ಸೋಮವಾರ, ಅಕ್ಟೋಬರ್ 5, 2015
ಸೋಮವಾರ, ಸೆಪ್ಟೆಂಬರ್ 14, 2015
ರಾಕೇಶ್ ಮಾರಿಯಾ: ಜನರ ಪೊಲೀಸ್ ಕಮಿಷನರ್
ಮುಂಬಯಿಗರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹೆಸರು ಗೊತ್ತಿರುತ್ತದೆಯೋ.. ಇಲ್ಲ ವೋ; ಆದರೆ, ಪೊಲೀಸ್ ಕಮಿಷನರ್ ಹೆಸರು ಮಾತ್ರ ಎಲ್ಲರ ನಾಲಿಗೆ ಮೇಲಿರುತ್ತದೆ. ಮುಂಬಯಿಗೆ ಕಮಿಷನರೇ ಮುಖ್ಯಮಂತ್ರಿ! ಇಂಥ ಹುದ್ದೆಗೆ ಇನ್ನೂ ಹೆಚ್ಚಿನ ಘನತೆಯನ್ನು ತಂದುಕೊಟ್ಟವರು ರಾಕೇಶ್ ಮಾರಿಯಾ.
ಛಿ ಛಿಟಟ್ಝಛಿ’ ್ಚಟಞಞಜಿಜಿಟ್ಞಛ್ಟಿ ಎಂದೇ ಖ್ಯಾತರಾಗಿರುವ ಐಪಿಎಸ್ ಅಕಾರಿ ರಾಕೇಶ್ ಅವರದ್ದು ಜನಪರ ಪೊಲೀಸ್ ವೃತ್ತಿ. ಜನರಿಗೆ ಕಮಿಷನರ್ ಕಚೇರಿಯನ್ನು ಮುಕ್ತವಾಗಿಸಿ ಅವರ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿಸಿದ್ದ ಅಕಾರಿ ಇವರು. ಇಂಥ ರಾಕೇಶ್ ಮಾರಿಯಾ ಅವರು ಸುದ್ದಿಯ ಕೇಂದ್ರಬಿಂದುವಾಗಿರುವುದು ಶೀನಾ ಬೋರಾ ನಿಗೂಢ ಕೊಲೆ ಪ್ರಕರಣದಲ್ಲಿ. ತನಿಖೆಯನ್ನು ಅವರು ಚುರುಕುಗೊಳಿಸುತ್ತಿದ್ದಂತೆ ಪೊಲೀಸ್ ಕಮಿಷನರ್ ಹುದ್ದೆಯಿಂದ ಅವರನ್ನು ಮಹಾರಾಷ್ಟ್ರದ ಡೈರೆಕ್ಟರ್ ಜನರಲ್(ಹೋಮ್ಗಾರ್ಡ್ಸ್)ಹುದ್ದೆಗೆ ವರ್ಗ ಮಾಡಲಾಯಿತು. ಇದು ಮಾ‘್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ಾರಿ ಚರ್ಚೆಗೆ ಕಾರಣವಾಯಿತು.
ಹಾಗೆ ನೋಡಿದರೆ, ರಾಕೇಶ್ ಮಾರಿಯಾ ಅವರು ಕೈ ಹಾಕಿದ ಪ್ರಕರಣಗಳೆಲ್ಲವೂ ಸೆನ್ಸೇಷನಲ್ ಆದಂಥವು. ಇದುವರೆಗೆ ಅವರು ‘ೇದಿಸಿರುವ ಅನೇಕ ಪ್ರಕರಣಗಳು ಅಪರಾ‘ ಜಗತ್ತಿನಲ್ಲಿ ಮೈಲಿಗಲ್ಲಾಗಿವೆ.
2003ರ ಗೇಟ್ ವೇ ಆಫ್ ಇಂಡಿಯಾ ಮತ್ತು ಜವೇರಿ ಬಜಾರ್ ಅವಳಿ ಸೋಟ ಪ್ರಕರಣ, ಸಂಜಯ್ ದತ್ ಪ್ರಕರಣ, ನೀರಜ್ ಗ್ರೋವರ್ ಕೊಲೆ ಪ್ರಕರಣಗಳನ್ನು ‘ೇದಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ, 26 / 11 ರ ಮುಂಬಯಿ ದಾಳಿಯಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ ಕಸಬ್ನ ವಿಚಾರಣೆಯನ್ನು ಕೂಡ ಇದೇ ಅಕಾರಿ ಮಾಡಿದ್ದು. ಕಸಬ್ ಬಾಯಿಂದಲೇ ಪಾಕಿಸ್ತಾನದ ಹಿನ್ನೆಲೆಯನ್ನು ಅವರು ಬಿಚ್ಚಿಟ್ಟಿದ್ದರು.
ಆರೋಪಿಗಳನ್ನು ‘ಥರ್ಡ್ ಡಿಗ್ರಿ’ಯ ಮೂಲಕ ವಿಚಾರಣೆ ಮಾಡುತ್ತಾರೆಂಬ ಆರೋಪ ರಾಕೇಶ್ ಮಾರಿಯಾ ಅವರ ಮೇಲಿದೆ. ಆದರೆ, ಇದನ್ನು ಅವರು ತಳ್ಳಿ ಹಾಕುತ್ತಾರೆ. ‘‘ಅದೆಲ್ಲವೂ ಸುಳ್ಳು. ಆರೋಪಿಗಳನ್ನು ಕೇವಲ ಹೊಡೆದು, ಹಿಂಸಿಸಿ ಬಾಯಿಬಿಡಿಸಲು ಸಾ‘್ಯವಿಲ್ಲ. ಅವರ ಮಾನಸಿಕ ಸ್ಥಿತಿಯನ್ನು ಅವಲೋಕಿಸಿ ವಿಚಾರಣೆ ನಡೆಸುತ್ತೇನೆ. ಹೀಗೆ ಮಾಡುವುದರಿಂದಲೇ ಸತ್ಯ ಹೊರಬರಲು ಸಾ‘್ಯ,’’ ಎನ್ನುತ್ತಾರೆ.
6 ಅಡಿ ಎತ್ತರದ ಆಜಾನುಬಾಹು ರಾಕೇಶ್ ಮಾರಿಯಾ ನಿಜಾರ್ಥದಲ್ಲಿ ‘ಡೈನಾಮಿಕ್ ಪೊಲೀಸ್ ಆಫೀಸರ್.’ ಅವರನ್ನು ಜನರು ಮಾತ್ರ ಆರಾಸುವುದಲ್ಲ, ಪೇದೆಯಿಂದ ಹಿಡಿದು ಹಿರಿಯ ಅಕಾರಿಗಳವರೆಗೂ ಅವರು ಅಚ್ಚುಮೆಚ್ಚು. ಅವರಿಗೆ ತಡರಾತ್ರಿ ಕೂಡ ಪೇದೆಗಳು ಫೋನ್ ಮಾಡಬಹುದು.
ಮಹಾರಾಷ್ಟ್ರದ ‘ಯೋತ್ಪಾದನೆ ನಿಗ್ರಹ ದಳ(ಎಟಿಎಸ್) ಎಸಿಪಿ ಸಂಜಯ್ ಕದಮ್ ಅವರು ರಾಕೇಶ್ ಮಾರಿಯಾ ಅವರನ್ನು ‘ಷರ್ಲಾಕ್ ಹೋಮ್ಸ್’ಗೆ ಹೋಲಿಸುತ್ತಾರೆ. 1994ರಲ್ಲಿ ಡಾ.ಜಲಿಸ್ ಅನ್ಸಾರಿಯನ್ನು ಸಿಬಿಐ ಬಂಸಿತ್ತು. ‘ಡಾ. ಬಾಂಬ್ ಆಫ್ ಬಾಂಬೆ’ ಎಂಬ ಕುಖ್ಯಾತಿ ಇದ್ದ ಈತನಿಂದ ಬಾಯಿ ಬಿಡಿಸಲು ಸಾ‘್ಯವಾಗಿರಲಿಲ್ಲ. ಆಗ ಸಿಬಿಐ ಮೊರೆ ಹೋಗಿದ್ದು ಇದೇ ರಾಕೇಶ್ ಮಾರಿಯಾ ಅವರನ್ನು. ಆಗ ಕ್ರೈಮ್ ಬ್ರಾಂಚ್ನಲ್ಲಿ ಡಿಸಿಪಿ ಆಗಿದ್ದ ಮಾರಿಯಾ, ಅ‘ರ್ ಗಂಟೆಯೊಳಗೆ ಅನ್ಸಾರಿ ಬಾಯಿ ಬಿಡಿಸಿದ್ದರು. 1989ರಿಂದ 1994ರ ಅವಯಲ್ಲಿ ಸಂ‘ವಿಸಿದ ಗುರುದ್ವಾರ ಮತ್ತು ಪೊಲೀಸ್ ಸ್ಟೇಷನ್ಗಳ ಸೋಟದ ತಪ್ಪೊಪ್ಪಿಗೆಯನ್ನು ನೀಡಿದ್ದ ಆತ. ಇದು ರಾಕೇಶ್ ಅವರ ಚುರುಕು ವಿಚಾರಣೆಗೆ ಹಿಡಿದ ಕೈಗನ್ನಡಿ. ನೋಡಲು ರಫ್ ಆಗಿ ಕಂಡರೂ ಆಂತರ್ಯದಲ್ಲಿ ಮೆದುವಾಗಿದ್ದಾರೆ. ಕೆಲಸದ ವಿಷಯ ಬಂದರೆ ಅವರು ಕಠಿಣವಾಗಿ ವರ್ತಿಸುತ್ತಾರೆ.
ಸ್ವತಃ ಷರ್ಲಾಕ್ ಹೋಮ್ಸ್ನ ಅಭಿಮಾನಿಯಾಗಿರುವ ರಾಕೇಶ್ ಅವರದ್ದು ಅಗಾ‘ವಾದ ಓದು. ಇಂಗ್ಲಿಷ್, ಉರ್ದು ಮತ್ತು ಪಂಜಾಬಿ ‘ಾಷೆಗಳ ಮೇಲೂ ಹಿಡಿತವಿದೆ. ಈ ‘ಾಷಾಜ್ಞಾನ ಕಸಬ್ ವಿಚಾರಣೆ ವೇಳೆ ನೆರವಾಯಿತು ಅವರಿಗೆ. ಬ್ಯಾಸ್ಕೆಟ್ ಬಾಲ್ ಮತ್ತು ಫುಟ್ಬಾಲ್ ಆಡುತ್ತಾರೆ. ಎಷ್ಟೋ ಬಾರಿ ಪೇದೆಗಳೊಂದಿಗೆ ಫುಟ್ಬಾಲ್ ಆಡಿದ್ದಿದೆ.
ಇಂಥ ಖಡಕ್ ಅಕಾರಿ ರಾಕೇಶ್ ಅವರು ಮುಂಬಯಿ ಪೊಲೀಸ್ ಕಮಿಷನರ್ ಆದಾಗ ತುಂಬ ಖುಷಿಪಟ್ಟರು. ‘‘ಬಾಂದ್ರಾದ ಗಲ್ಲಿಗಳಲ್ಲಿ ಬರಿಗಾಲಿನಲ್ಲೇ ಫುಟ್ಬಾಲ್ ಆಡಿಕೊಂಡಿದ್ದ ಹುಡುಗನ ಕನಸು ನನಸಾಯಿತು,’’ ಎಂದು ಮಾ‘್ಯಮಗಳಿಗೆ ಪ್ರತಿಕ್ರಿಯಿಸಿದ್ದರು.
ಆದರೆ, ಮಾರಿಯಾ ಅವರು ಕಮಿಷನರ್ ಆಗಿ ಆಯ್ಕೆಯಾಗಿದ್ದು ಕೂಡ ಅಷ್ಟು ಸರಳವಾಗೇನಲ್ಲ. ಈ ಹುದ್ದೆಗಾಗಿ, ಈಗ ಕಮಿಷನರ್ ಆಗಿರುವ ಅಹ್ಮದ್ ಜಾವೇದ್, ಮತ್ತೊಬ್ಬ ಹಿರಿಯ ಅಕಾರಿ ವಿಜಯ್ ಕಾಂಬಳೆ ಆಗ ತೀವ್ರ ಸ್ಪರ್‘ೆಯೊಡ್ಡಿದ್ದರು. ಅಲ್ಲದೆ, ರಾಜೀನಾಮೆ ನೀಡುವ ಬೆದರಿಕೆ ಕೂಡ ಹಾಕಿದ್ದರು. ಅಂದಿನ ಕಾಂಗ್ರೆಸ್ ಮತ್ತು ಎನ್ಸಿಪಿ ನೇತೃತ್ವದ ಸರಕಾರ, ಅಳೆದೂ ಸುರಿದೂ ಮಾರಿಯಾ ಅವರನ್ನು ಅಂತಿಮ ಕ್ಷಣದಲ್ಲಿ ಕಮಿಷನರ್ ಆಗಿ ನೇಮಕ ಮಾಡಿತ್ತು. ಪರಿಸ್ಥಿತಿ ಹೇಗಿತ್ತು ಎಂದರೆ, ಅವರು ಅಕಾರ ಸ್ವೀಕರಿಸಿ ಅ‘ರ್ ಗಂಟೆ ತಮ್ಮ ಅಕಾರಿಗಳೊಂದಿಗೆ ಮಾತುಕತೆಯಾಡುವಷ್ಟೂ ಸಮಯವಿರಲಿಲ್ಲ. ಅಂಥ ನಾಜೂಕಿನ ಸಂದ‘ರ್ದಲ್ಲಿ ಅವರು ಕಮಿಷನರ್ ಆಗಿ, ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.
ರಾಕೇಶ್ ಅವರು ಹುಟ್ಟಿದ್ದು 1957 ಜನವರಿ 19ರಂದು. ದೇಶ ಇಬ್ಭಾಗವಾದಾಗ ಇವರ ತಂದೆ ಪಾಕಿಸ್ತಾನದಿಂದ ಮುಂಬಯಿಗೆ ವಲಸೆ ಬಂದರು. ಅವರು ಚಿತ್ರ ನಿರ್ಮಾಪಕರೂ ಹೌದು. ಮನಸ್ಸು ಮಾಡಿದ್ದರೆ ರಾಕೇಶ್ ಅವರು ಅದೇ ಕ್ಷೇತ್ರದಲ್ಲಿ ಮುಂದುವರಿಯಬಹುದಿತ್ತು. ಆದರೆ, ಪೊಲೀಸ್ ವೃತ್ತಿ ಆಯ್ದುಕೊಂಡ ಅವರೇ ಈಗ ಅನೇಕ ಬಾಲಿವುಡ್ ಸಿನಿಮಾಗಳಿಗೆ ಸೂರ್ತಿಯಾಗಿದ್ದಾರೆ. 2004ರಲ್ಲಿ ತೆರೆಗೆ ಬಂದ ‘ಬ್ಲಾಕ್ ಫ್ರೈಡೇ’, ‘ಮ್ಯಾಕ್ಸಿಮಮ್ ಸಿಟಿ’, 2008ರಲ್ಲಿ ತೆರೆ ಕಂಡ ‘ಎ ವೆನ್ಸ್ಡೇ’, 2013ರಲ್ಲಿ ತೆರೆಕಂಡ ‘ದಿ ಅಟ್ಯಾಕ್ಸ್ ಆಫ್ 26/11’, ‘ದಿ ಸೀಜ್’ ಚಿತ್ರಗಳು ಇವರ ವ್ಯಕ್ತಿತ್ವವನ್ನೇ ಕೇಂದ್ರೀಕರಿಸಿವೆ. ಈ ಸಿನಿಮಾಗಳಲ್ಲಿ ಬಿಂಬಿತವಾಗಿರುವ ಪ್ರಮುಖ ತನಿಖಾಕಾರಿಯ ಚಿತ್ರಣಕ್ಕೆ ಇವರೇ ಸೂರ್ತಿ. ರಾಕೇಶ್ ಮತ್ತು ಪ್ರೀತಿ ದಂಪತಿಗೆ ಕುನಾಲ್ ಮತ್ತು ಕ್ರಿಶ್ ಮಕ್ಕಳಿದ್ದಾರೆ. ಇವರ ತಂದೆಯ ಚಿತ್ರ ನಿರ್ಮಾಣ ಕಂಪನಿ ಕಲಾನಿಕೇತನ ಇವರ ಒಡೆತನದಲ್ಲೇ ಇದೆ.
1981ರ ಬ್ಯಾಚ್ನ ಐಪಿಎಸ್ ಅಕಾರಿಯಾದ ರಾಕೇಶ್ ಅವರು ಮಹಾರಾಷ್ಟ್ರದ ಅಕೋಲಾ ಮತ್ತು ಬುಲ್ದಾನಾ ಜಿಲ್ಲೆಗಳ ಸಹಾಯಕ ಜಿಲ್ಲಾ ರಕ್ಷಣಾಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಪೊಲೀಸ್ ವೃತ್ತಿಯ ಪರಿಯೊಳಗೆ ಬಂದರು. ನಂತರ ಅವರು, 1986ರಲ್ಲಿ ಮುಂಬಯಿಗೆ ವರ್ಗವಾದರು. 1993ರಲ್ಲಿ ಟ್ರಾಫಿಕ್ನ ಡೆಪ್ಯುಟಿ ಪೊಲೀಸ್ ಕಮಿಷನರ್ ಆಗಿದ್ದರು. 2014 ಫೆಬ್ರವರಿ 15ರಂದು ಮುಂಬಯಿ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡರು.
ರಾಕೇಶ್ ಅವರೇನೂ ವಿವಾದಗಳಿಂದ ಮುಕ್ತರಾಗಿಲ್ಲ. ಮುಂಬಯಿ ದಾಳಿ ವೇಳೆ ಮೃತಪಟ್ಟ ಅಶೋಕ ಕಾಮ್ಟೆ ಸಾವಿಗೆ ಇವರೇ ಕಾರಣ ಎಂದು ಕಾಮ್ಟೆ ಪತ್ನಿ ವಿನಿತಾ ಆರೋಪಿಸಿದ್ದರು. ಇತ್ತೀಚೆಗಷ್ಟೇ ‘ಾರಿ ಸುದ್ದಿಗೆ ಕಾರಣವಾಗಿದ್ದ ಲಲಿತ್ ಮೋದಿ ಅವರನ್ನು ‘ೇಟಿ ಮಾಡಿದ ಆರೋಪ ಅವರಿಗೆ ಎದುರಾಗಿತ್ತು. ಈ ಬಗ್ಗೆ ಸ್ಪಷ್ಟನೆಯನ್ನೂ ಅವರು ಮುಖ್ಯಮಂತ್ರಿ ಫಡ್ನವಿಸ್ಗೆ ನೀಡಿದ್ದಾರೆ. ಇದೀಗ ಶೀನಾ ಬೋರಾ ಕೊಲೆ ಪ್ರಕರಣವನ್ನು ‘ೇದಿಸಿದರೂ ವಿವಾದ ಅವರ ಬೆನ್ನು ಬಿಟ್ಟಿಲ್ಲ. ಇನ್ನೂ ಅನೇಕ ವಿವಾದಗಳು ಇವರ ಸುತ್ತ ಗಿರಕಿ ಹೊಡೆಯುತ್ತಲೇ ಇವೆ.
- Mallikarjun Tippar
(This article published in VK on 13th sept 2015 )

ಶುಕ್ರವಾರ, ಸೆಪ್ಟೆಂಬರ್ 4, 2015
Sorry Aylan
Sorry Aylan
Forgive us
We forgot humanity
In the name of Religion
Language, caste and creed color
Sorry Aylan
Forgive us
We will never learn
Peace message
A passage to happiness
Sorry Aylan
Forgive us
We will fight each other
For ever and ever
Never we think about
life
Sorry Aylan
Forgive us
Blood is our priority
We stood behind hypocrisy
And power is supremacy
Sorry Aylan
Forgive us
Will wear mask of
protector
Killing everybody, doesn't
matter
Child, woman or humanity
- Mallikarjun Tippar
ಬುಧವಾರ, ಆಗಸ್ಟ್ 12, 2015
- ಗಜಲ್-
ಕನಸು ಕಾಣುವ ತುಡಿತ ಹಂಬಲ, ಇಲ್ಲದೆ ಯಾರ ಬೆಂಬಲ
ಕಣ್ ಮಂದಿನ ದಾರಿ ಮಬ್ಬು, ಸಾಗಬೇಕು ಇಲ್ಲದೆ ಯಾರ ಬೆಂಬಲ
ಯಾರು ಇದ್ದರೇನು, ಇಲ್ಲದಿದ್ದರೇನು, ನೊಗ ಹೊತ್ತು ನಡೆಯಬೇಕು
ಬದುಕಿನ ಬಂಡಿಯ ಕೀಲು ಕೀಳದಂತೆ, ಇಲ್ಲದೆ ಯಾರ ಬೆಂಬಲ
ಹರೆಯದ ದಿನಗಳ ನೆನೆ ನೆನೆದು, ಮುಂದಿರುವ ಜೀವನಕ್ಕೆ ದಾಟಿ,
ಕೋಟಿ ಸಂಕಟ ಮೀರಿ ಈಜಲೇಬೇಕು ಇಲ್ಲದೆ ಯಾರ ಬೆಂಬಲ
ತಂಪನೆಯ ಸುಳಿ ಗಾಳಿಗೆ ಮುಖವೊಡ್ಡಿ, ನೆನಪುಗಳ ಒಡ್ಡೋಲಗದಲ್ಲಿ
ಕನಸುಗಳ ತಳಕು ಹಾಕುತಾ, ನೆಗೆಯಬೇಕು ಆಕಾಶಕೆ, ಇಲ್ಲದೆ ಯಾರ ಬೆಂಬಲ

ಸೋಮವಾರ, ಆಗಸ್ಟ್ 3, 2015
ವ್ಯಕ್ತಿಗತ: ನಿಸ್ವಾರ್ಥರಿಗೆ ಸಂದ ಅಮೋಘ ಪ್ರಶಸ್ತಿ
ಬಟ್ಟೆ ಇಲ್ಲದ ನಿರ್ಗತಿಕರಿಗೆ ವಸ್ತ್ರದಾನ ಮಾಡಿ ನೆಮ್ಮದಿ ಕಾಣುವ ಸಮಾಜ ಸೇವಕ ಅಂಶು
ಗುಪ್ತ ಮತ್ತು ಸರಕಾರಿ ವ್ಯವಸ್ಥೆಯೊಳಗೇ ಇದ್ದು ಭ್ರಷ್ಟಾಚಾರವನ್ನು ಹತ್ತಿಕ್ಕುತ್ತಿರುವ
ಸಂಜೀವ್ ಚತುರ್ವೇದಿ ಈಗ ನಮ್ಮ ಮುಂದಿರುವ ಆದರ್ಶವಂತರು.
ಸಂಸತ್ತಿನ ಉಭಯ ಸದನಗಳ ಗದ್ದಲ, ಯಾಕೂಬ್ ಮೆಮೊನ್ ಗಲ್ಲು, ಜನರ ರಾಷ್ಟ್ರಪತಿ ಅಬ್ದುಲ್ ಕಲಾಂ ನಿಧನದ ನಡುವೆ ಭಾರತೀಯರೆಲ್ಲರೂ ಖುಷಿಪಡಬಹುದಾದ ಸುದ್ದಿ ಮಾತ್ರ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ. ನಿಸ್ವಾರ್ಥ ಸೇವೆ ಹಾಗೂ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕಾಗಿ ಭಾರತದ ಇಬ್ಬರಿಗೆ ಏಷ್ಯಾದ ಅತಿದೊಡ್ಡ ಗೌರವ, ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ ಸಂದಿತು. ಈ ಪೈಕಿ ಒಬ್ಬರು 'ಗೂಂಜ್' ಮುಖ್ಯಸ್ಥ ಅಂಶು ಗುಪ್ತ, ಮತ್ತೊಬ್ಬರು ಐಎಫ್ಎಸ್ ಅಧಿಕಾರಿ ಸಂಜೀವ್ ಚತುರ್ವೇದಿ.
ನಿರ್ಗತಿಕರ ಮಾನ ಕಾಪಾಡಿದ ಗುಪ್ತ
''ನನಗೆ ಚಳಿ ಅಂತ ಅನಿಸಿದಾಗಲೆಲ್ಲ ಶವಗಳನ್ನು ತಬ್ಬಿಕೊಂಡು ಮಲಗುತ್ತೇನೆ,''
- 6 ವರ್ಷದ ಬಾಲಕಿಯೊಬ್ಬಳು ಹೇಳಿದ ಈ ಮಾತುಗಳು ಅಂಶು ಗುಪ್ತ ಅವರ ಮನವನ್ನು ಕಲಕಿದವು, ಇನ್ನಿಲ್ಲದಂತೆ ಕಾಡಿದವು. ಸಮಾಜ ಸೇವೆಗೆ ತುಡಿಯುತ್ತಿದ್ದ ಅವರ ಮನಸ್ಸಿಗೆ ಒಂದು ಸ್ಪಷ್ಟವಾದ ದಿಸೆಯನ್ನು ತೋರಿಸಿದವು. ಅದರ ಒಟ್ಟು ಫಲವೇ 'ಗೂಂಜ್' ಎಂಬ ಸರಕಾರೇತರ ಸಂಸ್ಥೆ. ಟ್ಟ ್ಛಟ್ಟ ಇ್ಝಟಠಿ ಎನ್ನುವುದು ಸಂಸ್ಥೆಯ ಧ್ಯೇಯ.
ಸರಕಾರಗಳು, ರಾಜಕೀಯ ನಾಯಕರೂ ಸೇರಿದಂತೆ ಎಲ್ಲರೂ 'ರೋಟಿ, ಕಪಡಾ, ಮಕಾನ್'(ಆಹಾರ, ಬಟ್ಟೆ, ಮನೆ) ಬಗ್ಗೆ ಮಾತನಾಡುತ್ತಾರೆ. ಆದರೆ, ಬಟ್ಟೆ ಬಗ್ಗೆ ಅಷ್ಟೊಂದು ಗಂಭೀರವಾಗಿ ಚಿಂತಿಸುವುದಿಲ್ಲ. ಅರೆಬಟ್ಟೆ ಧರಿಸುವ ಕೋಟ್ಯಂತರ ಜನರು ಭಾರತದಲ್ಲಿದ್ದಾರೆ. ಶ್ರೀಮಂತರು ಬಳಸಿ ಬಿಸಾಡುವ ಬಟ್ಟೆಗಳನ್ನು ತಂದು, ಅವುಗಳನ್ನು ಪುನಃ ಸಿದ್ಧಪಡಿಸಿ ಅಂಥ ಬಡವರಿಗೆ ಹಂಚುವುದೇ ಈ ಸಂಸ್ಥೆಯ ಕಾರ್ಯ. 21 ರಾಜ್ಯಗಳಿಗೆ ಗೂಂಜ್ ತನ್ನ ಸೇವೆಯನ್ನು ವಿಸ್ತರಿಸಿದೆ.
ಗೂಂಜ್ನ ಮುಖ್ಯಸ್ಥ ಅಂಶು ಗುಪ್ತ ಅವರು ಎಲ್ಲ ವಿದ್ಯಾವಂತರಂತೆ ಯೋಚಿಸಲಿಲ್ಲ. ಅವರೊಳಗೆ ಸಮಾಜಸೇವೆಯೆಂಬ 'ಹುಳು' ಸದಾ ಕೊರೆಯುತ್ತಲೇ ಇತ್ತು. ಆದರೆ, ಅದನ್ನು ಹೊರ ತೆಗೆಯುವುದು ಹೇಗೆ? ಮತ್ತು ಯಾವಾಗ? ಎಂಬ ಸ್ಪಷ್ಟ ದಾರಿ ಇರಲಿಲ್ಲ. ದೆಹಲಿಯವರೇ ಆದ ಗುಪ್ತ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಷನ್ನಲ್ಲಿ ಪದವಿ ಹಾಗೂ ಎಕಾನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಮುಗಿಸಿ ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡಲು ಆರಂಭಿಸಿದರು. ಆದರೆ, ಅವರೊಳಗಿದ್ದ ಸಮಾಜ ಸೇವೆ 'ಹುಳು' ಮಾತ್ರ ಕಾರ್ಪೊರೇಟ್ ಸೆಕ್ಟರ್ನಲ್ಲಿ ಬಹಳ ದಿನ ಉಳಿಯಲು ಬಿಡಲಿಲ್ಲ. ಮೇಲೆ ಹೇಳಿದ ಒಂದು ಘಟನೆ ಅವರ ಮನಸು ಬದಲಿಸಿತು. 1999ರಲ್ಲಿ ದೆಹಲಿಯಲ್ಲಿ 'ಗೂಂಜ್' ಸಂಸ್ಥೆ ಹುಟ್ಟು ಹಾಕಿದರು. ಆ ಮೂಲಕ ನಿರ್ಗತಿಕ, ಅನಾಥ, ಬಡವರ ಮಾನ ಮುಚ್ಚುವ ಕೆಲಸವನ್ನು ತಪಸ್ಸು ಎನ್ನುವಂತೆ ಮಾಡುತ್ತ ಬಂದರು. ಇವರ ಈ ಸೇವೆ ಇಷ್ಟಕ್ಕೇ ನಿಲ್ಲಲಿಲ್ಲ. ಭೂಕಂಪ, ಚಂಡಮಾರುತ, ಕುಂಭದ್ರೋಣ ಮಳೆ ಸೇರಿದಂತೆ ನೈಸರ್ಗಿಕ ವಿಕೋಪಗಳಲ್ಲಿ ನಿರ್ಗತಿಕರಾದವರಿಗೆ ಬಟ್ಟೆಗಳನ್ನು ಪೂರೈಸಿದರು. ಆಸರೆಯತ್ತ ಕೈಚಾಚಿದವರಿಗೆ ಕಾಮಧೇನುವಾದರು.
ಗೂಂಜ್ ಕಟ್ಟಿಕೊಂಡು 16 ವರ್ಷಗಳಿಂದ ಸಮಾಜಸೇವೆಯಲ್ಲಿ ನಿರತರಾಗಿರುವ ಗುಪ್ತ ಅವರಿಗೆ ನೆನಪಿಡುವಂಥ ಘಟನೆ ಯಾವುದಾದರೂ ಇದೆಯಾ? ಅಂದರೆ, ''ಮೈ ಕೊರೆಯುವ ಚಳಿಗಾಲದ ಮುಂಜಾವಿನಲ್ಲಿ ಮುದುಕನೊಬ್ಬನಿಗೆ ಸೆಕೆಂಡ್ ಹ್ಯಾಂಡ್ ಮೇಲುಹೊದಿಕೆ ನೀಡಿದಾಗ ಆತನ ಮೊಗದಲ್ಲಿ ಅರಳಿದ ಸಂತೋಷವೇ ಸದಾ ಕಾಡುವಂಥದ್ದು,'' ಎನ್ನುತ್ತಾರೆ. ಅಂದರೆ, ಅವರು ತಮ್ಮ ಸುಖ ಸಂತೋಷಗಳನ್ನೆಲ್ಲವನ್ನೂ ಇಂಥ ಪುಟ್ಟ ಕಾರ್ಯಗಳಲ್ಲೇ ಕಂಡುಕೊಳ್ಳುತ್ತಾರೆ. ಇಂಥ ನಿಸ್ವಾರ್ಥ, ನಿಜ ಸಮಾಜ ಸೇವಕನಿಗೆ 2015ರ ಮ್ಯಾಗ್ಸೆಸೆ ಪ್ರಶಸ್ತಿ ದೊರೆತಿರುವುದು ನಿಜಕ್ಕೂ ಸಂತೋಷದ ವಿಚಾರ. ಈ ಪ್ರಶಸ್ತಿ ಬರುವುದಕ್ಕಿಂತ ಮುಂಚೆ ಗೂಂಜ್ ಅಥವಾ ಅಂಶು ಗುಪ್ತ ಅವರು ಎಲ್ಲರಿಗೂ ಚಿರಪರಿಚಿತರಾಗಿರಲಿಲ್ಲ. ಇದೀಗ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ಇನ್ನಷ್ಟು ಸಮಾಜಸೇವೆಯನ್ನು ಮಾಡಲು ಈ ಪ್ರಶಸ್ತಿ ಹುರಿದುಂಬಿಸಿದೆ.
ವ್ಯವಸ್ಥೆಯ ವಿರುದ್ಧ ಹೋರಾಡುವ ಚತುರ!
ವ್ಯವಸ್ಥೆಯ ಹೊರಗಿದ್ದು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಒಂದು ತೆರನಾದರೆ, ವ್ಯವಸ್ಥೆಯೊಳಗಿದ್ದು ಬಂಡಾಯಗಾರರಾಗುವುದು ಇನ್ನೊಂದು ಮಾದರಿ. ಈ ಎರಡನೇ ಮಾದರಿಯಲ್ಲಿರುವವರು ಐಎಫ್ಎಸ್ ಅಧಿಕಾರಿ ಸಂಜೀವ್ ಚತುರ್ವೇದಿ.
ಹರಿಯಾಣ ಕೇಡರ್ನ ಈ ಅಧಿಕಾರಿ ತಮ್ಮ ಮೊದಲ 5 ವರ್ಷದ ಅವಧಿಯಲ್ಲಿ 12 ಬಾರಿ ವರ್ಗಾವಣೆಯಾಗಿದ್ದಾರೆ!. ಇದರಿಂದಲೇ, ಆಳುವ ಸರಕಾರಕ್ಕೆ ಅವರ ಬಗ್ಗೆ ಎಷ್ಟು ಭಯವಿತ್ತ್ತು ಎನ್ನುವುದು ಅರಿವಿಗೆ ಬರುತ್ತದೆ. ಇಂಥ ಖಡಕ್ ಅಧಿಕಾರಿಗೆ ಇದೀಗ ಮ್ಯಾಗ್ಸೆಸೆ ಪ್ರಶಸ್ತಿ ಬಂದಿರುವುದು ವ್ಯವಸ್ಥೆಯೊಳಗೆ ಇದ್ದು ಬಂಡಾಯ ಸಾರುತ್ತಿರುವ ಅದೆಷ್ಟೋ ಅಧಿಕಾರಿಗಳಿಗೆ ಬಲ ತಂದಂತಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಚತುರ್ವೇದಿ ಅವರು, ತಮಗೆ ಬಂದಿರುವ ಈ ಪ್ರಶಸ್ತಿಯನ್ನು ವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಅರ್ಪಿಸಿದ್ದಾರೆ.
13 ವರ್ಷದ ತಮ್ಮ ಸೇವಾ ವಧಿಯಲ್ಲಿ ಅವರು ಎಂದಿಗೂ ಭ್ರಷ್ಟಾಚಾರಕ್ಕೆ ಆಸ್ಪದ ಕೊಟ್ಟಿಲ್ಲ. ಇದರ ಪರಿ ಣಾಮ ಏನೆಂದರೆ, ಅವರ ವಿರುದ್ಧ ಅನೇಕ ಸುಳ್ಳು ಪ್ರಕರಣಗಳು ದಾಖಲಾದವು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಮಾವನೇ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು. ಅರಣ್ಯ ಇಲಾಖೆಯಿಂದ 4 ಬಾರಿ ತನಿಖೆಗೆಗೊಳಗಾದರು. ವಿಚಾರಣೆ ನಡೆದಾಗ ಸತ್ಯವಂತರಾಗಿ ಹೊರಬಂದಿದ್ದಾರೆ.
ಸಂಜೀವ್ ಹುಟ್ಟಿದ್ದು 1974 ರ ಡಿಸೆಂಬರ್ 21ರಂದು ಲಖನೌನಲ್ಲಿ. ಬಿ.ಟೆಕ್ ಪದವಿ ಪಡೆದಿದ್ದು ಅಲಹಾಬಾದ್ನ ಮೋತಿಲಾಲ ನೆಹರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ. 2002ರ ಹರಿ ಯಾಣ ಕೇಡರ್ನ ಈ ಅಧಿಕಾರಿ ಐಎಫ್ಎಸ್ ಪರೀಕ್ಷೆಯಲ್ಲಿ 2ನೇ ರ್ಯಾಂಕ್ ಮತ್ತು ತರಬೇತಿ ವೇಳೆ 2 ಗೋಲ್ಡ್ ಮೆಡಲ್ಗಳನ್ನೂ ಪಡೆದಿದ್ದಾರೆ. ಹರಿಯಾಣದಲ್ಲಿ ತಮ್ಮ ಸೇವೆ ಆರಂಭಿಸಿದ ಸಂಜೀವ್, ಇತರೆ ಅಧಿಕಾರಿಗಳಂತೆ ಕಣ್ಣ ಮುಂದೆ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ನೋಡಿ ಸುಮ್ಮನೆ ಕೂರಲಿಲ್ಲ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದಷ್ಟು ದಿನವೂ, ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು, ಗುತ್ತಿಗೆದಾರರಿಗೆ ಸಿಂಹಸ್ವಪ್ನವಾಗಿ ಕಾಡಿದರು. ಭ್ರಷ್ಟಾಚಾರದ ವಿರುದ್ಧದ ನಡೆಯಿಂದಾಗಿ ಅವರು 'ಚೊಚ್ಚಲೆಚ್ಚರಿಗ (ಜಿಠ್ಝಿಛಿಚ್ಝಿಟಡಿಛ್ಟಿ) ಅಧಿಕಾರಿ'ಯಾಗಿ ಗುರುತಿಸಿಕೊಂಡರು. ಇವರ ಪ್ರಯತ್ನದಿಂದಾಗಿ ಹರಿಯಾಣದ ಅಂದಿನ ಸಿಎಂ ಭೂಪೇಂದ್ರ ಸಿಂಗ್ ಹೂಡಾ, ಅರಣ್ಯ ಸಚಿವ ಹಾಗೂ ಇತರೆ ಹಿರಿಯ ಅಧಿಕಾರಿಗಳು ಇದೀಗ ಸುಪ್ರೀಂ ಕೋರ್ಟ್ಗೆ ಅಲೆಯುವಂತಾಗಿದೆ.
ರಾಜ್ಯ ಸರಕಾರದ ಕಿರುಕುಳದಿಂದ ಬೇಸತ್ತ ಚತುರ್ವೇದಿ, ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ಗೆ ಮನವಿ ಮಾಡಿಕೊಂಡು, ಕೇಂದ್ರ ಸೇವೆಗೆ ನಿಯೋಜಿಸುವಂತೆ ಕೇಳಿಕೊಂಡರು. ಇದರ ಫಲವಾಗಿ ಅವರು 2012ರಲ್ಲಿ ದೆಹಲಿಯ ಏಮ್ಸ್ನ ಜಾಗೃತದಳ ಮುಖ್ಯಸ್ಥರಾಗಿ ನೇಮಕಗೊಂಡರು. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಿ, 200 ಪ್ರಕರಣ ಪತ್ತೆ ಹಚ್ಚಿದರು. ಈ ಪೈಕಿ 87 ಪ್ರಕರಣಗಳಲ್ಲಿ ಚಾರ್ಜ್ಶೀಟ್ ಹಾಕಲಾಗಿದ್ದು, 20 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಾಗುತ್ತಿದೆ. ಆದರೆ, 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಕೂಡ ಇವರ 'ಪ್ರಾಮಾಣಿಕತೆಯ ವೇಗ'ವನ್ನು ತಡೆದುಕೊಳ್ಳಲಿಲ್ಲ. ಇದರ ಪರಿಣಾಮ ಅವರನ್ನು ಜಾಗೃತದಳದ ಜವಾಬ್ದಾರಿಯಿಂದ ಮುಕ್ತಗೊಳಿಸಿ,
ಏಮ್ಸ್ನ ಡೆಪ್ಯೂಟಿ ಡೈರೆಕ್ಟರ್ ಹುದ್ದೆಗೆ ಮಾತ್ರ ಸೀಮಿತಗೊಳಿಸಿತು. ಚತುರ್ವೇದಿಯಂಥ ಪ್ರಾಮಾಣಿಕರು ಇನ್ನೂ ಇರುವುದರಿಂದಲೇ ಒಂದಿಷ್ಟು ಭ್ರಷ್ಟಾಚಾರ ಹತೋಟಿಯಲ್ಲಿದೆ. ವ್ಯವಸ್ಥೆಯ ಮೇಲೆ ಜನರ ನಂಬಿಕೆ ಗಟ್ಟಿಯಾಗಲು ಕಾರಣವಾಗುತ್ತಿದೆ.
* ಮಲ್ಲಿಕಾರ್ಜುನ ತಿಪ್ಪಾರ(publishe in VK on 2 aug 2015- Vyaktigatha)

ಭಾನುವಾರ, ಜುಲೈ 12, 2015
‘ಕಿರು ಸಂದೇಶ’ ಸಾರಿದ ಮ್ಯಾಕ್ಕೊನೆನ್
ಅದು 1984ರ ಸಮಯ. ಡೆನ್ಮಾರ್ಕ್ನ ಕೊಪನ್ಹೆಗನ್ನಲ್ಲಿ ಟೆಲಿಕಾಂ ಕ್ಷೇತ್ರಕ್ಕೆ ಸಂಬಂಸಿದ ಸಮ್ಮೇಳನ ನಡೆಯುತ್ತಿತ್ತುಘಿ. ಬೇರೆ ಬೇರೆ ದೇಶಗಳಿಂದ ಅನೇಕ ಎಂಜಿನಿಯರ್ಗಳು ಆಗಮಿಸಿದ್ದರು. ಹೀಗೆ ಸಮ್ಮೇಳನದ ಒಂದು ಮ‘್ಯಾಹ್ನ ಊಟದ ಹೊತ್ತಿಗೆ ಫಿಜಾ ಮೆಲ್ಲುತ್ತಾ ಒಬ್ಬ ಎಂಜಿನಿಯರ್ ‘ಟೆಕ್ಸ್ಟಿಂಗ್’ ಪರಿಕಲ್ಪನೆಯನ್ನು ತೇಲಿ ಬಿಟ್ಟರು. ಅಲ್ಲಿಂದ 8 ವರ್ಷಗಳ ನಂತರ, 160 ಅಕ್ಷರಗಳ ಮಿತಿಯನ್ನೊಳಗೊಂಡ ‘ಎಸ್ಎಂಎಸ್’( Short Message Service) ಅನ್ನು ಕಂಪ್ಯೂಟರ್ನಿಂದ ಮೊಬೈಲ್ ೆನ್ಗೆ ರವಾನಿಸಲಾಯಿತು. ಆ ಕಿರು ಸಂದೇಶ ಏನೆಂದರೆ ‘ಮೇರಿ ಕ್ರಿಸ್ಮಸ್’. ಇದು ಜಗತ್ತಿನ ಮೊಟ್ಟ ಮೊದಲ ಎಸ್ಎಂಎಸ್.
ಅಂದ ಹಾಗೆ, ಈ ಎಸ್ಎಂಎಸ್ ಪರಿಕಲ್ಪನೆಯನ್ನು ತೇಲಿ ಬಿಟ್ಟ ಆ ವ್ಯಕ್ತಿಯ ಹೆಸರು ‘ಮಾಟಿ ಮ್ಯಾಕ್ಕೊನೆನ್‘. ಫಿನ್ಲೆಂಡ್ನ ಈ ಮಾಟಿ ಅವರಿಗೆ ‘ಾದರ್ ಆ್ ಎಸ್ಎಂಎಸ್’ ಎಂಬ ಹೆಸರಿದೆ. ಆದರೆ, ಇದನ್ನು ಅವರೇನೂ ಮನಪೂರ್ವಕವಾಗಿ ಒಪ್ಪಿಕೊಂಡಿದ್ದಲ್ಲಘಿ. ಎಸ್ಎಂಎಸ್ ಸಂಶೋ‘ನೆಗೆ 20 ವರ್ಷ ತುಂಬಿದ ಸಮಯದಲ್ಲಿ ಪತ್ರಿಕೆಯೊಂದು ಅದರ ಮೂಲ ಕೃರ್ತು ಹುಡುಕಿಕೊಂಡು ಹೋಗಿತ್ತುಘಿ. ಆಗ ಕಿರು ಸಂದೇಶ ಸಂಶೋ‘ನೆಯ ಇಡೀ ವೃತ್ತಾಂತ ಬಯಲಾಗಿ, ಮ್ಯಾಕ್ಕೊನೆನ್ಗೆ ‘ಾದರ್ ಆ್ ಎಸ್ಎಂಎಸ್’ ಬಿರುದು ತಗುಲಿತು. ಆದರೆ, ‘‘ಇದರಲ್ಲಿ ನನ್ನೊಬ್ಬನಿದ್ದು ಏನಿಲ್ಲಘಿ. ಎಸ್ಎಂಎಸ್ ಸಂಶೋ‘ನೆಯಲ್ಲಿ ಬೇರೆ ಎಂಜಿನಿಯರ್ಗಳ ಪರಿಶ್ರಮವೂ ಸಾಕಷ್ಟಿದೆ,’’ ಎಂದು ತುಂಬ ವಿನಮ್ರದಿಂದ ಮಾಟಿ ಹೇಳಿದ್ದರು. ಹಾಗಾಗಿ, ಅವರನ್ನು Reluctant Father of SMS ಎಂದೂ ಕರೆಯುತ್ತಾರೆ.
ಇದೆಲ್ಲ ಯಾಕೆ ಹೇಳಬೇಕಾಯಿತು ಎಂದರೆ, ಜೂನ್ 29ರಂದು ಮಾಟಿ ಮ್ಯಾಕ್ಕೊನೆನ್ ಅವರು ಅಸ್ತಂಗತವಾದರು. ವಿಪರ್ಯಾಸವೆಂದರೆ, ಇಡೀ ಜಗತ್ತಿನ ಸಂವಹನವನ್ನೇ 160 ಅಕ್ಷರಗಳಲ್ಲಿ ಬಂಸಿರುವ ಮಾಟಿ ಅವರ ಸಾವಿನ ಸುದ್ದಿ ಗೊತ್ತಾಗಿದ್ದುಘಿ, ಅವರು ನಿ‘ನವಾಗಿ ಎರಡು ದಿನಗಳ ಬಳಿಕ! ಅನಾರೋಗ್ಯದಿಂದ ಬಳಲುತ್ತಿದ್ದ ಮ್ಯಾಕ್ಕೊನೆನ್ ಅವರಿಗೆ 63 ವರ್ಷ ವಯಸ್ಸಾಗಿತ್ತುಘಿ.
ಇಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿಯೊಂದಿದೆ. ಇಂದಿನ ಮೊಬೈಲ್ ಸಂವಹನ ಕ್ರಾಂತಿಯಲ್ಲಿ ಎಸ್ಎಂಎಸ್ಗೆ ಅಗ್ರಸ್ಥಾನವಿದೆ. ಒಂದು ವೇಳೆ, ಮ್ಯಾಕ್ಕೊನೆನ್ ಅವರೇನಾದರೂ ತಮ್ಮ ಈ ಸಂಶೋ‘ನೆಗೆ ಪೇಟೆಂಟ್ ಪಡೆದುಕೊಂಡಿದ್ದರೆ, ಈ ಹೊತ್ತಿಗೆ ಜಗತ್ತಿನ ಕೋಟ್ಯಪತಿಗಳಲೊಬ್ಬರಾಗಿರುತ್ತಿದ್ದರು. ಆದರೆ, ಅಂಥ ಪ್ರಯತ್ನಕ್ಕೆ ಅವರು ಮುಂದಾಗಲಿಲ್ಲಘಿ. ಈ ಬಗ್ಗೆ 2012ರಲ್ಲಿ ಬಿಬಿಸಿಗೆ ಎಸ್ಎಂಎಸ್ ಮೂಲಕವೇ ನೀಡಿದ ಸಂದರ್ಶನವೊಂದರಲ್ಲಿ ಅವರು, ‘‘ಎಸ್ಎಂಎಸ್ ಏನೂ ಪೇಟೆಂಟ್ ಮಾಡಿಸಿಕೊಳ್ಳಬೇಕಾದಷ್ಟು ಗಮನಾರ್ಹವಾದ ಸಂಶೋ‘ನೆಯಲ್ಲಘಿ. ಅದರಲ್ಲಿ ಪೂರ್ತಿಯಾಗಿ ನನ್ನ ಒಬ್ಬನದ್ದೇನೂ ಪಾತ್ರವಿಲ್ಲಘಿ. ಹಾಗಾಗಿ ಪೇಟೆಂಟ್ ಮಾಡಿಸಿಕೊಳ್ಳಲಿಲ್ಲ,’’ ಎಂದಿದ್ದರು. ಈ ಮಾತುಗಳಲ್ಲೇ ಅವರ ವಿನಮ್ರತೆ ಎದ್ದು ಕಾಣುತ್ತದೆ. ಎಸ್ಎಂಎಸ್ ಪರಿಕಲ್ಪನೆ ಪೂರ್ತಿಯಾಗಿ ಮ್ಯಾಕ್ಕೊನೆನ್ ಅವರದ್ದಾದರೂ ಅದನ್ನು ಅಭಿವೃದ್ಧಿಪಡಿಸುವಲ್ಲಿ ಫ್ರೀಡ್ಮನ್ಹಿಲೆಬ್ರಾಂಡ್ ಮತ್ತು ನೀಲ್ ಪಾಪ್ವರ್ಥ್ ಅವರ ಕಾಣಿಕೆಯೂ ಸಾಕಷ್ಟಿದೆ. ನೀಲ್ ಅವರೇ ಜಗತ್ತಿನ ಮೊಟ್ಟ ಮೊದಲು ಎಸ್ಎಂಎಸ್ ಕಳುಹಿಸಿದ್ದು ಎಂಬುದು ಉಲ್ಲೇಖಿಸಲೇಬೇಕಾದ ಅಂಶ.
ಕಳೆದ 20 ವರ್ಷಗಳ ಅವಯಲ್ಲಿ ಎಣಿಕೆ ಇಲ್ಲದಷ್ಟು ಎಸ್ಎಂಎಸ್ಗಳು ರವಾನೆಯಾಗಿವೆ. ಅನೇಕ ತುರ್ತು ಪರಿಸ್ಥಿತಿಗಳನ್ನು ಎಸ್ಎಂಎಸ್ನಿಂದ ನಿ‘ಾಯಿಸಲಾಗಿದೆ. ಇತ್ತೀಚಿನ ಮೊಬೈಲ್ ಸಂವಹನದಲ್ಲೂ ಅನೇಕ ಕ್ರಾಂತಿಗಳಾಗಿವೆ. ‘ಟಚ್ಸ್ಕ್ರೀನ್ ಮೊಬೈಲ್’ ಯುಗದಲ್ಲಿ ವಾಟ್ಸ್ಆ್ಯಪ್, ಟ್ವಿಟರ್, ೇಸ್ಬುಕ್ಗಳು ಜನಪ್ರಿಯವಾಗಿರಬಹುದು. ಆದರೆ, ಈ ಎಲ್ಲ ಆ್ಯಪ್ಗಳು ನೀಡುವ ಕಿರುಸಂದೇಶಗಳು ಎಸ್ಎಂಎಸ್ನ ಮತ್ತೊಂದು ರೂಪವಷ್ಟೇಘಿ. ಅದರ್ಥ ಇವುಗಳಿಗೆ ‘ಮೂಲ ಸಂದೇಶ’ವೇ ಈ ಎಸ್ಎಂಎಸ್. ಹೊಸ ಮಾದರಿಯ ಆ್ಯಪ್ಗಳಿಂದಾಗಿ ಎಸ್ಎಂಎಸ್ ಸಂವಹನ ಮಾದರಿಯೂ ಅಳಸಿಹೋಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಕೊಂಚ ಮಟ್ಟಿಗೆ ನಿಜವೂ ಹೌದು. ಇತ್ತೀಚಿನ ಅ‘್ಯಯನ ವರದಿಗಳ ಪ್ರಕಾರ, 2017ರ ಹೊತ್ತಿಗೆ ೇಸ್ಬುಕ್, ವಾಟ್ಸ್ಆ್ಯಪ್ ಸೇರಿದಂತೆ ಇತರೆ ಆ್ಯಪ್ಗಳ ಮೂಲಕ 32 ಲಕ್ಷ ಕೋಟಿ ಸಂದೇಶಗಳು ರವಾನೆಯಾಗಲಿವೆ. ಇದೇ ವೇಳೆ, ಎಸ್ಎಂಎಸ್ ಹರಿದಾಟ ಕೇವಲ 7.89 ಲಕ್ಷ ಕೋಟಿ ಮಾತ್ರಘಿ. 2013ರಲ್ಲಿ ಎಸ್ಎಂಎಸ್ ಸಂದೇಶದ ಪ್ರಮಾಣ ಅದರ ಉತ್ತುಂಗಕ್ಕೆ ತಲುಪಿತ್ತುಘಿ. ಆ ವರ್ಷ 8.3 ಲಕ್ಷ ಕೋಟಿ ಸಂದೇಶಗಳು ರವಾನೆಯಾಗಿದ್ದವು. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮ್ಯಾಕ್ಕೊನೆನ್ ಅವರು, ‘‘ಮುಂದಿನ 20 ವರ್ಷ ಮಾತ್ರವಲ್ಲ ಎಂದಿಗೂ ಎಸ್ಎಂಎಸ್ ಇದ್ದೇ ಇರುತ್ತದೆ. ಆದರೆ, ಅದರ ಸ್ವರೂಪ ಬೇರೆಯದ್ದಾಗಿರಬಹುದು ಅಷ್ಟೇ,’’ ಎಂದಿದ್ದರು. ಅವರ ಮಾತು ಇದೀಗ ನಿಜವಾಗುತ್ತಿದೆ.
1992ರಲ್ಲಿ ಜಗತ್ತಿನ ಮೊದಲ ಎಸ್ಎಂಎಸ್ ರವಾನೆಯಾದರೂ ಕೂಡ ಅದರ ಬಳಕೆಯ ಜನಪ್ರಿಯತೆ ಹೆಚ್ಚಾಗಿದ್ದು 1994ರಲ್ಲಿ. ನೊಕಿಯಾ ಕಂಪನಿ ಆ ವರ್ಷ ಬಿಡುಗಡೆ ಮಾಡಿದ ‘ನೊಕಿಯಾ 2010 ಮೊಬೈಲ್ ೆನ್’ ಎಸ್ಎಂಎಸ್ ಬಳಕೆಗೆ ಅನುಕೂಲವಾಗುವಂತೆ ಇತ್ತುಘಿ. ಅಲ್ಲಿಂದಾಚೆಗೆ ಎಸ್ಎಂಎಸ್ ತುಂಬ ಜನಪ್ರಿಯವಾಗಿ, ಮೊಬೈಲ್ ಸಂವಹನದಲ್ಲಿ ಬೃಹತ್ ಕ್ರಾಂತಿಯೇ ನಡೆದಿದ್ದು ಈಗ ಇತಿಹಾಸ.
--
ಮಾಟಿ ಮ್ಯಾಕ್ಕೊನೆನ್ ಅವರು 1952 ಏಪ್ರಿಲ್ 16ರಂದು ಫಿನ್ಲೆಂಡ್ನ ಸೌಮಾಸೊಮಾಯಿ ಎಂಬ ಪಟ್ಟಣದಲ್ಲಿಘಿ ಜನಿಸಿದರು. ಅವರು 1976ರಲ್ಲಿ ಊಲು ಟೆಕ್ನಿಕಲ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜನಿಯರಿಂಗ್ ಪದವಿ ಪಡೆದು, ಪೋಸ್ಟಲ್ ಏಜೆನ್ಸಿ(ಪಿಟಿಎಲ್)ಯಲ್ಲಿ ಸಿಸ್ಟಮ್ ಎಂಜಿನಿಯರ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಇದೇ ಸಮಯದಲ್ಲಿ ಎನ್ಎಂಟಿ ಮೊಬೈಲ್ ನೆಟ್ವರ್ಕ್ಗೆ ವೈರ್ಲೆಸ್ ಕಮ್ಯೂನಿಕೇಷನ್ ಸರ್ವಿಸ್ ಅಭಿವೃದ್ಧಿಪಡಿಸಿಕೊಟ್ಟರು. ಇದಲ್ಲದೆ 1984ರಿಂದ 1988ರವರೆಗೂ ಮ್ಯಾಕ್ಕೊನೆನ್ ಅವರು ಪಿಟಿಎಲ್ನ ಉಪಾ‘್ಯಕ್ಷರೂ ಆಗಿದ್ದರು. ಈ ಅವಯಲ್ಲಿ ಅವರು ಜಿಎಸ್ಎಂ ಟೆಕ್ನಾಲಜಿ ಅಭಿವೃದ್ಧಿಯ ತಂಡದಲ್ಲೂ ಕೆಲಸ ಮಾಡಿದ್ದರು. ಬಳಿಕ 1989ರಲ್ಲಿ ಮೊಬೈಲ್ ಯೂನಿಟ್ನ ಅ‘್ಯಕ್ಷರಾಗಿ, ಅದನ್ನು ‘ಟೆಲಿಕಾಂ ಫಿನ್ಲೆಂಡ್’ ಎಂದು ಮರು ನಾಮಕರಣ ಮಾಡಿದರು. ಹೀಗೆ ಅವರು ತಮ್ಮ ಕ್ಷೇತ್ರದಲ್ಲಿ ಅಗಾ‘ವಾದ ಸಾ‘ನೆ ಮಾಡುತ್ತ ಒಂದೊಂದೇ ಹುದ್ದೆಗಳನ್ನು ಅಲಂಕರಿಸಿ, ಅವುಗಳಿಗೆ ನ್ಯಾಯ ಸಲ್ಲಿಸಿದರು. 1995ರಿಂದ 2000ವರೆಗೂ ಮ್ಯಾಕ್ಕೊನೆನ್ ಅವರು ಮೊಬೈಲ್ ಕಮ್ಯೂನಿಕೇಷನ್ ಗ್ರೂಪ್ನ ಉಪಾ‘್ಯಕ್ಷರಾದರು. 2000ರಲ್ಲಿ ಕಂಪನಿಯ ಮೊಬೈಲ್ ಇಂಟರ್ನೆಟ್ ಯೂನಿಟ್ನ ಅ‘್ಯಕ್ಷ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸ್ವಲ್ಪ ಕಾಲದವರೆಗೂ ಇದ್ದರು. ಈ ಸಮಯದಲ್ಲಿ ಯೂನಿಟ್ನ ಹೆಸರನ್ನು ‘ಸೊನೆರಾ’ ಎಂದು ಬದಲಿಸಿದರು. ಇದಾದ ಬಳಿಕ ಅವರು ನೊಕಿಯಾ ನೆಟ್ವರ್ಕ್ಸ್ ಪ್ರೊೆಷನಲ್ ಸರ್ವಿಸ್ಗೆ ಯೂನಿಟ್ ನಿರ್ದೇಶಕರಾಗಿ ಸೇರ್ಪಡೆಯಾಗಿ, 2003ರಲ್ಲಿ ಫಿನ್ನೆಟ್ ಒಯ್ನ ಸಿಇಒ ಹುದ್ದೆಗೇರಿದರು. ಬಳಿಕ 2005ರಲ್ಲಿ ನಿವೃತ್ತರಾದರು. ಇದಿಷ್ಟು ಅವರ ವೃತ್ತಿಗೆ ಸಂಬಂಸಿದ ಟೆಕ್ನಿಕಲ್ ಮಾಹಿತಿ.
--
ಕೆಲವರು ಎಷ್ಟೇ ಅದ್ಭುತ ಕಾರ್ಯಗಳನ್ನು ಮಾಡಿದರೂ ಎಲೆಮರೆಯ ಕಾಯಿಯಂತೆ ಇದ್ದು ಬಿಡುತ್ತಾರೆ. ಈ ಸಾಲಿಗೆ ಮಾಟಿ ಮ್ಯಾಕ್ಕೊನೆನ್ ಅವರಿಗೆ ಅಗ್ರಸ್ಥಾನ. ಸಂವಹನದಲ್ಲಿ ಕ್ರಾಂತಿಕಾರಿ ಸಂಶೋ‘ನೆ ಮಾಡಿದರೂ ಸಾರ್ವಜನಿಕ ಜೀವನದಲ್ಲಿ ಅವರು ಲೋ ಪ್ರೊೈಲ್ ವ್ಯಕ್ತಿಯಾಗಿಯೇ ಇದ್ದುಬಿಟ್ಟರು. ಇದರಿಂದಾಗಿ ಏನೋ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಲಿ, ಪ್ರಶಸ್ತಿಗಳು ಅವರನ್ನು ಹುಡುಕೊಂಡು ಬರಲಿಲ್ಲಘಿ. ಅವರ ಜೀವಿತಾವಯಲ್ಲಿ ಸಿಕ್ಕ ಪ್ರಮುಖ ಗೌರವ ಎಂದರೆ The economist Innovation award ಮಾತ್ರಘಿ. 2008ರಲ್ಲಿ Computing and Telecommunication ವಿ‘ಾಗದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಲಾಯಿತಷ್ಟೇಘಿ. ಕೆಲವು ವ್ಯಕ್ತಿಗಳನ್ನು ಅವರಿಗೆ ಸಿಕ್ಕ ಪ್ರಶಸ್ತಿಘಿ, ಗೌರವಗಳಿಂದಲೇ ಅಳೆಯಲು ಸಾ‘್ಯವಿಲ್ಲಘಿ. ಅದೆಲ್ಲವನ್ನೂ ಮೀರಿ ಬೆಳೆದು ಬಿಡುತ್ತಾರೆ. ಇದಕ್ಕೆ ಮಾಟಿ ಮ್ಯಾಕ್ಕೊನೆನ್ ಕೂಡ ಹೊರತಲ್ಲಘಿ. ಎಲ್ಲಿವರೆಗೂ ನಾವು ಮೊಬೈಲ್ಗಳಲ್ಲಿ ಎಸ್ಎಂಎಸ್ ಅನ್ನು ಕಳುಹಿಸುತ್ತೇವೋ ಅಲ್ಲಿವರೆಗೂ ಅವರು ಅಜರಾಮರರಾಗಿಯೇ ಇರುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.
- Mallikarjun Tippar
(This article published on VK. (12 July 2015)

ಭಾನುವಾರ, ಮೇ 24, 2015
ಅರ್ಥ ಕಳೆದುಕೊಂಡ ‘ಸಬ್ ಕಾ ಸಾಥ್’
‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರ ದೊಂದಿಗೆ
ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದದ್ದು.
ಆದರೆ, ವರ್ಷದ ಅವಧಿಯಲ್ಲಿ ‘ಸಬ್ ಕಾ ಸಾಥ್’ ಅನ್ನುವ
ಘೋಷಣೆ ಯಾಕೋ ಅಷ್ಟೊಂದು ಹೊಂದಾಣಿಕೆ
ಯಾಗುತ್ತಿಲ್ಲ. ಅಭಿವೃದಿಟಛಿ ಅಜೆಂಡಾ, ಯುವಕರೇ ದೇಶದ
ಆಸ್ತಿ ಎಂದು ಹುರಿದುಂಬಿಸಿಕೊಂಡು ಬಂದ ಪ್ರಧಾನಿ
ಮೋದಿ, ಒಂದಿಷ್ಟು ಹೊಸ ಆಶಾ ಕಿರಣ ಬೀರಲು
ಕಾರಣವಾಗಿದ್ದರು ಎಂಬುದಂತೂ ನಿಜ. ಆದರೆ, ಇದೇ
ಮಾತನ್ನು ಅವರು ಪ್ರತಿನಿಧಿಸುವ ಬಿಜೆಪಿ, ಆರ್ಎಸ್ಎಸ್
ಹಾಗೂ ಅದರ ಸಹವರ್ತಿ ಸಂಸ್ಥೆಗಳಿಗೆ ಅನ್ವಯಿಸಲಾಗದು.
ಅವರದ್ದೇ ಸಚಿವ ಸಂಪುಟದ ಗಿರಿರಾಜ್ ಸಿಂಗ್,
ಸಾಧ್ವಿ ನಿರಂಜನಾ ಜ್ಯೋತಿ ಸೇರಿದಂತೆ ಸಂಸದರಾದ ಸಾಕ್ಷಿ
ಮಹಾರಾಜ್, ಯೋಗಿ ಆದಿತ್ಯನಾಥ್, ಹಿರಿಯ ನಾಯಕ
ಸುಬ್ರಹ್ಮಣ್ಯ ಸ್ವಾಮಿ ಸೇರಿದಂತೆ ಅನೇಕರು, ‘ಅನೇಕ
ಬೇಡವಾದ’ ಮಾತುಗಳನ್ನಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ
ಬಂದರೆ ಅಲ್ಪಸಂಖ್ಯಾತರಲ್ಲಿ ಒಂದು ಅಳಕು ಇದ್ದೇ
ಇರುತ್ತದೆ. ಮೋದಿ ಪ್ರಚಾರದಲ್ಲಿ ‘ಸಬ್ ಕಾ ಸಾಥ್,
ಸಬ್ ಕಾ ವಿಕಾಸ್’ ಮಂತ್ರ ಪಠಿಸುತ್ತಾ ಆ ಅಳಕನ್ನು ದೂರ
ಮಾಡಲು ಯತ್ನಿಸಿದ್ದರು. ಆದರೆ, ಅಧಿಕಾರಕ್ಕೆ ಬಂದ
ಮೇಲೆ ಅವರು, ಅವರದ್ದೇ ಪಕ್ಷದ ಕೆಲವರ ಮಾತಿನ
ಮೇಲೆ ಕಡಿವಾಣ ಹಾಕಲು ವಿಫಲರಾದರೂ ಎಂಬುದು
ಈ ಒಂದು ವರ್ಷದಲ್ಲಂತೂ ಸುಸ್ಪಷ್ಟ. ಅವರ ಈ ‘ಮೌನ’
ಕೂಡಾ ಇನ್ನೊಂದಿಷ್ಟು ಆಕ್ಷೇಪಾರ್ಹ, ಭಯಭೀತ,
ದ್ವೇಷಪೂರಿತವಾಗಿ ಮಾತನಾಡುವವರಿಗೆ ಪ್ರಚೋದನೆ
ನೀಡಿದಂತಿತ್ತು ಎನ್ನುವುದು ವಿಶ್ಲೇಷಣೆ. ಹಾಗೆ
ನೋಡಿದರೆ, ಇದು ಸುಳ್ಳಲ್ಲ. ಸಾದ್ವಿ ನಿರಂಜನಾ ಜ್ಯೋತಿ
‘ಹರಾಮ್ಜಾದೆ’ ಹಾಗೂ ಗಿರಿರಾಜ್ ಸಿಂಗ್ ಅವರು
ಸೋನಿಯಾ ಗಾಂಧಿ ವಿರುದಟಛಿ ಮಾಡಿದ ಜನಾಂಗೀಯ
ಆಕ್ಷೇಪಾರ್ಹ ಟೀಕೆಗೆ ಸಂಬಂಧಿಸಿದಂತೆ ವ್ಯಾಪಕ ಒತ್ತಡ
ಎದುರಾದಾಗ ಮಾತ್ರ ಬಾಯಿಬಿಟ್ಟರೇ ಹೊರತು,
ಇನ್ನುಳಿದವರ ಮಾತುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ!
ಘರ್ ವಾಪಸಿ, ಮುಸ್ಲಿಮರಿಗೆ ಮತದಾನ ಹಕ್ಕು
ನಿರಾಕರಣೆ, ಉತ್ತರಪ್ರದೇಶದಲ್ಲಿನ ಲವ್ ಜಿಹಾದ್,
ಹರ್ಯಾಣ ಮತ್ತು ದೆಹಲಿಗಳಲ್ಲಿ ನಡೆದ ಚರ್ಚ್ಗಳ
ಮೇಲೆ ದಾಳಿ.. ಹೀಗೆ ಅನೇಕ ‘ಬೇಡವಾದ ಸಂಗತಿಗಳು’
ಘಟಿಸಿದರೂ ಅಥವಾ ಅವರ ಕಣ್ಣಮುಂದೆ ನಡೆದರೂ
ಅವು ತಪ್ಪು ಎನ್ನುವಂಥ ಒಂದೇ ಒಂದು ಸಂದೇಶವನ್ನು
ರವಾನಿಸಲಿಲ್ಲ ಎಂಬ ದೂರು ಕೆಲವು
ಸಮುದಾಯಗಳಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಸದ ಸಾಕ್ಷಿ
ಮಹಾರಾಜ್ ಗಾಂಧಿ ಹಂತಕ ‘ನಾಥೂರಾಮ್ ಗೊಡ್ಸೆ
ಒಬ್ಬ ದೇಶಭಕ್ತ’ ಎಂದರೂ ಯಾವುದೇ ಪ್ರತಿಕ್ರಿಯೆ
ವ್ಯಕ್ತವಾಗಲಿಲ್ಲ. ಇನ್ನೂ ವಿಚಿತ್ರ ಎಂದರೆ, ನರೇಂದ್ರ
ಮೋದಿ ಅವರು ಪ್ರತಿ ವಿದೇಶ ಪ್ರವಾಸದಲ್ಲೂ ಮಹಾತ್ಮ
ಗಾಂಧಿ ಹಾಗೂ ಅವರ ಜೀವನವೇ ನಮಗೆ ಆದರ್ಶ,
ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕೆಂಬ
ಸಂದೇಶ ಸಾರುತ್ತಾರೆ.
ಅಷ್ಟೇ ಅಲ್ಲದೆ, ಮಹಾತ್ಮ ಗಾಂಧಿ ಜಯಂತಿಗೆ ‘ಸ್ವಚ್ಛ
ಭಾರತ್ ಆಂದೋಲನ’ವನ್ನೇ ಆರಂಭಿಸುತ್ತಾರೆ.
ಅವರದ್ದೇ ಪಕ್ಷದ ಸಂಸದರು ಮಾತ್ರ ಗಾಂಧಿಯನ್ನು
‘ಖಳನಾಯಕ’ನ ರೀತಿ ಬಿಂಬಿಸುತ್ತಾರೆ. ಗಾಂಧಿಯನ್ನು
ಕೊಂದವರನ್ನು ‘ದೇಶಭಕ್ತ’ ಎಂದು ‘ಗುಡಿ
ಕಟ್ಟಲು’ ಮುಂದಾಗುತ್ತಾರೆ. ಇದೆಲ್ಲವೂ ಮೋದಿ
ಅಧಿಕಾರಕ್ಕೆ ಬಂದ ಬಳಿಕ ನಡೆದ ‘ಮಾತಿನ
ಮಲ್ಲಯುದಟಛಿ’ಗಳು. ಇವುಗಳಲ್ಲಿ ಕೆಲವು ಚಟುವಟಿಕೆ
ಗಳು ಮೊದಲಿಂದಲೂ ಇದ್ದವು. ಆದರೆ, ಘರ್
ವಾಪಸಿಯಂಥ ಕಾರ್ಯಕ್ರಮಗಳು ಈ ಒಂದು ವರ್ಷದ
ಅವಧಿಯಲ್ಲಿ ಹೆಚ್ಚು ಪ್ರಚಾರಕ್ಕೆ ಬಂದವು ಎಂಬುದು
ಕೂಡಾ ಸುಳ್ಳೇನೂ ಅಲ್ಲ.
---------------
ನಾವು ಪ್ರತಿ ಮಸೀದಿಯಲ್ಲೂ ಗೌರಿ, ಗಣೇಶ ಮತ್ತು
ನಂದಿಯನ್ನು ಪ್ರತಿಷ್ಠಾಪಿಸುತ್ತೇವೆ.
ಲವ್ ಜಿಹಾದ್ನಲ್ಲಿ ಒಬ್ಬ ಹಿಂದೂ ಹುಡುಗಿ
ಮತಾಂತರ ಗೊಂಡರೆ, ೧೦೦ ಮುಸ್ಲಿಮ
ಹುಡುಗಿಯರು ಹಿಂದೂ ಧರ್ಮಕ್ಕೆ
ಮತಾಂತರಗೊಳ್ಳುವಂತೆ ಮಾಡಬೇಕು.
- ಯೋಗಿ ಆದಿತ್ಯನಾಥ್ ಬಿಜೆಪಿ ಸಂಸದ
ಜ್ಯಾತ್ಯತೀತ ಹಣೆಪಟ್ಟಿಯಿಂದಾಗಿ ನಾವು
ಬಳಲುತ್ತಿದ್ದೇವೆ. ಸಾಮಾಜಿಕ ಬೆದರಿಕೆಗೆ
ಕಾರಣವಾಗಿರುವ ಲವ್ ಜಿಹಾದ್ ಬಗ್ಗೆ ಜನರಲ್ಲಿ ಜಾಗೃತಿ
ಮೂಡಿಸಬೇಕಿದೆ. ಅದರಲ್ಲಿ ಸೋಲುತ್ತೇವೆಯೋ
ಅಥವಾ ಗೆಲ್ಲುತ್ತೇವೆಯೋ ಎಂಬುದು ನಂತರದ ಮಾತು.
ಒಂದು ವೇಳೆ ರಾಜೀವ್ ಗಾಂಧಿ ಅವರು
ಸೋನಿಯಾ ಗಾಂಧಿ ಬದಲಾಗಿ ನೈಜೀರಿಯನ್
ಮದುವೆಯಾಗಿದ್ದರೆ, ಕಾಂಗ್ರೆಸಿಗರು ತಮ್ಮ
ಅಧ್ಯಕ್ಷೆಯನ್ನಾಗಿ ಒಪ್ಪಿಕೊಳ್ಳುತ್ತಿದ್ದರೆ?
- ಗಿರಿರಾಜ್ ಸಿಂಗ್, ಕೇಂದ್ರ ಸಚಿವ
ದೆಹಲಿಯಲ್ಲಿ ಸರ್ಕಾರ ರಾಮನ ಮಕ್ಕಳಿಂದ ಕೂಡಿರ
ಬೇಕಾ ಅಥವಾ ಇತರರಿಂದ (ಸೂ.. ಮಕ್ಕಳಿಂದ)
ಕೂಡಿರಬೇಕಾ ಎಂದು ನೀವು ನಿರ್ಧರಿಸಬೇಕು.
- ನಿರಂಜನ ಜ್ಯೋತಿ, ಕೇಂದ್ರ ಸಚಿವೆ
ಹಿಂದೂ ಮಹಿಳೆಯರು ಕನಿಷ್ಠ ನಾಲ್ಕು ಮಕ್ಕಳನ್ನು
ಹೆರಬೇಕು. ಅವುಗಳಲ್ಲಿ ಒಂದು ಮಗುವನ್ನು ಸೇನೆಗೆ
ಕಳುಹಿಸಬೇಕು. ಮತ್ತೊಂದು ಮಗುವನ್ನು ಧಾರ್ಮಿಕ
ಮತ್ತು ಬೋಧಕರಿಗೆ ನೀಡಬೇಕು.
ಮಹಾತ್ಮ ಗಾಂಧಿಯಷ್ಟೇ ನಾಥೂರಾಮ್ ಗೋಡ್ಸೆ
ಕೂಡಾ ದೇಶಭಕ್ತ. ಅವರೊಬ್ಬ ಹುತಾತ್ಮ.
- ಸಾಕ್ಷಿ ಮಹಾರಾಜ್, ಬಿಜೆಪಿ ಸಂಸದ
ಮುಸ್ಲಿಮರಿಗೆ ನೀಡಿರುವ ಮತದಾನ ಹಕ್ಕನ್ನು
ವಾಪಸ್ ಪಡೆಯಬೇಕು.
- ಸಂಜಯ್ ರಾವತ್, ಸಂಸದ, ಶಿವಸೇನೆ

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
-
ನನ್ನೊಳಗಿನ ಭಾವನೆಗಳಿಗೆ ಹಚ್ಚಬೇಕಿದೆ ಬಣ್ಣ, ಹಸಿರಾಗುವ ನೆಪದಲ್ಲಿ ಕೊಸರಾಡುವ ಕನಸುಗಳಿಗೆ ಕಟ್ಟಬೇಕಿದೆ ಬೇಲಿ. ಹಾರಬೇಕಿದೆ ಮುಗಿಲೇತ್ತರಕ್ಕೆ ಎಲ್ಲ ನಿಯಮ ಮೀರಿ ಗೆಲ್ಲಬೇಕ...
-
ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ, ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು, ಬಿಕ...
-
ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ ಸ್ಥೈರ್ಯ ತುಂಬಿ ಬೆಳೆಸಿದಾಕೆ, ಬರೀ ಸೋಲು ಕಂಡುವನಿಗೆ ಗೆಲುವಿನ ದಾರಿ ತೋರಿಸಿದಾಕೆ.. ಅವ್ವ ಗೆದ್ದು ಬಂದಾಗ... ಮರೆಯಲ್ಲಿ ನಿಂತು ಆನಂದ...