ಶುಕ್ರವಾರ, ಜನವರಿ 25, 2008

ನಾವೇ ಇಲ್ಲಾಗುವಾ...


ನನ್ನೊಳಗಿನ
ಭಾವನೆಗಳಿಗೆ
ಹಚ್ಚಬೇಕಿದೆ ಬಣ್ಣ,
ಹಸಿರಾಗುವ
ನೆಪದಲ್ಲಿ ಕೊಸರಾಡುವ
ಕನಸುಗಳಿಗೆ
ಕಟ್ಟಬೇಕಿದೆ ಬೇಲಿ.

ಹಾರಬೇಕಿದೆ
ಮುಗಿಲೇತ್ತರಕ್ಕೆ
ಎಲ್ಲ ನಿಯಮ ಮೀರಿ
ಗೆಲ್ಲಬೇಕಿದೆ ವೈರಿಯೇ
ಇಲ್ಲದ ಯುದ್ಧ.
ತಲುಪಬೇಕಿದೆ
ಗುರಿಯೇ ಇಲ್ಲದ ಗಮ್ಯಕ್ಕೆ

ಬಾ ಜತೆಯಾಗು ಬಾ
ಹೀಗೆ ಇಲ್ಲಗಳ ಜತೆ
ಸಾಗುವಾ, ಅಮೂತ೯ಗಳ
ಜತೆ ನಡೆಯುವಾ
ಕೊನೆಗೊಂದು ದಿನ
ನಾವೇ ಇಲ್ಲಾಗುವಾ...

15 ಕಾಮೆಂಟ್‌ಗಳು:

ಅನುರಾಗ ಹೇಳಿದರು...

ನಿಮ್ಮ ಭಾವನೆಗಳು ತುಂಬಾ ಚೆನ್ನಾಗಿವೆ.ಇಲ್ಲಿರುವ ಕವಿತೆಗಳು ಉತ್ತಮವಾಗಿವೆ.ಸದಾ ಬರೆಯುತ್ತಿರಿ.
All the best

shobha ಹೇಳಿದರು...

ನಮಸ್ಕಾರ ಮಲ್ಲಿ
ಹೇಗಿದ್ದಿರಾ ?ಹೊಸಕೆಲಸಹೇಗಿದೆ? ಕವನಾಗಳು ತುಂಬಾ ಸುಂದರವಾಗಿವೆ

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

Thanks rashmi and shobha... aagaga blogege bheti nidta iriiii

dinesh ಹೇಳಿದರು...

ಕವನ ಚೆನ್ನಾಗಿದೆ ಹಾಗೂ ತುಂಬಾ ಮಾರ್ಮಿಕವಾಗಿದೆ....

jomon varghese ಹೇಳಿದರು...

ವಂಡರ್‌ಪುಲ್! ಬದುಕಿನ ಎಲ್ಲ ತಲ್ಲಣಗಳನ್ನು, ಸಂಭ್ರಮಗಳನ್ನು,ಕನಸುಗಳನ್ನು ಒಂದು ಬೊಗಸೆಯೊಳಗೆ ತೆರೆದಿಟ್ಟಂತೆ.ಗುರಿಯೇ ಇಲ್ಲದ ಗಮ್ಯ ತಲುಪಲು ತವಕಿಸಿ ಹಾರುವಂತೆ, ಆ ತುಡಿತಕ್ಕೆ ಸ್ಫೂರ್ತಿ ಎನ್ನುವಂತೆ, ಯಾವುದೇ ಭಾವಾವೇಷಕ್ಕೊಳಗಾಗದೆ ಮೂಡಿದೆ ಈ ಬಾರಿಯ ನನ್ನ ಹಾಡು.

ನಿಮ್ಮೊಳಗಿನ ಜೀವನ ಪ್ರೀತಿ,ಅದರೊಳಗೆ ಬೆಚ್ಚಗಿರುವ ಒಲವು, ಬಚ್ಚಿಟ್ಟ ಮುಚ್ಚಟೆ ಎಲ್ಲವೂ ಹೀಗೆ ಕವಿತೆಯಾಗಿ ಹರಿಯುತ್ತಿರಲಿ,

ಪ್ರೀತಿಯಿಂದ
ಜೋಮನ್.

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

@joman...... Thanks aadre astu hogaluvastu chennagiiya joman..??
@Dinesh.. Nim Abhiprayakki runi

ಅನಾಮಧೇಯ ಹೇಳಿದರು...

nice lines...
I Njoyed

ತೇಜಸ್ವಿನಿ ಹೆಗಡೆ ಹೇಳಿದರು...

ಗೆಲ್ಲಬೇಕಿದೆ ವೈರಿಯೇ
ಇಲ್ಲದ ಯುದ್ಧ.
ತುಂಬಾ ಇಷ್ಟವಾಯಿತು. ನಿಜಕ್ಕೂ ಮನುಷ್ಯ ಇಂದು ಕಣ್ಣಿಗೆ ಕಾಣಿಸದ ತನ್ನೊಳಗಿನ ಅರಿಷಡ್ ವೈರಿಗಳನ್ನು ಗೆಲ್ಲಬೇಕಗಿದೆ..
ಸಾಹಿತ್ಯದ ಸಾಂಗತ್ಯ ಮಾನವನನ್ನು ಮನುಷ್ಯನನ್ನಾಗಿ ಮಾಡುವುದಲ್ಲದೇ ಆತನ ಎಲ್ಲಾ ನೋವು, ಬೇಸರ ಒಂಟಿ ತನಕ್ಕೆ ರಾಮಬಾಣವಿದ್ದಂತೆ. ನಿಮ್ಮ ಹಾಡು ಹೀಗೇ ಮುಂದುವರಿಯುತ್ತಿರಲಿ.

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

@kumar and tejeshwani.. Nim commentge tumba dhanyvadagalu.. aagaga blogge beti niduttiri

MD ಹೇಳಿದರು...

"ಬಾ ಜತೆಯಾಗು ಬಾ
ಹೀಗೆ ಇಲ್ಲಗಳ ಜತೆ
ಸಾಗುವಾ"
ಛಲೋ ಪದ್ಯ ಅದ

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

@ MD.. Thanksri nim commentge.. Agaga blogage beti nidi

Sh.....!! ಹೇಳಿದರು...

Channagi bardiddiri... :)

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

Thanks Shashidhar comentge..

ಅನಾಮಧೇಯ ಹೇಳಿದರು...

Hi. There’s a Bangalore bloggers meet scheduled for tomorrow, Feb 16. I would like to confirm your participation and I am looking forward to meeting you in person and other bloggers as well. As of now 50+ bloggers have confirmed their participation. Email me at anwin.at.anw.in or call me on 9880518019 for anything regarding the bloggers meet.

More info at http://indiblogger.in/

Cheers,

Anwin

ನಾವಡ ಹೇಳಿದರು...

ಕೊನೆ ಚರಣ ಇಷ್ಟವಾಯಿತು.
ನಾವಡ