ಕಣ್ಣ ಮುಂದೆಯೇ ಮಕ್ಕಳ ಸಾವಿನಿಂದಾಗಿ ರಾಜಕಾರಣದಿಂದ ದೂರವೇ ಸರಿದಿದ್ದ ಏಕನಾಥ ಶಿಂಧೆ ಮತ್ತೆ ಅಗ್ರಗಣ್ಯ ನಾಯಕರಾಗಿ ಬೆಳೆದಿದ್ದೇ ಅಚ್ಚರಿ
- ಮಲ್ಲಿಕಾರ್ಜುನ ತಿಪ್ಪಾರ
ಏಕನಾಥ ಶಿಂಧೆ ಎಂಬ ಏಕವ್ಯಕ್ತಿ ಮೇಲೆ ಇಡೀ ದೇಶ ಕುತೂಹಲದ ಕಣ್ಣಿಟ್ಟಿದೆ. ಮಹಾರಾಷ್ಟ್ರದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ನೇತೃತ್ವದ ‘ಮಹಾ ವಿಕಾಸ್ ಅಘಾಡಿ’ ಸರಕಾರವನ್ನು ಖೆಡ್ಡಾಗೆ ಕೆಡವಿರುವ ಏಕನಾಥ, ಶಿವಸೇನೆಯ ಪ್ರಮುಖ ಹಾಗೂ ಭಾರಿ ಪ್ರಭಾವಿ ನಾಯಕ. ತಮ್ಮ ಪಕ್ಷ ವು ‘ಹಿಂದುತ್ವ’ವನ್ನು ಕೈಬಿಟ್ಟಿದೆ ಎಂದು ಆರೋಪಿಸಿ, 30ಕ್ಕೂ ಅಧಿಕ ಶಾಸಕರೊಂದಿಗೆ ಅಸ್ಸಾಂನ ಗುವಾಹಟಿ ಹೋಟೆಲ್‌ನಲ್ಲಿತಳವೂರಿದ್ದಾರೆ. ಮೇಲ್ನೋಟಕ್ಕೆ, ಶಿವಸೇನೆಯ ಸೈದ್ಧಾಂತಿಕ ವೈರುಧ್ಯದ ಕಾರಣಕ್ಕೇ ಬಂಡಾಯ ಬಾವುಟ ಹಾರಿಸಿದ್ದಾರೆ ಎನಿಸಿದರೂ ಆಳದಲ್ಲಿಅವರನ್ನು ಪಕ್ಷ ದಲ್ಲಿ ಮೂಲೆಗುಂಪು ಮಾಡಲಾಗುತ್ತಿದ್ದ ಪಿಸುಮಾತುಗಳಿವೆ!
ಹಣಬಲ ಮತ್ತು ತೋಳ್ಬಲದಲ್ಲಿಏಕನಾಥ ಶಿಂಧೆ ಅವರನ್ನು ಸರಿಗಟ್ಟುವವರಿಲ್ಲ. ಪಕ್ಷ ಕ್ಕೆ ಬೇಕಿರುವ ಮತಗಳನ್ನು ಕ್ರೋಡೀಕರಿಸುವಲ್ಲಿಸಿದ್ಧಹಸ್ತರು. ವಿಶೇಷವಾಗಿ ಠಾಣೆ ವ್ಯಾಪ್ತಿಯಲ್ಲಿಏಕನಾಥ ಅವರೇ ಶಿವಸೇನೆಯ ಅಸಲಿ ನಾಯಕ. ಅಷ್ಟರ ಮಟ್ಟಿಗೆ ವರ್ಚಸ್ಸಿದೆ. ಏಕನಾಥ ಅವರು ಹೇಗೆ ಇಷ್ಟು ಪ್ರಸಿದ್ಧಿಯಾದರು ಎಂದು ತಿಳಿದುಕೊಳ್ಳಧಿಬೇಕಿದ್ದರೆ ಅವರ ರಾಜಕೀಯ ಗುರು ‘ಆನಂದ್ ದಿಘೆ ಅವರ ಕುರಿತು ಕೊಂಚ ತಿಳಿದುಕೊಳ್ಳಬೇಕು. ‘ಧರ್ಮವೀರ್’ ಆನಂದ ದಿಘೆ ಠಾಣೆಯಲ್ಲಿಅಕ್ಷ ರಶಃ ಸಮಾನಂತರ ಸರಕಾರವನ್ನೇ ನಡೆಸುಧಿತ್ತಿದ್ದರು. ತಮ್ಮದೇ ಶೈಲಿಯಲ್ಲಿನಿತ್ಯವೂ ದರ್ಬಾರ್ ನಡೆಸಿ, ಸಮಸ್ಯೆಧಿಗಳನ್ನು ಆಲಿಸುತ್ತಿದ್ದರು. ಬಾಳಾಸಾಹೇಬ್ ಠಾಕ್ರೆ ಅವರ ಪರಮ ನಿಷ್ಠರು. ಈ ನಿಷ್ಠೆ ಯಾವ ಪರಿ ಇತ್ತೆಂದರೆ, 1989ರಲ್ಲಿಶ್ರೀಧರ ಖೋಪ್ಕರ್ ಎಂಬ ಸದಸ್ಯ ಕಾಂಗ್ರೆಸ್ ಪರವಾಗಿ ಮತ ಹಾಕಿದ್ದಕ್ಕೆ ಅವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿಆನಂದ ದಿಘೆ ಅವರನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರ ಬಂದಿದ್ದರು. 2001ರಲ್ಲಿಹೃದಯಾಘಾತದಿಂದ ಸಾವಿಗೀಡಾದರು. ದಿಘೆ ಬಳಿಕ ಉಂಟಾಗಿದ್ದ ನಿರ್ವಾತವನ್ನು ತುಂಬಿದ್ದು ಇದೇ ಏಕನಾಥ ಶಿಂಧೆ. ಅವರದ್ದೇ ರಾಜಕೀಯ ಪಟ್ಟು, ಶೈಲಿಯನ್ನು ಕರಗತ ಮಾಡಿಕೊಂಡಿದ್ದಾರೆ. ದಿಘೆ ಅವರಂತೆ ಏಕನಾಥ ಅವರದ್ದೂ ‘ಆಕ್ರಮಣಕಾರಿ’ ರಾಜಕಾರಣ; ಎಲ್ಲವೂ ತಾಬಡತೋಬಡ ಆಗಬೇಕು. ಎಂವಿಎ ಸರಕಾರದಲ್ಲಿಲೋಕೋಪಯೋಗಿ ಸಚಿವರಾಗಿರುವ 58 ವರ್ಷದ ಏಕನಾಥ ಅವರಿಗೇನೂ ರಾಜಕೀಯ ಕೌಟುಂಬಿಕ ಹಿನ್ನೆಲೆ ಇಲ್ಲ.
ಸಾತಾರಾ ಮೂಲದವರು: ಏಕನಾಥ ಸಾತಾರಾ ಜಿಲ್ಲೆಜವಳಿ ತಾಲೂಧಿಕಿಧಿನವರು. ಹುಟ್ಟಿದ್ದು ಮರಾಠ ಕುಟುಂಬದಲ್ಲಿ1964 ಫೆಬ್ರವರಿ 9ರಂದು. ತಂದೆ ಸಂಭಾಜಿ. ಏಕನಾಥ ಚಿಕ್ಕವರಿದ್ದಾಗಲೇ ಅವರ ಕುಟುಂಬ ಠಾಣೆಗೆ ಸ್ಥಳಾಂತಧಿರವಾಯಿತು. ಮಂಗಳಾ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜ್‌ನಲ್ಲಿ11ನೇ ತರಗತಿವರೆಗೆ ಓದಿದ್ದಾರೆ. ಮುಂದೆ ಓದುವ ಆಸೆ ಇದ್ದರೂ ಕುಟುಂಬಕ್ಕಾಗಿ ತಮ್ಮ ಶಿಕ್ಷ ಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ದಿನಗೂಲಿ ಕೆಲಸಗಳನ್ನು ಮಾಡಬೇಕಾಯಿತು. ತುಂಬಾ ಕಷ್ಟಪಟ್ಟು ಕೊನೆಗೆ ಆಟೊರಿಕ್ಷಾ ಚಾಲಕರಾದರು. 70 ಮತ್ತು 80ರ ದಶಕದಲ್ಲಿಮಹಾರಾಷ್ಟ್ರದ ಎಲ್ಲಯುವಕರಂತೆ ಏಕನಾಥ ಅವರಿಗೆ ಸೇನೆ ಚಟುವಟಿಕೆಗಳು ಆಕರ್ಷಿಸಿದವು. 1980ರಲ್ಲಿಶಿವಸೇನೆ ಸೇರಿದರು. ಠಾಣೆ ಜಿಲ್ಲಾಶಿವಸೇನೆ ಪ್ರಮುಖರಾಗಿದ್ದ ಆನಂದ್ ದಿಘೆ ಅವರ ‘ನೀಲಿಗಣ್ಣಿನ ಹುಡುಗ’ನಾಗಲು ಬಹಳ ದಿನಗಳೇನೂ ಬೇಕಾಗಲಿಲ್ಲ. ಪ್ರಾಮಾಧಿಣಿಕತೆ, ಕಠಿಣ ಪರಿಶ್ರಮಗಳಿಂದಾಗಿ ಬಾಳಾಸಾಹೇಬ್ ಠಾಕ್ರೆ ಕಣ್ಣಿಗೂ ಬಿದ್ದರು. ಠಾಕ್ರೆ ಮತ್ತು ಆನಂದ್ ದಿಘೆ ಅವರ ಆಶ್ರಯದಲ್ಲಿಏಕನಾಥ, ಶಿವಸೇನೆಧಿಯಲ್ಲಿಒಂದೊಂದೇ ಹುದ್ದೆಗಳನ್ನೇರುತ್ತಾ ಮುನ್ನಡೆದರು.
ಕಣ್ಣ ಮುಂದೆ ಮಕ್ಕಳು ಜಲಸಮಾಧಿ: ಏಕನಾಥ ಅವರಿಗೆ 2000 ಕಹಿ ನೀಡಿದ ವರ್ಷ. ಕಣ್ಣ ಮುಂದೆಯೇ ಅವರ ಮೂವರು ಮಕ್ಕಳ ಪೈಕಿ ಇಬ್ಬರು ಜಲಧಿ ಸಮಾಧಿಧಿಯಾದರು. ಅದು ಜೂನ್ 2ನೇ ತಾರೀಖು. 11 ವರ್ಷದ ಪುತ್ರ ದಿಪೇಶ್, 7 ವರ್ಷದ ಮಗಳು ಶುಭದಾ ಅವರು ಊರಿನ ಕೆರೆಯಲ್ಲಿಬೋಟಿಂಗ್ ಮಾಡುತ್ತಿದ್ದರು. ಬೋಟ್ ಮುಗುಚಿ ಮಕ್ಕಳಿಬ್ಬರು ಜಲ ಸಮಾಧಿಯಾದರು. ಮಕ್ಕಳ ಸಾವು ಅವರಿಗೆ ಬಾಧಿಸಿತು. ಖಿನ್ನತೆಗೆ ಜಾರಿದರು. ಸಕ್ರಿಯ ರಾಜಕಾರಣದಿಂದಲೇ ವಿಮುಖರಾದರು. ಹೀಗೆ ಬಿಟ್ಟರೆ ಏಕನಾಥ ಕೈಗೆ ಸಿಗುವುದಿಲ್ಲಎಂದು ಭಾವಿಸಿದ ದಿಘೆ, ಏಕನಾಥ ಅವರನ್ನು ಠಾಣೆ ಮುನ್ಸಿಪಲ್ ಕಾರ್ಪೊರೇಷನ್(ಟಿಎಂಸಿ) ಸದನ ನಾಯಕಧಿರನ್ನಾಗಿ ಮಾಡಿದರು. ನಿಧಾನವಾಗಿ ಏಕನಾಥ, ಮಕ್ಕಳ ಸಾವಿನ ನೋವಿನಿಂದ ಹೊರ ಬಂದರು. ರಾಜಕಾರಣದಲ್ಲಿಮತ್ತೆ ಸಕ್ರಿಯರಾದರು. ಶಿಂಧೆ ಅವರ ಮತ್ತೊಬ್ಬ ಪುತ್ರ ಡಾ.ಶ್ರೀಕಾಂತ್ ಅವರು ಕಲ್ಯಾಣ್ ಕ್ಷೇತ್ರದಿಂದ 2014ರಿಂದಲೂ ಸಂಸತ್ ಸದಸ್ಯರು.
ಬಳ್ಳಾರಿ ಜೈಲಿನಲ್ಲಿದ್ದರು: ಏಕನಾಥ ಮತ್ತು ಕರ್ನಾಟಕದ ನಡುವೆ ‘ಬೇಡವಾದ ಕಾರಣಕ್ಕೆ’ ನಂಟಿದೆ. 1985ರಲ್ಲಿಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಉಚ್ಚ್ರಾಯದ ಕಾಲ. ಆಗ ಮಹಾರಾಷ್ಟ್ರದಲ್ಲಿಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರತಿಭಟನೆ, ಗಲಾಟೆಗಳಾಗುಧಿತ್ತಿದ್ದವು. ಅಂಥ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಏಕನಾಥ ಅವರನ್ನು ಬಂಧಿಸಿ ಸುಮಾರು 40 ದಿನಗಳ ಕಾಲ ಬಳ್ಳಾರಿ ಜೈಲಿನಧಿಲ್ಲಿಡಲಾಗಿತ್ತು. ಏಕನಾಥ ಅವರು ಶಿವಸೇನೆಯ ಮುಂಚೂಣಿಯ ನಾಯಕಧಿರಾಗಿ, ಬೆಲೆ ಏರಿಕೆ, ಕಾಳದಂಧೆ ಸೇರಿದಂತೆ ಇನ್ನಿತರ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದ್ದಾರೆ.
ನಾಲ್ಕು ಬಾರಿ ಶಾಸಕ, ಸಚಿವ: 1997ರಲ್ಲಿಠಾಣೆ ಮುನ್ಸಿಪಲ್ ಕಾರ್ಪೊರೇಷನ್ (ಟಿಎಂಸಿ)ಗೆ ಆಯ್ಕೆಧಿಯಾಗಿ, 2001ರಿಂದ ಸಭಾನಾಯಕರಾಗಿದ್ದರು ಏಕನಾಥ್. ಟಿಎಂಸಿಗೆ ಸಂಬಂಧಿಸಿದ ಕೆಲಸಗಳಿಗೆ ಮಾತ್ರ ತಮ್ಮನ್ನು ಸೀಮಿತಧಿಗೊಳಿಸಲಿಲ್ಲ. ಬದಲಿಗೆ ಇಡೀ ಥಾಣೆ ಜಿಲ್ಲೆಗೆ ಸಂಬಂಧಿಸಿದ ಎಲ್ಲವಿಷಯಗಳಲ್ಲೂಮುಂಚೂಣಿಧಿಯಲ್ಲಿರುತ್ತಿದ್ದರು. ಪರಿಣಾಮವಾಗಿ, ಕೋಪರಿ-ಪಾಚಪಾಖಾಡಿಧಿ (2004)ಕ್ಷೇತ್ರದಿಂದ ಸ್ಪರ್ಧಿಸಲು ಶಿವಸೇನೆ ಟಿಕೆಟ್ ನೀಡಿತು. ಗೆದ್ದರು. ಆ ಬಳಿಕ ಸತತವಾಗಿ 2009, 2014 ಮತ್ತು 2019ರಲ್ಲಿಆಯ್ಕೆಧಿಯಾದರು. ಬಾಳಾಸಾಹೇಬ್ ಠಾಕ್ರೆ ಅವರು 2005ರಲ್ಲಿಥಾಣೆ ಜಿಲ್ಲಾಶಿವಸೇನೆಯ ಮುಖ್ಯಸ್ಥರನ್ನಾಗಿ ಮಾಡಿದರು. ಶಿವಸೇನೆಯಲ್ಲಿಈ ರೀತಿ ಶಾಸಕ- ಜಿಲ್ಲಾಮುಖ್ಯಸ್ಥ ಜವಾಬ್ದಾರಿ ಹೊಂದಿದ ಮೊದಲನೇ ವ್ಯಕ್ತಿಧಿಯಾದರು. 2014ರ ಚುನಾವಣೆ ಬಳಿಕ ಮಹಾರಾಷ್ಟ್ರ ವಿಧಾನಸಭೆಯಲ್ಲಿಪ್ರತಿಪಕ್ಷ ದ ನಾಯಕ ಹುದ್ದೆ ಒಲಿಯಿತು. ಇದಾದ ತಿಂಗಳಲ್ಲಿಶಿವಸೇನೆಯು ಬಿಜೆಪಿ ಸರಕಾರದಲ್ಲಿಭಾಗವಹಿಸುತ್ತಿದ್ದಂತೆ ಏಕನಾಥ್ ಅವರು ಲೋಕೋಪಯೋಗಿ ಸಚಿವರಾದರು. ಈ ವೇಳೆ, ಯಶವಂತರಾಯ ಚವಾಣ್ ಮುಕ್ತ ವಿಶ್ವವಿದ್ಯಾಲಯ ನೋಂದಣಿ ಮಾಡಿಕೊಂಡರು. ಶೇ.77.25 ಅಂಕಗಳೊಂದಿಗೆ ಬಿ ಎ ಡಿಗ್ರಿಯನ್ನು ಪಡೆದುಕೊಂಡರು. ಮರಾಠಿ ಮತ್ತು ರಾಜ್ಯಶಾಸ್ತ್ರ ಮುಖ್ಯ ವಿಷಯಗಳಾಗಿದ್ದವು. 2019ರ ಎಂವಿಎ ಸರಕಾರದಲ್ಲಿಲೋಕೋಪಧಿಯೋಗಿ ಜತೆಗೆ ಜತೆಗೆ ಹೆಚ್ಚುವರಿಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಣೆ ಹೆಗಲೇರಿತು. ಸಚಿವರಾಗಿ ಅವರು ತುಂಬಾ ಚುರುಕಾಗಿದ್ದರು. ತಮ್ಮ ಬಳಿ ಬರುವ ಎಲ್ಲಶಾಸಕರ ಬೇಕು ಬೇಡಗಳನ್ನು ಈಡೇರಿಸುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಉನ್ನತ ಹುದ್ದೆಯ ನಾಯಕರವರೆಗೂ ಅವರು ಕೈಗೆ ಸಿಗುತ್ತಿದ್ದರು. ಇದರಿಂದಾಗಿ ಪಕ್ಷ ದೊಳಗೆ ಜನಪ್ರಿಯರಾದರು. ಬಹುಶಃ ಈ ಗುಣಗಳೇ ಅವರ ಹಿಂದೆ 30ಕ್ಕೂ ಅಧಿಕ ಶಾಸಕರು ಬರಲು ಕಾರಣವಾಗಿರಬಹುದು!
ಅದೇನೇ ಇರಲಿ, ಮಹಾರಾಷ್ಟ್ರದಲ್ಲಿಬಹುದೊಡ್ಡ ರಾಜಕೀಯ ಪಲ್ಲಟಕ್ಕೆ ಏಕನಾಥ ಅವರು ಶ್ರೀಕಾರ ಹಾಕಿದ್ದಾರೆ. ತಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಳ್ಳುತ್ತಿರುವ ಅವರ ಮಂದೆ ಸಾಕಷ್ಟು ಸವಾಲುಗಳಿವೆ. ಅವರ ಬಂಡಾಯಕ್ಕೆ ಬಿಜೆಪಿ ಕೂಡ ಸಾಥ್ ನೀಡಿರುವ ಸಾಧ್ಯತೆಗಳಿರುವುದರಿಂದ ಸದ್ಯಧಿಕ್ಕಂತೂ ಬಂಡಾಯದಲ್ಲಿಗೆಲುವು ಅವರಿಗೇ ಒಲಿಯಧಿಬಹುದು. ಆದರೆ, ಮುಂದಿನ ಚುನಾವಣೆಗೆ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ಕಾಲವೇ ಉತ್ತರಿಸಬೇಕು.
(ಈ ಲೇಖನವು ವಿಜಯ ಕರ್ನಾಟಕದ ಭಾನುವಾರ ಸಂಚಿಕೆಯ ವ್ಯಕ್ತಿಗತ ಅಂಕಣದಲ್ಲಿ ಪ್ರಕಟವಾಗಿದೆ)