ಗುರುವಾರ, ಆಗಸ್ಟ್ 25, 2016

ಮತ್ತೆ ಲವ್ವಾಗಿದೆ- ಸೋತವನ ರಾತ್ರಿ ಪದ್ಯಗಳು-2

ಮತ್ತೆ ಲವ್ವಾಗಿದೆ
ಅವಳು ಬರೆಯೋ
ವಿರಹಿ ಕವಿತೆಗಳಿಂದ

ಮೊದಲಾಗಿತ್ತಲ್ಲ ಅದೇ ಲವ್ವು
ದಿನ ರಾತ್ರಿ ಒಂದಾಗಿತ್ತಲ್ಲಾ?
ಎಷ್ಟೊಂದು ಕನ್ಸುಗಳಿಗೆ
ಗಾಳ ಹಾಕಿ ಹೆಕ್ಕಿ ತೆಗಿದಿದ್ವುಲ್ವಾ
ಅದೇ ಆ ಒಂಚೂರು ಪ್ರೀತಿ

ಮತ್ತೆ ಲವ್ವಾಗಿದೆ ಈಗ

ಅದೇ ಆ ಮಾತುಗಳು
ಅವಳ ಕವಿತೆಯ ಸಾಲುಗಳು
ಬರೆದಷ್ಟು ಬತ್ತಲಾರದ ಭಾವಗಳು
ನನ್ನ ಸೋಲುಗಳಿಗೆ ನಾನೇ ಜವಾಬುದಾರ

ಮತ್ತೆ ಲವ್ವಾಗಿದೆ ಈಗ

ಸೇರಬೇಕು ಅವಳ ಸರದಿ ಸಾಲು
ಸಿಕ್ಕರೆ ಸಿಗಬಹುದು ನಂಗೂ
ಹರಿದು ಹೋದ ಚಂದ್ರನ ಚೂರು
ನಮ್ಮಿಬ್ಬರಿಗೂ ಕಂಡರೂ ಕಂಡೀತು
ಒಂದಾಗುವ ಸಣ್ಣ ಕಿಂಡಿಯೊಂದ

ಮತ್ತೆ ಲವ್ವಾಗಿದೆ
ಅವಳು ಬರೆಯೋ
ವಿರಹಿ ಕವಿತೆಗಳಿಂದ

- ಸೋತವನು

---
ಕೃಷ್ಣ ನೀ ಪಕ್ಷಪಾತಿ
ನೀನೇ ತಾನಾಗಿದ್ದ
ನಿನ್ನ ಪ್ರೇಮಿಸಿದ
ರಾಧೆಗೇನು ಕೊಟ್ಟೆ?

- ಸೋತವನು
----

ಏನೋ ಅಂದುಕೊಳ್ಳುವ ಹೊತ್ತಿಗೆ
ಕೈಗೆ ಸಿಗುವ ಹಳೇ ಹೊತ್ತಗೆಯ
ಮಧ್ಯೆ ಪುಟ ಮಡಿಚಿಟ್ಟ ಮಡಿಕೆಯಲಿ
ಅವಳ ನೆನಪು ಸೃಜಿಸುವ ಸಣ್ಣ ಎಲೆ!
ಒತ್ತರಿಸುವ ನೆನಪುಗಳ ಮೆರವಣಿಗೆ
ತತ್ತರಿಸಿ ಹೋಗಿರುವ ಎದೆಯೊಳಗೆ
ನುಂಗಲು ಆಗದ ಉಗಳಲು ಆಗದ
ಪ್ರೇಮದ ಎಲೆಯಡಿಕೆ ಬಾಯೊಳಗೆ!
ಕೆಂಪು ಕೆಂಪಾದ ಆಗಸದೊಳಗೆ
ಬಾಡಿ ಹೋಗುವ ಭಾಸ್ಕರ
ಮತ್ತೆ ಬಾರದಿರನೆ ಮರುದಿನ ಸರ ಸರ?
ಕಾಯುವೆ ಅವಳು ಬರುವ ಕವಲು
ದಾರಿಯಲಿ, ಹಗಲಾಗಿರಲಿ ಇರುಳಾಗಿರಲಿ!

- ಸೋತವನು

ಕಾಮೆಂಟ್‌ಗಳಿಲ್ಲ: