ಸ್ಕಾಟ್ಲೆಂಡ್‌ನಲ್ಲಿ ಮತ್ತೊಮ್ಮೆ ಜನಮತಗಣನೆ ನಡೆಯಲಿದೆಯಾ?
ಇತ್ತೀಚೆಗೆ ನಡೆದ ಸಾರ್ವತ್ರಿಕ ಬ್ರಿಟನ್ ಚುನಾವಣೆಯ ಫಲಿತಾಂಶ
ಗಮನಿಸಿದರೆ ಇಂಥದೊಂದು ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಸ್ಕಾಟಿಷ್
ನ್ಯಾಷನಲಿಸ್ಟ್ ಪಾರ್ಟಿ(ಎಸ್‌ಎನ್‌ಪಿ) ಸ್ಕಾಟ್ಲೆಂಡ್‌ನ ೫೯ ಸ್ಥಾನಗಳ ಪೈಕಿ ೫೬
ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು, ಈ ಅನುಮಾನಕ್ಕೆ ಕಾರಣ.
‘ಸದ್ಯಕ್ಕೆ ತಮಗೆ ಸಿಕ್ಕಿರುವ ಈ ಜಯ ಸ್ಕಾಟ್ಲೆಂಡ್‌ನ ಸ್ವಾತಂತ್ರ್ಯಕ್ಕೆ ದೊರೆತ
ಜನಾದೇಶವಲ್ಲ. ಆದರೆ, ವೆಸ್ಟ್‌ಮಿನಿಸ್ಟರ್ ಸ್ಕಾಟ್ಲೆಂಡ್‌ನ ಕೂಗನ್ನು
ಹಿಂದೆಂದಿಗಿಂತಲೂ ಅತ್ಯಂತ ಪರಿಣಾಮಕಾರಿಯಾಗಿ ಕೇಳಿಸಿಕೊಳ್ಳಬೇಕಾದ
ಅನಿವಾರ್ಯತೆ ಸೃಷ್ಟಿಸಿದೆ’ ಎಂದು ಎಸ್‌ಎನ್‌ಪಿ ನಾಯಕಿ ನಿಕೋಲ್
ಸ್ಟುರ್ಜೋನ್ ಹೇಳಿರುವುದು ಅನೇಕ ರಾಜಕೀಯ ಲೆಕ್ಕಾಚಾರಗಳಿಗೆ ದಾರಿ
ಮಾಡಿ ಕೊಟ್ಟಿದೆ. ಇದೇ ಮಾತನ್ನು ಎರಡನೇ ಬಾರಿ ಅಧಿಕಾರಕ್ಕೇರಿರುವ
ಪ್ರಧಾನಿ ಡೇವಿಡ್ ಕೆಮರಾನ್ ಕೂಡಾ ಪುಷ್ಠೀಕರಿಸುತ್ತಾರೆ. ಮತ್ತೆ ಅವರ
ಮುಂದಿರುವ ತಕ್ಷಣದ ಸವಾಲು ಕೂಡಾ ಸ್ಕಾಟ್ಲೆಂಡ್‌ಗೆ ಹಸ್ತಾಂತರಿಸಬೇಕಾಗಿರುವ
ಅಧಿಕಾರಗಳ ಪರಾಮರ್ಶೆಯೂ ಹೌದು.
ಈ ಇಬ್ಬರು ನಾಯಕರ ಸದ್ಯದ ಮನಸ್ಥಿತಿಗೆ ಅನುಗುಣವಾಗಿ
ಹೇಳುವುದಾದರೆ, ಇಂಗ್ಲೆಂಡ್ ಒಕ್ಕೂಟದಿಂದ ಸ್ಕಾಟ್ಲೆಂಡ್ ಸಿಡಿದು ಹೋಗುವ
ಯತ್ನ ಸದ್ಯಕ್ಕೆ ಘಟಿಸದಿರಬಹುದು. ಆದರೆ, ಅಂಥದೊಂದು ಸಾಧ್ಯತೆಯನ್ನಂತೂ
ಖಡಾಖಂಡಿತವಾಗಿ ತಳ್ಳಿ ಹಾಕುವಂತಿಲ್ಲ. ಇದಕ್ಕಾಗಿ ಬಹಳ ದಿನಗಳವರೆಗೂ
ಕಾಯಬೇಕಿಲ್ಲ. ಯಾಕೆಂದರೆ, ಮುಂದಿನ ವರ್ಷ ಅಂದರೆ, ೨೦೧೬ರ ಮೇ
ತಿಂಗಳಲ್ಲಿ ಸ್ಕಾಟ್ಲೆಂಡ್ ಸಂಸತ್ತಿಗೆ ಚುನಾವಣೆ ನಡೆಯಲಿದೆ. ಆಗ
ಖಂಡಿತವಾಗಿಯೂ ಎಸ್‌ಎನ್‌ಪಿ ಜನಮತ ಗಣನೆಯನ್ನು ತನ್ನ ಪ್ರಣಾಳಿಕೆಯಲ್ಲಿ
ಸೇರಿಸಿ, ಚುನಾವಣಾ ಅಖಾಡಕ್ಕಿಳಿಯುವುದು ಈಗಾಗಲೇ ಜನಜನಿತ.
ಹಾಗಾಗಿ, ಅಬ್ಬಾಬ್ಬ ಅಂದರೆ ಇನ್ನೊಂದು ವರ್ಷದ ಮಟ್ಟಿಗೆ ಸ್ಕಾಟ್ಲೆಂಡ್
ಸ್ವತಂತ್ರವಾಗುವ ಪ್ರಯತ್ನ ಮುಂದಕ್ಕೆ ಹೋಗಬಹುದು. ಈ ಅವಧಿಯಲ್ಲಿ
ಕೆಮರಾನ್ ನೇತೃತ್ವದ ಹೊಸ ಸರ್ಕಾರ ಯಾವ ರೀತಿ ಮತ್ತು ಹೇಗೆ ಸ್ಕಾಟ್ಲೆಂಡ್
ಸಮಸ್ಯೆಯನ್ನು ನಿರ್ವಹಿಸುತ್ತದೆ ಎಂಬುದರ ಮೇಲೆ ‘ಜನಮತಗಣನೆ’
ಹಣೆಬರಹ ನಿಂತಿದೆ.
ಇನ್ನೂ ವಿವರವಾಗಿ ನೋಡುವು ದಾದರೆ, ಬ್ರಿಟನ್ ಚುನಾವಣೆ ಫಲಿತಾಂಶ
ಪ್ರಕಟವಾಗುತ್ತಿದ್ದಂತೆ ಇಂಗ್ಲೆಂಡ್‌ನ ಬಹುತೇಕ ಪತ್ರಿಕೆಗಳು ತಮ್ಮ
ಸಂಪಾದಕೀಯನ್ನು ಒಂದೇ ಧ್ವನಿಯಲ್ಲಿ ಕೇಂದ್ರೀಕರಿಸಿದ್ದವು. ಡೇವಿಡ್
ಕೆಮರಾನ್ ಅಖಂಡ ಇಂಗ್ಲೆಂಡ್‌ನ ಕೊನೆಯ ಪ್ರಮುಖ ನಾಯಕರಾಗಲಿದ್ದಾರೆ
ಎಂಬ ಅಂಶವದು. ಅಂದರೆ, ಈಗಾಗಲೇ ಅಲ್ಲಿ ಅಂಥದೊಂದು ಮೂಡ್
ಸೃಷ್ಟಿಯಾಗಿರುವುದು ಸತ್ಯ. ಯಾಕೆಂದರೆ, ಎಸ್‌ಎನ್‌ಪಿ ನಾಯಕಿ ನಿಕೋಲ್ ಅವರು,
ಈಗ ದೊರೆತಿರುವ ಜಯ ಸ್ವಾತಂತ್ರ್ಯಕ್ಕೆ ಸಿಕ್ಕ ಆದೇಶವಲ್ಲ ಎನ್ನಬಹುದು. ಆದರೆ,
ವಾಸ್ತವದಲ್ಲಿ ಸ್ಕಾಟ್ಲೆಂಡ್ ಪೂರ್ತಿ, ವ್ಯಾಪಕವಾದ ಬೆಂಬಲ ದೊರೆತಿರುವುದು
ಪ್ರತ್ಯೇಕ ವಾಗಬೇಕೆಂಬ ದ್ಯೋತಕದ ಪ್ರಕ್ರಿಯೆಯ ಒಂದು ಭಾಗವಾಗಿ.
ಹಾಗೆಯೇ, ಕಳೆದ ಬಾರಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆ ಸಿದ್ದ ಕೆಮರಾನ್‌ಗೆ
ಈ ಬಾರಿ ಸ್ಕಾಟ್ಲೆಂಡ್ ಹೊರತುಪಡಿಸಿ, ಇಡೀ ಬ್ರಿಟನ್ ಹಾಗೂ ಇಂಗ್ಲೆಂಡ್
ನಲ್ಲಿ ಅಭೂತಪೂರ್ವ ಜಯ ಸಿಕ್ಕಿದ್ದು, ಇಂಗ್ಲೆಂಡ್‌ನಿಂದ ಸ್ಕಾಟ್ಲೆಂಡ್ ಸಿಡಿದು
ಹೋಗದಂತೆ ನೋಡಿಕೊಳ್ಳುವುದು ಹಾಗೂ ಐರೋಪ್ಯ ಒಕ್ಕೂಟದಿಂದ ಹೊರ
ಬನ್ನಿ ಎಂಬ ಸಂದೇಶದ ಭಾಗವಾಗಿ. ಆದರೆ, ಕೆಮರಾನ್ ಅಧಿಕಾರಾವಧಿಯಲ್ಲೇ
ಬ್ರಿಟನ್ ಛಿದ್ರವಾಯಿತು ಮತ್ತು ಐರೋಪ್ಯ ಒಕ್ಕೂಟದಿಂದ ಹೊರ ಬಿತ್ತು
ಎಂಬ ಅಪವಾದ ಹೊತ್ತುಕೊಳ್ಳಲು ಸಿದಟಛಿರಿಲ್ಲ ಎಂಬುದನ್ನು ಪೀಟರ್ ರೆಡೆಲ್
‘ಟೆಲಿಗ್ರಾಫ್’ಗೆ ಬರೆದ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಹೀಗೆ, ಈ ಸಾರ್ವತ್ರಿಕ
ಚುನಾವಣೆ ಫಲಿತಾಂಶ ಮುಂಬರುವ ದಿನಗಳಲ್ಲಿ ಅನೇಕ ಹಾಗೂ ನಾನಾ
ಆಯಾಮಗಳನ್ನು ಒಳಗೊಂಡಿರುವ ಸಾಧ್ಯತೆಗಳನ್ನು ತೆರೆದಿಟ್ಟಿದೆ.
ಡೇವಿಡ್ ಕೆಮರಾನ್ ಮುಂದಿರುವ ಮೊದಲ ಸವಾಲು ಎಂದರೆ,
ಸ್ಕಾಟ್ಲೆಂಡ್‌ಗೆ ಆರ್ಥಿಕ ಸ್ವಾಯತ್ತೆಯನ್ನು ಕಲ್ಪಿಸುವುದು. ಇದಕ್ಕೆ ಸಂಬಂಧಿಸಿದ
ಕಾಯ್ದೆ ಈಗಾಗಲೇ ಕರಡು ರೂಪದಲ್ಲಿದೆ. ಅದನ್ನು ಯಾವ ರೀತಿಯ
ಕಾಯ್ದೆಯಾಗಿ ಮಾರ್ಪಡಿಸಿ ಅನುಷ್ಠಾನಗೊಳಿಸುತ್ತಾರೆ ಎಂಬುದರ ಮೇಲೆ
ಅವರ ಜಾಣ್ಮೆ ನಿಂತಿದೆ. ಯಾಕೆಂದರೆ, ಸ್ಕಾಟಿಷ್ ಸರ್ಕಾರಕ್ಕೆ ತೆರಿಗೆ ಸಂಗ್ರಹ
ವಿಷಯದಲ್ಲಿ ಹೆಚ್ಚಿನ ಅಧಿಕಾರವನ್ನು ಕೊಟ್ಟು, ಆ ಮೂಲಕ ಆರ್ಥಿಕ
ಸ್ವಾಯತ್ತೆಯನ್ನು ಕಲ್ಪಿಸಬೇಕಿದೆ. ಹಾಗಾಗಿಯೇ ಅವರು, ‘ಅಧಿಕಾರ
ಹಸ್ತಾಂತರಕ್ಕೊಳಗಾದ ಜಗತ್ತಿನಲ್ಲೇ ಅತ್ಯಂತ ಪ್ರಬಲವಾದ ಸರ್ಕಾರವನ್ನು
ಸೃಷ್ಟಿಸಲಾಗುವುದು’ ಎಂಬ ಕೆಮರಾನ್ ಹೇಳಿಕೆಯಲ್ಲಿ ಅನೇಕ ಅರ್ಥಗಳ
ಹೊಳವುಗಳಿವೆ. ಆದರೆ, ಎಸ್‌ಎನ್‌ಪಿ ಮಾತ್ರ ಇದಕ್ಕೆ ವಿರೋಧ
ವ್ಯಕ್ತಪಡಿಸಿದಂತೆ ಕಾಣುತ್ತಿದೆ. ಈ ಬಿಲ್ ಹುಟ್ಟಿಗೆ ಕಾರಣವಾಗಿದ್ದು ಸ್ಮಿತ್
ಕಮಿಷನ್. ಆದರೆ, ಸ್ಕಾಟ್ಲೆಂಡ್ ಆಶೋತ್ತರಗಳನ್ನು ಈಡೇರಿಸುವಲ್ಲಿ ಇದು
ಅಷ್ಟೊಂದು ಯಶಸ್ಸು ಕಾಣದು. ತೆರಿಗೆಗಳ ಮೇಲೆ ಸಂಪೂರ್ಣ ಹಿಡಿತ
ಹೊಂದಿರುವ ಪೂರ್ಣ ಪ್ರಮಾಣ ಆರ್ಥಿಕ ಸ್ವಾಯತ್ತೆಯನ್ನು ಕಲ್ಪಿಸುವಂಥ
ವಾತಾವರಣ ನಿರ್ಮಾಣವಾಗಬೇಕು ಎಂಬುದು ಎಸ್‌ಎನ್‌ಪಿಯ ವಾದ.
ಲೇಬರ್ ಪಾರ್ಟಿ ಸೋತಿರುವುದು ಕೂಡ ಎಸ್‌ಎನ್‌ಪಿ ಮೂಲ ಉದ್ದೇಶಕ್ಕೆ
ಕೊಡಲಿ ಪೆಟ್ಟು ಬಿದ್ದಿದೆ. ಹಾಗಾಗಿ, ಕನ್ಸರ್ವೇಟಿವ್ ಜತೆ ಜತೆಗೂಡಿ
ಸಾಗಬೇಕಾಗಿರುವ ಅನಿವಾರ್ಯತೆ ಎಸ್‌ಎನ್‌ಪಿಗೆ ಎದುರಾಗಿದೆ.
ಹಾಗಾಗಿಯೇ, ನಿಕೋಲ್ ಸ್ಟುರ್ಜೋನ್ ಅವರು, ಈಗ ಸಿಕ್ಕಿರುವ ಜಯ
ಸ್ವಾತಂತ್ರ್ಯದ ಜನಾದೇಶವಲ್ಲ ಎಂದು ಹೇಳುತ್ತಿರುವುದು. ಆದರೆ, ಎಸ್‌ಎನ್
ಪಿಯ ಹಿಂದಿನ ಮುಖ್ಯಸ್ಥ ಅಲೆಕ್ಸ್ ಸಾಲ್ಮಂಡ್ ಮಾತ್ರ ನನ್ನ ಜೀವಿತಾವಧಿಯಲ್ಲಿ
ಸ್ಕಾಟ್ಲೆಂಡ್ ಸಂಪೂರ್ಣ ಸ್ವತಂತ್ರವಾಗುವುದನ್ನು ಕಾಣುತ್ತೇನೆ ಎಂದಿದ್ದಾರೆ.
ಅಂದರೆ, ಎಸ್‌ಎನ್‌ಪಿಯು ಸ್ಕಾಟ್ಲೆಂಡ್ ಸ್ವತಂತ್ರಗೊಳಿಸುವ ಪ್ರಯತ್ನವನ್ನು
ಕೈಬಿಡುವ ಸಾಧ್ಯತೆಯೇ ಇಲ್ಲ ಎಂದು ಇದರಿಂದ ವೇದ್ಯವಾಗುತ್ತದೆ.
ಸ್ಕಾಟ್ಲೆಂಡ್ ಸಿಡಿದು ಹೋಗುತ್ತಿರುವುದೇಕೆ?
ಬಹುತೇಕವಾಗಿ ಆರ್ಥಿಕ ಅಸಮಾನತೆಯೇ ಇದಕ್ಕೆಲ್ಲ ಕಾರಣ. ಇಂಗ್ಲೆಂಡ್
ಸರ್ಕಾರದ ಜತೆಗಿನ ಆರ್ಥಿಕ ವ್ಯವಹಾರಗಳ ಸಮನ್ವಯತೆ ಕೊರತೆ, ತೆರಿಗೆ
ಸುಧಾರಣೆಗಳು ಸೇರಿದಂತೆ ಅನೇಕ ಕಾರಣಗಳು ಇದಕ್ಕಿವೆ. ವಿಶೇಷವಾಗಿ ಕೃಷಿ,
ಗಡಿ ನಿಯಂತ್ರಣ ಮತ್ತು ವಲಸೆ, ಶಿಶು ಆರೋಗ್ಯ, ನಾಗರಿಕತ್ವ, ರಕ್ಷಣೆ, ನ್ಯಾಟೋ
ಸದಸ್ಯತ್ವ, ಬೇಹುಗಾರಿಕೆ, ಅಣ್ವಸಉಗಳು, ಆರ್ಥಿಕ ಸ್ಥಿತಿ-ಗತಿ, ಕರೆನ್ಸಿ, ಸರ್ಕಾರದ
ಆದಾಯ ಮತ್ತು ವೆಚ್ಚ, ಇಂಧನ, ಐರೋಪ್ಯ ಒಕ್ಕೂಟದ ಜತೆಗಿನ ಸಂಬಂಧ,
ಐರೋಪ್ಯ ಒಕ್ಕೂಟದಲ್ಲಿ ಇಂಗ್ಲೆಂಡ್‌ನ ಭವಿಷ್ಯ, ಆರೋಗ್ಯ, ಅಂತಾ ರಾಷ್ಟ್ರೀಯ
ಸಂಬಂಧಗಳು... ಹೀಗೆ ಹತ್ತುಹಲವು ಕಾರಣಗಳು ‘ಯೆಸ್ ಸ್ಕಾಟ್ಲೆಂಡ್’ ಕೂಗಿಗೆ
ಕಾರಣವಾಗಿವೆ. ‘ಯೆಸ್ ಸ್ಕಾಟ್ಲೆಂಡ್’ ಎನ್ನುವುದು ಸ್ಕಾಟ್ಲೆಂಡ್ ಸ್ವಾತಂತ್ರ್ಯಕ್ಕೆ
ಹುಟ್ಟಿಕೊಂಡ ಗುಂಪು. ಇದಕ್ಕೆ ವಿರೋಧವಾಗಿ ‘ಬೆಟರ್ ಟುಗೇದರ್’ ಎಂಬ
ಗುಂಪು ಇಂಗ್ಲೆಂಡ್ ಒಕ್ಕೂಟ ಬಲಪಡಿಸಲು ಪ್ರಯತ್ನಿಸುತ್ತಿದೆ.
೨೦೧೪ರ ಸೆಪ್ಟೆಂಬರ್ ೧೮ರಂದು ಸ್ಕಾಟಿಷ್ ಸ್ವಾತಂತ್ರ್ಯ ಜನಮತ ಗಣನೆ
ನಡೆಯಿತು. ಈ ಪ್ರಕ್ರಿಯೆಯಲ್ಲಿ ‘ಯೆಸ್ ಸ್ಕಾಟ್ಲೆಂಡ್’ ಆಂದೋಲನಕ್ಕೆ
ಸೋಲಾಯಿತು. ಜನಮನತ ಗಣನೆಯಲ್ಲಿ ಶೇ.೪೪.೭ರಷ್ಟು ಜನ ಸ್ಕಾಟ್ಲೆಂಡ್
ಬೇಕು ಎಂದರೆ, ಶೇ.೫೫.೩ರಷ್ಟು ಜನ ಬೇಡ ಎಂದು ತಮ್ಮ ಮುದ್ರೆ ಒತ್ತಿದರು.
ಈ ಜನಮತ ಗಣನೆಯಲ್ಲಿ ಒಟ್ಟು ಶೇ.೮೪.೬ರಷ್ಟು ಜನ ಪಾಲ್ಗೊಂಡಿದ್ದರು.
ಬ್ರಿಟನ್ ಮತ್ತು ಸ್ಕಾಟಿಷ್ ಸರ್ಕಾರದ ಒಪ್ಪಂದದಂತೆ ಛಿ ಖ್ಚಟಠಿಠಿಜಿ
ಐ್ಞಛಿಛ್ಞಿಛ್ಞ್ಚಿಛಿ ್ಕಛ್ಛಿಛ್ಟಿಛ್ಞಿಛ್ಠಞ ಆಜ್ಝ್ಝಿ ಅನ್ನು ಸ್ಕಾಟಿಷ್ ಸಂಸತ್ತು ೨೦೧೩ರ
ನವೆಂಬರ್‌ನಲ್ಲಿ ಕಾಯ್ದೆಯಾಗಿ ಜಾರಿ ಮಾಡಿತ್ತು. ಬಳಿಕ ಜನಮತ ಗಣನೆ
ನಡೆಯಿತು.
ಒಂದು ಕಾಲದಲ್ಲಿ ‘ಸೂರ್ಯ ಮುಳುಗದ ಸಾಮ್ರಾಜ್ಯ’ವಾಗಿದ್ದ ಗ್ರೇಟ್
ಬ್ರಿಟನ್ ೨೧ನೇ ಶತಮಾನದಲ್ಲಿ ಛಿದ್ರವಾಗುವ ಹಾದಿಯಲ್ಲಿ ಸಾಗುತ್ತಿದೆ
ಎಂಬುದಂತೂ ಸತ್ಯ. ಸದ್ಯಕ್ಕೆ ಪ್ರಧಾನಿ ಡೇವಿಡ್ ಕೆಮರಾನ್ ಮುಂದೆ
ಸ್ಕಾಟ್ಲೆಂಡ್ ಜನಮತಗಣನೆ ಮತ್ತು ಐರೋಪ್ಯ ಒಕ್ಕೂಟ ಎಂಬ ಎರಡು
ಬೃಹತ್ ಸಮಸ್ಯೆಗಳಿವೆ. ಇವುಗಳನ್ನು ಕೆಮರಾನ್ ಹೇಗೆ ನಿಭಾಯಿಸುತ್ತಾರೆ
ಎಂಬುದರ ಮೇಲೆಯ ಇಡೀ ಬ್ರಿಟನ್‌ನ ಭವಿಷ್ಯ ನಿರ್ಧಾರವಾಗಲಿದೆ.
ಸ್ಕಾಟ್ಲೆಂಡ್ ಮತ್ತೊಂದು ಜನಮತಗಣನೆಗೆ ವೇದಿಕೆ ಸಿದಟಛಿಪಡಿಸಿಕೊಳ್ಳ
ಲಿದೆಯಾ? ಬ್ರಿಟನ್ ತನ್ನ ಐಕ್ಯತೆಯನ್ನು ಮುಂದುವರಿಸಿಕೊಂಡು
ಹೋಗಲಿದೆಯಾ? ಎಂಬುದನ್ನು ನೋಡಬೇಕಿದ್ದರೆ ಕನಿಷ್ಠ ಇನ್ನು ಒಂದು
ವರ್ಷವಾದರೂ ಕಾಯಲೇಬೇಕು. ಆದರೆ, ಈಗ ದೊರೆತಿರುವ
ಜನಾದೇಶವಂತೂ ಈ ಎಲ್ಲ ಅಂಶಗಳಿಗೆ ಒಂದು ದಿಕ್ಕನ್ನು ಮಾತ್ರ ಸೂಚಿಸಿದೆ.
ಆದರೆ, ಆ ದಿಕ್ಕು ಯಾವುದು ಎಂಬುದು ಮಾತ್ರ ಸದ್ಯಕ್ಕೆ ನಿಗೂಢ.
- ಮಲ್ಲಿಕಾರ್ಜುನ ತಿಪ್ಪಾರ