ಸೋಮವಾರ, ಅಕ್ಟೋಬರ್ 3, 2016

ಪುಟಿನ್: ಎದೆಗಾರಿಕೆಯ ನಾಯಕ

- ಅಂದಿನ ರಷ್ಯಾದ ಅಧ್ಯಕ್ಷ  ಬೋರಿಸ್ ಎಲ್ಸಿನ್ ಅವರು ಪುಟಿನ್‌ರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಕ ಮಾಡಿಕೊಳ್ಳುವವರೆಗೂ ಪುಟಿನ್ ಹೊರ ಪ್ರಪಂಚಕ್ಕೆ ಅಷ್ಟೇನೂ ಗೊತ್ತಿರದ ವ್ಯಕ್ತಿಯೇ ಆಗಿದ್ದರು. -

The party of power is in power again.
ಇತ್ತೀಚೆಗಷ್ಟೇ ರಷ್ಯಾದ ಡುಮಾ(ಸಂಸತ್ತು)ಗೆ ನಡೆದ ಚುನಾವಣೆಯಲ್ಲಿ ರಷ್ಯಾಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬೆಂಬಲಿತ ‘ಯುನೈಟೆಡ್ ರಷ್ಯಾ ಪಾರ್ಟಿ’ ಜಯಶಾಲಿಯಾದಾಗ ಅಲ್ಲಿನ ಪ್ರಮುಖ ಪತ್ರಿಕೆಯೊಂದು ತನ್ನ ಸಂಪಾದಕೀಯಕ್ಕೆ ಕೊಟ್ಟ ತಲೆಬರಹ ಇದು.
  ಕಳೆದ 17 ವರ್ಷಗಳಿಂದ ಪ್ರಧಾನಿಯಾಗಿ ಇಲ್ಲವೇ ಅಧ್ಯಕ್ಷರಾಗಿ ಅಧಿಕಾರದಲ್ಲಿರುವ ಪುಟಿನ್ ಅವರಿಗೆ ಈ ಚುನಾವಣೆ ಹಿಂದಿನ ಚುನಾವಣೆಗಳಂತೆ ಸರಳವಾಗಿರಲಿಲ್ಲ. ಸಿರಿಯಾದಲ್ಲಿನ ಯುದ್ಧ, ಉಕ್ರೇನ್ ಸಂಘರ್ಷಗಳು, ಅಂತಾರಾಷ್ಟ್ರೀಯ ಸಂಬಂಧದಲ್ಲಿ ಬಿರುಕು, ತೈಲ ಬೆಲೆ ಇಳಿಕೆ ಸೇರಿದಂತೆ ಸಮಸ್ಯೆಗಳು ಮುಕುರಿಕೊಂಡಿದ್ದವು. ರಷ್ಯಾದೊಳಗೇ ಒಂದು ರೀತಿಯಲ್ಲಿ ಪುಟಿನ್ ವಿರೋಧಿ ಅಲೆಯನ್ನು ಇವು ಸೃಷ್ಟಿಸಿದ್ದವು. ಇದರ ಹೊರತಾಗಿಯೂ ಪುಟಿನ್ ಅವರ ಜನಬೆಂಬಲ ಗಳಿಸಲು ಸಾಧ್ಯವಾಗಿದ್ದು ಹೇಗೆ ಎಂದು ರಾಜಕೀಯ ವಿಶ್ಲೇಷಕರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ, ರಷ್ಯಾದ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಅತಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದೆ. ಇದರ್ಥ ಈ ಬಾರಿ ಪುಟಿನ್ ಬೆಂಬಲಿತ ಯುನೈಟೆಡ್ ರಷ್ಯಾ ಪಾರ್ಟಿ ಮಣ್ಣುಮುಕ್ಕಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಈ ಚುನಾವಣೆಯಲ್ಲಿ ಶೇ.47.8ರಷ್ಟು ಮಾತ್ರ ಮತದಾನವಾಗಿದೆ. ಈ ಪೈಕಿ ರಷ್ಯಾ ಯುನೈಟೆಡ್ ಪಾರ್ಟಿ ಶೇ.45.2ರಷ್ಟು ಮತಗಳನ್ನು ಪಡೆದಿದೆ. ಅಂದರೆ, ಒಟ್ಟು 450 ಸ್ಥಾನಗಳ ಪೈಕಿ 343 ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ, ದಿ ಕಮ್ಯುನಿಸ್ಟ್ ಪಾರ್ಟಿ ಮತ್ತು ರಾಷ್ಟ್ರೀಯವಾದಿ ಎಲ್‌ಡಿಪಿಆರ್ ಶೇ.13ರಷ್ಟು ಮತಪಡೆಯಲಷ್ಟೇ ಶಕ್ಯವಾಗಿವೆ.
 
ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಇಷ್ಟೊಂದು ಪ್ರಮಾಣದಲ್ಲಿ ಗೆಲವು ಸಾಧ್ಯವಾಗಿದ್ದು ಹೇಗೆ ? ಇದಕ್ಕೆಲ್ಲ ಉತ್ತರ ವ್ಲಾದಿಮಿರ್ ಪುಟಿನ್ ಅವರ ವ್ಯಕ್ತಿತ್ವ ಮತ್ತು ನಾಯಕತ್ವ. ಇಡೀ ಜಗತ್ತಿಗೆ ದೊಡ್ಡಣ್ಣನಂತೆ ಪೋಸು ಕೊಡುವ ಅಮೆರಿಕಕ್ಕೆ ಸರಿಸಮಾನವಾಗಿ ನಿಂತು ಮಾತನಾಡುವ ಇಲ್ಲವೇ ಅದರ ನೀತಿಗಳನ್ನು ಯಾವುದೇ ಹಿಂಜರಿಕೆ ಇಲ್ಲದೇ ಖಂಡಿಸಿ, ಅದಕ್ಕೊಂದು ಅಂತಾರಾಷ್ಟ್ರೀಯ ಒಮ್ಮತಾಭಿಪ್ರಾಯವನ್ನು ಕ್ರೋಡೀಕರಿಸುವ ಸಾಮರ್ಥ್ಯವಿರುವುದು ಪುಟಿನ್ ಅವರಿಗೆ ಮಾತ್ರ. ಇದಕ್ಕೆ ಪುಷ್ಟಿಕರಣ ಬೇಕಿದ್ದರೆ; 2015ರ ‘ಟೈಮ್ ಮ್ಯಾಗಜಿನ್’ ಪ್ರಕಟಿಸಿದ ಮೋಸ್ಟ್ ಇನ್‌ಫ್ಲ್ಯೂಯಿನ್ಸ್ ಪೀಪಲ್ ಪಟ್ಟಿಯಲ್ಲಿ ಪುಟಿನ್‌ಗೆ ಅಗ್ರಸ್ಥಾನವಿತ್ತು. 2013, 2014 ಮತ್ತು 2015ರ ಸಾಲಿನಲ್ಲಿ ‘ಫೋರ್ಬ್ಸ್’ ಪಟ್ಟಿ ಪ್ರಕಟಿಸಿದ ‘ಮೋಸ್ಟ್ ಪವರ್ ಫುಲ್’ ಪಟ್ಟಿಯಲ್ಲಿ ಇವರೇ ಮೊದಲಿಗರಾಗಿದ್ದರು. ಅಂದರೆ, ಅವರ ಸಾಮರ್ಥ್ಯದ ಬಗ್ಗೆ ಜಗತ್ತಿಗಿದ್ದ ಭರವಸೆಯ ಪ್ರತೀಕವಿದು. ಹಾಗಂತ, ಪುಟಿನ್ ವ್ಯಕ್ತಿತ್ವದಲ್ಲೇನೂ ಕಪ್ಪುಚುಕ್ಕೆಗಳೇ ಇಲ್ಲ ಎಂದು ಹೇಳಿದರೆ ಮೂರ್ಖತನವಾಗುತ್ತದೆ; ಅವರ ಮೇಲೂ ಆರೋಪಗಳಿವೆ. ಕಳೆದ ಏಪ್ರಿಲ್‌ನಲ್ಲಿ ‘ಪನಾಮಾ ಪೇಪರ್ಸ್’ ಹೊರಗೆಡುವಿದ ಮಾಹಿತಿಯಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ಇದೇ ಪುಟಿನ್ ಅವರ ಹೆಸರು.  ಇವರ ಸಮೀಪವರ್ತಿಗಳು ಶತಕೋಟಿ ಡಾಲರ್ ಹಣವನ್ನು ವಿದೇಶಗಳಲ್ಲಿ ಹುಸಿ ಕಂಪನಿಗಳ ಹೆಸರಲ್ಲಿ ತೊಡಗಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಪನಾಮಾ ಪೇಪರ್ಸ್‌ನಿಂದ ಇಡೀ ಜಗತ್ತಿಗೆ ಗೊತ್ತಾಯಿತು. ಕಂಪನಿಗಳ ಹೆಸರಲ್ಲಿ ವಿದೇಶದಲ್ಲಿ ಹಣ ತೊಡಗಿಸುವುದು ಕಾನೂನು ಪ್ರಕಾರ ನ್ಯಾಯವೇ ಅಥವಾ ಅಲ್ಲವೇ ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳೇ ಇಂಥ ಕೃತ್ಯಕ್ಕೆ ಇಳಿಯುವುದು ನೈತಿಕವಾಗಿಯೂ ಅಧಃಪತನದ ಮುನ್ಸೂಚನೆ†. ಈ ಪನಾಮಾ ಪೇಪರ್ಸ್‌ನಿಂದ ಭಾರತದ ಕೆಲವು ಗಣ್ಯವ್ಯಕ್ತಿಗಳ ವ್ಯಕ್ತಿತ್ವ ಕೂಡ  ಒರೆಗಲ್ಲಿಗೆ ಹಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.
ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಪುಟಿನ್ 1952 ಅಕ್ಟೋಬರ್ 7ರಂದು ಜನಿಸಿದರು. ಇವರ ತಂದೆ ವ್ಲಾದಿಮಿರ್ ಸ್ಪಿರಿಡೊನೊವಿಚ್ ಪುಟಿನ್ ರಷ್ಯಾದ ಸಬ್‌ಮರಿನ್‌ನವೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಮಾರಿಯಾ ಪುಟಿನಾ ಅವರು ಫ್ಯಾಕ್ಟರಿ ಕೆಲಸಗಾರ್ತಿ. ಬಾಸ್ಕೊಲೇನ್‌ನಲ್ಲಿ ಶಾಲಾ ಅಧ್ಯಯನ ಆರಂಭಿಸಿದ ಪುಟಿನ್, 12 ವಯಸ್ಸಿಗೆ ಬರುವಷ್ಟರಲ್ಲಿ ಜುಡೋ, ಸಾಂಬೋದಲ್ಲಿ ಪ್ರಾವೀಣ್ಯತೆ ಸಾಧಿಸಿದ್ದರು. ಸೇಂಟ್ ಪೀಟರ್ಸ್‌ಬರ್ಗ್ ಹೈಸ್ಕೂಲಿನಲ್ಲಿದ್ದಾಗ ಜರ್ಮನ್ ಕಲಿತರು. 1970ರಲ್ಲಿ ಸೇಂಟ್ ಪೀಟರ್ಸ್‌ಬರ್ಗ್ ಯುನಿರ್ವಸಿಟಿ ಸೇರಿದ ಪುಟಿನ್ 19975ರಲ್ಲಿ ಕಾನೂನು ಪದವೀಧರರಾಗಿ ಹೊರ ಬಂದರು. 1983ರಲ್ಲಿ ಲುಡ್ಲುಮಿಲಾ ಅವರನ್ನು ವಿವಾಹವಾದರು. ಇಬ್ಬರು ಮಕ್ಕಳಿದ್ದಾರೆ. ಆದರೆ, 2014ರಲ್ಲಿ ಪುಟಿನ್‌ರಿಂದ ಲುಡ್ಲುಮಿಲಾ ವಿಚ್ಚೇದನ ಪಡೆದಿದ್ದಾರೆ.
  ಪುಟಿನ್ ಅವರು ಜರ್ಮನಿ ಕಲಿತಿರುವುದು ಅವರಿಗೆ ಉದ್ಯೋಗವನ್ನು ತಂದುಕೊಟ್ಟಿತು ಎಂದು ಹೇಳಬಹುದು. ಜರ್ಮನಿ ಮಾತನಾಡುತ್ತಿರುವುದರಿಂದಲೇ ಅವರು ರಷ್ಯಾದ ಕೆಜಿಬಿ ಸೀಕ್ರೆಟ್ ಪೊಲೀಸ್ ಸೇವೆಗೆ ಸೇರ್ಪಡೆಗೊಳ್ಳುವಂತಾಯಿತು. ಕೆಜಿಬಿಯಲ್ಲಿ 16 ವರ್ಷ ಸೇವೆ ಸಲ್ಲಿಸಿದ ಅವರು ಲೆಫ್ಟಿನೆಂಟ್ ಕರ್ನಲ್‌ವರೆಗೂ ಬಡ್ತಿ ಪಡೆದರು. ಆದರೆ, 1991ರಲ್ಲಿ ಸೇವೆಯಿಂದ ಬಿಡುಗಡೆಗೊಂಡು ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. 1999ರಲ್ಲಿ  ಅಂದಿನ ರಷ್ಯಾದ ಅಧ್ಯಕ್ಷ  ಬೋರಿಸ್ ಎಲ್ಸಿನ್ ಅವರು ಪುಟಿನ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಕ ಮಾಡಿಕೊಳ್ಳುವವರೆಗೂ ಪುಟಿನ್ ಹೊರ ಪ್ರಪಂಚಕ್ಕೆ ಅಷ್ಟೇನೂ ಗೊತ್ತಿರದ ವ್ಯಕ್ತಿಯೇ ಆಗಿದ್ದರು. 1999ರಿಂದ 2000ವರೆಗೆ ರಷ್ಯಾದ ಪ್ರಧಾನಿಯಾಗಿದ್ದರು. 2000ರಿಂದ 2008ವರೆಗ ಅಧ್ಯಕ್ಷರಾಗಿದ್ದರು. 2008ರಿಂದ 2012ವರೆಗೆ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಅವರು ಆಡಳಿತಾರೂಢ ಯುನೈಟೆಡ್ ರಷ್ಯಾ ಪಕ್ಷದ ಅಧ್ಯಕ್ಷರೂ ಆಗಿ ಕೆಲಸ ಮಾಡಿದ್ದಾರೆ. ಮತ್ತೆ 2012 ಮೇ 7ರಂದು ರಷ್ಯಾದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2018ರ ಮಾರ್ಚ್‌ನಲ್ಲೇ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಒಂದು ವೇಳೆ ಪುಟಿನ್ ಅವರು ಮತ್ತೆ ಆಯ್ಕೆ ಮುಂದಾದರೆ ಅವರು ಗೆಲವು ಸರಳವಾಗಲಿದೆ ಎಂಬುದನ್ನು ಮೊನ್ನೆಯಷ್ಟೇ ಡುಮಾಗೆ ನಡೆದ ಚುನಾವಣೆ ಸಾಕ್ಷೀಕರಿಸಿದೆ.
  ಭಾರತ ಮತ್ತು ರಷ್ಯಾ ನಡುವಿನ ಸಂಬಂಧಕ್ಕೆ ಬಹುದೊಡ್ಡ ಇತಿಹಾಸವಿದೆ. ಭಾರತದ ಸರಳ ಸ್ನೇಹಿತ ರಾಷ್ಟ್ರ ಎಂದೇ ರಷ್ಯಾವನ್ನು ಕರೆಯಲಾಗುತ್ತದೆ. ಶೀತಲ ಸಮರ ಕಾಲದಿಂದಲೂ ಅಂಥದೊಂದು ಬಂಧನ ಎರಡೂ ರಾಷ್ಟ್ರಗಳ ಮಧ್ಯೆ ಇದೆ. ಈ ಸಂಬಂಧ ಪುಟಿನ್ ಆಡಳಿತಾವಧಿಯಲ್ಲೂ ಹಾಗೆಯೇ ಮುಂದುವರಿದಿದೆ. ಆದರೆ, ಇತ್ತೀಚಿಗೆ ಭಾರತದ ವಿದೇಶಾಂಗ ನೀತಿಗಳಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ರಷ್ಯಾ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದೆ ಎಂದು ವಿದೇಶಾಂಗ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಇದಕ್ಕೆ ಅವರು ಪಾಕಿಸ್ತಾನದ ಜತೆಗೆ ರಷ್ಯಾ ನಡೆಸುತ್ತಿರುವ ಸೇನಾ ಸಮರಾಭ್ಯಾಸವನ್ನು ಉದಾಹರಣೆಯಾಗಿ ನೀಡುತ್ತಿದ್ದಾರೆ. ಭಾರತ ಒಂದೆಡೆ ಅತಿಯಾಗಿ ಅಮೆರಿಕವನ್ನು ಅಪ್ಪಿಕೊಳ್ಳುತ್ತಿರುವುದು ಕೂಡ ಪುಟಿನ್ ಅವರ ನಡೆಗೆ ಕಾರಣವಾಗಿರಬಹುದು.
  ಮೇಲ್ನೋಟಕ್ಕೆ ಮೃದು ಮನಸ್ಸಿರುವಂತೆ ಕಂಡರೂ ಪುಟಿನ್ ಅಂತರಾಳದಲ್ಲಿ ಅತ್ಯಂತ ಗಟ್ಟಿ ಇರುವ ವ್ಯಕ್ತಿ. ಕಠಿಣ ನಿರ್ಣಯ ಕೈಗೊಳ್ಳುವ ಸಂದರ್ಭಗಳಲ್ಲಿ ಅವರು ಅಂಥ ಗಟ್ಟಿತನವನ್ನು ಪ್ರದರ್ಶಿಸಿದ್ದಾರೆ. ಇದಕ್ಕೆ ಸಿರಿಯಾದ ಮೇಲಿನ ದಾಳಿಯನ್ನು ಉದಾಹರಣೆಯಾಗಿ ನೀಡಬಹುದು. ರಷ್ಯಾದ ದಾಳಿಯನ್ನು ಅಮೆರಿಕ ಎಷ್ಟೇ ವಿರೋಧಿಸಿದರೂ ಪುಟಿನ್ ಕ್ಯಾರೇ ಎನ್ನದೇ ತಾವು ಅಂದುಕೊಂಡಿದ್ದನ್ನು ಮಾಡಿಯೇ ಬಿಟ್ಟರು. ಅಂದರೆ, ಪುಟಿನ್ ಎಂಥದ್ದೇ ಸಂದರ್ಭದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬುದು ವೇದ್ಯವಾಗುತ್ತದೆ.
   ಜುಡೋ ಸಮರ ಕಲೆಯಲ್ಲಿ ಬ್ಲ್ಯಾಕ್‌ಬೆಲ್ಟ್ ಪಡೆದಿರುವ ಪುಟಿನ್ ಎದೆಗಾರಿಕೆಯಳ್ಳ ನಾಯಕ ಎನ್ನುವುದರಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಕುದುರೆ ಸವಾರಿ, ಸ್ಕೂಬಾ ಡೈವಿಂಗ್ ಕೂಡ ಮಾಡಬಲ್ಲರು. ಹೆಲ್ಸ್ ಏಂಜಿಲ್ ಮೋಟಾರ್‌ಸೈಕಲ್ ಕ್ಲಬ್‌ನ ಗೌರವ ಸದಸ್ಯರೂ ಆಗಿರುವ ಪುಟಿನ್, ಫಾರ್ಮುಲಾ ಒನ್ ರೇಸ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಸದಾ ರಾಜಕೀಯ ಜಂಜಾಟದ ನಡುವೆಯೂ ಫಿಶಿಂಗ್‌ಗೆ ಸಮಯ ಹೊಂದಿಸಿಕೊಳ್ಳಬಲ್ಲರು. ಶೀತಲ ಸಮರದಂಥ ಪರಿಸ್ಥಿತಿ ಈಗಿಲ್ಲ ಎನ್ನುವುದು ಖರೆ. ಆದರೆ, ಅಂಥ ಸಂದರ್ಭ ಎದುರಾದರೆ ಇಡೀ ಜಗತ್ತನ್ನೇ ಧ್ರುವೀಕರಿಸಬಲ್ಲ ಛಾತಿ 63 ವರ್ಷ ವಯಸ್ಸಿನ ಪುಟಿನ್ ಅವರಿಗಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.
- Mallikarjun Tippar


(ಇದು ವ್ಯಕ್ತಿಗತ ಅಂಕಣ. ವಿಕೆ ಸೆಪ್ಟೆಂಬರ್ 25ರ ಸಂಚಿಕೆಯಲ್ಲಿ ಪ್ರಕಟವಾಗಿದೆ.)

ಸೋಮವಾರ, ಸೆಪ್ಟೆಂಬರ್ 19, 2016

ಸೋತವನ ರಾತ್ರಿ ಪದ್ಯಗಳು-3

ಹಾಸಿಗೆ ಬಿಕ್ಕಳಿಸುತಿದೆ
ಅವರಿಬ್ಬರ ವಿರಹ, ಮುನಿಸು ಕಂಡು
ಅದೆಷ್ಟೋ ರಾತ್ರಿಗಳು
ರಂಗು ರಂಗಾಗಿರಲಿಲ್ಲ
ಈಗೇಕೆ ಶೃಂಗಾರ ವೈರಾಗ್ಯ
ಅದೆಷ್ಟೋ ಕನಸುಗಳ
ಕಾವಲಿಗೆ ಕಾವಲಿಯಾಗಿರಲಿಲ್ಲ
ನನ್ನ ಈ ಮೆತ್ತನೆಯ ಮೈ ಹೊದಿಕೆ
ಕೇಳುತಿದೆ ಹಾಸಿಗೆ ಬಿಕ್ಕಳಿಸುತ
ಅವರಿಬ್ಬರ ಬೆವರಿನ ಘಮಕ್ಕೆ
ಗೋಡೆಗಳ ಮೇಲೂ ಸಣ್ಣ ಜಿನುಗು
ಕಂಡು ನಕ್ಕಿರಲಿಲ್ಲ ಆ ತಲೆದಿಂಬು?
ನಿಮ್ಮಬ್ಬರ ಪ್ರೇಮ ಪಲ್ಲಕ್ಕಿಗೆ
ಅದಾರೋ ಕಲ್ಲು ಹಾಕಿದರೋ
ಕೇಳುತಿದೆ ಹಾಸಿಗೆ ಬಿಕ್ಕಳಿಸಿತ

-ಸೋತವನು
--------------------

ಈ ಸುಡಗಾಡು ಸುಳಿಗಾಳಿ
ಸುಮ್ನ ಇರಾಂಗಿಲ್ಲ ಖೋಡಿ
ಅವಳ ನೆಂಪ ಹೊತ್ಕೊಂಡ್ ಬರ್ತದ
ಅವಳೂ ಬೇಡ, ಅಳವೂ ಬೇಡ
ಅಂದವನಿಗೆ ಈ ಗಾಳಿಯೊಂದ ಕಾಟ
ಯಾಕಾರ ಈ ನೆಂಪುಗಳು ಇಷ್ಟೊಂದು ಕಾಡ್ತಾವ ?
ದ್ಯಾವ್ರೆ ತೋರ್ಸು ದಾರಿ, ತ್ರಾಸು ಇರಲಾರ್ದು
ಹೈರಾಣಾಗೇನಿ ಹರಕಿ ಕಟ್ಕೊಂಡು
ಅವಳಿಗೀ ಒಳ್ಳೆದಾಗ್ಲಿ ಅಂತ
ಬರ್ದಿರಲಿ ಅವ್ಳ ನೆಂಪ ನಂಗಂತ
ಏ ಗಾಳಿ ಗೋಳಿ, ಹಂಗ ಹೋಗು
ಇರ್ಬೌದು ನನ್ನಂತವರ ನೂರಾರು ಮಂದಿ
ನಿನ್ನ ಕಾಯಾಕಾತ್ತಿರಬಹುದು !

- ಸೋತವನು
-------------------------

ಮನಸು ಭಾರವಾಗಿದೆ
ತುಸು ದೂರ ನೀನು ಬರದೇ
ಪ್ರೀತಿಯ ಪಯಣದಲಿ
ಸರಿದು ಹೋಗುವ ಹೊತ್ತು
ಸರಿ ದಾರಿಗೆ ಬರ್ಬೆಕು ನಾವಿಬ್ಬರು

-ಸೋತವನು
--------------------

ನೀ ಬೆಳಕಾದರೆ
ನಾ ಹಣತೆಯಾಗುವೆ
ನೀ ಕನಸಾದರೆ
ನಾ ಕಣ್ಣಾಗುವೆ
ನೀ ಮಳೆಯಾದರೆ
ನಾ ಮೋಡ ಆಗುವೆ
ನೀ ಮರವಾದರೆ
ನಾ ಮಣ್ಣಾಗುವೆ
ನೀ ದಾಹವಾದರೆ
ನಾ ನೀರಾಗುವೆ
ನೀ ಹೂವಾದರೆ
ನಾ ಕಂಪಾಗುವೆ
ನೀ ನಿಜವಾದರೆ
ನಾ ಸಹಜನಾಗುವೆ
ನೀ ಬೆಳದಿಂಗಳಾದರೆ
ನಾ ಚಂದ್ರನಾಗುವೆ
ನೀ ನಕ್ಷತ್ರವಾದರೆ
ನಾ ಆಕಾಶವಾಗುವೆ
ನೀ ಪ್ರೀತಿಯಾದರೆ
ನಾ ಪ್ರೀತಿಸುವೆ

-ಸೋತವನು

ಗುರುವಾರ, ಆಗಸ್ಟ್ 25, 2016

ಮತ್ತೆ ಲವ್ವಾಗಿದೆ- ಸೋತವನ ರಾತ್ರಿ ಪದ್ಯಗಳು-2

ಮತ್ತೆ ಲವ್ವಾಗಿದೆ
ಅವಳು ಬರೆಯೋ
ವಿರಹಿ ಕವಿತೆಗಳಿಂದ

ಮೊದಲಾಗಿತ್ತಲ್ಲ ಅದೇ ಲವ್ವು
ದಿನ ರಾತ್ರಿ ಒಂದಾಗಿತ್ತಲ್ಲಾ?
ಎಷ್ಟೊಂದು ಕನ್ಸುಗಳಿಗೆ
ಗಾಳ ಹಾಕಿ ಹೆಕ್ಕಿ ತೆಗಿದಿದ್ವುಲ್ವಾ
ಅದೇ ಆ ಒಂಚೂರು ಪ್ರೀತಿ

ಮತ್ತೆ ಲವ್ವಾಗಿದೆ ಈಗ

ಅದೇ ಆ ಮಾತುಗಳು
ಅವಳ ಕವಿತೆಯ ಸಾಲುಗಳು
ಬರೆದಷ್ಟು ಬತ್ತಲಾರದ ಭಾವಗಳು
ನನ್ನ ಸೋಲುಗಳಿಗೆ ನಾನೇ ಜವಾಬುದಾರ

ಮತ್ತೆ ಲವ್ವಾಗಿದೆ ಈಗ

ಸೇರಬೇಕು ಅವಳ ಸರದಿ ಸಾಲು
ಸಿಕ್ಕರೆ ಸಿಗಬಹುದು ನಂಗೂ
ಹರಿದು ಹೋದ ಚಂದ್ರನ ಚೂರು
ನಮ್ಮಿಬ್ಬರಿಗೂ ಕಂಡರೂ ಕಂಡೀತು
ಒಂದಾಗುವ ಸಣ್ಣ ಕಿಂಡಿಯೊಂದ

ಮತ್ತೆ ಲವ್ವಾಗಿದೆ
ಅವಳು ಬರೆಯೋ
ವಿರಹಿ ಕವಿತೆಗಳಿಂದ

- ಸೋತವನು

---
ಕೃಷ್ಣ ನೀ ಪಕ್ಷಪಾತಿ
ನೀನೇ ತಾನಾಗಿದ್ದ
ನಿನ್ನ ಪ್ರೇಮಿಸಿದ
ರಾಧೆಗೇನು ಕೊಟ್ಟೆ?

- ಸೋತವನು
----

ಏನೋ ಅಂದುಕೊಳ್ಳುವ ಹೊತ್ತಿಗೆ
ಕೈಗೆ ಸಿಗುವ ಹಳೇ ಹೊತ್ತಗೆಯ
ಮಧ್ಯೆ ಪುಟ ಮಡಿಚಿಟ್ಟ ಮಡಿಕೆಯಲಿ
ಅವಳ ನೆನಪು ಸೃಜಿಸುವ ಸಣ್ಣ ಎಲೆ!
ಒತ್ತರಿಸುವ ನೆನಪುಗಳ ಮೆರವಣಿಗೆ
ತತ್ತರಿಸಿ ಹೋಗಿರುವ ಎದೆಯೊಳಗೆ
ನುಂಗಲು ಆಗದ ಉಗಳಲು ಆಗದ
ಪ್ರೇಮದ ಎಲೆಯಡಿಕೆ ಬಾಯೊಳಗೆ!
ಕೆಂಪು ಕೆಂಪಾದ ಆಗಸದೊಳಗೆ
ಬಾಡಿ ಹೋಗುವ ಭಾಸ್ಕರ
ಮತ್ತೆ ಬಾರದಿರನೆ ಮರುದಿನ ಸರ ಸರ?
ಕಾಯುವೆ ಅವಳು ಬರುವ ಕವಲು
ದಾರಿಯಲಿ, ಹಗಲಾಗಿರಲಿ ಇರುಳಾಗಿರಲಿ!

- ಸೋತವನು

ಗುರುವಾರ, ಜುಲೈ 28, 2016

ಸೋತವನ ರಾತ್ರಿ ಪದ್ಯಗಳು-1

ಕವಿತೆ ಹುಟ್ಟೊ ಕಾಲದಲ್ಲಿ ಮುಂಗಾರಿನ ಮಿಂಚು
ಎದುರಿಗಿದ್ದವಳ ಕಣ್ಣಲ್ಲಿ ಪ್ರೇಮ ನಿವೇದನೆಯ ಸಂಚು
ಹಗಲಲ್ಲಿ ಕಂಡ ಬಾವಿಗೆ ಬೀಳಲು ಭಾವನೆಗಳ ಹೊಂಚು
ಇದನರಿತು ಹೊರಟವನ ಬ್ಯಾಗಿನಲ್ಲಿತ್ತು ಸಾವಿನ ಅಂಚು
- ಸೋತವನು

****

ಅಹಮಿಗೆ ಪೆಟ್ಟು ಬೀಳುವ ಕ್ಷಣ
ನಾನು ನಾನೆಂಬುವುದೆ ಪರಕೀಯ
ಇರುವ ನಾಲ್ಕು ಕ್ಷಣಗಳಲ್ಲಿ
ನೂರು ದಾರಿ ಹಲವು ಕವಲು
ಕೊನೆಗೆ ಸೇರುವುದೆಲ್ಲವೊ ಶೊನ್ಯ ಸಾಧನೆ
-ಸೋತವನು

****

ಹಾಡುವ ಕನಲಿಕೆ ಎದೆಯೊಳಗೆ
ತುರಿಸುವ ತಿಕ್ಕಾಟಗಳು ಅದರೊಳಗೆ
ಎದ್ದೇಳುವ ಬಿರಿಸು ಭಾವಗಳಿಗೆ
ಜೀವ ತುಂಬುವ ಕಲೆ ಅವಳಿಗೆ
ಮೇಲೆ ಹಾರಿ ಕೆಳಗೆ ಬೀಳುವ ಜಿದ್ದು
ಗೆಲ್ಲುವುದಕ್ಕಲ್ಲ ಸೋಲುವುದಕ್ಕೆ
ಗೆಲುವಿಗೆ ಒಂದೇ ಒಂದು ಖುಷಿ
ಸೋಲಿಗೆ ಗೆಲುವಿನ ಸಾವಿರ ನಿರೀಕ್ಷೆ
ಹಾಡುವ ಕನಲಿಕೆ ಕೊನೆಯಾಗುವುದೇ?
-ಸೋತವನು

ಸೋಮವಾರ, ಜುಲೈ 18, 2016

ಏನು ಆಗಬಾರದಿತ್ತೋ ಅದೇ ಆಯಿತು...

- ಹುಡುಗನೊಬ್ಬ ಗಜಲ್‌ಗಳು-

- ಪ್ರದ್ಯುಮ್ನ
ಜೀವನವೇ ಹಾಗೆ. ನಮ್ಮ ನಿರೀಕ್ಷೆಗಳು, ಆಕಾಂಕ್ಷೆಗಳು ಈಡೇರುವ ಹೊತ್ತಿನಲ್ಲಿ ಸಡನ್ನಾಗಿ ಯು ಟರ್ನ್ ತೆಗೆದುಕೊಳ್ಳುತ್ತದೆ. ಮತ್ತೆ ವಿರುದ್ಧ ದಿಕ್ಕಿನಲ್ಲಿ  ಓಡುತ್ತಿರುವಾಗಲೇ ಮತ್ತೊಂದಿಷ್ಟು ತಿರುವುಗಳು. ಈ ತಿರುವುಗಳ ತಿರುಗಣಿಯಲ್ಲಿ ಜೀವನ ಸುರಳಿಯಾಗುತ್ತ, ಅದರೊಳಗೆ ನೋವು, ಹತಾಶೆ, ಸುಖ, ದುಃಖ, ಸಂತೋಷ, ಸಂಭ್ರಮಗಳೆಲ್ಲವೂ ಲೀನವಾಗಿ ಶೂನ್ಯವಾಗುವ ಎಲ್ಲ ಅಪಾಯಗಳಿರುತ್ತವೆ. ನಾವು ಅಂದಕೊಂಡ ರೀತಿಯಲ್ಲಿ ಬದುಕು ಸಾಗದಿದ್ದಾಗ, ಬದುಕು ಅಂದುಕೊಂಡ ರೀತಿಯಲ್ಲಿ ನಾವು ನಡೆಯಬೇಕು. ಈ ತರ್ಕದಿಂದಲೇ ಜೀವನ ಹೆಚ್ಚು ಸಂತೋಷವಾಗಿರುತ್ತದೆ...
- ಹೀಗೆ ನೀನು ಅಂದು ಊರಾಚೆ ಇದ್ದೂ ಇಲ್ಲದಂತಿರುವ ಉದ್ಯಾನದ ಮೂಲೆಯೊಂದರ ಮುರುಕಲು ಬೆಂಚ್‌ನಲ್ಲಿ  ಕುಳಿತು ಜೀವನದ ಪಾಠ ಮಾಡುತ್ತಿರುವಾಗ, ನಿನ್ನ ಮಾತುಗಳು ತಲೆಯೊಳಗೆ ಇಳಿದಿರಲಿಲ್ಲ. ಅಂದಿಗೆ, ನಿನ್ನ ಮುಂಗುರುಳು ನೃತ್ಯ ನೋಡುತ್ತಾ.... ನಿನ್ನ ಸಾನ್ನಿಧ್ಯ, ನಿನ್ನ ಸಾಮೀಪ್ಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೊತ್ತು ಕಳೆಯುವುದೇ ಬದುಕಾಗಿತ್ತು. ಅಂದಿಗೆ ಅದು ನನ್ನ ಜೀವನದ ಏಕ ಮಾತ್ರ ಗುರಿಯಾಗಿತ್ತು. ಅಂದು ನೀನು ಹೇಳಿದ ಪ್ರತಿಯೊಂದು ಮಾತುಗಳು ನನ್ನ ಅನುಭವಕ್ಕೆ ಈಗ ಬರುತ್ತಿವೆ. ನನ್ನ ಬದುಕಿನ ಅತಿದೊಡ್ಡ ಜೀವನಸೆಲೆ, ಸ್ಫೂರ್ತಿಯ ಚಿಲುಮೆಯಾಗಿದ್ದ ನೀನೇ ಹಠಾತ್ತನೇ ಯು ಟರ್ನ್ ತೆಗೆದುಕೊಂಡು, ನನ್ನನ್ನು ದಾರಿಯ ಮಧ್ಯೆ ಬಿಟ್ಟು ಹೋಗಿತ್ತೀಯ ಎಂಬ ಸಣ್ಣ ಸುಳಿವು ಇರಲಿಲ್ಲ. ಜೀವನದ ದಾರಿಯಲ್ಲಿ ಇಬ್ಬರೂ ಸಹಯಾತ್ರಿಕರಾಗಿ ಪಯಣ ಆರಂಭಿಸಿ, ಮುಗಿಸೋಣ ಎಂದು ಹೇಳಿದವಳು ನೀನು ಮಾತು ತಪ್ಪಿದೆ; ದಾರಿ ತಪ್ಪಿದೆ ನಾನು. ಈಗ ದಿಕ್ಕು ಕಾಣದೆ ನಿಂತಿದ್ದೇನೆ. ನನ್ನ ಮುಂದೆ ಅನೇಕ ಕವಲು ದಾರಿಗಳಿವೆ. ಯಾವ ದಾರಿಯನ್ನು ಆಯ್ಕೆ ಮಾಡಿಕೊಂಡರೆ, ಅದು ಎಲ್ಲಿ ಗೆ ಹೋಗಿ ಮುಟ್ಟತ್ತದೆ ಎಂಬ ಅರಿವು ನನಗಿಲ್ಲ. ಅದರ ಅರಿವು ಇದ್ದವಳು ನೀನು ನನ್ನ ಜತೆಯಲ್ಲಿ ಇದ್ದು ಇಲ್ಲದಂತೆ ಇರುವೆ. ಆಯ್ಕೆಗಳು ವಿಷಯ ಬಂದಾಗ ನನ್ನದು ಕನ್‌ಫ್ಯೂಸ್ಡ್ ಸೋಲ್. ಯಾವ ಆಯ್ಕೆ ನನ್ನನ್ನು ಎಲ್ಲಿಗೆ ಹೋಗಿ ಮುಟ್ಟಿಸುತ್ತದೆ ಎಂಬುದೇ ಗೊತ್ತಿಲ್ಲ. ಆದರೂ ಒಬ್ಬಂಟಿಯಾಗಿ ನಡೆಯುವ ಸಾಹಸ ಮಾಡುತ್ತಿದ್ದೇನೆ. ಯಾಕೆ ಹೇಳು..? ನಿನಗಾಗಿ, ನಿನ್ನ ಮೇಲಿನ ಪ್ರೀತಿಗಾಗಿ. ಆ ಪ್ರೀತಿಯೇ ನನ್ನನ್ನು ಕಷ್ಟದಲ್ಲೂ ಇಂದಿಗೂ ನಡೆಯುವುದನ್ನು ನಿಲ್ಲದಂತೆ ಮಾಡುತ್ತದೆ.
ನಿನ್ನದು ಯಾವಾಗಲೂ ಲೆಕ್ಕಾಚಾರದ ಬದುಕು. ಇಂಚುಪಟ್ಟಿಯನ್ನು ಹಿಡಿದು ಗೆರೆ ಕೊರೆದ ಹಾಗೆ ಬದುಕಬೇಕು ಎನ್ನುತ್ತಿದ್ದವಳು. ನನ್ನದೋ... ಯಾವುದೇ ಶಿಸ್ತಿಗೆ ಒಳಪಡದ, ಯಾವ ಅಂಕೆಗೂ ಸಿಗದ, ಸೂತ್ರ ಹರಿದ ಗಾಳಿ ಪಟದ ಚಲನೆಯಂಥ ಬದುಕು. ನಮ್ಮಿಬ್ಬರಿಗೂ ಸಾಮ್ಯತೆ ಏನು ಎಂದು ಹುಡುಕ ಹೊರಟರೆ ಏನಂದರೆ ಏನೂ ಇರಲಿಲ್ಲ.  ಆದರೂ ನಮ್ಮಿಬ್ಬರಲ್ಲೂ ಪ್ರೀತಿ ಎಂಬ ಗಾಢವಾದ  ಬಂಧ. ನಮ್ಮ ನಡುವೆ ಇದ್ದ ಎಲ್ಲ ವೈರುಧ್ಯಗಳನ್ನು ಮೀರಿ ನಮ್ಮನ್ನು ಒಂದಾಗಿಸಿತ್ತು. ನನ್ನ ಅಸ್ತವ್ಯಸ್ತ ಬದುಕಿನ ರೀತಿಯನ್ನು ನೀನು ಸಹಿಸಿಕೊಂಡಿದ್ದು ನಿಜವಾಗಲೂ ಅದು ನಿನ್ನ ಸಹನೆಯ ಶಕ್ತಿಯ ಪ್ರತೀಕ.  ಕಾಡು, ಗುಡ್ಡ, ಬೆಟ್ಟ, ಪ್ರಾಣಿ, ಪಕ್ಷಿ, ಚಿಟ್ಟೆ, ಕ್ರೀಮಿ, ಕೀಟಗಳ ಫೋಟೋ ತೆಗೆಯುತ್ತೇನೆ ಎಂದು ಬಗಲಿಗೆ ಕ್ಯಾಮೆರಾ ಏರಿಸಿಕೊಂಡು ಹೋರಡುತ್ತಿದ್ದವನು ನಾನು. ಕ್ಯಾಮೆರಾ ಮೇಲಿನ ಮೋಹ, ಒಂದೊಂದು ಸಾರಿ ನಿನ್ನ ಮೇಲಿನ ಪ್ರೀತಿಗಿಂತ ಹೆಚ್ಚಾಗುತ್ತಿತ್ತು. ಆಗ ನೀನು ತಮಾಷೆಯಾಗಿ, ‘‘ನಿನಗೆ ಕ್ಯಾಮೆರಾ ಫಸ್ಟ್ ಲವ್. ನಾನು ಸೆಕೆಂಡ್ ಲವ್,’’ ಎಂದು ಕಿಚಾಯಿಸುತ್ತಿದ್ದೆ. ಆದರೆ, ಈಗ ನಿಜ ಹೇಳುತ್ತೇನೆ ಕೇಳು; ನನ್ನ ಜೀವನದಲ್ಲಿ ಎಂದಿಗೂ ನೀನೇ ಮೊದಲ ಪ್ರೀತಿ. ನನ್ನ ಅಷ್ಟೂ ಜೀವನದ ಅನುಭವದಲ್ಲಿ ನಿನಗೆ ಕೊಟ್ಟ ಸ್ಥಾನ ನನ್ನ ಕ್ಯಾಮೆರಾಗೂ ಕೊಟ್ಟಿಲ್ಲ. ಆಫ್‌ಕೋರ್ಸ್, ಕ್ಯಾಮೆರಾ ಇಸ್ ಮೈ ಪ್ಯಾಶನ್... ಹಾಗಂತ ಸುಮಾರು ಸಾರಿ ಹೇಳಲು ಯತ್ನಿಸಿದ್ದೆ. ಆದರೆ, ಹೇಳಲು ಆಗಲಿಲ್ಲ. ಅದನ್ನು ಈಗ ಹೇಳುತ್ತಿದ್ದೇನೆ; ನೀನು ಕೇಳಿಸಿಕೊಳ್ಳುತ್ತೀಯ ಎಂಬ ನಂಬಿಕೆ ನನಗಿಲ್ಲ. ಕೇಳಿಸಿಕೊಂಡರೂ ಅದರೊಳಗಿನ ಭಾವನೆಗಳು ಎಬ್ಬಿಸುವ ಸಂಟರಗಾಳಿ ನಿನ್ನನ್ನು ತಾಕಲು ಸಾಧ್ಯವಿಲ್ಲ. ನೀನೀಗ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಸಹನಾಮೂರ್ತಿ. ಈ ಜಗತ್ತಿನ ಆಗು ಹೋಗುಗಳ ಅರಿವು ನಿನಗಿಲ್ಲ. ಅಷ್ಟ್ಯಾಕೆ... ನಾನಾರು ಎಂಬುದು ಗೊತ್ತಿರಲಿಕ್ಕಿಲ್ಲ. ಅಂಥ ಸ್ಥಿತಿಯಲ್ಲಿದ್ದೀಯ.
ನೀನು ಹೇಳಿದ ಹಾಗೇ ಬದುಕುತ್ತಿದ್ದೇನೆ ಎಂದರೆ ನಂಬಲಾರೆ. ಅಂದು ನೀನು ಹೇಳಿದ ಹಾಗೆ ಬದುಕು ಅಂದುಕೊಂಡ ರೀತಿಯಲ್ಲಿ ಬದುಕುತ್ತಿದ್ದೇನೆ. ನನಗೀಗ, ಯಾವುದೇ ಬೆಟ್ಟ, ಗುಡ್ಡ, ಪ್ರಾಣಿ, ಪಕ್ಷಿಗಳು ಆಕರ್ಷಕವಾಗಿ ಕಾಣುತ್ತಿಲ್ಲ. ನನ್ನ ಕ್ಯಾಮೆರಾ ಲೆನ್ಸ್ ಮೇಲೆ ಧೂಳು ಕೂತಿದೆ. ನನಗೆ ಕ್ಯಾಮೆರಾ ಮೋಹ ಇನಿತು ಇಲ್ಲ. ಹೇಗೆ ಇರುತ್ತೇ ಹೇಳು..? ನನ್ನ ಕ್ಯಾಮೆರಾ ಕಣ್ಣಿಗೆ ಶಕ್ತಿ ತುಂಬಿದವಳು ನೀನೇ ನಿತ್ರಾಣ ಸ್ಥಿತಿಯಲ್ಲಿರುವಾಗ? ನೀನು ಜತೆಯಲ್ಲಿದ್ದಾಗ, ಸಣ್ಣ ಕೀಟವೂ ನನ್ನ ಕಣ್ಣೀಗೆ ಅಮೇಜಿಂಗ್ ಪ್ರಾಣಿಯಾಗಿ ಕಾಣುತ್ತಿತ್ತು. ಅದಕ್ಕಿರುವ ಬದುಕುವ ಛಲ ರೋಮಾಂಚನಗೊಳಿಸುತ್ತಿತ್ತು. ಎಲ್ಲ ಸಣ್ಣ ಸಣ್ಣ ಖುಷಿಗಳು ದೊಡ್ಡ ಸಂಭ್ರಮಗಳಾಗುತ್ತಿದ್ದವು; ದೊಡ್ಡ ದುಃಖಗಳೆಲ್ಲವೂ ಸಣ್ಣ ಸಣ್ಣ ತೊಂದರೆಗಳಾಗಿ ಬದಲಾಗುತ್ತಿದ್ದವು. ಅದಕ್ಕೆಲ್ಲ ನೀನೇ ಕಾರಣ. ನಿನ್ನ ನಿಷ್ಕಲ್ಮಷ ಪ್ರೇಮ ಕಾರಣ. ಆದರೆ ಈಗ...?

***
ಫೇಸ್‌ಬುಕ್‌ನಲ್ಲಿ ಮಹಿಳೆಯರು ಸೀರೆಯಲ್ಲಿ ಮಿಂಚುತ್ತಿರುವ ಫೋಟೋಗಳನ್ನು ಅಪ್‌ಲೋಡ್ ಮಾಡಿ, ತಮ್ಮ ಸ್ನೇಹಿತರಿಗೆ ಖೋ ಕೊಟ್ಟು ಅದನ್ನೊಂದು ಆಂದೋಲನ ರೀತಿ ಮಾಡುತ್ತಿದ್ದಾರೆ. ಇದನ್ನು ನೋಡುತ್ತಿದ್ದಂತೆ ನನಗೆ ಅಪರಾಧಿ ಭಾವನೆ ಒತ್ತರಿಸಿ ಬರುತ್ತಿದೆ. ಎಲ್ಲವೂ ಚೆನ್ನಾಗಿ ಇದ್ದರೆ, ನಿನ್ನವು ಇಂಥ ಹಲವು ಫೋಟೋಗಳು ನಿನ್ನ ಪ್ರೊಫೈಲ್‌ನಲ್ಲಿ ರಾರಾಜಿಸುತ್ತಿದ್ದವು. ಯಾಕೆಂದರೆ, ಸೀರಿಯುಟ್ಟರೆ, ನಿನ್ನ ಸೌಂದರ್ಯ ದುಪ್ಪಟ್ಟಾಗುತ್ತಿತ್ತು. ಅದಕ್ಕೊಂದು ಚೆಲವು ಬರುತ್ತಿತ್ತು, ಒಲವು ಮೂಡುತ್ತಿತ್ತು. ಆದರೆ, ನನ್ನಿಂದಾದ ತಪ್ಪಿನಿಂದ ನೀನು ಇಂಥ ಎಲ್ಲ ಚಿಕ್ಕ ಚಿಕ್ಕ ಸಂತೋಷಗಳನ್ನು ಅನುಭವಿಸಲು ಆಗುತ್ತಿಲ್ಲ. ಅಂದು ನಿನ್ನ ಮಾತು ಕೇಳಬೇಕಿತ್ತು. ಅಂಥ ಅರ್ಜೆಂಟ್ ಏನೂ ಇರಲಿಲ್ಲ. ವಿದೇಶದಿಂದ ಬರುತ್ತಿದ್ದ ಗೆಳೆಯನೊಬ್ಬನನ್ನು ಆರಾಮವಾಗಿ ಕರೆದುಕೊಂಡು ಬರಬಹುದಿತ್ತು. ಬಹಳ ದಿನಗಳ ನಂತರ ನನ್ನ ಬಾಲ್ಯದ ಸ್ನೇಹಿತ ನನ್ನನ್ನು ಮಾತ್ರ ಭೇಟಿಯಾಗಲು ಬರುತ್ತಿದ್ದಾನೆಂಬ ಹುಚ್ಚು ಸಂತೋಷದ ನಡುವೆ ನಿನ್ನ ಎಚ್ಚರಿಕೆಯ ಮಾತುಗಳು ಕೇಳಿಸಲಿಲ್ಲ. ನಿಧಾನವಾಗಿಯೇ ಕಾರು ಓಡಿಸಿದ್ದರೆ ಎಲ್ಲವೂ ಚೆನ್ನಾಗಿರುತ್ತಿತ್ತು. ಅತಿಯಾದ ಉತ್ಸಾಹ, ಹುಚ್ಚು ಸಂತೋಷದಲ್ಲಿ ಎಲ್ಲೇ ಮೀರಿ ಓಡುತ್ತಿದ್ದ ಕಾರು ದಿಕ್ಕು ತಪ್ಪದೇ ಇರುತ್ತದೆಯೇ? ತಪ್ಪೀತು. ಖಂಡಿತ ಏನು ಆಗ ಬಾರದಿತ್ತೋ... ಅದೇ ಆಗಿತ್ತು. ನನಗೆ ಎಚ್ಚರವಾದಾಗ ಎಲ್ಲವೂ ಸ್ಪಷ್ಟವಾಗಿತ್ತು. ಚಿಕ್ಕ ಪುಟ್ಟ ಗಾಯಗಳಿಂದ ನಾನು ಬಚಾವಾಗಿದ್ದೆ. ಆದರೆ, ನೀನು ಜೀವಂತ ಹೆಣವಾಗಿದ್ದೆ. ‘‘ಶಿ ಈಸ್ ಇನ್ ಕೋಮಾ,’’ ಎಂದು ಡಾಕ್ಟರ್ ಹೇಳಿದಾಗ ನನಗೆ ಇಡೀ ಆಕಾಶವೇ ಮೈ ಮೇಲೆ ಕಳಚಿ ಬಿದ್ದ ಅನುಭವ. ಕಳೆದ ಒಂದು ವರ್ಷದಿಂದ ನಿನ್ನ ಸಾನ್ನಿಧ್ಯದಲ್ಲೇ ಇದ್ದೇನೆ. ಯಾವ ಕ್ಯಾಮೆರಾವೂ ನಿನ್ನ ಸಾನ್ನಿಧ್ಯದಿಂದ ನನ್ನನ್ನು ಬೇರ್ಪಡಿಸುತ್ತಿಲ್ಲ. ಯಾವ ಪಕ್ಷಿ, ಪ್ರಾಣಿಯ ಅಮೇಜಿಂಗ್ ಆಗಿ ಕಾಣುತ್ತಿಲ್ಲ.  ನನಗೆ ಈಗಿರುವ ಒಂದೇ ಧ್ಯಾನ. ಅದು ನಿನ್ನ ಸಾನ್ನಿಧ್ಯದಲ್ಲಿ, ನಿತ್ಯ ನೆನಪುಗಳನ್ನು ಮೆಲಕು ಹಾಕುವುದಷ್ಟೆ  ನನ್ನ ಒಂದೇ ಸರಳ ರೇಖೆಯಲ್ಲಿ ಎಳೆಯಬಹುದಾದ ಜೀವನ. ನನ್ನ ಜೀವನಕ್ಕೀಗ ಈಗೊಂದು ಅರ್ಥ ಸಿಕ್ಕಿದೆ. ನನ್ನ ಉಸಿರು ಇರೋವರಿಗೆ ನಿನಗೆ ಉಸಿರಾಗಿರುವುದು. ಅದನ್ನು ಬಿಟ್ಟು ನನಗೆ ಬೇರೆ ಯಾವುದೇ ಮೋಹಗಳಿಲ್ಲ...
***
ಹೀಗೆ ಹೇಳಿಕೊಳ್ಳುತ್ತಾ ಆಕೆಯ ತೊಡೆಯ ಮೇಲೆ ಕಣ್ಣೀರಿಟ್ಟವನಿಗೆ, ಆಕೆಯ ಸ್ಪಂದನ ಏನೋ ಎನ್ನುವಂತೆ, ಕಣ್ಣು ಸ್ವಲ್ಪ ಸಂಚಲನಗೊಂಡಿದ್ದು ಅವನ ಅರವಿಗೆ ಬರಲಿಲ್ಲ. ಆದರೆ, ಆತನೇ ತೆಗೆದ ಫೋಟೋದಲ್ಲಿದ್ದ ಅದಾವುದೋ ಕಾಡು ಹಕ್ಕಿಯೊಂದು ಕಂಡು ಕಾಣದಂತೆ ಆಕೆಯ ಕಣ್ ಚಲನೆಯನ್ನು ನೋಡಿಯೂ ನೋಡಿದಂತಿತ್ತು. 

ಸೋಮವಾರ, ಮೇ 23, 2016

ನಾವು ಏನೋ ಅಂದುಕೊಳ್ಳುತ್ತೇವೆ, ಅದು ಇನ್ನೇನೋ ಆಗುತ್ತದೆ!

ಹುಡುಗನೊಬ್ಬನ ಗಜಲ್ ಗಳು-
ಯಾವುದೇ ಕಲ್ಮಶವಿಲ್ಲದೇ ನಿರ್ವ್ಯಾಜ ಪ್ರೀತಿಯಾಗಿದ್ದರೆ ನಾವು ಹೇಗೆ ದೂರು ಆಗುತ್ತಿದ್ದೆವು..

- ಪ್ರದ್ಯುಮ್ನ
ಒಲಿದ ಹೃದಯಗಳು ಒಂದಾದರೆ ಬಾಳು ಇಂಪಾದ ಸಂಗೀತದಂತೆ ಕೇಳಿಸಲಾರಂಭಿಸುತ್ತದೆ. ಒಮ್ಮೊಮ್ಮೆ ಅಪಸ್ವರಗಳೇ ಹೆಚ್ಚಾದರೆ ಬಾಳು ನಾನೊಂದು ತೀರ... ನೀನೊಂದು ತೀರ... ಆಗುವುದು ಗ್ಯಾರಂಟಿ. ಆಗ ಕುಹಕ ಮಾತು, ವ್ಯಂಗ್ಯ ನಿಮ್ಮನ್ನು ಚುಚ್ಚಿ ಹೈರಾಣಾಗಿಸುತ್ತವೆ. ಕ್ರಿಕೆಟಿಗ ವಿರಾ್ ಕೊಹ್ಲಿ ಮತ್ತು ನಟಿ ಅನುಷ್ಕಾ ಜತೆಗಿನ ಮಧುರ ಬಾಂಧವ್ಯ ಇಂಥ ಅಪಸ್ವರದ ಮಧ್ಯೆ ಹೊರಳಾಡುತ್ತಿರುವಾಗಲೇ ಅವಳನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣ ಅಪಹಾಸ್ಯ ಮಾಡಿ ನಗುತ್ತಿತ್ತು. ಆದರೆ, ಒಲಿದ ಹೃದಯಕ್ಕೆ ಉಂಟಾದ ನೋವನ್ನು ನೋಡಿ ಸುಮ್ಮನಿರದ ಕೊಹ್ಲಿ, ``ನಿಮಗೆ ನಾಚಿಕೆಯಾಗಲ್ವಾ...? ಆಕೆ ನನಗೆ ಯಾವಾಗಲೂ ಸಕಾರಾತ್ಮಕ ಭಾವನೆಯನ್ನೇ ಕಟ್ಟಿಕೊಟ್ಟಿದ್ದಾಳೆ,'' ಎಂದು ಹೂಂಕರಿಸಿದಾಗಲೇ ಕುಹಕಿಗಳು ಸುಮ್ಮನಾದರು. ಇದೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ, ನಮ್ಮಿಬ್ಬರಿಗೂ ಹಾಗೆ ಆಗಿತ್ತಲ್ಲವೇ? ನಾವು ಒಲಿದ ಸ್ವರಾಗಳಾಗಿ ಇಂಪಾದ ಸಂಗೀತ ಹಾಡುತ್ತಿರುವಾಗಲೇ ಅಪಸ್ವರ ನಾದ ಹೆಚ್ಚಾಗಿ ಸಂಗೀತ ಹಳ್ಳ ಹಿಡಿದು, ನಾವಿಬ್ಬರೂ ದೂರ ಆದದ್ದು. ಆಗ ಕಾಲೇ್ ಕಾರಿಡಾ್ನಲ್ಲಿ ನಿನ್ನ ಬಗ್ಗೆ ಆಡಿಕೊಂಡವರೆಷ್ಟು? ನಿನ್ನಡೆಗೆ ಕುಹಕ ನಗೆ ಚೆಲ್ಲಿ, ವ್ಯಂಗ್ಯವಾಗಿ ನಕ್ಕವರೆಷ್ಟು..? ಆಗ ನಾನು ಕೂಡ ಥೇ್ ಕೊಹ್ಲಿ ರೀತಿಯಲ್ಲಿ ಪ್ರತಿಕ್ರಿಯಿಸಿದ್ದೆ. ಕೊಹ್ಲಿ ಈ ಘಟನೆಯು ಆ ನೆನಪುಗಳನ್ನೆಲ್ಲ ಒಂದು ಸಾರಿ ತಿರುವಿ ಹಾಕಿದವು. ಸಿನಿಮಾ ಥಿಯೇಟ್ನ ಪ್ರೊಜೆಕ್ಟ್ನಲ್ಲಿ ಫಿ್‌ಮಗಳು ಒಂದೊಂದಾಗಿ ಒಂದರ ಹಿಂದೆ ಒಂದು ಓಡುವ ಹಾಗೆ ನನ್ನ ಮನಪಟಲದಲ್ಲಿ ಈ ನೆನಪುಗಳು ಮಿಂಚಿ ಮಾಯವಾದವು.
ನಾವಿಬ್ಬರೂ ಎಷ್ಟು ಅನ್ಯೋನ್ಯವಾಗಿದ್ದೆವಲ್ಲ. ನಮ್ಮನ್ನು ನೋಡಿ ಇಡೀ ಕ್ಯಾಂಪಸ್ಸೇ ಹೊಟ್ಟೆಕಿಚ್ಚು ಪಡುತ್ತಿತ್ತು. ಕಾಲೇ್ ಚರ್ಚಾಕೂಟಗಳಲ್ಲಿ ನನ್ನನ್ನು ಮೀರಿಸಿದವರೇ ಇರಲಿಲ್ಲ. ಸುತ್ತಲಿನ ಕಾಲೇಜುಗಳಲ್ಲೂ ಪ್ರಖ್ಯಾತಿ ಹಬ್ಬಿತ್ತು. ಚರ್ಚಾಕೂಟದಲ್ಲಿ ಭಾಗವಹಿಸಿದೆನೆಂದರೆ ಅಲ್ಲಿ ಪ್ರಥಮ ಬಹುಮಾನವನ್ನು ಮೊದಲೇ ಮೀಸಲಿಡುತ್ತಿದ್ದರು. ಆದರೆ, ಅಂದಿನ ಆ ಚರ್ಚಾಕೂಟದಲ್ಲಿ ನಾನು ಸೋತು ಹೋಗಿದ್ದೆ. ಅದಕ್ಕೆಲ್ಲ ನೀನೇ ಕಾರಣ ಎಂದು ನನ್ನ ಸ್ನೇಹಿತರಾದಿಯಾಗಿ ಎಲ್ಲರೂ ಕಾರಿಡಾ್ನಲ್ಲಿ ಹಂಗಿಸುತ್ತಿದ್ದರು. ಇದನ್ನೆಲ್ಲ ಹೇಗೆ ಸಹಿಸಿಕೊಳ್ಳಲಿ ಹೇಳು? ನೀನು ಯಾವತ್ತೂ ನನ್ನ ಸಾಧನೆಗೆ ಅಡ್ಡಿಯಾದವಳೇ ಅಲ್ಲ. ನನ್ನ ಸ್ಫೂರ್ತಿ ನೀನು. ನನ್ನ ಯಶಸ್ಸಿನ ಹಿಂದಿನ ಶಕ್ತಿ ನೀನು. ಅದು ನಿನಗೂ ಗೊತ್ತಿತ್ತು. ಆದರೆ, ನೀನು ಮಾತ್ರ ಕಾರಿಡಾ್ ರೂಮ್ಗಳಿಗೆ ಬೆಲೆ ಕೊಟ್ಟು, ಬೆಲೆಕಟ್ಟಲಾಗದ ನನ್ನ ಸ್ನೇಹವನ್ನು ಪೂರ್ತಿ ಕಡಿದುಕೊಂಡೆ. ಇದ್ಯಾವ ನ್ಯಾಯ ಹೇಳು? ನಿನಗೆ ಹಂಗಿಸುತ್ತಿದ್ದವರೆಗೆಲ್ಲ ಸರಿಯಾಗಿಯೇ ನೀರಿಳಿಸಿದ್ದೆ. ಆದರೂ ನಮ್ಮಿಬ್ಬರ ಮಧ್ಯ ಆ ಇಂಪಾದ ಸಂಗೀತ ಮತ್ತೆ ಒಡಮೂಡಲೇ ಇಲ್ಲ. ನಮ್ಮಿಬ್ಬರ ಸ್ನೇಹ-ಪ್ರೀತಿ-ಪ್ರೇಮ ತಿಳಿ ಕೊಳದಲ್ಲಿ ರೂಮ್ ಕಲ್ಲುಗಳು ದೊಡ್ಡ ಅಲ್ಲೋಲ ಕಲ್ಲೋಲ ಅಲೆಗಳನ್ನು ಸೃಷ್ಟಿಸಿದ್ದವು. ಆ ಅಲೆಗಳ ಸುಳಿಯಿಂದ ನಾನು ಹೊರ ಬಂದೆ. ಆದರೆ ನೀನು ಮಾತ್ರ ಅದೇ ಸುಳಿಯಲ್ಲಿ ಆಳವಾಗಿ ಸಿಲುಕುತ್ತಾ, ಮತ್ತಷ್ಟು ಸುಕ್ಕಾಗುತ್ತಾ ಹೋದೆ.
ಈ ಘಟನೆಗಳನ್ನೆಲ್ಲ ಈಗ ರಿವೈಂ್ ಮಾಡಿ ನೋಡಿದಾಗ ಒಂದೊಂದು ಸಾರಿ ಸಿಲ್ಲಿ ಅನ್ನಿಸುತ್ತದೆ. ಮತ್ತೊಂದು ಸಾರಿ ನಾವಿಬ್ಬರೂ ಎಂಥ ಕುಹಕಕ್ಕೆ ಬಲಿಯಾದವೆಲ್ಲ ಎಂಬ ವ್ಯಥೆಯಾಗುತ್ತದೆ. ನಮ್ಮ ನಡುವಿನ ಬಾಂಧವ್ಯ ಅಷ್ಟು ಅಲ್ಪ ಕಾಲದ್ದಾಗಿತ್ತೆಂದರೆ ಅದು ಪೂರಿಪೂರ್ಣವಾಗಿರಲಿಲ್ಲ ಎಂದರ್ಥಲ್ಲವೇ? ಬಾಂಧವ್ಯದ ಬಿಲ್ಡಿಂ್ಗೆ ನಂಬಿಕೆ ಎಂಬ ತಳಪಾಯ ಗಟ್ಟಿಯಾಗಿರಲಿಲ್ಲ.  ಇಲ್ಲದಿದ್ದರೆ, ರೂಮ್ಗಳೆಂಬ ಸಣ್ಣ ಬಿರುಗಾಳಿಗೆ ಇಡೀ ಬಿಲ್ಡಿಂ್ ಕುಸಿದು ಬಿತ್ತು ಎಂದು ನಂಬುವುದಾದರೂ ಹೇಗೆ? ಆದರೆ, ಅದೇ ವಾಸ್ತವ ಅಲ್ಲವೇ? ನಂಬಲೇ ಬೇಕು. ನಂಬಿದ್ದೇನೆ ಕೂಡ. ಇದನ್ನು ಬಿಟ್ಟು ಇನ್ಯಾವ ದಾರಿ ಇತ್ತು ಹೇಳು ನನಗೆ? ಆದರೆ, ನೀನು ಮಾತ್ರ ಏನೂ ಆಗಿಯೇ ಇಲ್ಲ ಎನ್ನುವ ಹಾಗೇ ಇದ್ದೆ. ನಿನ್ನ ಮನಸ್ಸು ಅದ್ಹೇಗೆ ಅಷ್ಟೊಂದು ಕಠೋರವಾಗಿತ್ತು? ಕಿಂಚಿ್ ಆದರೂ ಕರುಣೆ ಗಾಳಿ ತಾಕಲಿಲ್ಲವೇ? ಬಹುಶಃ ತಾಕಿದ್ದರೆ ನನ್ನಂತೆಯೇ ನೀನು ಕುಹುಕಿಗಳಿಗೆಲ್ಲ ಒಂದು ಪಾಠ ಕಲಿಸುತ್ತಿದ್ದೆ. ಈಗೀಗ ನನಗನ್ನಿಸುತ್ತದೆ ನಮ್ಮಿಬ್ಬರದ್ದು ಒತ್ತಾಯಪೂರ್ವಕವಾಗಿ ನಂಬಿಸಿಕೊಂಡು ಪ್ರೀತಿಯಾಗಿತ್ತಾ.. ಸ್ನೇಹವಾಗಿತ್ತಾ ಅಂತ. ಸಹಜವಾದ ಮತ್ತು ಯಾವುದೇ ಕಲ್ಮಶವಿಲ್ಲದ ನಿರ್ವಾಜ್ಯ ಪ್ರೀತಿಯಾಗಿದ್ದರೆ ನಾವು ಹೇಗೆ ದೂರ ಆಗುತ್ತಿದ್ದೆವು?
ಒಂದು ವಿಷಯವನ್ನು ನೀನು ಮರೆತಿದ್ದೆ. ನನ್ನನ್ನು ಎಷ್ಟು ಸಲೀಸಾಗಿ ದಿಕ್ಕರಿಸಿ ಹೋದೆಯಲ್ಲ ನೀನು. ಆದರೆ, ನೀನಾದರೂ ಸುಖವಾಗಿದ್ದಾ? ಇಲ್ಲ. ಇರಲಿಲ್ಲ. ನಿಮ್ಮ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಅದ್ಯಾವುದೋ ಎಂಜಿನಿಯ್ನನ್ನು ಮದುವೆಯಾಗಿ ಮುಂಬಯಿಗೆ ಹಾರಿ ಹೋದೆ. ಎಲ್ಲರಂತೆ ನಾನು, ನಿನ್ನ ಜೀವನವನ್ನು ನೀನು ಕಟ್ಟಿಕೊಂಡೇ ಬಿಡು ಎಂದು ಭಾವಿಸಿ, ಅದೇ ಹಳೆ ನೆನಪುಗಳ ಕ್ಯಾಸೆ್ ಅನ್ನು ರೀವೈಂ್ ಮಾಡುತ್ತಾ ನನ್ನದೇ ಲೋಕದಲ್ಲಿ ಕಳೆದು ಹೋದೆ. ಹಳೇ ದೇಗುಲ, ಗೋರಿಗಳನ್ನು ಹುಡುಕಿಕೊಂಡು ಹೋದೆ. ಅವುಗಳ ಹಿಂದಿರುವ ಇತಿಹಾಸ ಕೆದಕುತ್ತಾ ನಮ್ಮಿಬ್ಬರ ಗತಪ್ರೇಮ ಮರೆಯಲು ಪ್ರಯತ್ನಿಸುತ್ತಿದ್ದೆ. ಈ ಕೆಲಸ ನನಗೆ ಒಂದಿಷ್ಟು ನೆಮ್ಮದಿ ಮತ್ತು ಇನ್ನೊಂದಿಷ್ಟು ಉತ್ಸಾಹ ತುಂಬುತ್ತಿತ್ತು. ಯಾಕೆ ಗೊತ್ತಾ? ಕೆಲವು ರಾಜರು, ಶ್ರೀಮಂತರು ತಮ್ಮ ಪ್ರೀತಿಯ ಪ್ರತೀಕವಾಗಿ, ಪತ್ನಿಯರ ನೆನಪಿಗೆ ಗುಡಿಯನ್ನೋ, ಗೋರಿಯನ್ನೋ ಕಟ್ಟಿ ತಮ್ಮ ಪ್ರೇಮವನ್ನು ಚಿರಸ್ಥಾಯಿಯಾಗಿಸಲು ಪ್ರಯತ್ನಿಸಿದ್ದರು. ಇಂಥವುಗಳ ಹಿಂದೆ ದಂತಕತೆಗಳು ಹುಟ್ಟಿಕೊಂಡು, ನಿರ್ವಾಜ್ಯ ಪ್ರೇಮವೆಲ್ಲ ಗಾಳಿಗೆ ತೂರಿ ಹೋಗಿತ್ತು. ಸ್ಥಾನಪಲ್ಲಟವಾದ ಪ್ರೇಮದ ಚುಕ್ಕೆಗಳನ್ನು ಸೇರಿಸಿ ಸುಂದರವಾದ ಕಲಾಕೃತಿ ರಚಿಸಲು ಪ್ರಯತ್ನಿಸುತ್ತಿದ್ದೆ. ತುಸು ಮಟ್ಟಿಗೆ ಯಶಸ್ವಿಯಾದೆ ಅಂದುಕೊಂಡರೂ ತಪ್ಪಿಲ್ಲ. ಆದರೆ, ಎದೆಯಾಳದಲ್ಲಿ ನೀನು ಬಿಟ್ಟು ಹೋದ ನೆನಪುಗಳು ಮಾತ್ರ ಸಾಯುತ್ತಲೇ ಇರಲಿಲ್ಲ. ಆಗೆಲ್ಲ ನಾನು ಇನ್ನಾವುದೋ ಗುಡಿಯನ್ನೋ, ಗೋರಿಯನ್ನೋ ಹುಡುಕಿಕೊಂಡು ಹೋಗುತ್ತಿದ್ದೆ.
ಅಂದೊಂದು ದಿನ ನಾನು ಯಾವುದನ್ನು ಕೇಳಬಾರದು ಎಂದುಕೊಂಡಿದ್ದೇನೋ ಅದೇ ಸುದ್ದಿಯನ್ನು ಕೇಳಬೇಕಾಯಿತು. ನೀನು ಊರಿಗೆ ಬಂದಿದ್ದು ಗೊತ್ತಾಯಿತು ನಿಜ. ಆದರೆ ನಿನ್ನನ್ನು ನೋಡುವ, ನಿನ್ನ ಎದುರಿಗೆ ಬರುವ ಧೈರ್ಯ ಇರಲಿಲ್ಲ. ವಿಧಿಯಾಟ ಬೇರೆನೇ ಅಲ್ಲವೇ? ಅದೊಂದು ಸಂಜೆ ಊರ ಹೊರಗಿನ ಗುಡಿಯಲ್ಲಿ ನೀನು ನಿನ್ನ ಅಮ್ಮನ ಜತೆ ನಿಂತಿದ್ದೆ,  ಆದರೆ, ನಿನ್ನ ನೋಡಿ ನನ್ನ ನಾನೇ ನಂಬಲಿಲ್ಲ. ನಿಜಕ್ಕೂ ಅದು ನೀನೇನಾ? ಹೇಗಿದ್ದೆ ನೀನು- ಬಳಕುವ ಬಳ್ಳಿ. ಸೂಜಿಮಲ್ಲಿಗೆಯಂಥವಳು. ಸೂಜಿಗಲ್ಲಿನವಳು. ಕಾಲೇ್ನಲ್ಲಿದ್ದಾಗ ಎಲ್ಲ ಹುಡುಗರು ಒಂದು ಕ್ಷಣವಾದರೂ ನಿನ್ನನ್ನು ನೋಡದೆ ಹೋಗುತ್ತಿರಲಿಲ್ಲ. ಅಂಥ ವ್ಯಕ್ತಿತ್ವ ನಿನ್ನದು. ಅವಳೇನಾ ನೀನು ಎಂಬ ಮಟ್ಟಿಗೆ ಬದಲಾಗಿದ್ದೆ. ಮುಖದಲ್ಲಿ ಕಳೆ ಇಲ್ಲ; ನಕ್ಕು ಎಷ್ಟೋ ದಿನಗಳವಾಗಿರುವ ಹಾಗಿತ್ತು. ಕೃಶ ಶರೀರದಲ್ಲಿ ಸುಮ್ಮನೇ ನೆಪಕ್ಕೆ ಮಾತ್ರ ಎನ್ನುವಂಥ ಜೀವ. ನಿನ್ನ ಜೀವನದಲ್ಲಿ ಹೀಗೆಲ್ಲ ಆಗಬಾರದೆಂದು ನಾನು ಬಯಸಿದ್ದೆ. ಆದರೆ, ಅದೇ ಆಗಿ ಹೋಗಿತ್ತು. ನಿನ್ನ ಇಂದಿನ ಪರಿಸ್ಥಿತಿಗೆ ಆ ನಿನ್ನ ಹಣ, ಹೆಣ್ಣುಬಾಕ ಗಂಡನೇ ಕಾರಣ ಎಂಬುದು ಗೊತ್ತಾಗಿದ್ದು ನಿನ್ನ ಗೆಳತಿಯಿಂದಲೇ. ಗೊತ್ತಿದ್ದು ಗೊತ್ತಿದ್ದು ನಿಮ್ಮ ಮನೆಯವರು ಅಂಥವನ ಖೆಡ್ಡಾಕ್ಕೆ ನಿನ್ನನ್ನು ಕೆಡವಿದ್ದರು ಎಂದು ಆಕೆ ಕಣ್ಣೀರಾಗಿದ್ದಳು.
ನೋಡು ಜೀವನವೇ ಹೀಗೆ. ನಾವು ಏನು ಅಂದುಕೊಂಡು ಹೋಗುತ್ತೇವೆ. ಅದು ಇನ್ನೇನೋ ಆಗುತ್ತದೆ. ಕಾರಿಡಾ್ಗಳಲ್ಲಿನ ಹಂಗಿಸುವ ಮಾತುಗಳನ್ನು, ರೂಮ್ಗಳನ್ನು ನೀನು ಅಷ್ಟು ಸೀರಿಯ್ ಆಗಿ ತೆಗೆದುಕೊಳ್ಳದಿದ್ದರೆ ಇಂದು ನಮ್ಮಿಬ್ಬರದೇ ಒಂದು ಪುಟ್ಟ ಸಂಸಾರ ಆನಂದ ಸಾಗರವಾಗಿರುತ್ತಿತ್ತು. ಆದರೆ, ಈಗ ಕಾಲ ಮಿಂಚಿ ಹೋಗಿದೆ. ಚಿಂತಿಸಿ ಫಲವಿಲ್ಲ ಎನ್ನುವ ಹಾಗಿಲ್ಲ. ನಿನ್ನ ನೆನಪಲ್ಲಿ ನಾನು ಇಂದಿಗೂ ಹಾಗೆಯೇ ಇದ್ದೇನೆ. ಅಂದು ಹೇಗಿದ್ದೇನೋ ಹಾಗೆ. ಮುಂದಿನ ನಿರ್ಣಯ ನಿನಗೆ ಬಿಟ್ಟದ್ದು.

ಸೋಮವಾರ, ಮೇ 2, 2016

ವೀಸಾ ಗದ್ದಲ್ಲದಲ್ಲಿ ಸಿಕ್ಕ ಇಸಾ

ಪೂರ್ವ ತುರ್ಕಿಸ್ತಾನ ಎಂದೂ ಕರೆಯಲಾಗುವ ಚೀನಾದ ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶದ ಪತ್ಯೇಕತಾವಾದಿ ನಾಯಕ ದೋಲ್ಕು್ ಇಸಾ ಅಲ್ಪ ಸಂಖ್ಯಾತ ಉಯಿಗ್ ಪಂಗಡದ ನಾಯಕ.

ದೋಲ್ಕು್ ಇಸಾ.
ಕಳೆದ ವಾರ ಭಾರತದ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಪ್ರಸಿದ್ಧಿಯಾದ `ಅಪರಿಚಿತ' ವ್ಯಕ್ತಿ ಇವರು. ಚೀನಾದಲ್ಲಿ ಸ್ವಾಯತ್ತ ಪ್ರಾಂತವಾಗಿರುವ ಕ್ಸಿ್ಜಿಯಾಂ್ ಸ್ವಂತ್ರಗೊಳ್ಳಲು ಹೋರಾಟ ನಡೆಸುತ್ತಿರುವ ನಾಯಕ ಇವರು. ಆದರೆ, ಕಮ್ಯುನಿ್‌ಟ ಚೀನಾ ಸರಕಾರಕ್ಕೆ ಇವರೊಬ್ಬ `ಮೋ್‌ಟ ವಾಂಟೆ್ ಟೇರರಿ ್‌ಟ'.
ಇತ್ತೀಚೆಗಷ್ಟೇ ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ಪ್ರಭಾವ ಬೀರುವ ಕೆಲಸಕ್ಕೆ ಕೈ ಹಾಕಿತ್ತು. ಪಠಾ್ಕೋ್ ವಾಯು ನೆಲೆ ದಾಳಿಯ ಪ್ರಮುಖ ಸಂಚುಕೋರ ಹಾಗೂ ಜೈಷೆ ಮೊಹಮ್ಮ್ ಉಗ್ರ ಸಂಘಟನೆಯ  ನಾಯಕ ಮಸೂ್ ಅಜ್ನನ್ನು ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನು ಭಾರತ ನಡೆಸಿತ್ತು. ಆದರೆ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ವಿಟೋ ಪವ್ ಹೊಂದಿರುವ ಚೀನಾ ಎಂದಿನಂತೆ ಭಾರತದ ಯತ್ನಕ್ಕೆ ಅಡ್ಡಗಾಲು ಹಾಕಿತ್ತು. ಚೀನಾದ ಈ ನಡೆ ಸಹಜ ಕೂಡ. ಪಾಕಿಸ್ತಾನ ಮತ್ತು ಚೀನಾ ಅತ್ಯಾಪ್ತ ರಾಷ್ಟ್ರಗಳೆಂಬುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಈ ವಿಷಯದಲ್ಲಿ ಕೊಂಚ ಮುಜಗರ ಎದುರಿಸಿದ್ದ ಭಾರತಕ್ಕೆ, ಚೀನಾಗೆ ತಿರುಗೇಟು ನೀಡಲು ಸಿಕ್ಕಿದ್ದ ಹೊಸ ಅಸ್ತ್ರವೇ ಈ `ದೋಲ್ಕು್ ಇಸಾ'.
ಅಮೆರಿಕ ನೆರವಿನಿಂದ ಭಾರತದ ಧರ್ಮಶಾಲಾದಲ್ಲಿ ಏಪ್ರಿ್ 30ರಿಂದ ಎರಡು ದಿನಗಳ ಕಾಲ ನಡೆದ `ಇನಿಶಿಯೇಟಿ್‌ಸ ಫಾ್ ಚೀನಾ' ಸಮಾವೇಶದಲ್ಲಿ ಪಾಲ್ಗೊಳ್ಳಲು ವಿಶ್ವ ಉಯಿಗು್ ಕಾಂಗ್ರೆ್(ಡಬ್ಲ್ಯೂಯುಸಿ)ನ ಪ್ರಧಾನ ಕಾರ್ಯದರ್ಶಿ ದೋಲ್ಕು್ ಇಸಾಗೆ ಆಹ್ವಾನ ನೀಡಲಾಗಿತ್ತು. ಇದಕ್ಕಾಗಿ ಇಸಾ ಭಾರತಕ್ಕೆ ಬರುವ ಸಿದ್ಧತೆ ನಡೆಸಿದ್ದರು. ವೀಸಾ ಕೂಡ ಸಿಕ್ಕಿತ್ತು. ಈ ವಿಷಯ ಭಾರತೀಯ ಮಾಧ್ಯಮಗಳಲ್ಲಿ `ಚೀನಾಗೆ ಭಾರತದ ಎದಿರೇಟು' ಎಂದು ಬಿಂಬಿತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಚೀನಾ; ಭಾರತದ ಮೇಲೆ ಒತ್ತಡ ತಂದು, ದೋಲ್ಕು್ಗೆ ನೀಡಿದ್ದ ವೀಸಾ ರದ್ದಾಗುವಂತೆ ನೋಡಿಕೊಂಡಿತು. ಇಸಾ ಚೀನಾಕ್ಕೆ ಬೇಕಾಗಿರುವ ಮೋ್‌ಟ ವಾಟೆಂ್ ಉಗ್ರ ನಾಯಕ. ಆತನ ವಿರುದ್ಧ ಇಂಟ್ಪೋ್ನಲ್ಲಿ ರೆ್ ಕಾರ್ನ್ ನೋಟಿ್ ನೀಡಲಾಗಿದೆ. ಅಂಥವನಿಗೆ ಹೇಗೆ ವೀಸಾ ನೀಡುತ್ತೀರಿ ಎಂದು ಪ್ರಶ್ನಿಸಿತು. ಚೀನಾದ ಒತ್ತಡಕ್ಕೆ ಕೊನೆಗೂ ಮಣಿದ ಭಾರತ, ಯಾವುದೇ ವಿವರ ನೀಡದೆ ದೋಲ್ಕು್ ಇಸಾ ಅವರಿಗೆ ನೀಡಲಾಗಿದ್ದ ವೀಸಾ ರದ್ದು ಮಾಡಿತು. ಅಲ್ಲಿಗೆ ಮತ್ತೊಂದು ಬಾರಿ ಭಾರತ ಅಂತಾರಾಷ್ಟ್ರೀಯವಾಗಿ ಮುಜಗರ ಎದುರಿಸುವಂತಾಯಿತು. ಯಾವುದೇ ದೂರದೃಷ್ಟಿ ಇಲ್ಲದೆ, ಭಾವನಾತ್ಮಕ, ಸೇಡಿನ ಕ್ರಮಗಳಿಂದ ನಿರ್ಧಾರ ಕೈಗೊಂಡರೆ ಇಂಥ ಮುಜಗರದ ಸನ್ನಿವೇಶಗಳು ಎದುರಿಸಲೇಬೇಕಾಗುತ್ತದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ.
ಇದೆಲ್ಲ ಸರಿ. ಆದರೆ, ಈ ದೋಲ್ಕು್ ಇಸಾ ಯಾರು? ಆತನ ಮೇಲೇಕೆ ಚೀನಾಗೆ ಮುನಿಸು? ಎಂಬಂಥ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಚೀನಾದ ವಾಯವ್ಯ ಭಾಗಕ್ಕಿರುವ ವಿಶಾಲವಾದ ಭೂ ಪ್ರದೇಶವೇ `ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶ.' ಖನಿಜಗಳು ಮತ್ತು ನೈಸರ್ಗಿಕ ಅನಿಲ ಹೇರಳವಾಗಿರುವ ಈ ಪ್ರದೇಶ ಚೀನಾಗೆ ಅಕ್ಷರಶಃ ಚಿನ್ನದ ಗಣಿ. ಈ ಪ್ರದೇಶದಲ್ಲಿ ಅನೇಕ ಪಂಗಡಗಳಿದ್ದು ಈ ಪೈಕಿ ಉಯಿಗು್ ಪಂಗಡದವರೇ ಹೆಚ್ಚಾಗಿದ್ದಾರೆ. ಚೀನಾದಲ್ಲಿ ಅಲ್ಪಸಂಖ್ಯಾತರಾಗಿರುವ ಇವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. `ವಿಶ್ವ ಉಯಿಗು್ ಕಾಂಗ್ರೆ್' ಎಂಬ ಸಂಘಟನೆ ಈ ಹೋರಾಟದ ನೇತೃತ್ವ ವಹಿಸಿಕೊಂಡಿದೆ. ಇದರ ಅಧ್ಯಕ್ಷ ರೆಬಿಯಾ ಖಾದಿ್. ಇವರು ಅಮೆರಿಕದಲ್ಲಿದ್ದಾರೆ. ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿಯೇ ಈ ದೋಲ್ಕು್ ಇಸಾ. ಸದ್ಯ ಜರ್ಮನಿಯಲ್ಲಿ ವಾಸವಾಗಿರುವ ಇಸಾ, ಪ್ರಜಾಪ್ರಭುತ್ವದ ಪರ ಹೋರಾಟಗಾರ. 1997ರಲ್ಲಿ ಚೀನಾದಿಂದ ಪಲಾಯನ ಮಾಡಿ ಜರ್ಮನಿಯಲ್ಲಿ ಆಶ್ರಯ ಪಡೆದರು. 2006ರಲ್ಲಿ ಜರ್ಮನಿ ಇವರಿಗೆ ಅಲ್ಲಿನ ಪೌರತ್ವ ನೀಡಿದೆ.
ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ವಿಶ್ವ ಉಯಿಗು್ ಕಾಂಗ್ರೆ್ ಚಟುವಟಿಕೆಗಳನ್ನು ಚೀನಾ ಸರಕಾರ ಉಗ್ರ ಕೃತ್ಯಗಳಂದೇ ಪರಿಗಣಿಸುತ್ತದೆ. ಹೀಗಾಗಿ, ಈ ಹೋರಾಟದಲ್ಲಿ ಪಾಲ್ಗೊಳ್ಳುವವರೆಲ್ಲರೂ ಉಗ್ರರೇ. ಕ್ಸಿ್ಜಿಯಾಂ್ಗೆ ಪೂರ್ವ ತುರ್ಕಿಸ್ತಾನ ಎಂದೂ ಕರೆಯಲಾಗುತ್ತದೆ. ಹಾಗೆ ನೋಡಿದರೆ, ವೀಸಾಗೆ ಸಂಬಂಧಿಸದಂತೆ ಇಸಾ ಇದೇ ಮೊದಲ ಬಾರಿಗೇನೂ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿಲ್ಲ. 2003ರಿಂದಲೇ ದೋಲ್ಕು್ ಚೀನಾದ ಉಗ್ರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉಯಿಗು್ರ  ಹೋರಾಟಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡಲು 2008ರಲ್ಲಿ ಬೀಜಿಂ್ನಲ್ಲಿ ನಡೆದ ಒಲಿಂಪಿಕ ಬಹಿಷ್ಕರಿಸುವಂತೆಯೂ ದೋಲ್ಕು್ ಕರೆ ನೀಡಿದ್ದರು. ಇದಕ್ಕೂ ಮುಂಚೆ 2006ರಲ್ಲಿ ತೈವಾ್ಗೆ ೇಟಿ ನೀಡಿ, ಅಲ್ಲಿನ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದು ಚೀನಾಕ್ಕೆ ಗೊತ್ತಾಗುತ್ತಿದ್ದಂತೆ ಒತ್ತಡ ತಂದು, ತೈವಾ್ ಪ್ರವೇಶವನ್ನು ನಿರಾಕರಿಸುವಂತೆ ಮಾಡಿತು. ಇದೇ ವೇಳೆ, ವಿಶ್ವ ಉಯಿಗು್ ಕಾಂಗ್ರೆ್ನ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ದೋಲ್ಕು್ ಹಿಂದೆ ಸರಿದರೆ ಅವರ ಮೇಲಿರುವ ನಿಷೇಧವನ್ನು ಹಿಂತೆಗದುಕೊಳ್ಳಲಾಗುವುದು ಎಂದೂ ಪ್ರಕಟಿಸಿತು. ಆದರೆ, ದೋಲ್ಕು್ ಇದಾವುದಕ್ಕೂ ಬಗ್ಗದೆ, ಉಯಿಗು್ ಪ್ರತ್ಯೇಕತೆಯ ಹೋರಾಟದ ಮುಂಚೂಣಿಯಲ್ಲೇ ಇದ್ದಾರೆ. ಇಸಾ ಮತ್ತೊಮ್ಮೆ ಇಂಥ ತೊಂದರೆಗೆ ಸಿಕ್ಕಿ ಹಾಕಿಕೊಂಡಿದ್ದು ದಕ್ಷಿಣ ಕೊರಿಯಾಗೆ ಹೋದಾಗ. ಅದು 2009ನೇ ಇಸ್ವಿ. ದಕ್ಷಿಣ ಕೊರಿಯಾದಲ್ಲಿ `ಏಷ್ಯಾ ಪ್ರಜಾಪ್ರಭುತ್ವೀಕರಣ ವಿಶ್ವ ವೇದಿಕೆ'ಯ ಸಮಾವೇಶ ಆಯೋಜನೆಯಾಗಿತ್ತು. ಇದಕ್ಕೆ ಇಸಾ ಕೂಡ ಆಮಂತ್ರಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ದಕ್ಷಿಣ ಕೊರಿಯಾಕ್ಕೆ ತೆರಳುತ್ತಿದ್ದಂತೆ ಅವರನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ಬಗ್ಗೆಯೂ ಇಸಾ ತಮ್ಮ ವಿರೋಧವನ್ನು ದಾಖಲಿಸಿದ್ದರು. ಅಲ್ಲದೆ, ಅ್ರೀಪ್ರಸೆಂಟೆ್ ಆ್ಯಂ್ ಪೀಪ್‌ಸ ಆರ್ಗನೈಷೇ್ ಕೂಡ, ದಕ್ಷಿಣ ಕೊರಿಯಾದ ಕ್ರಮವನ್ನು ಖಂಡಿಸಿತ್ತು. ಇಸಾ ವಿರುದ್ಧ ಚೀನಾ ಮಾಡುತ್ತಿರುವ ಆರೋಪಗಳೆಲ್ಲವೂ ನಿರಾಧಾರ. ಅವರು ಯಾವುದೇ ಉಗ್ರ ಚಟುವಟಿಕೆ ನಡೆಸಿಲ್ಲ ಮತ್ತು ಅಂಥ ಸಂಘಟನೆಗಳ ಜತೆ ಗುರುತಿಸಿಕೊಂಡಿಲ್ಲ ಎಂದು ಹೇಳಿತು. ಎರಡು ದಿನಗಳ ಕಾಲ ದಕ್ಷಿಣ ಕೊರಿಯಾ ವಶದಲ್ಲಿದ್ದ ಇಸಾರನ್ನು ಬಿಡುಗಡೆ ಮಾಡಲಾಯಿತಾದರೂ, ಅವರಿಗೆ ದಕ್ಷಿಣ ಕೊರಿಯಾ ಪ್ರವೇಶಕ್ಕೆ ಅವಕಾಶ ಸಿಗಲೇ ಇಲ್ಲ. ಇದೀಗ ಭಾರತಕ್ಕೆ ಪ್ರವೇಶಿಸುವ ವಿಷಯದಲ್ಲೂ ಇಸಾ ಇಂಥದ್ದೇ ಸಮಸ್ಯೆಯನ್ನು ಎದುರಿಸಿದ್ದಾರೆ.
ದೋಲ್ಕು್ ಇಸಾ ಅವರ ವೈಯಕ್ತಿಕ ಜೀವನದ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಆದರೆ, ಅವರು ವಿದ್ಯಾರ್ಥಿ ದೆಸೆಯಿಂದಲೂ ಹೋರಾಟರರಾಗಿದ್ದರು ಎಂಬುದಂತೂ ಸತ್ಯ. 1980ರ ದಶಕದಲ್ಲಿ ಅವರು ಕ್ಸಿ್ಜಿಯಾಂ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗಲೇ ಪ್ರಜಾಪ್ರಭುತ್ವ ಪರ ಹೋರಾಟಗಳನ್ನು ಸಂಘಟಿಸುತ್ತಿದ್ದರು. ಇದರಿಂದಾಗಿಯೇ ಅವರು ವಿಶ್ವವಿದ್ಯಾಲಯದಿಂದ ಹೊರಬೀಳಬೇಕಾಯಿತು. ಈ ವೇಳೆಯಲ್ಲಿ ಚೀನಾದ ಕಮ್ಯುನಿ್‌ಟ ಶಾಲೆಗಳಲ್ಲಿ ಕಲಿಯುತ್ತಿರುವ ಉಯಿಗು್ ಮಕ್ಕಳಿಗೆ, ಉಯಿಗು್ ಪಂಗಡದ ನಿಜವಾದ ಇತಿಹಾಸ, ಸಂಸ್ಕೃತಿ ತಿಳಿಸುವ ಪುಸ್ತಕಗಳನ್ನ ಹಂಚಲಾರಂಭಿಸಿದರು. ಇದು ಕೂಡ ಅಲ್ಲಿನ ಸರಕಾರದ ಕಣ್ಣು ಕೆಂಪಗಾಗುವಂತೆ ಮಾಡಿತು. ಅವರನ್ನು ಗಡಿಪಾರು ಮಾಡಿದ್ದರಿಂದ ಇಸಾ ಟರ್ಕಿಗೆ ತೆರಳಬೇಕಾಯಿತು. ಅರ್ಧಕ್ಕೆ ನಿಂತಿದ್ದ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಲು ನಿರ್ಧರಿಸಿದ ಇಸಾ, ಟರ್ಕಿಯ ಘಾಜಿ ವಿಶ್ವವಿದ್ಯಾಲಯದಿಂದ ಪಾಲಿಟಿಕ ಮತ್ತು ಸೋಸಿಯಾಲಾಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಕಮ್ಯುನಿ್‌ಟ ಸರಕಾರದ ಹತ್ತಿಕ್ಕುವ ಧೋರಣೆಯ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿರುವ ಇಸಾ, ಅಲ್ಪಸಂಖ್ಯಾತ ಉಯಿಗು್ ಮುಸ್ಲಿಮರ ಆಶಾಕಿರಣ. ಇಂದಲ್ಲ ನಾಳೆ, ಕ್ಸಿ್ಜಿಯಾಂ್ ಉಯಿಗು್ ಸ್ವಾಯತ್ತ ಪ್ರದೇಶ ಪೂರ್ವ ತುರ್ಕಿಸ್ತಾನವಾಗಿ ಬದಲಾಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಆದರೆ, ಅದು ಅಷ್ಟು ಸರಳವಲ್ಲ. ಟಿಬೆಟಿಯನ್ನರು ಮತ್ತು ಉಯಿಗು್ರು ಸಮಾನ ದುಃಖಿಗಳು. ಟಿಬೆಟಿಯನ್ನರು ಕೂಡ ಪ್ರತ್ಯೇಕತೆಗಾಗಿ ದಶಕಗಳಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಏಷ್ಯಾದಲ್ಲೇ ಆರ್ಥಿಕ ಬಲಾಢ್ಯ ರಾಷ್ಟ್ರವಾಗಿರುವ ಚೀನಾದಲ್ಲಿ  ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತುವ ಕೆಲಸವನ್ನು ದೋಲ್ಕು್ ಇಸಾ ಸೇರಿದಂತೆ ಕೆಲವರು ಮಾಡುತ್ತಿದ್ದಾರೆ. ಈ ಬೀಜ ಮೊಳಕೆಯೊಡೆಯುತ್ತಿದ್ದಂತೆ ಚೀನಾ ಅದನ್ನು ಹಿಸುಕುವುದರಲ್ಲಿ ಯಶಸ್ವಿಯಾಗುತ್ತದೆ. ವ್ಯಕ್ತಿಗಳನ್ನು ಹತ್ತಿಕ್ಕಬಹುದು. ಆದರೆ ಚಳವಳಿಗಳನ್ನ ಹತ್ತಿಕ್ಕಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ದೋಲ್ಕು್ ಇಸಾರಂಥ ಅನೇಕ ಹೋರಾಟಗಾರರು ಮಹತ್ವದ ವ್ಯಕ್ತಿಗಳು ಎನಿಸಿಕೊಳ್ಳುತ್ತಾರೆ.

This article published in VK on May 1, 2016 Edition