ಶುಕ್ರವಾರ, ಮೇ 23, 2008
ಸುರಿ ಮಳೆಯೇ ಸುರಿ
ಸುರಿ ಮಳೆಯೇ ಸುರಿ
ಮೈಗಂಟಿದ ಅವಳ
ಕಂಪು ತೊಳೆಯೋವರೆಗೂ
ನೆನಪುಗಳು ಮಾಸೋವರೆಗೂ
ಎಡಬಿಡದೆ ಸುರಿ... ಹರಿ...
ನಿನ್ನ ಹನಿಗಳನ್ನೇ
ಮುತ್ತುಗಳನ್ನಾಗಿ ಧಾರೆ
ಎರೆದೆ ಅವಳಿಗೆ
ಕನ್ನಿರೋರೆಸುವ ಕೈಗಳಾದೆ
ಹೃದಯ ಒಡೆದ ಮಾರಿಯಾದಳವಳು
ಸುರಿ ಮಳೆಯೇ ಸುರಿ... ಹರಿ...
ನನ್ನ ನೆರಳಾಗಿರುವೆಯೆಂದು
ಆಣೆ ಮಾಡಿದ್ದು ಈ ಮಳೆಯಲ್ಲೇ
ಮುರಿದಿದ್ದು ಇದೇ ಮಳೆಯಲ್ಲೇ
ನನ್ನ ಕನ್ನೀರಿಗೂ, ನಿನ್ನ
ಹನಿಗಳಿಗೂ ವ್ಯತ್ಯಾಸವೇ ಇಲ್ಲ
ಸುರಿ ಮಳೆಯೇ ಸುರಿ.. ಹರಿ..
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
ಮೂರೂ ಮಾದರಿಯ ಕ್ರಿಕೆಟ್ನಲ್ಲಿಭಾರತೀಯ ಕ್ರಿಕೆಟ್ ತಂಡದ ಕಾಯಂ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರೀಗ ಐಪಿಎಲ್ನಲ್ಲಿಸಿಎಸ್ಕೆ ತಂಡದ ನಾಯಕ. - ಮಲ್ಲಿಕಾರ್ಜುನ ತಿಪ್ಪಾ...
-
ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ, ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು, ಬಿಕ...
-
ಚೆನ್ನೈನಲ್ಲಿ ಇನ್ನೂ ಮುಂಗಾರು ಪ್ರಾರಂಭವಾಗಿಲ್ಲ. ಆದರೆ ಯೋಗರಾಜ್ ಭಟ್ಟರ "ಮುಂಗಾರು ಮಳೆ" ಭರ್ಜರಿಯಾಗಿ ಸುರಿಯುತ್ತಿದೆ.. ಹಾಗೇ ಸುಮ್ಮನೆ..! ಅರೆ ಏನು ಇದು.....
10 ಕಾಮೆಂಟ್ಗಳು:
ಕವಿತೆ ನವಿರಾಗಿದೆ. ಮಳೆಯಲ್ಲಿ ನೆನೆದಷ್ಟೇ ಖುಷಿಯಾಯಿತು. ಈಗ ಮಳೆ ನಿಂತು ಹೋದ ಮೇಲೆ ಎಂದು ಹಾಡಿಕೊಳ್ಳುತ್ತಿದ್ದೇನೆ............
ಧನ್ಯವಾದಗಳು.
ಜೋಮನ್.
ಸುರಿ ಮಳೆಯೇ.. ಸುರಿ.. ಹರಿ... ಮನದೊಳಗೇ ಸುರಿದು ಹರಿಯಿತು.. ಚೆನ್ನಾಗಿದೆ.
ತೇಜಸ್ವಿನಿ ಹೆಗಡೆ
hi
ನಮಸ್ಕಾರ ಮಲ್ಲಿಕಾರ್ಜುನ, ನಿಮಗೊಂದು ಆಹ್ವಾನ ಪತ್ರಿಕೆ.
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
ನಿಮ್ಮ ಬೆಂಗಳೂರುವಾಸಿ ಸ್ನೇಹಿತರಿಗೆ link forward ಮಾಡಿ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಕರಿಸಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ಗುರು
-ಕನ್ನಡಸಾಹಿತ್ಯ.ಕಾಂ ಬಳಗ
please accept my apologies since i don't know how to read or write Kannada...I'm afraid i can't leave you a comment but I'm sure whatever you've written is fantastic...i wanted to thank you for taking the time and reading my blog!!
Dear Tippeshi,
Namaskara. You know well who call you by that name. This is my first comment on your writings. This poem is pretty ordinary. I expect a better poem with metaphors, images etc.in your poems. Most likeable thing in your blog is the images you have used. They speak a lot than your poems. I want your poems to surpass those images. And also, your image is very good.
ಚೆನ್ನೈಲಂತೂ ಅಂಥಹ ಹೇಳಿಕೊಳ್ಳುವಂತಹ ಮಳೆಯಂತೂ ಇಲ್ಲ. :)ನಿಮ್ಮ ಕವನಕ್ಕೆ ಸ್ಪೂರ್ತಿಯಾದರೂ ಏನು ಅಂತಾ?.
ತುಂಬಾ ದಿನಾ ಆದ್ಮ್ಯಾಲೆ ನಿಮ್ಮ ಬ್ಲಾಗ್ ಸಿಕ್ತು. ಅದೂ ಜೊಮೋನ್ರಿಗೆ ಕಮೆಂಟು ಹಾಕಿದ್ದ ಕೊಂಡಿ ಹಿಡಿದು.
ತಪ್ಪಿಸಿಕೊಂಡುಬಿಟ್ಟಿದ್ರಿ. ಹ್ಮ. ಮತ್ತೇನ್ರಿ ಸರ್, ಕವನ ಛಂದ ಐತಿ. ಇನ್ನೂ ಸ್ವಲ್ಪ ಬೆಳೆಸಬಹುದಾಗಿತ್ತಲ್ಲಾ?
ಅಂದಂಗ, ಸಂತೋಷರ ಪ್ರಶ್ನೆ ಕರೆಕ್ಟ್ ಐತಲ್ರಿ ಮಲ್ಲಿಕಾರ್ಜುನ ಭಾಯ್.
kavana chennaagide. itara kavanagaLoo oLLeyadive
Hello my dear Frien Mallikarjun Tippar "Suri Male Suri"enb kavan cannagi baradiruvi.Nanage tumba like ayitu.Ninage innu cannagi hadu bareyuv Shakti nidali endu aa devaralli prarthisuttene.
Your lovely friend Pintu
ಕಾಮೆಂಟ್ ಪೋಸ್ಟ್ ಮಾಡಿ