ಶುಕ್ರವಾರ, ಜುಲೈ 23, 2021

clubhouse vs twitter spaces: ಕ್ಲಬ್‌ಹೌಸ್ ಬೇಡ್ವಾ, ಸ್ಪೇಸಸ್‌ಗೆ ಬನ್ನಿ!

- ಮಲ್ಲಿಕಾರ್ಜುನ ತಿಪ್ಪಾರ
ಪಾಡ್‌ಕಾಸ್ಟ್‌ಗೆ ಅಷ್ಟೇ ಸೀಮಿತವಾಗಿದ್ದ ಆಡಿಯೋ ವೇದಿಕೆಗೆ ಹೊಸ ಖದರ್ ತಂದುಕೊಟ್ಟಿದ್ದು ‘ಕ್ಲಬ್‌ಹೌಸ್’ ಆ್ಯಪ್. ಈ ವರ್ಷದ ಆರಂಭದಲ್ಲಿ ಆಂಡ್ರಾಯ್ಡ್ ಸಾಧನಗಳಲ್ಲೂ ಬಳಕೆಗೆ ಅವಕಾಶ ಸಿಗುತ್ತಿದಂತೆ ಕ್ಲಬ್‌ಹೌಸ್‌ನ ಬಳಕೆಯ ಒಟ್ಟು ಸಾಧ್ಯತೆಯೇ ಬದಲಾಗಿ ಹೋಗಿದೆ. ಭಾರತದಲ್ಲಂತೂ ಈ ಕ್ಲಬ್‌ಹೌಸ್ ನಾಗಾಲೋಟದಲ್ಲಿ ಓಡುತ್ತಿದೆ. ಅತಿ ಕಡಿಮೆ ಅವಧಿಯಲ್ಲಿ 20 ಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿರುವ ಈ ಆ್ಯಪ್ ಒಟ್ಟು 50 ಲಕ್ಷಕ್ಕೂ ಅಧಿಕ ಡೌನ್‌ಲೋಡ್ ಕಂಡಿದೆ. 

ಕ್ಲಬ್‌ಹೌಸ್‌ನ ಈ ಜನಪ್ರಿಯತೆಗೆ ಬೆಚ್ಚಿಬಿದ್ದಿರುವ ಸೋಷಿಯಲ್ ಮೀಡಿಯಾ ದೈತ್ಯ ಕಂಪನಿಗಳಾದ ೇಸ್‌ಬುಕ್, ಟ್ವಿಟರ್ ಅಂಥದ್ದೇ ವೇದಿಕೆಯನ್ನು ಸೃಷ್ಟಿಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ಟ್ವಿಟರ್‌ನ ‘ಸ್ಪೇಸಸ್’ ವೇದಿಕೆ ಸಕ್ರಿಯವಾಗಿದೆ. ಇದು ಕೂಡ ಕ್ಲಬ್‌ಹೌಸ್ ಆ್ಯಪ್ ರೀತಿಯಲ್ಲೇ ಆಡಿಯೋ ವೇದಿಕೆಯಾಗಿದೆ. ಐಒಎಸ್ ಮತ್ತು ಆಂಡ್ರಾಯ್ಡ್ ಸಾಧನಗಳಿಗೆ ಇದು ಸಪೋರ್ಟ್ ಮಾಡುತ್ತದೆ. ನೀವು ಟ್ವಿಟರ್‌ನ ಈ ಸ್ಪೇಸಸ್‌ನಲ್ಲಿ ಮಾತುಗಳನ್ನು ಕೇಳಬಹುದು; ನೀವೇ ಸ್ಪೀಕರ್ ಆಗಬಹುದು; ನಿಮಗೆ ಬೇಕಾದ ವೇದಿಕೆಗಳಿಗೆ ಹೋಗಿ ಕುಳಿತುಕೊಳ್ಳಬಹುದು. ಸದ್ಯಕ್ಕೆ ಈ ಸ್ಪೇಸ್ ವೆಬ್‌ನಲ್ಲಿ ಸಿಗುವುದಿಲ್ಲ, ಆದರೆ ನೀವು ಕೇಳುಗರಾಗಿ ಸೇರಿಕೊಳ್ಳಬಹುದು.

ಸ್ಪೇಸಸ್ ಶುರು ಮಾಡುವುದು ಹೇಗೆ?

ನೀವು ಐಒಎಸ್ ಬಳಕೆದಾರರಾಗಿದ್ದರೆ, ಎರಡು ರೀತಿಯಲ್ಲಿ ಟ್ವಿಟರ್‌ನಲ್ಲಿ ಸ್ಪೇಸ್ ಚರ್ಚೆ ಆರಂಭಿಸಬಹುದು. ನಿಮ್ಮ ಹೋಮ್ ಟೈಮ್‌ಲೈನ್ ಟ್ವೀಟ್ ಕಾಂಪೋಸ್ ಮೇಲೆ ದೀರ್ಘಾವಧಿಗೆ ಒತ್ತಿ ಹಿಡಿಯಬೇಕು. ಆಗ ಕಾಣಿಸಿಕೊಳ್ಳುವ ಸ್ಪೇಸಸ್ ಐಕಾನ್ ಮೇಲೆ ಟ್ಯಾಪ್ ಮಾಡಿ, ಆಗ ನೀವು ಸ್ಪೇಸ್ ಹಾಸ್ಟ್ ಆಗಿ ಎಂಟ್ರಿ ಪಡೆದುಕೊಳ್ಳುತ್ತೀರಿ. ಅಥವಾ ನಿಮ್ಮ ಪ್ರೊೈಲ್ ಇಮೇಜ್ ಮೇಲೆ ಟ್ಯಾಪ್ ಮಾಡಿ ಮತ್ತು ಬಲಬದಿಗೆ ಸ್ಕ್ರಾಲ್ ಮಾಡಿ ಮತ್ತು ಸ್ಪೇಸಸ್ ಮೇಲೆ ಟ್ಯಾಪ್ ಮಾಡುವ ಮೂಲಕ ಆರಂಭಿಸಬಹುದು. ಆಂಡ್ರಾಯ್ಡ್ ೆನ್‌ಗಳಲ್ಲಾದರೆ, ಮೊದಲಿಗೆ ಟ್ವಿಟರ್ ಆ್ಯಪ್ ಓಪನ್ ಮಾಡಿ, ಸ್ಕ್ರೀನ್‌ನ ಬಲಬದಿಯ ಕೆಳ ತುದಿಯಲ್ಲಿ ಕಾಣುವ ಟ್ವೀಟ್ ಕಾಂಪೋಸ್ ಮಾಡುವ ಐಕಾನ್ ಮೇಲೆ ಟ್ಯಾಪ್ ಮಾಡಿ. ಆಗ ನಿಮಗೆ ಸ್ಪೇಸಸ್, ೆಟೋಸ್, ಜಿಐಎ್ ಮತ್ತು ಟ್ವೀಟ್ ಎಂಬ ಪದಗಳು ಐಕಾನ್ ಸಹಿತ ಕಾಣುತ್ತವೆ. ಸ್ಪೇಸಸ್ ಐಕಾನ್ ಮೇಲೆ ಟ್ಯಾಪ್ ಮಾಡಿದಾಗ,  ಸ್ಟಾರ್ಟ್ ಯುವರ್ ಸ್ಪೇಸ್ ಪಾಪ್ ಅಪ್ ಕಾಣಿಸಿಕೊಳ್ಳುತ್ತದೆ. ಅಲ್ಲಿಯೇ ನಿಮ್ಮ ಚರ್ಚೆಗೆ ಹೆಸರನ್ನು ಕೂಡ ದಾಖಲಿಸಬಹುದು. ಬಳಿಕ ಸ್ಟಾರ್ಟ್ ಯುವರ್ ಸ್ಪೇಸ್ ಬಟನ್ ಮೇಲೆ ಟ್ಯಾಪ್ ಮಾಡಿದಾಗ ನೀವು ಹೋಸ್ಟ್ ಆಗಿ  ಸಕ್ರಿಯರಾಗುತ್ತೀರಿ ಮತ್ತು ನಿಮ್ಮ ಚಾಟ್ ರೂಮ್‌ಗೆ ಉಳಿದವರನ್ನು ಆಮಂತ್ರಿಸಬಹುದು.

ಯಾರೆಲ್ಲ ಜಾಯಿನ್ ಆಗಬಹುದು? 
ಸ್ಪೇಸಸ್ ವೇದಿಕೆ ಮುಕ್ತವಾಗಿದ್ದು, ಯಾರು ಬೇಕಾದರೂ ಕೇಳುಗರಾಗಿ ಸೇರಿಕೊಳ್ಳಬಹುದು. ಟ್ವಿಟರ್‌ನಲ್ಲಿ ನಿಮ್ಮನ್ನು ಾಲೋ ಮಾಡದೇ ಇರುವುವರು ಕೂಡ ಇದರಲ್ಲಿ ಕೇಳುಗರಾಗಿ ಬಂದು ಕುಳಿತುಕೊಳ್ಳಲು ಅವಕಾಶವಿದೆ. ಲಿಂಕ್ ಕಳುಹಿಸುವ ಮೂಲಕ ನೇರವಾಗಿ ಕೇಳುಗರನ್ನೂ ಆಮಂತ್ರಿಸಬಹುದು. ನಿಮ್ಮ ಸ್ಪೇಸಸ್ ಲಿಂಕ್ ಅನ್ನು ಟ್ವೀಟ್ ಮಾಡುವ ಮೂಲಕ ಅಥವಾ ಇತರೆ ವೇದಿಕೆಗಳಲ್ಲಿ ಅದನ್ನು ಷೇರ್ ಮಾಡುವುದರೊಂದಿಗೆ ಕೇಳುಗರನ್ನು ಕರೆದುಕೊಳ್ಳಬಹುದಾಗಿದೆ.

ಒದಗಿಸಲಾದ ನಿಗದಿತ ವೇಳೆಯಲ್ಲಿ  ಈ ವೇದಿಕೆಯಲ್ಲಿ 11 ಜನರು ಮಾತ್ರವೇ ಸ್ಪೀಕರ್ ಆಗಲು ಅವಕಾಶವಿದೆ. ಯಾವಾಗ ನೀವು ಹೊಸ ಸ್ಪೇಸ್ ಸೃಷ್ಟಿಸುತ್ತೀರಿ ಆಗ ನಿಮ್ಮ ಸ್ಪೇಸ್‌ಗೆ ಹೆಸರು ಕೊಡಲು ಅವಕಾಶವಿರುವುದನ್ನು ಕಾಣಬಹುದು ಮತ್ತು ಆ ಮೂಲಕ ಸ್ಪೇಸ್ ಸ್ಟಾರ್ಟ್ ಮಾಡಬಹುದು. ನೀವು ನಿಮ್ಮ ಸ್ಪೇಸ್ ಅನ್ನು ಶೆಡ್ಯೂಲ್ ಮಾಡಬಹುದು ಕೂಡ. 

ಒಮ್ಮೆ ಸ್ಪೇಸಸ್ ಶುರುವಾದ ಮೇಲೆ ಹೋಸ್ಟ್ ಮಾಡುವವರು, ಪೀಪಲ್ ಐಕಾನ್ ಮೇಲೆ ಟ್ಯಾಪಿಂಗ್ ಮಾಡುವ ಮೂಲಕ ಸ್ಪೀಕರ್ ಆಗಲು ಕೇಳುಗರಿಗೆ ರಿಕ್ವೆಸ್ಟ್ ಕಳುಹಿಸಬಹುದು. ಹಾಗೆಯೇ, ಕೇಳುಗರಲ್ಲಿ ಯಾರಿಗಾದರೂ ಮಾತನಾಡಬೇಕು ಎನಿಸಿದರೆ, ಮೈಕೋ್ರೆನ್ ಕೆಳಗಡೆ ಕಾಣುವ ರಿಕ್ವೆಸ್ಟ್ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಅನುಮತಿಯನ್ನು ಪಡೆದುಕೊಳ್ಳಬಹುದು. 

ಕ್ಲಬ್‌ಹೌಸ್ ಆ್ಯಪ್‌ಗೆ ಒಗ್ಗಿಕೊಂಡವರಿಗೆ ಟ್ವಿಟರ್‌ನ ಸ್ಪೇಸಸ್ ತುಸು ಕಷ್ಟ ಎನ್ನಬಹುದು. ಕ್ಲಬ್‌ಹೌಸ್‌ನಷ್ಟು ಇದು ಬಳಕೆದಾರಸ್ನೇಹಿಯಂತೆ ಕಾಣುತ್ತಿಲ್ಲಘಿ. ಸ್ಪೇಸಸ್ ಈಗಷ್ಟೇ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಟ್ವಿಟರ್ ಈ ವೇದಿಕೆಯನ್ನು ಇನ್ನಷ್ಟು ಹೆಚ್ಚು ಆಪ್ತವಾಗಿಸಬಹುದು.


ಈ ಲೇಖನವು ವಿಜಯ ಕರ್ನಾಟಕ ಟೆಕ್ ನೋ ಪುರವಣಿಯಲ್ಲಿ 2021ರ ಜುಲೈ 23ರಂದು ಪ್ರಕಟವಾಗಿದೆ.


ಕಾಮೆಂಟ್‌ಗಳಿಲ್ಲ: