ಸೋಮವಾರ, ಮೇ 23, 2016

ನಾವು ಏನೋ ಅಂದುಕೊಳ್ಳುತ್ತೇವೆ, ಅದು ಇನ್ನೇನೋ ಆಗುತ್ತದೆ!

ಹುಡುಗನೊಬ್ಬನ ಗಜಲ್ ಗಳು-
ಯಾವುದೇ ಕಲ್ಮಶವಿಲ್ಲದೇ ನಿರ್ವ್ಯಾಜ ಪ್ರೀತಿಯಾಗಿದ್ದರೆ ನಾವು ಹೇಗೆ ದೂರು ಆಗುತ್ತಿದ್ದೆವು..

- ಪ್ರದ್ಯುಮ್ನ
ಒಲಿದ ಹೃದಯಗಳು ಒಂದಾದರೆ ಬಾಳು ಇಂಪಾದ ಸಂಗೀತದಂತೆ ಕೇಳಿಸಲಾರಂಭಿಸುತ್ತದೆ. ಒಮ್ಮೊಮ್ಮೆ ಅಪಸ್ವರಗಳೇ ಹೆಚ್ಚಾದರೆ ಬಾಳು ನಾನೊಂದು ತೀರ... ನೀನೊಂದು ತೀರ... ಆಗುವುದು ಗ್ಯಾರಂಟಿ. ಆಗ ಕುಹಕ ಮಾತು, ವ್ಯಂಗ್ಯ ನಿಮ್ಮನ್ನು ಚುಚ್ಚಿ ಹೈರಾಣಾಗಿಸುತ್ತವೆ. ಕ್ರಿಕೆಟಿಗ ವಿರಾ್ ಕೊಹ್ಲಿ ಮತ್ತು ನಟಿ ಅನುಷ್ಕಾ ಜತೆಗಿನ ಮಧುರ ಬಾಂಧವ್ಯ ಇಂಥ ಅಪಸ್ವರದ ಮಧ್ಯೆ ಹೊರಳಾಡುತ್ತಿರುವಾಗಲೇ ಅವಳನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣ ಅಪಹಾಸ್ಯ ಮಾಡಿ ನಗುತ್ತಿತ್ತು. ಆದರೆ, ಒಲಿದ ಹೃದಯಕ್ಕೆ ಉಂಟಾದ ನೋವನ್ನು ನೋಡಿ ಸುಮ್ಮನಿರದ ಕೊಹ್ಲಿ, ``ನಿಮಗೆ ನಾಚಿಕೆಯಾಗಲ್ವಾ...? ಆಕೆ ನನಗೆ ಯಾವಾಗಲೂ ಸಕಾರಾತ್ಮಕ ಭಾವನೆಯನ್ನೇ ಕಟ್ಟಿಕೊಟ್ಟಿದ್ದಾಳೆ,'' ಎಂದು ಹೂಂಕರಿಸಿದಾಗಲೇ ಕುಹಕಿಗಳು ಸುಮ್ಮನಾದರು. ಇದೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ, ನಮ್ಮಿಬ್ಬರಿಗೂ ಹಾಗೆ ಆಗಿತ್ತಲ್ಲವೇ? ನಾವು ಒಲಿದ ಸ್ವರಾಗಳಾಗಿ ಇಂಪಾದ ಸಂಗೀತ ಹಾಡುತ್ತಿರುವಾಗಲೇ ಅಪಸ್ವರ ನಾದ ಹೆಚ್ಚಾಗಿ ಸಂಗೀತ ಹಳ್ಳ ಹಿಡಿದು, ನಾವಿಬ್ಬರೂ ದೂರ ಆದದ್ದು. ಆಗ ಕಾಲೇ್ ಕಾರಿಡಾ್ನಲ್ಲಿ ನಿನ್ನ ಬಗ್ಗೆ ಆಡಿಕೊಂಡವರೆಷ್ಟು? ನಿನ್ನಡೆಗೆ ಕುಹಕ ನಗೆ ಚೆಲ್ಲಿ, ವ್ಯಂಗ್ಯವಾಗಿ ನಕ್ಕವರೆಷ್ಟು..? ಆಗ ನಾನು ಕೂಡ ಥೇ್ ಕೊಹ್ಲಿ ರೀತಿಯಲ್ಲಿ ಪ್ರತಿಕ್ರಿಯಿಸಿದ್ದೆ. ಕೊಹ್ಲಿ ಈ ಘಟನೆಯು ಆ ನೆನಪುಗಳನ್ನೆಲ್ಲ ಒಂದು ಸಾರಿ ತಿರುವಿ ಹಾಕಿದವು. ಸಿನಿಮಾ ಥಿಯೇಟ್ನ ಪ್ರೊಜೆಕ್ಟ್ನಲ್ಲಿ ಫಿ್‌ಮಗಳು ಒಂದೊಂದಾಗಿ ಒಂದರ ಹಿಂದೆ ಒಂದು ಓಡುವ ಹಾಗೆ ನನ್ನ ಮನಪಟಲದಲ್ಲಿ ಈ ನೆನಪುಗಳು ಮಿಂಚಿ ಮಾಯವಾದವು.
ನಾವಿಬ್ಬರೂ ಎಷ್ಟು ಅನ್ಯೋನ್ಯವಾಗಿದ್ದೆವಲ್ಲ. ನಮ್ಮನ್ನು ನೋಡಿ ಇಡೀ ಕ್ಯಾಂಪಸ್ಸೇ ಹೊಟ್ಟೆಕಿಚ್ಚು ಪಡುತ್ತಿತ್ತು. ಕಾಲೇ್ ಚರ್ಚಾಕೂಟಗಳಲ್ಲಿ ನನ್ನನ್ನು ಮೀರಿಸಿದವರೇ ಇರಲಿಲ್ಲ. ಸುತ್ತಲಿನ ಕಾಲೇಜುಗಳಲ್ಲೂ ಪ್ರಖ್ಯಾತಿ ಹಬ್ಬಿತ್ತು. ಚರ್ಚಾಕೂಟದಲ್ಲಿ ಭಾಗವಹಿಸಿದೆನೆಂದರೆ ಅಲ್ಲಿ ಪ್ರಥಮ ಬಹುಮಾನವನ್ನು ಮೊದಲೇ ಮೀಸಲಿಡುತ್ತಿದ್ದರು. ಆದರೆ, ಅಂದಿನ ಆ ಚರ್ಚಾಕೂಟದಲ್ಲಿ ನಾನು ಸೋತು ಹೋಗಿದ್ದೆ. ಅದಕ್ಕೆಲ್ಲ ನೀನೇ ಕಾರಣ ಎಂದು ನನ್ನ ಸ್ನೇಹಿತರಾದಿಯಾಗಿ ಎಲ್ಲರೂ ಕಾರಿಡಾ್ನಲ್ಲಿ ಹಂಗಿಸುತ್ತಿದ್ದರು. ಇದನ್ನೆಲ್ಲ ಹೇಗೆ ಸಹಿಸಿಕೊಳ್ಳಲಿ ಹೇಳು? ನೀನು ಯಾವತ್ತೂ ನನ್ನ ಸಾಧನೆಗೆ ಅಡ್ಡಿಯಾದವಳೇ ಅಲ್ಲ. ನನ್ನ ಸ್ಫೂರ್ತಿ ನೀನು. ನನ್ನ ಯಶಸ್ಸಿನ ಹಿಂದಿನ ಶಕ್ತಿ ನೀನು. ಅದು ನಿನಗೂ ಗೊತ್ತಿತ್ತು. ಆದರೆ, ನೀನು ಮಾತ್ರ ಕಾರಿಡಾ್ ರೂಮ್ಗಳಿಗೆ ಬೆಲೆ ಕೊಟ್ಟು, ಬೆಲೆಕಟ್ಟಲಾಗದ ನನ್ನ ಸ್ನೇಹವನ್ನು ಪೂರ್ತಿ ಕಡಿದುಕೊಂಡೆ. ಇದ್ಯಾವ ನ್ಯಾಯ ಹೇಳು? ನಿನಗೆ ಹಂಗಿಸುತ್ತಿದ್ದವರೆಗೆಲ್ಲ ಸರಿಯಾಗಿಯೇ ನೀರಿಳಿಸಿದ್ದೆ. ಆದರೂ ನಮ್ಮಿಬ್ಬರ ಮಧ್ಯ ಆ ಇಂಪಾದ ಸಂಗೀತ ಮತ್ತೆ ಒಡಮೂಡಲೇ ಇಲ್ಲ. ನಮ್ಮಿಬ್ಬರ ಸ್ನೇಹ-ಪ್ರೀತಿ-ಪ್ರೇಮ ತಿಳಿ ಕೊಳದಲ್ಲಿ ರೂಮ್ ಕಲ್ಲುಗಳು ದೊಡ್ಡ ಅಲ್ಲೋಲ ಕಲ್ಲೋಲ ಅಲೆಗಳನ್ನು ಸೃಷ್ಟಿಸಿದ್ದವು. ಆ ಅಲೆಗಳ ಸುಳಿಯಿಂದ ನಾನು ಹೊರ ಬಂದೆ. ಆದರೆ ನೀನು ಮಾತ್ರ ಅದೇ ಸುಳಿಯಲ್ಲಿ ಆಳವಾಗಿ ಸಿಲುಕುತ್ತಾ, ಮತ್ತಷ್ಟು ಸುಕ್ಕಾಗುತ್ತಾ ಹೋದೆ.
ಈ ಘಟನೆಗಳನ್ನೆಲ್ಲ ಈಗ ರಿವೈಂ್ ಮಾಡಿ ನೋಡಿದಾಗ ಒಂದೊಂದು ಸಾರಿ ಸಿಲ್ಲಿ ಅನ್ನಿಸುತ್ತದೆ. ಮತ್ತೊಂದು ಸಾರಿ ನಾವಿಬ್ಬರೂ ಎಂಥ ಕುಹಕಕ್ಕೆ ಬಲಿಯಾದವೆಲ್ಲ ಎಂಬ ವ್ಯಥೆಯಾಗುತ್ತದೆ. ನಮ್ಮ ನಡುವಿನ ಬಾಂಧವ್ಯ ಅಷ್ಟು ಅಲ್ಪ ಕಾಲದ್ದಾಗಿತ್ತೆಂದರೆ ಅದು ಪೂರಿಪೂರ್ಣವಾಗಿರಲಿಲ್ಲ ಎಂದರ್ಥಲ್ಲವೇ? ಬಾಂಧವ್ಯದ ಬಿಲ್ಡಿಂ್ಗೆ ನಂಬಿಕೆ ಎಂಬ ತಳಪಾಯ ಗಟ್ಟಿಯಾಗಿರಲಿಲ್ಲ.  ಇಲ್ಲದಿದ್ದರೆ, ರೂಮ್ಗಳೆಂಬ ಸಣ್ಣ ಬಿರುಗಾಳಿಗೆ ಇಡೀ ಬಿಲ್ಡಿಂ್ ಕುಸಿದು ಬಿತ್ತು ಎಂದು ನಂಬುವುದಾದರೂ ಹೇಗೆ? ಆದರೆ, ಅದೇ ವಾಸ್ತವ ಅಲ್ಲವೇ? ನಂಬಲೇ ಬೇಕು. ನಂಬಿದ್ದೇನೆ ಕೂಡ. ಇದನ್ನು ಬಿಟ್ಟು ಇನ್ಯಾವ ದಾರಿ ಇತ್ತು ಹೇಳು ನನಗೆ? ಆದರೆ, ನೀನು ಮಾತ್ರ ಏನೂ ಆಗಿಯೇ ಇಲ್ಲ ಎನ್ನುವ ಹಾಗೇ ಇದ್ದೆ. ನಿನ್ನ ಮನಸ್ಸು ಅದ್ಹೇಗೆ ಅಷ್ಟೊಂದು ಕಠೋರವಾಗಿತ್ತು? ಕಿಂಚಿ್ ಆದರೂ ಕರುಣೆ ಗಾಳಿ ತಾಕಲಿಲ್ಲವೇ? ಬಹುಶಃ ತಾಕಿದ್ದರೆ ನನ್ನಂತೆಯೇ ನೀನು ಕುಹುಕಿಗಳಿಗೆಲ್ಲ ಒಂದು ಪಾಠ ಕಲಿಸುತ್ತಿದ್ದೆ. ಈಗೀಗ ನನಗನ್ನಿಸುತ್ತದೆ ನಮ್ಮಿಬ್ಬರದ್ದು ಒತ್ತಾಯಪೂರ್ವಕವಾಗಿ ನಂಬಿಸಿಕೊಂಡು ಪ್ರೀತಿಯಾಗಿತ್ತಾ.. ಸ್ನೇಹವಾಗಿತ್ತಾ ಅಂತ. ಸಹಜವಾದ ಮತ್ತು ಯಾವುದೇ ಕಲ್ಮಶವಿಲ್ಲದ ನಿರ್ವಾಜ್ಯ ಪ್ರೀತಿಯಾಗಿದ್ದರೆ ನಾವು ಹೇಗೆ ದೂರ ಆಗುತ್ತಿದ್ದೆವು?
ಒಂದು ವಿಷಯವನ್ನು ನೀನು ಮರೆತಿದ್ದೆ. ನನ್ನನ್ನು ಎಷ್ಟು ಸಲೀಸಾಗಿ ದಿಕ್ಕರಿಸಿ ಹೋದೆಯಲ್ಲ ನೀನು. ಆದರೆ, ನೀನಾದರೂ ಸುಖವಾಗಿದ್ದಾ? ಇಲ್ಲ. ಇರಲಿಲ್ಲ. ನಿಮ್ಮ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಅದ್ಯಾವುದೋ ಎಂಜಿನಿಯ್ನನ್ನು ಮದುವೆಯಾಗಿ ಮುಂಬಯಿಗೆ ಹಾರಿ ಹೋದೆ. ಎಲ್ಲರಂತೆ ನಾನು, ನಿನ್ನ ಜೀವನವನ್ನು ನೀನು ಕಟ್ಟಿಕೊಂಡೇ ಬಿಡು ಎಂದು ಭಾವಿಸಿ, ಅದೇ ಹಳೆ ನೆನಪುಗಳ ಕ್ಯಾಸೆ್ ಅನ್ನು ರೀವೈಂ್ ಮಾಡುತ್ತಾ ನನ್ನದೇ ಲೋಕದಲ್ಲಿ ಕಳೆದು ಹೋದೆ. ಹಳೇ ದೇಗುಲ, ಗೋರಿಗಳನ್ನು ಹುಡುಕಿಕೊಂಡು ಹೋದೆ. ಅವುಗಳ ಹಿಂದಿರುವ ಇತಿಹಾಸ ಕೆದಕುತ್ತಾ ನಮ್ಮಿಬ್ಬರ ಗತಪ್ರೇಮ ಮರೆಯಲು ಪ್ರಯತ್ನಿಸುತ್ತಿದ್ದೆ. ಈ ಕೆಲಸ ನನಗೆ ಒಂದಿಷ್ಟು ನೆಮ್ಮದಿ ಮತ್ತು ಇನ್ನೊಂದಿಷ್ಟು ಉತ್ಸಾಹ ತುಂಬುತ್ತಿತ್ತು. ಯಾಕೆ ಗೊತ್ತಾ? ಕೆಲವು ರಾಜರು, ಶ್ರೀಮಂತರು ತಮ್ಮ ಪ್ರೀತಿಯ ಪ್ರತೀಕವಾಗಿ, ಪತ್ನಿಯರ ನೆನಪಿಗೆ ಗುಡಿಯನ್ನೋ, ಗೋರಿಯನ್ನೋ ಕಟ್ಟಿ ತಮ್ಮ ಪ್ರೇಮವನ್ನು ಚಿರಸ್ಥಾಯಿಯಾಗಿಸಲು ಪ್ರಯತ್ನಿಸಿದ್ದರು. ಇಂಥವುಗಳ ಹಿಂದೆ ದಂತಕತೆಗಳು ಹುಟ್ಟಿಕೊಂಡು, ನಿರ್ವಾಜ್ಯ ಪ್ರೇಮವೆಲ್ಲ ಗಾಳಿಗೆ ತೂರಿ ಹೋಗಿತ್ತು. ಸ್ಥಾನಪಲ್ಲಟವಾದ ಪ್ರೇಮದ ಚುಕ್ಕೆಗಳನ್ನು ಸೇರಿಸಿ ಸುಂದರವಾದ ಕಲಾಕೃತಿ ರಚಿಸಲು ಪ್ರಯತ್ನಿಸುತ್ತಿದ್ದೆ. ತುಸು ಮಟ್ಟಿಗೆ ಯಶಸ್ವಿಯಾದೆ ಅಂದುಕೊಂಡರೂ ತಪ್ಪಿಲ್ಲ. ಆದರೆ, ಎದೆಯಾಳದಲ್ಲಿ ನೀನು ಬಿಟ್ಟು ಹೋದ ನೆನಪುಗಳು ಮಾತ್ರ ಸಾಯುತ್ತಲೇ ಇರಲಿಲ್ಲ. ಆಗೆಲ್ಲ ನಾನು ಇನ್ನಾವುದೋ ಗುಡಿಯನ್ನೋ, ಗೋರಿಯನ್ನೋ ಹುಡುಕಿಕೊಂಡು ಹೋಗುತ್ತಿದ್ದೆ.
ಅಂದೊಂದು ದಿನ ನಾನು ಯಾವುದನ್ನು ಕೇಳಬಾರದು ಎಂದುಕೊಂಡಿದ್ದೇನೋ ಅದೇ ಸುದ್ದಿಯನ್ನು ಕೇಳಬೇಕಾಯಿತು. ನೀನು ಊರಿಗೆ ಬಂದಿದ್ದು ಗೊತ್ತಾಯಿತು ನಿಜ. ಆದರೆ ನಿನ್ನನ್ನು ನೋಡುವ, ನಿನ್ನ ಎದುರಿಗೆ ಬರುವ ಧೈರ್ಯ ಇರಲಿಲ್ಲ. ವಿಧಿಯಾಟ ಬೇರೆನೇ ಅಲ್ಲವೇ? ಅದೊಂದು ಸಂಜೆ ಊರ ಹೊರಗಿನ ಗುಡಿಯಲ್ಲಿ ನೀನು ನಿನ್ನ ಅಮ್ಮನ ಜತೆ ನಿಂತಿದ್ದೆ,  ಆದರೆ, ನಿನ್ನ ನೋಡಿ ನನ್ನ ನಾನೇ ನಂಬಲಿಲ್ಲ. ನಿಜಕ್ಕೂ ಅದು ನೀನೇನಾ? ಹೇಗಿದ್ದೆ ನೀನು- ಬಳಕುವ ಬಳ್ಳಿ. ಸೂಜಿಮಲ್ಲಿಗೆಯಂಥವಳು. ಸೂಜಿಗಲ್ಲಿನವಳು. ಕಾಲೇ್ನಲ್ಲಿದ್ದಾಗ ಎಲ್ಲ ಹುಡುಗರು ಒಂದು ಕ್ಷಣವಾದರೂ ನಿನ್ನನ್ನು ನೋಡದೆ ಹೋಗುತ್ತಿರಲಿಲ್ಲ. ಅಂಥ ವ್ಯಕ್ತಿತ್ವ ನಿನ್ನದು. ಅವಳೇನಾ ನೀನು ಎಂಬ ಮಟ್ಟಿಗೆ ಬದಲಾಗಿದ್ದೆ. ಮುಖದಲ್ಲಿ ಕಳೆ ಇಲ್ಲ; ನಕ್ಕು ಎಷ್ಟೋ ದಿನಗಳವಾಗಿರುವ ಹಾಗಿತ್ತು. ಕೃಶ ಶರೀರದಲ್ಲಿ ಸುಮ್ಮನೇ ನೆಪಕ್ಕೆ ಮಾತ್ರ ಎನ್ನುವಂಥ ಜೀವ. ನಿನ್ನ ಜೀವನದಲ್ಲಿ ಹೀಗೆಲ್ಲ ಆಗಬಾರದೆಂದು ನಾನು ಬಯಸಿದ್ದೆ. ಆದರೆ, ಅದೇ ಆಗಿ ಹೋಗಿತ್ತು. ನಿನ್ನ ಇಂದಿನ ಪರಿಸ್ಥಿತಿಗೆ ಆ ನಿನ್ನ ಹಣ, ಹೆಣ್ಣುಬಾಕ ಗಂಡನೇ ಕಾರಣ ಎಂಬುದು ಗೊತ್ತಾಗಿದ್ದು ನಿನ್ನ ಗೆಳತಿಯಿಂದಲೇ. ಗೊತ್ತಿದ್ದು ಗೊತ್ತಿದ್ದು ನಿಮ್ಮ ಮನೆಯವರು ಅಂಥವನ ಖೆಡ್ಡಾಕ್ಕೆ ನಿನ್ನನ್ನು ಕೆಡವಿದ್ದರು ಎಂದು ಆಕೆ ಕಣ್ಣೀರಾಗಿದ್ದಳು.
ನೋಡು ಜೀವನವೇ ಹೀಗೆ. ನಾವು ಏನು ಅಂದುಕೊಂಡು ಹೋಗುತ್ತೇವೆ. ಅದು ಇನ್ನೇನೋ ಆಗುತ್ತದೆ. ಕಾರಿಡಾ್ಗಳಲ್ಲಿನ ಹಂಗಿಸುವ ಮಾತುಗಳನ್ನು, ರೂಮ್ಗಳನ್ನು ನೀನು ಅಷ್ಟು ಸೀರಿಯ್ ಆಗಿ ತೆಗೆದುಕೊಳ್ಳದಿದ್ದರೆ ಇಂದು ನಮ್ಮಿಬ್ಬರದೇ ಒಂದು ಪುಟ್ಟ ಸಂಸಾರ ಆನಂದ ಸಾಗರವಾಗಿರುತ್ತಿತ್ತು. ಆದರೆ, ಈಗ ಕಾಲ ಮಿಂಚಿ ಹೋಗಿದೆ. ಚಿಂತಿಸಿ ಫಲವಿಲ್ಲ ಎನ್ನುವ ಹಾಗಿಲ್ಲ. ನಿನ್ನ ನೆನಪಲ್ಲಿ ನಾನು ಇಂದಿಗೂ ಹಾಗೆಯೇ ಇದ್ದೇನೆ. ಅಂದು ಹೇಗಿದ್ದೇನೋ ಹಾಗೆ. ಮುಂದಿನ ನಿರ್ಣಯ ನಿನಗೆ ಬಿಟ್ಟದ್ದು.

ಕಾಮೆಂಟ್‌ಗಳಿಲ್ಲ: