ಬಯಕೆಗಳು ಪವಡಿಸುತ್ತಿವೆ.
ಮರಳುಗಾಡಿನಂತಿರುವ ಮನದಲಿ
ಓಯಸಿಸ್‍ಗಳಾಗಲು,
ಒಮ್ಮೊಮ್ಮೆ ಎಚ್ಚೆತ್ತುಕೊಳ್ಳಲು ಹವಣಿಸುತ್ತಿವೆ.
ಪರಿಸ್ಥಿತಿಯ ಒತ್ತಡಕ್ಕೆ ಮಣಿಯುತ್ತಿವೆ.
ತನ್ನತನವನ್ನು ಉಳಿಸಲು ಆಶ್ರಯಿಸುತ್ತಿವೆ
ಇನ್ನೊಬ್ಬರನ್ನು, ಬೇಡವೆಂದಾಗ ಮತ್ತೊಬ್ಬರನ್ನು
ಬೇಡುತ್ತವೆ, ಮತ್ತೊಮ್ಮೆ ತಿರಸ್ಕರಿಸುತ್ತಿವೆ
ಸ್ವಂತಕ್ಕಾಗಿ, ಸ್ವಹಿತಕ್ಕಾಗಿ
ಆಗಲೂ ಈಗಲೂ ಬಯಕೆಗಳಾಗಿಯೇ
ಉಳಿಯುತ್ತಿವೆ, ಬೆಳೆಯುತ್ತಿವೆ.
-ಮಲ್ಲಿ
2 ಕಾಮೆಂಟ್‌ಗಳು:
ಬಲು ಚಂದದ ಕವನ..
ಯದೆಯಾಳವ ಮೀಟಿದೆ..
ಬಯಕೆಗಳಿಗೇ ಜೀವ ತುಂಬಿ
ಜೀವಕ್ಕೆ ಜ್ಞಾನವನು ತುಂಬಿ
ಜ್ಞಾನಕ್ಕೇ ಚೈತನ್ಯದ ದಾರೆಯರೇದಿರುವಿರಿ..!!
ಮನದೆಲ್ಲೊ ಮೊಲೆಯ ಬಯಕೆಗಳಿಗೆ
ಬದುಕ ದಾರಿ ತೋರಿರುವಿರಿ..!
ಬಹಳ ಚನ್ನಾಗಿದೆ ಕವನ..
-ಯುವಪ್ರೇಮಿ
its a nice poem...
ಕಾಮೆಂಟ್ ಪೋಸ್ಟ್ ಮಾಡಿ