ಬಾಹ್ಯಾಕಾಶ ಯಾನ ಕೈಗೊಳ್ಳಲಿರುವ ರಿಚರ್ಡ್ ಬ್ರಾನ್ಸನ್ ನೇತೃತ್ವದ ತಂಡದಲ್ಲಿಭಾರತೀಯ ಸಂಜಾತೆ, 34 ವರ್ಷದ ಸಿರಿಶಾ ಬಾಂಡ್ಲಾಇರುವುದು ಭಾರತೀಯರಾದ ನಮಗೆ ಹೆಮ್ಮೆ.
ಮಲ್ಲಿಕಾರ್ಜುನ ತಿಪ್ಪಾರ
ಭಾನುವಾರ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿರುವ ಭಾರತೀಯ ಸಂಜಾತೆ ಅಮೆರಿಕನ್ ಸಿರಿಶಾ ಬಾಂಡ್ಲಾಅವರ ವಿಷಯದಲ್ಲಿ ‘ಕನಸು ಕಂಡರಷ್ಟೇ ಅದನ್ನು ಸಾಕಾರಗೊಳಿಸುವುದು ಸಾಧ್ಯ’ ಎಂಬ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಉಕ್ತಿ ಅಕ್ಷ ರಶಃ ನಿಜವಾಗಿದೆ!
ಕಂಡ ಕನಸನ್ನು ಬೆನ್ನಟ್ಟಿ ಅದನ್ನು ನಿಜವಾಗಿಸುವ ಪ್ರಯತ್ನದ ಅನುಭವ ಕೊಡುವ ಥ್ರಿಲ್ ಬೇರೆ ಯಾವುದರಿಂದಲೂ ದೊರೆಯಲು ಸಾಧ್ಯವಿಲ್ಲ. ಅಮೆರಿಕದ ಬಾಹ್ಯಾಕಾಶದ ಚಟುವಟಿಕೆಗಳ ಕೇಂದ್ರ ಸ್ಥಾನ ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್ ಸಮೀಪದ ಹೂಸ್ಟನ್‌ನಲ್ಲಿ ಆಡಿ ಬೆಳೆದ ಹುಡುಗಿ ಗಗನಯಾತ್ರಿಯಾಗುವ ಕನಸು ಕಾಣುವುದು ಸಾಮಾನ್ಯ. ಆದರೆ, ಆ ಕನಸನ್ನು ಬೆಂಬತ್ತಿ ಅದನ್ನು ನನಸಾಗಿಸಿಕೊಳ್ಳುವ ಗುಣ ಸಿರಿಶಾ ಅವರಿಗೆ ಚಿಕ್ಕಂದಿನಿಂದಲೇ ಇತ್ತು. ನಾಸಾದಲ್ಲಿಗಗನಯಾತ್ರಿಯಾಗುವ ಕನಸು ಕಂಡರು. ಆದರೆ, ದೃಷ್ಟಿ ದೋಷದಿಂದಾಗಿ ಪೈಲಟ್ ಅಥವಾ ಗಗನಯಾತ್ರಿಧಿಯಾಗುವ ಅರ್ಹತೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಏರ್‌ಫೋರ್ಸ್ ಮೂಲಕ ನಾಸಾ ಕದ ತಟ್ಟುವ ಕನಸು ಕೈಗೂಡಲಿಲ್ಲ. ಆದರೇನಂತೆ, ಒಂದಿಲ್ಲಒಂದು ದಿನ ಬಾಹ್ಯಾಕಾಶಕ್ಕೆ ನೆಗೆದೇ ನೆಗೆಯುತ್ತೇನೆ ಎಂಬ ಛಲದಲ್ಲಿಯಾವುದೇ ಕೊರತೆ ಇರಲಿಲ್ಲ. ಕಂಡ ಕನಸನ್ನು ನಿಜವಾಗಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಅವರು ಬಿಡಲಿಲ್ಲ. ಅದಕ್ಕೀಗ ಫಲ ದೊರೆಯುತ್ತಿದೆ. ಅಗತ್ಯ ವಿದ್ಯಾಭ್ಯಾಸವನ್ನು ಪೂರೈಸಿಕೊಂಡ ಅವರೀಗ ತಮ್ಮ ಕನಸನ್ನು ನಿಜವಾಗಿಸಿಕೊಧಿಳ್ಳುತ್ತಿಧಿದ್ದಾರೆ; ಬಾಹ್ಯಾಕಾಶಕ್ಕೆ ಕಾಲಿಡುತ್ತಿರುವ ನಾಲ್ಕನೇ ಭಾರತೀಯ ಸಂಜಾತೆ ಎಂಬ ಕೀರ್ತಿಗೆ ಪಾತ್ರರಾಗುತ್ತಿದ್ದಾರೆ.
ನಾಸಾ ಗಗನಯಾತ್ರಿಯಾಗಿದ್ದ ಕಲ್ಪನಾ ಚಾವ್ಲಾಅವರು 2003ರಲ್ಲಿಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿಭೂಮಿಗೆ ಮರಳುವಾಗ ದುರ್ಘಟನೆ ಸಂಭವಿಸಿ ಮೃತಧಿರಾಗಿದ್ದರು. ಇದಕ್ಕೂ ಮೊದಲ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಇಂಡಿಯನ್. ಮತ್ತೊಬ್ಬರು ಭಾರತೀಯ ಮೂಲದ ಸುನೀತಾ ವಿಲಯಮ್ಸ್. ಸಿರಿಶಾ ಬಾಹ್ಯಾಕಾಶಕ್ಕೆ ತಲುಪಿದರೆ ಈ ವರೆಗೆ ಭಾರತ ಮೂಲದ ನಾಲ್ವರು ಇಂಥ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ. ಸಿರಿಶಾ ಬಾಹ್ಯಾಕಾಶ ಕನಸಿಗೆ ಪ್ರೇರಣೆಯಾದವರು ರಾಕೇಶ್ ಶರ್ಮಾ!
ಬಾಹ್ಯಾಕಾಶಕ್ಕೆ ತೆರಳಲಿರುವ ವರ್ಜಿನ್ ಸಂಸ್ಥಾಪಕ ಸರ್ ರಿಚರ್ಡ್ ಬ್ರಾನ್ಸನ್ ನೇತೃತ್ವದ ತಂಡದಲ್ಲಿಒಟ್ಟು ಆರು ಜನರಿದ್ದು, ರಿಚರ್ಡ್ ಬ್ರಾನ್ಸ್‌ನ ಗಗನಯಾತ್ರಿ 001 ಆದರೆ ಸಿರಿಶಾ ಗಗನಯಾತ್ರಿ 004. ಇವರ ಜೊತೆಗೆ, ಮುಖ್ಯ ಗಗನಯಾತ್ರಿ ಬೆಥ್ ಮೋಸೆಸ್(ಗಗನಯಾತ್ರಿ 002), ಮುಖ್ಯ ಕಾರ್ಯಾಚರಣೆ ಎಂಜಿನಿಯರ್ ಕೊಲಿನ್ ಬೆನ್ನೆಟ್(ಗಗನಯಾತ್ರಿ 003) ಹಾಗೂ ಡೇವ್ ಮ್ಯಾಕೆ ಮತ್ತು ಮಸೂಚಿ ಇಬ್ಬರು ಪೈಲಟ್‌ಗಳಿದ್ದಾರೆ. ಈ ಆರು ಜನರನ್ನು ಹೊತ್ತ ವರ್ಜಿನ್ ಗ್ಯಾಲಕ್ಟಿಕ್ ವಿಎಸ್‌ಎಸ್ ಯೂನಿಟಿ ಗಗನ ನೌಕೆ ಭಾನುವಾರ ನ್ಯೂ ಮೆಕ್ಸಿಕೊದಿಂದ ಬಾಹ್ಯಾಕಾಶಕ್ಕೆ ಪ್ರಯಾಣ ಆರಂಭಿಸಲಿದೆ. ಇದರಲ್ಲಿಕಂಪನಿಯ ಮಾಲೀಕ ಬ್ರಾನ್ಸನ್ ಅವರದ್ದು ‘ಗ್ರಾಹಕರ ಬಾಹ್ಯಾಕಾಶ ಹಾರಾಟದ ಅನುಭವವ ಮೌಲ್ಯಮಾಪನ’ ಮಾಡುವ ಜವಾಬ್ದಾರಿಯಾದರೆ, ಏರೋನಾಟಿಕಲ್ ಎಂಜಿನಿಯರ್ ಆಗಿರುವ ಸಿರಿಶಾ ಅವರದ್ದು ‘ಸಂಶೋಧಕರ ಅನುಭವ’ವನ್ನು ಕಟ್ಟಿಕೊಡುವ ಹೊಣೆಯನ್ನ ಹೊತ್ತುಕೊಡಿದ್ದಾರೆ. ಬೆಳಕಿನ ವೇಗಕ್ಕಿಂತಲೂ ಮೂರುವರೆ ಪಟ್ಟು ವೇಗದಲ್ಲಿಈ ಸ್ಪೇಸ್ ಪ್ಲೇನ್ ಹಾರಲಿದೆ.
ಬ್ರಾನ್ಸ್‌ನ ಒಡೆತನದ ‘ವರ್ಜಿನ್ ಗ್ಯಾಲಕ್ಟಿಕ್’ನಲ್ಲಿ ಸರಕಾರಕ್ಕೆ ಸಂಬಂಧಿಸಿದ ವ್ಯವಹಾರ ವಿಭಾಗ ಮತ್ತು ಸಂಶೋಧನಾ ಕಾರ್ಯಚರಣೆಗಳ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯಧಿನಿರ್ವಧಿಹಿಸುತ್ತಿದ್ದಾರೆ. ಆಂಧ್ರದ ಗುಂಟೂರು ಜಿಲ್ಲೆಧಿಯಲ್ಲಿ1988ರಲ್ಲಿಸಿರಿಶಾ ಜನಿಸಿದರು. ತಂದೆ ಕೃಷಿ ವಿಜ್ಞಾನಿ ಡಾ.ಮುರಳಿ, ತಾಯಿ ಅನುರಾಧಾ. ಸಿರಿಶಾಗೆ ನಾಲ್ಕು ವರ್ಷವಿದ್ದಾಗ ಅವರ ಕುಟುಂಬವು ಅಮೆರಿಕದ ಹೂಸ್ಟನ್, ಟೆಕ್ಸಾಸ್‌ಗೆ ಸ್ಥಳಾಂತಧಿರಗೊಂಡಿತು. ಸದ್ಯ ವಾಷಿಂಗ್ಟನ್‌ನಲ್ಲಿವಾಸವಾಗಿದ್ದಾರೆ. ಟೆಕ್ಸಾಸ್‌ನ ಸ್ಥಳೀಯ ಶಾಲೆಯಲ್ಲಿಶಿಕ್ಷ ಣ ಪೂರೈಸಿದ ಬಳಿಕ 2006ರಲ್ಲಿಸಿರಿಶಾ ಪರ್ಡೂ್ಯ ವಿವಿ ಸೇರಿದರು. ಏರೋನಾಟಿಕಲ್, ಏರೋ ಸ್ಪೇಸ್ ಮತ್ತು ಆಸ್ಟ್ರೋನಾಟಿಕಲ್ ಎಂಜಿನಿಧಿಯರಿಂಗ್ ಪದವಿಯನ್ನು 2011ರಲ್ಲಿಪಡೆದುಕೊಂಡರು. 2015ರಲ್ಲಿಜಾರ್ಜಿಯಾ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಬಿಸಿನೆಸ್ ಅಡ್ಮಿನಿಸ್ಪ್ರೇಷನ್‌ನಲ್ಲಿಸ್ನಾತಕೋತ್ತರ ಪದವಿಯನ್ನು ಗಳಿಸಿಕೊಂಡರು.
ಸಿರಿಶಾ ಅವರು ಶಿಕ್ಷ ಣದ ಜೊತೆ ಜತೆಗೆಯೇ 2012ರಲ್ಲಿಕಮರ್ಷಿಯಲ್ ಸ್ಪೇಸ್‌ಫ್ಲೈಟ್ ಫೆಡರೇಷನ್‌ನಲ್ಲಿಅಸೋಸಿಯೇಟ್ ಡೈರೆಕ್ಟರ್ ಆಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಬಹುಶಃ 2015ರ ನಂತರ ಅವರು ಕನಸು ಕೈಗೂಡುವ ದಿನಗಳ ಶುರುವಾದವು ಎನ್ನಬಹುದು! ಯಾಕೆಂದರೆ, 2015ರಲ್ಲಿಅವರು ವರ್ಜಿನ್ ಗ್ಯಾಲಕ್ಟಿಕ್ ಕಂಪನಿ ಸೇರಿ, 2020ರವರೆಗೂ ವ್ಯವಹಾರ ಅಭಿವೃದ್ಧಿ ಮತ್ತು ಸರಕಾರಿ ವ್ಯವಹಾರಗಳ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ಬಳಿಕ ಅವರು ವರ್ಜಿನ್ ಆರ್ಬಿಟ್‌ನಲ್ಲಿವಾಷಿಂಗ್ಟನ್ ಆಪರೇಷನ್‌ನ ಡೈರೆಕ್ಟರ್ ಆಗಿದ್ದರು.
2021ರಿಂದ ಸಿರಿಶಾ ವರ್ಜಿನ್ ಗ್ಯಾಲಕ್ಟಿಕ್‌ನ ಸರಕಾರ ವ್ಯವಹಾರಗಳ ಉಪಾಧ್ಯಕ್ಷ ರಾಗಿ ಬಡ್ತಿ ಪಡೆದುಕೊಂಡರು. ವರ್ಜಿನ್ ಗ್ಯಾಲಕ್ಟಿಕ್ ಎನ್ನುವುದು ರಿಚರ್ಡ್ ಬ್ರಾನ್ಸನ್ ಅವರು ಸ್ಥಾಪಿಸಿದ ಅಮೆರಿಕನ್ ಸ್ಪೇಸ್‌ಕ್ರಾಫ್ಟ್ ಕಂಪನಿಯಾಗಿದೆ. ಬಾಹ್ಯಾಕಾಶ ಪ್ರವಾಸೋದ್ಯಮ ಹಿನ್ನೆಲೆಯಲ್ಲಿವರ್ಜನ್ ಕಂಪನಿ ಕೈಗೊಂಡಿರುವ ಬಾಹ್ಯಾಕಾಶದಂಚಿನ ಪಯಣವು ಮೈಲುಗಲ್ಲಾಗಲಿದೆ. ಆ ಐತಿಹಾಸಿಕ ಪ್ರಯತ್ನದಲ್ಲಿಭಾರತೀಯ ಸಂಜಾತೆಯೊಬ್ಬಳು ಭಾಗಿಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಭೂಮಿಯಿಂದ ಮೂರು ಲಕ್ಷ ಅಡಿ ಎತ್ತರದಲ್ಲಿಹಾರಾಟ ನಡೆಸಲಿರುವ ಸಿರಿಶಾಗೆ ಅಮ್ಮ ಮಾಡುವ ಊಟ ತಂಬ ಇಷ್ಟ. ಹಾಗಂತಲೇ ಅವರ ತಾಯಿ, ಫೇವರಿಟ್ ಮಟನ್ ಬಿರಿಯಾನಿ ಮಾಡಿಕೊಂಡು ಬಂದಿಧಿದ್ದರಂತೆ. ಅವರಿಗೆ ಆಂಧ್ರದ ವಿಶಿಷ್ಟ ‘ಪಪ್ಪು’(ಅನ್ನ) ತುಂಬ ಇಷ್ಟ. ಬಾಹ್ಯಾಕಾಶದಿಂದ ಮರಳಿದ ಬಳಿಕ ಅಮ್ಮನ ಕೈಯಿಂದ ಮಾಡಿದ ‘ಪಪ್ಪು’ ತಿನ್ನವ ಬಯಕೆಯನ್ಯೂ ಹೊಂದಿದ್ದಾರೆ.
ರಿಚರ್ಡ್ ಬ್ರಾನ್ಸನ್ ಬಳಿಕ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೂಸ್ ಕೂಡ ಜುಲೈ 20ರಂದು ಬ್ಲೂಒರಿಜಿನ್ ಕಂಪನಿಯ ನ್ಯೂ ಶೇಪರ್ಡ್ ಮೂಲಕ ಬಾಹ್ಯಾಕಾಶ ಯಾನ ಕೈಗೊಳ್ಳಲಿದ್ದಾರೆ. ಜಗತ್ತಿನ ಇಬ್ಬರು ಶ್ರೀಮಂತ ಉದ್ದಿಮೆದಾರರು ನಡೆಸುತ್ತಿರುವ ಈ ಯಾನವು ಮುಂಬರುವ ದಿನಗಳಲ್ಲಿಹೊಸ ‘ಉದ್ಯಮ ಸ್ಥಾಪನೆ’ಗೂ ಕಾರಣವಾಗಬಹುದು!
ಈ ಎಲ್ಲಕಾರಣಗಳಿಂದಾಗಿಯೇ ಖಾಸಗಿ ಬಾಹ್ಯಾಕಾಶ ಯಾನ ಹೆಚ್ಚು ಚರ್ಚಿತವಾಗುತ್ತಿದೆ ಮತ್ತು ಅಂಥ ಒಂದು ಪ್ರಯತ್ನದಲ್ಲಿಭಾರತ ಸಂಜಾತೆ ಸಿರಿಶಾ ಭಾಗಿಯಾಗುತ್ತಿದ್ದಾರೆ. ಬಾಹ್ಯಾಕಾಶಕ್ಕೆ ತೆರಳುತ್ತಿರುವ ಸಿರಿಶಾ, ತನ್ನೊಂದಿಗೆ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವ ಹೆಮ್ಮೆಯ ಭಾವ ಹೊಂದಿದ್ದಾರೆ. ಇದನ್ನು ಅವರು ಸ್ವತಃ ಹೇಳಿಕೊಂಡಿದ್ದಾರೆ ಕೂಡ, ‘‘ನಾನು ಸ್ವಲ್ಪ ಭಾರತವನ್ನು ನನ್ನೊಂದಿಗೆ ಕರೆದೊಯ್ಯುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ’’ ಎಂದು ಹೇಳಿಕೊಂಡಿದ್ದಾರೆ.
ಬಾಹ್ಯಾಕಾಶದ ಗೀಳಿನ ಹೊರತಾಗಿಯೂ ಸಿರಿಶಾ ಹಲವು ವಿಷಯಗಳಲ್ಲಿವಿಶಿಷ್ಟ ಆಸಕ್ತಿಗಳನ್ನು ಬೆಳೆಸಿಕೊಂಡಿದ್ದಾರೆ. ಹೊಸ ಹೊಸ ಸಂಗತಿಗಳಿಗೆ ಬಹಳ ಬೇಗ ಆಕರ್ಷಿತವಾಗಿವ ಅವರಿಗೆ ಬೋಟಿಂಗ್ ಮಾಡುವುದು ತುಂಬ ಇಷ್ಟ. ಇದರ ಜತೆಗೆ ಬಾಸ್ಕೆಟ್‌ಬಾಲ್ ಆಟವನ್ನು ನೋಡುವುದು ತುಂಬ ಎಂಜಾಯ್ ಮಾಡುತ್ತಾರೆ. ಬೆಕ್ಕು ಮತ್ತು ನಾಯಿ ಅಕ್ಕರೆ ಸಂಗಾತಿಗಳು. ನೆಚ್ಚಿನ ನಾಯಿ ‘ಚಾನ್ಸ್’ ಅವರ ಜೀವನದ ಭಾಗವೇ ಆಗಿದೆ. ಸಹೋದರಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಎಲ್ಲಹಬ್ಬಗಳನ್ನು ಆಚರಿಸುತ್ತಾರೆ. ಪ್ರವಾಸವನ್ನು ಹೆಚ್ಚಿಗೆ ಇಷ್ಟ ಪಡುವ ಸಿರಿಶಾ ಭಾರತವು ಸೇರಿದಂತೆ ಹಲವು ದೇಶಗಳನ್ನು ಸುತ್ತಿ ವಿಶಿಷ್ಟ ಅನುಭವವನ್ನು ಪಡೆದುಕೊಂಡಿದ್ದಾರೆ.
ರಿಚರ್ಡ್ ಬ್ರಾನ್ಸನ್ ತಂಡದೊಂದಿಗೆ ಸಿರಿಶಾ ಬಾಂಡ್ಲಾ ಕೈಗೊಳ್ಳುತ್ತಿರುವ ಬಾಹ್ಯಾಕಾಶ ಯಾನ ಇತಿಹಾಸ ಸೃಷ್ಟಿಸುವುದು ಖಚಿತ. ಜೊತೆಗೆ, ಏನಾದರೂ ಹೊಸದನ್ನು ಮಾಡುವ ಹುಮ್ಮಸ್ಸು ಹೊಂದಿರುವ, ಜಗತ್ತಿನ ಪ್ರತಿಭಾವಂತ ಅಸಂಖ್ಯ ಹೆಣ್ಣುಮಕ್ಕಳಿಗೆ ಸಿರಿಶಾ ಅವರ ಈ ಜರ್ನಿ ಹುರುಪು ತುಂಬಲಿದೆ; ಕನಸುಗಳನ್ನು ಕಾಣಲು ದಾರಿ ಮಾಡಿಕೊಡಲಿದೆ. ಅಂಥದೊಂದು ಪ್ರೇರಣೆಗೆ ಕಾರಣವಾಧಿಗುತ್ತಿರುವ ಸಿರಿಶಾ ಬಾಹ್ಯಾಕಾಶ ಪಯಣಕ್ಕೆ ಗುಡ್‌ಲಕ್ ಹೇಳೋಣ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ