ಸೋಮವಾರ, ಅಕ್ಟೋಬರ್ 22, 2007

ಅತ್ತು ಬಿಡು ಹಾಗೇ ಸುಮ್ಮನೆ...


ಅತ್ತು ಬಿಡು, ಗೆಳೆಯ
ಹಾಗೇ ಸುಮ್ಮನೇ
ಹರಿದು ಹೋಗಲಿ
ಕಣ್ಣೀರು ಕೋಡಿ ನದಿಯಾಗಿ.
ಇಳಿದು ಹೋಗಲಿ
ಎದೆಯ ಭಾರ ಹಗುರಾಗಿ.

ನನ್ನ-ನಿನ್ನ ನಡುವಿನ
ಮಾತಿಲ್ಲದ ಮೌನಗಳು
ನೂರು ಅರ್ಥ ಕಲ್ಪಿಸಿವೆ
ನಮ್ಮ ನಡುವಿನ ಸಂಬಂಧಕ್ಕೆ

ಗೆಳೆಯಾ,
ಸಂಬಂಧದ ನಂಟಿಗೆ
ಹೆಸರಿನ ಅಂಟು ಬೇಡ
ಹಾಗೇ ಇದ್ದು ಬಿಡೋಣ
ಬಳ್ಳಿ, ಮರದ ಹಾಗೇ
ಭೂಮಿ, ಚಂದಿರನ ಹಾಗೇ
ಗಾಳಿ, ಗಂಧದ ಹಾಗೇ

ನಾನು ಬಳ್ಳಿಯಾ ? ನೀನು ಮರವಾ?
ನೀನು ಚಂದಿರನಾ? ನಾನು ಭೂಮಿನಾ ?
ಬೇಡ, ಮಿಗಿಲಾಟದ ತೊಳಲಾಟ
ಹೀಗೆ ಇರಲಿ, ಸಂಬಂಧದ
ಪರಿವೆ ಇಲ್ಲದ ಅನುಬಂಧ.

ಹಾಗೇ ಸುಮ್ಮನೇ
ಅತ್ತು ಬಿಡು,
ಇಳಿದು, ತೊಳೆದು
ಹೊಗಲಿ
ನೆನಪಿನ ಮೆರವಣಿಗೆ.

ಸೇರೊಣ ಭೂ-ಕಡಲಿನಂಚಿನಲಿ.

(ಈ ಕವನ ಕನ್ನಡ ಯಾಹೂನಲ್ಲಿ ಪ್ರಕಟಗೊಂಡಿದೆ)

8 ಕಾಮೆಂಟ್‌ಗಳು:

dinesh ಹೇಳಿದರು...

ello .... mungaro maleya ondu hadina prabhava iddahage kanutte... any way nice poem..

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

Howdu Dinesh.. Mungru maley haadin prabhavide

jomon varghese ಹೇಳಿದರು...

ಸಂಬಂಧಗಳ ಬಗ್ಗೆ ಪೋಣಿಸಿದ ಸಾಲುಗಳು ಇಷ್ಟವಾದವು. ತುಂಬಾ ಚೆನ್ನಾಗಿದೆ...

nagendra ಹೇಳಿದರು...

ಯಾಕೋ ಸುಮ್ಮನೆ ಹಾಗೆ ಓದುತ್ತಾ ಹೋದೆ.ತುಂಬಾ ಚೆನ್ನಾಗಿದೆ.....

ನಾಗೇಂದ್ರ ,ತ್ರಾಸಿ

Dynamic Divyaa ಹೇಳಿದರು...

"ಹೀಗೆ ಇರಲಿ, ಸಂಬಂಧದ
ಪರಿವೆ ಇಲ್ಲದ ಅನುಬಂಧ"

Chenaaagidhe idu!! Hesree illada bandha elladkintha sooooper kandhaa!! hahaa.. chenaagide!

Parisarapremi ಹೇಳಿದರು...

adyaake "aLabEku" antha??? nagbOdalvaa?

heege.. :-)

Anu ಹೇಳಿದರು...

Its really touchable poem. keep writing and build friendship....

jomon varghese ಹೇಳಿದರು...

ಅತ್ತಿದ್ದು, ಆಯಿತು ಸ್ವಾಮಿ... ಬೇಗ ನಗೋ ಕವನ ಬರೆದು ಹಾಕಿ...