ಜನಮಾನಸದಲ್ಲಿ "ಹೀರೋ'ಗಳಾಗಿರುವ ನಮ್ಮ ಸಿನೆಮಾ 'ನಾಯಕ'ರು ನಿಜ ಜೀವನದಲ್ಲಿ ಹಾಗೇ ಇರ್ತಾರಾ.. ?
ಬಾಲಿವುಡ್ ಸ್ಟಾರ್(ಸಿನೆಮಾದಲ್ಲಿ ಮಾತ್ರ) ನಟ ಅಭಿಷೇಕ ಮತ್ತು ಮಾಜಿ ಸೌಂದರ್ಯ ರಾಣಿ(ಆಂತರಿಕ ಸೌಂದರ್ಯವಲ್ಲ) ಐಶ್ವರ್ಯ ರೈ ಅವರು ನಿಶ್ಚಿತಾರ್ಥ ಮತ್ತು ಅದರ ಪ್ರಹಸನ ನೋಡಿ ಇಂಥ ಪ್ರಶ್ನೆ ಎದ್ದಿದೆ.
ಸ್ವಲ್ಪ ನೆನಪು ಮಾಡಿಕೊಳ್ಳಿ.
ಕೆಲ ದಿನಗಳಿಂದ ಬಿಡುಗೆಡೆಯಾದ 'ಲಗೇ ರಹೋ ಮುನ್ನಾ ಭಾಯಿ' ಚಿತ್ರದಲ್ಲಿ ಅಭಿಷೇಕ ಬಚ್ಚನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರ ಜೋತಿಷ್ಯ ದೋಷ ಹೊಂದಿದ ಯುವತಿಯನ್ನು ವರಿಸುವುದು. ಆ ಪಾತ್ರದಲ್ಲಿ ಅಭಿ, "ನಾನ ಅವಳನ್ನು ಮದುವೆಯಾದರೆ ಸಾಯ್ತಿನಿ ಇಲ್ಲವೊ ಗೋತ್ತಿಲ್ಲ. ಆದರೆ ಮದುವೆಯಾಗದಿದ್ದರೆ ಖಂಡಿತವಾಗಿರಲಾರೆ'' ಎನ್ನುತ್ತಾರೆ. ಅಂದರೆ ಜ್ಯೋತಿಷ್ಯವನ್ನು ನಿರಾಕರಿಸುವ ಹಾಗೂ ಸತ್ಯಕ್ಕೆ ಬೆಲೆ ಕೊಡುವದನ್ನು ಪ್ರತಿಪಾದಿಸುವ ಪಾತ್ರ ಅದು.
ಈಗ ನಿಜ ನಿಶ್ಚಿತಾರ್ಥಕ್ಕೆ ಬನ್ನಿ.
ಅದೇ ಅಭಿಷೇಕ ಬಚ್ಚನ್ ತನ್ನ ಪತ್ನಿಯಾಗಿ ಸ್ವೀಕರಿಸಲಿರುವ ಐಶ್ವರ್ಯ ರೈಳ ಕುಂಡಲಿಯಲ್ಲಿ ದೋಷ ಇರುವದರಿಂದ ಉಜ್ಜಯನಿ, ಕೇರಳಾ ಮತ್ತು ಬೆಂಗಳೂರು ಜ್ಯೋತಿಷಿ ಹತ್ತಿರ ಅಲೆದಾಡುತ್ತಿರುವುದು ಎಷ್ಟು ಹಾಸ್ಯಾಸ್ಪದ..! ಹಾಗಾದರೆ ನೀವ ಅನ್ನಬಹುದು. ಅದು ಸಿನೆಮಾ. ಇದು ನಿಜ ಜೀವನ. ಸಿನೆಮಾ ಮತ್ತು ನಿಜ ಜೀವನಕ್ಕೂ ತಂಬಾ ವ್ಯತ್ಯಾಸವಿದೆ. ಸೀನೆಮಾದಲ್ಲಿ ತೋರಿಸಲಾದ ಪ್ರತಿಯೊಂದು ಅನಕರಿಸಲಾಗದು ಎಂದು ವಾದ ಮಾಡಬಹುದು.
ಸರಿ. ಸಿನೆಮಾ ಮತ್ತು ನಿಜ ಜೀವನಕ್ಕೆ ತುಂಬಾ ವ್ಯತ್ಯಾಸವಿದೆ. ಹಾಗಾದರೆ ನಿನೆಮಾದಲ್ಲಿ ಪ್ರತಿಪಾದಿಸುವ ಅಮೂರ್ತವಾದ ಮೌಲ್ಯಗಳಿಗೆ ಮೂರ್ತ ರೂಪ ನೀಡುವ ಪಾತ್ರದಾರಿಗಳು ಜನರು ಕಣ್ಣಲ್ಲಿ ಸಾಕ್ಷಾತ ನಾಯಕರಾಗುತ್ತಾರೆ. ಆದರೆ ಅವರು ತಮ್ಮ ಜೀವನದಲ್ಲಿ ಏಕೆ (ಬೆರಳಣಿಕೆ ನಟರನ್ನು ಹೊರತುಪಡಿಸಿ) ಅಳವಡಿಸಿಕೊಳ್ಳಲಾರರು ..? ಅದು ಕೇವಲ ದುಡ್ಡ ತೆತ್ತು ನೋಡುವ ಪ್ರೇಕ್ಷಕರಿಗೆ ಮಾತ್ರವೇ ಅನ್ವಯವೇ..? ಹಾಗಾದರೆ ಅದೇ ನಾಯಕರನ್ನು ತಮ್ಮ ರೋಲ್ ಮಾಡಲ್ ಮಾಡಿಕೊಳ್ಳುವ ಅಭಿಮಾನಿಗಳದ್ದು ಕೇವಲ ಹುಚ್ಚತನವಾ..? ಇದೂಂದು ಘಟನೆ ಮಾತ್ರ. ಇಂಥ ಉದಾಹರಣೆಗಳು ಬೇಕಾದಷ್ಟು ದೊರೆಯುತ್ತವೆ.
ಇಲ್ಲಿ ಜ್ಯೋತಿಷ್ಯವನ್ನು ತೆಗಳುವ ಉದ್ದೇಶ ಇಲ್ಲ. ಚಿತ್ರದಲ್ಲಿ ಜ್ಯೋತಿಷ್ಯವನ್ನು ನಿರಾಕರಿಸುವ ನಟ ನಾಯಕ ನಿಜ ಜೀವನದಲ್ಲಿ ಅದರ ನೆರಳಿನಲ್ಲಿಯೇ ಇರುತ್ತಾನೆ ಎಂಬುದಷ್ಟೇ ಹೇಳುವುದು. ಭಾರತದಲ್ಲಿ ಸಿನೆಮಾ ತರುವ ಬದಲಾವಣೆಗಳು ಪ್ರಭಾವದಷ್ಟು ಬೇರೆ ಯಾವ ಮಾಧ್ಯಮವೂ, ವ್ಯಕ್ತಿಯೂ ಕೊಡ ತರಲಾರ. ಅದಕ್ಕಾಗಿ ತೆರೆಯ ಮೇಲಿನ ನಾಯಕರು ಪ್ರತಿಪಾದಿಸುವ ಮೌಲ್ಯದ ಒಂದಂಶವನ್ನಾದರೂ ತೆರೆ ಹಿಂದೆಯಾದರೂ ಪ್ರತಿಪಾದಿಸಬೇಕು. ಹಾಗಂತ ನಮ್ಮ ಯಾವ ಚಿತ್ರನಟರು ಇದಕ್ಕೆ ಹೊರತಾಗಿಲ್ಲ ಅಂತ ಅಲ್ಲ. ಕೆಲವು ನಟರು ಇದಕ್ಕೆ ಹೊರತಾಗಿದ್ದಾರೆ. ರಜನಿಕಾಂತ್, ಡಾ. ರಾಜಕುಮಾರು ಸೇರಿದಂತೆ ಕೆಲವು ನಟರು ತೆರೆಯ ಮೇಲೆ ಪ್ರತಿಪಾದಿಸಿದ ಮೌಲ್ಯಗಳನ್ನು ಎಲ್ಲವೂ ಅನುಕರಿಸದ್ದಿದ್ದೂ ಕೆಲವನ್ನಾಷ್ಟದರೂ ಅಳವಡಿಸಿಕೊಂಡು ನಿಜವಾದ ಸ್ಟಾರ್ ನಟರಾಗಿದ್ದಾರೆ.
ಮಂಗಳವಾರ, ಜನವರಿ 16, 2007
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
ಮೂರೂ ಮಾದರಿಯ ಕ್ರಿಕೆಟ್ನಲ್ಲಿಭಾರತೀಯ ಕ್ರಿಕೆಟ್ ತಂಡದ ಕಾಯಂ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರೀಗ ಐಪಿಎಲ್ನಲ್ಲಿಸಿಎಸ್ಕೆ ತಂಡದ ನಾಯಕ. - ಮಲ್ಲಿಕಾರ್ಜುನ ತಿಪ್ಪಾ...
-
ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ, ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು, ಬಿಕ...
-
ಚೆನ್ನೈನಲ್ಲಿ ಇನ್ನೂ ಮುಂಗಾರು ಪ್ರಾರಂಭವಾಗಿಲ್ಲ. ಆದರೆ ಯೋಗರಾಜ್ ಭಟ್ಟರ "ಮುಂಗಾರು ಮಳೆ" ಭರ್ಜರಿಯಾಗಿ ಸುರಿಯುತ್ತಿದೆ.. ಹಾಗೇ ಸುಮ್ಮನೆ..! ಅರೆ ಏನು ಇದು.....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ