ಭಾನುವಾರ, ಸೆಪ್ಟೆಂಬರ್ 28, 2008

ನಗಲು ಪ್ರಯತ್ನಿಸುತ್ತಿದ್ದೇನೆ

ಕತ್ತಲೆಯೇ ಬದುಕೆಂದು
ನಂಬಿದ ನಾನು ಈಗೀಗ
ನಗಲು ಪ್ರಯತ್ನಿಸುತ್ತಿದ್ದೇನೆ
ದುಃಖದ ಸಾಗರದಲ್ಲಿ ಕೈ
ಬಿಟ್ಟು ನೀ ಹಿಂತಿರುಗಿ ನೋಡದೆ
ಹೋದಾಗ ಸಾಯಬೇಕೆಂದು
ಕೊಂಡವನಿಗೆ ಅಲೆಗಳೇ
ಈಜು ಕಲಿಸಿ ದಡಕ್ಕೆ ಎಸೆದಿವೆ ನನ್ನನ್ನು.
----
ಈಗೀಗ ಪ್ರತಿ ಸೂರ್ಯನ ಹುಟ್ಟು
ಸಾವು ಕೂಡಾ ಆಸಕ್ತಿ ಹುಟ್ಟಿಸುತ್ತಿದೆ
ರಾತ್ರಿಯಲ್ಲಿ ಚಂದ್ರನ ತಣ್ಣನೆಯ
ಬೆಳಗು ಕೂಡಾ ಹೊಮ್ಮಿಸುತ್ತಿದೆ
ನೂರಾರು ಅರ್ಥ ನನ್ನೆದೆಯ
ಭಾವದೊಳಗೆ ಆದರೆ,
ಅಲ್ಲಿ ನೀನಿಲ್ಲವೆಂಬ
ಅರಿವು ಎಚ್ಚರವಾದಾಗ
ಮತ್ತೆ ಅದೇ ಕತ್ತಲೆ ಇಷ್ಟವಾಗುತ್ತದೆ
ಆದರೂ ಪಣತೊಟ್ಟಿದ್ದೇನೆ
ಕತ್ತಲೆಯನ್ನೇ ಹಿಂಜಿ
ಬೆಳಕನ್ನು ಪಡೆಯಬೇಕೆಂದು
ಆ ಬೆಳಕಲ್ಲಿ ಹೊಸ ಲೋಕ,
ಭಾವ, ಭಾಷೆ ಕಲಿಯಬೇಕೆಂಬ
ಹಂಬಲ ನನ್ನದು.

10 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ತೇಜಸ್ವಿನಿ ಹೆಗಡೆ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ತೇಜಸ್ವಿನಿ ಹೆಗಡೆ ಹೇಳಿದರು...

ಒಳ್ಳೆಯ ಆಶಯ.. ಜೀವನ್ಮುಖಿಯಾಗಿರುವ ಕವನ ಚೆನ್ನಾಗಿದೆ.

ಒಂದು ಕಡೆ ಸಣ್ಣ ತಪ್ಪುಂಟಾಗಿದೆ. "ಇಸ್ತವಾಗುತ್ತದೆ" ಎಂಬಲ್ಲಿ "ಇಷ್ಟ" ಎಂದಾಗಬೇಕಾಗಿದೆ.

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

nimm pratikiyege dhanavada tejeshwini...

Nivu helida hage aad pramadavannu saripadisiddene gamanisi

M tippar

ಅನಾಮಧೇಯ ಹೇಳಿದರು...

tippara,
padya chennagide.
padya yavattu novannu hanchabaradu annuttane kavi neruda.
intha, bharavase, belakanne tanna padyagalli tumbidda...
adare avana kavitegallella ontitana, novugalindale pallavisiddu.
nimma salugalu hage dwanisuttave..
chennagive.
bareva harivu hecchali.
-alemari

dinesh ಹೇಳಿದರು...

kavana Chennagide....

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

comment madid kumar and dineshge thanks

ದಿನೇಶ್ ಕುಮಾರ್ ಎಸ್.ಸಿ. ಹೇಳಿದರು...

ಕತ್ತಲನ್ನು ಹಿಂಜಿ ಬೆಳಕನ್ನು ಪಡೆಯುವ ಕವಿಯ ತವಕ ಈಡೇರಲಿ. ಹೊಸ ಲೋಕ, ಭಾವ, ಭಾಷೆ ಎಲ್ಲವೂ ನಿಮ್ಮದೇ, ಬಿಗಿದಪ್ಪಿಕೊಳ್ಳಿ.
ಅಲೆಗಳಿಂದ ಈಜು ಕಲಿತವನೇ ಸಮರ್ಥ ಈಜುಪಟುವಾಗಬಲ್ಲ. ಒಳ್ಳೆಯ ಕವಿತೆ ಕೊಟ್ಟಿದ್ದೀರಿ.

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

kavite mecchi bennu tattiddakke tumba thanks Dinesh sir

jomon varghese ಹೇಳಿದರು...

ಚೆಂದದ ಕವಿತೆ.. :)