ಛೇ.. ಅತಿ ಆತ್‍ಪಾ ಈ ಜಾಗತಿಕರಣ ಹಾವಳಿ... ಅಂತ ತಿಪ್ಪಣ್ಣ ಆ ಕಡೆಯಿಂದ ಗುಣಗತ್ತಾ ಬಂದ. ಯಾಕೋ ತಿಪ್ಪಣ್ಣ ಅಂಥದ್ದೇನಾತೀಗ.. ಹಂಗ್ಯಾಕ್ ಗೋಣಗ್ಲಾಕತ್ತಿ ಅಂಥ ನಾನು ನನ್ನದ ಮಾಸ್ತರ್ ಠೀವಿಯೋಳಗ್ ಅವಂಗ್ ಕೇಳಿದೆ.
ಏನ್ ಬಿಡ್ರಿ ಮಾಸ್ತರ್ ಈ ಜಾಗ್ತಿಕರಣ ಬಾಳಾತ್ರಿ.. ಇಂದಿನ ಪೆಪರ್ ನೋಡಿರೇನ್ ನೀವ್.. ಚೆನ್ನೈಯೋಳಗ ಯಾವ್ದೋ ಹೋಟಲ್ದಾಗ್ ಪರದೇಶಿ ಹಜಾಮರ ಬಂದಾರಂತ್... ಅಲ್ರೀ ಮಾಸ್ತರ್ ಇಲ್ಲಿನ್ ಹಜಾಮರೇನು ಸರಿಯಾಗಿ ಕಷ್ಟ್ ಮಾಡಾಂಗಲ್ಲಂತಿ ತಿಳ್ಕೋಂಡಾರೇನ್ರಿ ಈ ಸರಕಾರದವ್ರೋ.. ಅಂತಂದ್..........
ಓಹಾ ಇದಾ ವಿಚಾರ.. ಅಂತೇಂದಾನ್ದ್ರೂ ಬೆಳಿಗ್ಗೆ ನಾನು ಈ ಸುದ್ಧಿ ಓದಿದ್ದೇ. ಈಗ ತೆಲೆಯೋಳಗ ಈ ವಿಚಾರ ಗುಂಯಿಗಡ್ಲಿಕತ್ತು.
ಅಲ್ಲೀ ಮಾಸ್ತರ್, ನಮ್ಮ ನೀರ್ ಸೋಪ ಹಚ್ಚಿ ಕೆರಿತಾರ್.. ಅವರೇನ್ ಬಂಗಾರ ಹಚ್ಚಿ ಕೇರಿತಾರ್.. ಇವತ್ತ ಚೈನೈದಾಗ ಬಂದಾರ್ ಬೆಂಗಳೂರಗೆ ಬರ್ತಾರ್...ನಾಡಿದ್ದ ನಮ್ಮೂರಿಗೆ ಬರ್ತಾರಿವ್ರು.. ಆಗ ನಮ್ಮ ಗತಿ ಏನ್ರೀ ಅಂತ್ ತನ್ನ ಜೀವನೋಪಾಯದ ದೂರಾಲಚೆನೆಯಲ್ಲಿದ್ದ ತಿಪ್ಪಣ್ಣ.
ಹೌದೋ ತಿಪ್ಪಣ್ಣ ನೀ ಹೇಳೂದು ಖರೇ ಅದ. ಜಾಗ್ತಿಕರಣದಿಂದಾಗಿ ನಮ್ಮ ಊರಾಗೀನ ಶೆಟ್ರೀಗೂ ಉಳಿಗಾಲ ಇಲ್ಲ. ವಾಲ್ಟ ಮಾರ್ಟ್ ಅಂತೋನ್ನದು ಒಂದು ದೊಡ್ಡ ಕಂಪನಿ ಭಾರತಕ್ಕ್ ಬರೂದೈತಿ. ಆಗ ನೋಡಿ ನಮ್ಮ ಚಿಲ್ಲರೆ ಅಂಗಡಿ ಇಟ್ಕೋಂಡವರೆಲ್ಲಾ ಬಕ್ಕಾ ಬರ್ಲೆ ಬಿಳ್ತಾರ. ಹಂಗ್ಯ ಈಗ ನಾವಲ್ಯಾಗರಿದೂ ಪರಿಸ್ಥಿ ಬರಬೌದುಪಾ ಅಂತಂದೆ.
ಅವನು ಏನೋನೂ ಅನ್ತಾ ತನ್ನ ಕಟಿಂಗ್ ಶಾಪ್ ಹಾದಿ ಹೊಡೆದ ಹೊರಟ. ನನ್ನಾಕೆ ಸ್ಕೂಲಿಗೆ ಟೈಮಾಯ್ತು ಬನ್ನಿ ಎಂದು ಕರೆದಳು ನಾನು ಎದ್ದು ಒಳ ಹೋದೆ.
-ಮಲ್ಲಿಕಾರ್ಜನ್
ಬುಧವಾರ, ಫೆಬ್ರವರಿ 21, 2007
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
-
ಫಾಲ್ಗುಣಿ ನಾಯರ್ 50 ನೇ ವಯಸ್ಸಿನಲ್ಲಿ ಆರಂಭಿಸಿದ ‘ ನೈಕಾ ’ ಈಗ ಲಕ್ಷ ಕೋಟಿ ರೂ . ವೌಲ್ಯದ ಕಂಪನಿ . ಉದ್ಯಮದ ಹಿನ್ನೆಲೆ ಇಲ್ಲದೇ ಅವರು ಯಶಸ್ವಿ ಉದ್ಯಮಿಯಾದ ಕತೆ ಇದು ....
-
ಶೋಷಿತರ ಪರ ನಿಲ್ಲುವ ನ್ಯಾಯವಾದಿಯ ಕತೆಯ ಸಿನಿಮಾ ‘ ಜೈ ಭೀಮ್ ’ ಸದ್ದು ಮಾಡುತ್ತಿದೆ . ನೈಜ ಕತೆಯನ್ನಾಧರಿಸಿದ ಈ ಚಿತ್ರದ ಅಸಲಿ ಹೀರೊ ಜಸ್ಟೀಸ್ ಕೆ . ಚಂದ್ರು . ...
-
- ಮಲ್ಲಿಕಾರ್ಜುನ ತಿಪ್ಪಾರ ಪಂಜಾಬ್ ಅನ್ನು ಸೇರಿಸಿಕೊಂಡು ಉತ್ತರ ಭಾರತದ ಕೆಲವು ರಾಜ್ಯಗಳನ್ನೊಳಗೊಂಡ ಖಲಿಸ್ತಾನ್ ಪ್ರತ್ಯೇಕ ರಾಷ್ಟ್ರಕ್ಕಾಗಿ ಹುಟ್ಟಿಕೊಂಡಿದ್ದೇ ಖಾಲ್...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ