- ಮಲ್ಲಿಕಾರ್ಜುನ ತಿಪ್ಪಾರ
ಕೊರೊನಾ ವೈರಸ್(ಕೋವಿಡ್-19)ಗೆ ಇಡೀ ಜಗತ್ತೇ ತಲ್ಲಣಿಸಿದೆ. 60 ರಾಷ್ಟ್ರಗಳಿಗೆ ಹಬ್ಬಿರುವ ಈ ವೈರಾಣುವಿಗೆ ಈಗಾಗಲೇ 30 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಕೊರೊನಾ ಹರಡದಂತೆ, ಮಾರಣಾಂತಿಕವಾಗದಂತೆ ತಡೆಯುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಇನ್ನೂ ದೊಡ್ಡ ಪ್ರಮಾಣದಲ್ಲಿಯಶಸ್ಸು ದೊರೆಯುತ್ತಿಲ್ಲ.
ಆದರೆ, ಕೊರೊನಾ ವೈರಾಣುಗಿಂತಲೂ ಭೀಕರ ವೈರಸ್‌ಗಳ ಹಾವಳಿಯನ್ನು ಈ ಜಗತ್ತು ಕಂಡಿದೆ. 20ನೇ ಶತಮಾನದಲ್ಲಿಇಡೀ ಮನುಕುಲಕ್ಕೆ ಸಂಚಕಾರ ತಂದಿದ್ದ ಸಿಡುಬು(ಸ್ಮಾಲ್ ಪಾಕ್ಸ್) ವೈರಾಣು ಇದೀಗ ಭೂಮಿಯ ಮೇಲಿಲ್ಲ! ನಮ್ಮ ವೈದ್ಯ ವಿಜ್ಞಾನ ಬೆಳೆದಂತೆ ವೈರಾಣುಗಳಿಗೆ ಲಸಿಕೆಗಳು, ಔಷಧಗಳನ್ನು ಕಂಡುಹಿಡಿಯಲಾಗುತ್ತಿದೆ. ಆದರೂ ಈವರೆಗೂ ಕೆಲವು ವೈರಾಣುಗಳಿಗೆ ಯಾವುದೇ ರೀತಿಯ ಮದ್ದು ದೊರೆತಿಲ್ಲಮತ್ತು ಇನ್ನೂ ಕೆಲವು ರೋಗಾಣುಗಳನ್ನು ನಿಯಂತ್ರಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ಕೊರೊನಾ ಮುಂಚೆ ಎಬೋಲಾ ಎಂಬ ವೈರಸ್ ಕೂಡ ಹೆಚ್ಚು ಭೀತಿಯನ್ನು ಸೃಷ್ಟಿಸಿತ್ತು. ಮೂರ್ನಾಲ್ಕು ವರ್ಷಗಳ ಹಿಂದೆ ಆಫ್ರಿಕಾದ ಕೆಲವು ರಾಷ್ಟ್ರಗಳಲಿ ಕಾಣಿಸಿಕೊಂಡಿದ್ದ ಎಬೋಲಾ ಸೃಷ್ಟಿಸಿದ್ದ ಭೀಕರತೆ ಮಾತ್ರ ಗಂಭೀರವಾಗಿತ್ತು. ಎಬೋಲಾ ಪೀಡಿತರ ಪೈಕಿ ಶೇ.90ರಷ್ಟು ಜನರು ಸರಿಯಾದ ಚಿಕಿತ್ಸೆ ದೊರೆಯದೆ ಸಾವಿಗೀಡಾಗಿದ್ದರು. ಇದೀಗ ಕೊರೊನಾ ಕೂಡ ಅಂಥದ್ದೇ ಸ್ಥಿತಿಯನ್ನು ಸೃಷ್ಟಿಸಿದೆ. ಆರೋಗ್ಯ ತುರ್ತು ಪರಿಸ್ಥಿತಿ ಮಾತ್ರವಲ್ಲದೇ ವಿಶ್ವದ ಆರ್ಥಿಕ ವಲಯದ ಮೇಲೆ ಕೊರೊನಾ ಕೆಟ್ಟ ಪರಿಣಾಮ ಬೀರಿದೆ.
ಕೊರೊನಾ ಹೊರತುಪಡಿಸಿ ಈ ವಿಶ್ವವನ್ನು ಕಾಡಿದ ಅತಿ ಭಯಂಕರ ಹತ್ತು ವೈರಾಣುಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ಮಾರಣಾಂತಿಕ 'ಮಾರ್ಬರ್ಗ್'
1967ರಲ್ಲಿವಿಜ್ಞಾನಿಗಳು ಈ ವೈರಸ್ ಗುರುತಿಸಿದರು. ಉಗಾಂಡದಿಂದ ಮಂಗಗಳನ್ನು ಲ್ಯಾಬ್ ಕಾರ್ಮಿಕರು ಜರ್ಮನಿಗೆ ತರುತ್ತಿದ್ದರು. ಈ ವೇಳೆ, ಮಂಗಗಳಿಂದ ಅವರಿಗೂ ಈ ವೈರಸ್ ತಗುಲಿತ್ತು. ಎಬೋಲಾ ವೈರಸ್ ಮಾದರಿಯಲ್ಲೇ ಮಾರ್ಬರ್ಗ್ ವೈರಸ್ ಇದ್ದು, ಹೆಮರಾಜಿಕ್ ಫೀವರ್(ರಕ್ತಸ್ರಾವ ಜ್ವರ)ಕ್ಕೆ ಕಾರಣವಾಗುತ್ತದೆÜ. ಅಂದರೆ, ಮಾರ್ಬರ್ಗ್ ಸೋಂಕುಪೀಡಿತ ವ್ಯಕ್ತಿಗೆ ಸಿಕ್ಕಾಪಟ್ಟೆ ಜ್ವರ ಉಂಟಾಗಿ, ರಕ್ತಸ್ರಾವವಾಗುತ್ತದೆ. ಇದರ ಪರಿಣಾಮ ವ್ಯಕ್ತಿ ಶಾಕ್‌ಗೊಳಗಾಗಬಹುದು, ಬಹು ಅಂಗಾಂಗಗಳು ವೈಫಲ್ಯ ಕಾಣಬಹುದು ಮತ್ತು ಅಂತಿಮವಾಗಿ ಸಾವು ಸಂಭವಿಸಬಹುದು. ಮಾರ್ಬರ್ಗ್ ಮರಣದ ಪ್ರಮಾಣ ಶೇ.25ರಷ್ಟಿದೆ. ಆದರೆ, 1998 ಮತ್ತು 2000ರಲ್ಲಿ ಈ ವೈರಸ್ ಕಾಣಿಸಿಕೊಂಡಾಗ ಮರಣ ಪ್ರಮಾಣ ಶೇ.80ರಷ್ಟಿತ್ತು! ವಿಶೇಷವಾಗಿ ಕಾಂಗೊದಲ್ಲಿಈ ಜ್ವರ ಕಾಣಿಸಿಕೊಂಡ ನೂರು ಜನರ ಪೈಕಿ 80 ಜನರು ಸಾವಿಗೀಡಾಗುತ್ತಿದ್ದರು. 2005ರಲ್ಲಿಅಂಗೋಲಾದಲ್ಲಿ ಮಾರ್ಬರ್ಗ್ ಕಾಣಿಸಿಕೊಂಡು ಹೆಚ್ಚಿನ ಸಾವು ನೋವಿಗೆ ಕಾರಣವಾಗಿತ್ತು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.
2. ಅಲ್ಲೋಲ ಕಲ್ಲೋಲ 'ಎಬೋಲಾ'

ಮಾರಣಾಂತಿಕ 'ಎಬೋಲಾ ವೈರಸ್' 1967ರ ಸಮಯದಲ್ಲಿಆಫ್ರಿಕಾದ ಕಾಂಗೊ ಮತ್ತೂ ಸೂಡಾನ್ ರಾಷ್ಟ್ರಗಳಲ್ಲಿಏಕಕಾಲಕ್ಕೆ ಕಾಣಿಸಿಕೊಂಡಿತು. ಇದು ಕೂಡ ಡೆಡ್ಲಿವೈರಸ್ ಆಗಿದ್ದು, ಸ್ವಲ್ಪ ನಿರ್ಲಕ್ಷ್ಯ ವಹಿಸಿದರೆ ಸಾವು ಖಚಿತ. ರಕ್ತಅಥವಾ ದೇಹದ ಇತರ ದ್ರವ ಅಥವಾ ಸೋಂಕಿತ ವ್ಯಕ್ತಿ, ಪ್ರಾಣಿಯ ಅಂಗಾಂಶಗಳಿಂದ ಈ ವೈರಸ್ ಹರಡುತ್ತದೆ. ರಕ್ತಅಥವಾ ದೇಹದ ಇತರ ದ್ರವ ಅಥವಾ ಸೋಂಕಿತ ವ್ಯಕ್ತಿ, ಪ್ರಾಣಿಯ ಅಂಗಾಂಶಗಳಿಂದ ಈ ವೈರಸ್ ಹರಡುತ್ತದೆ. ತೀರಾ ಇತ್ತೀಚೆಗೆ
ಅಂದರೆ 2014ರಲ್ಲಿಎಬೋಲಾ ಪಶ್ಚಿಮ ಆಫ್ರಿಕಾದಲ್ಲಿಕಾಣಿಸಿಕೊಂಡಿತ್ತು. ಆತಂಕಕಾರಿ ಸಂಗತಿ ಎಂದರೆ, ಈ ವರೆಗೂ ಕಂಡು ಬಂದಿರುವ ವೈರಸ್‌ಗಳ ಪೈಕಿ ಇದು ಅತ್ಯಂತ ಡೆಡ್ಲಿವೈರಸ್ ಎಂಬುದು ಡಬ್ಲ್ಯೂಎಚ್‌ಒ ಅಭಿಮತವಾಗಿದೆ. ವೈರಸ್‌ನಿಂದಾಗಿ ಸಾವಿನ ಪ್ರಮಾಣ ಶೇ.50ರಷ್ಟಿತ್ತು. ಸೂಡಾನ್‌ನಲ್ಲಿಈ ಪ್ರಮಾಣ ಶೇ.70ರಷ್ಟಿತ್ತು.
3. ಭಯಂಕರ 'ರೇಬಿಸ್'
ರೇಬಿಸ್ ವೈರಸ್‌ಗೆ ಈಗ ಮದ್ದು ಇದೆ. ಆದರೆ, 1920ಕ್ಕಿಂತ ಮುಂಚೆ ಈ ವೈರಸ್ ಮಾರಣಾಂತಿಕವಾಗಿತ್ತು. ಆ ಬಳಿಕ ರೇಬಿಸ್‌ಗೆ ಮದ್ದು ಕಂಡು ಹಿಡಿದು ಅದನ್ನು ಹತೋಟಿಗೆ ತರಲಾಗಿತ್ತು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಈ ವೈರಸ್‌ನ ಉಪಟಳ ಅಷ್ಟಿಲ್ಲ. ಆದರೆ, ಈಗಲೂ ಭಾರತ ಮತ್ತು ಆಫ್ರಿಕದ ಕೆಲವು ಭಾಗಳಲ್ಲಿರೇಬಿಸ್ ಆಗಾಗ ಜನರಿಗೆ ತೊಂದರೆ ನೀಡುತ್ತದೆ. ರೇಬಿಸ್‌ಪೀಡಿತ ವ್ಯಕ್ತಿಯ ಮೆದುಳು ತನ್ನ ಕೆಲಸವನ್ನು ನಿಲ್ಲಿಸುತ್ತದೆ. ವಿಶೇಷವಾಗಿ ನಾಯಿ ಕಚ್ಚಿದಾಗ ಈ ವೈರಸ್ ಸೋಂಕು ತಗಲುತ್ತದೆ. ಕ್ರೋಧೋನ್ಮತ್ತ ಯಾವುದೇ ಪ್ರಾಣಿ ಕಚ್ಚಿದಾಗಲೂ ರೇಬಿಸ್ ಸೋಂಕು ಹರಡಬಹುದು. ಈಗಿನ ದಿನಗಳಲ್ಲಿರೇಬಿಸ್‌ಗೆ ಚುಚ್ಚುಮದ್ದು ಮತ್ತು ಆ್ಯಂಟಿಬಯೋಟಿಕ್ಸ್‌ಗಳು ಲಭ್ಯ ಇವೆ. ಆದರೆ, ರೇಬಿಸ್‌ಪೀಡಿತ ಪ್ರಾಣಿ ಕಚ್ಚಿದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಶೇ.100ರಷ್ಟು ಸಾವು ಖಚಿತ ಎನ್ನುತ್ತಾರೆ ತಜ್ಞರು.

4. 'ಎಚ್‌ಐವಿ' ಎಂಬ ಪಾಶವಿ
ಬಹುಶಃ ಎಚ್‌ಐವಿ ವೈರಾಣು ಸೃಷ್ಟಿಸಿದ್ದ ಆತಂಕವನ್ನು ಬೇರೆ ಯಾವುದೇ ವೈರಾಣು ಸೃಷ್ಟಿಸಿಲ್ಲವೇನೋ? ಅದರಲ್ಲೂಭಾರತದಲ್ಲಂತೂ ಎಚ್‌ಐವಿ ವೈರಾಣು ಸೃಷ್ಟಿಸಿದ್ದ ಭೀಕರತೆ ಇನ್ನೂ ಇದೆ. ಆಧುನಿಕ ಜಗತ್ತಿನ ಅತ್ಯಂತ ಡೆಡ್ಲಿವೈರಸ್ ಎಂದು ಎಚ್‌ಐವಿಯನ್ನು ಪರಿಗಣಿಸಲಾಗುತ್ತದೆ. ಈಗಲೂ ಜನರನ್ನು ಕೊಲ್ಲುವುದರಲ್ಲಿಈ ವೈರಾಣು ನಂಬರ್ ಒನ್ ಸ್ಥಾನದಲ್ಲಿದೆ! 1980ರಲ್ಲಿಕಾಂಗೋದಲ್ಲಿಮೊದಲ ಬಾರಿ ಎಚ್‌ಐವಿ ವೈರಾಣು ಪತ್ತೆಯಾಯಿತು. ಅಲ್ಲಿಂದ ಇಲ್ಲಿವರೆಗೂ 3.6 ಕೋಟಿ ಜನರು ಈ ವೈರಾಣುವಿಗೆ ಬಲಿಯಾಗಿದ್ದಾರೆ. ಮಾನವ ಕುಲ ಈವರೆಗೆ ಕಂಡ ಅತ್ಯಂತ ಮಾರಣಾಂತಿಕ ವೈರಸ್ ಇದಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಎಚ್‌ಐವಿಯನ್ನು ತಡೆಯಲು ಅತ್ಯಂತ ಶಕ್ತಿಶಾಲಿ ಆ್ಯಂಟಿ ವೈರಲ್ ಔಷಧ ಸಾಧ್ಯವಾಗಿದೆಯಾದರೂ ಈಗಲೂ ಕಡಿಮೆ ತಲಾದಾಯ ಇರುವ ರಾಷ್ಟ್ರಗಳಲ್ಲಿಎಚ್‌ಐವಿ ಆತಂಕ ಇನ್ನೂ ನಿಂತಿಲ್ಲ. ಸಬ್-ಸಹರನ್ ಆಫ್ರಿಕಾದಲ್ಲಿಪ್ರತಿ 20 ವಯಸ್ಕರಲ್ಲಿಒಬ್ಬರು ಎಚ್‌ಐವಿ ಪೀಡಿತರಾಗುತ್ತಿದ್ದಾರೆ. ಸದ್ಯ 3.1 ಕೋಟಿಯಿಂದ 3.5 ಕೋಟಿ ಜನರು ಎಚ್‌ಐವಿಪೀಡಿತರಿದ್ದಾರೆ. ಭಾರತದಲ್ಲಿಎಚ್‌ಐವಿಪೀಡಿತರ ಸಂಖ್ಯೆ ಹೆಚ್ಚಿತ್ತು. ಆದರೆ ಸರಕಾರ ಹಾಗೂ ಸಂಘಸಂಸ್ಥೆಗಳ ಜಾಗೃತಿಯ ಪರಿಣಾಮವಾಗಿ ಅದರ ಪರಿಣಾಮ ತಗ್ಗಿದೆ.

5. ಜಗತ್ತು ಕಾಡಿದ 'ಸಿಡುಬು'
1980ರಲ್ಲಿವಿಶ್ವ ಆರೋಗ್ಯ ಸಂಸ್ಥೆಯು ಇಡೀ ಜಗತ್ತನ್ನು ಸ್ಮಾಲ್‌ಪಾಕ್ಸ್(ಸಿಡುಬು) ಮುಕ್ತ ಮಾಡುವುದಾಗಿ ಘೋಷಿಸಿತು. ಆದರೆ, ಇದಕ್ಕೂ ಮೊದಲು ಸಾವಿರಾರು ವರ್ಷಗಳಿಂದ ಮಾನವ ಕುಲ ಈ ಸ್ಮಾಲ್‌ಪಾಕ್ಸ್ ರೋಗಾಣುವಿನ ಅಟ್ಟಹಾಸಕ್ಕೆ ನರಳಿದೆ. ಸೋಂಕುಪೀಡಿತ ಪ್ರತಿ ಮೂವರ ಪೈಕಿ ಒಬ್ಬರ ಸಾವು ಆಗ ಖಚಿತವಾಗಿತ್ತು. ಇದರಿಂದ ಬದುಕುಳಿದವರು ಶಾಶ್ವತ ಗಾಯದ ಗುರುತುಗಳು ಮತ್ತು ಅಂಧ ಸಮಸ್ಯೆಯಿಂದ ಬಳಲಬೇಕಾಗುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. 20ನೇ ಶತಮಾನದಲ್ಲಿಈ ಸ್ಮಾಲ್‌ಪಾಕ್ಸ್‌ನಿಂದಾಗಿ ಅಂದಾಜು 30 ಕೋಟಿ ಜನರು ಸಾವಿಗೀಡಾಗಿದ್ದಾರೆ!

6. ಅಮೆರಿಕದ ಹಂಟರ್ 'ಹ್ಯಾಂಟ್'
ಹ್ಯಾಂಟ್‌ವೈರಸ್ ಪಲ್ಮನರಿ ಸಿಂಡ್ರೋಮ್(ಎಚ್‌ಪಿಎಸ್) ಮೊದಲ ಬಾರಿಗೆ 1993ರಲ್ಲಿಅಮೆರಿಕದಲ್ಲಿಕಾಣಿಸಿಕೊಂಡಿತು. ಈ ವೈರಾಣು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಆದರೆ, ಸೋಂಕಿತ ಇಲಿಯ ಹಿಕ್ಕೆಯು ಮನುಷ್ಯ ಸಂಪರ್ಕಕ್ಕೆ ಬಂದರೆ ಸೋಂಕು ಗ್ಯಾರಂಟಿ ತಗಲುತ್ತದೆ. 1950ರಲ್ಲಿಈ ಹ್ಯಾಂಟ್‌ವೈರಸ್ ತೀವ್ರವಾಗಿ ಕಾಣಿಸಿಕೊಂಡಿತು. ಕೊರಿಯನ್ ವಾರ್ ವೇಳೆ 3,000ಕ್ಕೂ ಹೆಚ್ಚು ಸೈನಿಕರು ಈ ವೈರಾಣುವಿನಿಂದ ಬಳಲಿದ್ದರು ಮತ್ತು ಪೀಡಿತರ ಪೈಕಿ ಶೇ.12ರಷ್ಟು ಯೋಧರು ಸಾವಿಗೀಡಾಗಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇದು ಆಗ ಹೊಸದಾದ ರೋಗಾಣು ಆದ್ದರಿಂದ ತಕ್ಷಣಕ್ಕೆ ಯಾವುದೇ ಚಿಕಿತ್ಸೆ ಇರಲಿಲ್ಲ. ನಂತರ ಪಾಶ್ಚಿಮಾತ್ಯ ರಾಷ್ಟ್ರಗಳು ಇದಕ್ಕೆ ಔಷಧವನ್ನು ಕಂಡುಹಿಡಿದವು.

7. ಇನ್‌ಫ್ಲುಯೆಂಜಾ
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ) ಪ್ರಕಾರ, ಜಗತ್ತಿನಾದ್ಯಂತ ವರ್ಷಕ್ಕೆ ಐದು ಲಕ್ಷ ಜನರು ಈ ವೈರಸ್‌ನಿಂದಾಗಿ ಸಾವಿಗೀಡಾಗುತ್ತಾರೆ. ಇದು ಕೂಡ ಅತ್ಯಂತ ಡೆಡ್ಲಿವೈರಾಣು ಆಗಿದ್ದು, ಇದನ್ನು ಕೆಲವೊಮ್ಮೆ ಸ್ಪಾನಿಸ್ ಫ್ಲುಎಂದೂ ಕರೆಯಲಾಗುತ್ತದೆ. 1918ರಲ್ಲಿಇದು ಮೊದಲ ಬಾರಿಗೆ ಪತ್ತೆಯಾಯಿತು ಮತ್ತು ಈವರೆಗೆ ಸುಮಾರು 5 ಕೋಟಿ ಜನರು ಈ ವೈರಾಣುವಿಗೆ ಬಲಿಯಾಗಿದ್ದಾರೆ. ಈಗ ಇಡೀ ಜಗತ್ತಿಗೆ ತಲೆನೋವು ತಂದಿರುವ ಕೋವಿಡ್-19(ಕೊರೊನಾ ವೈರಸ್) ಮರಣದ ಪ್ರಮಾಣದ ಈಇನ್‌ಫ್ಲುಯೆಂಜಾ ವೈರಸ್‌ಗಿಂತಲೂ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
8. 'ಡೆಂಗೆ' ಭೀತಿಯ ಡಂಗುರ
ಡೆಂಗೆ ವೈರಸ್ ಬಗ್ಗೆ ಹೇಳುವುದೇ ಬೇಡ! ಪ್ರತಿ ವರ್ಷ ಡೆಂಗೆ ವೈರಸ್ ಹಾವಳಿಯನ್ನು ಮಾಧ್ಯಮಗಳಲ್ಲಿಕಾಣುತ್ತವೆ. ಈ ವೈರಸ್ 1950ರಲ್ಲಿಫಿಲಿಪ್ಪಿನ್ಸ್ ಮತ್ತು ಥಾಯ್ಲೆಂಡ್‌ನಲ್ಲಿಮೊದಲ ಬಾರಿಗೆ ಪತ್ತೆಯಾಯಿತು. ಆ ಬಳಿಕ ಜಗತ್ತಿನ ಉಷ್ಣ ವಲಯ ಹಾಗೂ ಉಪಉಷ್ಣವಲಯಗಳ ರಾಷ್ಟ್ರಗಳಲ್ಲಿವ್ಯಾಪಕವಾಗಿ ಹರಡಿತು. ಸದ್ಯ, ಜಗತ್ತಿನ ಶೇ.40ರಷ್ಟು ಜನಸಂಖ್ಯೆ ಈ ಡೆಂಗೆ ಪ್ರಭಾವದ ಪ್ರದೇಶಗಳಲ್ಲಿದೆ. ಈ ವೈರಸ್ ಪ್ರಸರಣಕ್ಕೆ ಮುಖ್ಯ ಸೊಳ್ಳೆಗಳು ಕಾರಣ. ಈ ಸೊಳ್ಳೆಗಳಿಂದಾಗಿಯೇ ಇಡೀ ಜಗತ್ತಿನಾದ್ಯಂತ ವ್ಯಾಪಕ ರೀತಿಯಲ್ಲಿಡೆಂಗೆ ಹರಡುವಂತಾಗಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ 5 ರಿಂದ 10 ಕೋಟಿ ಜನರು ಡೆಂಗೆ ಸೋಂಕುಪಿಡೀತರಾಗುತ್ತಾರೆ. ಇತರ ವೈರಸ್‌ಗಳಿಗೆ ಹೋಲಿಸಿದರೆ ಮರಣದ ಪ್ರಮಾಣ ಕಡಿಮೆ ಇದೆ. ಶೇ.2.5ರಷ್ಟು ಮಾತ್ರ ಮರಣ ಪ್ರಮಾಣವಿದೆ. ಹಾಗಂತ ವೈರಸ್ ನಿಯಂತ್ರಣಕ್ಕೆ ಮದ್ದು ಇದೆ ಎಂದು ಭಾವಿಸಬೇಕಿಲ್ಲ!
9. ಮಕ್ಕಳಿಗೆ ಕಂಟಕ 'ರೋಟ್'
ಮಕ್ಕಳಿಗೆ ಕಂಟಕಪ್ರಾಯವಾಗಿರುವ ಈ ರೋಟ್ ವೈರಸ್ ನಿಯಂತ್ರಣಕ್ಕೆ ಈಗ ಎರಡು ಲಸಿಕೆಗಳು ಲಭ್ಯ ಇವೆ. ಶಿಶುಗಳು ಹಾಗೂ ಮಕ್ಕಳಿಗೆ ಮಾರಣಾಂತಿಕವಾಗಿ ಕಾಯಿಲೆಯನ್ನು ಸೃಷ್ಟಿಸುತ್ತಿದ್ದ ಈ ವೈರಸ್ ಅತ್ಯಂತ ವೇಗವಾಗಿ ಹರಡಬಲ್ಲದು. ಸದ್ಯ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿಈ ವೈರಸ್ ಕಾರಣಕ್ಕೆ ಸಾವಿಗೀಡಾಗುವ ಮಕ್ಕಳ ಸಂಖ್ಯೆ ತೀರಾ ಕಡಿಮೆ ಇದೆ. ಆದರೆ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿಇದು ಮಾರಣಾಂತಿಕವಾಗಿ ಪರಿಣಮಿಸಿದೆ. ರೀಹೈಡ್ರೇಷನ್ ಚಿಕಿತ್ಸೆ ಎಲ್ಲೆಡೆ ಇರದಿರುವುದೇ ಇದಕ್ಕೆ ಕಾರಣ. 2008ರಲ್ಲಿಐದು ವರ್ಷದೊಳಗಿನ 453,0000 ಮಕ್ಕಳು ಈ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ! ಆದರೆ, ಆ ಬಳಿಕ ಲಸಿಕೆಗಳನ್ನು ಪೂರೈಸಿದ ಪರಿಣಾಮ ಮರದ ಪ್ರಮಾಣದಲ್ಲಿಭಾರೀ ಕುಸಿತವಾಗಿದೆ.
10. ಎಪ್ಪಾ... 'ನಿಫಾ!'
ಬಾವಲಿ ಕಚ್ಚಿದ ಹಣ್ಣುಗಳು ಮಾನವನ ಸಂಪರ್ಕಕ್ಕೆ ಬಂದಾಗ ಈ ನಿಫಾ ಸೋಂಕು ತಗಲುತ್ತದೆ. ಇದಕ್ಕೂ ಸದ್ಯಕ್ಕೆ ಯಾವುದೇ ಔಷಧಗಳಿಲ್ಲ. 2018ರ ಮಾಹಿತಿ ಪ್ರಕಾರ 700 ಜನರಿಗೆ ನಿಫಾ ಸೋಂಕು ತಗುಲಿತ್ತು ಮತ್ತು ವೈರಾಣುಪೀಡಿತರ ಪೈಕಿ ಶೇ.50ರಿಂದ 70ರಷ್ಟು ನಿಧನರಾಗಿದ್ದರು. ನಮ್ಮ ನೆರೆಯ ಕೇರಳದಲ್ಲಿನಿಫಾ ಭಾರಿ ಭೀತಿಯನ್ನು ಸೃಷ್ಟಿಸಿತ್ತಲ್ಲದೇ 17 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.