- ಮಲ್ಲಿಕಾರ್ಜುನ ತಿಪ್ಪಾರ
ಇಂದಿದ್ದ ಟೆಕ್ನಾಲಜಿ ಮಾರನೇ ದಿನಕ್ಕೆ ಹಳೆಯದ್ದಾಗಿರುತ್ತದೆ. ಈ ಕಾರಣಕ್ಕಾಗಿಯೇ ತಂತ್ರಜ್ಞಾನವನ್ನು ನಿತ್ಯ ನೂತನ ಎಂದು ಕರೆಯುವುದು. ಇತ್ತೀಚಿನ ದಿನಗಳಲ್ಲಿಹೆಚ್ಚು ಸದ್ದು ಮಾಡುತ್ತಿರುವ ವರ್ಚವಲ್ RAM (Virutval
RAM) ಬಗ್ಗೆ ಕೇಳಿರಬಹುದು. ಸ್ಯಾಮ್ಸಂಗ್‌ನಂಥ ಪ್ರಮುಖ ಕಂಪನಿಗಳು ಈ ವರ್ಚುವಲ್ RAM ಬಳಸುತ್ತಿವೆ. ಸ್ಯಾಮ್ಸಂಗ್, ‘RAM ಪ್ಲಸ್’ ಮೂಲಕ ಈ ವರ್ಚುವಲ್ RAM ಈಗಾಗಲೇ ಕಂಪ್ಯೂಟರ್ ಬಳಕೆಯಲ್ಲಿಹೆಚ್ಚು ಪ್ರಸಿದ್ಧಿಯಾಗಿವೆ. ಆದರೆ, ಸ್ಮಾರ್ಟ್‌ಫೋನ್ ವಿಷಯಕ್ಕೆ ಬಂದಾಗ ಅದು ಸ್ವಲ್ಪ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಯಾಮ್ಸಂಗ್ ಮಾತ್ರವಲ್ಲದೇ 2022ರ ಹೊತ್ತಿಗೆ ಒಪ್ಪೋ, ಶವೋಮಿ, ರಿಯಲ್‌ಮಿ ಮತ್ತು ಒನ್‌ಪ್ಲಸ್‌ನಂಥ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿಈ ವರ್ಚುವಲ್ RAM ಬಳಸುವ ಸಾಧ್ಯತೆಗಳಿವೆ.
ಸ್ಯಾಮ್ಸಂಗ್ ಇತ್ತೀಚೆಗಷ್ಟೇ ತನ್ನ ಗ್ಯಾಲಕ್ಸಿ ಎ52ಎಸ್ 5ಜಿ ಸ್ಮಾರ್ಟ್ ಫೋನ್‌ಗೆ ಹೊಸ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿತು. ಈ ಮೂಲಕ ಅದು ವರ್ಚುವಲ್ RAM ಕಾರ್ಯಕ್ಕೆ ಅನುಮತಿ ನೀಡಿದೆ. ಈಗ ಈ ಫೋನ್ ಬಳಕೆದಾರರು 4 ಜಿಬಿ ವರ್ಚುವಲ್ RAM ಪಡೆಯಲಿದ್ದಾರೆ. ಈ ಸಾಧನವು 4 ಜಿಬಿ ಮತ್ತು 8 ಜಿಬಿ RAMಗಳಲ್ಲಿ ಲಭ್ಯವಿದ್ದು, ಇದೀಗ ಹೆಚ್ಚುವರಿಯಾಗಿ 4 ಜಿಬಿ ವರ್ಚುವಲ್ RAM ಕೂಡ ದೊರೆಯಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ವರ್ಚುವಲ್ RAM ಬಳಕೆ ತೀರಾ ಸಾಮಾನ್ಯವಾಗಬಹುದು. ಸದ್ಯಕ್ಕೆ ಕಂಪ್ಯೂಟರ್‌ನಲ್ಲೇ ಮಾತ್ರವೇ ಬಳಕೆಯಾಗುತ್ತಿದೆ. ತಂತ್ರಜ್ಞಾನದ ಹೊಸ ಸಾಧ್ಯತೆ ಇದಾಗಿದ್ದು, ವರ್ಚುವಲ್ ಮೆಮೊರಿ ಬಳಕೆಯಿಂದಾಗಿ ಒಟ್ಟಾರೆ ಸಾಧನದ ವೆಚ್ಚ ತಗ್ಗಲೂ ಕಾರಣವಾದರೂ ಆಗಬಹುದು.
ವರ್ಚುವಲ್ RAM ಯಾಕೆ?
ಫಿಜಿಕಲ್ RAM ಹೆಚ್ಚು ತುಟ್ಟಿಯಾದ ಪರಿಣಾಮ ವರ್ಚುವಲ್ ಮೆಮೊರಿ ಬಳಕೆಯ ಸಾಧ್ಯತೆಗಳು ಹುಟ್ಟಿಕೊಂಡವು ಮತ್ತು ಅದನ್ನು ಸಾಧ್ಯ ಕೂಡ ಮಾಡಲಾಯಿತು. ಸ್ಟೋರೇಜ್ ಮಧ್ಯಮಗಳಾದ ಹಾರ್ಡ್ ಡಿಸ್ಕ್ ಮತ್ತು ಇತರ ಸಾಧನಗಳಿಗೆ ಹೋಲಿಸಿದರೆ ಪ್ರತಿ ಗಿಗಾಬೈಟ್‌ಗೆ ಫಿಸಿಕಲ್ RAM ಈಗಲೂ ತುಟ್ಟಿಯೇ ಆಗಿದೆ. ಈ ಕಾರಣಕ್ಕಾಗಿಯೇ ಅಗ್ಗದ RAM ಬಳಕೆಯ ಫಲವಾಗಿ ವರ್ಚುವಲ್ ಮೆಮೋರಿಯನ್ನು ಬಳಸಿಕೊಳ್ಳಲಾಗುತ್ತಿದೆ. ಪರಿಣಾಮ ಯಾವುದೇ ಕಂಪ್ಯೂಟರ್‌ಗೆ ಈಗ ಫಿಸಿಕಲ್ RAM ಜತೆಗೆ ಹೆಚ್ಚುವರಿಯಾಗಿ ವರ್ಚುವಲ್ RAM ಬಳಕೆಯಾಗುತ್ತಿರುವುದರಿಂದ ಹೆಚ್ಚು ಮೆಮೊರಿ ದೊರೆಯುತ್ತಿದೆ. ಇನ್ನೊಂದು ಕಾರಣ ಏನೆಂದರೆ-ಎಲ್ಲಾಕಂಪ್ಯೂಟರ್‌ಗಳಲ್ಲಿಫಿಜಿಕಲ್ RAM ಇನ್‌ಸ್ಟಾಲ್ ಮಾಡಲು ಮಿತಿಯನ್ನು ಹೊಂದಿವೆ. ಈ ಮಿತಿಯನ್ನು ಮೀರಿ ಮೆಮೊರಿ ಬಳಕೆಗೆ ವರ್ಚುವಲ್ RAM ಅನುವು ಮಾಡಿಕೊಡುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿವರ್ಚುವಲ್ ಮೆಮೊರಿ ಬಳಕೆಯೂ ಹೆಚ್ಚಾಗುತ್ತಿದೆ.
ಪ್ರಯೋಜನಗಳೇನು?
ವರ್ಚುವಲ್ RAM ಬಳಕೆಯಿಂದ ಏಕಕಾಲಕ್ಕೆ ಹೆಚ್ಚೆಚ್ಚು ಅಪ್ಲಿಕೇಷನ್‌ಗಳನ್ನು ರನ್ ಮಾಡಲು ಸಾಧ್ಯವಾಗುತ್ತದೆ. ಫಿಜಿಕಲ್ ರಾರಯಮ್‌ನಲ್ಲಿರನ್ ಮಾಡಲು ಸಾಧ್ಯವಾಗದೇ ಇರುವ ಬೃಹತ್ ಅಪ್ಲಿಕೇಷನ್‌ಗಳನ್ನು ರನ್ ಮಾಡಲು ವರ್ಚುವಲ್ ರಾರಯಮ್ ನೆರವು ನೀಡುತ್ತದೆ. ಫಿಸಿಕಲ್ RAM ವೆಚ್ಚಕ್ಕೆ ಹೋಲಿಸಿದರೆ ಇದು ಅಗ್ಗ. ಕಡಿಮೆ ವೆಚ್ಚದಲ್ಲೇ ಹೆಚ್ಚು ಮೆಮೊರಿಯನ್ನು ಬಳಸಿಕೊಳ್ಳಬಹುದು. ಹಾರ್ಡ್‌ವೇರ್ ಮತ್ತು ಆಪರೇಟಿಂಗ್ ಸಿಸ್ಟಮ್ ಬೆಂಬಲಿಸುವ ಗರಿಷ್ಠ ಪ್ರಮಾಣದ ರಾರಯಮ್ ಹೊಂದಿರುವ ಸಿಸ್ಟಂನಲ್ಲಿಮೆಮೊರಿಯನ್ನು ಹೆಚ್ಚಿಸುವ ಅವಕಾಶವನ್ನು ಸೃಷ್ಟಿಸುತ್ತದೆ. ವರ್ಚುವಲ್ ರಾರಯಮ್ ಬಳಕೆಯ ಪ್ರಯೋಜನಗಳ ಜತೆಗೆ ಒಂದಿಷ್ಟು ಅನಾನುಕೂಲಗಳೂ ಇವೆ; ಫಿಸಿಕಲ್ RAMಗೆ ಹೋಲಿಸಿದರೆ ವರ್ಚುವಲ್ ಮೆಮೊರಿಯ ದಕ್ಷ ತೆಯ ಪ್ರಮಾಣ ಕಡಿಮೆ. ಸಿಸ್ಟಮ್‌ನ ಒಟ್ಟಾರೆ ಪ್ರದರ್ಶನದ ಮೇಲೆ ಋುಣಾತ್ಮಕ ಪರಿಣಾಮ ಬೀರಬಲ್ಲದು.
ಏನಿದು RAM?
RAM ಎಂದರೆ random-access memory. ಇದು ಕಂಪ್ಯೂಟರ್‌ನ ಪ್ರಮುಖ ಭಾಗ. ಕಿರು ಅವಧಿಯ ಮೆಮೊರಿಯಾಗಿರುವ ರಾರಯಮ್‌ನಲ್ಲಿಪ್ರೊಸೆಸರ್‌ನ ಅಗತ್ಯಕ್ಕೆ ತಕ್ಕಂತೆ ಡೇಟಾ ಸಂಗ್ರಹವಾಗುತ್ತದೆ. RAM ಮೆಮೊರಿ ಹೆಚ್ಚಾದಷ್ಟು ಕಂಪ್ಯೂಟರ್‌ನ ಕಾರ್ಯಕ್ಷ ಮತೆಯೂ ಹೆಚ್ಚಾಗುತ್ತದೆ. ಏಕಕಾಲಕ್ಕೆ ಹತ್ತಾರು ಅಪ್ಲಿಕೇಷನ್‌ಗಳ ಮೂಲಕ ಕೆಲಸ ಮಾಡುವವರಿಗೆ RAM ಹೆಚ್ಚಿರುವ ಕಂಪ್ಯೂಟರ್‌ಗಳೇ ಬೇಕಾಗುತ್ತವೆ. ಹಾಗಾಗಿ, ಇದು ಕಂಪ್ಯೂಟರ್‌ನ ಪ್ರಮುಖ ಭಾಗ ಎಂದು ಪರಿಗಣಿಸಲಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ