ಶುಕ್ರವಾರ, ಜುಲೈ 15, 2022

Briton former PM Boris Johnson: ಮೋಜುಗಾರ ಬೋರಿಸ್‌ ಜಾನ್ಸನ್

ಬೋರಿಸ್‌ ಜಾನ್ಸನ್‌ ಬ್ರಿಟನ್‌ ಪಿಎಂ ಸ್ಥಾನವನ್ನು ತೊರೆದಿದ್ದಾರೆ. ವಿಲಕ್ಷ ಣ ವ್ಯಕ್ತಿತ್ವದೊಂದಿಗೆ ನಾಯಕತ್ವವನ್ನು ಪ್ರದರ್ಶಿಸುತ್ತಿದ್ದ ಬೋರಿಸ್‌ ಜೀವನವೇ ಮಜವಾಗಿದೆ.


- ಮಲ್ಲಿಕಾರ್ಜುನ ತಿಪ್ಪಾರ
ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರ ಬರುವ ‘ಬ್ರೆಕ್ಸಿಟ್‌’ ಪ್ರಕ್ರಿಯೆಯನ್ನು ಅಡೆ-ತಡೆಗಳ ಮಧ್ಯೆಯೇ ಪೂರ್ಣಗೊಳಿಸಿದ ಬೋರಿಸ್‌ ಜಾನ್ಸನ್‌, ಪ್ರಧಾನಿ ಪಟ್ಟದಿಂದಲೇ ‘ಎಕ್ಸಿಟ್‌’ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿಬ್ರಿಟನ್‌ ಕಂಡ ‘ವಿಲಕ್ಷ ಣ’ ಪ್ರಧಾನಿ ಅವರು. ತಮ್ಮ ಮ್ಯಾನರಿಸಂ ಹಾಗೂ ನಿರ್ಧಾರಗಳ ಮೂಲಕ ಅದನ್ನು ಆಗಾಗ ಸಾಬೀತು ಮಾಡಿದ್ದಾರೆ. 58 ವರ್ಷದ ಬೋರಿಸ್‌ ಮೇಲ್ನೋಟಕ್ಕೆ ಹುಡುಗಾಟದ ಹುಡುಗನಂತೆ ಕಂಡರೂ, ಆಳದಲ್ಲಿಅವರಲ್ಲೊಬ್ಬ ನಾಯಕನಿದ್ದಾನೆ, ಸಂದರ್ಭ ಬಂದಾಗೆಲ್ಲಗಟ್ಟಿ ನಿರ್ಧಾರಕ್ಕೆ ಹಿಂಜರಿಯುವುದಿಲ್ಲಎಂಬುದನ್ನು ಈ ಮೂರು ವರ್ಷಗಳಲ್ಲಿಮನದಟ್ಟು ಮಾಡಿಸಿದ್ದಾರೆ.

ಬೋರಿಸ್‌ ಅವರು ಹಗರಣಗಳಲ್ಲೇ ಕಾಲ ಹರಣ ಮಾಡಿದಂತಿದೆ. ಕೆಲವೊಂದರಲ್ಲಿಅವರೇ ನೇರವಾಗಿ ಭಾಗಿಯಾದರೆ, ಮತ್ತೊಂದಿಷ್ಟು ಅವರಿಗೆ ಸಂಬಂಧ ಇರದಿದ್ದರೂ ತಲೆ ಕೊಡಬೇಕಾದ ಪರಿಸ್ಥಿತಿ ಎದುರಾಯಿತು. ಅವರ ರಾಜೀನಾಮೆಯ ಕೊನೆಯ ಪರದೆ ಎಳೆದಿದ್ದು, ನಾರಾಯಣಮೂರ್ತಿ ಅವರ ಅಳಿಯ ಹಾಗೂ ವಿತ್ತ ಸಚಿವರಾಗಿದ್ದ ರಿಷಿ ಸುನಾಕ್‌ ಮತ್ತು ಪಾಕಿಸ್ತಾನ ಮೂಲದ, ಆರೋಗ್ಯ ಸಚಿವ ಸಾಜಿದ್‌ ಜಾವಿದ್‌. ಇವರಿಧಿಬ್ಬರೂ ತಮ್ಮ ಹುದ್ದೆಗಳಿಂದ ನಿರ್ಗಮಿಸಿ, ಬೋರಿಸ್‌ ಅವರು ಪ್ರಧಾನಿ ಹುದ್ದೆಯನ್ನು ತ್ಯಜಿಸಲೇಬೇಕಾದ ಒತ್ತಡ ಸೃಷ್ಟಿಸಿದರು. ರಾಜಕೀಯವಾಗಿ ಬ್ರಿಟನ್‌ನ ಅತ್ಯುಧಿನ್ನತ ಹುದ್ದೆಗೇರಿದ ಬೋರಿಸ್‌ ಅವರ ಲೈಫ್‌ ಅಷ್ಟೇ ಕಲರ್‌ಫುಲ್‌. ವರ್ಣರಂಜಿತ ವ್ಯಕ್ತಿತ್ವ. ವೃತ್ತಿ, ಮದುವೆ ಹಾಗೂ ರಾಜಕೀಯದಲ್ಲಿಅವರದ್ದು ಎಂದೂ ಸರಳಧಿರೇಖೆಯಂಥ ಬದುಕಲ್ಲ; ವಕ್ರಗೆರೆಗಳೇ ಸೇರಿ ಹುಟ್ಟಿದ ಚಿತ್ತಾರ. 37ನೇ ವಯಸ್ಸಿಗೆ ಬ್ರಿಟನ್‌ ಸಂಸತ್ತಿಗೆ ಆಯ್ಕೆಯಾದ ಅವರು 7 ವರ್ಷ ಅನುಭವ ಪಡೆದರು. 2008ರಿಂದ 2016ರವರೆಗೆ ಲಂಡನ್‌ನ ಮೇಯರ್‌ ಆಗಿದ್ದರು. 2016ರಿಂದ 2018ರವರೆಗೆ ಬ್ರಿಟನ್‌ನ ವಿದೇಶಾಂಗ ಸಚಿವರಾಗಿ ತಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದರು. ಮೇಯರ್‌ ಆಗಿದ್ದ ಕಾಲದಲ್ಲಿಒಲಿಂಪಿಕ್ಸ್‌ ಕೂಟವನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಅವರಿಗಿದೆ. ಇದೇ ಸಾಧನೆಯೇ ಅವರಿಗೆ ಕನ್ಸರ್ವೇಟಿವ್‌ ಪಕ್ಷ ದೊಳಗೆ ಗಟ್ಟಿ ನಾಯಕನ ಸ್ಥಾನ ಒದಗಿಸಿ,  ಬ್ರಿಟನ್‌ ಪ್ರಧಾನಿ ಹುದ್ದೆಯವರೆಗೂ ಕರೆ ತಂದಿತು. 

· ಹಲವು ಅಡೆತಡೆಗಳ ಮಧ್ಯೆಯೇ ಬ್ರೆಕ್ಸಿಟ್‌ ಪ್ರಕ್ರಿಯೆ ಪೂರ್ಣಗೊಳಿಸಿದ ಬ್ರಿಟನ್‌ನ ಪ್ರಧಾನಿ
· ಹಲವು ಹಗರಣಗಳು, ಅಪವಾದಗಳು ಬೋರಿಸ್‌ ನೇತೃತ್ವದ ಸರಕಾರ ವಿಶ್ವಾಸ ಕಳೆದುಕೊಳ್ಳಲು ಕಾರಣ
· ಲಂಡನ್‌ ಮೇಯರ್‌ ಆಗಿ ಬೋರಿಸ್‌ ಅತ್ಯುತ್ತಮ ಕೆಲಸ ಮಾಡಿ ಹೆಸರುವಾಸಿಯಾಗಿದ್ದರು

ಬೋರಿಸ್‌ ಪೂರ್ತಿ ಹೆಸರು ಅಲೆಕ್ಸಾಂಡರ್‌ ಬೋರಿಸ್‌ ಡಿ ಪಿಫೆಲ್‌ ಜಾನ್ಸನ್‌. ಅಮೆರಿಕದ ನ್ಯೂಯಾರ್ಕ್‌ ಸಿಟಿಯಲ್ಲಿ1964 ಜೂನ್‌ 19ರಂದು ಜನಿಸಿದರು. ತಂದೆ ಇಂಗ್ಲಿಷ್‌ಮನ್‌ ಸ್ಟ್ಯಾನ್ಲಿಜಾನ್ಸನ್‌. ತಾಯಿ ಷಾರ್ಲೆಟ್‌ ಫಾಸೆಟ್‌. ಕಾಲೇಜಿನಲ್ಲಿದ್ದಾಗಲೇ ಇವರಿಬ್ಬರಿಗೆ ಬೋರಿಸ್‌ ಜನಿಸಿದರು. ಹಾಗಾಗಿ, ಬೋರಿಸ್‌ ಜಾನ್ಸನ್‌ ಅವರಿಗೆ ದ್ವಿಪೌರತ್ವವಿತ್ತು. ಆದರೆ, ತೆರಿಗೆ ಭಾರ ತಾಳಲಾರದೇ 2016ರಲ್ಲಿಅಮೆರಿಕದ ಪೌರತ್ವವನ್ನು ಬಿಟ್ಟುಕೊಟ್ಟರು. ಬೋರಿಸ್‌ಗೆ ಐದು ವರ್ಷ ಆದಾಗ, ಅವರ ತಂದೆ ಬ್ರಿಟನ್‌ಗೆ ಮರಳಿದರು. ಬಾಲ್ಯದಲ್ಲಿಬೋರಿಸ್‌ ಕಿವುಡರಾಗಿದ್ದರು. ಆದರೆ, ಈ ಸಮಸ್ಯಯೇನೂ ದೀರ್ಘಾವಧಿಗೆ ಇರಲಿಲ್ಲ. ಆಕ್ಸ್‌ಫರ್ಡ್‌ನಲ್ಲಿಶಿಕ್ಷ ಣವನ್ನು ಪಡೆದುಕೊಂಡರು. 

1987ರಲ್ಲಿಕಾಲೇಜ್‌ ಶಿಕ್ಷ ಣ ಪೂರೈಸಿದ ಬಳಿಕ ದಿ ಟೈಮ್ಸ್‌ನಲ್ಲಿಪತ್ರಕರ್ತರಾಗಿ ಕೆಲಸಕ್ಕೆ ಸೇರಿಕೊಂಡರು. ವರದಿ ವೇಳೆ ಮೂಲವನ್ನು ತಪ್ಪಾಗಿ ಉಲ್ಲೇಖಿಸಿದ ಪರಿಣಾಮ ಅವರನ್ನು ಕೆಲಸದಿಂದ ಕಿತ್ತು ಹಾಕಲಾಯಿತು. ಇಷ್ಟಾಗಿಯೂ ಬೋರಿಸ್‌ ದಿ ಡೈಲಿ ಟೆಲಿಗ್ರಾಫ್‌, ದಿ ಸ್ಪೆಕ್ಟೇಟರ್‌ನಂಥ ಪತ್ರಿಕೆಗಳಲ್ಲಿಕೆಲಸವನ್ನು ಪಡೆದುಕೊಳ್ಳಲು ಯಶಸ್ವಿಯಾದರೂ, ಹೇಳಿಕೊಳ್ಳುವಂಥ ಸಕ್ಸೆಸ್‌ ಸಿಗಲಿಲ್ಲ. ಆದರೆ, ಕಡಿಮೆ ಅವಧಿಯಲ್ಲೇ ಬಲಪಂಥೀಯ ಒಲವು ಉಳ್ಳ ಓದುಗರನ್ನು ತಮ್ಮತ್ತ ಸೆಳೆಯಲು ಯಶಸ್ವಿಯಾದರು. 80ರ ದಶಕದಲ್ಲಿ100 ಜನರ ಸಾವಿಗೆ ಕಾರಣವಾದ ಫುಟ್‌ಬಾಲ್‌ ಸ್ಟೇಡಿಯಂ ದುರಂತದ ಬಗ್ಗೆ ವಕ್ರವಾಗಿ ಮಾತನಾಡಿ, ಟೀಕೆಗೆ ಗುರಿಯಾಗಿದ್ದರು. ಸಂಪಾದಕೀಯಕ್ಕೆ ಸಂಬಂಧಿಸಿದಂತೆ ಸಂವೇದನಾ ರಹಿತವಾಗಿ ಮತ್ತು ಅಶ್ಲೀಲ ಕಮೆಂಟ್‌ ಮಾಡಿ, ಕ್ಷ ಮೆ ಕೇಳಿದ ಘಟನೆ 2004ರಲ್ಲಿನಡೆಯಿತು.

ಬೋರಿಸ್‌ ದೈಹಿಕ ಚಟುವಟಿಕೆಗಳು ಮತ್ತು ವ್ಯಾಯಾಮಗಳನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಅವರಿಗೆ ಫುಟ್‌ಬಾಲ್‌, ರಗ್ಬಿ ತುಂಬಾ ಇಷ್ಟ. ಜಾಗಿಂಗ್‌ ಇನ್ನೂ ಇಷ್ಟ. ಹಾಗಾಗಿ, ಲಂಡನ್‌ನ ಬೀದಿಗಳಲ್ಲಿಜಾಗಿಂಗ್‌ ಮಾಡುತ್ತಾ ಸೈಕಲ್‌ ರೈಡ್‌ ಮಾಡುತ್ತಾ ಹೋಗುವುದನ್ನು ಜನ ನೋಡಬಹುದು. ರಗ್ಬಿ ವಿಷಯದಲ್ಲಿಇವರ ಭಾವಾವೇಶ ಎಷ್ಟೆಂದರೆ, ವಿದೇಶಾಂಗ ಕಾರ್ಯದರ್ಶಿಯಾಗಿ ಜಪಾನ್‌ಗೆ ಹೋಗಿದ್ದಾಗ ಆಟವಾಡುತ್ತಾ 10 ವರ್ಷದ ಬಾಲಕನೊಬ್ಬನನ್ನು ದೂಡಿ ಹಾಕಿದ್ದು ಭಾರಿ ಸುದ್ದಿಯಾಗಿತ್ತು. 2006ರಲ್ಲಿಫಿಫಾ ವರ್ಲ್ಡ್‌ ಕಪ್‌ ಪಂದ್ಯಾವಳಿ ವೇಳೆಯೂ ಬೋರಿಸ್‌ ಟೀಕೆಗೆ ಗುರಿಯಾಗಿದ್ದರು.

ರಾಸಲೀಲೆ ಕತೆಗಳು, ಹಗರಣಗಳು, ವಿಲಕ್ಷ ಣ ವ್ಯಕ್ತಿತ್ವದಿಂದಲೇ ಬೋರಿಸ್‌ ಹೊರ ಜಗತ್ತಿಗೆ ಹೆಚ್ಚು ಗೊತ್ತು. ಆದರೆ, ‘ಮಾಡೆಲ್‌ ಬಸ್‌’ಗಳನ್ನು ತಯಾರಿಸುವ ಪ್ರತಿಭೆ ಹೊಂದಿದ್ದಾರೆಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಹಾಗಂತ ಅವರೇನೂ ಫ್ಯಾನ್ಸಿ ಬಸ್‌ಗಳನ್ನು ಮಾಡುವುದಿಲ್ಲ. ಬದಲಿಗೆ, ಹಳೆಯ ಮದ್ಯದ ಬಾಕ್ಸ್‌ಗಳು, ಪೇಂಟ್ಸ್‌ ಬಳಸಿಕೊಂಡು ಉತ್ಕೃಷ್ಟವಾದ ಮಾಡೆಲ್‌ ಬಸ್‌ಗಳನ್ನು ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಬಹುಶಃ ಅವರ ಈ ಹವ್ಯಾಸವೇ ‘ಬೋರಿಸ್‌ ಬಸ್‌’ ಯೋಜನೆಗೆ ಕಾರಣವಾಗಿರಬಹುದು. ಲಂಡನ್‌ನಲ್ಲಿಹೈಬ್ರಿಡ್‌ ಸಾರ್ವಜನಿಕ ಬಸ್‌ ಸೌಲಭ್ಯ ಕಲ್ಪಿಸಿದ್ದರು. ಆದರೆ, ಲಂಡನ್‌ ಮೇಯರ್‌ ಹುದ್ದೆಯಿಂದ ಕೆಳಗಿಳಿಯುಧಿತ್ತಿದ್ದಂತೆ ಆ ಯೋಜನೆ ಕೂಡ ರದ್ದಾಯಿತು. 

ಜಾನ್ಸನ್‌ ಅವರ ಎರಡನೇ ಪತ್ನಿಧಿಯಾಗಿದ್ದ ಮರೀನಾ ವೀಲರ್‌ ಭಾರತ ಮೂಲಧಿದವರು. ಇವರು ಪತ್ರಕರ್ತ ಸರ್‌ ಚಾರ್ಲ್ಸ್ ವೀಲರ್‌ ಮತ್ತು ದೀಪ್‌ ಸಿಂಗ್‌ ಮಗಳು. ಈ ದೀಪ್‌ ಸಿಂಗ್‌ ಯಾರೆಂದರೆ, ಖ್ಯಾತ ಬರಹಗಾರ ಖುಷ್ವಂತ್‌ ಸಿಂಗ್‌ ಅವರ ತಮ್ಮ ದಲ್ಜಿತ್‌ ಸಿಂಗ್‌ ಅವರ ಮೊದಲ ಪತ್ನಿ. ಹೀಗೆ, ಆಕೆ ಭಾರತದ ಮಗಳು. ಹಾಗಾಗಿ ಜಾನ್ಸನ್‌ ಕೂಡ ಭಾರತದ ಅಳಿಯ ಎನ್ನಬಹುದು. ಈ ಮದುವೆ 2020ರಲ್ಲಿವಿಚ್ಛೇದನದೊಂದಿಗೆ ಸಮಾಪ್ತಿಯಾಯಿತು. 2021ರಲ್ಲಿಕ್ಲೈಮೆಟ್‌ ಆ್ಯಕ್ಟಿವಿಸ್ಟ್‌ ಕ್ಯಾರಿ ಸೈಮಂಡ್ಸ್‌ ಅವರನ್ನು ಮದುವೆಯಾಗಿದ್ದಾರೆ. ಇವರ ಮೊದಲನೆಯ ಪತ್ನಿ ಹೆಸರು ಅಲ್ಲೆಗ್ರಾ. ಇವರನ್ನು 1987ರಲ್ಲಿಮದವೆಯಾದರು, 1993ರಲ್ಲಿವಿಚ್ಛೇದನ ನೀಡಿದರು. 

· ಅಮೆರಿಕ ಮತ್ತು ಇಂಗ್ಲೆಡ್‌ ದ್ವಿಪೌರತ್ವ ಹೊಂದಿದ್ದ ಜಾನ್ಸನ್‌ ಅಮೆರಿಕ ಪೌರತ್ವ ತ್ಯಜಿಸಿದ್ದಾರೆ
· ದಿ ಟೈಮ್ಸ್‌, ದಿ ಸ್ಪೆಕ್ಟೇಟರ್‌, ದಿ ಟೆಲಿಗ್ರಾಫ್‌ ಪತ್ರಿಕೆಗಳಲ್ಲಿಕೆಲಸ, ಅಂಥ ಸಕ್ಸೆಸ್‌ ಏನೂ ಸಿಗಲಿಲ್ಲ
· ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಬೋರಿಸ್‌ ಮುಂದಿನ ನಡೆಯ ಬಗ್ಗೆ ಕುತೂಹಲ

ಬೋರಿಸ್‌ ದಿ ಸ್ಪೆಕ್ಟೇಟರ್‌ ಪತ್ರಿಕೆಯಲ್ಲಿಕೆಲಸ ಮಾಡುತ್ತಿದ್ದಾಗ ಇಬ್ಬರು ಮಹಿಳೆರ ಮೇಲೆ ಕೈ ಹಾಕಿದ್ದರಂತೆ. ಮುಂದೆ ಪ್ರಧಾನಿಯಾದಾಗ ಆ ಮಹಿಳೆಯರು ಈ ವಿಷಯವನ್ನು ಬಹಿರಂಗಪಡಿಸಿದರು. ಶಾಡೋ ಆರ್ಟ್‌ ಮಿನಿಸ್ಟರ್‌ ಆಗಿದ್ದಾಗ ಪೆಟ್ರೋನೆಲ್ಲಾವ್ಯಾಟ್‌ ಜತೆಗಿನ ಅನೈತಿಕ ಸಂಬಂಧ ಹೊರಬೀಳುತ್ತಿದ್ದಂತೆ ಬೋರಿಸ್‌ 2004ರಲ್ಲಿತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 2009ರಲ್ಲಿಲಂಡನ್‌ ಮೇಯರ್‌ ಆಗಿದ್ದಾಗ, ಹೆಲೆನ್‌ ಮ್ಯಾಕಿನ್ರ್ಟೈ ಎಂಬಾಕೆ ಜತೆ ದೈಹಿಕ ಸಂಪರ್ಕದಲ್ಲಿದ್ದರು. ಅಲ್ಲದೇ ಹೆಣ್ಣು ಮಗುವಿನ ತಂದೆ ಕೂಡ ಆದರು. ಬೋರಿಸ್‌ ರಾಸಲೀಲೆ ಕತೆಗಳು ಬ್ರಿಟನ್‌ನ ಟ್ಯಾಬ್ಲಾಯ್ಡ್‌ಗಳಿಗೆ ಭಾರಿ ಸುದ್ದಿ ಭೋಜನವನ್ನು ಒದಗಿಸುತ್ತಿದ್ದವು. 

ಏನೇ ಆಗಲಿ, ಬ್ರಿಟನ್‌ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೆಚ್ಚಿಕೊಳ್ಳಧಿಲೇಬೇಕು. ತಮ್ಮದೇ ಪಕ್ಷ ದ ನಾಯಕನೊಬ್ಬ ಹಾದಿ ತಪ್ಪುತ್ತಿರುವುದು ಗೊತ್ತಾಗುಧಿತ್ತಿದ್ದಂತೆ ಅದನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿಪ್ರತಿಭಟಿಸುತ್ತಾರೆ, ಪಕ್ಷ ದೊಳಗೇ ಭಿನ್ನಭಿಪ್ರಾಯಗಳಿಗೆ ಬೆಲೆ ನೀಡುತ್ತಾರೆ. ಈ ಒಂದು ಗುಣವೇ ಜಗತ್ತಿನ ಎಲ್ಲರಾಷ್ಟ್ರಗಳ ಪ್ರಜಾ ಪ್ರಭುತ್ವಕ್ಕೆ ಮಾದರಿಯಾಗಿದೆ. ಅದೇ ಮೌಲ್ಯಗಳಿಗೆ ಬೆಲೆ ಕೊಟ್ಟು ಬೋರಿಸ್‌ ಈಗ ಬ್ರಿಟನ್‌ ಪದ ಚ್ಯುತರಾಗಿಧಿದ್ದಾರೆ. ಹಾಗಾದರೆ, ಅವರ ಮುಂದಿರುವ ದಾರಿಗಳೇನು? ಅವರೇನು ಮಾಡುತ್ತಾರೆಂಬ ಪ್ರಶ್ನೆಗಳಿಗೆ ಬ್ರಿಟನ್ನಿಗರು ಉತ್ತರ ಹುಡುಕುಧಿತ್ತಿದ್ದಾರೆ. ರಾಜಕೀಯದಲ್ಲಿಏನು ಬೇಕಾದರೂ ಆಗಬಧಿಹುದು. ಇಂದು ಹೀರೊ ಆದವರು ನಾಳೆ ವಿಲನ್‌ ಆಗಬಹುದು; ವಿಲನ್‌ಗಳು ಹೀರೊ ಆಗಬಹುದು. ಮುಂದಿನ ಪ್ರಧಾನಿ ಆಯ್ಕೆಯವರೆಗೂ ಅವರೇ ಮುಂದುಧಿವರಿಯುತ್ತಾರೆ. ಆ ಬಳಿಕ ಏನು ಮಾಡಲಿ ದ್ದಾರೆಂಬುದನ್ನು ಕಾದು ನೋಡಬೇಕು.ಕಾಮೆಂಟ್‌ಗಳಿಲ್ಲ: