ಶುಕ್ರವಾರ, ಅಕ್ಟೋಬರ್ 5, 2007
ಬೆಕ್ಕಿನ ಮರಿ ಬೆಲೆ 35,000 ರೂಪಾಯಿ..!
ನಿಜ.. ಬೆಕ್ಕಿನ ಮರಿ ಬೆಲೆ 35,000 ರೂಪಾಯಿ...! ಭಾರತ ಬಡವರ ರಾಷ್ಟ್ರ ಅಂತ್ ಯಾರು ಹೇಳ್ತಾರೆ. ಇಷ್ಟೆ ಬೆಲೆಯ ಏಳೆಂಟು ಬೆಕ್ಕಿನ ಮರಿಗಳನ್ನು ಹೊಂದಿರುವ ಒಡೆಯರು ಬೆಂಗಳೂರಿನಲ್ಲಿದ್ದಾರೆಂದರೆ ಹುಬ್ಬೇರಿಸಬೇಡಿ.
ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ನನ್ನ ಮಾಧ್ಯಮ ಮಿತ್ರ ಯಾವುದೋ ಒಂದು ಫೆಸ್ಟ್ ವರದಿ ಮಾಡಲು ನನ್ನನ್ನು ತನ್ನ ಜತೆ ಕರೆದುಕೊಂಡು ಹೋಗಿದ್ದ. ಅಲ್ಲಿ ಈ ಮಹಾ ದುಬಾರಿಯ ಬೆಕ್ಕು ನನ್ನ ಕಣ್ಣಿಗೆ ಬಿತ್ತು. ಅಷ್ಟೆ ಅಲ್ಲ, ನನ್ನ ಮಿತ್ರ ಅದನ್ನು ತನ್ನ ಕ್ಯಾಮೆರಾ ಕಣ್ಣಿಗೂ ತುಂಬಿಕೊಂಡ.
ತುಂಬಾ ಮುದ್ದಾಗಿದ್ದ ಆ ಬೆಕ್ಕಿನ ಮರಿ ನೋಡೋದಕ್ಕೆ ಕೊಂಚ ನಾಯಿ ಮರಿಯಂತೆ ಇತ್ತು. ನಾನು ಅದನ್ನ ನಾಯಿ ಮರೀನೆ ಅಂತ್ ತಿಳ್ಕೊಂಡಿದ್ದೆ. ಆದರೆ, ಆ ಬೆಕ್ಕಿನ ಮರಿಯ ಒಡತಿಯನ್ನು ಮಾತನಾಡಿಸಿದಾಗ ತಿಳಿದುಬಂತು, ಅದು ಬೆಕ್ಕಿನ ಮರಿ ಅಂತ್, ಅದು ವಿದೇಶದಿಂದ ಅಂದ್ರೆ, ಯುರೋಪಿನಿಂದ ಆಮದು ಮಾಡಿಕೊಂಡದ್ದು.
ಬೆಕ್ಕಿನ ಮರಿ ಒಡತಿ. ವೈದ್ಯ ವೃತ್ತಿ ಮಾಡುತ್ತಿದ್ದಾರೆ. ಅವರಿಗೆ ಬೆಕ್ಕುಗಳನ್ನು ಸಾಕುವುದು ಹವ್ಯಾಸವಂತೆ. ಅದು ವಿದೇಶಿ ಬೆಕ್ಕುಗಳು (!). ಇದೇ ಮಾದರಿಯ ಸುಮಾರು ಏಳೆಂಟು ಬೆಕ್ಕುಗಳನ್ನು ಸಾಕಿಕೊಂಡಿದ್ದಾರಂತೆ. ನಾನು ನೋಡಿದ ಬೆಕ್ಕಿನ ಬೆಲೆ ಯುರೋ ಲೆಕ್ಕದಲ್ಲಿ 7 ರಿಂದ 8 ನೂರು ಯುರೋ ಅಂತೆ. ಅಂದ್ರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 35 ಸಾವಿರು ರೂಪಾಯಿಯಂತೆ. ಈ ವಿವರ ನೀಡಿದ್ದು ಕೂಡಾ ಅವರೆ. ಆದರೆ, ಅವರ ಹೆಸರು ಕೇಳೋದನ್ನು ಮರೆತು ಬಿಟ್ಟೆ.
ಮತ್ತೊಬ್ಬ ಮಿತ್ರ "ಈ ಬೆಕ್ಕು ಇಲಿ ಹಿಡಿಯುತ್ತಾ..." ತರ್ಲೆ ಪ್ರಶ್ನೆ ಕೇಳಿದ. ಅದಕ್ಕೆ ಅವರು "ಗೊತ್ತಿಲ್ಲ.. ಹೊರಗಡೆ ಬಿಟ್ಟು ನೋಡಿಲ್ಲ" ಅಂದ್ರು. (ಇಲಿ ಹಿಡಿಯುತ್ತೆ, ಇಲಿ ತಂದು ಬಿಡಿ ಎಂಬ ಭಾವನೆಗಳು ಆಗ ಅವರ ಮುಖದಲ್ಲಿದ್ದವು). ಈ ಮಾತಿಗೆ ನಾವು ಎಲ್ಲರು ನಕ್ಕೇವು.
****
ಸ್ವಲ್ಪ ಯೋಚಿಸಿ, ಸುಮಾರು 35,000 ರೂಪಾಯಿ ಬೆಲೆಯ ಏಳೆಂಟು ಬೆಕ್ಕಿನ ಮರಿಗಳನ್ನು ಸಾಕುವ ಹವ್ಯಾಸಿಗರು(ಹಣವಂತರು) ನಮ್ಮಲ್ಲಿದ್ದಾರೆ. ಹೀಗಿರಬೇಕಾದರೆ, ಭಾರತ ಹೇಗೆ ಬಡ ರಾಷ್ಟ್ರವಾಗೋಕೆ ಸಾಧ್ಯ ಅಲ್ವಾ.
35 ಸಾವಿರು ರೂಪಾಯಿಯಲ್ಲಿ ಗ್ರಾಮೀಣ ಪ್ರದೇಶದ ಓರ್ವ ಬಡ ಹುಡುಗ ಪಿಯೂಸಿ ವರೆಗೆ ಶಿಕ್ಷಣ ಪೂರೈಸಬಲ್ಲ. ಅಂದ್ರೆ ಅಂತ ಏಳೆಂಟು ಬೆಕ್ಕಿನ ಮರಿಗಳನ್ನು ಸಾಕಿಕೊಂಡಿರುವ ಒಡತಿ ಸುಮಾರು ಏಳೆಂಟು ಹುಡುಗರಿಗೆ ಶಿಕ್ಷಣ ನೀಡಬಹುದಾಗಿತ್ತು. ಅಲ್ವಾ, ನಮ್ಮ ದೇಶದಲ್ಲಿ ಇಂತಹುದನ್ನು ಕೇಳಬೇಡಿ. ಬೇಡವಾದಕ್ಕೆ ದುಡ್ಡು ಸುರಿಯೋ ಜನ ಬೇಜಾನ್ ಇದ್ದಾರೆ. ಯಾವುದಾದರೂ ಒಂದು ಒಳ್ಳೆಯ ಕಾರ್ಯ, ಬಡವರಿಗೆ ಸಹಾಯವಾಗುವಂಥದಕ್ಕೆ ದುಡ್ಡು ಕೇಳಿದರೆ ಅವರ ಹತ್ರ, ದುಡ್ಡು ಇರಲ್ಲ.
ಅಷ್ಟಕ್ಕೂ ಅದು ಅವರ ದುಡ್ಡು. ಅವರು ಬೆಕ್ಕು ಅಥವಾ ನಾಯಿಯನ್ನಾದರೂ ಖರೀದಿಸುತ್ತಾರೆ. ಅದನ್ನು ಕೇಳೊ ಹಕ್ಕು ನಮಗೆ ಇಲ್ಲ. ಆದರೆ, ಪ್ರತಿಯೊಬ್ಬನಿಗೂ ಸಮಾಜ ಋಣ ಇರುತ್ತಲ್ಲ. ಬೆಕ್ಕಿಗೆ, ನಾಯಿಗೆ ಲಕ್ಷಾಂತರ ಖರ್ಚು ಮಾಡೊ ಜನ, ಅದರಲ್ಲಿ ಕೊಂಚ ಭಾಗವನ್ನಾದರೂ ಹಳ್ಳಿಯಲ್ಲಿರುವ ಪ್ರತಿಭಾವಂತ ಬಡಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದರೆ, ಒಂದು ಕುಟುಂಬ ಬದುಕುತ್ತದೆ. ಇಂದಿಗೂ ಹಳ್ಳಿಯಲ್ಲಿ ಅನೇಕ ಪ್ರತಿಭಾವಂತ ಹುಡುಗರು ದುಡ್ಡಿನ ಆಸರೆ ಇಲ್ಲದೇ, ತಮ್ಮ ಓದನ್ನು ಅರ್ಧಕ್ಕೆ ನಿಲ್ಲಿಸಿ, ಕೂಲಿ-ನಾಲಿ ಮಾಡುತ್ತಿದ್ದಾರೆ. ಇಂಥವರಿಂದ ಅಂಥವರಿಗೆ ಸ್ವಲ್ಪವಾದರೂ ಸಹಾಯವಾದರೆ ನಮ್ಮ ಹಳ್ಳಿಗಳು, ಹಳ್ಳಿಗರು ಉದ್ದಾರವಾಗುತ್ತಾರೆ.
ಅಷ್ಟಕ್ಕೂ ನಾಯಿ, ಬೆಕ್ಕು ಸಾಕೋದು ತಪ್ಪಲ್ಲ. ಆದರೆ, ಅವುಗಳ ಮೇಲೆ ಖರ್ಚು ಮಾಡೋ ಹಣದಲ್ಲಿ ಕಾಲು ಭಾಗವನ್ನಾದರೂ ಬಡವರಿಗೆ ಕೊಟ್ಟರೆ, ದೇಶ ಉದ್ದಾರವಾದೀತು.
ಹೋಗ್ಲಿ ಬಿಡಿ.. ಇದನ್ನೆಲ್ಲ ಹೇಳೋದಕ್ಕೆ ನಾನ್ಯಾರು ..?? ನೀವು ಯಾರು.. ಅಲ್ವಾ ??
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
ಮೂರೂ ಮಾದರಿಯ ಕ್ರಿಕೆಟ್ನಲ್ಲಿಭಾರತೀಯ ಕ್ರಿಕೆಟ್ ತಂಡದ ಕಾಯಂ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರೀಗ ಐಪಿಎಲ್ನಲ್ಲಿಸಿಎಸ್ಕೆ ತಂಡದ ನಾಯಕ. - ಮಲ್ಲಿಕಾರ್ಜುನ ತಿಪ್ಪಾ...
-
ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ, ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು, ಬಿಕ...
-
ಚೆನ್ನೈನಲ್ಲಿ ಇನ್ನೂ ಮುಂಗಾರು ಪ್ರಾರಂಭವಾಗಿಲ್ಲ. ಆದರೆ ಯೋಗರಾಜ್ ಭಟ್ಟರ "ಮುಂಗಾರು ಮಳೆ" ಭರ್ಜರಿಯಾಗಿ ಸುರಿಯುತ್ತಿದೆ.. ಹಾಗೇ ಸುಮ್ಮನೆ..! ಅರೆ ಏನು ಇದು.....
12 ಕಾಮೆಂಟ್ಗಳು:
Good offbeat news. And thanks for informaton through your blog.
are bekkige ashtu belena? sakath article..nice keep it up
nice article ya... bekkige ishtu belena...
nice article....chennagide baravanige..... keep it up
bekke bekke muddina sokke
ninageshtu bele !!
bekke bekke muddina sokke !!!
ninageshtu bele !
bekkigiruvantha bele naramanavarigillavalla aade chinte.
thaks for all
ಸ್ವಾಮಿ ತಿಪ್ಪಾರ್, ಕಮೆಂಟ್ ಬರ್ದ ಎಲ್ಲಾರಿಗೂ ಬರೇ ಥ್ಯಾಂಕ್ಸ್ ಹೇಳಿ ಕೈತೊಳೆದುಕೊಂಡು ಬಿಟ್ಟ ಆಗ್ತದೇನು? ಹಿಂಗಾದ್ರೆ ನಿಮ್ಮ ಹಾಡು ಕೇಳೋಕೆ ನಾವೆಲ್ಲಾ ಬರಂಗಿಲ್ಲ ನೋಡ್ರೀ.
ಈ ಬೆಕ್ಕು ಇಲಿ ಹಿಡಿಯತ್ತೋ? ಇಲ್ಲವೂ ಎನ್ನುವುದು ಎರಡನೇ ಪ್ರಶ್ನೆ. ಆದರೆ,ಕಣ್ಣು ಮುಚ್ಚಿ ಹಾಲು ಕುಡಿಯೋದು ಮಾತ್ರ ಮನೆಯೊಡತಿಗೆ ಗೊತ್ತಿರಬಹುದು.
ಲೇಖನ ಚೆನ್ನಾಗಿದೆ. ಅದರ ಹಿಂದಿರುವ ಕಾಳಜಿ ನನಗಿಷ್ಟವಾಯಿತು....
ಮತ್ತೇನ್ರೀ ಕನ್ನಡ ಸಾರಥಿಯವರೇ ಕಣ್ಮುಚ್ಚಿ ಟೀ ಕುಡಿಸಬೇಕಿತ್ತಾ..?
ಹೊಟ್ಟೆ ಉರಿಯುತ್ತೆ ಅಲ್ವಾ? ನಿಮ್ಮ ಅಲೋಚನಾ ಧಾಟಿ ಇಷ್ಟ ಆಯ್ತು..
ಕಾಮೆಂಟ್ ಪೋಸ್ಟ್ ಮಾಡಿ