿಮ್ಮ ಕೆಲಸ ಬಹಳಷ್ಟು ಸುಲಭವಾಗುತ್ತದೆ. ಹಾಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ವಾಟ್ಸ್‌ಆ್ಯಪ್ ವೆಬ್ ಫೀಚರ್ ಹೆಚ್ಚು ಬಳಕೆಯಾಗುತ್ತಿದೆ. ಆದರೆ, ಈ ಸೌಲಭ್ಯ ನಿಂತು ಹೋಗಲಿದೆಯಾ? ಇಂಥದೊಂದು ಅನುಮಾನ ಬರಲು ಕಾರಣವಿದೆ. ವಾಟ್ಸ್‌ಆ್ಯಪ್ ಮಲ್ಟಿ ಡಿವೈಸ್ ಸಪೋರ್ಟ್ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಸದ್ಯ ಈ ಫೀಚರ್ ಬೀಟಾ ವರ್ಷನ್ನಲ್ಲಿದ್ದು, ನಿರ್ದಿಷ್ಟ ಬಳಕೆದಾರರಿಗೆ ಬಳಸಲು ಅವಕಾಶ ನೀಡಲಾಗಿದೆ.
ಏನಿದು ವಾಟ್ಸ್‌ಆ್ಯಪ್ ಮಲ್ಟಿ ಡಿವೈಸ್ ಎಂದು ನೀವು ಕೇಳಬಹುದು. ವಾಟ್ಸ್‌ಆ್ಯಪ್ ವೆಬ್ ಬಳಸಿಕೊಂಡು ಡೆಸ್ಕ್‌ಟಾಪ್‌ನಲ್ಲೂ ವಾಟ್ಸ್‌ಆ್ಯಪ್ ಹೇಗೆ ಬಳಸುತ್ತಿವೆಯೋ ಹಾಗೆಯೇ, ವಾಟ್ಸ್‌ಆ್ಯಪ್ ಅನ್ನು ನೀವು ನಾಲ್ಕು ಸಾಧನಗಳಲ್ಲಿ ಏಕಕಾಲಕ್ಕೆ ಬಳಸಬಹುದು! ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ಈ ಫೀಚರ್ ಅನ್ನು ಶೀಘ್ರವೇ ಗ್ರಾಹಕರ ಬಳಕೆಗೆ ನೀಡುವ ಸಾಧ್ಯತೆಯಿದೆ.ವಾಟ್ಸ್‌ಆ್ಯಪ್ ವೆಬ್ ಬಳಸುವಾಗ ಬಳಕೆದಾರರು ಒಂದಿಷ್ಟು ತೊಂದರೆಗಳನ್ನು ಎದುರಿಸುತ್ತಿದ್ದರು. ಅಂದರೆ, ನಿಮ್ಮ ಫೋನ್ ಇಂಟರ್ನೆಟ್ ಸಂಪರ್ಕದಿಂದ ಕಡಿತಗೊಂಡರೆ, ಬ್ಯಾಟರಿ ಖಾಲಿಯಾದರೆ ಆ ಕ್ಷ ಣದಿಂದ ನೀವು ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್‌ಆ್ಯಪ್ ವೆಬ್ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಬಹುಶಃ ವಾಟ್ಸ್‌ಆ್ಯಪ್ ಮಲ್ಟಿ ಡಿವೈಸ್ ವೈಶಿಷ್ಟ್ಯಪೂರ್ಣವಾಗಿ ಬಳಕೆದಾರರಿಗೆ ಸಿಗಲಾರಂಭಿಧಿಸಿಧಿದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದು ವಾಟ್ಸ್‌ಧಿಆ್ಯಪ್‌ನ ಅಭಿಪ್ರಾಯವಾಗಿದೆ. ವಾಟ್ಸ್‌ಧಿಆ್ಯಪ್‌ನಲ್ಲಿಇತ್ತೀಚೆಗೆ ಪರಿಚಯಿಸಲಾದ ಮಲ್ಟಿ-ಡಿವೈಸ್ ಬೀಟಾ ಪರೀಕ್ಷೆಯು ಬಳಕೆದಾರರ ಪ್ರಾಥಮಿಕ ಸಾಧನದಲ್ಲಿ(ಸ್ಮಾರ್ಟ್‌ಫೋನ್) ಮತ್ತು ಪ್ರಾಥಮಿಕ ಸಾಧನವು ಇಂಟರ್ನೆಟ್ ಸಂಪರ್ಕಿತಗೊಂಡಿಲ್ಲದಿದ್ದರೂ ಇತರ ನಾಲ್ಕು ಸಾಧನಗಳಲ್ಲಿಕೆಲಸ ಮಾಡಲು ಅವಕಾಶ ನೀಡುವ ಮೂಲಕ ಈ ಸಮಸ್ಯೆಯನ್ನು ನಿವಾರಿಸುತ್ತದೆ. ಆದಾಗ್ಯೂ, ಬಹು-ಸಾಧನ ಬೆಂಬಲವು ಹೊರಬಂದ ನಂತರ
ವಾಟ್ಸ್‌ಆ್ಯಪ್ ವೆಬ್ ಫೀಚರ್ ಭವಿಷ್ಯ ಏನು ಎಂಬ ಪ್ರಶ್ನೆ ಇನ್ನೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ವಾಟ್ಸ್‌ಆ್ಯಪ್ ವೆಬ್ ಬಳಕೆದಾರರಿಗೆ ಒಂದು ಪ್ರಮುಖ ವೇದಿಕೆಯಾಗಿ ಉಳಿದಿದೆ. ಇಲ್ಲಿಯವರೆಗೆ, ವಾಟ್ಸ್‌ಆ್ಯಪ್ ಅನ್ನು ಒಂದು ಸಮಯದಲ್ಲಿಒಂದು ಸಾಧನದಲ್ಲಿ
ಮಾತ್ರ ಬಳಸಬಹುದಿತ್ತು. ಡೆಸ್ಕ್‌ಟಾಪ್ ಮತ್ತು ವೆಬ್ ಬೆಂಬಲವು ನಿಮ್ಮ ಫೋನ್ ಅನ್ನು ಪ್ರತಿಬಿಂಬಿಸುವ ಮೂಲಕ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಂದರೆ ನಿಮ್ಮ ಫೋನ್ ಆನ್ ಆಗಿರಬೇಕು ಮತ್ತು ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು. ಆಗಲೇ ಅದು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ಮಲ್ಟಿ ಡಿವೈಸ್ ಬೆಂಬಲ ಸಕ್ರಿಯವಾದ ಬಳಕೆದಾರರಿಗೆ ಇನ್ನೂ ನಾಲ್ಕು ಸಾಧನಗಳನ್ನು ಸೇರಿಸಲು ಸಾಧ್ಯವಾಗುತ್ತದೆ. ಆದರೆ ವಾಟ್ಸ್ ಆ್ಯಪ್ ವೆಬ…, ವಾಟ್ಸ್‌ಆ್ಯಪ್ ಡೆಸ್ಕ್‌ಟಾಪ್ ಅಥವಾ ಫೇಸ್‌ಬುಕ್ ಪೋರ್ಟಲ್‌ಗಳನ್ನು ಮಾತ್ರ ಸೇರಿಸಬಹುದು. ಕಂಪನಿಯು ನಂತರದ ಹಂತದಲ್ಲಿಹೆಚ್ಚುವರಿ ಸಾಧನಗಳನ್ನು (ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳಂಥ) ಸೇರಿಸಲು ಬೆಂಬಲವನ್ನು ಸೇರಿಸಬಹುದು ಎನ್ನಲಾಗುತ್ತಿದೆ.
ಸದ್ಯದ ಪರಿಸ್ಥಿತಿಯನ್ನು ಆಧರಿಸಿ ಹೇಳುವುದಾದರೆ ವಾಟ್ಸ್‌ಆ್ಯಪ್ ವೆಬ್ ಫೀಚರ್ ಇರಲಿದೆ. ಜೊತೆಗೆ, ವಾಟ್ಸ್‌ಆ್ಯಪ್ ಮಲ್ಟಿ ಸಪೋರ್ಟ್ ಸಕ್ರಿಯಗೊಂಡ ಬಳಿಕ ಅದು ಎದುರಿಸುತ್ತಿದ್ದ ಸಮಸ್ಯೆಗಳೂ ನೀಗಲಿವೆ. ಜೊತೆಗೆ, ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿವಾಟ್ಸ್‌ಆ್ಯಪ್ ಬಳಸಲು ಸಾಧ್ಯವಾಗುವುದರಿಂದ, ಅದರ ಬಳಕೆಯ ಸಾಧ್ಯತೆಗಳು ಇನ್ನೂ ಹೆಚ್ಚಾಗಲಿವೆ.
ಭಾರತದಲ್ಲೇ 39 ಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆ್ಯಪ್ ಸಂವಹನಕ್ಕಾಗಿ ಮಾತ್ರವಲ್ಲದೇ ಬಿಸಿನೆಸ್, ಹಣಕಾಸಿನ ಸೇವೆಗೂ ಬಳಕೆಯಾಗುತ್ತಿದೆ. ಹಾಗಾಗಿ, ಅದು ತನ್ನ ಬಳಕೆದಾರರ ಅನುಕೂಲಕ್ಕೆ ತಕ್ಕ ಹಾಗೆ ಫೀಚರ್‌ಗಳನ್ನು ಅಭಿವೃದ್ಧಿಪಡಿಸಿ, ಬಳಕೆಯ ಅನುಭವವನ್ನು ಹೆಚ್ಚಿಸುತ್ತಿದೆ. ವಾಟ್ಸ್‌ಆ್ಯಪ್ ಮಲ್ಟಿ ಡಿವೈಸ್ ಸಪೋರ್ಟ್ ಕೂಡ ಅದೇ ಹಾದಿಯಲ್ಲಿದೆ.
ಈ ಲೇಖನವು ವಿಜಯ ಕರ್ನಾಟಕದ 2021 ಆಗಸ್ಟ್ 9ರ ಸಂಚಿಕೆಯಲ್ಲಿ ಪ್ರಕಟವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ