- ಮಲ್ಲಿಕಾರ್ಜುನ ತಿಪ್ಪಾರ
ಫೇಸ್ಬುಕ್
ಒಡೆತನದ ವಾಟ್ಸ್ಆ್ಯಪ್ ತನ್ನ
ಪೇಮೆಂಟ್ ಸೇವೆಯನ್ನು ಆರಂಭಿಸುವುದಾಗಿ ಬಹಳ ದಿನಗಳಿಂದಲೂ ಹೇಳುತ್ತಲೇ ಬಂದಿತ್ತು. ಭಾರತ ಸರಕಾರ ಸೂಚಿಸಿರುವ ಎಲ್ಲಮಾರ್ಗದರ್ಶಿಗಳನ್ನು
ಪೂರೈಸಲು ಒಂದಿಷ್ಟು ಸಮಯ ಬೇಕಾಯಿತು. ಬಳಿಕ ಬೀಟಾ ವರ್ಷನ್ನಲ್ಲಿಸ್ವಲ್ಪ ದಿನ ಪೇಮೆಂಟ್ ಸೇವೆಯನ್ನು ಜಾರಿಗೆ ತಂದು,
ಇದೀಗ ಭಾರತದ ಎಲ್ಲವಾಟ್ಸ್ಆ್ಯಪ್ ಬಳಕೆದಾರರಿಗೆ ದೊರೆಯುತ್ತಿದೆ.
ಸಂಪೂರ್ಣ ಡಿಜಿಟಲೀಕರಣವಾಗುತ್ತ
ಸಾಗುತ್ತಿರುವ ಭಾರತದ ಮಟ್ಟಿಗೆ ವಾಟ್ಸ್ಆ್ಯಪ್ನ ಈ
‘ವಾಟ್ಸ್ಆ್ಯಪ್ ಪೇ’
ಸೇವೆ ಒಂದು ಮೈಲುಗಲ್ಲಾಗಲಿದೆ. ಭಾರತದಲ್ಲಿವಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ 34 ಕೋಟಿ.
ಇಷ್ಟು ಬೃಹತ್ ಪ್ರಮಾಣದ ಬಳಕೆದಾರರನ್ನು ಹೊಂದಿರುವ ಕಾರಣಕ್ಕೆ ಇದೊಂದು ಕ್ರಾಂತಿಕಾರಿ ನಡೆಯಾಗಲಿದೆ ಎಂಬುದರಲ್ಲಿಯಾವುದೇ ಅನುಮಾನವಿಲ್ಲ. ಒಂದೂಮ್ಮೆ ಇಷ್ಟು ಬಳಕೆದಾರರು ಹಣ ವರ್ಗಾವಣೆ ಮತ್ತು ಸ್ವೀಕರಿಸಲು ವಾಟ್ಸ್ಆ್ಯಪ್ ಪೇ ಬಳಸಿದರೆ ಅದು ಅತಿದೊಡ್ಡ ಜಾಲವಾಗಬಹುದು.
ಇದೊಂದು ಯುಪಿಐ ಆಧರಿತ ಪೇಮೆಂಟ್ ಸೇವೆ ನೀಡುವ
ವ್ಯವಸ್ಥೆಯಾಗಿದ್ದು, ಕಳೆದ ವರ್ಷ ಫೆಬ್ರವರಿಯಲ್ಲಿಬೀಟಾ ವರ್ಷನ್ನಲ್ಲಿವಾಟ್ಸ್ಆ್ಯಪ್ ಪೇ ಚಾಲನೆಗೊಂಡಿತ್ತು.
ಈಗ ಅದು ಎಲ್ಲಬಳಕೆದಾರರಿಗೂ ಲಭ್ಯವಾಗುತ್ತಿದೆ. ವಾಟ್ಸ್ಆ್ಯಪ್ ಪೇ ಬಳಸಿಕೊಂಡು ಬಳಕೆದಾರರು ತಮ್ಮ ಯುಪಿಐ-ಸಕ್ರಿಯಗೊಂಡ ಬ್ಯಾಂಕ್
ಖಾತೆಗಳನ್ನು ಸಂಪರ್ಕಿಸಬಹುದು ಮತ್ತು ಆ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು. ಎಚ್ಡಿಎಫ್ಸಿ, ಐಸಿಐಸಿಐ, ಸ್ಟೇಟ್ ಬ್ಯಾಂಕ್ ಆಫ್
ಇಂಡಿಯಾ, ಆಕ್ಸಿಸ್ ಬ್ಯಾಂಕ್,
ಏರ್ಟೆಲ್ ಪೇಮೆಂಟ್ಸ್
ಬ್ಯಾಂಕ್ ಸೇರಿದಂತೆ ಭಾರತದಲ್ಲಿರುವ ಬಹುತೇಕ ಬ್ಯಾಂಕ್ಗಳ ಸೇವೆಯನ್ನು ವಾಟ್ಸ್ಆ್ಯಪ್ ಪೇ
ಒದಗಿಸುತ್ತದೆ.
ಸೆಟ್ ಅಪ್
ಮಾಡುವುದು ಹೇಗೆ?
ನಿಮ್ಮ ಸ್ಮಾರ್ಟ್ಫೋನ್ನಲ್ಲಿವಾಟ್ಸ್ಆ್ಯಪ್ ಇದೆ ಎಂದಾಕ್ಷ
ಣ ಹಣವನ್ನು ವರ್ಗಾವಣೆ ಮಾಡಲು ಅಥವಾ ಸ್ವೀಕರಿಸಲು ಬರುವುದಿಲ್ಲ. ನಿಮ್ಮ
ವಾಟ್ಸ್ಆ್ಯಪ್ ನಂಬರ್ ಯುಪಿಐ ಜೊತೆ ಸಂಪರ್ಕ ಹೊಂದಿದ್ದರೆ, ಅಂಥ ವಾಟ್ಸ್ಆ್ಯಪ್ ಅಪ್ಡೇಟ್ ಮಾಡಿ. ಆಗ ವಾಟ್ಸ್ಆ್ಯಪ್
ಪೇಮೆಂಟ್ ಆಪ್ಷನ್ ನಿಮ್ಮ ಸೆಟ್ಟಿಂಗ್ಸ್ನಲ್ಲಿಕಾಣಿಸಿಕೊಳ್ಳುತ್ತದೆ. ಒಂದೊಮ್ಮೆ ಈ ಮೊದಲು ನೀವು ಯುಪಿಐ
ಜತೆ ನಿಮ್ಮ ನಂಬರ್, ಖಾತೆ ಸಂಪರ್ಕಿಸಿಲ್ಲವಾದರೆ ಮೊದಲು ನೀವು ವಾಟ್ಸ್ಆ್ಯಪ್ನಲ್ಲಿಯುಪಿಐ ಅಕೌಂಟ್ ಸೆಟ್
ಅಪ್ ಮಾಡಿಕೊಳ್ಳಬೇಕು. ಆ ಬಳಿಕ
ನೀವು ಹಣವನ್ನು ಕಳುಹಿಸಲು ಇಲ್ಲವೇ ಸ್ವೀಕರಿಸಲು ಸಾಧ್ಯವಾಗುತ್ತದೆ.
ಬಳಸುವುದು ಹೇಗೆ?
ಮಜಾ ಏನ್ ಗೊತ್ತಾ,
ನೀವು ವಾಟ್ಸ್ಆ್ಯಪ್ನಿಂದ ಫೋಟೊ,
ವಿಡಿಯೋಗಳನ್ನು ಕಳಿಸುವಷ್ಟು ಸಲೀಸಾಗಿಯೇ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು!
ಚಾಟ್ ಬಾರ್ನಲ್ಲಿರುವ ಷೇರ್
ಫೈಲ್ ಐಕಾನ್ ಮೇಲೆ ಟ್ಯಾಪ್
ಮಾಡಿ ಮತ್ತು ಪೇಮೆಂಟ್
ಸೆಲೆಕ್ಟ್ ಮಾಡುವುದರ ಮೂಲಕವು ನೀವು
ನೇರವಾಗಿ ಹಣವನ್ನು ವರ್ಗಾವಣೆ ಮಾಡಬಹುದು. ಹಾಗೆಯೇ, ಪ್ರತ್ಯೇಕವಾಗಿ ಹಣ ವರ್ಗಾವಣೆಗೋಸ್ಕರವೇ ಶಾರ್ಟ್ಕಟ್ ಮೆನ್ಯುವಿನಲ್ಲಿಪೇಮೆಂಟ್
ಸೆಕ್ಷ ನ್ ಇದೆ. ಇಲ್ಲಿಬಳಕೆದಾರರು
ಅಕೌಂಟ್ ಡಿಟೇಲ್ಸ್, ವಹಿವಾಟು ಮತ್ತು ಹಣ ಕಳುಹಿಸಿದ
ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಎಚ್ಚರ ಇರಲಿ
- ವಾಟ್ಸ್ಆ್ಯಪ್
ಪೇಮೆಂಟ್ ಸೇವೆ ಎಷ್ಟು ಸರಳವಾಗಿದೆಯೋ ಅಷ್ಟೇ ಅಪಾಯಕಾರಿಯೂ ಆಗಬಹುದಾದ ಸಾಧ್ಯತೆ
ಇದೆ. ಹಾಗಾಗಿ, ವಾಟ್ಸ್ಆ್ಯಪ್ ಪೇ ಸೇವೆಯನ್ನು ಬಳಸುವ ಮುನ್ನ ಒಂದಿಷ್ಟು ಎಚ್ಚರಿಕೆಗಳನ್ನು
ಬಳಕೆದಾರರು ವಹಿಸಲೇಬೇಕು.
- ಪೇಮೆಂಟ್ಸ್ ಸಕ್ರಿಯಗೊಳಿಸುವ
ಸಂಬಂಧ ವಾಟ್ಸ್ಆ್ಯಪ್ ಎಂದಿಗೂ ದೂರವಾಣಿ ಕರೆ
ಅಥವಾ ಸಂದೇಶಗಳನ್ನು ರವಾನಿಸುವುದಿಲ್ಲಎಂಬುದನ್ನು ನೆನಪಿಡಿ.
- ವಾಟ್ಸ್ಆ್ಯಪ್
ಪೇಮೆಂಟ್ಸ್ಗೆ ಯಾವುದೇ ಅಧಿಕೃತ ಕಸ್ಟಮ್ ಕೇರ್ ನಂಬರ್ ಇಲ್ಲ. ಹಾಗಾಗಿ, ಯಾರಾದರೂ ವಾಟ್ಸ್ಆ್ಯಪ್
ಪೇ ಕಸ್ಟಮರ್ ಕೇರ್ನಿಂದ ಕರೆ
ಮಾಡಿದ್ದೇವೆ ಎಂದರೆ ನಂಬಲು ಹೋಗಬೇಡಿ. ಯಾಕೆಂದರೆ, ನಿಮ್ಮನ್ನು ಮೋಸಗೊಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
- ನಿಮ್ಮ ಡೆಬಿಟ್ ಮತ್ತು
ಕ್ರೆಡಿಟ್ಕಾರ್ಡ್ ವಿವರ, ಒಟಿಪಿ ಅಥವಾ ಯುಪಿಐ ಪಿನ್ ನಂಬರ್ ಅನ್ನು ಯಾರೊಂದಿಗೂ ವಾಟ್ಸ್ಆ್ಯಪ್ ಪೇಮೆಂಟ್ಗಾಗಿ ಹಂಚಿಕೊಳ್ಳಲು ಹೋಗಬೇಡಿ.
- ವಾಟ್ಸ್ಆ್ಯಪ್ನಲ್ಲಿನಿಮಗೆ ಕಳುಹಿಸಲಾಗುವ ಅಪರಿಚಿತ, ಸಂಶಾಯಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಲು ಹೋಗಲೇಬೇಡಿ.
- ವಾಟ್ಸ್ಆ್ಯಪ್ನಲ್ಲಿನಿಮಗೆ ಪರಿಚಿತರಾದವರಿಂದ ಮಾತ್ರವೇ ವಾಟ್ಸ್ಆ್ಯಪ್
ಪೇ ರಿಕ್ವೆಸ್ಟ್ಗಳನ್ನು
ಸ್ವೀಕರಿಸಿ. ಅಪರಿಚಿತ
ರಿಕ್ವೆಸ್ಟ್ಗಳನ್ನು ಸ್ವೀಕರಿಸಲು ಹೋಗಬೇಡಿ. ಖದೀಮರು ನಿಮ್ಮ ಖಾತೆಯಿಂದ ಹಣವನ್ನು ಲಪಟಾಯಿಸಬಹುದು. ಹುಷಾರಾಗಿರಿ.
(ಈ ಲೇಖನವು 2020
ಡಿಸೆಂಬರ್ 27ರ ವಿಜಯ ಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ