ಶನಿವಾರ, ಜನವರಿ 6, 2007

ಮುಂಗಾರಿನ ನೆನಪು...


ಧೋ ಎಂದು ಸುರಿಯುವ
ಮುಂಗಾರು ಮಳೆಗೆ
ನನ್ನವಳ ನೆನಪು ಉಮ್ಮಳಿಸುತ್ತಿದೆ,
ಕೈ-ಕೈ ಹಿಡಿದು ಮಳೆಯಲ್ಲಿ ಹಾಕಿದ ಹೆಜ್ಜೆಗಳು
ಎದೆಯಲ್ಲಿ ಅಚ್ಚಳಿಯದೇ ಉಳಿದಿವೆ.

ಮುಂಗಾರಿನ ಮಳೆಗೆ ಹೆಣೆದ ಕನಸುಗಳು
ಇನ್ನೂ ಹಾಗೆ ಇವೆ, ನೀರ ನಿಂತ ಮಡಿಗಳಂತೆ
ಕಟ್ಟೆಯೊಡೆದು ನೀರು ಜೀನುಗುವಂತೆ
ಈಗಲೋ ಆಗಲೋ ಒಮ್ಮೊಮ್ಮೆ ಇಣಕುತ್ತಿವೆ.
ಗೂಡಿನಿಂದ ಮರಿಹಕ್ಕಿ ಗೋಣು ಹೊರ ಹಾಕಿದಂತೆ

ಮುಂಗಾರಿನಲ್ಲಿ ಅಲ್ಲವೇ ನಾನವಳಿಗೆ
ಕೊಟ್ಟದ್ದು ಮೊದಲ ಮುತ್ತು...
ಆಕೆ ನಾಚಿ ನೀರಾಗಿದ್ದು, ಎಲ್ಲವೂ ನೆನಪಾಗಿ ಕಾಡುತ್ತಿದೆ.

ಹಸಿಯಾದ ರಸ್ತೆಯಲ್ಲಿ ನಡೆಯಾಗದೂ
ನಡೆಯದೇ ಇರಲಾಗದೂ
ಕೈ ಹಾಕಿ ಮಾಡಿದ ಆಣೆ ಪ್ರಮಾಣಗಳು
ಮುಂಗಾರಿನ ಮಳೆಯಲ್ಲಿ ಅಲ್ಲವೇ
ಮತ್ತೆ ಏಕೆ ಮರೆತಳು....?

-ಮಲ್ಲಿಕಾರ್ಜುನ