ಗುರುವಾರ, ಆಗಸ್ಟ್ 27, 2020

Google People Card: ವರ್ಚುಯಲ್‌ ವಿಸಿಟಿಂಗ್‌ ಕಾರ್ಡ್‌!

 ಗೂಗಲ್ನಿಂದಪೀಪಲ್ಕಾರ್ಡ್‌’ ಫೀಚರ್


 - ಮಲ್ಲಿಕಾರ್ಜುನ ತಿಪ್ಪಾರ
ದ್ಯೆತ್ಯ ಗೂಗಲ್ತನ್ನ ಬಳಕೆದಾರರಿಗೆ ಅತ್ಯಾಧುನಿಕ ತಾಂತ್ರಿಕ ಸೌಲಭ್ಯ ಒದಗಿಸಲು  ಎಂದೂ ಹಿಂದೆ ಬಿದ್ದಿಲ್ಲ. ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಮತ್ತು ಲಭ್ಯವಾಗುವ ತಾಂತ್ರಿಕತೆಯನ್ನು ಬಳಸಿಕೊಂಡು ವಿಶಿಷ್ಟ ಬಳಕೆಯ ಅನು­ಭವವನ್ನು ನೀಡುತ್ತಾ ಬಂದಿದೆ. ಇದೀಗ ಅದೇ ಮಾದರಿಯಲ್ಲಿಪೀಪಲ್ಕಾರ್ಡ್‌’ ಎಂಬ ಹೊಸ ಆಯ್ಕೆಯೊಂದನ್ನು ಬಳಕೆದಾರರಿಗೆ ನೀಡಿದೆ. ಇದು ಈಗ ಭಾರತೀಯ ಬಳಕೆದಾರರಿಗೆ ಲಭ್ಯವಿದ್ದು, ವರ್ಚುಯಲ್ಕಾರ್ಡ್ರಚಿಸಿಕೊಳ್ಳಬಹುದಾಗಿದೆ.

ಆನ್ಲೈನ್ನಲ್ಲಿಜನರ ಇರುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದಲೇ ಗೂಗಲ್ಈ ಪೀಪಲ್ಕಾರ್ಡ್ಫೀಚರ್ಅನ್ನು ಹೊರ ತಂದಿದೆ. ವಿಶೇಷವಾಗಿ ಆಗಷ್ಟೇ ಆನ್ಲೈನ್  ಬಳಕೆಗೆ ಮುಂದಾದವರಿಗೆ ಇದು ಹೆಚ್ಚಿನ ನೆರವು ನೀಡಲಿದೆ. ಇನ್ನು ನೀವು ಇದನ್ನು ಬಿಸಿನೆಸ್ಕಾರ್ಡ್ರೀತಿಯಲ್ಲಿಬಳಸಿಕೊಳ್ಳಬಹುದು. ವರ್ಚುಯಲ್ವಿಸಿಟಿಂಗ್ಕಾರ್ಡ್ಎಂದು ಗುರುತಿಸಲಾಗುತ್ತಿರುವ ಈ ಪೀಪಲ್ಕಾರ್ಡ್ಅನ್ನು ಬಳಸಿಕೊಂಡು ಬಳಕೆ­ದಾರರು ತಮ್ಮ ಕಾಂಟ್ಯಾಕ್ಟ್ ಡಿಟೇಲ್ಸ್ಹೆಚ್ಚಿಸುವುದಕ್ಕೆ ಬಳಸಬಹುದು. ಇದಕ್ಕೆ ಅವರು ಒದಗಿಸುವ ಸಾಮಾಜಿಕ ಜಾಲತಾಣ­ಗಳ ಮಾಹಿತಿಯು ಹೆಚ್ಚಿನ ನೆರವು ಒದಗಿಸುತ್ತದೆ. ಹಾಗಂತ ಎಲ್ಲಮಾಹಿತಿಯನ್ನು ಒದಗಿಸಬೇಕೆಂದೇನೂ ಇಲ್ಲನಿಮಗೆ ಕೊಡಬೇಕಿನಿಸಿರುವ ಮಾಹಿತಿಯನ್ನು ಮಾತ್ರವೇ ದಾಖಲಿಸಬಹುದು.

‘‘ಪ್ರಭಾವಿಗಳು, ಉದ್ಯಮಿಗಳು, ಉದ್ಯೋಗ ಶೋಧಿ­ಸುತ್ತಿ­ರು­ವವರು, ಸ್ವಯಂ ಉದ್ಯೋಗಿಗಳು, ಸ್ವತಂತ್ರೋದ್ಯೋಗಿ­ಗಳು ಸೇರಿ ಲಕ್ಷಾಂತರು ಜನರಿಗೆ ತಮ್ಮನ್ನು ತಾವು ಶೋಧಿಸಿಕೊಳ್ಳಲು ಇದು ನೆರವು ನೀಡುತ್ತದೆ.ಜಗತನ್ನು ಶೋಧಿಸಲು ಈ ಹೊಸ ವೈಶಿಷ್ಟ್ಯ­ವೂ ಸಹಾಯ ಮಾಡುತ್ತದೆ ಎಂದು ನಾವು ಭಾವಿಸು­ತ್ತೇವೆ,’’ ಎಂದು ಗೂಗಲ್ತನ್ನ ಬ್ಲಾಗ್ಪೋಸ್ಟ್ನಲ್ಲಿಹೇಳಿಕೊಂಡಿದೆ. ಪೀಪಲ್ಕಾರ್ಡ್ರಚಿಸಿ ಆದ ಮೇಲೆ ಅದು ಲೈವ್ಆಗುತ್ತದೆ ಮತ್ತು ಶೋಧದ ಭಾಗವಾಗಿ ಸರ್ಚ್ರಿಸಲ್ಟ್ನಲ್ಲಿಅದು ಕಾಣಿಸಿಕೊಳ್ಳುತ್ತದೆ. ಸರ್ಚ್ಎಂಜಿನ್ಬಳಕೆದಾರರು ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಶೋಧಿಸಿದಾಗ ಆ ವ್ಯಕ್ತಿಯ ಪೀಪಲ್ಕಾರ್ಡ್ಜೊತೆಗೆ ಇತರ ಮಾಹಿತಿಯೂ ಲಭ್ಯವಾಗುತ್ತದೆ. ಅದರಲ್ಲಿಹೆಸರು, ವೃತ್ತಿ ಮತ್ತು ಸ್ಥಳದ ಮತ್ತಿತರ ಮಾಹಿತಿಯೂ ಮಾಡ್ಯುಲ್ಕಾಣಿಸಿಕೊಳ್ಳುತ್ತದೆ. ಒಂದೊಮ್ಮೆ ಒಂದೇ  ಹೆಸರಿನ ಅನೇಕ ಕಾರ್ಡ್ಗಳಿದ್ದರೆ, ಬಳಕೆದಾರರಿಗೆ ಮಲ್ಟಿಪಲ್ಮಾಡ್ಯುಲ್ಕಾರ್ಡ್ಗಳು ಗೋಚರವಾಗುತ್ತವೆ ಮತ್ತು ತಮಗೆ ಬೇಕಿರುವ ವ್ಯಕ್ತಿಯ ಮಾಹಿತಿಯನ್ನು ಪ್ರತ್ಯೇಕಿಸಲು ಅವರಿಗೆ ಸಾಧ್ಯವಾಗುತ್ತದೆ.

Add caption

 ಗೂಗಲ್ಕಾರ್ಡ್ಕ್ರಿಯೆಟ್ಹೇಗೆ?: ಗೂಗಲ್ಕಾರ್ಡ್ಕ್ರಿಯೆಟ್ಮಾಡಲು ನೀವು ಗೂಗಲ್ನ ಅಧಿಕೃತ ಇ-ಮೇಲ್ಐಡಿ ಮತ್ತು ಮೊಬೈಲ್ನಂಬರ್ಗಳನ್ನು ಹೊಂದಿರ­ಬೇಕು.

ಹೀಗೆ ಮಾಡಿ: ನಿಮ್ಮ ಸ್ಮಾರ್ಟ್ಫೋನ್ನ ಗೂಗಲ್ಸರ್ಚ್ಬಾರ್ನಲ್ಲಿ Add me to search ಎಂದು ಟೈಪ್ಮಾಡಿ. ಆಗ Get Started  ಎಂಬ ಬಟನ್ಕಾಣುತ್ತದೆ ಅದರ ಮೇಲೆ ಟ್ಯಾಪ್ಮಾಡಿ. ಆಗ ಅದು ನಿಮ್ಮನ್ನು Edit your public profile ಆಪ್ಷನ್ಗೆ ಕರೆದೊಯ್ಯುತ್ತದೆ. ಅಲ್ಲಿನೀವು, ಫೋಟೊ, ಹೆಸರು, ಬಿಸಿನೆಸ್ಅಥವಾ ನೀವು ಮಾಡುತ್ತಿರುವ ಉದ್ಯೋಗ, ನಿಮ್ಮ ಹುದ್ದೆ, ಕಂಪನಿ ಹೆಸರು, ನಿಮ್ಮ ಬಗ್ಗೆ ಹೀಗೆ ಎಲ್ಲವೈಯಕ್ತಿಕ ಮಾಹಿತಿ ಜೊತೆಗೆ ನಿಮ್ಮ ಫೋನ್ನಂಬರ್‌, ಇ ಮೇಲ್ಐಡಿ ಮಾಹಿತಿಯನ್ನೂ ನಮೂದಿಸಬೇಕಾಗುತ್ತದೆ. ಇಷ್ಟೆಲ್ಲಾಮಾಹಿತಿಯನ್ನು ನೀವು ಡಿಜಿಟಲ್ಫಾರ್ಮ್ನಲ್ಲಿಭರ್ತಿ ಮಾಡಿದ ಮೇಲೆ ಪ್ರಿವಿವ್ಯೂ ಕಾಣಿಸುತ್ತದೆ. ಆಗ ನೀವು ದಾಖಲಿಸಿದ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಮತ್ತೊಮ್ಮೆ ಖಾತ್ರಿಪಡಿಸಿ­ಕೊಂಡು ಸೇವ್ಬಟನ್ಒತ್ತಿ. ಆಗ ವರ್ಚುಯಲ್ಬಿಸಿನೆಸ್ಕಾರ್ಡ್ಸೃಷ್ಟಿಯಾಗಿ ಕೆಲವೇ ನಿಮಿಷಗಳಲ್ಲಿಅದು ಲೈವ್ಆಗುತ್ತದೆ. ಒಮ್ಮೆ ನಿಮ್ಮ ಕಾರ್ಡ್ಲೈವ್ಆಯ್ತೆಂದರೆ, ಗೂಗಲ್ಸರ್ಚ್ಮಾಡಿದಾಗ, ನಿಮ್ಮ ಮೊಬೈಲ್ನಂಬರ್‌, ನಿಮ್ಮ ಹೆಸರನ್ನು ಶೋಧಿಸಿದಾಗ ರಿಸಲ್ಟ್ನಿಮ್ಮ ಬಿಸಿನೆಸ್ಕಾರ್ಡ್ಮಾಹಿತಿಯನ್ನು ಒದಗಿಸುತ್ತದೆ.

ಎಚ್ಚರಿಕೆಯೂ ಇರಲಿ: ಈ ವರ್ಚುಯಲ್ವಿಸಿಟಿಂಗ್ಕಾರ್ಡ್ಅನ್ನು ಯಾರು ಬೇಕಾದರೂ ರಚಿಸಿಕೊಳ್ಳಬಹುದು. ಆದರೆ, ಬಿಸಿನೆಸ್ಮೆನ್ಮತ್ತು ಉದ್ದಿಮೆದಾರರು, ವ್ಯಾಪಾರಿಗಳು ಇದು ಹೆಚ್ಚಿನ ಲಾಭವನ್ನು ತಂದುಕೊಡಲಿದೆ. ಅವರಿಗೆ ತಮ್ಮ ಗ್ರಾಹಕರ ಜತೆಗಿನ ಸಂಪರ್ಕಕ್ಕೆ ಇದು ರಹದಾರಿ ಯಾಗಲಿದೆ. ಖಾಸಗಿ ಮಾಹಿತಿ­ಯನ್ನು ಹಂಚಿಕೊಳ್ಳಲು ಇಷ್ಟವಿಲ್ಲದವರೂ ಈ ಕಾರ್ಡ್ನಿಂದ ದೂರ ಇರುವುದು ಒಳ್ಳೆಯದು. ಯಾಕೆಂದರೆ, ನೀವು ಒದಗಿಸುವ ನಂಬರ್‌, ಪೋಟೊಗಳನ್ನು ಅನ್ಯ ಕಾರಣಕ್ಕೆ ಬಳಸಿಕೊಳ್ಳಬಹುದು.

(ಈ ಲೇಖನ ವಿಜಯ ಕರ್ನಾಟಕದ 2020ರ ಆಗಸ್ಟ್ 26ರ ಸಂಚಿಕೆಯಲ್ಲಿ ಪ್ರಕಟಾಗಿದೆ)

ಸೋಮವಾರ, ಆಗಸ್ಟ್ 3, 2020

Sarah Catherine Gilbert: ಸಾರಾ ‘ಲಸಿಕೆ’ ಕೊಡ್ತಾರಾ?

ಲಸಿಕೆಗಳ ತಯಾರಿಕೆಯಲ್ಲಿನಿಷ್ಣಾತರಾಗಿರುವ ಆಕ್ಸ್ಫರ್ಡ್ವಿಶ್ವವಿದ್ಯಾಲಯದ ಡಾ. ಸಾರಾ ಗಿಲ್ಬರ್ಟ್ಅವರು, ಕೊರೊನಾ ಲಸಿಕೆ ಪ್ರಯೋಗಕ್ಕೆ ತಮ್ಮ ತ್ರಿವಳಿ ಮಕ್ಕಳನ್ನೇ ಒಡ್ಡಿದ್ದಾರೆ.

 

- ಮಲ್ಲಿಕಾರ್ಜುನ ತಿಪ್ಪಾರ

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್‌-19 ವೈರಾಣು ಸೋಂಕಿತರ ಸಂಖ್ಯೆ 18 ಲಕ್ಷ  ದಾಟಿದ್ದು, ಈವರೆಗೆ ಹತ್ತಿರ 6.80 ಲಕ್ಷ  ಜನರು ಮೃತಪಟ್ಟಿದ್ದಾರೆ ಮತ್ತು ಈ ಸಂಖ್ಯೆ ಇನ್ನೂ ಏರುತ್ತಲೇ ಇದೆ. ಹಾಗಾಗಿ, ಕೋವಿಡ್‌ -19 ವಿರುದ್ಧದ ಲಸಿಕೆ ಅಥವಾ ಔಷಧ ತಯಾರಿಕೆ ಈ ಕ್ಷ ಣದ ಅಗತ್ಯಧಿವಾಗಿದ್ದು, ಅನೇಕ ರಾಷ್ಟ್ರಗಳು, ಔಷಧ ಕಂಪನಿಗಳು ಮತ್ತು ಔಷಧ ಸಂಶೋಧನಾ ಸಂಸ್ಥೆಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿವೆ; ಪೈಪೋಟಿಗಿಳಿದಿವೆ. ಎಲ್ಲರಿಗಿಂತ ಮೊದಲು ಲಸಿಕೆಯನ್ನೋ, ಔಷಧವನ್ನೋ ಕಂಡು ಹಿಡಿದು ಅದರ ಮೇಲೆ ಹಕ್ಕು ಸ್ವಾಮ್ಯ ಸಾಧಿಸುವುದು ಒಂದು, ಇಡೀ ಮನುಕುಲವನ್ನು ಈ ವೈರಾಣುವಿನಿಂದ ಕಾಪಾಡುವುದು ಮತ್ತೊಂದು ಉದ್ದೇಶ. ಈ ವಿಷಯದಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿರುವುದು ಲಂಡನ್ನ ಆಕ್ಸ್ಫರ್ಡ್ವಿವಿಯ ಸಂಶೋಧಕರ ತಂಡ. ಈ ತಂಡದ ನೇತೃತ್ವ ವಹಿಸಿರುವುದು ಖ್ಯಾತ ಲಸಿಕಾಶಾಸ್ತ್ರಜ್ಞೆ ಡಾ. ಸಾರಾ ಗಿಲ್ಬರ್ಟ್‌. ವ್ಯಾಕ್ಸೀನಾಲಜಿ ಪ್ರಾಧ್ಯಾಪಕಿಯೂ ಆಗಿರುವ ಡಾ. ಸಾರಾ, ಕೋವಿಡ್ವಿರುದ್ಧ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮೊದಲ ಹಂತದ ಪ್ರಯೋಗದಲ್ಲಿಹೆಚ್ಚು ಪರಿಣಾಧಿಮಕಾರಿಯಾಧಿಗಿರುವುದು ಸಂತಸಕ್ಕೆ ಕಾರಣವಾಗಿದೆ. ಹಾಗಾಗಿ, ಇಡೀ ಜಗತ್ತು ಸಾರಾ ನೇತೃತ್ವದಲ್ಲಿಅಭಿವೃದ್ಧಿಯಾಗುತ್ತಿರುವ ಆಕ್ಸ್ಫರ್ಡ್ನ ಲಸಿಕೆ ಯತ್ತಲೇ ದೃಷ್ಟಿ ನೆಟ್ಟು ಕೂತಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸಾಂಕ್ರಾಮಿಕ ಎಂದು ಘೋಷಿಸುವ ಮೊದಲೇ ಆಕ್ಸ್ಫರ್ಡ್ವಿವಿ ಮತ್ತು ಜೆನ್ನರ್ಇನ್ಸ್ಟಿಟ್ಯೂಟ್ಜಂಟಿಯಾಗಿ 250 ಸಂಶೋಧಕರ ತಂಡ  ಔಷಧ ಕುರಿತಾದ ವಿನ್ಯಾಸವನ್ನು ಸಿದ್ಧಪಡಿಸಲು ಆರಂಭಿಸಿತು. ಅಂದರೆ, ಜಗತ್ತು ಇನ್ನೂ ಕೊರೊನಾ ವೈರಸ್ಹಿನ್ನಲೆ ಮುನ್ನಲೆ ತಿಳಿಯುವ ಮೊದಲೇ ಈ ತಂಡ ಲಸಿಕೆಯ ಬಗ್ಗೆ ವಿಸ್ತೃತವಾದ ಪ್ಲ್ಯಾನ್ಹರವಿಕೊಂಡು ತಯಾರಾಗಿತ್ತು ಎಂದರೆ ಅದಕ್ಕೆ ಡಾ. ಸಾರಾ ಅವರ ಸ್ಫೂರ್ತಿ ಮತ್ತು ಅನುಭವವೂ ಕಾರಣ.

ಲಸಿಕೆ ತಯಾರಿಕೆ ಮತ್ತು ಪರೀಕ್ಷೆಯಲ್ಲಿ ಡಾ.ಸಾರಾ ಅವರಿಗಿರುವ ತಜ್ಞತೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್) ಗೆ ಈ ಮೊದಲೇ ಅರಿವಿತ್ತು. 2014ರಲ್ಲಿ ಕಾಡಿದ ಎಬೋಲಾ ಸೋಂಕಿಗೆ ಔಷಧ ತಯಾರಿಕೆಯ ಕೆಲಸವನ್ನು ಡಾ.ಸಾರಾ ಮತ್ತು ತಂಡಕ್ಕೆ ವಹಿಸಲಾಗಿತ್ತು. ಹಾಗಾಗಿ, ಚೀನಾದ ವುಹಾನ್ನಲ್ಲಿ ಮೊದಲ ಬಾರಿಗೆ ವೈರಸ್ಪತ್ತೆಯಾಗುತ್ತಿದ್ದಂತೆ ಸಾರಾ ತಂಡ ಚುರುಕಾಯಿತು. ಮರ್ಸ್‌(ಮಿಡಲ್ಈಸ್ಟ್ರೆಸ್ಪಿರೇಟರಿ ಸಿಂಡ್ರೋಮ್ಕೊರೊನಾ ವೈರಸ್‌)ಗೆ ವ್ಯಾಕ್ಸಿನ್ಗಾಗಿ ನಡೆಸಿದ ಸಂಶೋಧನೆಯು ಇದಕ್ಕೂ ಬಹುಪಾಲು ನೆರವು ನೀಡಿತು.  ಸಾರಾ ಶಾಂತ ವರ್ತನೆ ಮತ್ತು ಸ್ನೇಹಪರ ವ್ಯಕ್ತಿತ್ವವನ್ನು ಹೊಂದಿರುವ ಅತ್ಯಂತ ಬುದ್ಧಿವಂತ ಹುಡುಗಿಯಾಗಿದ್ದಳು ಎಂದು ಆಕೆಯ ಕ್ಲಾಸ್ಮೇಟ್ಗಳು ಸ್ಮರಿಸಿಕೊಳ್ಳುತ್ತಾರೆ. ಸಾರಾ ಬಗ್ಗೆ ಹೆಮ್ಮೆ ಪಡಲು ಇನ್ನೊಂದು ಕಾರಣವಿದೆ. ಅವರು ತಮ್ಮ ತ್ರಿವಳಿ ಮಕ್ಕಳನ್ನೇ ಈ ಕೊರೊನಾ ಲಸಿಕೆ ಪ್ರಯೋಗಕ್ಕೆ ಬಳಸಿಕೊಂಡಿದ್ದಾರೆ! 21 ವರ್ಷದ ಮೂವರು ಮಕ್ಕಳು ಸ್ವಯಂಪ್ರೇರಿತರಾಗಿಯೇ ಪರೀಕ್ಷೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.

ಜಗತ್ತಿನಾದ್ಯಂತದ ಜನರನ್ನು ಸಂಕಟದಿಂದ ಪಾರು ಮಾಡುವ ಅಗತ್ಯವನ್ನು ಸತ್ಯದೊಂದಿಗೆ ಎತ್ತಿ ಹಿಡಿಯುಲು ಬೇಕಾದ ಭರವಸೆಯನ್ನು ಹೇಗೆ ಸಮತೋಲನಗೊಳಿಸಬೇಕೆಂಬುದು ಅರಿತುಕೊಂಡಿರುವುದೇ ಸಾರಾ ಅವರ ಬಹುದೊಡ್ಡ ಸಾಮರ್ಥ್ಯ‌. ತನ್ನ ಹೆಗಲ ಮೇಲೆ ಕೋಟ್ಯಂತರ ನಿರೀಕ್ಷೆಗಳ ಭಾರ ಹೊತ್ತುಕೊಂಡಿರುವ ಅರಿವು ಸ್ಪಷ್ಟವಾಗಿ ಸಾರಾಗೆ ಗೊತ್ತಿದೆ. ಹಾಗಾಗಿಯೇ ವರ್ಷಾಂತ್ಯಕ್ಕೆ ಆಕ್ಸ್ಫರ್ಡ್ಲಸಿಕೆಯನ್ನು ಸಿಗುವಂತೆ ಮಾಡುವ ದೊಡ್ಡ ಸವಾಲು ಅವರ ಮುಂದಿದೆ. ಇದೇನೂ ಅಸಾಧ್ಯವಾದುದಲ್ಲ. ಆದರೆ, ಆ ಬಗ್ಗೆ ಖಚಿತತೆ ಇಲ್ಲಎಂಬುದನ್ನು ಒಪ್ಪಿಕೊಳ್ಳಲೇಬೇಕು ಎನ್ನುವ ಅವರ ಮಾತುಗಳು ಬದ್ಧತೆಗೆ ಪ್ರತೀಕವಾಗಿವೆ. 1962ರ ಏಪ್ರಿಲ್ನಲ್ಲಿ ಜನಿಸಿದ ಸಾರಾಗೆ ಈಗ 58ರ ಹರೆಯ. ಈಸ್ಟ್ಏಂಜಿಲಿಯಾ ವಿವಿಯಲ್ಲಿ ಅಧ್ಯಯನ ಕೈಗೊಂಡ ಸಾರಾ, ಬಯೋಲಾಜಿಕಲ್ಸೈನ್ಸ್ನಲ್ಲಿಪದವಿ ಪಡೆದರು. ಅಲ್ಲಿಂದ ಡಾಕ್ಟರಲ್ಪದವಿಗಾಗಿ ಯುನಿವರ್ಸಟಿ ಆಫ್ಹಲ್ಗೆ ತೆರಳಿದರು. ಈ ವಿಶ್ವವಿದ್ಯಾಲಯದಲ್ಲೇ ಅವರು,  ಯೀಸ್ಟ್ರೋಡೋಸ್ಪೊರಿಡಿಯಮ್ಟೊರುಲಾಯ್ಡ್ಗಳ ತಳಿಶಾಸ್ತ್ರ ಮತ್ತು ಜೀವರಾಸಾಯನಿಕತೆಯ ಕುರಿತು ಅಧ್ಯಯನ ನಡೆಸಿದರು.

ಉನ್ನತ ಶಿಕ್ಷ ಣದ ಬಳಿಕ ಸಾರಾ, ಬರ್ವಿಂಗ್ಇಂಡಸ್ಟ್ರಿ ರಿಸರ್ಚ್ಫೌಂಡೇಷನ್ನಲ್ಲಿ ಪೋಸ್ಟ್ಡಾಕ್ಟರಲ್ಸಂಶೋಧಕಿಯಾಗಿ ಕೆಲಸ ಮಾಡಿದರು. ನಂತರ, ಡೆಲ್ಟಾ ಬಯೋ ಟೆಕ್ನಾಲಜಿ ಸೇರಿಕೊಂಡರು. 1994ರಲ್ಲಿಮತ್ತೆ ಅಧ್ಯಯನಕ್ಕೆ ಮರಳಿದ ಸಾರಾ, ಆಡ್ರಿನ್ವಿ ಎಸ್ಹಿಲ್ಪ್ರಯೋಗಾಲಯಕ್ಕೆ ಸೇರಿದರು. ಅಲ್ಲಿಂದ 2004ರಲ್ಲಿ ಆಕ್ಸ್ಫರ್ಡ್ವಿವಿಯ ವ್ಯಾಕ್ಸಿನಾಲಜಿ ವಿಭಾಗದಲ್ಲಿ ರೀಡರ್ಆಗಿ ನೇಮಕವಾದರು. 2010ರಲ್ಲಿಜೆನ್ನರ್ಇನ್ಸ್ಟಿಟ್ಯೂಟ್ನಲ್ಲಿ ಪ್ರೊಫೆಸರ್ಆದರು. ಅಲ್ಲಿಅವರು, ವೆಲ್ಕಮ್ಟ್ರಸ್ಟ್ಸಹಾಯದೊಂದಿಗೆ ನಾವೆಲ್ಇನ್ಫ್ಲುಯೆಂಜಾಗೆ ಲಸಿಕೆಗಳನ್ನು ತಯಾರಿಸುವ ವಿನ್ಯಾಸದ ಕೆಲಸವನ್ನು ಆರಂಭಿಸಿದರು. ಹೀಗೆ ಅವರು ಒಬ್ಬ ವ್ಯಾಕ್ಸಿನಿಸ್ಟ್ಆಗಿ ಬೆಳಕಿಗೆ ಬರತೊಡಗಿದರು. ಈ ಕ್ಷೇತ್ರದಲ್ಲಿ ಅವರು ಮಾಡಿದ ಪ್ರಯೋಗಗಳು, ಸಂಶೋಧನೆಗಳು ಹೊಸ ದಾರಿಗಳನ್ನು ತೋರಿಸಿದವು.

ಸಾರಾ ಅವರು ಯುನಿವರ್ಸಲ್ಫ್ಲುವ್ಯಾಕ್ಸಿನ್ಅಭಿವೃದ್ಧಿ ಮತ್ತು ಪರೀಕ್ಷೆಯಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಲಸಿಕೆಗಳಂತೆ ಈಯುನಿವರ್ಸಲ್ಫ್ಲುಲಸಿಕೆಗಳು ಪ್ರತಿಕಾಯಗಳ ಉತ್ಪಾದನೆಯನ್ನು ವೇಗಗೊಳಿಸುವುದಿಲ್ಲ. ಬದಲಿಗೆ, ಇನ್ಫ್ಲುಯೆಂಜಾಗೆ ಅಗತ್ಯವಿರುವಟಿಕೋಶಗಳನ್ನು ಸೃಷ್ಟಿಸುವಂತೆ ದೇಹದ ನಿರೋಧಕ ಶಕ್ತಿ ವ್ಯವಸ್ಥೆಗೆ ಪ್ರಚೋದನೆ ನೀಡುತ್ತವೆ. ವ್ಯಕ್ತಿಗೆ ವಯಸ್ಸಾದಂತೆ ನಿರೋಧಕ ಶಕ್ತಿ ಕುಂದುತ್ತಾ ಹೋಗುತ್ತದೆ. ಅಂಥವರಿಗೆ ಈ ಸಾಂಪ್ರದಾಯಿಕ ಲಸಿಕೆಗಳು ಪರಿಣಾಮಕಾರಿಯಾಗುವುದಿಲ್ಲ. ಬದಲಿಗೆ ಯುನಿವರ್ಸಲ್ಫ್ಲು ಲಸಿಕೆಗಳು ಹೆಚ್ಚು ಪರಿಣಾಮವನ್ನು ನೀಡಬಲ್ಲವು. ಹಾಗಾಗಿಯೇ, ಸಾರಾ ಅವರ ಪ್ರಯೋಗಕ್ಕೆ ಹೆಚ್ಚು ಮನ್ನಣೆ ಇದೆ. 2008ರಲ್ಲಿ ಅವರ ಮೊದಲ ಕ್ಲಿನಿಕಲ್ಪ್ರಯೋಗಗಳಲ್ಲಿಇನ್ಫ್ಲುಯೆಂಜಾ ಎ ವೈರಸ್  ಸಬ್ಟೈಪ್ಎಚ್‌3ಎನ್‌2 ಅನ್ನು ಬಳಸಲಾಯಿತು. ರೋಗಿಯ ರೋಗಲಕ್ಷ ಣಗಳ ದೈನಂದಿನ ಮೇಲ್ವಿಚಾರಣೆ ನಡೆಸಲಾಯಿತು. ಫ್ಲು ವೈರಸ್ಗೆ ಪ್ರತಿಕ್ರಿಯೆಯಾಗಿ ಟಿ ಕೋಶಗಳನ್ನು ಉತ್ತೇಜಿಸಲು ಸಾಧ್ಯವಿದೆ ಮತ್ತು ಜನರನ್ನು ಜ್ವರದಿಂದ ರಕ್ಷಿಸಲು ಸಾಧ್ಯವಾಗುತ್ತದೆ ಎಂಬುದನ್ನು ಕಂಡುಕೊಳ್ಳಲಾಯಿತು. ಈ ಎಲ್ಲ ಸಂಶೋಧನೆಗಳ ಫಲವಾಗಿಯೇ ಸಾರಾ ಅವರು ಮರ್ಸ್ಗೆ ಲಸಿಕೆಯನ್ನು ಕಂಡು ಹಿಡಿಯಲು ಸಾಧ್ಯವಾಯಿತು. ಇದೇ ಮಾದರಿಯನ್ನು ನಿಫಾಗೆ ತಯಾರಿಸಲಾದ ಲಸಿಕೆಯಲ್ಲಿ ಬಳಸಿಕೊಳ್ಳಲಾಯಿತು. ಹೀಗೆ, ಸಾರಾ ಅವರು, ಮಾನವ ಕುಲವನ್ನು ಕಾಡುತ್ತಿರುವ ಅನೇಕ ವೈರಾಣು ವಿರುದ್ಧಗಳ ಲಸಿಕೆಗಳನ್ನು ಸಿದ್ಧಪಡಿಸಲು ತಮ್ಮ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ.

ಬಹುಶಃ ಆಕ್ಸ್ಫರ್ಡ್ತಯಾರಿಸುತ್ತಿರುವ ಕೋವಿಡ್ಲಸಿಕೆಯೇ ಎಲ್ಲರಿಗಿಂತ ಮೊದಲು ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಲಸಿಕೆ  ಪರಿಣಾಮಕಾರಿಯಾದರೆ ಡಾ. ಸಾರಾಗೆ ಇಡೀ ಜಗತ್ತೇ ಋುಣಿಯಾಗಲಿದೆ. ಎಪಿಡೆಮಿಕ್ಪ್ರಿಪೇರೆಡೆನೆಸ್ಇನ್ನೋವೇಷನ್ಸ್  ಸಾರಾ ಅವರ ಲಸಿಕೆ ತಯಾರಿಕೆಗೆ ನಿಧಿ ಒದಗಿಸುತ್ತಿದೆ. ‘ಯುನಿವರ್ಸಲ್ಫ್ಲು ವ್ಯಾಕ್ಸಿನ್‌’ ಪದ್ಧತಿ ಮೂಲಕ ತಮ್ಮದೇ ಆದ ಲಸಿಕೆ ತಯಾರಿಕಾ ದಾರಿಯನ್ನು ಕಂಡುಕೊಂಡಿರುವ ಸಾರಾ ಅವರು, ಸೆಪ್ಟೆಂಬರ್ಹೊತ್ತಿಗೆ ಕೋವಿಡ್‌ 19ಗೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳುತ್ತಾರೆ. ಅದಾಗದಿದ್ದರೂ ವರ್ಷಾಂತ್ಯಕ್ಕೆ ಲಸಿಕೆ ದೊರೆಯುವ ಸಾಧ್ಯತೆಗಳು ಹೆಚ್ಚು ಎಂಬುದು ಬಹುತೇಕ ತಜ್ಞರ ಅಭಿಪ್ರಾಯ. ಡಾ. ಸಾರಾ ಗಿಲ್ಬರ್ಟ್ಅವರ ಈ ಪ್ರಯತ್ನಗಳಿಂದಾಗಿ ಜಗತ್ತಿನಾದ್ಯಂತ ಪರಿಚಿತರಾಗುತ್ತಿದ್ದಾರೆ. ಟೈಮ್ಸ್ಪತ್ರಿಕೆಯಸೈನ್ಸ್ಪವರ್ಲಿಸ್ಟ್‌’ನಲ್ಲೂ ಕಾಣಿಸಿಕೊಂಡಿದ್ದಾರೆ. ವ್ಯಾಕಿಟೆಕ್ಸಂಸ್ಥೆಯನ್ನು ಹುಟ್ಟು ಹಾಕಿ ಸಂಶೋಧನೆಗೆ  ಒತ್ತು ನೀಡುತ್ತಿದ್ದಾರೆ.

(ಈ ಲೇಖನವು ವಿಜಯ ಕರ್ನಾಟಕದ 2020ರ ಆಗಸ್ಟ್ 2ರ ಸಂಚಿಕೆಯಲ್ಲಿ ಪ್ರಕಟವಾಗಿದೆ)




ಗುರುವಾರ, ಜುಲೈ 16, 2020

Sonam Wangchuk ವ್ಹಾವ್‌... ವಾಂಗ್‌ಚುಕ್‌


54 ವರ್ಷದ ವಾಂಗ್ಚುಕ್ಪ್ರತಿಭೆಯ ಖನಿ, ಹಲವು ಸಾಧನೆಗಳ ಸಾರಥಿ, ಬಾಯ್ಕಾಟ್ಚೀನಾ ಅಭಿಯಾನಕ್ಕೆ ವೇಗ ನೀಡಿದ ರೂವಾರಿ.

- ಮಲ್ಲಿಕಾರ್ಜುನ ತಿಪ್ಪಾರ
ಗಲ್ವಾನ್ಕಣಿವೆಯಲ್ಲಿ ಚೀನಾ ಅಟ್ಟಹಾಸಕ್ಕೆ ನಮ್ಮ ಯೋಧರು ಹುತಾತ್ಮರಾದರಲ್ಲಅದೇ ಕ್ಷಣ ದೇಶದಲ್ಲೊಂದುಬಾಯ್ಕಾಟ್ಚೀನಾಆಂದೋಲನ ಇದ್ದಕ್ಕಿಂತ ವೇಗ ಪಡೆದುಕೊಂಡಿತು. ಅದರ ಹಿಂದಿನ ಶಕ್ತಿಯೇ ಈ ಸೋನಮ್ವಾಂಗ್ಚುಕ್‌. ‘ಚೀನಾ ಕೋ ಜವಾಬ್‌’ ಸರಣಿ ವಿಡಿಯೋಗಳನ್ನು ಹರಿಬಿಟ್ಟ ಈ ಲಡಾಖಿ ವ್ಯಕ್ತಿಯ ಹಿನ್ನೆಲೆಯನ್ನು ತಿಳಿದರೆ ವ್ಯಕ್ತಿಯೊಬ್ಬ ಇಷ್ಟೆಲ್ಲ ಕೆಲಸಗಳನ್ನು ಮಾಡಬಹುದೇ, ಇಷ್ಟೊಂದು ಪ್ರತಿಭಾನ್ವಿತರಾಗಿರಲು ಸಾಧ್ಯವೇ ಎಂಬ ಅನುಮಾನ ಬರುವುದು ಗ್ಯಾರಂಟಿ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ರಾಜಕುಮಾರ್ಹಿರಾನಿ ನಿರ್ದೇಶನದತ್ರಿ ಈಡಿಯಟ್ಸ್‌’ ಚಿತ್ರ ನೆನಪಿದೆಯಲ್ಲ. ಅದರಲ್ಲಿ ಅಮೀರ್ಖಾನ್ನಿರ್ವಹಿಸಿದ್ದಪುನ್ಷುಕ್ವಾಂಗ್ಡು/ರಂಚೋಡದಾಸ್ಶ್ಯಾಮಲದಾಸ್ಚಾಂಚಡ್‌’ ಪಾತ್ರವಿದೆಯಲ್ಲ, ಅದಕ್ಕೆ ಈ ಸೋನಮ್ವಾಂಗುಚುಕ್ಅವರೇ ಸ್ಫೂರ್ತಿ! ವಾಂಗ್ಚುಕ್ಅವರ ಪ್ರತಿಭೆ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅವರು ಮೆಕ್ಯಾನಿಕಲ್ಎಂಜಿನಿಯರ್‌, ಮಾತುಗಾರ, ಶಿಕ್ಷ ಣ ತಜ್ಞ, ಸಂಶೋಧಕ, ಸುಧಾರಕ, ಪತ್ರಕರ್ತ, ರಾಜಕಾರಣಿ ಹೀಗೆ ಇನ್ನೂ ಏನೇನೋ.
ಟಿಬೆಟಿಯನ್ನರು, ಉಯಿಗೂರ್ಮುಸ್ಲಿಮರ ವಿರುದ್ಧ ಮಾನವ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕೆಂದರೆ ಕೇವಲ ಸೇನಾ ಬಲ ಮಾತ್ರವೇ ಸಾಕಾಗುವುದಿಲ್ಲ. ಭಾರತೀಯರುವಾಲೆಟ್ಪವರ್‌’ ಬಳಸಬೇಕು ಮತ್ತು ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದರು. ಅಷ್ಟೇ ಅಲ್ಲದೇ ಅದಕ್ಕೆ ಸಂಬಂಧಿಸಿದಂತೆ ಸರಣಿ ವಿಡಿಯೋಗಳನ್ನು ಹರಿಯಬಿಟ್ಟರು. ಚೀನಾ ವಸ್ತುಗಳ ಬಹಿಷ್ಕಾರ ಯಾಕೆ ಅಗತ್ಯ ಅನ್ನುವುದನ್ನು ಎಷ್ಟು ಸೊಗಸಾಗಿ ಹೇಳಿದರಂದರೆ, ರಾತ್ರೋರಾತ್ರಿ ವಿಡಿಯೋಗಳು ವೈರಲ್ಆದವು. ಬಹುತೇಕ ಎಲ್ಲಮಾಧ್ಯಮಗಳು ಅವರ ವಿಚಾರವನ್ನು ಪ್ರಚಾರ ಮಾಡಿದವು. ಪರಿಣಾಮ ದೇಶದಲ್ಲಿಚೀನಾ ಬಾಯ್ಕಾಟ್ಅಭಿಯಾನಕ್ಕೆ ಹೆಚ್ಚಿನ ಬಲ ಬಂದು, ಕೇಂದ್ರ ಸರಕಾರ ಮೊದಲ ಹಂತದಲ್ಲಿ ಚೀನಾ ಮೂಲದ 59 ಆ್ಯಪ್ಗಳನ್ನು ನಿಷೇಧಿಸಿತು. ಚೀನಾ ಬಾಯ್ಕಾಟ್ಅಭಿಯಾನಕ್ಕೆ ಒಂದು ದಿಕ್ಕು, ಶಕ್ತಿ ತೋರಿಸಿದ್ದು ಈ ವಾಂಗ್ಚುಕ್ಎಂಬುದರಲ್ಲಿ ಅನುಮಾನವಿಲ್ಲ. ಪ್ರತಿಭೆಯ ಗಣಿಯೇ ಆಗಿರುವ ವಾಂಗ್ಚುಕ್‌, ಲಡಾಖ್‌, ಸಿಕ್ಕಿಮ್‌, ನೇಪಾಳದಲ್ಲಿಶೈಕ್ಷ ಣಿಕ ಕ್ಷೇತ್ರದ ಸುಧಾರಕರಾಗಿ ದುಡಿಯುತ್ತಿದ್ದಾರೆ.
ಲಡಾಖ್ನ ಲೇಹ್ಜಿಲ್ಲೆಯ ಅಲ್ಚಿ ಸಮೀಪದ ಉಲೆಟೊಕ್ಪೊ ಎಂಬಲ್ಲಿ1966ರಲ್ಲಿವಾಂಗ್ಚುಕ್ಜನಿಸಿದರು. ಈ ಊರು ಮತ್ತು ಸಮೀಪದ ಊರುಗಳಲ್ಲಿಯಾವುದೇ ಶಾಲೆಗಳು ಇರಲಿಲ್ಲ. ಹಾಗಾಗಿ ವಾಂಗ್ಚುಕ್‌ 9 ವರ್ಷ ಆಗೋವರೆಗೂ ಯಾವುದೇ ಶಾಲೆಗೆ ಹೋಗಲಿಲ್ಲ. ಬದಲಿಗೆ ಅವರ ತಾಯಿ ಮನೆಯಲ್ಲೇ ಮೂಲ ಪಾಠಗಳನ್ನು ಹೇಳಿಕೊಟ್ಟರು. ಇದಕ್ಕೆ ಅವರಿಗೆ ಖೇದವೇನೂ ಇಲ್ಲ. ಬದಲಿಗೆ, ಇದು ಅದೃಷ್ಟ ಎನ್ನುತ್ತಾರೆ. ಯಾಕೆಂದರೆ, ತಮ್ಮದಲ್ಲದ ಭಾಷೆಯಲ್ಲಿಒತ್ತಾಯಪೂರ್ವಕವಾಗಿ ಕಲಿಯುವುದು ತಪ್ಪಿಸಲು ಸಾಧ್ಯವಾಯಿತು. ಲಡಾಖಿ ಭಾಷೆಯಲ್ಲಿಮೂಲ ಪಾಠ ಕೇಳುವುದು ಅವಕಾಶ ಸೃಷ್ಟಿಯಾಯಿತು.
ವಾಂಗ್ಚುಕ್ಅವರ ತಂದೆ ಸೋನಮ್ವಂಗ್ಯಾಲ್ಅವರು ರಾಜಕಾರಣಿ ಮತ್ತು ಕಾಶ್ಮೀರದಲ್ಲಿಸಚಿವರಾಗಿದ್ದರು. ವಾಂಗ್ಚುಕ್ಗೆ 9 ವರ್ಷ ಆದಾಗ ಅವರು ತಮ್ಮ ನೆಲೆಯನ್ನು ಶ್ರೀನಗರಕ್ಕೆ ಬದಲಿಸಿದರು. ಅಲ್ಲಿಅವರನ್ನು ಸ್ಕೂಲ್ಗೆ ಸೇರಿಸಲಾಯಿತು. ಇತರರಿಗಿಂತ ಭಿನ್ನವಾಗಿ ಕಾಣುತ್ತಿದ್ದ ವಾಂಗ್ಚುಕ್ಗೆ ಅಲ್ಲಿನ ಭಾಷೆಯೂ ಅರ್ಥವಾಗುತ್ತಿರಲಿಲ್ಲ. ಇದರಿಂದಾಗಿ ದಡ್ಡ ವಿದ್ಯಾರ್ಥಿ ಎಂದು ಪರಿಗಣಿತರಾದರು. ಶ್ರೀನಗರ ಶಾಲೆಯ ದಿನಗಳನ್ನು ಅವರು ತಮ್ಮ ಜೀವನದ ಅತ್ಯಂತ ಕರಾಳ ದಿನಗಳೆಂದು ಹೇಳಿಕೊಂಡಿದ್ದಾರೆ. ಕೊನೆಗೆ 1977ರಲ್ಲಿದಿಲ್ಲಿಗೆ ಬಂದ ವಾಂಗ್ಚುಕ್‌, ವಿಶೇಷ ಕೇಂದ್ರೀಯ ವಿದ್ಯಾಲಯವನ್ನು ಸೇರಿಕೊಂಡರು. ಆ ನಂತರ, 1987ರಲ್ಲಿನ್ಯಾಷನಲ್ಇನ್ಸ್ಟಿಟ್ಯೂಟ್ಆಫ್ಟೆಕ್ನಾಲಜಿ ಶ್ರೀನಗರದಿಂದ ಮೆಕ್ಯಾನಿಕಲ್ಎಂಜಿನಿಯರಿಂಗ್ನಲ್ಲಿಬಿ ಟೆಕ್ಪದವಿ ಪಡೆದರು. ಎಂಜಿನಿಯರಿಂಗ್ನಲ್ಲಿವಿಷಯಗಳ ಆಯ್ಕೆ ಸಂಬಂಧ ತಂದೆ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಿ ತಮ್ಮ ಅಧ್ಯಯನ ವೆಚ್ಚವನ್ನು ತಾವೇ ಭರಿಸಿಕೊಂಡರು. ಫ್ರಾನ್ಸ್ಗೆ ತೆರಳಿ ಎರಡು ವರ್ಷ ಗ್ರೆನೋಬಲ್ನಲ್ಲಿರುವ ಕ್ಯಾಟರ್ಸ್ಕೂಲ್ಆಫ್ಆರ್ಕಿಟೆಕ್ಚರ್ನಲ್ಲಿಅರ್ಥೆನ್ಆರ್ಕಿಟೆಕ್ಚರ್‌(ಮಣ್ಣಿನ ವಾಸ್ತುಶಿಲ್ಪ)ನಲ್ಲಿಉನ್ನತ ಅಧ್ಯಯನ ಕೈಗೊಂಡು ಭಾರತಕ್ಕೆ ಮರಳಿದರು.
ಇದಕ್ಕೂ ಮೊದಲು ಅಂದರೆ 1988ರಲ್ಲಿವಾಂಗ್ಚುಕ್ತನ್ನ ಸಹೋದರ ಮತ್ತು ಐವರ ಜತೆಗೂಡಿ  ಸ್ಟೂಡೆಂಟ್ಸ್ಎಜ್ಯುಕೇಷನಲ್ಆ್ಯಂಡ್ಕಲ್ಚರಲ್ಮೂವ್ಮೆಂಟ್ಆಫ್ಲಡಾಖ್‌(ಎಸ್ಇಸಿಎಂಒಎಲ್‌) ಆರಂಭಿಸಿದರು. ಶೈಕ್ಷ ಣಿಕ ಸುಧಾರಣೆಯೇ ಇದರ ಗುರಿಯಾಗಿತ್ತು. ಸಸೊಧೀಲ್ಸರಕಾರಿ ಹೈಸ್ಕೂಲನ್ನು ತಮ್ಮ ಸುಧಾರಣಾ ಪ್ರಯೋಗ ಶಾಲೆಯಾಗಿ ಬಳಸಿಕೊಂಡು, ಆಪರೇಷನ್ನ್ಯೂ ಹೋಪ್ಆರಂಭಿಸಿದರು. ಇದಕ್ಕೆ ಸರಕಾರದ ಶಿಕ್ಷ ಣ ಇಲಾಖೆಯ ಸಹಯೋಗವೂ ಇತ್ತು. ಲಡಾಖ್ನ ಏಕೈಕ ಮ್ಯಾಗಜಿನ್‌ ‘ಲಡಾಖ್ಸ್ಮೆಲಾಂಗ್‌’ ಆರಂಭಿಸಿ 1993ರಿಂದ 2005ರವರೆಗೂ ಅದರ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಹಿಲ್ಕೌನ್ಸಿಲ್ಗವರ್ನಮೆಂಟ್ನಲ್ಲಿಶಿಕ್ಷ ಣ ಸಲಹೆಗಾರರಾಗಿದ್ದರು. 2002ರಲ್ಲಿಲಡಾಕ್ವಾಲ್ಯುಂಟರಿ ನೆಟ್ವರ್ಕ್‌(ಎಲ್ವಿಎನ್‌) ಎನ್ಜಿಒ ಆರಂಭಿಸಿದರು. ವಿಜನ್ಡಾಕ್ಯುಮೆಂಟ್ಲಡಾಖ್-2025ರ ಕರಡು ಸಮಿತಿಯ ಸದಸ್ಯರಾಗಿದ್ದರು. ಹಾಗೆಯೇ, 2004ರಲ್ಲಿಹಿಲ್ಗವರ್ನಮೆಂಟ್ನ ಶಿಕ್ಷ ಣ ಮತ್ತು ಪ್ರವಾಸೋದ್ಯಮ ನೀತಿ ನಿರೂಪಣೆಯಲ್ಲಿಇವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. 2005ರಲ್ಲಿಅಂದಿನ ಡಾ.ಮನಮೋಹನ್ಸಿಂಗ್ಸರಕಾರವು ಇವರನ್ನು ನ್ಯಾಷನಲ್ಗೌವರ್ನಿಂಗ್ಕೌನ್ಸಿಲ್ಫಾರ್ಎಲೆನಂಟರಿ ಎಜ್ಯುಕೇಷನ್ನ ಸಮತಿಯ ಸದಸ್ಯರನ್ನಾಗಿ ನೇಮಕ ಮಾಡಿತು.
ವಾಂಗ್ಚುಕ್ಅವರ ಮತ್ತೊಂದು ಗಮನಾರ್ಹ ಸಾಧನೆ ಎಂದರೆಐಸ್ಸ್ತೂಪಅಂದರೆ ಹಿಮದ ಸ್ತೂಪ. ಚಳಿಗಾಲದಲ್ಲಿವ್ಯರ್ಥವಾಗಿ ಹರಿದು ಹೋಗುವ ಹಳ್ಳಗಳ ನೀರನ್ನು ಕೃತಕವಾಗಿ ಹಿಮದ ಗಡ್ಡೆಗಳನ್ನಾಗಿ ಪರಿವರ್ತಿಸುವುದು ಮತ್ತು ಬೇಸಿಗೆ ಕಾಲದಲ್ಲಿಈ ಹಿಮದ ಸ್ತೂಪಗಳು ಕರಗಿ ರೈತರಿಗೆ ನೀರಿನ ಮೂಲವನ್ನು ಒದಗಿಸುತ್ತವೆ. ಇದಕ್ಕೆ ಸಂಬಂಧಿಸಿದ ಮಾದರಿಯನ್ನು ವಾಂಗ್ಚುಕ್ಸಿದ್ಧಪಡಿಸಿದ್ದರು. ಈ ಹಿಮದ ಸ್ತೂಪಗಳು ಲಡಾಖ್ನ ರೈತರಿಗೆ ತುಂಬ ನೆರವಾಗಿವೆ. 2014ರ ಬಳಿಕ ಜಮ್ಮು ಮತ್ತು ಕಾಶ್ಮೀರ ಸರಕಾರದ ಅನೇಕ ಸಮಿತಿಗಳಲ್ಲಿವಾಂಗ್ಚುಕ್ಕೆಲಸ ಮಾಡಿ­ದ್ದಾರೆ. ರಾಜ್ಯದ ಶಿಕ್ಷ ಣ ನೀತಿ ಸೇರಿದಂತೆ ಅನೇಕ ನೀತಿ ನಿರೂಪಣೆಗಳಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2015ರಿಂದ ಹಿಮಾಲಯನ್ಇನ್ಸ್ಟ್ಯೂಟ್ಆಫ್ಅಲ್ಟರ್ನೇಟಿವ್ಸ್ವ್ಯವಸ್ಥೆಯನ್ನು ಪ್ರತಿಷ್ಠಾಪಿಸುವಲ್ಲಿನಿರತರಾಗಿದ್ದಾರೆ. ಇದೇ ವೇಳೆ, ಹೋಮ್ಸ್ಟೇ ಮಾದರಿಯಲ್ಲಿಫಾರ್ಮ್ಸ್ಟೇ ಎಂಬ ಹೊಸ ಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದಾರೆ. ಲಡಾಖ್ಗೆ ಆಗಮಿಸುವ ಪ್ರವಾಸಿಗರು ಹೊಟೇಲ್ಗಳಲ್ಲಿಉಳಿಯುವ ಬದಲಿಗೆ ಸ್ಥಳೀಯ ಕುಟುಂಬಗಳಲ್ಲಿಉಳಿದುಕೊಳ್ಳುವ ಕಲ್ಪನೆಯೇ ಫಾರ್ಮ್ಸ್ಟೇ. ಇದರಿಂದ ಸ್ಥಳೀಯರಿಗೆ ಉದ್ಯೋಗವೂ ಸೃಷ್ಟಿಯಾಗುತ್ತಿದೆ.
ಪ್ರತಿ ಕ್ಷ ಣವನ್ನು ವ್ಯರ್ಥ ಮಾಡದೇ ತೊಡಗಿಸಿಕೊಂಡಿರುವ ವಾಂಗ್ಚುಕ್ಅವರ ವಿಶ್ರಾಮರಹಿತ ಜೀವನವೇ ನಮಗೆ ಸೂಧಿರ್ತಿಯಾಗುತ್ತದೆ. ಅವರ ಈ ವಿಶಿಷ್ಟ ಕಾರ್ಯಶೈಲಿ, ಹೊಸ ಹೊಸ ಹೊಳಹುಗಳು ಮತ್ತು ಅವುಗಳನ್ನು ಅನುಷ್ಠಾಗೊಳಿಸುವ ಛಾತಿಯಿಂದಾಗಿ ಎಲ್ಲರಕ್ಕಿಂತ ಭಿನ್ನವಾಗಿ ನಿಲ್ಲುತ್ತಾರೆ. ಅದಕ್ಕೆ ಪ್ರತಿಫಲವಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ವಾಂಗ್ಚುಕ್ಅವರನ್ನು ಹುಡುಕಿಕೊಂಡು ಬಂದಿವೆ. 2018ರಲ್ಲಿರಾಮನ್ಮ್ಯಾಗ್ಸಸೆ ಅವಾರ್ಡ್‌, ಗ್ಲೋಬಲ್ಅವಾರ್ಡ್ಫಾರ್ಸಸ್ಟೇನೇಬಲ್ಆರ್ಕಿಟೆಕ್ಚರ್‌(2017), ಇಂಟರ್ನ್ಯಾಷನಲ್ಟೆರ್ರಾ ಅವಾರ್ಡ್ಫಾರ್ಬೆಸ್ಟ್ಅರ್ಥ್ಬಿಲ್ಡಿಂಗ್‌(2016), ಯುನೆಸ್ಕೋ ಚೇರ್ಅರ್ಥೇನ್ಆರ್ಕಿಟೆಕ್ಚರ್‌(2014), ಸ್ಯಾಂಚುರಿ ಏಷ್ಯಾದ ಗ್ರೀನ್ಟೀಚರ್ಅವಾರ್ಡ್‌(2004)... ಹೀಗೆಯೇ ಅವರು ಪಡೆದುಕೊಂಡಿರುವ ಪ್ರಶಸ್ತಿಗಳ ಪಟ್ಟಿ ಬೆಳೆಯುತ್ತದೆ.
ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಂಡಿರುವ ವಾಂಗ್ಚುಕ್ಅವರು, ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರ ವಿಭಜಿಸಿ ಲಡಾಖ್ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದಾಗ ಅದನ್ನು ಸ್ವಾಗತಿಸಿದ ಮೊದಲಿಗರಲ್ಲಿಇವರು ಒಬ್ಬರು. ತನ್ನದೇ ಸ್ವತಂತ್ರ ಸಂಸ್ಕೃತಿ, ಭಾಷೆ ಹೊಂದಿರುವ ಲಡಾಕ್ಗೆ ಮಾನ್ಯತೆ ತಂದುಕೊಡಬೇಕೆಂಬುದು ಅವರ ಹಂಬಲವಾಗಿದೆ.

(ಈ ಲೇಖನವು ವಿಜಯ ಕರ್ನಾಟಕದ ಜುಲೈ12, 2020ರ ಸಂಚಿಕೆಯಲ್ಲಿ ಪ್ರಕಟವಾಗಿದೆ)