- ಮಲ್ಲಿಕಾರ್ಜುನ ತಿಪ್ಪಾರ
ಪಂಜಾಬ್ ಅನ್ನು ಸೇರಿಸಿಕೊಂಡು ಉತ್ತರ ಭಾರತದ ಕೆಲವು ರಾಜ್ಯಗಳನ್ನೊಳಗೊಂಡ ಖಲಿಸ್ತಾನ್ ಪ್ರತ್ಯೇಕ ರಾಷ್ಟ್ರಕ್ಕಾಗಿ ಹುಟ್ಟಿಕೊಂಡಿದ್ದೇ ಖಾಲ್ಸಾ ಚಳವಳಿ. ಪ್ರತ್ಯೇಕತೆಯನ್ನು ಪ್ರತಿಪಾದಿಸುತ್ತಿದ್ದ ಈ ಚಳವಳಿ ಮುಂದೆ ಉಗ್ರಗಾಮಿ ಸಂಘಟನೆಯಾಗಿ ಬದಲಾಯಿತು. ಪ್ರತ್ಯೇಕ ಸಾರ್ವಭೌಮ ರಾಷ್ಟ್ರ ಬೇಡಿಕೆ ಹೆಸರಿನಲ್ಲಿಅಮಾಯಕ ಹಿಂದೂಗಳನ್ನು, ಸಿಖ್ಖರೇತರನ್ನು, ತಮ್ಮ ಬೇಡಿಕೆಯನ್ನು ವಿರೋಧಿಸುವ ಸಹ ಸಿಖ್ಖರನ್ನು ಕೊಲ್ಲುವ ಮೂಲಕ ಭಯೋತ್ಪಾದನೆಯ ಹಾದಿಯನ್ನು ತುಳಿಯಿತು. ಜರ್ನೈಲ್ ಸಿಂಗ್ ಭಿಂದ್ರಾನ್‌ವಾಲೆ ಈ ಖಲಿಸ್ತಾನ್ ಚಳವಳಿಗೆ ಹಿಂಸಾರೂಪ ನೀಡಿದ. ಸಿಖ್ಖರ ಪವಿತ್ರ ಕ್ಷೇತ್ರವಾಗಿರುವ ಅಮೃತಸರದ ಸ್ವರ್ಣ ದೇಗುಲವನ್ನೇ ತನ್ನ ಕಾರಸ್ಥಾನವನ್ನಾಗಿ ಮಾಡಿಕೊಂಡಿದ್ದ.
ಪಾಕಿಸ್ತಾನದ ಕುಮ್ಮಕ್ಕಿನಿಂದ ದೇಶದ ಸಾರ್ವಭೌಮತ್ವಕ್ಕೆ ಸವಾಲಾಗಿದ್ದ ಆತನನ್ನು ಹಿಮ್ಮೆಟ್ಟಿಸುವುದು ಅಂದಿನ ಕೇಂದ್ರ ಸರಕಾರಕ್ಕೆ ತುರ್ತು ಅಗತ್ಯವಾಗಿತ್ತು. ಅದರ ಫಲವಾಗಿ ನಡೆದಿದ್ದೇ ‘ಆಪರೇಷನ್ ಬ್ಲೂಸ್ಟಾರ್’. ಭಾರತ ಕಂಡ ಅತ್ಯಂತ ದಕ್ಷ ಹಾಗೂ ಪ್ರಭಾವಶಾಲಿ ಪ್ರಧಾನಿಯಾದ ಇಂದಿರಾ ಗಾಂಧಿ ಅವರು ಗಟ್ಟಿ ನಿರ್ಧಾರ ಮಾಡಿ, ಅಮೃತಸರದಲ್ಲಿಬೀಡುಬಿಟ್ಟಿದ್ದ ಭಿಂದ್ರನ್‌ವಾಲೆಯನ್ನು ಮಟ್ಟ ಹಾಕಲು ಸೇನೆಗೆ ಸೂಚಿಸಿದ್ದರು. ಅವರು ಅಂದು ಕೈಗೊಂಡ ಈ ನಿರ್ಧಾರ ಸರಿಯೋ, ತಪ್ಪೋ ಎಂದು ಮೂರು ದಶಕಗಳ ಬಳಿಕವೂ ಚರ್ಚೆಯಾಗುತ್ತಲೇ ಇದೆ. ಕೆಲವು ಇತಿಹಾಸಕಾರರು ಸ್ವರ್ಣ ಮಂದಿರಕ್ಕೆ ಸೇನೆಯನ್ನು ನುಗ್ಗಿಸುವುದರ ಬದಲು ಬೇರೆ ಮಾರ್ಗದ ಮೂಲಕ ಭಿಂದ್ರನ್‌ವಾಲೆಯನ್ನು ಮಟ್ಟ ಹಾಕಬಹುದಿತ್ತು ಎಂದು ಹೇಳಿದರೆ, ಇನ್ನು ಕೆಲವರು ಇಂದಿರಾ ಕೈಗೊಂಡ ನಿರ್ಧಾರ ಸರಿಯಾಗಿತ್ತು ಎಂದು ವಾದಿಸುತ್ತಾರೆ. ಆದರೆ, ಬ್ಲೂಸ್ಟಾರ್ ಕಾರ್ಯಾಚರಣೆ ನಡೆದ ನಂತರದ ಘಟನೆಗಳು ಇದನ್ನು ಪುಷ್ಟಿಕರಿಸುತ್ತವೆ. ಕಾರ್ಯಾಚರಣೆಯ ಪ್ರತೀಕಾರಕ್ಕೆ ಮೊದಲಿಗೆ ಬಲಿಯಾಗಿದ್ದೇ ಪ್ರಧಾನಿ ಇಂದಿರಾ ಗಾಂಧಿ ಅವರು. ನಂತರ, ಆಪರೇಷನ್ ಬ್ಲೂಸ್ಟಾರ್ ವೇಳೆ ಸೇನಾ ನಾಯಕರಾಗಿದ್ದು ಜನರಲ್(ನಿವೃತ್ತ) ಎ.ಎಸ್. ವೈದ್ಯ, ಲೆಫ್ಟಿನೆಂಟ್ ಕರ್ನಲ್ ಕುಲ್ದಿಪ್ ಸಿಂಗ್ ಬ್ರಾರ್ ಅವರ ಹತ್ಯೆಯಾಯಿತು. ಇದಕ್ಕೂ ಮುಂಚೆ, ಕೆನಡಾದಲ್ಲಿದ್ದ ಖಲಿಸ್ತಾನದ ಇಬ್ಬರು ಬಂಡುಕೋರರು ಏರ್ ಇಂಡಿಯಾ ಕನಿಷ್ಕ ವಿಮಾನವನ್ನು ಆಕಾಶದಲ್ಲೆ ಸೊಧೀಟಿಸಿ, 329 ಜನರ ಆಹುತಿ ತೆಗೆದುಕೊಂಡರು. ಇದಿಷ್ಟು ಆಪರೇಷನ್ ಬ್ಲೂಸ್ಟಾರ್‌ಗೆ ಪ್ರತಿಯಾಗಿ ಪ್ರತೀಕಾರದ ಘಟನೆಗಳಾದರೆ, ಇಂದಿರಾ ಗಾಂಧಿ ಹತ್ಯೆ ಮತ್ತೊಂದು ಮಗ್ಗಲನ್ನು ಪಡೆಯಿತು. ಇದಕ್ಕೆ ಪ್ರತಿಯಾಗಿ ದಿಲ್ಲಿಸೇರಿದಂತೆ ದೇಶದೆಲ್ಲೆಡೆ ಸಾವಿರಾರು ಸಿಖ್ಖರ ಮಾರಣಹೋಮವೇ ನಡೆಯಿತು.
1984ರ ಜೂನ್ 3ರಿಂದ 8ರವರೆಗೆ ನಡೆದ ಬ್ಲೂಸ್ಟಾರ್ ಕಾರ್ಯಾಚರಣೆಗೀಗ 38 ವರ್ಷ. ವರ್ಷಾಚರಣೆ ನೆಪದಲ್ಲಿಈಗಲೂ ಖಲಿಸ್ತಾನಿ ಪರ ಘೋಷಣೆಗಳು, ಭಿಂದ್ರನ್‌ವಾಲೆಯನ್ನು ಹುತಾತ್ಮನ ರೀತಿ ನೋಡುವುದನ್ನು ನಿಂತಿಲ್ಲ. ‘ಖಲಿಸ್ತಾನ್ 2.0’ ನಿಧಾನವಾಗಿ ಮರುಹುಟ್ಟು ಪಡೆದುಕೊಳ್ಳುತ್ತಿರುವುದಕ್ಕೆ ಇದೆಲ್ಲವೂ ಸಾಕ್ಷಿ. ಇತ್ತೀಚಿನ ಕೆಲವು ವರ್ಷಗಳಲ್ಲಿಭಾರತ ಹಾಗೂ ಭಾರತದ ಆಚೆ ಅಂದರೆ, ಯುರೋಪ್ ಮತ್ತು ಅಮೆರಿಕದ ಕೆಲವು ರಾಷ್ಟ್ರಗಳಲ್ಲಿವಾಸವಾಗಿರುವ ಸಿಖ್ ಸಮುದಾಯದಲ್ಲಿಖಲಿಸ್ತಾನ್ ಚಳವಳಿಯನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಭಾರತೀಯ ತನಿಖಾ ಏಜೆನ್ಸಿಗಳಲ್ಲಿಸಾಕಷ್ಟು ಸಾಕ್ಷ್ಯಾಧಾರಗಳಿವೆ ಮತ್ತು ಈ ಖಲಿಸ್ತಾನದ ಬಂಡುಕೋರರನ್ನು ಬಳಸಿಕೊಂಡು ಭಾರತದೊಳಗೆ ಅಶಾಂತಿ ಸೃಷ್ಟಿಸುವ ಪ್ರಯತ್ನವನ್ನು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಖಲಿಸ್ತಾನ್ ಚಳವಳಿ ನಿಶ್ಚಲವಾಗಿದೆಯಷ್ಟೇ, ಸಂಪೂರ್ಣವಾಗಿ ಸತ್ತಿಲ್ಲಎಂಬುದಕ್ಕೆ ಇತ್ತೀಚಿನ ಕೆಲವು ಘಟನೆಗಳು ನಮ್ಮ ಮುಂದಿವೆ.
ಸಿಖ್ ರ್ಫಾ ಜಸ್ಟೀಸ್ (ಎಸ್‌ಎಫ್‌ಜೆ) ಕಳೆದ ವರ್ಷ ಫೆಬ್ರವರಿಧಿಯಲ್ಲಿಪಂಜಾಬ್‌ನಲ್ಲಿಖಲಿಸ್ತಾನ್ ಚಳವಳಿಯನ್ನು ಪುನಃಶ್ಚೇತನಧಿಗೊಳಿಸುವುದು ಮತ್ತು ಭಾವನೆಗಳನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡುತ್ತಿದ್ದ ಬಗ್ಗೆ ವರದಿಗಳಿವೆ. ಎನ್‌ಐಎ ತಂಡವೊಂದು ಕಳೆದ ನವೆಂಬರ್‌ನಲ್ಲಿಕೆನಡಾಗೆ ತೆರಳಿ ಪರಿಶೀಲಿಸಿದಾಗ, ರೈತ ಚಳವಳಿಯ ಹೆಸರಿನಲ್ಲಿಒಂದು ಲಕ್ಷ ಕ್ಕೂ ಅಧಿಕ ಅಮೆರಿಕನ್ ಡಾಲರ್ ಸಂಗ್ರಹಿಸಿದ್ದನ್ನು ಪತ್ತೆ ಹಚ್ಚಿತ್ತು ಎನ್ನಲಾಗಿದೆ. ಮೇ 5ರಂದು ಖಲಿಸ್ತಾನ್ ಧ್ವಜವನ್ನು ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ವಿಧಾನಸಭೆ ಸಂಕೀರ್ಣದ ಮುಖ್ಯ ದ್ವಾರದಲ್ಲಿಕಟ್ಟಲಾಗಿತ್ತು. ಈ ಹಿನ್ನೆಲೆಯಲ್ಲೇ ಎಸ್‌ಎಫ್‌ಜೆ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಹಿಮಾಚಲ ಪ್ರದೇಶ ಪೊಲೀಸರು ಯುಎಪಿಎ ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ರಾಜ್ಯದಲ್ಲಿಖಲಿಸ್ತಾನ್ ಪರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಮೇ 9ರಂದು ಪಂಜಾಬ್ ಪೊಲೀಸ್ ಬೇಹುಗಾರಿಕಾ ಮುಖ್ಯ ಕಚೇರಿ ಮೇಲೆ, ಪಾಕಿಸ್ತಾನ ನಿರ್ಮಿತ ರಾಕೆಟ್ ಪೊ›ಪೆಲ್ಡ… ಗ್ರೆನೇಡ್ ದಾಳಿ ನಡೆದಿತ್ತು. ಈ ರೀತಿಯ ಘಟನೆಗಳು ನಿರಂತರವಾಗಿ ಪಂಜಾಬ್ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿಕಂಡು ಬರುತ್ತಿವೆ.
ಖಲಿಸ್ತಾನ್ ಚಳವಳಿಯು ಈಗಲೂ ಸಿಖ್ ಸಮುದಾಯದ ಒಂದು ವರ್ಗದಲ್ಲಿಸುಪ್ತವಾಗಿದ್ದು, ಯಾವಾಗಲಾದರೂ ಅದು ಸೊಧೀಟಿಸಬಹುದು ಎಂಬುದನ್ನು ಈ ಘಟನೆಗಳು ಸಾಬೀತುಪಡಿಸುತ್ತವೆ. ಇದಕ್ಕೆಲ್ಲಭಾರತದ ಹೊರಗಡೆ ಇದ್ದುಕೊಂಡೇ ಹಲವರು ನೀರೆರೆಧಿಯುತ್ತಿದ್ದಾರೆ. ಅಂಥ ಒಂಬತ್ತು ಜನರನ್ನು ಭಾರತ ಸರಕಾರವು ಗುರುತಿಸಿದ್ದು, ಅವರನ್ನು ಉಗ್ರಗಾಮಿಗಳೆಂದು ಹೆಸರಿಸಿದೆ. ಗುರ್ಮೀತ್ ಸಿಂಗ್ ಬಗ್ಗಾ. ಜರ್ಮನಿಯಲ್ಲಿರಾಧಾಸ್ವಾಮಿ ಪಂಥದ ಮುಖ್ಯಸ್ಥನನ್ನು ಕೊಲೆ ಮಾಡಿಸಿದ ಆರೋಪ ಈತನ ಮೇಲಿದೆ. 2019ರಲ್ಲಿಪಾಕಿಸ್ತಾನದಲ್ಲಿರುವ ಉಗ್ರ ರಂಜೀತ್ ಸಹಾಯದಿಂದ ಡ್ರೋನ್ ಮೂಲಕ ಭಾರತದೊಳಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಾನೆ. ಬಗ್ಗಾ ಆಪ್ತ ಭೂಪೀಂದೇರ್ ಸಿಂಗ್ ಭಿಂಡಾ ಕೂಡ ಇದೇ ಕೆಲಸ ಮಾಡುತ್ತಾನೆ. ನೀತಾ ಅಲಿಯಾಸ್ ರಂಜೀತ್ ಸಿಂಗ್ ಪಾಕಿಸ್ತಾನಧಿದಲ್ಲಿದ್ಡುಕೊಂಡೇ ಐಎಸ್‌ಐ ಸಹಾಯದಿಂದ ಭಾರತದೊಳಗೆ ನಕಲಿ ಕರೆನ್ಸಿ, ಮಾದಕ ವಸ್ತುಗಳು ಮತ್ತು ಸೊಧೀಟಕಗಳನ್ನು ಕಳುಹಿಸುವ ಕೆಲಸ ಮಾಡುತ್ತಾನೆ. ವಾಧ್ವಾ ಸಿಂಗ್ ಮತ್ತೊಬ್ಬ ಉಗ್ರಗಾಮಿ. ಈತ ಬಬ್ಬರ್ ಖಾಲ್ಸಾ ಅಂತಾರಾಷ್ಟ್ರೀಯ ಸಂಘಟನೆಯ ಮುಖ್ಯಸ್ಥ. ಪಂಜಾಬ್‌ನಲ್ಲಿಹಲವು ಪೊಲೀಸರನ್ನು ಕೊಂದಿರುವ ಆರೋಪವಿದೆ. ಲಕ್‌ಬಿರ್ ಸಿಂಗ್ ರೋಡೆ ಹಾಗೂ ಈತನ ಮಗ ಭಗತ್ ಬ್ರಾರ್ ಇಬ್ಬರು ಕೆನಡಾದಲ್ಲಿದ್ದು ಅಲ್ಲಿಂದಲೇ ಖಲಿಸ್ತಾನ ಚಟುವಟಿಕೆಗಳ ಜತೆ ಕೈಜೋಡಿಸಿದ್ದಾರೆ. ಬ್ರಿಟನ್‌ಲ್ಲಿರುವ ಪ್ರಂಜಿತ್ ಸಿಂಗ್ ಪಮ್ಮಾ ಖಲಿಸ್ತಾನಿ ಉಗ್ರರಿಗೆ ಹಣಕಾಸು ನೆರವು ಒದಗಿಸುತ್ತಾನೆ. 2018ರಲ್ಲಿಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ಗೆ ಭೇಟಿ ನೀಡಿದಾಗ ಅವರ ವಿರುದ್ಧ ಸ್ಥಳೀಯರಲ್ಲಿಪ್ರಂಜಿತ್ ಸಿಂಗ್ ಪಮ್ಮಾ ದ್ವೇಷ ಪ್ರಚೋದಿಸುವ ಕೆಲಸ ಮಾಡಿದ್ದ. ಪರಮ್‌ಜಿತ್ ಸಿಂಗ್ ಪಂಜ್ವರ್ ಖಲಿಸ್ತಾನ್ ಕಮಾಂಡೋ ಫೋರ್ಸ್ ಎಂಬ ಸಂಘಟನೆಯ ನಾಯಕನೀತ. ಅಫಘಾನ್‌ಲ್ಲಿದ್ದು, ಖಲಿಸ್ತಾನಿಗಳಿಗೆ ತರಬೇತಿ ನೀಡುತ್ತಾನೆ. ಗುರುಪತ್ವಂತ್ ಸಿಂಗ್ ಪನ್ನುನ್ ಖಲಿಸ್ತಾನ್ ಭಯೋತ್ಪಾದನೆಗೆ ಮರುಜೀವ ನೀಡುತ್ತಿರುವ 2020ರ ‘ನಿರ್ಣಯ’ದ ಜನಕ. ಹರ್ದೀಪ್ ಸಿಂಗ್ ನಿಜ್ಜರ್ ಪಾಕಿಸ್ತಾನದ ಜೈಷೆ ಮೊಹಮ್ಮದ್ ಸಂಘಟನೆಯೊಂದಿಗೆ ಸೇರಿಕೊಂಡು ಉಗ್ರ ಚಟುವಟಿಕೆ ನಡೆಸುತ್ತಾನೆ. ಇವರೆಲ್ಲರೂ ‘ಖಲಿಸ್ತಾನ್’ ಎಂಬ ಎಂದೂ ಕೈಗೂಡದ ವಿಚಾರಧಾರೆಯನ್ನು ಸದಾ ಜೀವಂತವಾಗಿಡುವ ಉದ್ದೇಶಕ್ಕಾಗಿ ಭಯೋತ್ಪಾದನೆಯಲ್ಲಿತೊಡಗಿಸಿಕೊಂಡಿದ್ದಾರೆ.
***
ಖಲಿಸ್ತಾನದ ಬೀಜಗಳು ಮೊಳೆತಿದ್ದು 1800ರ ಅಂತ್ಯ ಮತ್ತು 1900ರ ಆರಂಭದಲ್ಲಿ. ಅಂದಿನ ಬ್ರಿಟಿಷ್ ಸರಕಾರದ ನೀತಿಗಳೇ ಇದಕ್ಕೆ ಕಾರಣವಾಯಿತು. 1940ರಲ್ಲೇ ಖಲಿಸ್ತಾನದ ಚಿಂತನೆಯ ಬೀಜಗಳು ಒಡೆದು ಸಸಿಗಳಾಗಲಾರಂಭಿಸಿದವು. ಪಂಜಾಬ್ ಕೇಂದ್ರವಾಗಿಟ್ಟುಕೊಂಡು ಬಲೂಚಿಸ್ತಾನ, ಹಿಮಾಚಲ, ಹರಿಯಾಣ, ಜಮ್ಮು- ಕಾಶ್ಮೀರದ ಕೆಲ ಭಾಗಗಳನ್ನು ಸೇರಿಸಿಕೊಂಡು ಪ್ರತ್ಯೇಕ ಖಲಿಸ್ತಾನ್ ರಚಿಸುವ ಪ್ರಯತ್ನವಿದು. ಶ್ರೀಮಂತ ಹಾಗೂ ಪ್ರತ್ಯೇಕತಾವಾದಿ ಸಿಖ್ಖರ ಹಣಕಾಸು ಹಾಗೂ ಪಾಕಿಸ್ತಾನದ ಬೆಂಬಲದಿಂದ 70-80ರ ದಶಕದಲ್ಲಿಉಗ್ರವಾಗಿ ಬೆಳೆಯಿತು. 1980ರಲ್ಲಿಜಗಜಿತ್ ಸಿಂಗ್ ಚೌಹಾಣ್ ಎಂಬಾತ ನ್ಯಾಷನಲ್ ಕೌನ್ಸಿಲ್ ಆಫ್ ಖಲಿಸ್ತಾನ್ ಎಂಬ ಸಂಘಟನೆ ಕಟ್ಟಿದ. ಬ್ರಿಟನ್‌ಗೆ ಹೋಗಿ ಅಲ್ಲಿಂದಲೇ ಖಲಿಸ್ತಾನ್ ರಚನೆಯನ್ನೂ ಘೋಷಿಸಿದ. ನಂತರ ಜರ್ನೈಲ್ ಸಿಂಗ್ ಭಿಂದ್ರಾನ್‌ವಾಲೆ ಎಂಬ ಮತಾಂಧ ಧಾರ್ಮಿಕ ಗುರು ಹುಟ್ಟಿಕೊಂಡ. ಉಗ್ರ ಖಾಲ್ಸಾ ವಿಚಾರವನ್ನು ಪ್ರೋತ್ಸಾಹಿಸಿದ. ಈತನ ಕಾಲದಲ್ಲಿಪಂಜಾಬ್‌ನಲ್ಲಿಹಿಂಸೆ ತಾಂಡವವಾಡಿತು. ಅಂತಿಮವಾಗಿ 1984ರಲ್ಲಿಆಪರೇಷನ್ ಬ್ಲೂಸ್ಟಾರ್ ಮೂಲಕ ಖಲಿಸ್ತಾನ್ ಚಳವಳಿಯನ್ನು ಒಂದು ಹಂತಕ್ಕೆ ಹುಟ್ಟಡಗಿಸಲಾಯಿತು. ಆದರೂ, ಖಲಿಸ್ತಾನದ ಪಳೆಯುಳಿಕೆಗಳು ಅಲ್ಲಲ್ಲಿಉಳಿದುಕೊಂಡು ಈಗ ಮತ್ತೆ ಜೀವ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಖಲಿಸ್ತಾನ್ ಬಗ್ಗೆ ಸಹಾನುಭೂತಿ ಹೊಂದಿದ ಬಹಳ ಮಂದಿ ಜರ್ಮನಿ, ಬ್ರಿಟನ್, ಕೆನಡಾ ಮತ್ತು ಅಮೆರಿಕದಲ್ಲಿದ್ದಾರೆ. ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಎಂಬ ಹೊಸ ಸಂಘಟನೆಯೊಂದನ್ನು ಪೊಲೀಸರು 2019ರಲ್ಲಿಭೇದಿಸಿದ್ದರು. ಇದರ ನಾಯಕರಲ್ಲಿಹೆಚ್ಚಿನವರು ಜರ್ಮನಿಯಲ್ಲಿದ್ದಾರೆ.
***
ಆಪರೇಷನ್ ಬ್ಲೂಸ್ಟಾರ್‌ನ ಭಯಂಕರ ಪರಿಣಾಮದ ಹೊರತಾಗಿಯೂ ಅಂಥದ್ದೇ ಕಾರ್ಯಾಚರಣೆಯನ್ನು ಭಾರತವು, ‘ಆಪರೇಷನ್ ಬ್ಲ್ಯಾಕ್ ಥಂಡರ್’ ಹೆಸರಿನಲ್ಲಿಮತ್ತೆ ಕೈಗೊಂಡಿತು. ಆಪರೇಷನ್ ಬ್ಲೂಸ್ಟಾರ್ ವೇಳೆ ಅಳಿದುಳಿದ ಖಲಿಸ್ತಾನ ಬಂಡುಕೋರರು ಮತ್ತೆ ತಮ್ಮ ಕಾರ್ಯಾಚರಣೆಗೆ ಗೋಲ್ಡನ್ ಟೆಂಪಲ್ ಅನ್ನೇ ಬಳಸಿಕೊಳ್ಳಲಾರಂಭಿಸಿದ್ದರು. ಈ ಪ್ರಯತ್ನವನ್ನು ಹಿಮ್ಮೆಟ್ಟಿಸುವುದಕ್ಕಾಗಿಯೇ ನಡೆದ ಕಾರ್ಯಾಚರಣೆಯೇ ‘ಆಪರೇಷನ್ ಬ್ಲ್ಯಾಕ್ ಥಂಡರ್’. ಮೊದಲನೆ ಬಾರಿಗೆ ಕಾರ್ಯಾಚರಣೆ ನಡೆದಿದ್ದು 1986 ಏಪ್ರಿಲ್ 30ರಂದು. ಇದಕ್ಕಾಗಿ ರಾಷ್ಟ್ರೀಯ ಭದ್ರತಾ ದಳದ ‘ಬ್ಲ್ಯಾಕ್ ಕ್ಯಾಟ್’ ಕಮಾಂಡೋ ಪಡೆಯನ್ನು ಬಳಸಿಕೊಳ್ಳಲಾಯಿತು. ಎರಡನೇ ಬಾರಿಗೆ ಕಾರ್ಯಾಚರಣೆ ನಡೆದಿದ್ದು 1988 ಮೇ 9ರಂದು. ಎರಡೂ ಆಪರೇಷನ್‌ಗಳ ನೇತೃತ್ವ ವಹಿಸಿದ್ದವರು ಕೆ.ಪಿ.ಗಿಲ್. ಅವರು ಆಗ ಪಂಜಾಬ್ ಪೊಲೀಸ್ ಡಿಜಿಪಿ ಆಗಿದ್ದರು. ಅಳಿದುಳಿದ ಬಂಡುಕೋರರನ್ನು ಮಟ್ಟಹಾಕುವಲ್ಲಿಈ ಬ್ಲ್ಯಾಕ್ ಥಂಡರ್ ಕಾರ್ಯಾಚರಣೆ ಯಶಸ್ವಿಯಾಗಿತ್ತು.
ಆದರೆ, ಈಗ ಖಲಿಸ್ತಾನ್ 2.0 ಸಕ್ರಿಯವಾಗುತ್ತಿರುವುದು ಸ್ಪಷ್ಟ. ಹಲವು ಘಟನೆಗಳು ಇದಕ್ಕೆ ಸಾಕ್ಷ ್ಯ ಒದಗಿಸಿವೆ. ಸರಕಾರ ಈಗಲೇ ಗದಾಪ್ರಹಾರ ಮಾಡದಿದ್ದರೆ, ಮುಂದೊಂದು ದಿನ ಮತ್ತೆ ಪಂಜಾಬ್ ಹೊತ್ತಿ ಉರಿಯಬಹುದು, ಭಾರತದ ಸಾರ್ವಭೌಮತ್ವಕ್ಕೆ ಸವಾಲು ಎದುರಾಗಬಹುದು.