ಭಾನುವಾರ, ಜುಲೈ 12, 2015

‘ಕಿರು ಸಂದೇಶ’ ಸಾರಿದ ಮ್ಯಾಕ್ಕೊನೆನ್

ಅದು 1984ರ ಸಮಯ. ಡೆನ್ಮಾರ್ಕ್‌ನ ಕೊಪನ್‌ಹೆಗನ್‌ನಲ್ಲಿ ಟೆಲಿಕಾಂ ಕ್ಷೇತ್ರಕ್ಕೆ ಸಂಬಂಸಿದ ಸಮ್ಮೇಳನ ನಡೆಯುತ್ತಿತ್ತುಘಿ. ಬೇರೆ ಬೇರೆ ದೇಶಗಳಿಂದ ಅನೇಕ ಎಂಜಿನಿಯರ್‌ಗಳು ಆಗಮಿಸಿದ್ದರು. ಹೀಗೆ ಸಮ್ಮೇಳನದ ಒಂದು ಮ‘್ಯಾಹ್ನ ಊಟದ ಹೊತ್ತಿಗೆ ಫಿಜಾ ಮೆಲ್ಲುತ್ತಾ ಒಬ್ಬ  ಎಂಜಿನಿಯರ್ ‘ಟೆಕ್ಸ್‌ಟಿಂಗ್’ ಪರಿಕಲ್ಪನೆಯನ್ನು ತೇಲಿ ಬಿಟ್ಟರು. ಅಲ್ಲಿಂದ 8 ವರ್ಷಗಳ ನಂತರ, 160 ಅಕ್ಷರಗಳ ಮಿತಿಯನ್ನೊಳಗೊಂಡ  ‘ಎಸ್‌ಎಂಎಸ್’( Short Message Service) ಅನ್ನು  ಕಂಪ್ಯೂಟರ್‌ನಿಂದ ಮೊಬೈಲ್ ೆನ್‌ಗೆ ರವಾನಿಸಲಾಯಿತು. ಆ ಕಿರು ಸಂದೇಶ ಏನೆಂದರೆ ‘ಮೇರಿ ಕ್ರಿಸ್ಮಸ್’. ಇದು ಜಗತ್ತಿನ ಮೊಟ್ಟ ಮೊದಲ ಎಸ್‌ಎಂಎಸ್.
ಅಂದ ಹಾಗೆ, ಈ ಎಸ್‌ಎಂಎಸ್ ಪರಿಕಲ್ಪನೆಯನ್ನು ತೇಲಿ ಬಿಟ್ಟ ಆ ವ್ಯಕ್ತಿಯ ಹೆಸರು ‘ಮಾಟಿ ಮ್ಯಾಕ್ಕೊನೆನ್‌‘. ಫಿನ್ಲೆಂಡ್‌ನ ಈ ಮಾಟಿ ಅವರಿಗೆ ‘ಾದರ್ ಆ್ ಎಸ್‌ಎಂಎಸ್’ ಎಂಬ ಹೆಸರಿದೆ. ಆದರೆ, ಇದನ್ನು ಅವರೇನೂ ಮನಪೂರ್ವಕವಾಗಿ ಒಪ್ಪಿಕೊಂಡಿದ್ದಲ್ಲಘಿ. ಎಸ್‌ಎಂಎಸ್ ಸಂಶೋ‘ನೆಗೆ 20 ವರ್ಷ ತುಂಬಿದ ಸಮಯದಲ್ಲಿ ಪತ್ರಿಕೆಯೊಂದು ಅದರ ಮೂಲ ಕೃರ್ತು ಹುಡುಕಿಕೊಂಡು ಹೋಗಿತ್ತುಘಿ. ಆಗ ಕಿರು ಸಂದೇಶ ಸಂಶೋ‘ನೆಯ ಇಡೀ ವೃತ್ತಾಂತ ಬಯಲಾಗಿ, ಮ್ಯಾಕ್ಕೊನೆನ್‌ಗೆ ‘ಾದರ್ ಆ್ ಎಸ್‌ಎಂಎಸ್’ ಬಿರುದು ತಗುಲಿತು. ಆದರೆ, ‘‘ಇದರಲ್ಲಿ ನನ್ನೊಬ್ಬನಿದ್ದು ಏನಿಲ್ಲಘಿ. ಎಸ್‌ಎಂಎಸ್ ಸಂಶೋ‘ನೆಯಲ್ಲಿ ಬೇರೆ ಎಂಜಿನಿಯರ್‌ಗಳ ಪರಿಶ್ರಮವೂ ಸಾಕಷ್ಟಿದೆ,’’ ಎಂದು ತುಂಬ ವಿನಮ್ರದಿಂದ ಮಾಟಿ ಹೇಳಿದ್ದರು. ಹಾಗಾಗಿ, ಅವರನ್ನು Reluctant Father of SMS ಎಂದೂ ಕರೆಯುತ್ತಾರೆ.
ಇದೆಲ್ಲ ಯಾಕೆ ಹೇಳಬೇಕಾಯಿತು ಎಂದರೆ, ಜೂನ್ 29ರಂದು ಮಾಟಿ ಮ್ಯಾಕ್ಕೊನೆನ್ ಅವರು ಅಸ್ತಂಗತವಾದರು. ವಿಪರ್ಯಾಸವೆಂದರೆ, ಇಡೀ ಜಗತ್ತಿನ ಸಂವಹನವನ್ನೇ 160 ಅಕ್ಷರಗಳಲ್ಲಿ ಬಂಸಿರುವ ಮಾಟಿ ಅವರ ಸಾವಿನ ಸುದ್ದಿ ಗೊತ್ತಾಗಿದ್ದುಘಿ, ಅವರು ನಿ‘ನವಾಗಿ ಎರಡು ದಿನಗಳ ಬಳಿಕ! ಅನಾರೋಗ್ಯದಿಂದ ಬಳಲುತ್ತಿದ್ದ ಮ್ಯಾಕ್ಕೊನೆನ್ ಅವರಿಗೆ 63 ವರ್ಷ ವಯಸ್ಸಾಗಿತ್ತುಘಿ.
ಇಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿಯೊಂದಿದೆ. ಇಂದಿನ ಮೊಬೈಲ್ ಸಂವಹನ ಕ್ರಾಂತಿಯಲ್ಲಿ ಎಸ್‌ಎಂಎಸ್‌ಗೆ ಅಗ್ರಸ್ಥಾನವಿದೆ. ಒಂದು ವೇಳೆ, ಮ್ಯಾಕ್ಕೊನೆನ್ ಅವರೇನಾದರೂ ತಮ್ಮ ಈ ಸಂಶೋ‘ನೆಗೆ ಪೇಟೆಂಟ್ ಪಡೆದುಕೊಂಡಿದ್ದರೆ, ಈ ಹೊತ್ತಿಗೆ ಜಗತ್ತಿನ ಕೋಟ್ಯಪತಿಗಳಲೊಬ್ಬರಾಗಿರುತ್ತಿದ್ದರು. ಆದರೆ, ಅಂಥ ಪ್ರಯತ್ನಕ್ಕೆ ಅವರು ಮುಂದಾಗಲಿಲ್ಲಘಿ. ಈ ಬಗ್ಗೆ 2012ರಲ್ಲಿ ಬಿಬಿಸಿಗೆ ಎಸ್‌ಎಂಎಸ್ ಮೂಲಕವೇ ನೀಡಿದ ಸಂದರ್ಶನವೊಂದರಲ್ಲಿ ಅವರು, ‘‘ಎಸ್‌ಎಂಎಸ್ ಏನೂ ಪೇಟೆಂಟ್ ಮಾಡಿಸಿಕೊಳ್ಳಬೇಕಾದಷ್ಟು ಗಮನಾರ್ಹವಾದ ಸಂಶೋ‘ನೆಯಲ್ಲಘಿ. ಅದರಲ್ಲಿ ಪೂರ್ತಿಯಾಗಿ ನನ್ನ ಒಬ್ಬನದ್ದೇನೂ ಪಾತ್ರವಿಲ್ಲಘಿ. ಹಾಗಾಗಿ ಪೇಟೆಂಟ್ ಮಾಡಿಸಿಕೊಳ್ಳಲಿಲ್ಲ,’’ ಎಂದಿದ್ದರು. ಈ ಮಾತುಗಳಲ್ಲೇ ಅವರ ವಿನಮ್ರತೆ ಎದ್ದು ಕಾಣುತ್ತದೆ.  ಎಸ್‌ಎಂಎಸ್ ಪರಿಕಲ್ಪನೆ ಪೂರ್ತಿಯಾಗಿ ಮ್ಯಾಕ್ಕೊನೆನ್ ಅವರದ್ದಾದರೂ ಅದನ್ನು ಅಭಿವೃದ್ಧಿಪಡಿಸುವಲ್ಲಿ ಫ್ರೀಡ್ಮನ್‌ಹಿಲೆಬ್ರಾಂಡ್ ಮತ್ತು ನೀಲ್ ಪಾಪ್‌ವರ್ಥ್ ಅವರ ಕಾಣಿಕೆಯೂ ಸಾಕಷ್ಟಿದೆ. ನೀಲ್ ಅವರೇ ಜಗತ್ತಿನ ಮೊಟ್ಟ ಮೊದಲು ಎಸ್‌ಎಂಎಸ್ ಕಳುಹಿಸಿದ್ದು ಎಂಬುದು ಉಲ್ಲೇಖಿಸಲೇಬೇಕಾದ ಅಂಶ.
ಕಳೆದ 20 ವರ್ಷಗಳ ಅವಯಲ್ಲಿ ಎಣಿಕೆ ಇಲ್ಲದಷ್ಟು ಎಸ್‌ಎಂಎಸ್‌ಗಳು ರವಾನೆಯಾಗಿವೆ. ಅನೇಕ ತುರ್ತು ಪರಿಸ್ಥಿತಿಗಳನ್ನು ಎಸ್‌ಎಂಎಸ್‌ನಿಂದ ನಿ‘ಾಯಿಸಲಾಗಿದೆ. ಇತ್ತೀಚಿನ ಮೊಬೈಲ್ ಸಂವಹನದಲ್ಲೂ ಅನೇಕ ಕ್ರಾಂತಿಗಳಾಗಿವೆ. ‘ಟಚ್‌ಸ್ಕ್ರೀನ್ ಮೊಬೈಲ್’ ಯುಗದಲ್ಲಿ ವಾಟ್ಸ್‌ಆ್ಯಪ್, ಟ್ವಿಟರ್, ೇಸ್‌ಬುಕ್‌ಗಳು ಜನಪ್ರಿಯವಾಗಿರಬಹುದು. ಆದರೆ, ಈ ಎಲ್ಲ ಆ್ಯಪ್‌ಗಳು ನೀಡುವ ಕಿರುಸಂದೇಶಗಳು ಎಸ್‌ಎಂಎಸ್‌ನ ಮತ್ತೊಂದು ರೂಪವಷ್ಟೇಘಿ. ಅದರ್ಥ ಇವುಗಳಿಗೆ ‘ಮೂಲ ಸಂದೇಶ’ವೇ ಈ ಎಸ್‌ಎಂಎಸ್. ಹೊಸ ಮಾದರಿಯ ಆ್ಯಪ್‌ಗಳಿಂದಾಗಿ ಎಸ್‌ಎಂಎಸ್ ಸಂವಹನ ಮಾದರಿಯೂ ಅಳಸಿಹೋಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಕೊಂಚ ಮಟ್ಟಿಗೆ ನಿಜವೂ ಹೌದು. ಇತ್ತೀಚಿನ ಅ‘್ಯಯನ ವರದಿಗಳ ಪ್ರಕಾರ, 2017ರ ಹೊತ್ತಿಗೆ ೇಸ್‌ಬುಕ್, ವಾಟ್ಸ್‌ಆ್ಯಪ್ ಸೇರಿದಂತೆ ಇತರೆ ಆ್ಯಪ್‌ಗಳ ಮೂಲಕ 32 ಲಕ್ಷ ಕೋಟಿ ಸಂದೇಶಗಳು ರವಾನೆಯಾಗಲಿವೆ. ಇದೇ ವೇಳೆ, ಎಸ್‌ಎಂಎಸ್ ಹರಿದಾಟ ಕೇವಲ 7.89 ಲಕ್ಷ ಕೋಟಿ ಮಾತ್ರಘಿ.  2013ರಲ್ಲಿ ಎಸ್‌ಎಂಎಸ್ ಸಂದೇಶದ ಪ್ರಮಾಣ ಅದರ ಉತ್ತುಂಗಕ್ಕೆ  ತಲುಪಿತ್ತುಘಿ. ಆ ವರ್ಷ 8.3 ಲಕ್ಷ ಕೋಟಿ ಸಂದೇಶಗಳು ರವಾನೆಯಾಗಿದ್ದವು.  ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮ್ಯಾಕ್ಕೊನೆನ್ ಅವರು, ‘‘ಮುಂದಿನ 20 ವರ್ಷ ಮಾತ್ರವಲ್ಲ ಎಂದಿಗೂ ಎಸ್‌ಎಂಎಸ್ ಇದ್ದೇ ಇರುತ್ತದೆ. ಆದರೆ, ಅದರ ಸ್ವರೂಪ ಬೇರೆಯದ್ದಾಗಿರಬಹುದು ಅಷ್ಟೇ,’’ ಎಂದಿದ್ದರು. ಅವರ ಮಾತು ಇದೀಗ ನಿಜವಾಗುತ್ತಿದೆ.
1992ರಲ್ಲಿ ಜಗತ್ತಿನ ಮೊದಲ ಎಸ್‌ಎಂಎಸ್ ರವಾನೆಯಾದರೂ ಕೂಡ ಅದರ  ಬಳಕೆಯ ಜನಪ್ರಿಯತೆ ಹೆಚ್ಚಾಗಿದ್ದು 1994ರಲ್ಲಿ. ನೊಕಿಯಾ ಕಂಪನಿ ಆ ವರ್ಷ ಬಿಡುಗಡೆ ಮಾಡಿದ ‘ನೊಕಿಯಾ 2010 ಮೊಬೈಲ್ ೆನ್’ ಎಸ್‌ಎಂಎಸ್ ಬಳಕೆಗೆ ಅನುಕೂಲವಾಗುವಂತೆ ಇತ್ತುಘಿ. ಅಲ್ಲಿಂದಾಚೆಗೆ ಎಸ್‌ಎಂಎಸ್ ತುಂಬ ಜನಪ್ರಿಯವಾಗಿ, ಮೊಬೈಲ್ ಸಂವಹನದಲ್ಲಿ ಬೃಹತ್ ಕ್ರಾಂತಿಯೇ ನಡೆದಿದ್ದು ಈಗ ಇತಿಹಾಸ.
--
ಮಾಟಿ ಮ್ಯಾಕ್ಕೊನೆನ್ ಅವರು 1952 ಏಪ್ರಿಲ್ 16ರಂದು ಫಿನ್ಲೆಂಡ್‌ನ ಸೌಮಾಸೊಮಾಯಿ ಎಂಬ ಪಟ್ಟಣದಲ್ಲಿಘಿ ಜನಿಸಿದರು. ಅವರು 1976ರಲ್ಲಿ ಊಲು ಟೆಕ್ನಿಕಲ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜನಿಯರಿಂಗ್ ಪದವಿ ಪಡೆದು, ಪೋಸ್ಟಲ್ ಏಜೆನ್ಸಿ(ಪಿಟಿಎಲ್)ಯಲ್ಲಿ ಸಿಸ್ಟಮ್ ಎಂಜಿನಿಯರ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಇದೇ ಸಮಯದಲ್ಲಿ  ಎನ್‌ಎಂಟಿ ಮೊಬೈಲ್ ನೆಟ್‌ವರ್ಕ್‌ಗೆ ವೈರ್‌ಲೆಸ್ ಕಮ್ಯೂನಿಕೇಷನ್ ಸರ್ವಿಸ್ ಅಭಿವೃದ್ಧಿಪಡಿಸಿಕೊಟ್ಟರು. ಇದಲ್ಲದೆ 1984ರಿಂದ 1988ರವರೆಗೂ ಮ್ಯಾಕ್ಕೊನೆನ್ ಅವರು ಪಿಟಿಎಲ್‌ನ ಉಪಾ‘್ಯಕ್ಷರೂ ಆಗಿದ್ದರು. ಈ ಅವಯಲ್ಲಿ ಅವರು ಜಿಎಸ್‌ಎಂ ಟೆಕ್ನಾಲಜಿ ಅಭಿವೃದ್ಧಿಯ ತಂಡದಲ್ಲೂ ಕೆಲಸ ಮಾಡಿದ್ದರು. ಬಳಿಕ 1989ರಲ್ಲಿ ಮೊಬೈಲ್ ಯೂನಿಟ್‌ನ ಅ‘್ಯಕ್ಷರಾಗಿ, ಅದನ್ನು ‘ಟೆಲಿಕಾಂ ಫಿನ್ಲೆಂಡ್’ ಎಂದು ಮರು ನಾಮಕರಣ ಮಾಡಿದರು. ಹೀಗೆ ಅವರು ತಮ್ಮ ಕ್ಷೇತ್ರದಲ್ಲಿ ಅಗಾ‘ವಾದ ಸಾ‘ನೆ ಮಾಡುತ್ತ ಒಂದೊಂದೇ ಹುದ್ದೆಗಳನ್ನು ಅಲಂಕರಿಸಿ, ಅವುಗಳಿಗೆ ನ್ಯಾಯ ಸಲ್ಲಿಸಿದರು. 1995ರಿಂದ 2000ವರೆಗೂ ಮ್ಯಾಕ್ಕೊನೆನ್ ಅವರು ಮೊಬೈಲ್ ಕಮ್ಯೂನಿಕೇಷನ್ ಗ್ರೂಪ್‌ನ ಉಪಾ‘್ಯಕ್ಷರಾದರು. 2000ರಲ್ಲಿ ಕಂಪನಿಯ ಮೊಬೈಲ್ ಇಂಟರ್ನೆಟ್ ಯೂನಿಟ್‌ನ ಅ‘್ಯಕ್ಷ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸ್ವಲ್ಪ ಕಾಲದವರೆಗೂ ಇದ್ದರು. ಈ ಸಮಯದಲ್ಲಿ ಯೂನಿಟ್‌ನ ಹೆಸರನ್ನು ‘ಸೊನೆರಾ’ ಎಂದು ಬದಲಿಸಿದರು. ಇದಾದ ಬಳಿಕ ಅವರು ನೊಕಿಯಾ ನೆಟ್‌ವರ್ಕ್ಸ್ ಪ್ರೊೆಷನಲ್ ಸರ್ವಿಸ್‌ಗೆ ಯೂನಿಟ್ ನಿರ್ದೇಶಕರಾಗಿ ಸೇರ್ಪಡೆಯಾಗಿ, 2003ರಲ್ಲಿ  ಫಿನ್ನೆಟ್ ಒಯ್‌ನ ಸಿಇಒ ಹುದ್ದೆಗೇರಿದರು. ಬಳಿಕ  2005ರಲ್ಲಿ ನಿವೃತ್ತರಾದರು. ಇದಿಷ್ಟು ಅವರ ವೃತ್ತಿಗೆ ಸಂಬಂಸಿದ ಟೆಕ್ನಿಕಲ್ ಮಾಹಿತಿ.
--
ಕೆಲವರು ಎಷ್ಟೇ ಅದ್ಭುತ ಕಾರ್ಯಗಳನ್ನು ಮಾಡಿದರೂ ಎಲೆಮರೆಯ ಕಾಯಿಯಂತೆ ಇದ್ದು ಬಿಡುತ್ತಾರೆ. ಈ ಸಾಲಿಗೆ ಮಾಟಿ ಮ್ಯಾಕ್ಕೊನೆನ್ ಅವರಿಗೆ ಅಗ್ರಸ್ಥಾನ. ಸಂವಹನದಲ್ಲಿ ಕ್ರಾಂತಿಕಾರಿ ಸಂಶೋ‘ನೆ ಮಾಡಿದರೂ ಸಾರ್ವಜನಿಕ ಜೀವನದಲ್ಲಿ ಅವರು ಲೋ ಪ್ರೊೈಲ್ ವ್ಯಕ್ತಿಯಾಗಿಯೇ ಇದ್ದುಬಿಟ್ಟರು. ಇದರಿಂದಾಗಿ ಏನೋ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಲಿ, ಪ್ರಶಸ್ತಿಗಳು ಅವರನ್ನು ಹುಡುಕೊಂಡು ಬರಲಿಲ್ಲಘಿ. ಅವರ ಜೀವಿತಾವಯಲ್ಲಿ ಸಿಕ್ಕ ಪ್ರಮುಖ ಗೌರವ ಎಂದರೆ The economist Innovation  award ಮಾತ್ರಘಿ. 2008ರಲ್ಲಿ Computing and Telecommunication ವಿ‘ಾಗದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಲಾಯಿತಷ್ಟೇಘಿ. ಕೆಲವು ವ್ಯಕ್ತಿಗಳನ್ನು ಅವರಿಗೆ ಸಿಕ್ಕ ಪ್ರಶಸ್ತಿಘಿ, ಗೌರವಗಳಿಂದಲೇ ಅಳೆಯಲು ಸಾ‘್ಯವಿಲ್ಲಘಿ. ಅದೆಲ್ಲವನ್ನೂ ಮೀರಿ ಬೆಳೆದು ಬಿಡುತ್ತಾರೆ. ಇದಕ್ಕೆ ಮಾಟಿ ಮ್ಯಾಕ್ಕೊನೆನ್ ಕೂಡ ಹೊರತಲ್ಲಘಿ. ಎಲ್ಲಿವರೆಗೂ ನಾವು ಮೊಬೈಲ್‌ಗಳಲ್ಲಿ ಎಸ್‌ಎಂಎಸ್ ಅನ್ನು ಕಳುಹಿಸುತ್ತೇವೋ ಅಲ್ಲಿವರೆಗೂ ಅವರು ಅಜರಾಮರರಾಗಿಯೇ ಇರುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.

- Mallikarjun Tippar
(This article published on VK. (12 July 2015)

ಭಾನುವಾರ, ಮೇ 24, 2015

ಅರ್ಥ ಕಳೆದುಕೊಂಡ ‘ಸಬ್ ಕಾ ಸಾಥ್’

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರ ದೊಂದಿಗೆ
ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದದ್ದು.
ಆದರೆ, ವರ್ಷದ ಅವಧಿಯಲ್ಲಿ ‘ಸಬ್ ಕಾ ಸಾಥ್’ ಅನ್ನುವ
ಘೋಷಣೆ ಯಾಕೋ ಅಷ್ಟೊಂದು ಹೊಂದಾಣಿಕೆ
ಯಾಗುತ್ತಿಲ್ಲ. ಅಭಿವೃದಿಟಛಿ ಅಜೆಂಡಾ, ಯುವಕರೇ ದೇಶದ
ಆಸ್ತಿ ಎಂದು ಹುರಿದುಂಬಿಸಿಕೊಂಡು ಬಂದ ಪ್ರಧಾನಿ
ಮೋದಿ, ಒಂದಿಷ್ಟು ಹೊಸ ಆಶಾ ಕಿರಣ ಬೀರಲು
ಕಾರಣವಾಗಿದ್ದರು ಎಂಬುದಂತೂ ನಿಜ. ಆದರೆ, ಇದೇ
ಮಾತನ್ನು ಅವರು ಪ್ರತಿನಿಧಿಸುವ ಬಿಜೆಪಿ, ಆರ್‌ಎಸ್‌ಎಸ್
ಹಾಗೂ ಅದರ ಸಹವರ್ತಿ ಸಂಸ್ಥೆಗಳಿಗೆ ಅನ್ವಯಿಸಲಾಗದು.
ಅವರದ್ದೇ ಸಚಿವ ಸಂಪುಟದ ಗಿರಿರಾಜ್ ಸಿಂಗ್,
ಸಾಧ್ವಿ ನಿರಂಜನಾ ಜ್ಯೋತಿ ಸೇರಿದಂತೆ ಸಂಸದರಾದ ಸಾಕ್ಷಿ
ಮಹಾರಾಜ್, ಯೋಗಿ ಆದಿತ್ಯನಾಥ್, ಹಿರಿಯ ನಾಯಕ
ಸುಬ್ರಹ್ಮಣ್ಯ ಸ್ವಾಮಿ ಸೇರಿದಂತೆ ಅನೇಕರು, ‘ಅನೇಕ
ಬೇಡವಾದ’ ಮಾತುಗಳನ್ನಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ
ಬಂದರೆ ಅಲ್ಪಸಂಖ್ಯಾತರಲ್ಲಿ ಒಂದು ಅಳಕು ಇದ್ದೇ
ಇರುತ್ತದೆ. ಮೋದಿ ಪ್ರಚಾರದಲ್ಲಿ ‘ಸಬ್ ಕಾ ಸಾಥ್,
ಸಬ್ ಕಾ ವಿಕಾಸ್’ ಮಂತ್ರ ಪಠಿಸುತ್ತಾ ಆ ಅಳಕನ್ನು ದೂರ
ಮಾಡಲು ಯತ್ನಿಸಿದ್ದರು. ಆದರೆ, ಅಧಿಕಾರಕ್ಕೆ ಬಂದ
ಮೇಲೆ ಅವರು, ಅವರದ್ದೇ ಪಕ್ಷದ ಕೆಲವರ ಮಾತಿನ
ಮೇಲೆ ಕಡಿವಾಣ ಹಾಕಲು ವಿಫಲರಾದರೂ ಎಂಬುದು
ಈ ಒಂದು ವರ್ಷದಲ್ಲಂತೂ ಸುಸ್ಪಷ್ಟ. ಅವರ ಈ ‘ಮೌನ’
ಕೂಡಾ ಇನ್ನೊಂದಿಷ್ಟು ಆಕ್ಷೇಪಾರ್ಹ, ಭಯಭೀತ,
ದ್ವೇಷಪೂರಿತವಾಗಿ ಮಾತನಾಡುವವರಿಗೆ ಪ್ರಚೋದನೆ
ನೀಡಿದಂತಿತ್ತು ಎನ್ನುವುದು ವಿಶ್ಲೇಷಣೆ. ಹಾಗೆ
ನೋಡಿದರೆ, ಇದು ಸುಳ್ಳಲ್ಲ. ಸಾದ್ವಿ ನಿರಂಜನಾ ಜ್ಯೋತಿ
‘ಹರಾಮ್‌ಜಾದೆ’ ಹಾಗೂ ಗಿರಿರಾಜ್ ಸಿಂಗ್ ಅವರು
ಸೋನಿಯಾ ಗಾಂಧಿ ವಿರುದಟಛಿ ಮಾಡಿದ ಜನಾಂಗೀಯ
ಆಕ್ಷೇಪಾರ್ಹ ಟೀಕೆಗೆ ಸಂಬಂಧಿಸಿದಂತೆ ವ್ಯಾಪಕ ಒತ್ತಡ
ಎದುರಾದಾಗ ಮಾತ್ರ ಬಾಯಿಬಿಟ್ಟರೇ ಹೊರತು,
ಇನ್ನುಳಿದವರ ಮಾತುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ!
ಘರ್ ವಾಪಸಿ, ಮುಸ್ಲಿಮರಿಗೆ ಮತದಾನ ಹಕ್ಕು
ನಿರಾಕರಣೆ, ಉತ್ತರಪ್ರದೇಶದಲ್ಲಿನ ಲವ್ ಜಿಹಾದ್,
ಹರ್ಯಾಣ ಮತ್ತು ದೆಹಲಿಗಳಲ್ಲಿ ನಡೆದ ಚರ್ಚ್‌ಗಳ
ಮೇಲೆ ದಾಳಿ.. ಹೀಗೆ ಅನೇಕ ‘ಬೇಡವಾದ ಸಂಗತಿಗಳು’
ಘಟಿಸಿದರೂ ಅಥವಾ ಅವರ ಕಣ್ಣಮುಂದೆ ನಡೆದರೂ
ಅವು ತಪ್ಪು ಎನ್ನುವಂಥ ಒಂದೇ ಒಂದು ಸಂದೇಶವನ್ನು
ರವಾನಿಸಲಿಲ್ಲ ಎಂಬ ದೂರು ಕೆಲವು
ಸಮುದಾಯಗಳಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಸದ ಸಾಕ್ಷಿ
ಮಹಾರಾಜ್ ಗಾಂಧಿ ಹಂತಕ ‘ನಾಥೂರಾಮ್ ಗೊಡ್ಸೆ
ಒಬ್ಬ ದೇಶಭಕ್ತ’ ಎಂದರೂ ಯಾವುದೇ ಪ್ರತಿಕ್ರಿಯೆ
ವ್ಯಕ್ತವಾಗಲಿಲ್ಲ. ಇನ್ನೂ ವಿಚಿತ್ರ ಎಂದರೆ, ನರೇಂದ್ರ
ಮೋದಿ ಅವರು ಪ್ರತಿ ವಿದೇಶ ಪ್ರವಾಸದಲ್ಲೂ ಮಹಾತ್ಮ
ಗಾಂಧಿ ಹಾಗೂ ಅವರ ಜೀವನವೇ ನಮಗೆ ಆದರ್ಶ,
ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕೆಂಬ
ಸಂದೇಶ ಸಾರುತ್ತಾರೆ.
ಅಷ್ಟೇ ಅಲ್ಲದೆ, ಮಹಾತ್ಮ ಗಾಂಧಿ ಜಯಂತಿಗೆ ‘ಸ್ವಚ್ಛ
ಭಾರತ್ ಆಂದೋಲನ’ವನ್ನೇ ಆರಂಭಿಸುತ್ತಾರೆ.
ಅವರದ್ದೇ ಪಕ್ಷದ ಸಂಸದರು ಮಾತ್ರ ಗಾಂಧಿಯನ್ನು
‘ಖಳನಾಯಕ’ನ ರೀತಿ ಬಿಂಬಿಸುತ್ತಾರೆ. ಗಾಂಧಿಯನ್ನು
ಕೊಂದವರನ್ನು ‘ದೇಶಭಕ್ತ’ ಎಂದು ‘ಗುಡಿ
ಕಟ್ಟಲು’ ಮುಂದಾಗುತ್ತಾರೆ. ಇದೆಲ್ಲವೂ ಮೋದಿ
ಅಧಿಕಾರಕ್ಕೆ ಬಂದ ಬಳಿಕ ನಡೆದ ‘ಮಾತಿನ
ಮಲ್ಲಯುದಟಛಿ’ಗಳು. ಇವುಗಳಲ್ಲಿ ಕೆಲವು ಚಟುವಟಿಕೆ
ಗಳು ಮೊದಲಿಂದಲೂ ಇದ್ದವು. ಆದರೆ, ಘರ್
ವಾಪಸಿಯಂಥ ಕಾರ್ಯಕ್ರಮಗಳು ಈ ಒಂದು ವರ್ಷದ
ಅವಧಿಯಲ್ಲಿ ಹೆಚ್ಚು ಪ್ರಚಾರಕ್ಕೆ ಬಂದವು ಎಂಬುದು
ಕೂಡಾ ಸುಳ್ಳೇನೂ ಅಲ್ಲ.
---------------

ನಾವು ಪ್ರತಿ ಮಸೀದಿಯಲ್ಲೂ ಗೌರಿ, ಗಣೇಶ ಮತ್ತು
ನಂದಿಯನ್ನು ಪ್ರತಿಷ್ಠಾಪಿಸುತ್ತೇವೆ.

ಲವ್ ಜಿಹಾದ್‌ನಲ್ಲಿ ಒಬ್ಬ ಹಿಂದೂ ಹುಡುಗಿ
ಮತಾಂತರ ಗೊಂಡರೆ, ೧೦೦ ಮುಸ್ಲಿಮ
ಹುಡುಗಿಯರು ಹಿಂದೂ ಧರ್ಮಕ್ಕೆ
ಮತಾಂತರಗೊಳ್ಳುವಂತೆ ಮಾಡಬೇಕು.
- ಯೋಗಿ ಆದಿತ್ಯನಾಥ್  ಬಿಜೆಪಿ ಸಂಸದ

ಜ್ಯಾತ್ಯತೀತ ಹಣೆಪಟ್ಟಿಯಿಂದಾಗಿ ನಾವು
ಬಳಲುತ್ತಿದ್ದೇವೆ. ಸಾಮಾಜಿಕ ಬೆದರಿಕೆಗೆ
ಕಾರಣವಾಗಿರುವ ಲವ್ ಜಿಹಾದ್ ಬಗ್ಗೆ ಜನರಲ್ಲಿ ಜಾಗೃತಿ
ಮೂಡಿಸಬೇಕಿದೆ. ಅದರಲ್ಲಿ ಸೋಲುತ್ತೇವೆಯೋ
ಅಥವಾ ಗೆಲ್ಲುತ್ತೇವೆಯೋ ಎಂಬುದು ನಂತರದ ಮಾತು.

ಒಂದು ವೇಳೆ ರಾಜೀವ್ ಗಾಂಧಿ ಅವರು
ಸೋನಿಯಾ ಗಾಂಧಿ ಬದಲಾಗಿ ನೈಜೀರಿಯನ್
ಮದುವೆಯಾಗಿದ್ದರೆ, ಕಾಂಗ್ರೆಸಿಗರು ತಮ್ಮ
ಅಧ್ಯಕ್ಷೆಯನ್ನಾಗಿ ಒಪ್ಪಿಕೊಳ್ಳುತ್ತಿದ್ದರೆ?
- ಗಿರಿರಾಜ್ ಸಿಂಗ್, ಕೇಂದ್ರ ಸಚಿವ

ದೆಹಲಿಯಲ್ಲಿ ಸರ್ಕಾರ ರಾಮನ ಮಕ್ಕಳಿಂದ ಕೂಡಿರ
ಬೇಕಾ ಅಥವಾ ಇತರರಿಂದ (ಸೂ.. ಮಕ್ಕಳಿಂದ)
ಕೂಡಿರಬೇಕಾ ಎಂದು ನೀವು ನಿರ್ಧರಿಸಬೇಕು.
- ನಿರಂಜನ ಜ್ಯೋತಿ, ಕೇಂದ್ರ ಸಚಿವೆ

ಹಿಂದೂ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು
ಹೆರಬೇಕು. ಅವುಗಳಲ್ಲಿ ಒಂದು ಮಗುವನ್ನು ಸೇನೆಗೆ
ಕಳುಹಿಸಬೇಕು. ಮತ್ತೊಂದು ಮಗುವನ್ನು ಧಾರ್ಮಿಕ
ಮತ್ತು ಬೋಧಕರಿಗೆ ನೀಡಬೇಕು.

ಮಹಾತ್ಮ ಗಾಂಧಿಯಷ್ಟೇ ನಾಥೂರಾಮ್ ಗೋಡ್ಸೆ
ಕೂಡಾ ದೇಶಭಕ್ತ. ಅವರೊಬ್ಬ ಹುತಾತ್ಮ.
- ಸಾಕ್ಷಿ ಮಹಾರಾಜ್, ಬಿಜೆಪಿ ಸಂಸದ

ಮುಸ್ಲಿಮರಿಗೆ ನೀಡಿರುವ ಮತದಾನ ಹಕ್ಕನ್ನು
ವಾಪಸ್ ಪಡೆಯಬೇಕು.
- ಸಂಜಯ್ ರಾವತ್, ಸಂಸದ, ಶಿವಸೇನೆ

ಮತ್ತೆ ಕೇಳಿದ ಸ್ಕಾಟ್ಲೆಂಡ್ ಜನಮತ ಗಣನೆ ಕೂಗು

ಸ್ಕಾಟ್ಲೆಂಡ್‌ನಲ್ಲಿ ಮತ್ತೊಮ್ಮೆ ಜನಮತಗಣನೆ ನಡೆಯಲಿದೆಯಾ?
ಇತ್ತೀಚೆಗೆ ನಡೆದ ಸಾರ್ವತ್ರಿಕ ಬ್ರಿಟನ್ ಚುನಾವಣೆಯ ಫಲಿತಾಂಶ
ಗಮನಿಸಿದರೆ ಇಂಥದೊಂದು ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಸ್ಕಾಟಿಷ್
ನ್ಯಾಷನಲಿಸ್ಟ್ ಪಾರ್ಟಿ(ಎಸ್‌ಎನ್‌ಪಿ) ಸ್ಕಾಟ್ಲೆಂಡ್‌ನ ೫೯ ಸ್ಥಾನಗಳ ಪೈಕಿ ೫೬
ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದು, ಈ ಅನುಮಾನಕ್ಕೆ ಕಾರಣ.
‘ಸದ್ಯಕ್ಕೆ ತಮಗೆ ಸಿಕ್ಕಿರುವ ಈ ಜಯ ಸ್ಕಾಟ್ಲೆಂಡ್‌ನ ಸ್ವಾತಂತ್ರ್ಯಕ್ಕೆ ದೊರೆತ
ಜನಾದೇಶವಲ್ಲ. ಆದರೆ, ವೆಸ್ಟ್‌ಮಿನಿಸ್ಟರ್ ಸ್ಕಾಟ್ಲೆಂಡ್‌ನ ಕೂಗನ್ನು
ಹಿಂದೆಂದಿಗಿಂತಲೂ ಅತ್ಯಂತ ಪರಿಣಾಮಕಾರಿಯಾಗಿ ಕೇಳಿಸಿಕೊಳ್ಳಬೇಕಾದ
ಅನಿವಾರ್ಯತೆ ಸೃಷ್ಟಿಸಿದೆ’ ಎಂದು ಎಸ್‌ಎನ್‌ಪಿ ನಾಯಕಿ ನಿಕೋಲ್
ಸ್ಟುರ್ಜೋನ್ ಹೇಳಿರುವುದು ಅನೇಕ ರಾಜಕೀಯ ಲೆಕ್ಕಾಚಾರಗಳಿಗೆ ದಾರಿ
ಮಾಡಿ ಕೊಟ್ಟಿದೆ. ಇದೇ ಮಾತನ್ನು ಎರಡನೇ ಬಾರಿ ಅಧಿಕಾರಕ್ಕೇರಿರುವ
ಪ್ರಧಾನಿ ಡೇವಿಡ್ ಕೆಮರಾನ್ ಕೂಡಾ ಪುಷ್ಠೀಕರಿಸುತ್ತಾರೆ. ಮತ್ತೆ ಅವರ
ಮುಂದಿರುವ ತಕ್ಷಣದ ಸವಾಲು ಕೂಡಾ ಸ್ಕಾಟ್ಲೆಂಡ್‌ಗೆ ಹಸ್ತಾಂತರಿಸಬೇಕಾಗಿರುವ
ಅಧಿಕಾರಗಳ ಪರಾಮರ್ಶೆಯೂ ಹೌದು.
ಈ ಇಬ್ಬರು ನಾಯಕರ ಸದ್ಯದ ಮನಸ್ಥಿತಿಗೆ ಅನುಗುಣವಾಗಿ
ಹೇಳುವುದಾದರೆ, ಇಂಗ್ಲೆಂಡ್ ಒಕ್ಕೂಟದಿಂದ ಸ್ಕಾಟ್ಲೆಂಡ್ ಸಿಡಿದು ಹೋಗುವ
ಯತ್ನ ಸದ್ಯಕ್ಕೆ ಘಟಿಸದಿರಬಹುದು. ಆದರೆ, ಅಂಥದೊಂದು ಸಾಧ್ಯತೆಯನ್ನಂತೂ
ಖಡಾಖಂಡಿತವಾಗಿ ತಳ್ಳಿ ಹಾಕುವಂತಿಲ್ಲ. ಇದಕ್ಕಾಗಿ ಬಹಳ ದಿನಗಳವರೆಗೂ
ಕಾಯಬೇಕಿಲ್ಲ. ಯಾಕೆಂದರೆ, ಮುಂದಿನ ವರ್ಷ ಅಂದರೆ, ೨೦೧೬ರ ಮೇ
ತಿಂಗಳಲ್ಲಿ ಸ್ಕಾಟ್ಲೆಂಡ್ ಸಂಸತ್ತಿಗೆ ಚುನಾವಣೆ ನಡೆಯಲಿದೆ. ಆಗ
ಖಂಡಿತವಾಗಿಯೂ ಎಸ್‌ಎನ್‌ಪಿ ಜನಮತ ಗಣನೆಯನ್ನು ತನ್ನ ಪ್ರಣಾಳಿಕೆಯಲ್ಲಿ
ಸೇರಿಸಿ, ಚುನಾವಣಾ ಅಖಾಡಕ್ಕಿಳಿಯುವುದು ಈಗಾಗಲೇ ಜನಜನಿತ.
ಹಾಗಾಗಿ, ಅಬ್ಬಾಬ್ಬ ಅಂದರೆ ಇನ್ನೊಂದು ವರ್ಷದ ಮಟ್ಟಿಗೆ ಸ್ಕಾಟ್ಲೆಂಡ್
ಸ್ವತಂತ್ರವಾಗುವ ಪ್ರಯತ್ನ ಮುಂದಕ್ಕೆ ಹೋಗಬಹುದು. ಈ ಅವಧಿಯಲ್ಲಿ
ಕೆಮರಾನ್ ನೇತೃತ್ವದ ಹೊಸ ಸರ್ಕಾರ ಯಾವ ರೀತಿ ಮತ್ತು ಹೇಗೆ ಸ್ಕಾಟ್ಲೆಂಡ್
ಸಮಸ್ಯೆಯನ್ನು ನಿರ್ವಹಿಸುತ್ತದೆ ಎಂಬುದರ ಮೇಲೆ ‘ಜನಮತಗಣನೆ’
ಹಣೆಬರಹ ನಿಂತಿದೆ.
ಇನ್ನೂ ವಿವರವಾಗಿ ನೋಡುವು ದಾದರೆ, ಬ್ರಿಟನ್ ಚುನಾವಣೆ ಫಲಿತಾಂಶ
ಪ್ರಕಟವಾಗುತ್ತಿದ್ದಂತೆ ಇಂಗ್ಲೆಂಡ್‌ನ ಬಹುತೇಕ ಪತ್ರಿಕೆಗಳು ತಮ್ಮ
ಸಂಪಾದಕೀಯನ್ನು ಒಂದೇ ಧ್ವನಿಯಲ್ಲಿ ಕೇಂದ್ರೀಕರಿಸಿದ್ದವು. ಡೇವಿಡ್
ಕೆಮರಾನ್ ಅಖಂಡ ಇಂಗ್ಲೆಂಡ್‌ನ ಕೊನೆಯ ಪ್ರಮುಖ ನಾಯಕರಾಗಲಿದ್ದಾರೆ
ಎಂಬ ಅಂಶವದು. ಅಂದರೆ, ಈಗಾಗಲೇ ಅಲ್ಲಿ ಅಂಥದೊಂದು ಮೂಡ್
ಸೃಷ್ಟಿಯಾಗಿರುವುದು ಸತ್ಯ. ಯಾಕೆಂದರೆ, ಎಸ್‌ಎನ್‌ಪಿ ನಾಯಕಿ ನಿಕೋಲ್ ಅವರು,
ಈಗ ದೊರೆತಿರುವ ಜಯ ಸ್ವಾತಂತ್ರ್ಯಕ್ಕೆ ಸಿಕ್ಕ ಆದೇಶವಲ್ಲ ಎನ್ನಬಹುದು. ಆದರೆ,
ವಾಸ್ತವದಲ್ಲಿ ಸ್ಕಾಟ್ಲೆಂಡ್ ಪೂರ್ತಿ, ವ್ಯಾಪಕವಾದ ಬೆಂಬಲ ದೊರೆತಿರುವುದು
ಪ್ರತ್ಯೇಕ ವಾಗಬೇಕೆಂಬ ದ್ಯೋತಕದ ಪ್ರಕ್ರಿಯೆಯ ಒಂದು ಭಾಗವಾಗಿ.
ಹಾಗೆಯೇ, ಕಳೆದ ಬಾರಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆ ಸಿದ್ದ ಕೆಮರಾನ್‌ಗೆ
ಈ ಬಾರಿ ಸ್ಕಾಟ್ಲೆಂಡ್ ಹೊರತುಪಡಿಸಿ, ಇಡೀ ಬ್ರಿಟನ್ ಹಾಗೂ ಇಂಗ್ಲೆಂಡ್
ನಲ್ಲಿ ಅಭೂತಪೂರ್ವ ಜಯ ಸಿಕ್ಕಿದ್ದು, ಇಂಗ್ಲೆಂಡ್‌ನಿಂದ ಸ್ಕಾಟ್ಲೆಂಡ್ ಸಿಡಿದು
ಹೋಗದಂತೆ ನೋಡಿಕೊಳ್ಳುವುದು ಹಾಗೂ ಐರೋಪ್ಯ ಒಕ್ಕೂಟದಿಂದ ಹೊರ
ಬನ್ನಿ ಎಂಬ ಸಂದೇಶದ ಭಾಗವಾಗಿ. ಆದರೆ, ಕೆಮರಾನ್ ಅಧಿಕಾರಾವಧಿಯಲ್ಲೇ
ಬ್ರಿಟನ್ ಛಿದ್ರವಾಯಿತು ಮತ್ತು ಐರೋಪ್ಯ ಒಕ್ಕೂಟದಿಂದ ಹೊರ ಬಿತ್ತು
ಎಂಬ ಅಪವಾದ ಹೊತ್ತುಕೊಳ್ಳಲು ಸಿದಟಛಿರಿಲ್ಲ ಎಂಬುದನ್ನು ಪೀಟರ್ ರೆಡೆಲ್
‘ಟೆಲಿಗ್ರಾಫ್’ಗೆ ಬರೆದ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಹೀಗೆ, ಈ ಸಾರ್ವತ್ರಿಕ
ಚುನಾವಣೆ ಫಲಿತಾಂಶ ಮುಂಬರುವ ದಿನಗಳಲ್ಲಿ ಅನೇಕ ಹಾಗೂ ನಾನಾ
ಆಯಾಮಗಳನ್ನು ಒಳಗೊಂಡಿರುವ ಸಾಧ್ಯತೆಗಳನ್ನು ತೆರೆದಿಟ್ಟಿದೆ.
ಡೇವಿಡ್ ಕೆಮರಾನ್ ಮುಂದಿರುವ ಮೊದಲ ಸವಾಲು ಎಂದರೆ,
ಸ್ಕಾಟ್ಲೆಂಡ್‌ಗೆ ಆರ್ಥಿಕ ಸ್ವಾಯತ್ತೆಯನ್ನು ಕಲ್ಪಿಸುವುದು. ಇದಕ್ಕೆ ಸಂಬಂಧಿಸಿದ
ಕಾಯ್ದೆ ಈಗಾಗಲೇ ಕರಡು ರೂಪದಲ್ಲಿದೆ. ಅದನ್ನು ಯಾವ ರೀತಿಯ
ಕಾಯ್ದೆಯಾಗಿ ಮಾರ್ಪಡಿಸಿ ಅನುಷ್ಠಾನಗೊಳಿಸುತ್ತಾರೆ ಎಂಬುದರ ಮೇಲೆ
ಅವರ ಜಾಣ್ಮೆ ನಿಂತಿದೆ. ಯಾಕೆಂದರೆ, ಸ್ಕಾಟಿಷ್ ಸರ್ಕಾರಕ್ಕೆ ತೆರಿಗೆ ಸಂಗ್ರಹ
ವಿಷಯದಲ್ಲಿ ಹೆಚ್ಚಿನ ಅಧಿಕಾರವನ್ನು ಕೊಟ್ಟು, ಆ ಮೂಲಕ ಆರ್ಥಿಕ
ಸ್ವಾಯತ್ತೆಯನ್ನು ಕಲ್ಪಿಸಬೇಕಿದೆ. ಹಾಗಾಗಿಯೇ ಅವರು, ‘ಅಧಿಕಾರ
ಹಸ್ತಾಂತರಕ್ಕೊಳಗಾದ ಜಗತ್ತಿನಲ್ಲೇ ಅತ್ಯಂತ ಪ್ರಬಲವಾದ ಸರ್ಕಾರವನ್ನು
ಸೃಷ್ಟಿಸಲಾಗುವುದು’ ಎಂಬ ಕೆಮರಾನ್ ಹೇಳಿಕೆಯಲ್ಲಿ ಅನೇಕ ಅರ್ಥಗಳ
ಹೊಳವುಗಳಿವೆ. ಆದರೆ, ಎಸ್‌ಎನ್‌ಪಿ ಮಾತ್ರ ಇದಕ್ಕೆ ವಿರೋಧ
ವ್ಯಕ್ತಪಡಿಸಿದಂತೆ ಕಾಣುತ್ತಿದೆ. ಈ ಬಿಲ್ ಹುಟ್ಟಿಗೆ ಕಾರಣವಾಗಿದ್ದು ಸ್ಮಿತ್
ಕಮಿಷನ್. ಆದರೆ, ಸ್ಕಾಟ್ಲೆಂಡ್ ಆಶೋತ್ತರಗಳನ್ನು ಈಡೇರಿಸುವಲ್ಲಿ ಇದು
ಅಷ್ಟೊಂದು ಯಶಸ್ಸು ಕಾಣದು. ತೆರಿಗೆಗಳ ಮೇಲೆ ಸಂಪೂರ್ಣ ಹಿಡಿತ
ಹೊಂದಿರುವ ಪೂರ್ಣ ಪ್ರಮಾಣ ಆರ್ಥಿಕ ಸ್ವಾಯತ್ತೆಯನ್ನು ಕಲ್ಪಿಸುವಂಥ
ವಾತಾವರಣ ನಿರ್ಮಾಣವಾಗಬೇಕು ಎಂಬುದು ಎಸ್‌ಎನ್‌ಪಿಯ ವಾದ.
ಲೇಬರ್ ಪಾರ್ಟಿ ಸೋತಿರುವುದು ಕೂಡ ಎಸ್‌ಎನ್‌ಪಿ ಮೂಲ ಉದ್ದೇಶಕ್ಕೆ
ಕೊಡಲಿ ಪೆಟ್ಟು ಬಿದ್ದಿದೆ. ಹಾಗಾಗಿ, ಕನ್ಸರ್ವೇಟಿವ್ ಜತೆ ಜತೆಗೂಡಿ
ಸಾಗಬೇಕಾಗಿರುವ ಅನಿವಾರ್ಯತೆ ಎಸ್‌ಎನ್‌ಪಿಗೆ ಎದುರಾಗಿದೆ.
ಹಾಗಾಗಿಯೇ, ನಿಕೋಲ್ ಸ್ಟುರ್ಜೋನ್ ಅವರು, ಈಗ ಸಿಕ್ಕಿರುವ ಜಯ
ಸ್ವಾತಂತ್ರ್ಯದ ಜನಾದೇಶವಲ್ಲ ಎಂದು ಹೇಳುತ್ತಿರುವುದು. ಆದರೆ, ಎಸ್‌ಎನ್
ಪಿಯ ಹಿಂದಿನ ಮುಖ್ಯಸ್ಥ ಅಲೆಕ್ಸ್ ಸಾಲ್ಮಂಡ್ ಮಾತ್ರ ನನ್ನ ಜೀವಿತಾವಧಿಯಲ್ಲಿ
ಸ್ಕಾಟ್ಲೆಂಡ್ ಸಂಪೂರ್ಣ ಸ್ವತಂತ್ರವಾಗುವುದನ್ನು ಕಾಣುತ್ತೇನೆ ಎಂದಿದ್ದಾರೆ.
ಅಂದರೆ, ಎಸ್‌ಎನ್‌ಪಿಯು ಸ್ಕಾಟ್ಲೆಂಡ್ ಸ್ವತಂತ್ರಗೊಳಿಸುವ ಪ್ರಯತ್ನವನ್ನು
ಕೈಬಿಡುವ ಸಾಧ್ಯತೆಯೇ ಇಲ್ಲ ಎಂದು ಇದರಿಂದ ವೇದ್ಯವಾಗುತ್ತದೆ.

ಸ್ಕಾಟ್ಲೆಂಡ್ ಸಿಡಿದು ಹೋಗುತ್ತಿರುವುದೇಕೆ?
ಬಹುತೇಕವಾಗಿ ಆರ್ಥಿಕ ಅಸಮಾನತೆಯೇ ಇದಕ್ಕೆಲ್ಲ ಕಾರಣ. ಇಂಗ್ಲೆಂಡ್
ಸರ್ಕಾರದ ಜತೆಗಿನ ಆರ್ಥಿಕ ವ್ಯವಹಾರಗಳ ಸಮನ್ವಯತೆ ಕೊರತೆ, ತೆರಿಗೆ
ಸುಧಾರಣೆಗಳು ಸೇರಿದಂತೆ ಅನೇಕ ಕಾರಣಗಳು ಇದಕ್ಕಿವೆ. ವಿಶೇಷವಾಗಿ ಕೃಷಿ,
ಗಡಿ ನಿಯಂತ್ರಣ ಮತ್ತು ವಲಸೆ, ಶಿಶು ಆರೋಗ್ಯ, ನಾಗರಿಕತ್ವ, ರಕ್ಷಣೆ, ನ್ಯಾಟೋ
ಸದಸ್ಯತ್ವ, ಬೇಹುಗಾರಿಕೆ, ಅಣ್ವಸಉಗಳು, ಆರ್ಥಿಕ ಸ್ಥಿತಿ-ಗತಿ, ಕರೆನ್ಸಿ, ಸರ್ಕಾರದ
ಆದಾಯ ಮತ್ತು ವೆಚ್ಚ, ಇಂಧನ, ಐರೋಪ್ಯ ಒಕ್ಕೂಟದ ಜತೆಗಿನ ಸಂಬಂಧ,
ಐರೋಪ್ಯ ಒಕ್ಕೂಟದಲ್ಲಿ ಇಂಗ್ಲೆಂಡ್‌ನ ಭವಿಷ್ಯ, ಆರೋಗ್ಯ, ಅಂತಾ ರಾಷ್ಟ್ರೀಯ
ಸಂಬಂಧಗಳು... ಹೀಗೆ ಹತ್ತುಹಲವು ಕಾರಣಗಳು ‘ಯೆಸ್ ಸ್ಕಾಟ್ಲೆಂಡ್’ ಕೂಗಿಗೆ
ಕಾರಣವಾಗಿವೆ. ‘ಯೆಸ್ ಸ್ಕಾಟ್ಲೆಂಡ್’ ಎನ್ನುವುದು ಸ್ಕಾಟ್ಲೆಂಡ್ ಸ್ವಾತಂತ್ರ್ಯಕ್ಕೆ
ಹುಟ್ಟಿಕೊಂಡ ಗುಂಪು. ಇದಕ್ಕೆ ವಿರೋಧವಾಗಿ ‘ಬೆಟರ್ ಟುಗೇದರ್’ ಎಂಬ
ಗುಂಪು ಇಂಗ್ಲೆಂಡ್ ಒಕ್ಕೂಟ ಬಲಪಡಿಸಲು ಪ್ರಯತ್ನಿಸುತ್ತಿದೆ.
೨೦೧೪ರ ಸೆಪ್ಟೆಂಬರ್ ೧೮ರಂದು ಸ್ಕಾಟಿಷ್ ಸ್ವಾತಂತ್ರ್ಯ ಜನಮತ ಗಣನೆ
ನಡೆಯಿತು. ಈ ಪ್ರಕ್ರಿಯೆಯಲ್ಲಿ ‘ಯೆಸ್ ಸ್ಕಾಟ್ಲೆಂಡ್’ ಆಂದೋಲನಕ್ಕೆ
ಸೋಲಾಯಿತು. ಜನಮನತ ಗಣನೆಯಲ್ಲಿ ಶೇ.೪೪.೭ರಷ್ಟು ಜನ ಸ್ಕಾಟ್ಲೆಂಡ್
ಬೇಕು ಎಂದರೆ, ಶೇ.೫೫.೩ರಷ್ಟು ಜನ ಬೇಡ ಎಂದು ತಮ್ಮ ಮುದ್ರೆ ಒತ್ತಿದರು.
ಈ ಜನಮತ ಗಣನೆಯಲ್ಲಿ ಒಟ್ಟು ಶೇ.೮೪.೬ರಷ್ಟು ಜನ ಪಾಲ್ಗೊಂಡಿದ್ದರು.
ಬ್ರಿಟನ್ ಮತ್ತು ಸ್ಕಾಟಿಷ್ ಸರ್ಕಾರದ ಒಪ್ಪಂದದಂತೆ ಛಿ ಖ್ಚಟಠಿಠಿಜಿ
ಐ್ಞಛಿಛ್ಞಿಛ್ಞ್ಚಿಛಿ ್ಕಛ್ಛಿಛ್ಟಿಛ್ಞಿಛ್ಠಞ ಆಜ್ಝ್ಝಿ
ಅನ್ನು ಸ್ಕಾಟಿಷ್ ಸಂಸತ್ತು ೨೦೧೩ರ
ನವೆಂಬರ್‌ನಲ್ಲಿ ಕಾಯ್ದೆಯಾಗಿ ಜಾರಿ ಮಾಡಿತ್ತು. ಬಳಿಕ ಜನಮತ ಗಣನೆ
ನಡೆಯಿತು.

ಒಂದು ಕಾಲದಲ್ಲಿ ‘ಸೂರ್ಯ ಮುಳುಗದ ಸಾಮ್ರಾಜ್ಯ’ವಾಗಿದ್ದ ಗ್ರೇಟ್
ಬ್ರಿಟನ್ ೨೧ನೇ ಶತಮಾನದಲ್ಲಿ ಛಿದ್ರವಾಗುವ ಹಾದಿಯಲ್ಲಿ ಸಾಗುತ್ತಿದೆ
ಎಂಬುದಂತೂ ಸತ್ಯ. ಸದ್ಯಕ್ಕೆ ಪ್ರಧಾನಿ ಡೇವಿಡ್ ಕೆಮರಾನ್ ಮುಂದೆ
ಸ್ಕಾಟ್ಲೆಂಡ್ ಜನಮತಗಣನೆ ಮತ್ತು ಐರೋಪ್ಯ ಒಕ್ಕೂಟ ಎಂಬ ಎರಡು
ಬೃಹತ್ ಸಮಸ್ಯೆಗಳಿವೆ. ಇವುಗಳನ್ನು ಕೆಮರಾನ್ ಹೇಗೆ ನಿಭಾಯಿಸುತ್ತಾರೆ
ಎಂಬುದರ ಮೇಲೆಯ ಇಡೀ ಬ್ರಿಟನ್‌ನ ಭವಿಷ್ಯ ನಿರ್ಧಾರವಾಗಲಿದೆ.
ಸ್ಕಾಟ್ಲೆಂಡ್ ಮತ್ತೊಂದು ಜನಮತಗಣನೆಗೆ ವೇದಿಕೆ ಸಿದಟಛಿಪಡಿಸಿಕೊಳ್ಳ
ಲಿದೆಯಾ? ಬ್ರಿಟನ್ ತನ್ನ ಐಕ್ಯತೆಯನ್ನು ಮುಂದುವರಿಸಿಕೊಂಡು
ಹೋಗಲಿದೆಯಾ? ಎಂಬುದನ್ನು ನೋಡಬೇಕಿದ್ದರೆ ಕನಿಷ್ಠ ಇನ್ನು ಒಂದು
ವರ್ಷವಾದರೂ ಕಾಯಲೇಬೇಕು. ಆದರೆ, ಈಗ ದೊರೆತಿರುವ
ಜನಾದೇಶವಂತೂ ಈ ಎಲ್ಲ ಅಂಶಗಳಿಗೆ ಒಂದು ದಿಕ್ಕನ್ನು ಮಾತ್ರ ಸೂಚಿಸಿದೆ.
ಆದರೆ, ಆ ದಿಕ್ಕು ಯಾವುದು ಎಂಬುದು ಮಾತ್ರ ಸದ್ಯಕ್ಕೆ ನಿಗೂಢ.

- ಮಲ್ಲಿಕಾರ್ಜುನ ತಿಪ್ಪಾರ

ಗುರುವಾರ, ಏಪ್ರಿಲ್ 9, 2015

ಇರಾನ್ ಅಣು ಒಪ್ಪಂದ ಕಸರತ್ತು, ಏನಿದರ ಹಕೀಕತ್ತು?

ಇರಾನ್‌ನ ೧೨ ವರ್ಷಗಳ ವನವಾಸ ಅಂತ್ಯವಾಗುವ ಕ್ಷಣಗಳು ಹತ್ತಿರವಾಗುತ್ತಿವೆ.
‘ಅಣು ಬಾಂಬ್’ಗಳನ್ನು ತಯಾರಿಸುತ್ತಿದೆ ಎಂಬ ಗುಮಾನಿಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯ ಹೇರಿದ್ದ ಆರ್ಥಿಕ ದಿಗ್ಬಂಧನ ಹಿಂತೆಗೆಯುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಇದರ ಮೊದಲ ಹಂತವಾಗಿ ಇರಾನ್ ಮತ್ತು ‘ಪಿ೫ ಪ್ಲಸ್ ೧’(ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾ, ಚೀನಾ ಮತ್ತು ಜರ್ಮನಿ) ಜಾಗತಿಕ ಪ್ರಬಲ ರಾಷ್ಟ್ರಗಳ ನಾಯಕರ ನಡುವೆ ಇತ್ತೀಚೆಗೆ ನಡೆದ ‘ಇರಾನ್ ಅಣು ಒಪ್ಪಂದ’ ಮಾತುಕತೆ ಒಂದು ಹಂತಕ್ಕೆ ಬಂದು ನಿಂತಿದೆ. ‘ಇರಾನ್ ತನ್ನ ಅಣು ಚಟುವಟಿಕೆಗಳನ್ನು ಶಾಂತಿ ಉದ್ದೇಶಕ್ಕೆ ಸೀಮಿತಗೊಳಿಸುವುದು ಮತ್ತು ಅಂತಾರಾಷ್ಟ್ರೀಯ ಸಮುದಾಯ ಹೇರಿರುವ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಳ್ಳುವುದು ಈ ಉದ್ದೇಶಿತ ಮಾತುಕತೆಯ ಮುಖ್ಯ ಅಜೆಂಡಾ’. ಅಷ್ಟರಲ್ಲಾಗಲೇ ಈ ಪ್ರಕ್ರಿಯೆಯನ್ನು ‘ಐತಿಹಾಸಿಕ’ ಎಂದು ಅಮೆರಿಕ ಮತ್ತು ಇರಾನ್ ನಾಯಕರು ಬಣ್ಣಿಸಿದ್ದಾರೆ. ಈ ಪ್ರಕ್ರಿಯೆಗೆ ಅಂತಿಮವಾಗಿ, ಸುಸ್ಪಷ್ಟವಾದ ಮೂರ್ತರೂಪ ದೊರೆಯಲು ಜೂನ್ ೩೦ ಗಡವು. ಒಂದಿಷ್ಟು ಕೊರತೆಗಳು ಎರಡೂ ಕಡೆ ಇವೆ. ಆ ಓರೆಕೋರೆಗಳನ್ನು ತುಂಬಿಕೊಂಡು ಅಂತಿಮವಾಗಿ ಅಂಕಿತ ಬಿದ್ದರೆ ೧೯೭೯ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್, ಅಂತಾರಾಷ್ಟ್ರೀಯ ಸಮುದಾಯದ ಜತೆ ಸಾಧಿಸಿದ ಅತಿದೊಡ್ಡ, ಬಹು ಪ್ರಾಮುಖ್ಯವಾದ ಒಪ್ಪಂದಕ್ಕೆ ಸಾಕ್ಷಿಯಾಗಲಿದೆ.
೨೦೦೨ರಲ್ಲಿ ಇರಾನ್‌ನ ವಿಧ್ವಂಸಕ ಅಣು ಚಟುವಟಿಕೆಗಳು ಬಹಿರಂಗವಾಗುತ್ತಿದ್ದಂತೆ ವಿಶ್ವಸಂಸ್ಥೆ ಹಾಗೂ ಐರೋಪ್ಯ ಒಕ್ಕೂಟ ರಾಷ್ಟ್ರಗಳು ದಿಗ್ಬಂಧನವನ್ನು ಮತ್ತಷ್ಟು ವಿಸ್ತರಿಸಿದ್ದವು. ತನ್ನೆಲ್ಲ ಅಣು ಚಟುವಟಿಕೆಗಳು ಶಾಂತಿ ಉದ್ದೇಶಕ್ಕಾಗಿಯೇ ಇವೆ ಎಂದು ಇರಾನ್ ಅಲವತ್ತುಕೊಂಡಿತ್ತು. ಆದರೆ, ಅದನ್ನು ನಿರೂಪಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅಂತಾರಾಷ್ಟ್ರೀಯ ಸಮುದಾಯಕ್ಕೂ ತಾನು ಶಾಂತಿಯುತ ರಾಷ್ಟ್ರ ಎಂಬುದನ್ನು ಇರಾನ್ ಮನವರಿಕೆ ಮಾಡುವ ನಿಟ್ಟಿನಲ್ಲಿ ಯಶ ಕಾಣುತ್ತಿದೆ. ಈ ಪ್ರಯತ್ನದಲ್ಲಿ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಝರೀಫ್ ಅವರ ಕೊಡುಗೆ ಗಣನೀಯ. ಈ ಹಿನ್ನೆಲೆಯಲ್ಲಿ ಅವರು ಮಾತುಕತೆ ಮುಗಿಸಿಕೊಂಡು ಕಳೆದ ಶುಕ್ರವಾರ ಟೆಹ್ರಾನ್‌ನಲ್ಲಿ ಬಂದಿಳಿದಾಗ ಭವ್ಯ ಸ್ವಾಗತವೇ ದೊರೆತಿದೆ. ಇದರಿಂದಲೇ ಅಂದಾಜು ಮಾಡಬಹುದು. ಆರ್ಥಿಕ ದಿಗ್ಬಂಧನದಿಂದಾಗಿ ಇರಾನ್ ಎಂಥ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು ಎಂಬುದನ್ನು. ಇರಾನ್‌ನ ಅಧ್ಯಕ್ಷ ಹಸನ್ ರೌಹಾನಿ ಅವರು ೨೦೧೩ರಲ್ಲಿ ನಡೆದ ಚುನಾವಣೆಯಲ್ಲಿ ಜಗತ್ತಿನ ಇತರೆ ರಾಷ್ಟ್ರಗಳ ಜತೆ ಅಣು ಒಪ್ಪಂದವನ್ನು ಮುಂದು ಮಾಡಿಕೊಂಡು ಮತ ಕೇಳಿದ್ದರು. ಅದಕ್ಕಾಗೇ ಅಲ್ಲಿನ ಜನ ಅವರನ್ನು ಚುನಾಯಿಸಿ–ದ್ದರು. ಇದೀಗ ಅವರು ತಮ್ಮ ಭರವಸೆಯನ್ನು ಈಡೇರಿಸುವ ಹಂತಕ್ಕೆ ಬಂದು ಮುಟ್ಟಿದ್ದಾರೆ. ಅಲ್ಲದೆ, ತಮ್ಮ ದೇಶದ ‘ಮಾತುಕತೆಯ ತಂಡದ ಪ್ರಯತ್ನ’ವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ, ಈ ಒಪ್ಪಂದದ ಬಗ್ಗೆ ಇರಾನ್ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖೋಮೇನಿಯಿಂದ ತಕ್ಷಣದ ಪ್ರಕ್ರಿಯೆ ಹೊರಬಿದ್ದಿಲ್ಲ!
ಇನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕೂಡ ಇದು ತಮ್ಮ ವಿದೇಶಾಂಗ ನೀತಿಗೆ ದೊರೆತ ಯಶಸ್ಸು ಎಂದು ಭಾವಿಸಿದ್ದಾರೆ. ಈ ಯಶಸ್ಸಿನ ಪಾಲನ್ನು ಅವರು ಕಾರ್ಯದರ್ಶಿ ಜಾನ್ ಕೆರ‌್ರಿ ಅವರಿಗೆ ಕೊಡಲೇಬೇಕು. ಇರಾನ್ ಜತೆಗಿನ ‘ಮುಳ್ಳಿನ ಸ್ನೇಹ’ವನ್ನು ನಾಜೂಕಾಗಿ ದೇಶದ ಒಳಗೂ ಮತ್ತು ಹೊರಗೂ ನಿಭಾಯಿಸಿದ್ದಾರೆ. ಈ ಎಲ್ಲದರ ಮಧ್ಯೆಯೂ ಒಬಾಮ, ಇನ್ನೂ ಕಾಂಗ್ರೆಸ್‌ಗೆ ಈ ಒಪ್ಪಂದ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ. ಅದರಲ್ಲಿ ಎಷ್ಟು ಸಫಲರಾಗುತ್ತಾರೋ?
ಇರಾನ್ ಜತೆಗಿನ ಅಂತಾರಾಷ್ಟ್ರೀಯ ಸಮುದಾಯ ಬಾಂಧವ್ಯ ಮರುಸ್ಥಾಪಿಸಿರುವುದನ್ನು ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಸ್ವಾಗತಿಸಿವೆ. ಆದರೆ, ಅಮೆರಿಕದ ಎರಡು ಪ್ರಮುಖ ಸ್ನೇಹಿತ ರಾಷ್ಟ್ರಗಳಾದ ಸೌದಿ ಅರೇಬಿಯಾ ಹಾಗೂ ಇಸ್ರೇಲ್ ಮಾತ್ರ ತೀವ್ರ ವಿರೋಧ ದಾಖಲಿಸಿವೆ. ಇರಾನ್ ಈಗ ಸಿಕ್ಕಿರುವ ಅವಕಾಶವನ್ನು ಸರಿಯಾದ ಹಾಗೂ ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ನಿಗದಿತ ಅವಧಿಯಲ್ಲೇ ಸೌದಿಗೆ ಸೆಡ್ಡು ಹೊಡೆಯುವ ಮಟ್ಟಿಗೆ ಆರ್ಥಿಕವಾಗಿ ಪ್ರಗತಿ ಕಾಣುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದಲೇ ಮಧ್ಯಪ್ರಾಚ್ಯ–ದಲ್ಲಿ ಇರಾನ್ ಆರ್ಥಿಕ
ವಾಗಿ ಬಲಾಢ್ಯ–ವಾಗುವುದನ್ನು ಸೌದಿ ಇಷ್ಟಪಡುವುದಿಲ್ಲ. ಹೀಗಿದ್ದಾಗ್ಯೂ, ಸೌದಿ ರಾಜನನ್ನು ಒಪ್ಪಿಸುವುದು ಅಮೆರಿಕದ ಅಧ್ಯಕ್ಷ ಬರಾಕ್‌ಗೆ ಕಷ್ಟವೇನಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಇನ್ನು ಇಸ್ರೇಲ್‌ಗಂತೂ ಇದು ನುಂಗಲಾರದ ತುತ್ತಾಗಿದೆ. ಆದರೆ, ಇಸ್ರೇಲ್ ಪ್ರಧಾನಿ ನೆತಾನ್ಯುಹು ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ಅಷ್ಟೇ ಅಲ್ಲದೆ, ‘ಇಸ್ರೇಲ್ ಅಸ್ತಿತ್ವ’ವನ್ನು ಇರಾನ್ ಗೌರವಿಸಬೇಕು. ಇದೊಂದು ಗ್ರೇವ್‌ಯಾರ್ಡ್ ಒಪ್ಪಂದ ಎಂದು ಟೀಕಿಸಿದ್ದಾರೆ. ಇದೇ ವೇಳೆ, ಸೋಮವಾರ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಇಸ್ರೇಲ್‌ನ ಆತಂಕವನ್ನು ದೂರ ಮಾಡುವ ಮಾತುಗಳನ್ನಾಡಿದ್ದಾರೆ ಒಬಾಮ.
=
ಈಗ ನಡೆದಿರುವ ಮಾತುಕತೆಯ ಒಟ್ಟು ಫಲಶ್ರುತಿ ಏನೆಂದರೆ, ಇರಾನ್ ತನ್ನೆಲ್ಲ ಅಣು ಚಟುವಟಿಕೆಗಳನ್ನು ಶಾಂತಿ ಉದ್ದೇಶಕ್ಕೆ ಮಾತ್ರ ಬಳಸುವುದು. ಒಟ್ಟು ಅಣು ಘಟಕಗಳ ಪೈಕಿ ಎರಡನ್ನು ಮಾತ್ರ ಸಂಶೋಧನಾ ಉದ್ದೇಶಕ್ಕೆ ಬಳಸುವುದು. ಬೃಹತ್ ರಿಯಾಕ್ಟರ್‌ಗಳನ್ನು ಮರು ವಿನ್ಯಾಸಗೊಳಿಸಿ, ಅಣು ಬಾಂಬ್‌ಗೆ ಬೇಕಾಗುವ ಪ್ಲುಟೋನಿಯಂ ಇಂಧನ ತಯಾರಿಕೆಯ ಸಾಮರ್ಥ್ಯವನ್ನು ನಿಸ್ತೇಜ–ಗೊಳಿ–ಸುವುದು. ಅಲ್ಲದೇ ಯುರೇನಿಯಂ ಸಂಸ್ಕರಣೆಯನ್ನು ೧೦,೦೦೦ ಕೆಜಿಯಿಂದ ೩೦೦ ಕೆಜಿಗೆ ಸೀಮಿತಗೊಳಿಸವುದು. ಹೀಗೆ ಮಾಡಿದಾಗ ಇರಾನ್ ಅಣುಬಾಂಬ್ ತಯಾರಿಸಲು ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ, ಅಂತಾರಾಷ್ಟ್ರೀಯ ಸಮುದಾಯವನ್ನು ಕತ್ತಲ–ಲ್ಲಿಟ್ಟು ತಯಾರಿಕೆಗೆ ಮುಂದಾದರೆ, ಅದು ಒಂದು ವರ್ಷದೊಳಗೆ ಹೊರಜಗತ್ತಿಗೆ ಗೊತ್ತೇ ಆಗುತ್ತದೆ. ಇದಕ್ಕೆ ಪ್ರತಿಯಾಗಿ ಅಂತಾ–ರಾಷ್ಟ್ರೀಯ ಸಮುದಾಯ ಎಲ್ಲ ರೀತಿಯ ಆರ್ಥಿಕ ದಿಗ್ಬಂಧನವನ್ನು ಹಿಂತೆಗೆದುಕೊಂಡು ಮುಕ್ತ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡ–ಬೇಕು. ಇದಲ್ಲದೆ, ಆ ದೇಶ ಆರ್ಥಿಕ ಸ್ಥಿತಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು. ಇವೆಲ್ಲವೂ ಇನ್ನೂ ತೀರಾ ಪ್ರಾಥಮಿಕ ಹಂತದಲ್ಲಿವೆ. ಇದೆಲ್ಲದಕ್ಕೂ ಒಂದು ಸ್ಪಷ್ಟವಾದ ಕರಡು ರೂಪಿಸಲು ಜೂನ್ ೩೦ ಕೊನೆಯ ದಿನ. ಆ ಹೊತ್ತಿಗೆ, ಈಗ ಎದುರಾಗಿರುವ ಸೌದಿ ಅರೇಬಿಯಾ ಹಾಗೂ ಇಸ್ರೇಲ್‌ನ ಆತಂಕಗಳನ್ನು ಶಮನ ಮಾಡುವಂಥ ಒಂದಿಷ್ಟು ಉಪಕ್ರಮಗಳು ಕೂಡ ಅಂತಿಮ ಒಪ್ಪಂದದಲ್ಲಿ ಸೇರಿಕೊಳ್ಳುವುದನ್ನು ಅಲ್ಲಗಳೆಯಲಾಗದು.
=
ಇರಾನ್ ಜತೆಗಿನ ಉದ್ದೇಶಿತ ಅಣು ಒಪ್ಪಂದದಿಂದ ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳು ಖುಷಿಪಟ್ಟಿರಲಿಕ್ಕೂ ಸಾಕು. ಇರಾನ್ ಜಗತ್ತಿನ ಪ್ರಮುಖ ಕಚ್ಚಾ ತೈಲ ರಫ್ತು ಮಾಡುವ ರಾಷ್ಟ್ರ. ಇತ್ತೀಚಿನವರೆಗೂ ದಿಗ್ಬಂಧನ ಹೊರತಾಗಿಯೂ ಇರಾನ್ ಸ್ವಲ್ಪಮಟ್ಟಿಗೆ ಕಚ್ಚಾ ತೈಲ ರಫ್ತು ಮಾಡುತ್ತಿತ್ತು. ಅಲ್ಲದೆ, ಭಾರತವೇ ಅತಿ ದೊಡ್ಡ ಆಮದು ರಾಷ್ಟ್ರವಾಗಿತ್ತು ಇರಾನ್‌ಗೆ. ಇನ್ನು ದಿಗ್ಬಂಧನ ಇಲ್ಲ ಎಂದಾದರೆ ನೀವೇ ಊಹಿಸಿ! ಭಾರತದಲ್ಲಿ ಇನ್ನೊಂದು ವರ್ಷದಲ್ಲಿ ತೈಲೋತ್ಪನ್ನಗಳ ಬೆಲೆ ಯಾವ ಮಟ್ಟಕ್ಕೆ ಕೆಳಕ್ಕಿಳಿಯಬಹುದು ಎಂಬುದನ್ನು ಅಂದಾಜಿಸಿ.
ಹಾಗೆ ನೋಡಿದರೆ, ಇರಾನ್ ಯಾವತ್ತಿದ್ದರೂ ಭಾರತದ ‘ಸಹಜ ಸ್ನೇಹ’ ರಾಷ್ಟ್ರ. ೧೯೪೭ಕ್ಕಿಂತ ಮುಂಚೆ ಇರಾನ್ ಭಾರತದ ಗಡಿಯನ್ನು ಹಂಚಿಕೊಂಡಿತ್ತು. ಈ ಎರಡೂ ರಾಷ್ಟ್ರಗಳ ಬಾಂಧವ್ಯದ ಬೇರು ಹುಡುಕುತ್ತಾ ಹೊರಟರೆ ನಿಮಗೆ ನವಶೀಲಾಯುಗದವರೆಗೂ ಹಿಂದೆ ಸಾಗಬೇಕು. ಹಾಗಾಗಿಯೇ ಉತ್ತರ ಭಾರತ ಹಾಗೂ ಇರಾನ್‌ನ ಸಂಸ್ಕೃತಿ, ಜನಾಂಗ, ಭಾಷಾ ಲಕ್ಷಣಗಳಲ್ಲಿ ಇಂದಿಗೂ ಸಾಮ್ಯತೆ ಕಂಡು ಬರುತ್ತದೆ. ಇದು ಹಳೆ ಕಾಲದ ಮಾತಾಯಿತು ಬಿಡಿ. ಆಧುನಿಕ ದಿನಮಾನಗಳಲ್ಲಿ ಎಂದಿಗೂ ಇರಾನ್ ಭಾರತದ ಜತೆಗೆ ಇದೆ. ಸಂಕಷ್ಟದ ದಿನಗಳಲ್ಲಿ ಇರಾನ್ ಕೈ ಬಿಟ್ಟಿಲ್ಲ. ಅನೇಕ ಬಾರಿ ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಭಾರತದ ಪರವಾಗಿಯೇ ತನ್ನ ಮತ ಚಲಾಯಿಸಿದೆ. ಇಷ್ಟೆಲ್ಲಾ ವಿವರಣೆ ಏಕೆಂದರೆ, ಇರಾನ್ ಅಂತಾರಾಷ್ಟ್ರೀಯ ಸಮುದಾಯ ಜತೆ ಸಾಧಿಸುತ್ತಿರುವ ಸಮನ್ವಯತೆಯಿಂದ ಅಗಾಧ ಲಾಭ ಭಾರತದ ಪರವಾಗಿಯೇ ಇರಲಿದೆ!
ಈಗಾಗಲೇ ಸೌದಿ ಅರೇಬಿಯಾ, ಅಮೆರಿಕ ಹಾಗೂ ರಷ್ಯಾಗಳ ನಡುವಿನ ರಾಜಕೀಯ ತಿಕ್ಕಾಟಕ್ಕಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಊಹೆಗೆ ಮೀರಿ ಪಾತಾಳ ಕಂಡಿದೆ. ಇದರ ಪರಿಣಾಮ ಭಾರತದಲ್ಲೀಗ ವಾರ ವಾರಕ್ಕೂ ತೈಲ ಬೆಲೆ ಪೈಸೆ ಲೆಕ್ಕದಲ್ಲಿ ಕಡಿಮೆಯಾಗುತ್ತಿದೆ. ಇನ್ನು ಇರಾನ್‌ನಿಂದ ಹೇರಳವಾಗಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವಂತಾದರೆ, ಪೆಟ್ರೋಲ್, ಡಿಸೇಲ್ ಬೆಲೆ ಇನ್ನೂ ಯಾವ ಹಂತಕ್ಕೆ ಇಳಿಯಬಹುದು ಎಂದು ಯೋಚಿಸಿ. ಹಾಗೇನಾದರೂ ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆ–ಯಲ್ಲಿ ಭಾರತ ಈಗ ಪಡೆದುಕೊಳ್ಳುತ್ತಿರುವ ಪ್ರತಿ ಬ್ಯಾರೆಲ್‌ಗೆ ಇನ್ನೂ ೨ ಡಾಲರ್ ಕಡಿಮೆ ಹಣ ತೆತ್ತು ಖರೀದಿಸಬಹುದು.
ತೈಲ ಎಂಬ ಏಕೈಕ ಅಂಶವನ್ನು ಹೊರಗಿಟ್ಟು ನೋಡುವುದಾದರೆ, ಸಂಸ್ಕರಿತ ಡಿಸೇಲ್‌ನೊಂದಿಗೆ ಭಾರತದ ಜವಳಿ, ಬಾಸ್ಮತಿ ಅಕ್ಕಿ ಹೇರಳವಾಗಿ ರಫ್ತು ಮಾಡಬಹುದು. ಭಾರತೀಯ ಔಷಧ, ಕಾರು, ಮಾರ್ಜಕ ತಯಾರಿಕೆ ಕಂಪನಿಗಳು ದಾಂಗುಡಿ ಇಡಬಹುದು. ಇದೆಲ್ಲದರ ಒಟ್ಟಾರೆ ಪರಿಣಾಮ ಇರಾನ್ ಹಾಗೂ ಭಾರತದ ಮೇಲೆ ಸಕಾರಾತ್ಮಕವಾಗಿ ಬೀರಲಿದೆ.
ಇದು ಭಾರತದ ಮಟ್ಟಿಗಿನ ಲೆಕ್ಕಾಚಾರವಾದರೆ, ಅಂತಾರಾಷ್ಟ್ರೀಯ–ವಾಗಿಯೂ ವ್ಯಾಪಾರಿಕ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿವೆ. ಬಹುತೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಚೇತರಿಕೆ ದೊರೆಯಲಿದೆ. ಈ ಕುರಿತು ಈಗಾಗಲೇ ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಮಾರ್ಕ್ ಕಾರ್ನಿ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ‘ಇರಾನ್ ಜತೆಗಿನ ಉದ್ದೇಶಿತ ಒಪ್ಪಂದದಿಂದಾಗಿ ತೈಲ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದ್ದು, ಇದು ಇಂಗ್ಲೆಂಡ್ ಹಾಗೂ ಜಾಗತಿಕ ಆರ್ಥಿಕತೆಗೆ ಹೊಸ ಭರವಸೆದಾಯಕ ಹಾದಿಯನ್ನು ತೋರಿಸಲಿದೆ’ ಎಂದಿದ್ದಾರೆ. ಈ ಮಾತು ನಿಜವಾಗಬೇಕಿದ್ದರೆ ಇನ್ನೂ ಹೆಚ್ಚು ಕಡಿಮೆ ಒಂದು ವರ್ಷ ಕಾಯಬೇಕು. ಆದರೆ, ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಏನಿಲ್ಲ. ರಾಜಕೀಯ ಕಾರಣಕ್ಕಾಗಿ ಈಗ ಇಳಿಕೆಯಾಗಿರುವ ತೈಲ ಬೆಲೆ ಯಾವುದೇ ಸಮಯದಲ್ಲಿ ಅದೇ ಕಾರಣಕ್ಕಾಗಿ ಹೆಚ್ಚಳವಾಗುವ ಎಲ್ಲ ಅಪಾಯಗಳಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕಚ್ಚಾತೈಲದ ಗಣಿಯಾಗಿರುವ ಇರಾನ್ ತನ್ನ ಒಡಲಲ್ಲಿರುವ ಎಲ್ಲ ಎಣ್ಣೆಯನ್ನು ಮಾರುಕಟ್ಟೆಗೆ ಹರಿದು ಬಿಟ್ಟರೆ ಸಹಜವಾಗಿಯೇ ಒಂದಿಷ್ಟು ಚೇತರಿಕೆ ಕಂಡು ಕೊಳ್ಳಲು ಸಾಧ್ಯ. ಇದರಿಂದ ಭಾರತ ಕೂಡ ಹೊರತಾಗಿಲ್ಲ.

- ಮಲ್ಲಿಕಾರ್ಜುನ ತಿಪ್ಪಾರ


ಬುಧವಾರ, ಮಾರ್ಚ್ 25, 2015

ಮುಕ್ತ ಸ್ವಾತಂತ್ರ್ಯಕ್ಕೊದಗುತ್ತಿರುವ ಅಂತ್ಯ, ಅವಿಜಿತ್ ರಾಯ್ ಹತ್ಯೆ

ಇತ್ತೀಚೆಗೆ ಢಾಕಾದ ನಡುರಸ್ತೆಯಲ್ಲಿ ಕಗ್ಗೊಲೆಯಾದ, ಬಾಂಗ್ಲಾ ಮೂಲದ ಅಮೆರಿಕ ಬರಹಗಾರ ಅವಿಜಿತ್ ರಾಯ್ ಎಲ್ಲದರಲ್ಲೂ ‘ಮುಕ್ತ ಚಿಂತನೆ’ಯ ಪ್ರತಿಪಾದಕ. ಕೊಲೆ ಬೆದರಿಕೆ ಎದುರಿಸುತ್ತಿದ್ದ ರಾಯ್ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ‘ಮುಕ್ತ’ವಾಗಿ ತಮ್ಮ ವಿಚಾರಗಳನ್ನು ಪ್ರಚರುಪಡಿಸುತ್ತಿದ್ದರು. ಸ್ವತಃ ನಾಸ್ತಿಕರಾಗಿದ್ದ ರಾಯ್ ತಮ್ಮ ‘ಮುಕ್ತ-ಮೋನ’(ಫ್ರಿ ಮೈಂಡ್) ಬ್ಲಾಗ್ ಮೂಲಕ ಬಾಂಗ್ಲಾ ಯುವ ಜನತೆಯಲ್ಲಿ ವೈಚಾರಿಕತೆ, ಜಾತ್ಯತೀತ, ಎಲ್ಲವನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುವ ಮನೋಭಾವನೆಯನ್ನು ಬಿತ್ತುತ್ತಿದ್ದರು. ಈ ಬ್ಲಾಗ್‌ನಲ್ಲಿ ಕೇವಲ ಬಾಂಗ್ಲಾದೇಶದ ವಿದ್ಯಮಾನಗಳು ಮಾತ್ರವಲ್ಲದೆ ದಕ್ಷಿಣ ಏಷ್ಯಾದ ಎಲ್ಲ ಬೆಳವಣಿಗೆಗಳು ಚರ್ಚೆಯಾಗುತ್ತಿದ್ದವು. ಅಲ್ಲದೆ, ಮುಕ್ತ ಚಿಂತನೆಗೆ ವೇದಿಕೆ ಕಲ್ಪಿಸಿಕೊಟ್ಟಿತ್ತು.
ಅಮೆರಿಕದ ಪ್ರಜೆಯಾಗಿದ್ದುಕೊಂಡು ತಮ್ಮ ತಾಯ್ನಾಡಿನ ಆಗು ಹೋಗುಗಳ ಬಗ್ಗೆ, ವಿಪರೀತವಾಗಿ ಬೆಳೆಯುತ್ತಿರುವ ಇಸ್ಲಾಮ್ ಮೂಲಭೂತವಾದತನದ ಬಗ್ಗೆ, ಧಾರ್ಮಿಕ ಅಸಹಿಷ್ಣು ಬಗ್ಗೆ, ಅವಕಾಶವಾದಿ ರಾಜಕಾರಣದ ಬಗ್ಗೆ ತುಂಬಾ ಮೊನಚಾಗಿ ತಮ್ಮ ಬ್ಲಾಗ್ ಹಾಗೂ ಅಂತಾರಾಷ್ಟ್ರೀಯ ನಾನಾ ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸುತ್ತಿದ್ದರು ರಾಯ್. ಎಲ್ಲಕ್ಕಿಂತ ಹೆಚ್ಚಾಗಿ ಅವರ ಇತ್ತೀಚಿನ ಎರಡು ಕೃತಿಗಳಾದ ಒಬಿಶೊಹಶೇರ್ ದೊರ್ಶೂನ್(ದಿ ಫಿಲಾಸಫಿ ಆಫ್ ಡಿಸ್‌ಬಿಲಿಫ್), ಬಿಸ್ವಾಶೇರ್ ವೈರಸ್(ದಿ ವೈರಸ್ ಆಫ್ ಫೇಥ್) ಬಾಂಗ್ಲಾದೇಶದಲ್ಲಿ ಸಂಚಲವನ್ನೇ ಸೃಷ್ಟಿಸಿದ್ದವು. ಅಲ್ಲದೇ ಇದರಿಂದಾಗಿ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೊಲೆ ಬೆದರಿಕೆಯನ್ನೂ ಎದುರಿಸಬೇಕಾಯಿತು. ರಾಯ್‌ಗೆ ಕಟ್ಟರ್‌ವಾದಿಯೊಬ್ಬ ಫೇಸ್‌ಬುಕ್‌ನಲ್ಲಿ ‘ಅವಿಜಿತ್ ರಾಯ್ ಕೊಲೆಯಾಗುವುದು ಖಚಿತ. ಆತ ಅಮೆರಿಕದಲ್ಲಿದ್ದಾನೆ. ಅದಕ್ಕೇ ಬದುಕಿದ್ದಾನೆ. ಬಾಂಗ್ಲಾಕ್ಕೆ ಬಂದರೆ ಆತ ಖಂಡಿತ ಕೊಲೆಯಾಗುತ್ತಾನೆ’ ಎಂದು ಬರೆದುಕೊಂಡಿದ್ದ. ಆದರೆ, ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಜಾಯಮಾನ ರಾಯ್‌ದ್ದಾಗಿರಲಿಲ್ಲ. ಅಂದ ಹಾಗೆ, ಅವಿಜಿತ್ ರಾಯ್ ಹಿಂದೂ. ಅವರ ತಂದೆ ಅಜೋಯ್ ರಾಯ್. ಢಾಕಾ ವಿವಿಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರು. ಅವಿಜಿತ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರು.
ರಾಯ್ ವ್ಯಕ್ತಿತ್ವ ಎಂಥದಿತ್ತು ಎಂಬುದನ್ನು ತಿಳಿದುಕೊಳ್ಳಲು ಅವರ ಇತ್ತೀಚಿನ ‘ದಿ ವೈರಸ್ ಆಫ್ ಫೇಥ್’ ಪುಸ್ತಕದಲ್ಲಿ ಬರೆದುಕೊಂಡಿದ್ದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ‘ನಾವು ಮುಕ್ತವಾಗಿಯೇ ನಮ್ಮ ನಾಸ್ತಿಕತೆಯನ್ನು ಸಾರುತ್ತಿದ್ದೇವೆ. ಬಹುಶಃ ಇದು ಕೆಲವೊಂದಿಷ್ಟು ಉಗ್ರ ಪ್ರತಿಕ್ರಿಯೆಗೂ ಕಾರಣವಾಗಬಹುದು. ಆದರೆ, ಅದಕ್ಕಾಗಿ ನಾವು ಹೆದರಲಾರೆವು. ಭಾರತೀಯ ಉಪಖಂಡಕ್ಕೇ ವಿಶಿಷ್ಟವಾಗಿರುವ ಬೆಂಗಾಲಿ ಜಾತ್ಯತೀತ ಸಂಪ್ರದಾಯದ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ’. ಅಂದರೆ, ರಾಯ್ ಹಾಗೂ ಆತನ ಸಂಗಡಿಗರಲ್ಲಿ ಸ್ಪಷ್ಟವಾದ ಮತ್ತು ನಿಖರವಾದ ಗುರಿಯಿತ್ತು. ಬಾಂಗ್ಲಾದೇಶ ಇಂದು ಯಾವ ದಿಶೆಯಲ್ಲಿ ಸಾಗುತ್ತಿದೆಯೋ ಅದಕ್ಕೆ ತದ್ವಿರುದ್ಧವಾಗಿ ಅವರ ಆಲೋಚನೆಗಳು, ಕೃತಿಗಳಿದ್ದವು. ಹಾಗೆ ನೋಡಿದರೆ, ಪಶ್ಚಿಮ ಪಾಕಿಸ್ತಾನದಿಂದ ಬಾಂಗ್ಲಾದೇಶ ಸ್ವತಂತ್ರವಾದ ದೇಶವಾಗಿದ್ದು ಇದೇ ಕಾರಣಕ್ಕೆ. ತಮ್ಮ ತಾಯ್ನುಡಿಯಾದ ಬೆಂಗಾಲಿ ಮೇಲೆ ಪಶ್ಚಿಮ ಪಾಕಿಸ್ತಾನ ಉರ್ದು ಹೇರಲು ಹೊರಟಾಗ ಕ್ರಾಂತಿಯೇ ಸಂಭವಿಸಿತು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಅಂದು ಯಾವ ಕಾರಣಕ್ಕೆ ಕ್ರಾಂತಿ ಸಂಭವಿಸಿತ್ತೋ ಇಂದು ಅದೇ ತತ್ವ ಅಲ್ಲಿಲ್ಲ. ಆ ಜಾಗದಲ್ಲಿ ಇಸ್ಲಾಮ್ ಮೂಲಭೂತವಾದ ಅಟ್ಟಹಾಸಗೈಯುತ್ತಿದೆ. ಅಲೆಗಳ ವಿರುದ್ಧ ಈಜುವ ಪ್ರಯತ್ನ ಮಾಡುವ ರಾಯ್‌ರಂಥ ವ್ಯಕ್ತಿಗಳ ಹತ್ಯೆ ನಡೆಯುತ್ತಲೇ ಇರುತ್ತವೆ.
್ಝ
೨೦೧೫ ಫೆ.೨೬ರಂದು ಅವಿಜಿತ್ ರಾಯ್ ತಮ್ಮ ಪತ್ನಿ ರಫಿದಾ ಅಹ್ಮದ್ ಜತೆಗೂಡಿ ಢಾಕಾದಲ್ಲಿ ಆಯೋಜಿಸಲಾಗಿದ್ದ ಎಕುಶೇ ಪುಸ್ತಕ ಮೇಳಕ್ಕೆ ತೆರಳಿದ್ದರು. ಅಂದು ಸಂಜೆ ಮೇಳದಿಂದ ವಾಪಸ್ ತಮ್ಮ ಮನೆಗೆ ಸೈಕಲ್ ರಿಕ್ಷಾದಲ್ಲಿ ಬರುತ್ತಿದ್ದರು. ಢಾಕಾ ವಿವಿಯ ಟೀಚರ್ ಸ್ಟೂಡೆಂಟ್ ಸೆಂಟರ್ ಬಳಿ ಎದುರಾದ ಯಮದೂತರು, ದಂಪತಿಯನ್ನು ರಿಕ್ಷಾದಿಂದ ಎಳೆದು ರಸ್ತೆ ಮೇಲೆ ಎಸೆದರು. ಬಳಿಕ ನೋಡ ನೋಡುತ್ತಿದ್ದಂತೆ ತಮ್ಮಲ್ಲಿದ್ದ ಮಚ್ಚುಗಳಿಂದ ಮನ ಬಂದಂತೆ ಕತ್ತರಿಸಲಾರಂಭಿಸಿದರು! ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ರಾಯ್ ತಲೆಗೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರವನ್ನು ನುಗ್ಗಿಸಿದ್ದರು. ಜತೆಯಲ್ಲಿದ್ದ ಪತ್ನಿ ರಫಿದಾ ಅವರನ್ನೂ ದುಷ್ಟರು ಬಿಡಲಿಲ್ಲ. ಅವರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿದರು. ಇಷ್ಟೆಲ್ಲ ನಡೆಯುತ್ತಿದ್ದರೂ ಅಲ್ಲಿದ್ದ ಜನರು ಮಾತ್ರ ಸಮನೇ ನೋಡುತ್ತ ನಿಂತಿದ್ದರು ಎಂದರೆ ನಂಬಲೇಬೇಕು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಾಯ್ ಮತ್ತು ಅವರ ಪತ್ನಿ ರಫಿದಾ ಅವರನ್ನು ಢಾಕಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗೆ ರಾಯ್ ಪ್ರಾಣಪಕ್ಷಿ ಹಾರಿ ಹೋಗಿತ್ತು. ತೀವ್ರ ಹಲ್ಲೆಗೊಳಗಾದ ಪತ್ನಿ ರಫಿದಾ ಮಾತ್ರ ಬದುಕುಳಿದರು.
ರಾಯ್ ಕಗ್ಗೊಲೆ ಸುದ್ದಿ ಗೊತ್ತಾಗುತ್ತಿದ್ದಂತೆ ರಾಯ್ ಅವರನ್ನು ಪ್ರೀತಿಸುವವರು, ವಿದ್ಯಾರ್ಥಿಗಳು, ಬ್ಲಾಗರ್ ಢಾಕಾ ವಿಶ್ವವಿದ್ಯಾಲಯದತ್ತ ಧಾವಿಸಿ, ಕೊಲೆಗಾರರನ್ನು ಬಂಧಿಸುವಂತೆ ಒತ್ತಾಯಿಸಿದರು. ಏತನ್ಮಧ್ಯೆ, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ‘ಚಾರ್ಲಿ ಹೆಬ್ಡೋ’ ದಾಳಿಗೆ ಸಮೀಕರಿಸಿ ವರದಿಗಳು ಬರಲಾರಂಭಿಸಿದವು. ರಾಯ್ ಕಗ್ಗೊಲೆ ದೆಸೆಯಿಂದ ಅಂತಾರಾಷ್ಟ್ರೀಯ ಮಾಧ್ಯಮ, ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ಬಾಂಗ್ಲಾದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹರಣವಾಗುತ್ತಿರುವ ಬಗ್ಗೆ ಕೂಗಲಾರಂಭಿಸದವು.
್ಝ
ರಾಯ್‌ನೊಬ್ಬನದ್ದೇ ಹತ್ಯೆಯೇ?
ಈ ವರೆಗೂ ರಾಯ್ ಮಾತ್ರ ಉಲ್ಬಣಗೊಳ್ಳುತ್ತಿರುವ ಉಗ್ರವಾದ, ಮೂಲಭೂತವಾದಕ್ಕೆ ಬಲಿಯಾಗಿದ್ದಾರಾ? ಖಂಡಿತ ಇಲ್ಲ. ಈ ಬಗ್ಗೆ ‘ಓಪನ್ ಡೆಮಾಕ್ರಸಿ’ ಜಾಲತಾಣಕ್ಕೆ ಮಾಹಿನ್ ಖಾನ್ ಬರೆದ ಲೇಖನ ಇನ್ನಷ್ಟು ಬೆಳಕು ಚೆಲ್ಲುತ್ತದೆ. ರಾಜಕೀಯ ಕಾರಣಕ್ಕೂ ಅನೇಕ ಹತ್ಯೆಗಳೂ ಬಾಂಗ್ಲಾದಲ್ಲಾಗುತ್ತಿವೆ. ೨೦೧೪ರಲ್ಲಿ ಅವಾಮಿ ಲೀಗ್ ಅಧಿಕಾರಕ್ಕೆ ಬಂದ ಮೇಲೆ ಇಂಥ ಕೊಲೆಗಳು, ಹಲ್ಲೆಗಳು ಸಾಕಷ್ಟು ನಡೆದಿವೆ. ನಿತ್ಯ ಪ್ರತಿಭಟನೆಗಳು, ಹರತಾಳಗಳು ಬಾಂಗ್ಲಾದೇಶವನ್ನು ಸ್ತಬ್ಧಗೊಳಿಸಿವೆ. ತೀರಾ ಅಲ್ಪ ಅವಧಿಯಲ್ಲೇ ಸರ್ಕಾರ ಕನಿಷ್ಠ ೨೦೦೦ ಜನರನ್ನು ಬಂಧಿಸಿದೆ. ಅವರಲ್ಲಿ ಬಹುತೇಕರು ಪ್ರತಿಪಕ್ಷದ ಕಾರ್ಯಕರ್ತರು. ಬಾಲಕ-ಬಾಲಕಿಯರೆನ್ನದೇ ಎಲ್ಲರನ್ನೂ ಬಂಧಿಸಲಾಗುತ್ತಿದೆ, ಹಿಂಸಿಸಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂದರೆ, ಪ್ರತಿಪಕ್ಷದ ನಾಯಕರೊಬ್ಬರ ೧೫ ವರ್ಷದ ಪುತ್ರ ರಿಫ್ತಾ ಅಬ್ದುಲ್ ಖಾನ್‌ನನ್ನು ಬಂಧಿಸಿ, ಅತ್ಯಂತ ಕ್ರೂರವಾಗಿ ಹಿಂಸಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ೫೪ ಜನರನ್ನು ಕೊಲೆ ಮಾಡಲಾಗಿದೆ. ಇವರ ಪೈಕಿ ನಾಲ್ವರ ಶರೀರದಲ್ಲಂತೂ ೬೨ ಬುಲೆಟ್‌ಗಳು ಪತ್ತೆಯಾಗಿವೆ. ಇದೆಲ್ಲ ಏನು ತೋರಿಸುತ್ತದೆ ಎಂದು ಪ್ರಶ್ನಿಸುತ್ತಾರೆ ಮಾಹಿನ್ ಖಾನ್. ರಾಯ್ ಕೊಲೆಯಾದ ತಕ್ಷಣ ಅಂತಾರಾಷ್ಟ್ರೀಯ ಮಾಧ್ಯಮಗಳು ಎಚ್ಚೆತ್ತುಕೊಂಡಂತೆ ಕಾಣಿಸುತ್ತವೆ. ಆದರೆ, ಇಂಥ ಅದೆಷ್ಟೋ ಹೆಣಗಳು ಇಲ್ಲಿ ಉರುಳುತ್ತಿವೆ. ಅವುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂಬುದು ಅವರ ಒಟ್ಟು ಅಭಿಪ್ರಾಯ.
ಮೂಲಭೂತವಾದಕ್ಕೆ ರಾಯ್ ಮಾತ್ರ ಹುತಾತ್ಮನಾಗಿಲ್ಲ. ಇದಕ್ಕೂ ಮೊದಲು ಇದೇ ವ್ಯಕ್ತಿತ್ವದ, ಮುಕ್ತ ಚಿಂತನೆಯನ್ನು ಪ್ರತಿಪಾದಿಸುತ್ತಿದ್ದ ಅಂದರೆ, ೨೦೧೨ರಲ್ಲಿ ಬ್ಲಾಗರ್‌ಗಳಾದ ಸಾಗರ್ ಸರೋವರ್ ಮತ್ತು ಮೆಹೆರ್ರುನ್ ರುನಿ ಜೋಡಿಯನ್ನು ಇದೇ ರೀತಿ ಕೊಲ್ಲಲಾಗಿತ್ತು. ೨೦೧೩ರಲ್ಲಿ ಮತ್ತೊಬ್ಬ ಬ್ಲಾಗರ್ ರಾಜಿಬ್ ಹೈದರ್, ಆಸೀಫ್ ಮೊಹಿದ್ದೀನ್, ಪ್ರೊ.ಷಫಿಉಲ್ ಇಸ್ಲಾಮ್ ಕೂಡಾ ಇಸ್ಲಾಮ್ ಮೂಲಭೂತವಾದಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇನ್ನೂ ಕೆಲವು ಬ್ಲಾಗರ್‌ಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಒಂದೇ ಒಂದು ವ್ಯತ್ಯಾಸವೆಂದರೆ, ಕೆಲವು ಹತ್ಯೆಗಳು ಮಾಧ್ಯಮಗಳಲ್ಲಿ ಒಂದಿಷ್ಟು ಸ್ಥಾನ ಪಡೆದು ಸಂಚಲನ ಸೃಷ್ಟಿಸಿವೆ. ಇನ್ನೊಂದಿಷ್ಟು ಹತ್ಯೆಗಳು ಯಾರ ಕಣ್ಣಿಗೂ ಬೀಳದೆ ಮುಗಿದು ಹೋಗುತ್ತಿವೆ.
್ಝ
ರಾಯ್ ಹತ್ಯೆಯಿಂದಲೂ ಭಾರತಕ್ಕೂ ಪಾಠವಿದೆ. ನಮ್ಮಲ್ಲೂ ಒಂದಿಷ್ಟು ಅಸಹಿಷ್ಣು ಮನಸ್ಸುಗಳು ಇಂಥ ಘಟನೆಗಳಿಗೆ ಕಾರಣವಾಗುತ್ತಿವೆ. ಮಹಾರಾಷ್ಟ್ರದ ವಿಚಾರವಾದಿ ಗೋವಿಂದ್ ಪಣೇಸರ್, ನರೇಂದ್ರ ದಾಬೋಲ್ಕರ್ ಸೇರಿದಂತೆ ಸಾಮಾಜಿಕ, ಆರ್‌ಟಿಐ ಕಾರ್ಯಕರ್ತರು ದುಷ್ಟರ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದಾರೆ. ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ಭಿನ್ನಾಭಿಪ್ರಾಯಕ್ಕೂ, ಭಿನ್ನ ಸಿದ್ಧಾಂತಕ್ಕೂ ತನ್ನದೇ ಆದ ಮಹತ್ವವಿದೆ. ಆದರೆ, ಎಲ್ಲವನ್ನೂ ಏಕೀಕೃತ ಸೈದ್ಧಾಂತಿಕ ನೆಲೆಯಲ್ಲಿ ನೋಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಪ್ರಕ್ರಿಯೆ ಹೀಗೆಯೇ ಮುಂದುವರಿದರೆ, ಬಹು ಸಾಂಸ್ಕೃತಿಕ, ವೈವಿಧ್ಯದ ಬುನಾದಿಯಲ್ಲೇ ಎದ್ದು ನಿಂತಿರುವ ಭಾರತದ ಕಟ್ಟಡವೂ ಅಲುಗಾಡುವುದರಲ್ಲಿ ಅನುಮಾನವೇ ಇಲ್ಲ.

ಮಲ್ಲಿಕಾರ್ಜುನ ತಿಪ್ಪಾರ
(ಕನ್ನಡಪ್ರಭ-24-3-2015)

ಶುಕ್ರವಾರ, ಮಾರ್ಚ್ 6, 2015

ಭೂಸ್ವಾಧೀನ: ‘ಪರಿವಾರ’ದ ವಿರೋಧ ಮುಚ್ಚಿಟ್ಟು ಕಾಂಗ್ರೆಸ್ ದೂಷಣೆ ಏಕೆ?

ಒಪ್ಪಿಕೊಳ್ಳೋಣ. ದೇಶದ ಅಭಿವೃದಿಟಛಿಗೆ ಕೈಗಾರಿಕೆಗಳು ಬೇಕು. ಲೆಕ್ಕವಿಲ್ಲ ದಷ್ಟು ಅವಕಾಶ ಸೃಷ್ಟಿಯಾಗುವ ದಿನಮಾನ ಗಳಲ್ಲಿ ನಾವು ಬದುಕುತ್ತಿದ್ದೇವೆ. ಒಂಚೂರು ನಿರ್ಲಕ್ಷ್ಯ ವಹಿಸಿದರೂ ಹಿಂದೆ ಬೀಳುತ್ತೇವೆ. ಹಾಗೆಂದ ಮಾತ್ರಕ್ಕೆ, ಕೃಷಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅದನ್ನೇ ನಂಬಿ ಬದುಕುತ್ತಿರುವ ಕೋಟ್ಯಂತರ ರೈತರ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳದೇ ಹೋದರೆ ಅದು ಕೂಡ ವ್ಯರ್ಥ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ಹವಣಿಸುತ್ತಿರುವ ಭೂ ಸ್ವಾಧೀನ ಸುಗ್ರೀವಾಜ್ಞೆ ಮೇಲ್ನೋಟಕ್ಕೆ ರೈತ ಪರ, ಅಭಿವೃದಿಟಛಿ ಪರ ಕಂಡರೂ ಆಂತರ್ಯದಲ್ಲಿ ಬೇರೆಯದ್ದೇ ರೈತರ ಕೈ ಕಚ್ಚುವ ಆಯಾಮಗಳಿವೆ. ಹಾಗಾಗಿಯೇ ದೇಶದ ಎಲ್ಲ ರೈತ ವರ್ಗ, ಸಂಘಟನೆಗಳು, ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಇದನ್ನು ಖಡಾಖಂಡಿತವಾಗಿ ಖಂಡಿಸುತ್ತಿವೆ.
‘ಗುಜರಾತ್ ಭೂ ಸ್ವಾಧೀನ ಪರಿ, ಇದು ವಿಶ್ವಾಸ ಇಡಬಹುದಾದ ದಾರಿ’ ಲೇಖನದಲ್ಲಿ ಶ್ರೀನಿವಾಸ ರಾವ್ ಅವರು ಪ್ರತಿಪಾದಿಸಿರುವಂತೆ ಕೇವಲ ಕಾಂಗ್ರೆಸ್ ಮಾತ್ರ ಈ ಸುಗ್ರೀವಾಜ್ಞೆಯನ್ನು ವಿರೋಧಿಸುತ್ತಿಲ್ಲ. ಒಂದು ವೇಳೆ, ಕಾಂಗ್ರೆಸ್ ಮಾತ್ರ ವಿರೋಧಿಸುತ್ತಿದ್ದರೆ ನರೇಂದ್ರ ಮೋದಿ ಕೂಡ ಸುಗ್ರೀವಾಜ್ಞೆಯನ್ನು ಅಷ್ಟೊಂದು ಪ್ರತಿಷ್ಠೆಯಾಗಿ ಪರಿಗಣಿಸುತ್ತಿರಲ್ಲಿಲ್ಲ. ಕಾಂಗ್ರೆಸ್ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ಸುಮ್ಮನಿರಬಹುದಿತ್ತು.
ಆದರೆ, ಎನ್‌ಡಿಎ ಮಿತ್ರ ಪಕ್ಷಗಳಾದ ಶಿರೋಮಣಿ ಅಕಾಲಿ ದಳ ಮತ್ತು ಶಿವಸೇನೆ ಕೂಡ ಈ ಸುಗ್ರೀವಾಜ್ಞೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಜೊತೆಗೆ ಈಗಿನ ಸ್ಥಿತಿಯಲ್ಲೇ ಕಾಯ್ದೆಯಾಗುವುದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿವೆ. ಈ ಪಕ್ಷಗಳನ್ನು ಬಿಟ್ಹಾಕಿ. ಈ ಎರಡೂ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗೋ ಸ್ಕರವೇ ವಿರೋ ಧಿ ಸು ತ್ತಿವೆ ಎಂದಿಟ್ಟುಕೊಳ್ಳೋಣ. ಬಿಜೆಪಿಯ ಮಾತೃಸಂಸ್ಥೆ ಯಾದ ಆರ್‌ಎಸ್ ಎಸ್‌ನ ಭಾರತೀಯ ಕಿಸಾನ್ ಸಂಘ (ಬಿಕೆಎಸ್), ಭಾರತೀಯ ಮಜ್ದೂರ್ ಸಂಘ ಮತ್ತು ಸ್ವದೇಶಿ ಜಾಗರಣ ಮಂಚ್ ಕೂಡ ವಿರೋಧ ವ್ಯಕ್ತಪಡಿಸಿವೆ. ಇದಕ್ಕೇನಂತೀರಿ? ಇಷ್ಟೆಲ್ಲ ವಿರೋಧ ಕ್ತವಾಗುತ್ತಿದೆಯೆಂದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿ ಖಂಡಿತವಾಗಿಯೂ ರೈತ ಹಿತಾಸಕ್ತಿ ವಿರೋಧಿ ಅಂಶಗಳು ಇರಲೇಬೇಕು ಅಲ್ಲವೇ? ಭೂಮಿ ಕೊಡುವ ರೈತನಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ, ಅತ್ಯಂತ ಶೀಘ್ರದಲ್ಲೇ ಪರಿಹಾರ ನೀಡುತ್ತೇವೆ ಎಂಬುದು ಮಾತ್ರವೇ ರೈತ ಪರ ಅಂಶವೇ? ಹೀಗೆ, ಕೇವಲ ಹಣದಾಸೆಗೆ ಭೂಮಿ ನೀಡಿದ ರೈತರ ಸ್ಥಿತಿ ಈಗ ಹೇಗಿದೆ ಎಂಬುದನ್ನು ತಾವು ಆಲಮಟ್ಟಿ ಅಣೆಕಟ್ಟೆ ಸಂತ್ರಸ್ತರ ಸದ್ಯದ ಸ್ಥಿತಿ ಚೂರು ಗಮನಿಸಿದರೆ ಅರ್ಥವಾದೀತು. ಇಂಥ ಸ್ಥಿತಿ ದೊಡ್ಡ ದೊಡ್ಡ ಯೋಜನೆಗಳಿಗಾಗಿ ಭೂಮಿ ನೀಡಿದ ದೇಶದ ಬಹುತೇಕ ರೈತರದ್ದಾಗಿದೆ. ಸರ್ಕಾರವೇ ಆಗಿರಲಿ, ಖಾಸಗಿ ಕಂಪನಿಗಳೇ ಆಗಿರಲಿ, ಭೂಮಿ ಪಡೆಯುವಾಗ ಮನೆಗೊಬ್ಬರಿಗೆ ಕೆಲಸ ಕೊಡುತ್ತೇವೆ, ಆಸ್ಪತ್ರೆ ಕಟ್ಟಿ ಕೊಡುತ್ತೇವೆ, ಶಾಲೆ ಕಟ್ಟಿಸ್ತೀವಿ, ರಸ್ತೆ ಮಾಡುತ್ತೇವೆ ಎಂದು ಹೇಳುತ್ತಾರೆ. ಈ ಭರವಸೆಗಳು ಈಡೇರಿವೆಯೇ? ಖಂಡಿತ ಇಲ್ಲ. ಕಾಂಗ್ರೆಸ್ ಇಲ್ಲವೇ ಎಡಪಕ್ಷಗಳ ಜತೆ ಗುರುತಿಸಿಕೊಂಡಿರುವ ರೈತ ಸಂಘಟನೆಗಳ ವಿರೋಧವನ್ನು ಕೂಡ ಒಂದು ಹಂತದಲ್ಲಿ ತಳ್ಳಿ ಹಾಕಬಹು ದಿತ್ತು. ಆದರೆ, ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘಗಳೂ ಅಷ್ಟೇ ಪ್ರಬಲವಾಗಿ ವಿರೋಧಿಸುತ್ತಿವೆ. ಭಾರತೀಯ ಕಿಸಾನ್ಸಂಘವಂತೂ ೨೫೦ ಸಂಸದರಿಗೆ ಪತ್ರ ಬರೆದು, ಸುಗ್ರೀವಾಜ್ಞೆಯನ್ನು
ಬೆಂಬಲಿಸದಂತೆ ಕೋರಿವೆ. ಇನ್ನೂ ಆಸಕ್ತಿಕರ ಸಂಗತಿ ಎಂದರೆ, ಸಂಘ ಯಾವ ಯಾವ ಸಂಸದರನ್ನು ಕೇಳಿಕೊಂಡಿದೆಯೋ ಅವರೆಲ್ಲರೂ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ ಎನ್ನುತ್ತಾರೆ ಭಾರತೀಯ ಕಿಸಾನ್ಸಂ ಘದ ಅಧ್ಯಕ್ಷ ಪ್ರಭಾಕರ್ ಕೇಳ್ಕರ್. ಅಂದರೆ, ಕೇವಲ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು ಮಾತ್ರವಲ್ಲದೆ, ಸಂಸದರು ಕೂಡ ಇದಕ್ಕೆ ತಮ್ಮ ಅಸಮ್ಮತಿ ತೋರುತ್ತಿದ್ದಾರೆ ಎಂದರ್ಥವಲ್ಲವೇ? ಅಷ್ಟೇ ಅಲ್ಲ, ಸುಗ್ರೀವಾಜ್ಞೆ ಖಂಡಿತವಾಗಿಯೂ ಕಾರ್ಪೊರೇಟ್ ಕಂಪನಿಗಳ ಪರವಾಗಿಯೇ ಇದೆ ಎಂಬುದು ಖಚಿತವಾಗುತ್ತಿದೆ.
ಶ್ರೀನಿವಾಸ್ ರಾವ್ ಅವರು ತಮ್ಮ ಲೇಖನದಲ್ಲಿ ಈಗಿರುವ ಸುಗ್ರೀವಾಜ್ಞೆ ಗುಜರಾತ್‌ನಲ್ಲಿ ಈಗಾಗಲೇ ಜಾರಿಯಲ್ಲಿರುವ ಕಾಯ್ದೆಯ ಸಂಗತಿಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿದೆ. ಅಲ್ಲಿ ರೈತರು ಇದನ್ನು ಒಪ್ಪಿಕೊಂಡಿರುವಾಗ ದೇಶದ ಇತರೆ ರೈತರು ಯಾಕೆ ಒಪ್ಪಿಕೊಳ್ಳಬಾರದು ಎಂಬ ಧಾಟಿಯಲ್ಲಿ ಹೇಳಿದ್ದಾರೆ. ಇದು ಒಪ್ಪತಕ್ಕ ಮಾತಲ್ಲ. ಗುಜರಾತ್ ರೈತರು ಒಪ್ಪಿಕೊಂಡ ತಕ್ಷಣ ಬೇರೆಯವರು ಒಪ್ಪಿಕೊಳ್ಳಲೇಬೇಕೆಂಬ ಸರ್ವಾಧಿಕಾರದ ದನಿ ಸಲ್ಲ. ಇನ್ನು ಸುಪ್ರೀಂ ಕೋರ್ಟ್‌ನ ಉದಾಹರಣೆ ನೀಡಿದ್ದಾರೆ. ಆದರೆ, ಕೋರ್ಟ್ ಆ ಮಾತು ಹೇಳಬೇಕಾದರೆ, ಯಾವ ಸಂದರ್ಭದಲ್ಲಿ ಮತ್ತು ಏತಕ್ಕಾಗಿ ಹಾಗೆ ಹೇಳಿದೆ ಎಂಬುದನ್ನು ಕೂಡ ಅಷ್ಟೇ ಮುಖ್ಯವಾಗುತ್ತದೆ. ಅದೇ ರೀತಿ, ಈ ಸುಗ್ರೀವಾಜ್ಞೆ ವಿರುದಟಛಿ ಕಾಂಗ್ರೆಸ್‌ನ ಪಿತೂರಿಯೇ ಹೆಚ್ಚಾಗಿ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅದನ್ನು ಒಪ್ಪಿಕೊಳ್ಳಲಾಗದು. ಅದು ಅಷ್ಟೇ ಆಗಿದ್ದರೆ ಈ ಪರಿ, ಇಷ್ಟೊಂದು ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿರಲಿಲ್ಲ. ಅಣ್ಣಾ ಹಜಾರೆ ಕೂಡ ಧರಣಿಗೆ ಧುಮುಕುತ್ತಿರಲಿಲ್ಲ. ದೇಶದ ರೈತ ಸಂಘಟನೆಗಳು ಒಂದೇ ದನಿಯಲ್ಲಿ ಮಾತನಾಡುತ್ತಿರಲಿಲ್ಲ. ಭ್ರಷ್ಟಾಚಾರ ವಿರುದಟಛಿ ಚಳವಳಿ ನಡೆಸಿದ ಅಣ್ಣಾ ಹಜಾರೆ ಆಗ ಬಿಜೆಪಿಗೆ ಹೀರೋ ಆಗಿದ್ದರು. ಈಗ ಭೂಸ್ವಾಧೀನ ಸುಗ್ರೀವಾಜ್ಞೆ ವಿರುದಟಛಿ ದನಿ ಎತ್ತುತ್ತಿದ್ದಂತೆ ಅವರು ವಿಲನ್ ಥರ
ಕಾಣಿಸುತ್ತಿದ್ದಾರೆ. ಎಂಥ ವಿಪರ್ಯಾಸ ನೋಡಿ!
ಅಷ್ಟಕ್ಕೂ ಈ ಸುಗ್ರೀವಾಜ್ಞೆಗೆ ಯಾಕೆ ವಿರೋಧ ವ್ಯಕ್ತವಾಗುತ್ತಿದೆಯೆಂದರೆ: ೨೦೧೪ ಜನವರಿ ೧ರಿಂದ ಜಾರಿಯಾಗಿರುವ ಛಿ ್ಕಜಿಜಠಿ ಠಿಟ ಊಜ್ಟಿ ಇಟಞಛ್ಞಿಠಿಜಿಟ್ಞ ಚ್ಞ ಖ್ಟಚ್ಞಚ್ಟಛ್ಞ್ಚಿ ಜ್ಞಿ ಔಚ್ಞ ಅಟ್ಠಿಜಿಜಿಠಿಜಿಟ್ಞ, ್ಕಛಿಚಿಜ್ಝಿಜಿಠಿಠಿಜಿಟ್ಞ ಚ್ಞ ್ಕಛಿಛಿಠಿಠ್ಝಿಛಿಞಛ್ಞಿಠಿ ಕಾಯ್ದೆಗೆ ಸಂಬಂಧಿಸಿದಂತೆ ತರಲಾಗಿರುವ ಸುಗ್ರೀವಾಜ್ಞೆಯಲ್ಲಿ ಕೆಲವು ಅಂಶಗಳು ಸಂಪೂರ್ಣವಾಗಿ ರೈತ ಹಿತಾಸಕ್ತಿ ಯನ್ನು ಕಡೆಗಣಿಸಿವೆ. ಅದರಲ್ಲೂ ವಿಶೇಷವಾಗಿ ಸೆಕ್ಷನ್ ೧೦(ಎ)ಗೆ ಸಂಬಂಧಿಸಿ ದಂತೆ, ಕಾಯ್ದೆಯಲ್ಲಿ ಹೇಳಿರುವ ರಾಷ್ಟ್ರೀಯ
ಹೆದ್ದಾರಿ, ಭದ್ರತೆ, ರಕ್ಷಣೆ, ಗ್ರಾಮೀಣ ಮೂಲಭೂತ ಸೌಕರ್ಯ,
ಕೈಗಾರಿಕಾ ಕಾರಿಡಾರ್‌ಗಳಿಗೆ ಸಂಬಂಧಿಸಿದಂತೆ ಈ ಭೂಸ್ವಾಧೀನ ಮಾಡುವಾಗ ರೈತರ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಲೇ ಬೇಕಿಲ್ಲ. ಈ ಹಿಂದೆ ಸರ್ಕಾರಿ ಪ್ರಯೋಜ ನಕ್ಕೆ ಭೂಸ್ವಾಧೀನ ಮಾಡಿಕೊಳ್ಳುವಾಗ ಸಂಬಂಧಿಸಿದ ಶೇ.೭೦ರಷ್ಟು ಮತ್ತು ಖಾಸಗಿ ಉದ್ದೇಶಕ್ಕಾಗಿ ಸ್ವಾಧೀನ ಮಾಡಿಕೊಳ್ಳುವಾಗ ಶೇ.೮೦ರಷ್ಟು ರೈತರ ಒಪ್ಪಿಗೆ ಪಡೆಯಲೇಬೇಕಿತ್ತು. ಈಗಿರುವ ಸುಗ್ರೀವಾಜ್ಞೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಸರ್ಕಾರಕ್ಕೆ ಬೇಕಾದ ಜಮೀನನ್ನು ನೇರವಾಗಿ ಸ್ವಾಧೀನಪಡಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಈ ಹಿಂದೆ ಇದ್ದ ಕಾಯ್ದೆಯಲ್ಲಿ ಸೋಷಿಯಲ್ ಇಂಪ್ಯಾಕ್ಟ್ ಅಸೆಸ್ ಮೆಂಟ್(ಎಸ್‌ಎಐ) ಕೂಡ ಮಾನ್ಯ ಮಾಡಬೇಕಾದ
ಅಗತ್ಯವಿಲ್ಲ. ಸ್ವಾಧೀನ ಪ್ರಕ್ರಿಯೆಯ ವೇಳೆ ನಿಯಮಗಳನ್ನು ಉಲ್ಲಂಘಿಸಿದ ಯಾವುದೇ ಅಧಿಕಾರ ವಿರುದಟಛಿ ನೇರವಾಗಿ ಕ್ರಮ ಕೈಗೊಳ್ಳುವ ಅಧಿಕಾರವಿತ್ತು. ಈಗಿನ ತಿದ್ದುಪಡಿಯಲ್ಲಿ ಹಾಗೇನಾದರೂ ಆದರೆ, ಅದಕ್ಕೆ ಸರ್ಕಾರದಿಂದ ಒಪ್ಪಿಗೆ ಪಡೆಯಲೇಬೇಕು. ಒಂದು ವೇಳೆ, ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಕೈಗಾರಿಕೆಗಳನ್ನು ೫ ವರ್ಷಗಳವರೆಗೂ ಸ್ಥಾಪಿಸಲಿಲ್ಲ ಎಂದಿಟ್ಟುಕೊಳ್ಳಿ. ಆಗ, ಮತ್ತೆ ಸ್ವಾಧೀನಕ್ಕೆ ಮೊದಲಿನಿಂದ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದರೆ, ಈಗ ಈ ಮಿತಿಯನ್ನು ತೆಗೆದು ಹಾಕಲಾಗಿದೆ. ಒಮ್ಮೆ ಸ್ವಾಧೀನವಾದರೆ ಮುಗೀತು. ಅದು ಸರ್ಕಾರದ ವಶದಲ್ಲೇ ಇರುತ್ತದೆ. ಹೀಗೆ, ಭೂಮಿಯನ್ನು ಸರ್ಕಾರದ ಉದ್ದೇಶಕ್ಕಾಗಿ ಇಲ್ಲವೇ ಖಾಸಗಿ ಉದ್ದೇಶಕ್ಕಾಗಲಿ ವಶಪಡಿಸಿಕೊಂಡಾಗ, ರೈತರು ತಮ್ಮ ಜಮೀನಿನ ಹಕ್ಕನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಇಂಥ ಸೂಕ್ಷ್ಮವಾದ ಅನೇಕ ಸಂಗತಿಗಳು ಮೋದಿ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿವೆ. ಈ ಎಲ್ಲದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕೆಂಬುದು ಎಲ್ಲರ ಅಪೇಕ್ಷೆ. ಕೇವಲ ವಶಪಡಿಸಿಕೊಂಡ ಭೂಮಿಗೆ ಪಾರದರ್ಶಕವಾಗಿ, ಶೀಘ್ರವಾಗಿ ಹಣ ನೀಡುತ್ತೇವೆ, ನೀವು ಭೂಮಿ ಕೊಡಿ ಎಂದರೆ ಹೇಗೆ? ಸ್ವಾಧೀನಕ್ಕೆ ಇದೇ ಪ್ರಮುಖ ಸಂಗತಿಯಾದರೆ ಹೇಗೆ? ಭೂ ಸ್ವಾಧೀನ ನಂತರ ಸಂತ್ರಸ್ತರಾಗುವ ಜನರ ಸ್ಥಿತಿ ಏನಾಗಬೇಡ? ಇಂಥ ಎಲ್ಲ ಅಂಶಗಳ ಬಗ್ಗೆ
ಚರ್ಚೆಯಾಗದೆ, ‘ಮೇಕ್ ಇನ್ ಇಂಡಿಯಾ’ಗೋಸ್ಕರ, ಅತಿ ಕಡಿಮೆ ಅವಧಿಯಲ್ಲೇ ಜನರಿಗೆ ‘ಅಚ್ಛೇ ದಿನಗಳ ್ಛಛಿಛ್ಝಿ’ ಕೊಡುವುದಕ್ಕೆ ಫಲವತ್ತಾದ ಕೃಷಿ ಭೂಮಿಯನ್ನು ಕೂಡ ಕೊಡಲೇಬೇಕು ಎಂಬ ಸರ್ಕಾರದ ಸರ್ವಾಧಿಕಾರದ ಧೋರಣೆ ವಿರುದಟಛಿ ಸಿಡಿದೇಳುವುದು ಅಪರಾಧವೇ? ಪ್ರಧಾನಿ ಮೋದಿ ಎಲ್ಲವನ್ನೂ ಸರಿಯಾಗೇ ಮಾಡುತ್ತಾರೆ. ಅವರನ್ನು ನಂಬಿ ಎಂದರೆ ಹೇಗೆ? ಒಂದು ಕಾಯ್ದೆಯಾಗಿ ರೂಪಗೊಳ್ಳಬೇಕಿದ್ದರೆ ಅದು ಸಾರ್ವಜನಿಕವಾಗಿ ಚರ್ಚೆಯಾಗಲೇಬೇಕು. ಅದನ್ನೇ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು, ರೈತ ಸಂಘಟನೆಗಳು ಕೇಳುತ್ತಿವೆ. ಅದನ್ನೇ ತಪ್ಪು ಎಂದರೆ ಹೇಗೆ?

ಶುಕ್ರವಾರ, ಡಿಸೆಂಬರ್ 5, 2014

ಸಾಮ್ರಾಜ್ಯಶಾಹಿ ನರಕ, ಈ ‘ದೇವಮಾನವ’ರ ಲೋಕ

ದೇವರು ಸರ್ವವ್ಯಾಪಿ, ನಿರಾಕಾರ, ನಿರ್ಗುಣ. ಆದರೆ, ಈ ದೇವಮಾನವರು, ಬಾಬಾಗಳು, ಗುರೂಜಿಗಳು ಎಲ್ಲಿಂದ ಬರುತ್ತಾರೋ?
ದೇವರ ಹೆಸರಲ್ಲಿ ಮುಗಟಛಿ, ದುರ್ಬಲ ಮನಸ್ಸಿನ ಜನರನ್ನು ಮೋಸ ಮಾಡಿ, ತಮ್ಮ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುವ ಇವರಿಗೆ
ನಮ್ಮ ರಾಜಕಾರಣಿಗಳು ಬೆಂಗಾವಲಾಗಿ ನಿಂತು ಬಿಡುತ್ತಾರೆ. ದೇವರ ಹೆಸರಲ್ಲಿ ಅತ್ಯಾಚಾರ, ಅನಾಚಾರ, ಎಲ್ಲ ಪಾಪ
ಕರ್ಮ ಮಾಡಿ, ಅದರಿಂದ ಬಚಾವಾಗಲು ಆಡಳಿತದ ನೆರವು ಪಡೆಯುತ್ತಾರೆ. ಆಡಳಿತಗಾರರು, ರಾಜಕಾರಣಿಗಳಿಗೆ ದೇವಮಾನವರ ಹಿಂದಿರುವ ‘ಕುರಿ ಮಂದೆ’ ಮತದಾರರ ಮೇಲೆ ಕಣ್ಣು. ಎಲ್ಲಕ್ಕಿಂತ ಹೆಚ್ಚಾಗಿ ಇವರ ಅನಾಚಾರ ರಕ್ಷಿಸಿಕೊಳ್ಳಲು ಅವರ ನೆರವು. ಇದೊಂದು ರೀತಿ ಕೊಡು- ಕೊಳ್ಳುವಿಕೆಯ ಭ್ರಷ್ಟ್ರ ಪ್ರಕ್ರಿಯೆ. ಹರ್ಯಾಣದ ಸ್ವಯಂಘೋಷಿತ ದೇವಮಾನವ ಸಂತ ರಾಮ್‌ಪಾಲ್ ಬಂಧನದ ಘಟನೆಯನ್ನೇ ನೋಡಿ. ಈ ನೆಲದ ಕಾನೂನನ್ನು ಗೌರವಿಸದಷ್ಟು ದಾರ್ಷ್ಟ್ಯ ಪ್ರದರ್ಶಿಸುತ್ತಾನೆ. ತನಗಾಗಿ ಖಾಸಗಿ ಸೇನೆಯನ್ನು ಸಾಕಿಕೊಳ್ಳುತ್ತಾನೆಂದರೆ ಆತ ಎಷ್ಟು ಹಣವಂತನಾಗಿರಬೇಕು? ಆಧ್ಯಾತ್ಮ, ದೇವರ ಹೆಸರಲ್ಲಿ
ಎಷ್ಟೊಂದು ಸುಲಿಗೆ ಮಾಡಿರಬೇಕು? ಇಷ್ಟೆಲ್ಲ ಮಾಡಬೇಕಿದ್ದರೆ ರಾಜಕಾರಣಿಗಳ ನೆರವು ಇರಲೇಬೇಕು. ಯಾಕೆಂದರೆ ಸ್ವತಂತ್ರ
ಸಂವಿಧಾನ ಹೊಂದಿರುವ ಭಾರತದಂಥ ದೇಶದಲ್ಲಿ ಒಬ್ಬ ಖಾಸಗಿ ವ್ಯಕ್ತಿ ಏಕಾಂಗಿಯಾಗಿ, ಇಡೀ ವ್ಯವಸ್ಥೆಯನ್ನು ಮೀರಿ ಬೆಳೆಯಲು ಸಾಧ್ಯವಿಲ್ಲ. ಇಲ್ಲಿ ದೇವಮಾನವರು ಅಥವಾ ಸೋ ಕಾಲ್ಡ್ ಗುರೂಜಿಗಳು ಹಾಗೂ ರಾಜಕಾರಣಿಗಳು ಜಂಟಿಯಾಗಿ
ಹೆಜ್ಜೆ ಹಾಕುತ್ತಾರೆ.
ಸಂತ ರಾಮ್‌ಪಾಲ್‌ನಂಥ ಘಟನೆಗಳು ಕೇವಲ ಭಾರತದಲ್ಲಿ ಮಾತ್ರ ನಡೆಯುತ್ತವೆ ಅಂದುಕೊಳ್ಳಬೇಡಿ. ಇವು ಸರ್ವವ್ಯಾಪಿ. ರಾಮ್‌ಪಾಲ್ ಬಂಧನ ಕುರಿತು ನಡೆದ ೨ ದಿನಗಳ ಹೈಡ್ರಾಮಾ ನಿಮಗೆ ಅಮೆರಿಕದ ಟೆಕ್ಸಾಸ್‌ನ ವಾಕೋ ಘಟನೆಯನ್ನೂ ನೆನೆಪಿಸಬಹುದು. ೧೯೯೩ರಲ್ಲಿ ಬ್ರಾಂಚ್ ದ್ರಾವಿಡಿಯನ್ಸ್ ಧಾರ್ಮಿಕ ಗುಂಪು ಮತ್ತು ಪೊಲೀಸರ ಮಧ್ಯೆ ೫೨ ದಿನಗಳ
ಕಾಳಗ ನಡೆದಿತ್ತು. ವಾಕೋದ ಮೌಂಟ್ ಕಾರ್ಮೆಲ್ ಸೆಂಟರ್ ನಲ್ಲಿ ತನ್ನ ಬೆಂಬಲಿಗರನ್ನು ಗುರಾಣಿ ರೀತಿಯಲ್ಲಿ ಬ್ರಾಂಚ್ ದ್ರಾವಿಡಿಯನ್ಸ್‌ನ ಮುಖ್ಯಸ್ಥ ಡೇವಿಡ್ ಕೊರೆಶ್ ಬಳಸಿಕೊಂಡಿದ್ದ. ಅಂತಿಮವಾಗಿ ೫೨ನೇ ದಿನ ಆತ ಶರಣಾಗುವ ಮೂಲಕ ಪ್ರಕರಣ ಅಂತ್ಯ ಕಂಡಿತ್ತು.
‘ಎಕನಾಮಿಕ್ಸ್ ಟೈಮ್ಸ್’ಗೆ ನೀಡಿದ ಹೇಳಿಕೆಯಲ್ಲಿ ಆರೆಸ್ಸೆಸ್ ಚಿಂತಕ ಕೆ.ಎನ್.ಗೋವಿಂದಾಚಾರ್ಯ ಅವರು ಈ ದೇವಮಾನವರು ಮತ್ತು ರಾಜಕಾರಣಿಗಳ ನಡುವಿನ ಅಪವಿತ್ರ ಮೈತ್ರಿಯನ್ನು ಧ್ವನಿಸುತ್ತಾರೆ. ‘ರಾಜಕೀಯ ಪಕ್ಷಗಳು ಮತ್ತು ಈ
ದೇವಮಾನವರು ಪರಸ್ಪರ ಒಪ್ಪಿತ ಮಾರ್ಗದಲ್ಲಿ ಸಾಗುತ್ತಾರೆ. ಪಕ್ಷಗಳು ದೇವಮಾನವರ ಜನಪ್ರಿಯತೆಯನ್ನು ತಮಗೆ ಅನುಕೂಲಕರ ಸರಕಾಗಿಸಿಕೊಂಡರೆ, ದೇವಮಾನವರು ಇವರಿಂದ ವ್ಯವಸ್ಥೆಯ ಮಾನ್ಯತೆ ಪಡೆದುಕೊಳ್ಳುತ್ತಾರೆ. ಇದೊಂದು ಅವಕಾಶವಾದಿತನ ಮತ್ತು ಅಂತಿಮವಾಗಿ ಇಂಥ ಪ್ರಕರಣಗಳು ತೀರಾ ಕೆಟ್ಟದಾಗಿ ಅವಸಾನ ಕಾಣುತ್ತವೆ’.
 ಇದನ್ನು ಇನ್ನಷ್ಟು ಸರಳವಾಗಿ ಉದಾಹರಣೆ ಸಹಿತ ಹೇಳುವುದಾದರೆ, ಇಂದಿರಾ ಗಾಂಧಿ ಅವರಿಗೆ ಯೋಗ ಗುರುವಾಗಿದ್ದ ಬ್ರಹ್ಮಚಾರಿ ಧೀರೇಂದ್ರ ಹಾಗೂ ಮತ್ತೊಬ್ಬ ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ. ಇವರಿಬ್ಬರೂ ‘ಅವಕಾಶವಾದಿತನದ ಪ್ರಮುಖ ಶಿಲ್ಪಿಗಳು’. ೧೯೭೫-೭೭ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಈ
ಬ್ರಹ್ಮಚಾರಿ ಧೀರೇಂದ್ರ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ. ಈತನನ್ನು ಆಗ ’ಛಿ ಐ್ಞಜಿಚ್ಞ ್ಕಟ್ಠಠಿಜ್ಞಿ’
(ರಾಸ್‌ಪುಟಿನ್ ರಷ್ಯಾದ ರೋಮನೋವ್ಸ್ ರಾಜಕೀಯ ಮನೆತನಕ್ಕೆ ಸಲಹೆಗಾರ. ಎಲ್ಲಕ್ಕಿಂತ ಹೆಚ್ಚಾಗಿಈತಕೂಡ ದೇವಮಾನವ. ಚ್ಟ ಘೆಜ್ಚಿಟ್ಝ ಐಐ ರಷ್ಯಾ ಸೇನೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಾಗ ಈ ರಾಸ್ ಪುಟಿನ್ ಆತನಿಗೆ ಪ್ರಮುಖ
ಸಲಹೆಗಾರನಾಗಿ, ರಷ್ಯಾದ ನಿರಂಕು ಶಪ್ರಭುತ್ವ ಅವನತಿಗೆ ಕಾರಣನಾದ) ಎಂದೇ ಕುಖ್ಯಾತಿ ಯಾಗಿದ್ದ. ಈ ಧೀರೇಂದ್ರ ಕೂಡ
ಇಂದಿರಾ ಗಾಂಧಿಯ ಒಂಚೂರು ಅವನತಿಗೂ ಕಾರಣನಾದ. ರಾಜಕೀಯ ವ್ಯವಸ್ಥೆ ಬಳಸಿಕೊಂಡು ತನ್ನ ಸಾಮ್ರಾಜ್ಯ ವಿಸ್ತರಿಸಿದ. ಅದೇ ರೀತಿ, ಚಂದ್ರಸ್ವಾಮಿಗೂ ನಿಕಟವಾದ ರಾಜಕೀಯ ನಂಟು ಇತ್ತು. ಈತನ ಆಶ್ರಮದ ಮೇಲೆ ದಾಳಿ ಮಾಡಿದಾಗ ಶಸಾಉಸಉ ದಲ್ಲಾಳಿಗಳಿಗೆ ೧೧ ದಶಲಕ್ಷ ಡಾಲರ್ ಪಾವತಿಸಿದ ಅಸಲಿ ದಾಖಲೆಗಳು ಸಿಕ್ಕಿದ್ದವು! ಅಂದರೆ, ಈ
ದೇವಮಾನವರು, ಗುರೂಜಿಗಳು ಕೇವಲ ಆಧ್ಯಾತ್ಮ ಬೋಧಿಸುವುದು, ಅನುಯಾಯಿಗಳನ್ನು ವಂಚಿಸುವುದು ಮಾತ್ರ ಮಾಡುತ್ತಿರಲಿಲ್ಲ. ಪಕ್ಕಾ ವ್ಯಾಪಾರಿಗಳು. ಭಾರತದ ಪಾರಂಪರಿಕ ಜ್ಞಾನವಾದ ಯೋಗ, ಆಧ್ಯಾತ್ಮವನ್ನು ಮಾರಾಟದ ಸರಕಾಗಿಸಿದವರು. ಆಯು ರ್ವೇದ ಪದ್ಛಿಧಿತಿಔಷಧಗಳನ್ನು ಮಾರಿದ ವರು. ಕೋಟಿ ಕೋಟಿ ಹಣ ಬಾಚಿ, ತಮ್ಮ ಸಾಮ್ರಾಜ್ಯ ವಿಸ್ತರಿಸಿ ಕೊಂಡವರು. ಮತ್ತೆ ಇದಕ್ಕೆಲ್ಲ ರಾಜ ಕಾರಣಿಗಳ ಬೆಂಬಲ ಇದ್ದೇ ಇರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ!
ಬ್ರಹ್ಮಚಾರಿ ಧೀರೇಂದ್ರ, ಚಂದ್ರಸ್ವಾಮಿ ಯಂಥ ಖ್ಚಚ್ಞಚ್ಝಟ್ಠ ಜ್ಞಿಠಿ ಪಟ್ಟಿ ಚಿಕ್ಕದೇನಿಲ್ಲ. ಈ ಪಟ್ಟಿಗೆ ಸ್ವಾಮಿ ಸದಾಚಾರಿ, ಜ್ಞಾನ ಚೈತನ್ಯ, ಗುರ್ಮಿತ್ ರಾಮ್ ರಹೀಂ ಸಿಂಗ್, ಆಸಾರಾಮ್ ಬಾಪು, ನಿತ್ಯಾನಂದ ಸ್ವಾಮಿ, ಪ್ರೇಮಾನಂದ, ಇಚ್ಛಾಧಾರಿ ಸಂತ ಸ್ವಾಮಿ ಭೀಮಾನಂದ ಮಹಾರಾಜ್... ಹೀಗೆ ಪಟ್ಟಿ ಬೆಳೆಯುತ್ತದೆ. ಇವರೆಲ್ಲರೂ ಕೇವಲ ಅತ್ಯಾಚಾರ, ಕೊಲೆ, ಅನಾಚಾರಕ್ಕಾಗಿ
ಸುದ್ದಿಯಲ್ಲಿದ್ದವರಲ್ಲ. ಇವರು ಕಟ್ಟಿದ ಹಣದ ಸಾಮ್ರಾಜ್ಯ ಕೂಡ ಇವರನ್ನು ಕುಖ್ಯಾತಿಗೆ ತಳ್ಳಿದೆ. ಇವರಿಗಾರಿಗೂ ನಮ್ಮ
ನೆಲದ ಕಾನೂನು, ಕಟ್ಟಳೆ, ವ್ಯವಸ್ಥೆ ಬಗ್ಗೆ ಕಿಂಚಿತ್ ಗೌರವ ಇಲ್ಲ. ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳಬಲ್ಲೆ ಎಂಬ ಹುಸಿ
ವಿಶ್ವಾಸಕ್ಕೆ ಇದೇ ರಾಜಕಾರಣಿಗಳು, ಭ್ರಷ್ಟ ವ್ಯವಸ್ಥೆ ನೀರೇರೆದಿರುತ್ತದೆ. ಇದೆಲ್ಲದರ ಜತೆಗೆ ನಮ್ಮ ಈ ಮೂಢ ಜನರ ಕುರುಡು ನಂಬಿಕೆ ಅವರಿಗೆಲ್ಲ ಎಲ್ಲಿಲ್ಲದ ಬಲ ತಂದುಕೊಡುತ್ತದೆ. ಹಾಗಾಗಿಯೇ ಅವರು, ಒಂದು ಚೌಕಟ್ಟಿನೊಳಗೇ ಇದ್ದುಕೊಂಡು, ಅದಕ್ಕೆ ಮತ್ತೊಂದು ಚೌಕಟ್ಟು ಹಾಕುವ ವಿಫಲ ಯತ್ನಕ್ಕೆ ಮುಂದಾಗುತ್ತಾರೆ. ಸಂತ ರಾಮ್‌ಪಾಲ್ ವಿಷಯದಲ್ಲೂ ಆಗಿದ್ದು ಇದೆ.
ಇದು ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅಂಟಿದ ಜಾಢ್ಯವಲ್ಲ. ಮುಸ್ಲಿಂ, ಕ್ರೈಸ್ತ ಧರ್ಮವೂ ಸೇರಿದಂತೆ ಎಲ್ಲದರಲ್ಲೂ ಇಂಥ ಕಿರಾತಕರು ಇದ್ದೇ ಇರುತ್ತಾರೆ. ರಾಜಕೀಯ ನಂಟನ್ನು ತಮ್ಮ ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳುತ್ತಾ ರೆಂಬುದಕ್ಕೆ ದೆಹಲಿಯ ಸಯ್ಯದ್ ಅಹ್ಮದ್ ಬುಖಾರಿ ಉದಾಹರಣೆ. ೨೦೦೧ ಸೆಪ್ಟೆಂಬರ್ ೩ರಂದು ಪೊಲೀಸ್ ಅಧಿಕಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಖಾರಿ ಹಾಗೂ ಹಬಿಬ್‌ವುರ್ ರೆಹಮಾನ್ ವಿರುದಟಛಿ ಪ್ರಕರಣ ದಾಖಲಾಗಿದೆ. ಇವರ ವಿರುದಟಛಿ ದೆಹಲಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದರೂ ಇವರನ್ನು ಬಂಧಿಸಿ ಕೋರ್ಟ್‌ಗೆ ಹಾಜರಪಡಿಸಲು ದೆಹಲಿ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಇದಕ್ಕೆಲ್ಲ ಏನು ಕಾರಣ? ನೆಲದ ಕಾನೂನು ಧಿಕ್ಕರಿಸುವಂತೆ ಪ್ರೇರೇಪಿಸುವ ಶಕ್ತಿಗಳು ಯಾವುವು ಎಂಬುದನ್ನು ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.
 ಮತ್ತೆ ಕೆಲವು ಬಾಬಾಗಳು, ದೇವಮಾ ನವರು, ಗುರೂಜಿಗಳು ತುಂಬಾ ಸೌಜನ್ಯ ಮುಖವಾಡ ಧರಿಸಿಕೊಂಡು ತಮ್ಮ
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯಾವುದಾದರೊಂದು ರಾಜಕೀಯ ಪಕ್ಷದಲ್ಲೇ ಗುರುತಿಸಿಕೊಂಡು ಬಿಡುತ್ತಾರೆ.
ಇವರು ಕೂಡ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವುದರ ಜತೆಗೆ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುತ್ತಾರೆ. ಇಂಥವರು ಇನ್ನೂಡೇಂಜರ್!
ಭಾರತದಲ್ಲೇಕೆ ಈ ಗುರೂಜಿ, ದೇವಮಾನವರತ್ತ ಜನರು ಅಷ್ಟೊಂದು ಆಕರ್ಷಿತರಾಗುತ್ತಾರೆ? ಎನ್ನುವುದರ ಕುರಿತು ವರದಿಗಾರ ಸೌತಿಕ್ ಬಿಸ್ವಾಸ್ ಬಿಬಿಸಿಗೆ ಬರೆದಿದ್ದಾರೆ. ಅದರಲ್ಲಿ ಅವರು ಹೇಳುತ್ತಾರೆ- ‘ತೀವ್ರವಾಗಿ ನಗರೀಕರಣಗೊಳ್ಳುತ್ತಿರುವ
ಈ ದೇಶದ ಜನರ ಮಹತ್ವಾಕಾಂಕ್ಷೆ, ಗೊಂದಲ, ಹತಾಶೆಗೆ ಮದ್ದು ನೀಡುವ ರೀತಿಯಲ್ಲಿ ಈ ಗುರೂಜಿಗಳು ಗೋಚರವಾಗುತ್ತಾರೆ. ಈ ಗುರೂಜಿಗಳು, ದೇವಮಾನವರು ನಮ್ಮ ಜೀವನದಲ್ಲಿ ದೊಡ್ಡ ಸಂತೋಷವನ್ನು ತಂದು ಕೊಡಬಲ್ಲರು ಎಂಬ ಕಾರಣಕ್ಕೆ ಆಕರ್ಷಿತರಾಗುತ್ತಾರೆ. ತಮ್ಮ ಕುಟುಂಬದ ಅನಾರೋಗ್ಯಪೀಡಿತರನ್ನು ಮ್ಯಾಜಿಕ್‌ನಿಂದ ಸರಿ ಮಾಡಬಲ್ಲರು ಎಂಬ ನಂಬಿಕೆ. ಗುಜರಾತ್‌ನ ಸಬರ್ ಕಾಂತಾ ಜಿಲ್ಲೆಯಲ್ಲಿ ಒಬ್ಬ ಗುರು, ಮ್ಯಾಜಿಕ್‌ನಿಂದಲೇ ರೋಗಪೀಡಿತರನ್ನು ಗುಣ ಮಾಡುತ್ತೇನೆ ಎಂದು ನಂಬಿಸಿದ್ದ. ಆತನಿಗೆ ಸಾವಿರಾರು ಅನುಯಾಯಿಗಳು. ಇವರಲ್ಲಿ ಅನೇಕರು ಸತ್ತರೂ ಆತನ ಮೇಲೆ ನಂಬಿಕೆಯೇನೂ ಕುಂದಲಿಲ್ಲ’.
ಓಕೆ.. ಈ ಗುರೂಜಿಗಳು, ದೇವಮಾನವರು ತಮ್ಮ ಹಿತಾಸಕ್ತಿಗೆ ತಂತ್ರ ಹೆಣೆಯುತ್ತಾರೆ ಎಂದಿಟ್ಟುಕೊಳ್ಳೋಣ. ಆದರೆ, ಈ ಜನರಿಗೇನಾಗಿದೆ? ಒಬ್ಬ ಢೋಂಗಿ ಬಾಬಾ, ಗುರೂಜಿ, ದೇವಮಾನವರ ಸಲುವಾಗಿ ಪ್ರಾಣ ಬಿಡಲು ಮುಂದಾಗುತ್ತಾರೆ ಅಂದರೆ ಅದೆಂಥ ಮೂಢರು. ಇನ್ನೂ ದುರಂತ ಎಂದರೆ, ಹೀಗೆ ಯಾವುದೇ ವಿವೇಚನೆ ಇಲ್ಲದೆ ಇವರಿಗೆ ಶರಣು ಹೋಗುವವರು ಎಲ್ಲ ಬಲ್ಲವರು! ಆಧುನಿಕ ಪರಿಭಾಷೆಯಲ್ಲಿ ಇವರನ್ನು ವಿದ್ಯಾವಂತರು (ಬುದ್ದಿವಂತರು?) ಎಂದು ಕರೆಯುತ್ತಾರೆ. ಇವರಿಗೂ ಗೊತ್ತು. ಆತ ಸುಳ್ಳು ಹೇಳುತ್ತಿದ್ದಾನೆ. ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ ಎಂಬುದು. ಇನ್ನು ಒಂದಿಷ್ಟು ಜನರಿದ್ದಾರೆ. ಇವರು ಅನಕ್ಷರಸ್ಥರು. ದುರ್ಬಲ ಮನಸ್ಸಿನವರು. ಮೂಢನಂಬಿಕೆಯುಳ್ಳವರು. ಇವರಿಂದಾಗಿಯೂ ಈ ರಾಮ್‌ಪಾಲ್‌ನಂಥ ಬಾಬಾಗಳು,
ದೇವಮಾನವರಿಗೆ ಶಕ್ತಿ ಬಂದು ಬಿಡುತ್ತದೆ. ಆದರೆ, ಇವರೆಲ್ಲರೂ ಯಾವುದೋ‘ಜಾದೂ’ವೊಂದರ ನಿರೀಕ್ಷೆಯಲ್ಲಿ ದೇವಮಾನವರ ಪದತಲಕ್ಕೆ ಬಂದು ಬಿಡುತ್ತಾರೆ. ಇಂಥದ್ದಕ್ಕೆ ಕಡಿವಾಣ ಹಾಕಬೇಕಿದ್ದರೆ ಮೊದಲು ನಾನು ದೇವಮಾನವ, ನಿಮ್ಮ ಕಷ್ಟಗಳನ್ನು ಸರಿ ಮಾಡುತ್ತೇನೆಂದು ನಂಬಿಸುವ ಗುರೂಜಿ, ಬಾಬಾಗಳನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ಆದರೆ, ಕೊಡಿಸೋರು ಯಾರು? ಈ ಕೆಲಸ ಮಾಡಬೇಕಾದವರೇ ಅವರ ಜತೆ ಸೇರಿಕೊಂಡಿರುವಾಗ ಅದು ಹೇಗೆ ಸಾಧ್ಯ? ಸಾಧ್ಯ ಇಲ್ಲ ಎಂದಾದರೆ, ರಾಮ್‌ಪಾಲ್ ಬಂಧನದಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಒಂದಿಷ್ಟು ಜನರು ತಮ್ಮ ಪ್ರಾಣವನ್ನು ಪುಗ್ಸಟ್ಟೆಯಾಗಿ ಕಳೆದುಕೊಳ್ಳುತ್ತಲೆ ಇರುತ್ತಾರೆ. ಕೊನೆಪಕ್ಷ, ದೇವರು- ನಂಬಿಕೆಗಳಲ್ಲಿ ಸಮಾಧಾನ ಕಂಡು
ಕೊಳ್ಳುವುದಕ್ಕೆ ತಮಗೆ ಮಧ್ಯವರ್ತಿಗಳ ಅವಶ್ಯವಿಲ್ಲ ಅಂತ ಜನರಾದರೂ ಎಚ್ಚೆತ್ತು ಇಂಥ ತಥಾಕಥಿತ ದೇವಮಾನವರಿಂದ
ದೂರವಾಗುವುದು ಸಾಧ್ಯವಾದರೆ ಮಾತ್ರವೇ ಪರಿಹಾರದ ದಾರಿ ತೆರೆದುಕೊಳ್ಳುತ್ತದೆ.

(ಈ ಲೇಖನ ಕನ್ನಡಪ್ರಭದ ೨೦೧೪   ನವೆಂಬರ್ ನ ೨೧ರ ಸಂಚಿಕೆಯಲ್ಲಿ ಪ್ರಕಟವಾಗಿದೆ)


ಜಯಂತಿಗಳಿಗೆ ವ್ಯಾಖ್ಯಾನ, ಇದ್ಯಾವ ಮೋದಿ ವಿಧಾನ?

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಾಕಿರುವ ಇತ್ತೀಚಿನ ಟ್ರೆಂಡ್ ಎಂದರೆ ಮಹಾಪುರುಷರ ಜಯಂತಿ ಹಾಗೂ ನಿರ್ಣಾಯಕ ಇಸ್ವಿಗಳೊಂದಿಗೆ ಅಭಿಯಾನವೊಂದನ್ನು ತಳುಕು ಹಾಕುತ್ತಿರುವುದು. ಗಾಂಧಿ ಜಯಂತಿ ಸ್ವಚ್ಛ ಭಾರತದ ಬದಟಛಿತೆಗಿರಲಿ ಎಂದು ಬ್ರಾಂಡ್ ಮಾಡಿದ್ದಾರೆ. ಗಾಂಧೀಜಿ ಆಫ್ರಿಕಾದಿಂದ ಭಾರತಕ್ಕೆ ಮರಳಿದ ೧೯೧೫ರ ಇಸ್ವಿ ಇಟ್ಟುಕೊಂಡು, ೨೦೧೫ರಲ್ಲಿ ಅದಕ್ಕೆ ನೂರು ವರ್ಷಗಳಾಗುತ್ತವೆ ಎನ್ನುತ್ತ ತಾಯ್ನೆಲದಿಂದ ದೂರವಿರುವ ಅನಿವಾಸಿಗಳ ಒಳಗೊಳ್ಳುವಿಕೆಗೆ ಏನೋ ಯೋಜನೆ ಹರವಿಡುತ್ತಾರೆ. ಜೆಪಿ ಜನ್ಮ ದಿನಾಚರಣೆಯಂದು ಸಂಸದರ ಗ್ರಾಮ ದತ್ತು ಯೋಜನೆಗೆ ಚಾಲನೆ ಕೊಡುತ್ತಾರೆ. ಬಿಜೆಪಿ ಸರ್ಕಾರವೆಂದರೆ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ ಹೀಗೆ ಕೆಲ ಮಹನೀಯರನ್ನಷ್ಟೇ ಸಡಗರದಿಂದ ನೆನಪಿಸಿಕೊಂಡೀತು ಎಂದುಕೊಂಡಿದ್ದ ರಾಜಕೀಯ ವಿರೋಧಿಗಳಿಗೆ ಹಾಗೂ ಮೋದಿಯ ಕಟ್ಟರ್ ಬೆಂಬಲಿಗರಿಗೆ ಸಮಾನ ರೀತಿಯಲ್ಲಿ ಆಶ್ಚರ್ಯ ಹುಟ್ಟಿಸಿರುವ ಈ ಹೊಸ ಐಡಿಯಾದ ಜಾಯಮಾನ ಏನಿದ್ದಿರಬಹುದು?


----



ಮೊದಲಿಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ, ನಂತರ ಮಹಾತ್ಮ ಗಾಂಧಿ ಜಯಂತಿ, ಜೆಪಿ ಜನ್ಮದಿನಾಚರಣೆ
ಇದೀಗ ನೆಹರು ಮತ್ತು ಇಂದಿರಾ ಗಾಂಧಿ ಜಯಂತಿ!
ಏನೆಂದರೆ, ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡು ನಾಲ್ಕೈದು ತಿಂಗಳಲ್ಲಿ ಈ ಜಯಂತಿಗಳಿಗೆಲ್ಲ ಹೇಗೆ ಟ್ವಿಸ್ಟ್ ಕೊಡುತ್ತಿದ್ದಾರೆ ನೋಡಿ. ಶಿಕ್ಷಕರ ದಿನಾಚರಣೆಯಲ್ಲಿ ಇಡೀ ದೇಶಾದ್ಯಂತ ಮಕ್ಕಳ ಜತೆ ಸಂವಾದ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರೆ, ಮಹಾತ್ಮ ಗಾಂಧಿ ಜಯಂತಿಯಂದು ತಮ್ಮ ‘ಸ್ವಚ್ಛ ಭಾರತ ಆಂದೋಲನ’ಕ್ಕೆ ಗುರಿಯಾಗಿಸಿಕೊಂಡರು. ಒಂದು ಪೀಳಿಗೆಯನ್ನು ಬಹುವಾಗಿ ಕಾಡಿದ ಮತ್ತು ಪ್ರೇರೇಪಿಸಿದ ಜಯಪ್ರಕಾಶ್ ನಾರಾಯಣ್
ಅವರ ಜಯಂತಿಯಂದು ‘ಸಂಸದ ಆದರ್ಶ ಗ್ರಾಮ ಯೋಜನೆ’ ಪ್ರಕಟಿಸುವ ಮೂಲಕ ಅವರ ಜನ್ಮ ದಿನಾಚರಣೆಗೂ ಹೊಸ
ಆಯಾಮ ಕೊಟ್ಟರು. ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದು, ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಜಯಂತಿಯನ್ನು ಸ್ವಚ್ಛ ಭಾರತ ಆಂದೋಲನ ಉದ್ದೇಶ ಈಡೇರಿಕೆಗೆ ಬಳಸಿಕೊಳ್ಳಲು ಅವರು ಹಿಂಜರಿಯುತ್ತಿಲ್ಲ ಎಂಬುದು! ಇದು ಕಾಂಗ್ರೆಸಿಗರಿಗೆ ಆಶ್ಚರ್ಯ ತರುವುದು ಸಹಜವಾದರೂ ಸ್ವತಃ ಬಿಜೆಪಿಯವರಿಗೆ ಮೋದಿಯ
ನಡೆ ಹುಬ್ಬೇರಿಸುವಂತೆ ಮಾಡಿದೆ. ಮೋದಿ ಎಲ್ಲ ರಾಷ್ಟ್ರೀಯ ನಾಯಕರ ಜಯಂತಿಗಳನ್ನು ಹೈಜಾಕ್ ಮಾಡುತ್ತಿದ್ದಾರೆ. ಆದರೆ
ಅದು ಒಳ್ಳೆಯ ಕೆಲಸಕ್ಕಾಗಿ ಎನ್ನುವುದಕ್ಕಾಗಿ ಅವರ ಈ ನಡೆಗೆ ಸ್ವಾಗತವೂ ದೊರೆಯುತ್ತಿದೆ.
ಅದೇನೆ ಇರಲಿ. ಮೋದಿಯ ಎಷ್ಟೇ ಪ್ರಬಲ ವಿರೋಧಿಗಳಾದರೂ ಸದ್ಯದ ಮಟ್ಟಿಗೆ ಮೋದಿ ಸಾಗುತ್ತಿರುವ ದಿಕ್ಕು ಮತ್ತು ಅವರು ಕೈಗೊಳ್ಳುತ್ತಿರುವ ನಿರ್ಣಯಗಳ ಬಗ್ಗೆ ತೀವ್ರ ಅಭಿಮಾನ ವ್ಯಕ್ತಪಡಿಸದಿದ್ದರೂ, ಪ್ರಬಲ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂಬುದಂತೂ ನಿಜ. ನಾವು ಇಷ್ಟು ದಿನ ಎಲ್ಲ ರಾಷ್ಟ್ರೀಯ ನಾಯಕರ ಜನ್ಮ ದಿನಾಚರಣೆ ಮತ್ತು ಪುಣ್ಯ ತಿಥಿಗಳನ್ನು ಆಚರಿಸಿಕೊಂಡು ಬರುತ್ತಿರುವುದನ್ನು ನೋಡಿದ್ದೇವೆ. ಅದು ತುಂಬಾ ಕ್ಲೀಷೆ ಮತ್ತು ರೂಟಿನ್ ಆಗಿರುವಂಥದ್ದಾಗಿತ್ತು. ಸರ್ಕಾರಿ ನೌಕರರಿಗೆ ಮತ್ತೊಂದು ರಜೆ. ನಾಯಕರಿಗೆ ಒಂದೆಡೆ ಸೇರಿ ಒಂದಿಷ್ಟು ಮಾತುಕತೆಯಾಡಲು ಸಿಗುವ ವೇಳೆ. ಇವಿಷ್ಟು ಬಿಟ್ಟು ಬೇರೇನು ಇತ್ತು ಹೇಳಿ? ಆದರೆ, ಮೋದಿ ಮಾತ್ರ ಜನ್ಮ ದಿನಾಚರಣೆಯ ನೆಪದಲ್ಲಿ ದೇಶಕ್ಕೆ ಒಂದಿಷ್ಟು ಉಪಯೋಗವಾಗುವ ಕೆಲಸ ಮಾಡಲು ಶ್ರೀಸಾಮಾನ್ಯನಿಂದ ಹಿಡಿದು ಎಲ್ಲರೂ ಒಳಗೊಳ್ಳುವಂತೆ ಮಾಡುತ್ತಿದ್ದಾರೆ! ಹಾಗಾಗಿಯೇ ಇದನ್ನು ಮೋದಿ ಅವರ ‘ಜಯಂತಿ ರಾಜಕೀಯ ನಡೆ’ ಎಂದು ವಿಶ್ಲೇಷಿಸಬಹುದೇನೋ?
ಇತ್ತೀಚಿನ ದಿನಗಳಲ್ಲಿ ಎಲ್ಲ ರಾಷ್ಟ್ರೀಯ ನಾಯಕರನ್ನು ಕೆಲವು ಪಕ್ಷಗಳು, ಕೆಲವು ಜಾತಿಗಳು, ಸಮುದಾಯಗಳಿಗೆ ತಮಗೇ ಸಂಬಂಧಿಸಿದ್ದವರು ಎಂಬಂತೆ ವರ್ತಿಸುತ್ತಿವೆ. ಈ ಮಿಥ್ ಅನ್ನು ತೊಡೆದು ಹಾಕಿ, ರಾಷ್ಟ್ರೀಯ ನಾಯಕರು ಯಾರೇ ಆಗಿರಲಿ
ಅವರು ದೇಶದ ಹೆಮ್ಮೆ ಎಂಬ ಪ್ರಜ್ಞೆಯನ್ನು ನಾಜೂಕಾಗಿ ಬಿತ್ತುತ್ತಿದ್ದಾರೆ. ಹಾಗೆ ನೋಡಿದರೆ ಅವರಿಗೂ ಈ ಅನಿವಾರ್ಯತೆ
ಇದೆ. ಒಂದೂ ಕಾಲು ಶತಮಾನ ಇತಿಹಾಸವಿರುವ ಕಾಂಗ್ರೆಸ್ ಗೆ ಸಹಜವಾಗಿಯೇ ನಾಯಕರನ್ನು ಆರಾಧಿಸುವ, ಅವರನ್ನು
ವೈಭವೀಕರಿಸುವ ಅಗಾಧ ಸಾಧ್ಯತೆಗಳಿವೆ. ಅಂಥ ಸಾಧ್ಯತೆಗಳು ಬಿಜೆಪಿಗೆ ಇಲ್ಲ. ದೀನ್ ದಯಾಳ್ ಉಪಾಧ್ಯಾಯ, ಶ್ಯಾಮ್
ಪ್ರಸಾದ್ ಮುಖರ್ಜಿ, ವೀರ ಸಾವರ್ಕರ್ ಇವರನ್ನೆಲ್ಲ ಒಂದು ಹಂತದವರೆಗೆ ರಿಬ್ರಾಂಡ್ ಮಾಡಬಹುದಾದರೂ ಅಲ್ಲಿ ಸೈದಾಟಛಿಂತಿಕ ಚರ್ಚೆಗಳ ಗದ್ದಲವೇ ಹೆಚ್ಚಾಗಿಬಿಡುವ ಅಪಾಯವಿದೆ. ಬಹುಶಃ ಈ ಕಾರಣದಲ್ಲೇ ಮೋದಿ ‘ಎಲ್ಲರನ್ನೂ, ಎಲ್ಲ ವಿಚಾರಧಾರೆಯವರನ್ನೂ ಒಳಗೊಳ್ಳಬಲ್ಲ’ ವ್ಯಕ್ತಿತ್ವಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಇದಕ್ಕೆ ವಿರೋಧಿ ಪಾಳೆಯಕ್ಕಿಂತ ಹೆಚ್ಚಾಗಿ, ಸ್ವಪರಿವಾರದವರ ಪ್ರತಿಕ್ರಿಯೆಗಳು ಹೇಗೆ ಬರಬಹುದು ಎಂಬ ಆಧಾರದಲ್ಲಿಯೇ ಮೋದಿಯವರ ಮುಂದಿನ ‘ಬ್ರಾಂಡಿಂಗ್’ ನೆರವೇರಲಿದೆ.
ಈ ಬ್ರಾಂಡ್ ದರ್ಬಾರ್‌ನಲ್ಲಿ ಮೋದಿ ಚಾಕಚಕ್ಯತೆಯನ್ನು ಗಮನಿಸಬೇಕು. ಒಂದು ವ್ಯಕ್ತಿ ಇಲ್ಲವೇ ವಸ್ತು ಹಲವು ಅಂಶಗಳನ್ನು ಪ್ರತಿನಿಧಿಸುವಂಥದ್ದು. ಅದರಲ್ಲಿ ಕೆಲವು ತಕರಾರಿಗೆ- ವಿವಾದಗಳಿಗೆ ಕಾರಣವಾಗಿದ್ದಿರಬಹುದು. ಆದರೆ ಅದನ್ನೇ ಮುಂದಿರಿಸಿಕೊಂಡು ಆ ವ್ಯಕ್ತಿ-ವಸ್ತುವನ್ನೇ ದೂರ ಮಾಡಿ, ಆ ಮೂಲಕ ಪರೋಕ್ಷವಾಗಿ ಆ ವ್ಯಕ್ತಿ-ವಿಷಯಗಳಲ್ಲಿ ಆಸಕ್ತಿ ಇರುವ ಜನಸಮೂಹದಿಂದಲೂ ದೂರವಾಗಿಬಿಡುವುದು ಬುದಿಟಛಿವಂತಿಕೆ ಅಲ್ಲ ಎಂಬುದನ್ನು ಗುಜರಾತ್‌ನ ವ್ಯಾಪಾರಿ
ಮಿದುಳು ಅರ್ಥಮಾಡಿಕೊಂಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಹಾಗಾಗಿಯೇ ಸೈದಾಟಛಿಂತಿಕವಾಗಿ ಗಾಂಧೀಜಿಯವರನ್ನು ಆರ್
ಎಸ್‌ಎಸ್ ಹಲವು ವಿಚಾರಗಳಲ್ಲಿ ವಿರೋಧಿಸಿಕೊಂಡು ಬಂದಿದ್ದರೂ ಅದೇ ಗಾಂಧಿಯವರ ಜನ್ಮದಿನವನ್ನು ಒಂದಂಶಕ್ಕೆ
ಬ್ರಾಂಡ್ ಮಾಡುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಗಾಂಧೀಜಿಯವರನ್ನು ಸೆಕ್ಯುಲರ್- ಕಮ್ಯುನಲ್ ಚರ್ಚೆಯ
ಚೌಕಟ್ಟಿನಲ್ಲಿಟ್ಟು ಜನ್ಮೇಪಿ ಪರ-ವಿರೋಧ ಮಾಡಿಕೊಂಡಿರಬಹುದು. ಆದರೆ ಸ್ವಚ್ಛತೆ, ಗ್ರಾಮ ಸ್ವರಾಜ್ಯ ಇಂಥ ಕಲ್ಪನೆಗಳೆಲ್ಲ ಕಮ್ಯುನಿಸ್ಟರಿಗೂ ಕೇಸರಿ ಪಡೆಯವರಿಗೂ ಒಟ್ಟೊಟ್ಟಿಗೇ ಒಪ್ಪಿತವಾಗಬಲ್ಲ ಅಂಶ. ಬೇರೆ ಚೌಕಾಶಿ ಏಕೆ, ಗಾಂಧಿ ಎಂದರೆ ಸ್ವಚ್ಛತೆಗೆ ಆದರ್ಶ ಎಂದಿಟ್ಟುಕೊಳ್ಳೋಣ ಎಂಬ ಸರಳ ಸಂದೇಶ ತಲುಪಿಸಿರುವ ಮೋದಿ ಸೆಕ್ಯುಲರ್- ಕಮ್ಯುನಲ್ ಡಿಬೇಟ್‌ನ ಚಕ್ರವ್ಯೆಹದಿಂದ ಹೊರಬಂದು ನಕ್ಕಿದ್ದಾರೆ!
ಮುಂದಿನ ದಿನಗಳಲ್ಲಿ ಮೋದಿ ಇನ್ನಷ್ಟು ಇತಿಹಾಸ ಪುರುಷರನ್ನು ಬ್ರಾಂಡ್ ದರ್ಬಾರಿಗೆ ಸೇರಿಸಿಕೊಂಡಾರು. ಸೈದಾಟಛಿಂತಿಕವಾಗಿ ವಿರೋಧಿ ಗುಂಪಿನಲ್ಲಿರುವ ಇತಿಹಾಸ ಪುರುಷರೂ ಜಯಂತಿ ಸಂಭ್ರಮದ ಪರಿಧಿಗೆ ಬರಬಹುದೇನೋ? ಆದರೆ ಒಂದಂತೂ ನಿಶ್ಚಿತ. ಅಂಥ ಯಾವುದೇ ವ್ಯಕ್ತಿಗಳನ್ನು ಬ್ರಾಂಡ್ ಮಾಡುವಾಗ, ಅವರಲ್ಲಿನ ಯಾವ ವಿಚಾರ ತನ್ನ ಮಾತೃಸಂಸ್ಥೆಯ ವಿಚಾರಗಳಿಗೆ ಸರಿಹೊಂದುವುದೋ, ಅದನ್ನಷ್ಟೇ ವೈಭವೀಕರಿಸುವಕೆಲಸವನ್ನಂತೂಮಾಡಿಯೇ
ಮಾಡುತ್ತಾರೆ.
ಈಗಾಗಿರುವ ಕೆಲವು ಜಯಂತಿಗಳ ಆಚರಣೆಯನ್ನು ಮುಂದಿಟ್ಟುಕೊಂಡು ನೋಡಿದರೆ ಮೋದಿ ಮುಂದೆ ಇನ್ನೂ ಅನೇಕ ರಾಷ್ಟ್ರೀಯ ಹಾಗೂ ಪ್ರಾದೇಶಿಕ ನಾಯಕರ ಜನ್ಮದಿನಾಚರಣೆಗಳನ್ನು ಮತ್ತಷ್ಟು ವೈವಿಧ್ಯದಿಂದ ಆಚರಿಸುವ
ಸಾಧ್ಯತೆಗಳಿವೆ. ಹಾಗೆಂದು ಇವು ಕೇವಲ ಉದಾತ್ತತೆ ಪ್ರತೀಕ ಮಾತ್ರವೇ? ಇಲ್ಲ. ದೀರ್ಘಾವಧಿಯಲ್ಲಿ ಬಿಜೆಪಿಗೆ ಲಾಭ ತರಬಲ್ಲ
ಸಾಧನವನ್ನಾಗಿಯೂ ಇದನ್ನು ಬಳಸಿಕೊಳ್ಳಬಹುದು. ಪ್ರಾದೇಶಿಕವಾಗಿ ತಳ ಊರುವುದಕ್ಕೆ, ಆ ಪ್ರದೇಶದ ಜನರನ್ನು
ತಮ್ಮವರನ್ನಾಗಿಸಿಕೊಳ್ಳುವುದಕ್ಕೆ ಇರುವ ಉತ್ತಮ ಮಾರ್ಗ ಎಂದರೆ ಸ್ಥಳೀಯ ಐಕಾನ್‌ಗಳನ್ನು ಗೌರವಿಸುವುದು. ಉದಾಹರಣೆಗೆ ಕೇರಳದಲ್ಲಿ ನಾರಾಯಣ ಗುರುಗಳ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಅಭಿಯಾನವೊಂದಕ್ಕೆ ಬಳಸಿಕೊಳ್ಳುವ ಯೋಜನೆ ಹಾಕಿಕೊಂಡರೆ ಸಹಜವಾಗಿಯೇ ಬಿಜೆಪಿಗೂ ಸ್ವಲ್ಪಮಟ್ಟದ ಶಹಭಾಸ್‌ಗಿರಿ, ಮೆಚ್ಚುಗೆಗಳು
ಸಂದಾಯವಾಗುತ್ತವೆ. ಹೀಗೆ ಬೇರೆ ಬೇರೆ ವಿಚಾರ ಲಹರಿಯವರನ್ನುಸೀಮಿತ ಚೌಕಟ್ಟಿನಲ್ಲಿಯೇ ತನ್ನವರೆಂದು ಸ್ವೀಕರಿಸಿ, ಅವರ ಜನ್ಮದಿನಗಳಿಗೆ ಅಭಿಯಾನದ ರೂಪ ಕೊಟ್ಟರೂ ಅಷ್ಟರಮಟ್ಟಿಗೆ ಬಿಜೆಪಿಗೆ ಆ ಪ್ರಾದೇಶಿಕ ನೆಲೆಗಳಲ್ಲಿ ಒದಗಬಹುದಾದ ಸ್ವೀಕೃತ ಮನೋಭಾವವೂ ರೂಪುಗೊಳ್ಳುತ್ತದೆ. ಅಂಬೇಡ್ಕರ್, ರವಿಂದ್ರನಾಥ್ ಠಾಗೋರ್, ಜ್ಯೋತಿ ಬಸು, ಸ್ವಾಮಿ ವಿವೇಕಾನಂದ, ಮದರ್ ತೆರೆಸಾ, ಡಾ. ಎಪಿಜೆ ಅಬ್ದುಲ್ ಕಲಾಂ, ಇಂದಿರಾ ಗಾಂಧಿ, ನೆಹರು, ಜೆ.ಎನ್. ಟಾಟಾ, ಗುರು ನಾನಕ್, ಅಬ್ದುಲ್ ಗಫಾರ್ ಖಾನ್, ಬಸವ, ಬುದಟಛಿ, ಕಬೀರ್... ಹೀಗೆ ನಾನಾ ಮೇರು ವ್ಯಕ್ತಿಗಳ ದಿನಾಚರಣೆಯನ್ನು ಅವರ ವ್ಯಕ್ತಿತ್ವದ ಒಂದು ಭಾಗವನ್ನು ಸಮಗ್ರಗೊಳಿಸಿ ರಾಷ್ಟ್ರೀಯ ಹಿತಾಸಕ್ತಿಗೆ ಅನುವಾಗುವಂತೆ ಕಾರ್ಯಕ್ರಮ ರೂಪಿಸಿಕೊಳ್ಳಲು ಮುಂದಾಗಬಹುದು. ಆಗ ಸಹಜವಾಗಿಯೇ ಜನರಲ್ಲೂ ಮೋದಿಯ ಭಿನ್ನತೆಗೆ ಒಂದಿಷ್ಟು ಮೆಚ್ಚುಗೆ ವ್ಯಕ್ತವಾಗಿ ಅದು ಅವರ ಪ್ರತಿನಿಧಿಸುವ ಪಕ್ಷಕ್ಕೂ ಒಳ್ಳೆ ಯ ಮೈಲೆಜ್ ತಂದುಕೊಡಬಲ್ಲದು. ಅದಾಗಲೇ, ಸ್ವತಃ ಶ್ರಮವರಿಯದ ವರ್ಕೊಹಾಲಿಕ್ ಎಂಬ ಇಮೇಜ್ ಪಡೆದುಕೊಂಡಿರುವ ಮೋದಿ, ಆ ವರ್ಚಸ್ಸಿಗೆ ದೀರ್ಘಾವಧಿಯಲ್ಲಿ ನ್ಯಾಯ ದೊರಕಿಸಬೇಕೆಂದರೆ ಅವರೊಂದಿಗಿನ
ಸಂಸದರೂ ಕೆಲಸ ಮಾಡಬೇಕು ತಾನೇ?
ಒಂದಂಶದ ನಿರ್ದಿಷ್ಟ ಉದ್ದೇಶವನ್ನು ಹೊತ್ತ ಮಹಾಪುರುಷರ ಜನ್ಮದಿ ಾಚರಣೆಗಳು ವಾಸ್ತವದಲ್ಲಿ ಸಂಸದರ ಮೇಲೆ ಜವಾಬ್ದಾರಿಯೊಂದನ್ನು ಹೊರೆಸುತ್ತವೆ. ಉದಾಹರಣೆಗೆ, ಮುಂದಿನ ವರ್ಷ ಜಯಪ್ರಕಾಶ ನಾರಾಯಣರ ಜನ್ಮದಿನಾಚರಣೆ ಬರುತ್ತಲೇ ಮಾಧ್ಯಮವು, ಸಂಸದರು ದತ್ತು ತೆಗೆದುಕೊಂಡ ಗ್ರಾಮಗಳ ಸ್ಥಿತಿ ಸುಧಾರಿಸಿದೆಯೇ ಇಲ್ಲವೇ ಎಂಬ ವರದಿ- ವಿಶ್ಲೇಷಣೆಗಳಿಗೆ ಗಮನ ಕೊಡುತ್ತದೆ. ಈ ಬಗೆಯಲ್ಲಿ ಕೆಲವು ಕೆಲಸಗಳನ್ನು ಮಾಡಲೇಬೇಕಾದ ಒತ್ತಡವನ್ನು, ನೆಪ ಹೇಳಲಿಕ್ಕಾಗದ ಪರಿಸ್ಥಿತಿಯನ್ನು ಮೋದಿ ತಮ್ಮ ಸಹೋದ್ಯೋ ಗಿಗಳ ಪಾಲಿಗೆ ನಿರ್ಮಿಸುವ ಬುದಿಟಛಿವಂತ ನಡೆ ಇಟ್ಟಿದ್ದಾರಾ?
ಮೋದಿ ಅವರ ರಾಷ್ಟ್ರೀಯ ನಾಯಕರ ಜನ್ಮದಿನಾಚರಣೆ ಕಾರ್ಯಸೂಚಿಗಳು ಇನ್ನಷ್ಟು ಪ್ರಭಾವಶಾಲಿಯಾಗಬೇಕಾದರೆ
ಅದು ಆ ವರ್ಷಕ್ಕೆ ಮಾತ್ರ ಸೀಮಿತವಾಗಬಾರದು. ಜೆಪಿ ಜಯಂತಿಯಂದು ಘೋಷಿಸಿದ ‘ಸಂಸದ ಆದರ್ಶ ಗ್ರಾಮ
ಯೋಜನೆ’ ಮುಂದಿನ ವರ್ಷ ಬರುವಷ್ಟರಲ್ಲಿ ಮತ್ತೊಂದು ಯೋಜನೆಗೆ ವೇದಿಕೆಯಾಗಬಾರದು. ಈಗ ಆರಂಭಿಸಿದ
ಪ್ರಯತ್ನ ಮುಂದುವರಿಯುತ್ತಲೇ ಇದ್ದರೆ ಅದಕ್ಕೊಂದು ಸಂಪೂರ್ಣತೆ ದಕ್ಕುತ್ತದೆ ಮತ್ತು ಅದು ವಿಸ್ತಾರಗೊಳ್ಳುತ್ತದೆ.
ಯಾಕೆಂದರೆ, ಈ ಹಿಂದಿನ ಸರ್ಕಾರಗಳು ತುಂಬಾ ಉತ್ಸಾಹದಲ್ಲಿ ಯೋಜನೆಗಳನ್ನು ಪ್ರಕಟಿಸುತ್ತಿದ್ದವು ಮತ್ತು ಅಷ್ಟೇ
ಉದಾಸೀನತೆಯಿಂದ ಮರೆಯುತ್ತಿದ್ದವು. ಈ ಪ್ರಕ್ರಿಯೆ ಮತ್ತೆ ಪುನಾರ್ವತನೆಯಾಗುತ್ತಿತ್ತೇ ಹೊರತು ಯೋಜನೆ ಫಲಪ್ರದ
ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮೋದಿ ಅವರು ಅದೇ ರೀತಿ ನಡೆದು ಕೊಂಡರೆ ಅವರು ಈ ಹೊಸ ಪ್ರಯತ್ನಕ್ಕೆ ಅರ್ಥವೇ
ಇರುವುದಿಲ್ಲ. ಹತ್ತರೊಳಗೆ ಹನ್ನೊಂದಾಗುತ್ತದಷ್ಟೇ.
ಚುನಾವಣೆ ವೇಳೆ ಪಕ್ಕಾ ಒಂದು ಪಕ್ಷದ ವಕ್ತಾರ ಹಾಗೂ ಅದು ಸಾರುವ ಸಿದಾಟಛಿಂತದ ಪ್ರಬಲ ಪ್ರತಿಪಾದಕರಂತೆ
ಕಾಣುತ್ತಿದ್ದ ಮೋದಿ, ಪ್ರಧಾನಿಯಾದ ಮೇಲೆ ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾತುಗಳನ್ನಾಡುತ್ತಿದ್ದಾರೆ. ಇದು
ಅವರನ್ನು ವಿರೋಧಿಸುತ್ತ ಬಂದಿದ್ದ ಕೆಲವರಲ್ಲೂ ಒಂದಿಷ್ಟು ಸಹಾನುಭೂತಿಗೆ ಕಾರಣವಾಗಿದೆ. ಆದರೆ, ಒಬ್ಬ ವ್ಯಕ್ತಿಯ
ಅಧಿಕಾರ ವಿಶ್ಲೇಷಣೆಗೆ ಐದಾರು ತಿಂಗಳು ತುಂಬಾ ಚಿಕ್ಕದುಇನ್ನೂ ಒಂದಿಷ್ಟು ಸಮಯ ಕೊಟ್ಟು ನೋಡಿದರೆ ಅವರ
ನಿಜವಾದ ಕಾರ್ಯಸೂಚಿ ಗೋಚರವಾಗಬಹುದು. ಆದರೆ, ಸದ್ಯದ ಮಟ್ಟಿಗೆ ರಾಷ್ಟ್ರೀಯ ನಾಯಕರ ಜನ್ಮ ದಿನಾಚರಣೆ
ಕ್ಲೀಷೆಯನ್ನು ತೊಡೆದು ಹಾಕಿ ಅದಕ್ಕೊಂದು ನವ ಚೈತನ್ಯ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಅದಕ್ಕಾದರೂ ನಾವು ಅವರನ್ನು ಮೆಚ್ಚಲೇಬೇಕು.

(ಈ ಲೇಖನ ಕನ್ನಡಪ್ರಭದ 2014ರ ಅಕ್ಟೋಬರ್ 15 ಸಂಚಿಕೆಯಲ್ಲಿ ಪ್ರಕಟವಾಗಿದೆ)

ಪಾಕಿಸ್ತಾನ: ಕೊನೆಯಿಲ್ಲದ ಕದನದ ಈಗಿನ ತಾರಾಗಣ




ಪಾಕಿಸ್ತಾನದಲ್ಲಿ ಅರಾಜಕತೆ ಎಂಬುದು ಯಾವತ್ತಿಗೂ ಹೊಸ ಸುದ್ದಿ ಅನ್ನಿಸುವುದಿಲ್ಲ. ಪ್ರತಿಬಾರಿಯ ಆಂತರಿಕ ಕಲಹಗಳಲ್ಲಿ ಪಾತ್ರಗಳು ಬದಲಾಗುತ್ತಿರುತ್ತವೆ ಅಷ್ಟೆ. ಈ ಬಾರಿ ಅಲ್ಲಿನ ಮುಖ್ಯಪಾತ್ರಗಳಲ್ಲಿರುವವರು ತಾಹಿರುಲ್ ಖಾದ್ರಿ ಎಂಬ ಧರ್ಮಗುರು, ಇಮ್ರಾನ್ ಖಾನ್ ಎಂಬ ಒಂದು ಕಾಲದ ಕ್ರಿಕೆಟಿಗ ಹಾಗೂ ಈಗಿನ ರಾಜಕಾರಣಿ ಮತ್ತು ನವಾಜ್
ಷರೀಫ್. ಈ ವ್ಯಕ್ತಿಗಳ ಜಾತಕ ಓದುತ್ತ ಪಾಕಿಸ್ತಾನದ ಪ್ರಸ್ತುತ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದು.

ಧರ್ಮಗುರುವಿಗೆ ಅಧಿಕಾರದ ಕನಸು ಬಿದ್ದೊಡೆ...
ಪಾಕ್ ಪ್ರಧಾನಿ ಷರೀಫ್ ಅವರ ಕುರ್ಚಿಗೆ ಸಂಚಕಾರ ತರಲು ಇಮ್ರಾನ್ ಖಾನ್ ಜತೆ ಜಂಟಿ ಕಾರ್ಯಾಚಾರಣೆ ನಡೆಸುತ್ತಿರುವ ತಾಹಿರುಲ್ ಖಾದ್ರಿ ಒಂದು ಕಾಲದಲ್ಲಿ ಷರೀಫ್ ಅವರಿಗೆ ಬೇಕಾದ ವ್ಯಕ್ತಿ! ಷರೀಫ್ ಅವರ ತಂದೆ ಮೊಹಮ್ಮದ್ ಅವರು ಕಬ್ಬಿಣ ಮತ್ತು ಸ್ಟೀಲ್ ಕೈಗಾರಿಕಾ ಸಮೂಹದ ಅಧ್ಯಕ್ಷರಾಗಿದ್ದಾಗ ಆಸ್ಪತ್ರೆ ಮತ್ತು ಫೌಂಡ್ರಿಸ್ ಆವರಣದಲ್ಲಿ ನಿರ್ಮಿಸಲಾಗಿದ್ದ ಮಸೀದಿಗಾಗಿ ಒಬ್ಬ ವಿದ್ವಾಂಸರನ್ನು ಹುಡುಕುತ್ತಿದ್ದರು. ಅವರ ಕಣ್ಣಿಗೆ ಬಿದ್ದಿದ್ದು ಇದೇ ಖಾದ್ರಿ. ಮುಂದೆ ನವಾಜ್ ಷರೀಫ್ ಪಂಜಾಬ್ ಸಚಿವರಾದಾಗ, ಟಿವಿಯಲ್ಲಿ ಖಾದ್ರಿ ಅವರ ಅಧ್ಯಾತ್ಮಿಕ ಕಾರ್ಯಕ್ರಮ ಪ್ರಸಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಎಂದರೆ, ಷರೀಫ್ ಜತೆ ಆ ಮಟ್ಟಿಗಿನ ಸಾಮೀಪ್ಯ ಹೊಂದಿದ್ದ ಖಾದ್ರಿ ಯಾಕೆ ಅವರು ವಿರುದಟಛಿ ತಿರುಗಿ ಬಿದ್ದಿದ್ದಾರೆ? ಇದರಲ್ಲಿ ನಿಜವಾಗಲೂ ಏನಾದರೂ ತಾರ್ಕಿಕ ವಿಚಾರಗಳಿವೆಯಾ? ಮೇಲ್ನೋಟಕ್ಕೆ ಚುನಾಯಿತ ಸರ್ಕಾರದ ವಿರುದಟಛಿದ ‘ದಂಗೆ’ ಎಬ್ಬಿಸುವ ಹುನ್ನಾರದಂತೆ ಕಂಡರೂ ಖಾದ್ರಿ ಅವರ ಹೋರಾಟದಲ್ಲಿ ಸ್ವಲ್ಪವಾದರೂ ಪ್ರಾಮಾಣಿಕತೆಯಿದೆ. ಇದೇ ಮಾತನ್ನು ಇಮ್ರಾನ್ ಖಾನ್ ಅವರಿಗೆ ಅನ್ವಯಿಸುವುದು ಕಷ್ಟ. ಖಾದ್ರಿ ಇಸ್ಲಾಂ ವಿದ್ವಾಂಸರಾದರೂ ಮತಾಂಧರಲ್ಲ. ಇಸ್ಲಾಮ್‌ನ ನಿಜವಾದ ಸಂದೇಶವನ್ನು ಪಾಕ್ ಯುವ ಜನರಿಗೆ ಹೆಚ್ಚು ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದಾರೆ. ಇದರಿಂದಾಗಿಯೇ ಕೆನಡಾದ ‘ಮಾನಸಪುತ್ರ’ರಂತಾಗಿರುವ ಖಾದ್ರಿ ಮಾತಿಗೆ ಪಾಕ್‌ನ ಯುವ ಜನ ಮರಳಾಗಿದ್ದಾರೆ. ಸದಾ ಯುದಟಛಿದ ಭೀತಿಯಲ್ಲಿ, ಅರಾಜಕತೆ ನೆರಳಲ್ಲಿ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ಅಲ್ಲಿನ ಜನರಿಗೆ ಖಾದ್ರಿ ಹೇಳುತ್ತಿರುವ ಮಾತುಗಳು ಮನಸ್ಸಿಗೆ ತಟ್ಟಲಾರಂಭಿಸಿವೆ. ಅವರ ಬೆಂಬಲಕ್ಕಾಗಿ ಬೀದಿಗಿಳಿಯುತ್ತಿದ್ದಾರೆ.
ಇಸ್ಲಾಮ್ ವಿದ್ವಾಂಸ ಎಂಬ ಖ್ಯಾತಿಯಿದ್ದರೂ ಕೂಡಾ ಖಾದ್ರಿಯೇನೂ ‘ಅಧಿಕಾರ ಬೇಡ ಎನ್ನುವ ತ್ಯಾಗಿ’ಯಲ್ಲ. ಈಗಿನ ಅವರ ಹೋರಾಟ ಮೇಲ್ನೋಟಕ್ಕೆ ಭ್ರಷ್ಟ ಹಾಗೂ ಅಕ್ರಮ ಮಾರ್ಗದಿಂದ ಚುನಾಯಿತರಾಗಿರುವ ಸರ್ಕಾರವನ್ನು ಕಿತ್ತೊಗೆಯುವುದು. ಚುನಾವಣೆ ಸುಧಾರಣೆ ತರುವುದು. ಆದರೆ, ಅಂತರಾಳದಲ್ಲಿ ಅವರಿಗೆ ಅಧಿಕಾರದ ದರ್ಬಾರ್ ನಡೆಸುವ ಉಮೇದು ಇದೆ. ಈಗ ಎಷ್ಟೇ ಅವರು ಸೇನೆಯ ಜೊತೆ ನೆಂಟಸ್ತನ ಇಲ್ಲ, ಅಧಿಕಾರದ ವ್ಯಾಮೋಹ ಇಲ್ಲ ಎನ್ನಬಹುದು. ಆದರೆ, ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾಗದು. ಅವರ ಇತಿಹಾಸವನ್ನು ಗಮನಿಸಿದರೆ ಇದನ್ನು ಪುಷ್ಟೀಕರಿಸುತ್ತದೆ. ೧೯೮೧ರಲ್ಲಿ ತೆಹ್ರಿಕ್ ಮಿನ್ಹಾಜುಲ್ಕು ರಾನ್ ಪಕ್ಷ ಕಟ್ಟಿದ್ದರು. ಈ ಪಕ್ಷದ ಉದ್ದೇಶ ನಿಜವಾದ ಪ್ರಜಾಪ್ರಭುತ್ವ, ಆರ್ಥಿಕ ಪ್ರಗತಿ, ಮಾನವ ಹಕ್ಕಗಳ ರಕ್ಷಣೆ,
ನ್ಯಾಯದಾನ, ಮಹಿಳೆ ಮತ್ತು ಅಲ್ಪಸಂಖ್ಯಾತರ ರಕ್ಷಣೆಯಾಗಿತ್ತು. ಆದರೆ, ಅದ್ಯಾಕೋ ಪಾಕ್ ಜನರು ಆಗ ಇವರನ್ನು ನಂಬಲಿಲ್ಲ. ಅದಕ್ಕೂ ಕಾರಣವಿದೆ. ಖಾದ್ರಿ ಅವರು ಸ್ವಲ್ಪ ಉದಾರಿ ಎನ್ನಬಹುದಾದ ಸುನ್ನಿ ಪಂಗಡದ ಬರ್ಲೇವಿ ಒಳಪಂಗಡಕ್ಕೆ ಸೇರಿದವರು. ಇದು ಇತರರು ಅವರನ್ನು ಅನುಮಾನದಿಂದ ನೋಡುವಂತಾಗಲು ಕಾರಣವಾಯಿತು. ೧೯೯೦ ಮತ್ತು ೧೯೯೩ರಲ್ಲಿ ಖಾದ್ರಿ ಅವರ ರಾಜಕೀಯ ಪ್ರಯತ್ನಗಳು ವಿಫಲಗೊಂಡವು. ೧೯೯೫ರಲ್ಲಿ ರಾಜಕೀಯ ತೊರೆದರು. ಆದರೆ, ೧೯೯೯ರಲ್ಲಿ ಜನರಲ್ ಪರ್ವೇಜ್ಮು ಷರಫ್ ಸೇನಾ ಕ್ಷೀಪ್ರ ಕ್ರಾಂತಿಯಲ್ಲಿ ಪಾಕ್ ಅಧ್ಯಕ್ಷರಾದರು. ಆಗ ಅವರೊಂದಿಗೆ ಬೆಳೆದ ಸ್ನೇಹದ ಫಲವಾಗಿ ೨೦೦೨ರಲ್ಲಿ ನ್ಯಾಷನಲ್ ಅಸೆಂಬ್ಲಿಯ ಸದಸ್ಯರಾದರು. ಆಗಲೇ ಖಾದ್ರಿ ಅವರಿಗೆ ಸೇನೆಯ ಒಳ ದಾರಿಗಳು ಗೊತ್ತಾಗಿದ್ದು. ಖಾದ್ರಿಗೆ ಧಾರ್ಮಿಕ ವ್ಯವಹಾರಗಳ ಸಚಿವರಾಗುವ ಬಯಕೆ ಇತ್ತು. ಆದರೆ, ಸಾಧ್ಯವಾಗಲಿಲ್ಲ. ಕೊನೆಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ೨೦೦೫ರಲ್ಲಿ ಕೆನಡಾಕ್ಕೆ ವಲಸೆ ಹೋದರು. ಇದೆಲ್ಲವನ್ನು ಗಮನಿಸದರೆ ಪಾಕ್ ರಾಜಕೀಯ, ಅಧಿಕಾರದ ಪಡಸಾಲೆಯಲ್ಲಿ ‘ಕಾಯಂವಾಸಿ’ಯಾಗುವ ಅವರ ಬಯಕೆ ಇದ್ದೇ ಇದೆ ಎಂಬುದು ವೇದ್ಯ. ಹಾಗಾಗಿ, ಇಮ್ರಾನ್ ಖಾನ್ ಜತೆಗೂಡಿ ಷರೀಫ್ ಅವರ ರಾಜಿನಾಮೆಗೆ ಹೋರಾಟದ ಸ್ವರೂಪ ನೀಡಿದ್ದಾರೆ ಎಂಬ ಆರೋಪಗಳಿವೆ.

ಇಮ್ರಾನ್ ಖಾನ್ ಪಾಕ್‌ನ ಕೇಜ್ರಿವಾಲಾ?
೧೯೯೨ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಇಮ್ರಾನ್ ಖಾನ್. ಅಂದಿನಿಂದ ಈವರೆಗೂ ಪಾಕ್ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ, ಕ್ರಿಕೆಟಿಗರಾಗಿ ಈಗಲೂ ಇಮ್ರಾನ್ ಖಾನ್ ಪಾಕಿಸ್ತಾನದ ಹೀರೋ. ರಾಜಕೀಯದಲ್ಲೂ ಅದೇ ‘ನಾಯಕ’ನಾಗುವ ಹುಮ್ಮಸ್ಸಿನಲ್ಲಿ ಸ್ವಲ್ಪ ಆತುರಕ್ಕೆ ಬಿದ್ದಿದ್ದಾರೆ ಅನ್ನಿಸುತ್ತದೆ. ಒಂದು ರೀತಿಯಲ್ಲಿ ನಮ್ಮ ಅರವಿಂದ್ ಕೇಜ್ರಿವಾಲ್ ಅವರಿಗೂ ಇವರನ್ನು ೋಲಿಸಬಹುದು. ಪಾಕ್‌ನ ನಗರವಾಸಿಗಳ ಬೆಂಬಲ ಇರುವಇಮ್ರಾನ್ ಅವರ ಪಾರ್ಟಿ ಆಫ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ)2೦೧೩ರ ನ್ಯಾಷನಲ್ ಅಸೆಂಬ್ಲಿ ಚುನಾವಣೆಯಲ್ಲಿ ೩೪ ಸ್ಥಾನ ಗೆದ್ದಿದೆ. ಇದೇ ಉತ್ಸಾಹದಲ್ಲಿ ಸೇನೆಯ ಬೆಂಬಲದೊಂದಿಗೆ ಸದ್ಯ ಪಾಕ್‌ನಲ್ಲಿ ಹೋರಾಟಕ್ಕಿಳಿದಿದ್ದಾರೆ. ಆದರೆ, ಅವರ ಈ ನಡೆ ಅವರ ಬೆಂಬಲಿಗರಲ್ಲಿ ಸಮಾಧಾನ ತಂದಿಲ್ಲ. ಇಮ್ರಾನ್ ಖಾನ್ ಅವರ ಹೋರಾಟ ಅರಾಜಕತೆ ಮತ್ತು ಸೇನಾಡಳಿತಕ್ಕೆ ದಾರಿ ಮಾಡಿಕೊಡುತ್ತಿದೆ ಎಂಬುದು ಅವರ ಆರೋಪ. ಆದರೆ, ಇಮ್ರಾನ್ ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಸದ್ಯ ಇಮ್ರಾನ್ ಹೆಗಲ ಮೇಲೆ ಬಂದೂಕು ಇಟ್ಟು ಸೇನೆ ಷರೀಫ್‌ರತ್ತ ಗುಂಡು ಹಾರಿಸುತ್ತಿದೆ. ಖಾದ್ರಿ ಮತ್ತು ಇಮ್ರಾನ್ ಅವರು ಸೇನೆ ಜತೆ ನಂಟಿಲ್ಲ ಎಂದು ಎಷ್ಟೇ ಹೇಳಿದರೂ ಯಾರೂ ನಂಬಲಾರರು. ಯಾಕೆಂದರೆ, ಸದ್ಯದ ರಾಜಕೀಯ ಬಿಕ್ಕಟ್ಟು ಬಗೆಹರಿಸಲು ಅವರು ಸಂಧಾನಕಾರರನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಸೇನಾಧಿಕಾರಿಯನ್ನೇ! ಪಾಕ್ ಸೇನೆಗೂ
ಷರೀಫ್ ತಮ್ಮ ಮೇಲೆ ಸವಾರಿ ಮಾಡುವುದು ಸಹಿಸಿಕೊಳ್ಳಲಾಗುತ್ತಿಲ್ಲ. ಇದು ಈಗಾಗಲೇ ಷರೀಫ್ ಅವರ ಭಾರತದ ಭೇಟಿ ವೇಳೆ ಜಗಜ್ಜಾಹೀರಾಗಿದೆ. ಪ್ರಧಾನಿ ಯಾಗಲೇಬೇಕು ಎಂಬ ಅದಮ್ಯ ಬಯಕೆ ಹೊಂದಿರುವ ಖಾನ್, ೨೦೧೩ರ ಚುನಾವಣೆಯನ್ನು ‘ಫೇಕ್ ಮ್ಯಾಂಡೆಟ್’ ಎನ್ನುತ್ತಾ, ಷರೀಫ್ ಅವರ ರಾಜಿನಾಮೆ ಹಾಗೂ ಹೊಸದಾಗಿ ಚುನಾವಣೆಯ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆಲ್ಲ ತೆರೆಮರೆಯಲ್ಲಿ ಸೇನೆಯ ಕರಾಮತ್ತು ಇದ್ದೇ ಇದೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವು ಸ್ಥಾನಗಳ ಬಗ್ಗೆ ಮರು ಎಣಿಕೆಯನ್ನು ಇಮ್ರಾನ್ ಬಯಸಿದ್ದರು. ಆದರೆ, ಇದು ಸಾಧ್ಯವಾಗಿರಲಿಲ್ಲ. ಇದಕ್ಕೆಲ್ಲ ಕಾರಣ ಷರೀಫ್ ಎಂಬುದು ಅವರ ಗುಮಾನಿ. ಈಗತಮ್ಮ ಸ್ವಹಿತಾಸಕ್ತಿ ಮತ್ತು ಸೇನೆಯ ಆಸಕ್ತಿಗಳೆರಡನ್ನು ಸೇರಿಸಿ ಕೊಂಡು ಷರೀಫ್ ಅವರಿಗೆ ಮಗ್ಗುಲು ಮುಳ್ಳಾಗುತ್ತಿದ್ದಾರೆ.

ಷರೀಫ್‌ಗೆ ಸಾಮ್ರಾಜ್ಯ ಉಳಿಸಿಕೊಳ್ಳುವ ತವಕ 
೨೦೧೩ಕ್ಕೆ ಮುಂಚೆ ಪಾಕ್ ಜನ ಇವರ ಮೇಲಿಟ್ಟಿದ್ದ ವಿಶ್ವಾಸ ಈಗ ಉಳಿದಿಲ್ಲ. ಇದು ಪ್ರಧಾನಿ ಷರೀಫ್ ಅವರ ಸ್ವಯಂಕೃತ ಅಪರಾಧ. ಷರೀಫ್ ಅವರ ಅತಿಯಾದ ಸ್ವಜನ ಪಕ್ಷಪಾತ ಮತ್ತು ಅತಿಯಾದ ಭ್ರಷ್ಟಾಚಾರ ಜನರಲ್ಲಿ ಭ್ರಮನಿರಸನಕ್ಕೆ ಕಾರಣ. ಷರೀಫ್ ಅವರ ನೀತಿ ಯಾವಾಗಲೂ ಬಿಸಿನೆಸ್ ಪರವಾಗಿರುತ್ತ ವೆ ಎಂಬುದು ಗೊತ್ತಿರುವ ಸಂಗತಿ. ಪಾಕಿಸ್ತಾನದಲ್ಲಿರುವ ಸಕ್ಕರೆ, ಉಕ್ಕು ಸೇರಿದಂತೆ ಸುಮಾರು ಕೈಗಾರಿಕೆಗಳು ಇವರು ಮತ್ತು ಇವರ ಸಂಬಂಧಿಕರ ಹಿಡಿತದಲ್ಲಿವೆ. ಹಾಗೆ ನೋಡಿದರೆ ಇಡೀ ಕೈಗಾರಿಕೋದ್ಯಮ ಇವರ ಅಂಗೈಯಲ್ಲಿದೆ ಎಂದರೆ ಉತ್ಪ್ರೇಕ್ಷೆ ಅಲ್ಲ. ಚುನಾವಣೆಯ ಮುಂಚೆ ‘ಅಂಗೈಯಲ್ಲಿ ಆಕಾಶ’ ತೋರಿಸುವ ಭರವಸೆ ನೀಡಿದ್ದ ಷರೀಫ್ ಅದರತ್ತ ಕಿಂಚಿತ್ ಪ್ರಯತ್ನ ಮಾಡಿಲ್ಲ. ಇದುವರೆಗೆ ಒಂದೇ ಒಂದು ಕಾಯ್ದೆಯನ್ನು ಅವರು ಜಾರಿಗೆ ತಂದಿಲ್ಲ. ಅವರ ಆಡಳಿತ ನಿಷ್ಕ್ರಿಯತೆ ಎಷ್ಟಿದೆ ಎಂದರೆ, ಇದುವರೆಗೂ ಪ್ರಮುಖ ಖಾತೆಗಳಿಗೆ ಸಚಿವರನ್ನೇ ನೇಮಿಸಿಲ್ಲ! ಷರೀಫ್ ಅವರ ಸ್ವಜನ ಪಕ್ಷಪಾತಕ್ಕೆ ಮಿತಿಯೇ ಇಲ್ಲ. ಇರುವ ಮಂತ್ರಿಗಳ ಪೈಕಿ ಬಹುತೇಕರು ಅವರ ಸಂಬಂಧಿಕರೇ ಇದ್ದಾರೆ. ಅವರ ವಿರುದಟಛಿ ಭ್ರಷ್ಟಾಚಾರ ಆರೋಪಗಳು ಹೇರಳ. ಎಲ್ಲಕ್ಕಿಂತ ಹೆಚ್ಚಾಗಿ ಸೇನೆಯ ಜತೆ ಷರೀಫ್ ಅವರು ಸಂಘರ್ಷಕ್ಕಿಳಿದಿದ್ದು ಈಗಿನ ಪರಿಸ್ಥಿತಿಗೆ ಕಾರಣ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಷರೀಫ್ ಬಂದಿದ್ದು ಕೂಡಾ ಯಡವಟ್ಟಾಗಿದೆ. ಸದ್ಯಕ್ಕಂತೂ ಅತ್ತ ಸೇನೆಯ ಜತೆಗೂ ಸಂಬಂಧ
ನೆಟ್ಟಗಿಲ್ಲ, ಇತ್ತ ಜನರು ತಮ್ಮ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಂಡಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ ಷರೀಫ್. ಪಾಕ್ ಸಂಸತ್ತು ಷರೀಫ್ ಬೆನ್ನಿಗೆ ನಿಂತಿದೆಯಾದರೂ ಅದು ಎಷ್ಟು ದಿನ ಎಂಬುದು ಯಾರಿಗೂ ಗೊತ್ತಿಲ್ಲ. ಅಲ್ಲದೆ, ಅವರ ಎದುರಾಳಿ ಜನರಲ್ ಪರ್ವೇಜ್ಮು ಷರ‌್ರಫ್ ಕೂಡಾ ಖಾದ್ರಿ ಜೊತೆ ಕೈಜೋಡಿಸಿದ್ದಾರೆ.
------
ಮೂರು ಮುಖ್ಯ ಪಾತ್ರಗಳು ಹೀಗಿರಲಾಗಿ ಪಾಕಿಸ್ತಾನದ ಭವಿಷ್ಯದ ಕುರಿತ ಭರತವಾಕ್ಯ ಏನು? ಉತ್ತರ: ಥರಹೇವಾರಿ ಪಾತ್ರಗಳ ಆಟ ಮತ್ತು ಪಾಕ್ ಸಂಘರ್ಷ ಎರಡಕ್ಕೂಕನ್‌ಕ್ಲೂಷನ್ ಇಲ್ಲ!

(ಈ ಲೇಖನ 10-09-2014ರಲ್ಲಿ ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.)

ಭಾನುವಾರ, ಸೆಪ್ಟೆಂಬರ್ 1, 2013

ಗಜಲ್


ನಿನ್ನ ಈ ಮೌನ ಹೊಮ್ಮಿಸಿದೆ ಅರ್ಥ ನೂರು
ನಿನ್ನ ಈ ಕಣ್ಣ ಕಾಂತೀಯ ಹೊಳಪು ನೂರು

ಅರ್ಥವಾಗದೇ ನನ್ನ ಈ ಹೃದಯದ ತಕರಾರು?
ಕಲೆತರೂ ಕಲಿಯದಂತಿರುವುದು ನಿನ್ನದು ಕಲೆ ನೂರು

ನೀನಾಡುವ ಮಾತಿನೊಳಗೆ ಸಾವಿರ ಚುಕ್ಕಿ, ರೇಖೆ
ಹೇಗೇ ಜೋಡಿಸಿದರೂ ಪ್ರೀತಿಯ ತೇರು ನೂರು

ನಿನ್ನ ಈ ಸ್ನಿಗ್ಧ ನಗೆಗೆ ಅರಳವವು ಮುಂಜಾನೆ ಮೊಗ್ಗಗಳು
ನನಗೇ ನಾನರಿಯುವ, ಬೆಳಕು ಚುಂಬಿಸುವ ದಾರಿ ನೂರು

ಮೌನಕ್ಕೆ ಅರ್ಥ ಕಲ್ಪಿಸಿ ಕಲ್ಪಿಸಿ ಸಾಯುವ ಸಮ್ಮೋಹಿ
ಆದಿ-ಅಂತ್ಯದೊಳಗೆ ಸ್ಥಿತ್ಯಂತರ ಕಾಣುತ್ತಿವೆ ನೂರು

ಪರವಾಗಿಲ್ಲ ಬಿಡು ಕೊನೆಯಾದರೂ ಕಾಯುವೆ ಕರಗದೆ
ದೊರೆತೀತು ನನ್ನ ಕಾಯುವಿಕೆ, ನಿನ್ನ ಮೌನಕೆ ಅರ್ಥ ನೂರು

(published in KP's Saptahikprabha)

ಶನಿವಾರ, ಡಿಸೆಂಬರ್ 24, 2011

ಇದು ಟೇಕನ್ ಫಾರ್ ಗ್ರಾಂಟೆಡ್ ಅಲ್ಲ!


ಟೇಕನ್..  ಹಾಲಿವುಡ್ ನ ಸ್ಟಂಟ್ ಚಿತ್ರಗಳಂತೆ ಭಾಸವಾದರೂ ಒಳಪದುರುಗಳಲ್ಲಿ ಫ್ರಾನ್ಸ್್ನಲ್ಲಿ ನಡೆಯುವ ಹುಡುಗಿಯರ ಕಳ್ಳ ಸಾಗಣೆ ಸಮಸ್ಯೆಯನ್ನು ತುಂಬಾ ಪ್ರಭಾವಿಯಾಗಿ ಚಿತ್ರಿಸಿದೆ. ಈ ಚಿತ್ರದ ಸ್ಟಂಟ್ಗೂ ಒಂದು ಸ್ಟೇಟಸ್ ಇದೆ. 2008ರಲ್ಲಿ ಬಿಡುಗಡೆಯಾದ ಈ ಚಿತ್ರ ಸಮ್ಮಿಶ್ರ ಪ್ರತಿಕ್ರಿಯೆ ದಕ್ಕಿಸಿಕೊಂಡಿತ್ತು. ಹಾಗೆಯೇ ನಿಮಾ೯ಪಕರ ಜೇಬನ್ನು ಕೂಡಾ ಭತಿ೯ ಮಾಡಿತ್ತು ಎಂದು ಬೇರೆ ಹೇಳಬೇಕಿಲ್ಲ.

ಇದೊಂಥರಾ ಅಪ್ಪ-ಮಗಳ ನಡುವಿನ ಬಾಂಧವ್ಯ ಚಿತ್ರ. ಒಬ್ಬ ತಂದೆ ತನ್ನ ಮಕ್ಕಳ ಮೇಲೆ ಎಷ್ಟೊಂದು ಮಮಕಾರ ಇಟ್ಟಿರುತ್ತಾನೆ. ಅವರನ್ನು ಎಂಥ ಸಂದಭ೯ದಲ್ಲೂ ಪ್ರಾಣದ ಹಂಗು ತೊರೆದು ರಕ್ಷಿಸುವ ಹೊಣೆಯನ್ನು ನಿಭಾಯಿಸುತ್ತಾನೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ರಕ್ಷಣೆ ವಿಷಯಕ್ಕೆ ಬಂದಾಗ ಅಪ್ಪ ನಿಜವಾಗಲೂ ರಾಕ್ಷಸನೇ ಸರಿ.

ಕೇವಲ ಸಿಐಎನಿಂದ ನಿವೖತ್ತಿಯಾದ ಏಜೆಂಟನೊಬ್ಬಳ ಮಗಳನ್ನು ಮಾನವ ಕಳ್ಳ ಸಾಗಣೆದಾರರು ಅಪಹರಿಸಿ ಅವಳನ್ನು ಸೂಳೆಗಾರಿಕೆಗೆ ತಳ್ಳುವ ಯತ್ನದ ಕಥೆ ಅಷ್ಟೇ ಅಲ್ಲ ಇದು. ಅಪ್ಪ ಮಗಳ ನಡುವಿನ ನವಿರಾದ ಬಂಧ, ಸಂಬಂಧ, ವಾತ್ಸಲ್ಯವನ್ನು ಕೂಡಾ ವೈಭವೀಕರಿಸುತ್ತಾರೆ ಚಿತ್ರದ ನಿದೇ೯ಶಕ ಪಿರೆ ಮಾರೆಲ್. ಅದರ ಜತೆಗೆ ಫ್ರಾನ್ಸ್್ನಲ್ಲಿ ಅಕ್ರಮ ವಲಸೆಗಾರರಾದ ಅಲ್ಬೆರಿಯನ್ನರು ನಡೆಸುವ ಒತ್ತಾಯ ಸೂಳೆಗಾರಿಕೆಯ ವಾಸ್ತವ ಚಿತ್ರಣವನ್ನು ನೀಡುತ್ತಾರೆ. ಇದರೊಟ್ಟಿಗೆ ಸ್ಥಳೀಯ ಪೊಲೀಸರು ಹೇಗೆ ಶಾಮಿಲಾಗಿರುತ್ತಾರೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ ಮಾರೆಲ್.

ಫ್ರಾನ್ಸ್್ಗೆ ಬರುವ ಹದಿಹರಿಯ ಹುಡಿಗಿಯರನ್ನು ಹೊಂಚು ಹಾಕಿ ಪಟಾಯಿಸಿ ಅವರನ್ನು ಒತ್ತಾಯವಾಗಿ ಸೂಳೆಗಾರಿಕೆಗೆ ನೂಕುವ ಅಲ್ಬೆರಿಯನ್ನರ ದೊಡ್ಡ ಜಾಲವೇ ಕ್ರಿಯಾಶೀಲವಾಗಿರುತ್ತದೆ. ಹಾಗೇ ಅಪಹರಿಸಿದ ಹುಡುಗಿಯರಿಗೆ ಡ್ರಗ್ಸ್್ ನೀಡಿ ಅವರನ್ನು ಅವರ ಅರವಿಗೆ ಬಾರದಂತೆ ಪಾಪದ ಕೂಪಕ್ಕೆ ತಳ್ಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅದೆಷ್ಟೋ ಹಣ್ಣುಮಕ್ಕಳು ಓವರ್್ ಡ್ರಗ್್ನಿಂದ ಸಾವಿಗೀಡಾಗುತ್ತಾರೆ. ಇದೆಲ್ಲವನ್ನೂ ದಾಟಿ ಬದುಕಿದ ಹುಡುಗಿಯರು ಕಾಮಪಿಪಾಸುಗಳ ಹಸಿವೆಗೆ ಆಹಾರವಾಗುತ್ತಾರೆ. ಅರಬ್್ ದೇಶಗಳ ಶ್ರೀಮಂತ ವ್ಯಕ್ತಿಗಳ ಕಾಮತೖಷೆ ತೀರಿಸಲು ಏನೂ ಅರಿಯದ ಮುಗ್ಧ ಹೆಣ್ಣು ಮಕ್ಕಳ ಮಾರಣಹೋಮವೇ ನಡೆಯುತ್ತಿರುತ್ತದೆ. ಇದೆಲ್ಲವನ್ನೂ ಸ್ಥಳೀಯ ಪೊಲೀಸರು ಕಣ್ಣು ಮುಚ್ಚಿ ನೋಡುತ್ತಿರುತ್ತಾರೆ!

ಇಂಥದ್ದೇ ಕಥೆಯನ್ನು ಇಟ್ಟುಕೊಂಡು ಕಮಷಿ೯ಯಲ್ಲಾಗಿ ಕನ್ನಡದಲ್ಲಿ ಯಶಸ್ವಿಯಾದ ಚಿತ್ರವೆಂದರೆ ಸೂರಿ ನಿದೇ೯ಶನದ ಹಾಗೂ ಪುನೀತ್ ರಾಜಕುಮಾರ ಅಭಿನಯದ ಜಾಕಿಯೂ ಒಂದು.

ಅಷ್ಟಕ್ಕೂ ಟೇಕನ್ ಚಿತ್ರದ ಕಥೆ ಏನೆಂದರೆ, ಬ್ರಿಯಾನ್ ಮಿಲ್ಸ್(ಲಿಯಾಂ ನೀಸನ್)ಸಿಐಎ ಏಜೆಂಟ್ ಹುದ್ದೆಯಿಂದ ನಿವೖತ್ತಿಯಾಗುತ್ತಾನೆ. ಈತನಿಗೆ ಮಗಳಿರುತ್ತಾಳೆ. ಆಕೆಯ ಹೆಸರು ಕಿಮ್(ಮ್ಯಾಗಿ ಗ್ರೇಸ್). ಆಕೆಗೆ ಆಗಷ್ಟೇ 17 ವಷ೯ ತುಂಬಿರುತ್ತದೆ. ಆಕೆಯ ತಾಯಿ ಅಂದರೆ ಮಿಲ್ಸ್್ನ ಪ ತ್ನಿ ಲೆನೋರ್(ಫಾಮ್ಕೆ ಜಾನ್ಸನ್) ಮಿಲ್ಸನನ್ನು ತೊರೆದು ಮತ್ತೊಬ್ಬನನ್ನು ವಿವಾಹವಾಗಿರುತ್ತಾಳೆ. ಅದಕ್ಕೂ ಕಾರಣವಿದೆ. ಮಿಲ್ಸ್ ತನ್ನ ಕೆಲಸದ ಮಧ್ಯೆ ಕುಟುಂಬ, ಮಗಳನ್ನು ತುಂಬಾ ನಿಲ೯ಕ್ಷಿಸುತ್ತಾನೆ. ಹಾಗಾಗಿ ಲೆನೋರ್ ಮಿಲ್ಸ್ನನ್ನು ತೊರೆದಿರುತ್ತಾಳೆ. 17ನೇ ವಯಸ್ಸಿಗೆ ಕಾಲಿಟ್ಟ ಕಿಮ್ ತನ್ನ ಗೆಳತಿಯ ಜತೆ ಫ್ರಾನ್ಸ್ಗೆ ರಜೆ ಕಳೆಯಲು ಹೋಗಲು ಇಚ್ಛಿಸುತ್ತಾಳೆ. ಆದರೆ, ಇದಕ್ಕೆ ತಂದೆ ಮಿಲ್ಸ್ ಮೊದಲು ಒಪ್ಪಲ. ಕೊನೆಗೆ ಮೂರು ಷರತ್ತುಗಳೊಂದಿಗೆ ಅನುಮತಿ ನೀಡುತ್ತಾನೆ. ಕಿಮ್ ಫ್ರಾನ್ಸ್್ಗೆ ಹೋದ ನಂತರ ಪ್ರತಿ ರಾತ್ರಿ ಅಪ್ಪ ಮಿಲ್ಸ್್ನಿಗೆ ಫೋನ್್ ಮಾಡಬೇಕೆಂಬುದು ಮೂರು ಷರತ್ತುಗಳಲ್ಲಿ ಒಂದು. ಫ್ರಾನ್ಸ್್ಗೆ ಬರುವ ಕಿಮ್ ಮತ್ತು ಆಕೆಯ ಗೆಳತಿಗೆ ಏರ್್ಪೋಟ್೯ ಹೊರಗೆ ಅಪರಿಚಿತನ ಭೇಟಿಯಾಗುತ್ತದೆ. ಆತನೇ ಹುಡುಗಿಯರ ಕಳ್ಳ ಸಾಗಣೆಯ ಮೊದಲ ಕೊಂಡಿ. ಹೀಗೆ ಕಿಮ್ ಮತ್ತು ಆಕೆಯ ಗೆಳತಿ ಅಪಾಟ್೯ಮೆಂಟ್ ಗೆ ಹೋದ ಸಂಗತಿಯನ್ನು ಆತ ತನ್ನ ಬಾಸ್್ಗೆ ತಿಳಿಸುತ್ತಾನೆ. ಇದೇ ವೇಳೆ, ರಾತ್ರಿ ಕಿಮ್ ಹಾಗೂ ಆಕೆಯ ಗೆಳತಿಯನ್ನು ಸೂಳೆಗಾರಿಕೆಗೆ ನಡೆಸುವವರು ಅಪಹರಿಸುತ್ತಾರೆ. ಬ್ರಿಯಾನ್ ತನ್ನ ಮಗಳನ್ನು ಅಪಹರಣಕಾರರಿಂದ ಹೇಗೆ ಬಿಡಿಸಿಕೊಂಡು ಬರುತ್ತಾನೆ ಎಂಬುದೇ ಕಥೆಯ ತಿರುಳು.

ಇದು ಪಕ್ಕಾ ಸ್ಟಂಟ್್ ಸಿನಿಮಾದಂತೆ ತೋರಿದರೂ ಕೂಡಾ ಚಿತ್ರದ ವೈಭವ ಎದ್ದು ಕಾಣುವುದು ಅದರ ಹಿನ್ನೆಲೆ ಸಂಗೀತ ಮತ್ತು ಸ್ಟಂಟ್್ಗಳಿಂದಾಗಿ. ಚಿತ್ರ ಚಕ ಚಕ ಸಾಗುತ್ತಾ ನೂರು ಕಿ.ಮೀ. ವೇಗದಲ್ಲಿ ಓಡುತ್ತದೆ. ಮುಖ್ಯ ಪಾತ್ರ ಬ್ರಿಯಾನ್ ಕೂಡಾ ಚಿತ್ರದ ಪೂತಿ೯ ಓಡುತ್ತಲೇ ಇರುತ್ತಾರೆ ಎಂಬುದು ಕೂಡಾ ಇದಕ್ಕೆ ರೂಪಕವಾಗಬಹುದು. ಹಾಗೆಯೇ, ಮಗಳ ಗೆಳತಿಯನ್ನು ಓವರ್ ಡ್ರಗ್ ನೀಡಿ ಸಾಯಿಸಿರುವುದನ್ನು ಕಂಡ ಬ್ರಿಯಾನ್ ಕೂಡಾ ನಿಮ್ಮನ್ನು ಕಲಕುತ್ತಾನೆ. ಪ್ರತಿ ಸೀನಿನಲ್ಲೂ ನಿದೇ೯ಶಕರ ಕೈಚಳಕ ಎದ್ದು ಕಾಣುತ್ತದೆ. ಹಾಗಾಗಿಯೇ ಕಥೆ ತುಂಬಾ ಸರಳವಾಗಿದ್ದರೂ ಅದನ್ನು ತೆರೆಗೆ ತಂದ ಪರಿ ಬೆರಗು ಮೂಡಿಸುತ್ತದೆ. ಅತಿಯಾದ ಸ್ಟಂಟ್ ಸಿನಿಮಾ ಆಗಿರುವುದರಿಂದ ನೀವು ಆಳಕ್ಕಿಳಿದು ನೋಡದಿದ್ದರೆ ಮಾಮೂಲಿ ಹಾಲಿವುಡ್ ಸಿನಿಮಾಂತೆ ಭಾಸವಾಗುತ್ತದೆ. ಆದರೆ, ಒಂದು ಸರಳವಾದ ಕಥೆಯನ್ನು ಇಟ್ಟುಕೊಂಡು ಗಂಭೀರವಾದ ಸಮಸ್ಯೆಯನ್ನು ತುಂಬಾ ಚೊಕ್ಕವಾಗಿ ಮನಕ್ಕೆ ಮುಟ್ಟುವಂತೆ ಮಾಡುವ ನಿದೇ೯ಶಕರ ಕರಾಮತ್ತು ಮೆಚ್ಚಲೇ ಬೇಕು.



ಚಿತ್ರ- ಟೇಕನ್, ಭಾಷೆ-ಇಂಗ್ಲಿಷ್, ನಿದೇ೯ಶನ- ಪಿರ್ರೆ ಮರೆಲ್, ತಾರಾಗಣ- ಲಿಯಾಂ ನೀಸನ್, ಫಾಮ್ ಜಾನ್ಸನ್, ಮ್ಯಾಗಿ ಗೇಸ್, ಅಲೆಕ್ಸಾಂಡರ್ ಬ್ರೇಕಲೀ ಇತರರು.

ಶುಕ್ರವಾರ, ಆಗಸ್ಟ್ 26, 2011

ಬದಲಾವಣೆ ರಿಮೋಟ್ ಕಂಟ್ರೋಲ್ಲಾ..?

ನಿರಾಶೆಯಲ್ಲಿ ಮಡುವಿನಲ್ಲಿತ್ತು


ಆ ಸಮುದಾಯ, ಇದು ಇಷ್ಟೇ ಲೈಫು

ಏನೇ ತಿಪ್ಪರಲಾಗ ಹಾಕಿದರೂ

ಬದಲಾಗಲ್ಲ ಸಿಸ್ಟಮ್ಮು

ಟೀವಿ ರಿಮೋಟ್ ಕಂಟ್ರೋಲ್ ಹಿಡಿದುಕೊಂಡೇ

ಹಿಡಿ ಶಾಪ ಹಾಕುತ್ತಿದ್ದರು

ಬದಲಾವಣೆ ಕೂಡಾ ರಿಮೋಟ್

ಹಾಗೇ ಇದ್ದರೆ ಎಷ್ಟು ಚೆನ್ನ

ಎಂದು ಗೊಣಗುತ್ತಿರುವಾಗಲೇ

ಅದ್ಯಾವುದೋ ಹಳ್ಳಿಯಲ್ಲಿ

ಸದ್ದಿಲ್ಲದೇ ಸುಧಾರಿಸಿದ

ಸದ್ದು ಮಾಡುವವರ ಮಧ್ಯೆ

ಕಮ೯ಕ್ಕೆ ತಾರುಣ್ಯ ತಂದುಕೊಟ್ಟ

ಮಹಾತ್ಮನ ಕೋಲು ಹಿಡಿದುಕೊಂಡೇ

ಹೊರಟು ನಿಂತ ಭ್ರಷ್ಟಾಚಾರದ ವಿರುದ್ಧ

ಮತ ಹಾಕುವ ದಿನವನ್ನು ರಜೆಯಾಗಿ

ಅನುಭವಿಸುವ ವಗಾ೯ವಗಿ೯

ಎದ್ದು ನಿಂತಿತ್ತು ಬೆನ್ನು ಹಿಂದೆ, ಮುಂದೆ

ಜೈಕಾರ, ಜೈಘೋಷ

ಅಣ್ಣಾ ಬಂದೇ ಬಿಟ್ಟ, ಗಾಂಧಿ ಪ್ರತಿರೂಪಿ

ತಂದೇ ಬಿಟ್ಟ ಭ್ರಷ್ಟಾಚಾರ ಮುಕ್ತ

ಸ್ವಾತಂತ್ರ್ಯ, ಬದಲಾಗೇ ಹೊಯ್ತು

ಎಂಬ ನಿಟ್ಟಿಸಿರುವ ಬಿಡುವ ಮೊದಲೇ

ಅಲ್ಲಲ್ಲಿ ವೈರುಧ್ಯ, ವೈರತ್ವ ಹೆಡೆ

ಎತ್ತಿ ಕುಕ್ಕುವಾಗಲೇ ಕುಳಿತು ಬಿಟ್ಟ

ಅನ್ನ ನೀರು ಬಿಟ್ಟು ಅಣ್ಣ

ಬದಲಾವಣೆ ರಿಮೋಟ್ ಕಂಟ್ರೋಲ್ಲಾ..?

ಹಾಗಿದ್ದರೆ ಎಷ್ಟು ಚೆನ್ನಣ್ಣ.

ಹೇಗಿದ್ದರೂ ಹಾಗಿದ್ದರೂ

ಏನಂದರೂ ಏನ್ ಅನ್ನದಿದ್ದರೂ

ನಮ್ಮೊಳಗೇ ಕಿಚ್ಚು ಹಚ್ಚಿದ್ದು ಮಾತ್ರ

ನಿಜವಣ್ಣ, ರಜೆಯ ಮಜೆಯಲ್ಲಿದ್ದ

ಮಂದಿಯನ್ನು ಕೊಂಚವಾದರೂ

ಎಬ್ಬಿಸಿದೆಯಲ್ಲ ನಿನಗಿದೋ ಸಲಾಂ





ಗುರುವಾರ, ಆಗಸ್ಟ್ 25, 2011

ಸಾರಿ ಪ್ರೇಮ್... ಯು ಆರ್ ನಾಟ್ ಎ ಜೋಗಿ ಪ್ರೇಮ್!

ತುಂಬಾ ನಿರೀಕ್ಷೆ ಇಟ್ಟುಕೊಂಡು ಜೋಗಯ್ಯ ನೋಡಲು ಹೋಗಿದ್ದೆ. ಆದರೆ, ಸಿನಿಮಾ ನೋಡುತ್ತಿದ್ದ ಅರೆಗಳಿಗೆಯಲ್ಲೇ ನಿರೀಕ್ಷೆಯಲ್ಲಿ ಠುಸ್ ಆಯ್ತು. ಹ್ಯಾಟ್ರಿಕ್ ಸೂಪರ್ ಚಿತ್ರಗಳನ್ನು ನೀಡಿದ್ದ ಪ್ರೇಮ್, ಜೋಗಯ್ಯ ಚಿತ್ರವನ್ನು ಕಥೆಯಿಲ್ಲದೇ ಎಳೆಯಬಾರದಿತ್ತು. ಪ್ರಥಮಾಧ೯ದಲ್ಲಿ ರವಿಶಂಕರ್ ಪಾತ್ರ ನಿಮಗೆ ಕೊಂಚ ರಿಲೀಫ್ ನೀಡುತ್ತದೆ. ಅದೇ ಪಾತ್ರವನ್ನು ದ್ವಿತೀಯಾಧ೯ದಲ್ಲೂ ವಿಸ್ತರಿಸಿದ್ದರೆ ವೀಕ್ಷಕನಿಗೆ ಕೊಂಚವಾದರೂ ನೆಮ್ಮದಿ ಸಿಗುತ್ತಿತ್ತು.


ಅಷ್ಟಕ್ಕೂ ಈ ಚಿತ್ರದ ಕಥೆ ಏನು ಎಂದು ಹುಡುಕಲು ಹೊರಟರೆ ನಿಮ್ಮಂಥ ಮೂಖ೯ರು ಯಾರು ಇಲ್ಲ. ಯಾಕೆಂದರೆ ಕಥೆ ಇಲ್ಲದೆ ಸಿನಿಮಾ ಹೇಗೆ ಮಾಡಬಹುದು ಎಂಬುದನ್ನು ಪ್ರೇಂರಿಂದ ಕಲಿಯಬಹುದು(?). ಕೇವಲ್ ಗಿಮಿಕ್ ಗಳಿಂದ ಚಿತ್ರವನ್ನು ಗೆಲ್ಲಿಸುವುದಾದರೆ ಇಷ್ಟೊತ್ತಿಗೆ ಸುಮಾರು ಚಿತ್ರಗಳು ಗೆಲ್ಲಬೇಕಾಗಿತ್ತು. ಯಾವುದೇ ಗಿಮಿಕ್ ಮಾಡಿದರೂ ಪ್ರೇಕ್ಷಕನನ್ನು ಎರಡು ದಿನಗಳವರೆಗೆ ಚಿತ್ರಮಂದಿರಕ್ಕೆ ಬರವಂತೆ ಮಾಡಬಹುದೇ ಹೊರತು ಪೂತಿ೯ಯಾಗಿಲ್ಲ. ಒಂದು ಚಿತ್ರ ಯಶಸ್ವಿಯಾಗಲು ಗಿಮಿಕ್(ಅತಿಯಾದ ಗಿಮಿಕ್ ಅಲ್ಲ) ಕೂಡಾ ಒಂದು ಅಂಶವಷ್ಟೇ. ಅದನ್ನೇ ನೆಚ್ಚಿಕೊಂಡರೆ ಜೋಗಯ್ಯ ತರಹವಾಗುತ್ತದೆ. ಯಾಕೆಂದರೆ, ಚಿತ್ರ ಬಿಡುಗಡೆಯ ಮುಂಚೆಯೇ ನೀವು ಬೆಟ್ಟದಷ್ಟು ನಿರೀಕ್ಷೆ ಮೂಡಿಸುತ್ತೀರಿ. ಆ ಚಿತ್ರವನ್ನು ನೋಡಿ ಹೊರ ಬಂದಾಗ ಪ್ರೇಕ್ಷಕನ ಮನದಲ್ಲಿ ನಿರೀಕ್ಷೆ ಠುಸ್ಸಾಗಿದ್ದರೆ ಮುಗೀತು ಚಿತ್ರದ ಕಥೆ ಅಲ್ಲಿಗೆ. ನೀವು ಎಷ್ಟು ನಿರೀಕ್ಷೆಯನ್ನು ಹೆಚ್ಚಿಸುತ್ತೀರೋ ಅಷ್ಟೇ ಚೆನ್ನಾಗಿ ಚಿತ್ರವನ್ನು ನಿರೂಪಿಸಬೇಕು. ಆಗಲೇ ಪ್ರೇಕ್ಷಕ ಮರಳಿ ಚಿತ್ರಮಂದಿರಕ್ಕೆ ಹೋಗಲು ಸಾಧ್ಯ. ಆದರೆ, ಪ್ರಚಾರ ಮಾಡಿದಂತೆ ಎಷ್ಟೋ ಸಿನಿಮಾಗಳು ಹಾಗೆ ಇರುವುದೇ ಇಲ್ಲ. ಪ್ರಚಾರ ನಂಬಿ ಚಿತ್ರಮಂದಿರಕ್ಕೆ ಹೋದರೆ ನಿರಾಶೆ ಗ್ಯಾರಂಟಿ. ಜೋಗಯ್ಯ ಕೂಡಾ ಇದೇ ಸಾಲಿಗೆ ಸೇರುತ್ತದೆ.

ಇದರ ಮಧ್ಯೆಯೇ, ಶಿವಣ್ಣ ಜೋಗಯ್ಯದಲ್ಲಿ ಅಚ್ಚರಿ ಮೂಡಿಸುತ್ತಾರೆ. ಅಭಿಯನಕ್ಕೆ ಸಂಬಂಧಿಸಿದಂತೆ ತುಂಬಾ ಸಾಧ್ಯತೆಗಳನ್ನು ಹೊರ ಹಾಕುವುದಕ್ಕೆ ತಮ್ಮಿಂದ ಸಾಧ್ಯ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ. ಚಿತ್ರದಲ್ಲಿ ಅವರು ವೈಸ್ ಮಾಡ್ಯೂಲೇಷನ್ ಗೆ ಪ್ರಯತ್ನಿಸಿದ್ದಾರೆ. ಚಿತ್ರ ನೋಡುವಾಗ ಕೆಲವು ಸನ್ನಿವೇಶಗಳಲ್ಲಿ ಅವರ ಮುಖ ಭಾವ ರಾಜಕುಮಾರ ಅವರನ್ನು ನೆನಪಿಸಿದರೆ ಅದು ಅವರ ಅಭಿನಯಕ್ಕೆ ಸಂದ ಜಯ.

ಇನ್ನು ಚಿತ್ರದ ಹಾಡುಗಳ ವಿಷಯಕ್ಕೆ ಬಂದರೆ ವಿ.ಹರಿಕೖಷ್ಣ ಫುಲ್ ಸ್ಕೋರ್ ಮಾಡುತ್ತಾರೆ. ಅದ್ಭುತ ಎನ್ನುವಂಥ ಟ್ಯೂನ್ ಗಳನ್ನು ಕೊಟ್ಟಿಲ್ಲವಾದರೂ ಇಂಪಾಗಿವೆ. ಮನಸ್ಸಿಗೆ ಹಿಡಿಸುತ್ತವೆ. ಹಾಗೆಯೇ ಹಾಡುಗಳನ್ನು ಚಿತ್ರೀಕರಣ ಮಾಡಿರುವ ಪರಿ ಹಾಗೂ ಅವುಗಳ ಕಲ್ಪನೆಯಲ್ಲಿ ಪ್ರೇಮ್ ಗೆಲ್ಲುತ್ತಾರೆ. ಅದೇ ಕಲ್ಪನೆ, ರೀತಿ, ಕ್ರಮವನ್ನು ಸ್ಕ್ರೀನ್ ಪ್ಲೆ, ಕಥೆ, ನಿದೇ೯ಶನದಲ್ಲಿ ತೋರಿದ್ದರೆ ಜೋಗಯ್ಯ ಅದ್ಭುತ ಚಿತ್ರವಾಗುತ್ತಿತ್ತು. ಆದರೆ, ಪ್ರೇಮ್ ಸಂಪೂಣ೯ವಾಗಿ ಎಡವಿದ್ದಾರೆ. ಅವರಷ್ಟೇ ಎಡುವುದಲ್ಲದೇ ಪ್ರೇಕ್ಷಕರನ್ನು ಕೂಡಾ ಎಡುವಂತೆ ಮಾಡುತ್ತಿದ್ದಾರೆ. ನಾವು ಚಿತ್ರವನ್ನು ಹಾಗೆ ತೆಗೆದಿದ್ದೇವೆ. ಹೀಗೆ ತೆಗಿದಿದ್ದೇವೆ. ಅಷ್ಟೊಂದು ಕಷ್ಟಪಟ್ಟಿದ್ದೇವೆ. ಇಷ್ಟೊಂದು ಕಷ್ಟಪಟ್ಟಿದ್ದೇವೆ ಎಂದು ಟೀವಿಗಳಲ್ಲಿ ಹೇಳುತ್ತಿದ್ದಾರೆ ಪ್ರೇಮ್. ನೀವು ಕಷ್ಟಪಟ್ಟಿದ್ದು ನಿಜವೇ ಇರಬಹುದು. ನಿಮ್ಮ ಕಷ್ಟಕ್ಕೆ ಬಲ, ಫಲ ಸಿಗಬೇಕಿದ್ದರೆ ಚಿತ್ರದ ಒಟ್ಟು ಫಲಿತಾಂಶವನ್ನು ನಿಧ೯ರಿಸುತ್ತದೆ ಎಂಬುದನ್ನು ಮರೆಯಬಾರದು. ಪ್ರೇಮ್ ತುಂಬಾ ಕಷ್ಟಪಟ್ಟಿದ್ದಾರೆಂದು ಎಂದು ನಿಮಗಿರುವ ಅಭಿಮಾನಿಗಳು ಚಿತ್ರಮಂದಿರಕ್ಕೆ ಹೋಗಬಹುದು. ಆದರೆ, ಕೇವಲ ಉತ್ತಮ ಚಿತ್ರಗಳನ್ನು ನೋಡಬೇಕು ಎಂದು ಅಭಿಮಾನ ಇಟ್ಟುಕೊಂಡವರನ್ನು ನೀವು ಚಿತ್ರಮಂದಿರಕ್ಕೆ ಎಳೆಯಲು ಸಾಧ್ಯವಿಲ್ಲ. ಅವರೂ ಬಂದಾಗಲೇ ಚಿತ್ರ ಗೆಲ್ಲೋದು. ಅಂದರೆ, ಒಂದು ಚಿತ್ರ ಗೆಲ್ಲಬೇಕಾದರೆ ಎಲ್ಲ ವಗ೯ದ ಜನರು ಬರವಂತಾಗಬೇಕು. ಬರಬೇಕು. ಆಗಲೇ ಗೆಲವು ಅಲ್ಲವೇ..?

ಜೋಗಯ್ಯ ಇಡೀ ಚಿತ್ರವಾಗಿ ಇಷ್ಟ ಆಗೋದಿಲ್ಲ. ಹಾಡುಗಳಿಗೆ ಇಷ್ಟವಾಗುತ್ತದೆ. ಕೆಲವು ದೖಶ್ಯಗಳಾಗಿ ಇಷ್ಟವಾಗುತ್ತದೆ ಅಷ್ಟೆ. ಬಿಡಿ ಬಿಡಿಯಾಗಿ ಚಿತ್ರ ಇಷ್ಟವಾಗುವುದಾದರೆ ಗೆಲ್ಲವುದು ಹೇಗೆ..? ಚಿತ್ರಕಥೆಯಲ್ಲಿ ಬಿಗುವಿಲ್ಲ. ಶಿವಣ್ಣನ ನೂರನೇ ಚಿತ್ರವಾಗಿರುವುದರಿಂದ ಸಶಕ್ತ ವಿಲನ್ ಕ್ಯಾರೆಕ್ಟರೇ ಇಲ್ಲ!!.

ಇದಿಷ್ಟು ಜೋಗಯ್ಯ ನೋಡಿದ ಮೇಲೆ ನನಗನ್ನಿಸಿದ್ದು. ನನಗೆ ಅನ್ನಿಸಿದ ಹಾಗೆಯೇ ನಿಮಗೆ ಅನ್ನಿಸಬೇಕಿಲ್ಲ. ನಿಮಗೆ ಇಷ್ಟವಾಗಬಹುದು. ಪ್ರೇಮ್ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡು, ನಿರೀಕ್ಷೆ ಇಟ್ಟುಕೊಂಡಿದ್ದರಿಂದ ನನಗೆ ಹಾಗೆ ಅನ್ನಿಸರಬಹುದು ಕೂಡಾ. ಇದು ನನ್ನ ಪ್ರಾಮಾಣಿಕ ಅನಿಸಿಕೆ ಅಷ್ಟೇ.

ಸಾರಿ ಪ್ರೇಮ್... ಯು ಆರ್ ನಾಟ್ ಎ ಜೋಗಿ ಪ್ರೇಮ್!
ಹೀಗೆ ಹೇಳದೇ ಬೇರೆ ದಾರಿ ಇಲ್ಲ.



ಬುಧವಾರ, ಅಕ್ಟೋಬರ್ 27, 2010

ಸಚಿನ್ಮಯ- ಕೇವಲ ದಾಖಲೆಗಾಗಿ ಅಲ್ಲ


ಸಚಿನ್ ತೆಂಡೂಲ್ಕರ್.

ಈ ಹೆಸರೇ ಪ್ರೇರಕ. ಸ್ಪೂರ್ತಿ. ವಿಶ್ವ ಕ್ರಿಕೆಟ್ ನ ಸಾಮ್ರಾಟನ ಬಗ್ಗೆ ಎಷ್ಟೇ ಬರೆದರೂ ಸಾಲದು. ಸಚಿನ್ ಈಗ ಎಲ್ಲ ಪದಗಳನ್ನು ಮೀರಿ ನಿಂತಿದ್ದಾರೆ. ಅವರ ಸಾಧನೆ ಬಣ್ಣಿಸಲು ಪದಗಳು ಸಾಲುವುದಿಲ್ಲ. ಸಚಿನ್ ಬಣ್ಣನೆಗೆ ಯಾವುದೇ ಪದ ಬಳಸಿದರೂ ಆ ಪದ ಅವರ ಸಾಧನೆಯನ್ನು ಪೂರ್ತಿಯಾಗಿ ಪರಿಚಯಿಸುವುದಿಲ್ಲ. ಒಬ್ಬ ವ್ಯಕ್ತಿ ಕ್ರೀಡೆಯಿಂದಲೇ ದೇವರ ಸ್ಥಾನಕ್ಕೇರುತ್ತಾರೆಂದರೆ ಅದು ಸಾಮಾನ್ಯದ ಮಾತೇನು..ಕ್ರೀಡೆಯತ್ತ ಸಚಿನ್ ಅವರಿಗಿರುವ ಬದ್ಧತೆಯನ್ನು ಯಾರು ಪ್ರಶ್ನಿಸಲಾಗದು. ಇದಕ್ಕೆ ಮತ್ತೊಂದು ತಾಜಾ ಉದಾಹರಣೆಯೆಂದರೆ, ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿನ ದ್ವಿಶತಕ. 37ನೇ ವಯಸ್ಸಿನಲ್ಲಿ ಸಚಿನ್ ಇನ್ನು 18ರ ಹರೆಯದ ಹುಡುಗನ ರೀತಿ ಆಡುತ್ತಾರೆಂದರೆ, ಅದು ಅವರ ಸಾಮರ್ಥ್ಯದ ಸಾಕ್ಷಿ. ಸಚಿನ್ ಗೆ ವಯಸ್ಸಾಯಿತು. ಹೀಗೆ ಜರಿದವರಿಗೆ ಅವರು ಬ್ಯಾಟಿಂಗ್ ನಿಂದಲೇ ಉತ್ತರ ನೀಡುತ್ತಾರೆ. ತುಟಿಪಿಟಿಕ್ ಎನ್ನುವುದಿಲ್ಲ. ಈ ಗುಣವೇ ಅವರನ್ನು ವಿಶ್ವ ಕ್ರಿಕೆಟ್ ನ ಅತ್ಯುಚ್ಛ ಸ್ಥಾನಕ್ಕೇರಿಸಿದೆ. ಆನೆ ನಡೆದಿದ್ದೇ ದಾರಿ ಎನ್ನುವಂತೆ ಸಚಿನ್ ಎಂಬ ಅಶ್ವಮೇಧ ಓಟಕ್ಕೆ ಯಾರೂ ಕಡಿವಾಣ ಹಾಕಲು ಸಾಧ್ಯವಿಲ್ಲ. ಅವರ ದಾಖಲೆಗಳನ್ನು ಭವಿಷ್ಯದಲ್ಲಿ ಯಾರಾದರೂ ಮುರಿಯಬಹುದು. ಆದರೆ, ಸದ್ಯಕ್ಕಂತೂ ಸಾಧ್ಯವಿಲ್ಲದ ಮಾತು ಬಿಡಿ. ರನ್ ಗಳ ಶಿಖರ ಏರಿ ಕುಳಿತಿರುವ ಸೂರ್ಯ ಶಿಕಾರಿ ಸಚಿನ್. ಇದಕ್ಕೆ ಅವರು ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ನಲ್ಲಿ ಆಡಿದ ಪರಿಯೇ ಸಾಕ್ಷಿ. ಸಚಿನ್ ಅವರ ಒಂದೊಂದು ಹೊಡೆತಕ್ಕೂ ಚಿನ್ನಸ್ವಾಮಿ ಅಂಗಣದಲ್ಲಿ ಪ್ರೇಕ್ಷರ ಓಹೋ ಎನ್ನುವ ಲಹರಿ. ಅದರೊಳಗೆ ಸಚಿನ್ ಗುಣಗಾನ.ಸಚಿನ್ ಬ್ಯಾಟ್ ಹಿಡಿದು ಕ್ರಿಸ್ ಗೆ ಇಳಿದರೆ ಸಾಕು. ದಾಖಲೆಗಳ ಮೇಲೆ ದಾಖಲೆಗಳು ದಾಖಲಾಗುತ್ತಾ ಹೋಗುತ್ತವೆ. ಟೆಸ್ಟ್ ಕ್ರಿಕೆಟ್ ನಲ್ಲಿ 49 ಶತಕ ಸಿಡಿಸಿರುವ ಈ ಸಿಡಿಲಮರಿಗೆ ಶತಕಗಳ ಅರ್ಧಶತಕಕ್ಕೆ ಇನ್ನೊಂದೇ ಶತಕ ಸಾಕು. ಅದು ಮುಂಬರುವ ನ್ಯೂಜಿಲೆಂಡ್ ಸರಣಿಯಲ್ಲಿ ಈ ಸಾಕಾರುಗೊಳ್ಳತ್ತದೆ. ಇದರಲ್ಲಿ ಅನುಮಾನ ಬೇಡ. ಏಕದಿನ ಪಂದ್ಯಗಳಲ್ಲಿ 46 ಶತಕ ಸಿಡಿಸಿದ್ದಾರೆ. ಇಲ್ಲಿಯೂ ಶತಕಗಳ ಅರ್ಧಶತಕಕ್ಕೆ ಅಡಿ ಇಡಲು ಬಹಳ ದಿನ ಕಾಯಬೇಕಿಲ್ಲ. ಎರಡೂ ಮಾದರಿಯ ಕ್ರಿಕೆಟ್ ನಲ್ಲಿ ಶತಕಗಳ ಶತಕ ದಾಖಲಿಸುವ ಕ್ಷಣಕ್ಕೆ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಕಾದುಕುಳಿತಿದೆ. ಆ ಗಳಿಗೆ ಯಾವಾಗ... ಇನ್ನೇನೂ ದೂರವಿಲ್ಲ ಬಿಡಿ. ಎರಡೂ ಮಾದರಿಯ ಕ್ರಿಕೆಟ್ ನಿಂದ ಸಚಿನ್ ಇದೂವರೆಗೆ ಬರೋಬ್ಬರಿ 31838 ರನ್ ಗಳಿಸಿದ್ದಾರೆ. ಅಬ್ಬಾ... ಸಚಿನ್.ಇತ್ತೀಚೆಗಷ್ಟೇ, ಐಸಿಸಿ ವರ್ಷದ ವ್ಯಕ್ತಿ ಹಾಗೂ ಜನರ ಆಯ್ಕೆ ಪ್ರಶಸ್ತಿಯನ್ನು ಸಚಿನ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇದುವರೆಗೂ ಐಸಿಸಿ ಪ್ರಶಸ್ತಿ ಸಿಕ್ಕಿಲ್ಲವಲ್ಲ ಎಂಬ ಅವರ ಅಭಿಮಾನಿಗಳ ಕೊರಗು ಕೂಡಾ ಕೊನೆಯಾಗಿದೆ. ಈ ಸಂದರ್ಭದಲ್ಲಿ ಅವರು, ಎಲ್ಲಾ ಪ್ರಶಸ್ತಿಗಳಿಗಿಂತ ಜನರ ಆಯ್ಕೆಯ ಪ್ರಶಸ್ತಿ ತುಂಬಾ ಖುಷಿ ಕೊಡುತ್ತದೆ ಎಂದಿರುವುದು ಅವರ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ.ಒಬ್ಬ ವ್ಯಕ್ತಿ ಸುಖಾಸುಮ್ಮನೇ ಉನ್ನತ ಸ್ಥಾನಕ್ಕೇರುವುದಿಲ್ಲ. ಅದರಲ್ಲೂ ಮಹಾತ್ಮನ ಸ್ಥಾನಕ್ಕೇರುವುದೆಂದರೆ ಮನುಷ್ಯ ಸಹಜ ಎಲ್ಲ ಗುಣಧರ್ಮಗಳನ್ನು ಬಿಟ್ಟುಕೊಡಬೇಕು. ಭಾರತದಲ್ಲಿ ಈ ಸ್ಥಾನಕ್ಕೇರಿದವರೆಂದರೆ ಇಬ್ಬರೇ. ಒಬ್ಬರು ಮಹಾತ್ಮ ಗಾಂಧಿಜಿ. ಇನ್ನೊಬ್ಬರು ಸಚಿನ್ ತೆಂಡೂಲ್ಕರ್. ಅದಕ್ಕೆ ಅವರನ್ನು ಕ್ರಿಕೆಟ್ ದೇವರು ಎಂದು ಅಭಿಮಾನಿಗಳು ಕರೆಯುವುದು. ಯಾವುದೇ ಕ್ರಿಕೆಟ್ ನಲ್ಲಿ 30, 32 ವಯಸ್ಸು ಎಂದರೆ ಅದು ನಿವೃತ್ತಿ ವಯಸ್ಸು. ಆದರೆ, ಸಚಿನ್ ಮಾತ್ರ ಹೊರತಾಗಿದ್ದಾರೆ. 37ನೇ ವಯಸ್ಸಿನಲ್ಲೂ ಅವರು ಕ್ರಿಕೆಟ್ ಆಡುವ ಪರಿಯನ್ನು ಗಮನಿಸಿದರೆ ಸಚಿನ್ ಗೆ ಸಚಿನ್ ಸಾಟಿ. ಅವರು ತಮಗೆ ಬೇಕಾಗುವಷ್ಟು ಕ್ರಿಕೆಟ್ ಆಡುವವರು ಎಂಬುದರಲ್ಲಿ ಅನುಮಾನವಿಲ್ಲ. ತಮ್ಮ ಸಮಕಾಲೀನ ಎಲ್ಲ ಬೌಲರ್ ಗಳಿಗೂ ನೀರು ಕುಡಿಸಿರುವ ಸಚಿನ್, ಬ್ಯಾಟಿಂಗ್ ನ ಅದ್ವಿತೀಯ. ಮಹಾನ್ ಕ್ರಿಕೆಟಿಗ ಎಂದು ಹೇಳುವುದು ಕ್ಲಿಷೆಯಷ್ಟೇ. ಸಚಿನ್ ಕೇವಲ ಆಟದಲ್ಲಷ್ಟೇ ಮಾದರಿಯಲ್ಲ. ಒಬ್ಬ ಸೆಲಿಬ್ರಿಟಿ ಹೇಗೆ ಇರಬೇಕು ಎಂಬುದಕ್ಕೂ ಸಚಿನ್ ಮಾದರಿ. ಸಚಿನ್ ಕೇವಲ ದಾಖಲೆಗೋಸ್ಕರ ಆಡುತ್ತಾರೆ. ಅವರಿಗೆ ದೇಶ ಮುಖ್ಯವಲ್ಲ ಎಂದು ವಿರೋಧಿಗಳು ಟೀಕಿಸಬಹುದು. ಆದರೆ, ಇದು ನೂರಕ್ಕೆ ನೂರರಷ್ಟು ಸುಳ್ಳು. ವ್ಯಕ್ತಿಯೊಬ್ಬ ಕೇವಲ ದಾಖಲೆಗಳಿಗೋಸ್ಕರ ಆಡುವುದಾದರೆ, ಕ್ರಿಕೆಟ್ ನಲ್ಲಿ ಇಷ್ಟೊಂದು ವಷ ಆಡಲು ಸಾಧ್ಯವೇ... ಮುಂಬೈ ಮರಾಠಿಗರಿಗೆ ಸೇರಿದ್ದು ಎಂದು ಕಿರಿಕಿರಿ ನಾಯಕ ಬಾಳಾ ಠಾಕ್ರೆಗೆ ತಿರುಗೇಟು ನೀಡಿದ ಸಚಿನ್, ಮುಂಬೈ ಎಲ್ಲರಿಗೂ ಸೇರಿದ್ದು ಎಂದು ಹೇಳುವ ಮೂಲಕ ಭವ್ಯ ಭಾರತದ ಏಕತೆಯನ್ನು ಸಾರಿದ್ದರು. ಅವರ ರಾಷ್ಟ್ರಭಕ್ತಿಗೆ ಇದೊಂದು ಉಕ್ತಿ ಸಾಲದೆ...ಸಚಿನ್ ಬಗ್ಗೆ ಯಾರೇ ಏನೇ ಹೇಳಲಿ. ಅವರೊಬ್ಬ ಅದ್ಭುತ ಕ್ರಿಕೆಟಿಗ ಮತ್ತು ವ್ಯಕ್ತಿ. ಎಲ್ಲ ಕಾಲಕ್ಕೂ ರೋಲ್ ಮಾಡಲ್. ಅವರಿಗೇ ಅವರೇ ಸಾಟಿ.
(ಕನ್ನಡಪ್ರಭದ 19-10-2010ರ ಕ್ರೀಡಾಪ್ರಭ ಸಂಚಿಕೆಯಲ್ಲಿ ಪ್ರಕಟವಾದ ಬರಹ)

ಮಂಗಳವಾರ, ಮಾರ್ಚ್ 9, 2010

ಯಾಕೆಂದರೆ ಅವಳು ಹೆಣ್ಣು

ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದ್ದೇನೆ
ಒಬ್ಬರು ನಾನು ಹೀಗೆ ಇರಬೇಕು ಅಂದ್ರು
ಇನ್ನೊಬ್ಬರು ನಾನು ಹೀಗಿರಬಾರದು ಅಂದ್ರು
ಯಾರೂ ಕೇಳಲಿಲ್ಲ ನಾನ್ ಹೇಗೆ ಇರಬೇಕೆಂದು

ಮೀಸೆ ಮಂದಿ ಅರಿಯಲಿಲ್ಲ
ನನ್ನ ಆಂತಯ೯, ಕೇಳಲಿಲ್ಲ ಬಯಕೆ.
ಹೇರಿದರು ನನ್ನ ಮೇಲೆ ಅವರವರ ಭಾವ.
ತಿಂದುಂಡರು, ತೇಗಿ ಸುಸ್ತಾದರು.
ನನ್ನ ಸುಸ್ತು ಕೇಳಲಿಲ್ಲ, ಅರಿಯಲಿಲ್ಲ

ನಾಲ್ಕು ಗೋಡೆಗಳ ಮಧ್ಯೆ ನಿನ್ನ
ಬಾಳು, ಅಲ್ಲೇ ನಿನ್ನ ಜೀವನ
ಮಕ್ಕಳ ಹೇರು. ಹೊತ್ತೊತ್ತು
ಮಾಡು ಕೂಳು, ಕೇಳಬೇಡ
ಮತ್ತೇನನ್ನು ಯಾಕೆಂದರೆ ನೀನು ಹೆಣ್ಣು

ಇದೆಲ್ಲ ಆಗ...

ಈಗ ಕಾಲ ಉರುಳಿದೆ
ಇತಿಹಾಸದಲ್ಲಿ ಹೂತು ಹೋದವಳೇ
ನಿಮಿ೯ಸುತ್ತಿದ್ದಾಳೆ ಇತಿಹಾಸ
ಸವಾಲಾಗಿದ್ದಾಳೆ ನಾವೇ ಸಮ ಎನ್ನುವರಿಗೇ

ಮೈಲುಗಲ್ಲು ನೆಟ್ಟಿದ್ದಾಳೆ
ನಮ್ಮದೇ ಮೈಲುಗಲ್ಲು ಎನ್ನುವವರ ಮುಂದೆ
ದಾಟಿದ್ದಾಳೆ ಸಂಪ್ರದಾಯ,
ಭವ- ಬಂಧನಗಳನ್ನು ಮೀರಿದ್ದಾಳೆ
ಯಾಕೆಂದರೆ ಅವಳು ಹೆಣ್ಣು.

ಇದು ಈಗ...

ಶುಕ್ರವಾರ, ಜನವರಿ 29, 2010

ಹನಿಮೂನಗೆ ಕಾಶ್ಮೀರಕ್ಕೆ ಬರೋಣ ಕಣೋ...

ಹೇಗಿದ್ದೀಯಾ ಮುದ್ದು?

ನಿನ್ನನ್ನು ಸೇರಿಕೊಳ್ಳುವ ದಿನಗಳು ಸಮೀಪಿಸುತ್ತಿದ್ದಂತೆ ನನ್ನ ಮನಸ್ಸು, ಹೃದಯ ಉಲ್ಲಾಸದಿಂದ ತುಂಬಿ ತುಳುಕುತ್ತಿದೆ. ಉಳಿದಿರುವ ಒಂದು ವಾರ ಕೂಡಾ ಯುಗಯುಗದಂತೆ ಭಾಸವಾಗುತ್ತಿದೆ ಚಿನ್ನು. ನನ್ನ ತರಬೇತಿ ಮುಗಿದಿದೆ. ಈಗೇನಿದ್ದರೂ ಇಡೀ ಕಾಶ್ಮೀರವನ್ನು ಸುತ್ತಾಡಿ ಮರೆಯಲಾಗದ ನೆನಪು, ಅನುಭವವನ್ನು ಹೊತ್ತು ತರುವುದು ಅಷ್ಟೇ ನನ್ನ ಕೆಲಸ. ಆದರೂ ನಿನ್ನ ಸಾನ್ನಿಧ್ಯದಲ್ಲಿ ಸಿಗುವ ಸಂತೋಷ ನನಗೆ ಬೇರಲ್ಲೂ ಸಿಗಲ್ಲ ಕಣೋ. ಹಾಂ.... ಹಾಗೆಂದಕ್ಷಣಾ ನಾನು ಖುಷಿಯಿಂದ ಕಾಶ್ಮೀರ ಸುತ್ತುತ್ತಿದ್ದೇನೆ ಎಂದು ಭಾವಿಸಬೇಡ. ನೀನಲ್ಲದ ಭಾವ ನನ್ನ ಸದಾ ಕೊರೆಯತ್ತಲೇ ಇರುತ್ತದೆ. ನಾವಿಬ್ಬರೂ ಸಪ್ತಪದಿ ತುಳಿದ ನಂತರ ಮತ್ತೆ ಕಾಶ್ಮೀರಕ್ಕೆ ಬರೋಣ. ನಿಜವಾಗಲೂ ಕಾಶ್ಮೀರ "ಪ್ರೇಮಕಾಶ್ಮೀರ" ಕಣೋ ಇದು. ಪ್ರೇಮಿಗಳಿಗಾಗಿಯೇ ಭೂಮಿ ಮೇಲೆ ದೇವರು ಸೃಷ್ಟಿಸಿರುವ ಪ್ರೇಮಲೋಕ. ಆದರೂ, ಈ ಕ್ಷಣದಲ್ಲಿ ನೀನು ನನ್ನ ಬಳಿ ಇಲ್ಲ ಎಂಬುದೇ ನನ್ನ ದುಃಖಕ್ಕೆ ಕಾರಣ. ಚಿನ್ನು.. ಸುಮ್ಮನೇ ಏನೇನೋ ಕಲ್ಪಿಸಿಕೊಂಡು ಭಯಭೀತಗೊಳ್ಳಬೇಡ. ನೀನು ಅಂದುಕೊಂಡ ಹಾಗೆ ನಮ್ಮಪ್ಪ ನಮ್ಮಿಬ್ಬರ "ಅಮರಪ್ರೇಮ"ವನ್ನು ಹಾಳು ಮಾಡಲಾರ. ಯಾಕೆಂದರೆ ನಂಗೆ ಗೊತ್ತು... ನಮ್ಮಪ್ಪ ಒರಟನಂತೆ ಕಂಡರೂ ಹೃದಯ ಬಲು ಮೆದು. ಸಮಾಜಕ್ಕೆ ಹೆದರಿ ಜಾತಿ ಬಗ್ಗೆ ಮಾತನಾಡುತ್ತಾನೇ ಹೊರತು ಅವನೇನೂ ಪ್ರೀತಿಯ ಶತ್ರುವಲ್ಲ. ನಿಂಗೆ ಗೊತ್ತಾ...? ನಾನು ನನ್ನ ಅವ್ವನಿಗಿಂತಲೂ ಹೆಚ್ಚು ಹಚ್ಚಿಕೊಂಡಿದ್ದು ಅಪ್ಪನನ್ನೇ. ಆತ ಎಂದೆಂದಿಗೂ ನನ್ನ ಆಸೆ, ಆಕಾಂಕ್ಷೆಗಳನ್ನು ಭಗ್ನಗೊಳಿಸಲಾರ ಮುದ್ದು. ಧೈರ್ಯವಾಗಿರು. ಈ ಜೀವ ಇರುವುದೇ ನಿನಗಾಗಿ. ನನ್ನನ್ನು ನಾನು ಪ್ರೀತಿಸಿಕೊಳ್ಳುವ ಸಾವಿರ ಪಟ್ಟು ಹೆಚ್ಚು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಮ್ಮಿಬ್ಬರ ಈ ನಿಷ್ಕಲ್ಮಷ ಪ್ರೀತಿಗೆ ಜಾತಿ-ಪಾತಿ ಯಾವ ಲೆಕ್ಕ. ಪ್ರೇಮಿಗಳೆಂದರೇ ಎಲ್ಲ ಲೆಕ್ಕವನ್ನು ಬುಡುಮೇಲು ಮಾಡವವರು ಅಲ್ವಾ...? ಇನ್ನು ಒಂದೇ ಒಂದು ವಾರ. ನಾನು ನಿನ್ನ ತೆಕ್ಕೆಯಲ್ಲಿರುತ್ತೇನೆ. ಅಲ್ಲದೇ, ನೀನೇ ನನಗೆ ಪ್ರಪಂಚ. ನಾನೇ ನಿನಗೆ ಪ್ರಪಂಚ. ಬಾಕೀ ಪ್ರಪಂಚ ಬರೀ ನೆಪ ಮಾತ್ರ. ತಿಳೀತಾ ಕೋತಿ..


-ನಿನ್ನವಳು

ಶನಿವಾರ, ಜನವರಿ 23, 2010

ಜಾತಿಯ ಕೂಪದಲ್ಲಿ ಬೀಳದಿರಲಿ ಪ್ರೀತಿ.....

ಹಾಯ್ ಹೃದಯೇಶ್ವರಿ,


ಈಗೀಗ ಮನಸ್ಸು ಮುಂದಿನದನ್ನು ನೆನೆಸಿಕೊಂಡು ಭಯ ಬೀಳುತ್ತಿದೆ. ಯಾಕೆ ಗೊತ್ತಿಲ್ಲ. ನಮ್ಮಿಬ್ಬರ ಪ್ರೀತಿ ಮದುವೆ ಎಂಬ ಸುಂದರ ಕಲ್ಪನೆಯಲ್ಲಿ ಬಂಧಿಯಾಗುತ್ತದಾ...? ನಾವಿಬ್ಬರೂ ಪ್ರಮಾಣ ಮಾಡಿದಂತೆ ಕೊನೆವರೆಗೂ ಜತೆಯಾಗೇ ಇರುತ್ತೇವೆ..? ಎಂಬ ದುಗುಡ ಕಾಡುತ್ತಿದೆ. ಅಷ್ಟಕ್ಕೂ ಇಂಥ ಅಪಶಕುನ ಪ್ರಶ್ನೆಗಳು ಅದೇಕ ಏಳುತ್ತಿವೆ ಎಂಬುದಕ್ಕೆ ನನ್ನಲ್ಲಿ ಉತ್ತರವಿಲ್ಲ ಜಾಣೆ.

ಯಾರಿಗೆ ಬೇಕು ಈ ಲೋಕ


ಮೋಸಕ್ಕೆ ಇಲ್ಲಿ ಕೈ ಮುಗಿಬೇಕಾ


ಪ್ರೀತಿಯೇ ಹೋದರೂ ಇರಬೇಕಾ..?


ಈ ಹಾಡು ಎಫ್ಎಂನಲ್ಲಿ ಕೇಳುತ್ತಿದ್ದಂತೆ ನಮ್ಮಿಬ್ಬರ ಬಿಡಿಸಲಾಗದ ಈ ಪ್ರೀತಿಯ ಗಂಟನ್ನು ಜಾತಿ ಎಂಬ ಎರಡಕ್ಷರಗಳು ಬಿಸಿಡಿಸಿದರೆ ಎಂಬ ಆತಂಕ ಶುರುವಾಗಿದೆ. ಬಿಡಿಸಿದರೆ ಖಂಡಿತವಾಗಿಯೂ ನಾನು ನಾನಾಗಿಯೇ ಇರಲ್ಲ ಚಿನ್ನು. ಹುಚ್ಚನಾದರೂ ಆದೆ, ವ್ಯಸನಿಯಾದರೂ ಆದೇನು. ಪ್ರೀತಿಯ ವ್ಯಸನಿಯಾದ ಮೇಲೆ ಇದು ಸಹಜ ಎನ್ನುತ್ತಾನೆ ನನ್ನ ಭಗ್ನ ಪ್ರೇಮಿ ಗೆಳೆಯನೊಬ್ಬ. ನಾವು ಭಗ್ನಪ್ರೇಮಿಗಳಾದರೆ...? ಖಂಡಿತ ಹಾಗೆ ಆಗುವುದು ಬೇಡ ಎಂಬ ಹಾರೈಕೆ, ಓಲೈಕೆ ನನ್ನದು. ಆದರೆ, ವಿಧಿಯಾಟ ಯಾರು ಬಲ್ಲರು. ಚಿನ್ನು ಒಂದು ಮಾತು ಹೇಳಲಾ...? ನಾನು ಹುಡುಗನಾದರೂ ನನಗಿಂತ ಧೈರ್ಯ ನಿನಗೇ ಹೆಚ್ಚು. ನಮ್ಮ ಪ್ರೀತಿಯ ಯಶಸ್ಸಿನ ಬಗ್ಗೆ ಹೆಚ್ಚು ಕನಸು ಕಾಣುತ್ತಿರುವಳು ನೀನೇ. ಹೀಗಿದ್ದಾಗ್ಯೂ.. ನಿಮ್ಮಪ್ಪನ ಭಯಂಕರ ಜಾತಿ ಪ್ರೇಮ ನೆನೆದು ನನ್ನ ಚಿಕ್ಕಪುಟ್ಟ ದುಗುಡಗಳು ಬೆಳೆದು ಭೂತಾಕಾರ ಪಡೆಯುತ್ತಿವೆ ಬೇಗ ಬಾ ನೀನು. ಜತೆಗಿದ್ದರೆ ನೀನು ಇಂಥ ದುಗುಡ- ದುಮ್ಮಾನಗಳು ನನ್ನಷ್ಟು ಕಾಡಲಾರವು.


ಇನ್ನೊಂದು ವಿಷಯ ಗೊತ್ತಾ...? ಇಷ್ಟೆಲ್ಲ ಮನಸ್ಸಿನ ಕಿರಿಕಿರಿ ನಡುವೆ ನಾನು ನಿನ್ನೊಂದಿಗೆ ಕಳೆದ ಪ್ರತಿಕ್ಷಣಗಳು ದುಗುಡದ ಮರುಗಳಿಗೆಯಲ್ಲಿ ಉಲ್ಲಾಸಿತಗೊಳಿಸುತ್ತೇವೆ. ಅದೇ ನಿನ್ನ ಶಕ್ತಿ ಹೃದಯೇಶ್ವರಿ. ಅದನ್ನೇ ನಾನು ಮೆಚ್ಚಿ ನಿನ್ನ ಹಿಂದೆ ಬಂದದ್ದು. ಹೊಡೆತ ತಿಂದದ್ದು. ಇದೆಲ್ಲ ನೆನಪಾದಾಗೆಲ್ಲಾ ಒಬ್ಬನೇ ನಗ್ತಾ ಇರುತ್ತೇನೆ. ನಿನ್ನ ಹಾದಿಯನ್ನು ಕಾಯುತ್ತಿರುತ್ತೇನೆ ಎಂಬುದನ್ನು ಮರೆಯಬೇಡ.. ಪ್ಲೀಸ್


ಎಂದೆಂದಿಗೂ ನಿನ್ನವ

ಮಂಗಳವಾರ, ಸೆಪ್ಟೆಂಬರ್ 29, 2009

ಗಜಲ್ ಮತ್ತು ಕವನ

ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ,
ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ

ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು,
ಬಿಕ್ಕಳಿಸಿ, ಬಿಕ್ಕಳಿಸಿ ಅಳುವ ಮುನ್ನ ನೀ ಜಾರಿ ಹೋಗಬೇಡ

ಇರಳು ಕವಿಯಲಿ, ಚಂದ್ರ ಮೂಡಲಿ, ನಕ್ಷತ್ರ ಮಿನುಗಲಿ,
ಕ್ಷೀರಪಥದಲಿ ಮಿಂದೆದ್ದು ಬರುವೆ, ಅಲ್ಲಿವರೆಗೂ ಹೋಗಬೇಡ

ಬೆರಳುಗಳು ಸುಡುತ್ತಿವೆ, ಸಿಗರೇಟಿನ ನಿಗಿ ನಿಗಿ ಬೆಂಕಿಗೆ,
ಚಿಮ್ಮುವ ಹೊಗೆಯಲಿ ನಿನ್ನದೇ ರೂಪ ಬಿಟ್ಟು ಹೋಗಬೇಡ

ದಾರಿ- ದಾರಿ ನಡುವೆ ಕಲ್ಲು ಮುಳ್ಳೇ ಇರಲಿ, ನೀ ಕಾಲ್ ಇಡುವಲ್ಲಿ
ನಾ ಕೈಯಿಡುವೆ, ನೋವು ನನಗಿರಲಿ, ನಲಿವು ನಿನಗಿರಲಿ, ಹೋಗಬೇಡ

ಎದೆಯ ಮೇಲೆ ಕಾಲಿಟ್ಟು, ಒಳಗೆ ಬೆಂಕಿಯಿಟ್ಟು ಹೋಗಲೇಬೇಕೆನ್ನುವಾಗ
ಮರೆಯಬೇಡ, ಕೆಂಪು ಸೂರ್ಯನ ಮೇಲಿಟ್ಟ ಆಣೆ, ನೀ ಹೋಗಬೇಡ

ಕಂಪ್ಯೂಟರ್ ಪರದೆ ತುಂಬೆಲ್ಲಾ ನಿನ್ನದೆ ಬಿಂಬ, ಆದರೂ
ಬೆರಳು 'ಡಿಲಿಟ್ ಕೀ' ಮೇಲೆ ಊರುತ್ತಿದೆ, ತೊರೆದು ಹೋಗಬೇಡ



ಅಲ್ಲಿ- ಇಲ್ಲಿ

ಅಲ್ಲಿ ದ್ವéೇಷವಿದೆ, ರೋಷವಿದೆ
ತಮ್ಮೊಳಗೆ ಹೊಡೆದಾಡಿ ಅಂತ್ಯವಾಗುವ ಆಪಾಯವಿದೆ

ಇಲ್ಲಿ ಸ್ನೇಹವಿದೆ, ಪ್ರೇಮವಿದೆ
ತ್ಯಾಗದ ಆರಿವಿದೆ, ಒಂದುಗೂಡಿಸುವ ಧ್ವನಿಯಿದೆ

ಅಲ್ಲಿ ತಲ್ಲಣವಿದೆ, ತವಕವಿದೆ,
ಕ್ರೂರ ಅಟ್ಟಹಾಸವಿದೆ, ಅದರಲ್ಲೇ ನೆತ್ತರದ ಹಸಿವಿದೆ

ಇಲ್ಲಿ ತಂಪಿದೆ, ತಂಗಾಳಿಯಿದೆ,
ನೊಂದವರಿಗೆ ನೆರವಾಗುವ ನೆರಳಿದೆ, ಒಲವಿದೆ

ಅಲ್ಲಿ ಬಿಸಿಲಿದೆ, ಬವಣೆಯಿದೆ,
ಒಂದಾಗುವವರ ಬೆನ್ನುಬೀಳುವ ಹಿಂಡೇ ಇದೆ

ಇಲ್ಲಿ ಕರುಣೆಯಿದೆ, ಅನುಕಂಪವಿದೆ,
ಒಲ್ಲೆ ಎಂದವರಿಗೂ ಹಿಡಿ ಪ್ರೀತಿ ಕೊಡವವರ ದಂಡೇ ಇದೆ

ಅಲ್ಲಿ- ಇಲ್ಲಿ ಇವೆರಡು ನಮ್ಮೊಳಗಿವೆ,
ಮನಸ್ಸು, ಹೃದಯದೊಳು ಅವಿತಿವೆ.

ಭಾನುವಾರ, ಜೂನ್ 28, 2009

ನಿಶಕ್ತ ಕಾಲುಗಳು

ಚಿಕ್ಕವನಿದ್ದಾಗಲೇ ಮೇಲೆದ್ದ. ಮೇಲದ್ದಾಗಲೇ ಬಿದ್ದ
ಮಕ್ಕಳೇ ದೇವರೆಂದ, ಮಕ್ಕಳಿಗೆ ಇವನೇ ದೆವ್ವೆಂದರು.
ಗೆದ್ದಷ್ಟೇ ಸೋತ. ಸೋತಷ್ಟೇ ಮತ್ತೆ ಚಿಗಿತ.
ಚಿಗಿಯುವಾಗಲೂ, ನೆಗೆಯುವಾಗಲೂ ತಾನೇ ತಾನಾದ.
ಕರಿ ಬಿಳಿ ತೊಗಲಿನ ಮಧ್ಯೆ ಕುಣಿದ, ಕುಪ್ಪಳಿಸಿದಎಲುಬುಗಳು
ಮುರಿಯವಂತೆ ಮೈ ಮಣಿಸಿದ ಕಾಲ್ ಕುಣಿಸಿದ,
ದನಿ ಎತ್ತರಿಸಿ, ತಗ್ಗಿಸಿದ ಪ್ರತಿ ಏರಿಳಿತದಲ್ಲೂ
ನೋವು-ನಲಿವು ನಗಿಸಿದ ಪಾಪ್ ಎಂದು ಮೂಗು ಮುರಿಯೋರೋಮೂಗ್
ಮೇಲೆ ಬೆರಳಿಟ್ಟರು, ಕಣ್ಣೀರಿಟ್ಟರು
ಸರ ಸರ ಸರಿದಾಡುವ, ಹರಿದಾಡುವ ಕಾಲುಗಳಿಗೆ ಕಣ್, ಮನ ಸೋತರು.
ಈಗ ಕಾಲುಗಳೇ ನಿತ್ರಾಣ, ನಿಶಕ್ತ ಹಾಡುವ ರಾಗ, ನಿರಾಗ,
ಕೇಳುವಗಡಿ-ಭಾಷೆ ಬೇಧಿಸಿ, ರಾಗ-ದ್ವೇಷ ಸರಿಸಿ ನಾದ ಹರಿಸಿದ.
ಕೊನೆಗೇ ತಾನೇ ನಿನಾದನಾದ.
ನನ್ನ ಕತ್ತರಿಸಿದರೂ ಹರಿಯೋದುಕೆಂಪ ರಕ್ತ, ಕರಿಯಲ್ಲ
ಎನ್ನುತ್ತಲೇ ಬಿಳಿ ಚರ್ಮಕ್ಕೆ ಮನಸೋತ ಬಣ್ಣ ಬಲಾಯಿಸಿದ
ಬಣ್ಣವೇನೋ ಬದಲಾಯಿತು. ಮನಸ್ಸು?