ಶುಕ್ರವಾರ, ಫೆಬ್ರವರಿ 22, 2008

ಕಾಡ್ತಿ ಯಾಕ...?

ನೀನಿಲ್ಲದ ಈ ಮನಸ್ಸು
ಮಾಗಿ ಕಾಲದ ಎಲೆ
ಉದುರಿಸಿದ ಗಿಡದಂಗಾಗೇತಿ

ಮನಸ್ಸಿನ್ಯಾಗಿನ ಮಾತು
ಹೊರಗ ಬರದ ಗಂಟಲೋಳಗ
ಕೂತು, ತಕರಾರು ಮಾಡೈತಿ

ನೆನಪಿನ ಮರದೊಳಗ
ಕೇರೀದಸ್ಟು ನಿನ್ನ
ಸಂಗಡದ ಆ ಗಳಿಗೆಗಳು
ಮತ್ತ ಹೊಳ್ಳಿ ಹೊಳ್ಳಿ ಬರ್ತಾವ

ಕೇರೀದಾಗ ತೂರಿ ಹೋದ
ಜೋಳ್ಳ ನೆನಪುಗಳೆಲ್ಲಾ ನಂದು
ಉಳಿದ ಗಟ್ಟಿ ಮಾತೆಲ್ಲಾ ನಿಂದು

ಮರೀಬೇಕಂತ ಮನಸ್ಸಿನ್ಯಾಗಿನ
ಮಾತು ಹೊರ ಬಿಟ್ಟಿಲ್ಲ
ಆದ್ರೂ ನೀ ಯಾಕ್ ಹಂಗ ಕಾಡ್ತಿ...?

8 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Naanu yaaru avalu antha tilidukollabahuda Tippar. Adru Manasige tumba hidisitu.

Brahmanand.N.Hadagali

jomon varghese ಹೇಳಿದರು...

ತಿಪ್ಪಾರ್...


ಮನಸ್ಸಿನ್ಯಾಗಿನ ಮಾತು ನೆನಪಿನಂಗಳದಲ್ಲಿ ಕುಡಿಯೊಡೆದ ತಾರೆಗಳಿದ್ದಂತೆ.ನೆನೆದಷ್ಟೂ, ಮೊಗೆದಷ್ಟೂ ಮತ್ತೆ ಮತ್ತೆ ಬೇಕನಿಸುತ್ತದೆ.. ಅಂಗಳದಲ್ಲಿ ಹಾಕಿದ ರಂಗೋಲಿ ಆತ್ಮೀಯವಾಗುವಂತೆ.

ಕವಿ(ತೆ) ಮತ್ತು ಕವಿಮನಸ್ಸು ಎರಡೂ ಚೆನ್ನಾಗಿದೆ.

ಧನ್ಯವಾದಗಳು.
ಜೋಮನ್

ಅನುರಾಗ ಹೇಳಿದರು...

ನಿಮ್ಮ ಮನಸ್ಸನ್ನು ಕಾಡುವ ಹುಡುಗಿಯನ್ನು ಕವಿತೆಯ ಮೂಲಕ ಹುಡುಕಲು ಹೊರಟಿದ್ದೀರಾ?:)

ಕವಿತೆ ಚೆನ್ನಾಗಿ ಮೂಡಿಬಂದಿದೆ. ನಿರಂತರ ಬರೆಯುತ್ತಿರಿ....

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

brama and jomana tumba thanx for comments

for rashmi.. Jeevana andre hudukata alwa... thanx for coments

ತೇಜಸ್ವಿನಿ ಹೆಗಡೆ ಹೇಳಿದರು...

ಕಾಡುವಿಕೆಯ ತೀವ್ರತೆಯನ್ನು ಚೆನ್ನಾಗಿ ಚಿತ್ರಿಸಿದ್ದೀರಾ.

"ಜೋಳ್ಳ ನೆನಪುಗಳೆಲ್ಲಾ ನಂದು
ಉಳಿದ ಗಟ್ಟಿ ಮಾತೆಲ್ಲಾ ನಿಂದ"

ಈ ಸಾಲುಗಳು ತುಂಬಾ ಇಷ್ಟವಾದವು.

- ತೇಜಸ್ವಿನಿ ಹೆಗಡೆ.

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

Thanks Tejeshwaniyavare

Nagendra Trasi ಹೇಳಿದರು...

ಹಾಯ್ ತಿಪ್ಪಾರ್,

ತುಂಬಾ ದಿನಗಳಿಂದ ಹಕ್ಕಿ ಹಾಡು ಕೇಳಿರಲಿಲ್ಲ, ಒಮ್ಮೆಲೆ ಮತ್ತೆ ಹಕ್ಕಿ ಹಾಡು ಕೇಳತೊಡಗಿದೆ. ತುಂಬಾ ಚೆನ್ನಾಗಿದೆ, ಹಾಡು ಮುಂದುವರಿಯಲಿ ನಿರಂತರವಾಗಿ....

ನಾಗೇಂದ್ರ ತ್ರಾಸಿ, ಚೆನ್ನೈ

ಅಮರ ಹೇಳಿದರು...

ಪ್ರಿಯ ಮಲ್ಲಿಕಾರ್ನುನ ಅವರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಅಮರ