ಗೂಗಲ್‌ನಿಂದ ‘ಪೀಪಲ್ ಕಾರ್ಡ್’ ಫೀಚರ್
ದ್ಯೆತ್ಯ
ಗೂಗಲ್ ತನ್ನ ಬಳಕೆದಾರರಿಗೆ ಅತ್ಯಾಧುನಿಕ ತಾಂತ್ರಿಕ ಸೌಲಭ್ಯ ಒದಗಿಸಲು ಎಂದೂ ಹಿಂದೆ ಬಿದ್ದಿಲ್ಲ. ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಮತ್ತು ಲಭ್ಯವಾಗುವ ತಾಂತ್ರಿಕತೆಯನ್ನು ಬಳಸಿಕೊಂಡು
ವಿಶಿಷ್ಟ ಬಳಕೆಯ ಅನುಭವವನ್ನು ನೀಡುತ್ತಾ ಬಂದಿದೆ. ಇದೀಗ ಅದೇ ಮಾದರಿಯಲ್ಲಿ‘ಪೀಪಲ್ ಕಾರ್ಡ್’
ಎಂಬ ಹೊಸ ಆಯ್ಕೆಯೊಂದನ್ನು ಬಳಕೆದಾರರಿಗೆ ನೀಡಿದೆ. ಇದು
ಈಗ ಭಾರತೀಯ ಬಳಕೆದಾರರಿಗೆ ಲಭ್ಯವಿದ್ದು, ವರ್ಚುಯಲ್ ಕಾರ್ಡ್ ರಚಿಸಿಕೊಳ್ಳಬಹುದಾಗಿದೆ.
ಆನ್‌ಲೈನ್‌ನಲ್ಲಿಜನರ ಇರುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದಲೇ ಗೂಗಲ್ ಈ ಪೀಪಲ್ ಕಾರ್ಡ್ ಫೀಚರ್
ಅನ್ನು ಹೊರ ತಂದಿದೆ. ವಿಶೇಷವಾಗಿ ಆಗಷ್ಟೇ ಆನ್ಲೈನ್ ಬಳಕೆಗೆ
ಮುಂದಾದವರಿಗೆ ಇದು ಹೆಚ್ಚಿನ ನೆರವು ನೀಡಲಿದೆ. ಇನ್ನು ನೀವು ಇದನ್ನು ಬಿಸಿನೆಸ್
ಕಾರ್ಡ್ ರೀತಿಯಲ್ಲಿಬಳಸಿಕೊಳ್ಳಬಹುದು. ವರ್ಚುಯಲ್ ವಿಸಿಟಿಂಗ್ ಕಾರ್ಡ್
ಎಂದು ಗುರುತಿಸಲಾಗುತ್ತಿರುವ ಈ ಪೀಪಲ್ ಕಾರ್ಡ್
ಅನ್ನು ಬಳಸಿಕೊಂಡು ಬಳಕೆದಾರರು ತಮ್ಮ ಕಾಂಟ್ಯಾಕ್ಟ್ ಡಿಟೇಲ್ಸ್
ಹೆಚ್ಚಿಸುವುದಕ್ಕೆ ಬಳಸಬಹುದು. ಇದಕ್ಕೆ ಅವರು ಒದಗಿಸುವ
ಸಾಮಾಜಿಕ ಜಾಲತಾಣಗಳ ಮಾಹಿತಿಯು ಹೆಚ್ಚಿನ ನೆರವು ಒದಗಿಸುತ್ತದೆ.
ಹಾಗಂತ ಎಲ್ಲಮಾಹಿತಿಯನ್ನು ಒದಗಿಸಬೇಕೆಂದೇನೂ ಇಲ್ಲನಿಮಗೆ ಕೊಡಬೇಕಿನಿಸಿರುವ ಮಾಹಿತಿಯನ್ನು
ಮಾತ್ರವೇ ದಾಖಲಿಸಬಹುದು.
‘‘ಪ್ರಭಾವಿಗಳು, ಉದ್ಯಮಿಗಳು, ಉದ್ಯೋಗ ಶೋಧಿಸುತ್ತಿರುವವರು, ಸ್ವಯಂ ಉದ್ಯೋಗಿಗಳು,
ಸ್ವತಂತ್ರೋದ್ಯೋಗಿಗಳು ಸೇರಿ ಲಕ್ಷಾಂತರು ಜನರಿಗೆ ತಮ್ಮನ್ನು
ತಾವು ಶೋಧಿಸಿಕೊಳ್ಳಲು ಇದು ನೆರವು ನೀಡುತ್ತದೆ.ಜಗತನ್ನು ಶೋಧಿಸಲು ಈ ಹೊಸ
ವೈಶಿಷ್ಟ್ಯವೂ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ,’’ ಎಂದು ಗೂಗಲ್ ತನ್ನ ಬ್ಲಾಗ್
ಪೋಸ್ಟ್‌ನಲ್ಲಿಹೇಳಿಕೊಂಡಿದೆ. ಪೀಪಲ್ ಕಾರ್ಡ್ ರಚಿಸಿ ಆದ ಮೇಲೆ ಅದು
ಲೈವ್ ಆಗುತ್ತದೆ ಮತ್ತು ಶೋಧದ ಭಾಗವಾಗಿ ಸರ್ಚ್ ರಿಸಲ್ಟ್ ನಲ್ಲಿಅದು ಕಾಣಿಸಿಕೊಳ್ಳುತ್ತದೆ. ಸರ್ಚ್ ಎಂಜಿನ್ ಬಳಕೆದಾರರು ನಿರ್ದಿಷ್ಟ
ವ್ಯಕ್ತಿಯ ಬಗ್ಗೆ ಶೋಧಿಸಿದಾಗ ಆ ವ್ಯಕ್ತಿಯ ಪೀಪಲ್ ಕಾರ್ಡ್ ಜೊತೆಗೆ ಇತರ ಮಾಹಿತಿಯೂ ಲಭ್ಯವಾಗುತ್ತದೆ. ಅದರಲ್ಲಿಹೆಸರು,
ವೃತ್ತಿ ಮತ್ತು ಸ್ಥಳದ ಮತ್ತಿತರ ಮಾಹಿತಿಯೂ ಮಾಡ್ಯುಲ್ ಕಾಣಿಸಿಕೊಳ್ಳುತ್ತದೆ. ಒಂದೊಮ್ಮೆ ಒಂದೇ ಹೆಸರಿನ ಅನೇಕ ಕಾರ್ಡ್ಗಳಿದ್ದರೆ, ಬಳಕೆದಾರರಿಗೆ ಮಲ್ಟಿಪಲ್ ಮಾಡ್ಯುಲ್ ಕಾರ್ಡ್‌ಗಳು ಗೋಚರವಾಗುತ್ತವೆ
ಮತ್ತು ತಮಗೆ ಬೇಕಿರುವ ವ್ಯಕ್ತಿಯ ಮಾಹಿತಿಯನ್ನು ಪ್ರತ್ಯೇಕಿಸಲು ಅವರಿಗೆ ಸಾಧ್ಯವಾಗುತ್ತದೆ.
Add caption |
ಗೂಗಲ್ ಕಾರ್ಡ್
ಕ್ರಿಯೆಟ್ ಹೇಗೆ?: ಗೂಗಲ್
ಕಾರ್ಡ್ ಕ್ರಿಯೆಟ್ ಮಾಡಲು
ನೀವು ಗೂಗಲ್ನ ಅಧಿಕೃತ ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್‌ಗಳನ್ನು
ಹೊಂದಿರಬೇಕು.
ಹೀಗೆ ಮಾಡಿ: ನಿಮ್ಮ ಸ್ಮಾರ್ಟ್ ಫೋನ್‌ನ ಗೂಗಲ್ ಸರ್ಚ್‌ಬಾರ್‌ನಲ್ಲಿ Add me to search ಎಂದು ಟೈಪ್ ಮಾಡಿ. ಆಗ Get Started ಎಂಬ ಬಟನ್ ಕಾಣುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಆಗ ಅದು ನಿಮ್ಮನ್ನು Edit your public profile ಆಪ್ಷನ್ಗೆ ಕರೆದೊಯ್ಯುತ್ತದೆ. ಅಲ್ಲಿನೀವು, ಫೋಟೊ, ಹೆಸರು, ಬಿಸಿನೆಸ್ ಅಥವಾ ನೀವು ಮಾಡುತ್ತಿರುವ ಉದ್ಯೋಗ, ನಿಮ್ಮ ಹುದ್ದೆ, ಕಂಪನಿ ಹೆಸರು, ನಿಮ್ಮ ಬಗ್ಗೆ ಹೀಗೆ ಎಲ್ಲವೈಯಕ್ತಿಕ ಮಾಹಿತಿ ಜೊತೆಗೆ ನಿಮ್ಮ ಫೋನ್ ನಂಬರ್, ಇ ಮೇಲ್ ಐಡಿ ಮಾಹಿತಿಯನ್ನೂ ನಮೂದಿಸಬೇಕಾಗುತ್ತದೆ. ಇಷ್ಟೆಲ್ಲಾಮಾಹಿತಿಯನ್ನು ನೀವು ಡಿಜಿಟಲ್ ಫಾರ್ಮ್‌ನಲ್ಲಿಭರ್ತಿ ಮಾಡಿದ ಮೇಲೆ ಪ್ರಿವಿವ್ಯೂ ಕಾಣಿಸುತ್ತದೆ. ಆಗ ನೀವು ದಾಖಲಿಸಿದ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಮತ್ತೊಮ್ಮೆ ಖಾತ್ರಿಪಡಿಸಿಕೊಂಡು ಸೇವ್ ಬಟನ್ ಒತ್ತಿ. ಆಗ ವರ್ಚುಯಲ್ ಬಿಸಿನೆಸ್ ಕಾರ್ಡ್ ಸೃಷ್ಟಿಯಾಗಿ ಕೆಲವೇ ನಿಮಿಷಗಳಲ್ಲಿಅದು ಲೈವ್ ಆಗುತ್ತದೆ. ಒಮ್ಮೆ ನಿಮ್ಮ ಕಾರ್ಡ್ ಲೈವ್ ಆಯ್ತೆಂದರೆ, ಗೂಗಲ್ ಸರ್ಚ್ ಮಾಡಿದಾಗ, ನಿಮ್ಮ ಮೊಬೈಲ್ ನಂಬರ್, ನಿಮ್ಮ ಹೆಸರನ್ನು ಶೋಧಿಸಿದಾಗ ರಿಸಲ್ಟ್ ನಿಮ್ಮ ಬಿಸಿನೆಸ್ ಕಾರ್ಡ್ ಮಾಹಿತಿಯನ್ನು ಒದಗಿಸುತ್ತದೆ.
ಎಚ್ಚರಿಕೆಯೂ ಇರಲಿ: ಈ ವರ್ಚುಯಲ್
ವಿಸಿಟಿಂಗ್ ಕಾರ್ಡ್ ಅನ್ನು
ಯಾರು ಬೇಕಾದರೂ ರಚಿಸಿಕೊಳ್ಳಬಹುದು. ಆದರೆ, ಬಿಸಿನೆಸ್‌ಮೆನ್ ಮತ್ತು ಉದ್ದಿಮೆದಾರರು, ವ್ಯಾಪಾರಿಗಳು
ಇದು ಹೆಚ್ಚಿನ ಲಾಭವನ್ನು ತಂದುಕೊಡಲಿದೆ. ಅವರಿಗೆ ತಮ್ಮ ಗ್ರಾಹಕರ ಜತೆಗಿನ
ಸಂಪರ್ಕಕ್ಕೆ ಇದು ರಹದಾರಿ ಯಾಗಲಿದೆ. ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟವಿಲ್ಲದವರೂ ಈ ಕಾರ್ಡ್ನಿಂದ ದೂರ ಇರುವುದು
ಒಳ್ಳೆಯದು. ಯಾಕೆಂದರೆ, ನೀವು ಒದಗಿಸುವ ನಂಬರ್,
ಪೋಟೊಗಳನ್ನು ಅನ್ಯ ಕಾರಣಕ್ಕೆ ಬಳಸಿಕೊಳ್ಳಬಹುದು.
(ಈ ಲೇಖನ ವಿಜಯ ಕರ್ನಾಟಕದ 2020ರ ಆಗಸ್ಟ್ 26ರ ಸಂಚಿಕೆಯಲ್ಲಿ ಪ್ರಕಟಾಗಿದೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ