ಮಿಂದೆದ್ದ ಗುಲಾಬಿಯೇ
ಯಾರಿಗಾಗಿ ಕಾಯುತ್ತಿರುವೇ
ದಿನಕರನ ದಿನಾರಂಭಕ್ಕಾಗಿಯೇ..?
ಮೆಲ್ಲನೆ ಅರಳುತ್ತ
ತಂಪನೆಯ ಕಂಪು ಬೀರುತ್ತ
ನಗೆ ಚೆಲ್ಲುತ್ತಾ
ಯಾರಿಗಾಗಿ ಕಾಯುತ್ತಿರುವೆ..?
ತಂಗಾಳಿಗೆ ಮೈ ಒಡ್ಡುತ್ತಾ
ಮೆಲ್ಲನೆ ಭೂತಾಯಿಗೆ ನಮಿಸುತ್ತಾ
ನನ್ನದೇನೂ ಇಲ್ಲಎಲ್ಲವೂ ನಿನ್ನದೆನ್ನುತ್ತಾ
ನಿರವತೆಯ ಮೌನ ಮುರಿಯತ್ತ
ಕಲ್ಲು ಹೃದಯವನ್ನೂ ಅಲಗಿಸುತ್ತ
ಹೂಗಳ ರಾಣಿಯೇ ಹೇಳು
ಯಾರಿಗಾಗಿ ಈ ಚಿತ್ತ....?
ಕನಸುಗಳಿಗೆ ಆಶೆ ನೀಡಿ
ಮನಸ್ಸುಗಳನ್ನು ಒಂದುಗೂಡಿಸುತ್ತಾ
ಸಂಜೆಯಾಗುತ್ತಲೇ ನೀ ಬಾಡುವೆ
ನಶ್ವರತೆಯನ್ನು ಸೂಚಿಸುತ್ತಾ....
-ಮಲ್ಲಿ
4 ಕಾಮೆಂಟ್‌ಗಳು:
ಮುಂಜಾನೆಯ ಮಂಜಲ್ಲು ಮಂದಹಾಸ..!
ಮಂಜಲ್ಲು ಮೈಮರೆಸುವ ಉಲ್ಲಾಸ..!!
ಮೈಮರೆಸಿ ಮುಗುಳ್ನಕ್ಕಿದೆ ಈ ಗುಲಾಬಿ..!!
ನಗುತಿರಲಿ, ನಗುವಿನಲು ಹೊಸ ಹೊಳಪಿರಲಿ..!!
ಕವನ ಬಹಳ ಚನಾಕಿದೆ..!! ಹೀಗೆ ಹೋಮ್ಮುತ್ತಿರಲಿ ನಿಮ್ಮ ಕವನಗಳ ಜ್ಜೆಂಕಾರ.!!
-ಯುವಪ್ರೇಮಿ
this poem is very detailed n holds a lots of dreams in it
its beautiful ...
nice one..
Regards
Sudarshan
you use nice words. it simply good poetry.
ಕಾಮೆಂಟ್ ಪೋಸ್ಟ್ ಮಾಡಿ