- ಮಲ್ಲಿಕಾರ್ಜುನ ತಿಪ್ಪಾರ
ಭಾರತವೂ ಸೇರಿದಂತೆ ವಿಶ್ವದ ಕೆಲವು ರಾಷ್ಟ್ರಗಳಲ್ಲಿಚೀನಾ ಮೂಲದ ಟಿಕ್‌ಟಾಕ್ ಕಿರು ವಿಡಿಯೊ ಆ್ಯಪ್ ಮೇಲೆ ನಿಷೇಧ ಹೇರಿದ್ದರಿಂದ ಆ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಅನೇಕ ಆ್ಯಪ್‌ಗಳು ಚಾಲ್ತಿಯಲ್ಲಿವೆ. ಈ ವಿಷಯದಲ್ಲಿಗೂಗಲ್ ಒಡೆತನದ ಯುಟ್ಯೂಬ್ ಕೂಡ ಹಿಂದೆ ಬಿದ್ದಿಲ್ಲ.
ಕಳೆದ ಸೆಪ್ಟೆಂಬರ್‌ನಲ್ಲಿಯುಟ್ಯೂಬ್ ಘೋಷಣೆಯೊಂದನ್ನು ಮಾಡಿ, ಟಿಕ್ ಟಾಕ್ ರೀತಿಯ ಸೇವೆ ಒದಗಿಸುವ ಶಾರ್ಟ್ಸ್ (ಖhಟ್ಟಠಿs) ಅನ್ನು ಭಾರತದಲ್ಲಿಆರಂಭಿಸುವುದಾಗಿ ಹೇಳಿತ್ತು. ಈ ಆ್ಯಪ್ ಇನ್ನೂ ಬೀಟಾ ವರ್ಷನ್‌ನಲ್ಲಿದೆ. ಹಾಗಿದ್ದೂ ಈ ನಾಲ್ಕು ತಿಂಗಳಲ್ಲಿಶಾರ್ಟ್ಸ್ ಸೇವೆಯು ಭಾರತೀಯ ಬಳಕೆದಾರರಲ್ಲಿ ಹೆಚ್ಚು ಜನಪ್ರಿಯವಾಗತೊಡಗಿದೆ.
ಬಹಳಷ್ಟು ಬಳಕೆದಾರರು ತಮ್ಮ ಫೋನ್‌ಗಳನ್ನು ಬಳಸಿಕೊಂಡು ಕಂಟೆಂಟ್ ಕ್ರಿಯೇಟ್ ಮಾಡುತ್ತಿದ್ದಾರೆ. ಹಾಗಾಗಿಯೇ ಕ್ರಿಯೇಟರ್‌ಗಳಿಗೆ ಹೆಚ್ಚಿನ ಟೂಲ್‌ಗಳನ್ನು ಒದಗಿಸಲು ನಾವು ಹೆಚ್ಚು ಹೂಡಿಕೆ ಮಾಡುತ್ತಿದ್ದೇವೆ. ಭಾರತದಲ್ಲಿಯುಟ್ಯೂಬ್ ಶಾರ್ಟ್ಸ್ ಟೆಸ್ಟಿಂಗ್ ಮಾಡುತ್ತಿದ್ದೇವೆ. ಮುಂದಿನ ಜನರೇಷನ್ ತಮ್ಮ ವಿಷಯಗಳನ್ನು ಯಾವುದೇ ಅಡೆತಡೆಗಳಿಲ್ಲದೇ ಅಪ್ಲೋಡ್ ಮಾಡಲು ನೆರವಾಗಲು ನಾವು ಉತ್ಸುಕರಾಗಿದ್ದೇವೆ. ಇಲ್ಲಿಯವರೆಗೆ ನಮ್ಮ ಯುಟ್ಯೂಬ್
ಶಾರ್ಟ್ಸ್ನಲ್ಲಿ ದಾಖಲಾಗಿರುವ ವಿಡಿಯೊಗಳು ಜಗತ್ತಿನಾದ್ಯಂತ ಜನರಿಗೆ ನೆರವಾಗಿದ್ದು, ನಿತ್ಯ ಸುಮಾರು 35 ಲಕ್ಷ ವ್ಯೂಗಳನ್ನು ಕಾಣುತ್ತಿವೆ ಎನ್ನುತ್ತಾರೆ ಯುಟ್ಯೂಬ್ ಸಿಇಒ ಸೂಸಾನ್ ವೋಜ್ಸಿಕಿ ಅವರು.
ಶಾರ್ಟ್ಸ್ ಹೀಗೆ ಕ್ರಿಯೇಟ್ ಮಾಡಿಇಷ್ಟೊಂದು ಜನಪ್ರಿಯವಾಗುತ್ತಿರುವ ಯೂಟ್ಯೂಬ್ ಶಾರ್ಟ್ಸ್ ಬಗ್ಗೆ ಇನ್ನೂ ಬಹಳಷ್ಟು ಜನರಿಗೆ ಗೊತ್ತಿಲ್ಲ.
ಯುಟ್ಯೂಬ್‌ನಲ್ಲಿ ಕಿರು ವಿಡಿಯೊವನ್ನು ಹೇಗೆ ಮಾಡುವುದು ಎಂಬ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲ. ನೋ ಪ್ರಾಬ್ಲೆಂ, ನಾವೀಗ ನಿಮಗೆ ಯುಟ್ಯೂಬ್ ಶಾರ್ಟ್ಸ್ ಹೇಗೆ ಮಾಡುವುದು ಎಂಬುದನ್ನು ಇಲ್ಲಿಹಂತಹಂತವಾಗಿ ಹೇಳಿದ್ದೇವೆ.
ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿಯುಟ್ಯೂಬ್‌ಗೆ ಸೈನ್ ಇನ್ ಆಗಿ. ಬಳಿಕ ಕ್ರಿಯೇಟ್ ಮೇಲೆ ಟ್ಯಾಪ್ ಮಾಡಿ. ಮತ್ತೆ ಕ್ರಿಯೇಟ್ ಶಾರ್ಟ್ ಮೇಲೆ ಮೊಟಕಿ. ಆಗ ಕ್ಲಿಪ್ ರೆಕಾರ್ಡ್ ಮಾಡಲು, ಕ್ಯಾಪ್ಚರ್ ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು ಅದನ್ನು ಹೋಲ್ಡ… ಮಾಡಿಕೊಂಡಿರಿ. ಅಥವಾ ಸ್ಟಾರ್ಟ್ ಮೇಲೆ ಟ್ಯಾಪ್ ಮಾಡಿ ರೆಕಾರ್ಡಿಂಗ್ ಆರಂಭಿಸಿ ಮತ್ತು ರೆಕಾರ್ಡಿಂಗ್ ಮುಗಿದ ಮೇಲೆ ಮತ್ತೆ ಟ್ಯಾಪ್ ಮಾಡಿ ಆಗ ಅಂತ್ಯಗೊಳ್ಳುತ್ತದೆ.
ಇಷ್ಟಾದ ಮೇಲೆ, ನಿಮಗೆ ಈ ಹಿಂದಿನ ವಿಡಿಯೊ ಕ್ಲಿಪ್ ಏನಾದರೂ ತೆಗೆದು ಹಾಕುವುದಿದ್ದರೆ ಅಥವಾ ಈಗಾಗಲೇ ತೆಗೆದು ಹಾಕಿರುವ ವಿಡಿಯೊವನ್ನು ಮತ್ತೆ ಸೇರಿಸುವುದಿದ್ದರೆ, ಅನ್ ಡು ಮತ್ತು ರೀಡು ಮೇಲೆ ಟ್ಯಾಪ್ ಮಾಡಿದರೆ ನಿಮಗೆ ಬೇಕಿರುವ ಹಾಗೆ ಮಾಡಿಕೊಳ್ಳಬಹುದು.ಪ್ರಿವ್ಯೂ ವಿಡಿಯೊಗಾಗಿ ನೆಕ್ಸ್ಟ್ ಮೇಲೆ ಟ್ಯಾಪ್ ಮಾಡಿ. ನಿಮ್ಮ ವಿಡಿಯೊ ವಿವರ ದಾಖಲಿಸಲು ಮತ್ತೆ ನೆಕ್ಸ್ಟ್ ಮೇಲೆ ಟ್ಯಾಪ್ ಮಾಡಿ. ವಿಡಿಯೊಗೆ ಶೀರ್ಷಿಕೆ ಸೇರಿಸಲು ಆ್ಯಡ್ ಎ ಟೈಟಲ್ ಮೇಲೆ ಕ್ಲಿಕ್ ಮಾಡಿ. ಗರಿಷ್ಠ 100 ಪದಗಳನ್ನು ಬರೆಯಲು ಅವಕಾಶ ಕಲ್ಪಿಸುತ್ತದೆ. ಒಂದು ವೇಳೆ ನೀವು ಮಾಡಿರುವ ವಿಡಿಯೊ ಮಕ್ಕಳಿಗೆ ಅಲ್ಲದಿದ್ದರೆ, ಯಾರು ನಿಮ್ಮ ವಿಡಿಯೊವನ್ನು ನೋಡಬೇಕೆಂಬುದನ್ನು ದಾಖಲಿಸಲು ಸೆಲೆಕ್ಟ್ ಆಡಿಯನ್ಸ್ ಮೇಲೆ ಟ್ಯಾಪ್ ಮಾಡಿ. ಇಷ್ಟಾದ ಮೇಲೆ ಅಪ್ಲೋಡ್ ಮೇಲೆ ಟ್ಯಾಪ್ ಮಾಡಿದರೆ, ನಿಮ್ಮ ಶಾರ್ಟ್ಸ್ ವಿಡಿಯೊ ಲೈವ್ ಹೋಗುತ್ತದೆ. ಅಲ್ಲಿಗೆ ನಿಮ್ಮ ಕಿರು ವಿಡಿಯೊ ಬ್ಲಾಗಿಂಗ್ ಮುಕ್ತಾಯವಾಗುತ್ತದೆ.
ರಿಮೈಂಡ್ ಸೆಟ್ ಮಾಡುವುದು ಹೇಗೆ?
ನೀವು ಹೆಚ್ಚಾಗಿ ಯುಟ್ಯೂಬ್ ನೋಡುತ್ತಿದ್ದರೆ ರಾತ್ರಿ ಹೊತ್ತಲ್ಲಿಬೆಡ್ ಟೈಮ್ ರಿಮೈಂಡರ್ ಸೆಟ್ ಮಾಡಿಕೊಳ್ಳಬಹುದು. ಈ ಆಯ್ಕೆ ಆಂಡ್ರಾಯ್ಡ… ಮತ್ತು ಐಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ. ಬೆಡ್ ಟೈಮ್ ರಿಮೈಂಡರ್ ಸೆಟ್ ಮಾಡಲು ಹೀಗೆ ಮಾಡಿ: ಯೂಟ್ಯೂಬ್ ಆ್ಯಪ್‌ಗೆ ಸೈನ್ ಇನ್ ಆಗಿ, ಸೆಟ್ಟಿಂಗ್ಸ್‌ಗೆ ಹೋಗಿ. ಅಲ್ಲಿಜನರಲ್ ಆಯ್ಕೆಗಳಲ್ಲಿರುವ ‘ರಿಮೈಂಡ್ ಮೀ ವೆನ್ ಇಟ್ಸ್ ಬೆಡ್ ಟೈಮ್’ ಆಯ್ಕೆ ಮಾಡಿಕೊಳ್ಳಿ. ರಿಮೈಂಡರ್ ಗಾಗಿ ಬಳಿಕ ಸಮಯ ಆರಂಭ ಮತ್ತು ಮುಕ್ತಾಯವನ್ನು ಸೆಟ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನೀವು ವಿಡಿಯೊಗಳನ್ನು ವೀಕ್ಷಿಸುವುದರಲ್ಲಿತಲ್ಲೀನರಾಗಿದ್ದಾಗ ಈ ಆಯ್ಕೆಯು ನಿಮಗೆ ಬೆಡ್ ಟೈಮ್ ರಿಮೈಂಡ್ ಮಾಡುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ