ಶುಕ್ರವಾರ, ಮಾರ್ಚ್ 6, 2015

ಭೂಸ್ವಾಧೀನ: ‘ಪರಿವಾರ’ದ ವಿರೋಧ ಮುಚ್ಚಿಟ್ಟು ಕಾಂಗ್ರೆಸ್ ದೂಷಣೆ ಏಕೆ?

ಒಪ್ಪಿಕೊಳ್ಳೋಣ. ದೇಶದ ಅಭಿವೃದಿಟಛಿಗೆ ಕೈಗಾರಿಕೆಗಳು ಬೇಕು. ಲೆಕ್ಕವಿಲ್ಲ ದಷ್ಟು ಅವಕಾಶ ಸೃಷ್ಟಿಯಾಗುವ ದಿನಮಾನ ಗಳಲ್ಲಿ ನಾವು ಬದುಕುತ್ತಿದ್ದೇವೆ. ಒಂಚೂರು ನಿರ್ಲಕ್ಷ್ಯ ವಹಿಸಿದರೂ ಹಿಂದೆ ಬೀಳುತ್ತೇವೆ. ಹಾಗೆಂದ ಮಾತ್ರಕ್ಕೆ, ಕೃಷಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಅದನ್ನೇ ನಂಬಿ ಬದುಕುತ್ತಿರುವ ಕೋಟ್ಯಂತರ ರೈತರ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳದೇ ಹೋದರೆ ಅದು ಕೂಡ ವ್ಯರ್ಥ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ಹವಣಿಸುತ್ತಿರುವ ಭೂ ಸ್ವಾಧೀನ ಸುಗ್ರೀವಾಜ್ಞೆ ಮೇಲ್ನೋಟಕ್ಕೆ ರೈತ ಪರ, ಅಭಿವೃದಿಟಛಿ ಪರ ಕಂಡರೂ ಆಂತರ್ಯದಲ್ಲಿ ಬೇರೆಯದ್ದೇ ರೈತರ ಕೈ ಕಚ್ಚುವ ಆಯಾಮಗಳಿವೆ. ಹಾಗಾಗಿಯೇ ದೇಶದ ಎಲ್ಲ ರೈತ ವರ್ಗ, ಸಂಘಟನೆಗಳು, ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಇದನ್ನು ಖಡಾಖಂಡಿತವಾಗಿ ಖಂಡಿಸುತ್ತಿವೆ.
‘ಗುಜರಾತ್ ಭೂ ಸ್ವಾಧೀನ ಪರಿ, ಇದು ವಿಶ್ವಾಸ ಇಡಬಹುದಾದ ದಾರಿ’ ಲೇಖನದಲ್ಲಿ ಶ್ರೀನಿವಾಸ ರಾವ್ ಅವರು ಪ್ರತಿಪಾದಿಸಿರುವಂತೆ ಕೇವಲ ಕಾಂಗ್ರೆಸ್ ಮಾತ್ರ ಈ ಸುಗ್ರೀವಾಜ್ಞೆಯನ್ನು ವಿರೋಧಿಸುತ್ತಿಲ್ಲ. ಒಂದು ವೇಳೆ, ಕಾಂಗ್ರೆಸ್ ಮಾತ್ರ ವಿರೋಧಿಸುತ್ತಿದ್ದರೆ ನರೇಂದ್ರ ಮೋದಿ ಕೂಡ ಸುಗ್ರೀವಾಜ್ಞೆಯನ್ನು ಅಷ್ಟೊಂದು ಪ್ರತಿಷ್ಠೆಯಾಗಿ ಪರಿಗಣಿಸುತ್ತಿರಲ್ಲಿಲ್ಲ. ಕಾಂಗ್ರೆಸ್ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ ಎಂದು ಸುಮ್ಮನಿರಬಹುದಿತ್ತು.
ಆದರೆ, ಎನ್‌ಡಿಎ ಮಿತ್ರ ಪಕ್ಷಗಳಾದ ಶಿರೋಮಣಿ ಅಕಾಲಿ ದಳ ಮತ್ತು ಶಿವಸೇನೆ ಕೂಡ ಈ ಸುಗ್ರೀವಾಜ್ಞೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಜೊತೆಗೆ ಈಗಿನ ಸ್ಥಿತಿಯಲ್ಲೇ ಕಾಯ್ದೆಯಾಗುವುದಕ್ಕೆ ತಮ್ಮ ವಿರೋಧವಿದೆ ಎಂದು ಹೇಳಿವೆ. ಈ ಪಕ್ಷಗಳನ್ನು ಬಿಟ್ಹಾಕಿ. ಈ ಎರಡೂ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗೋ ಸ್ಕರವೇ ವಿರೋ ಧಿ ಸು ತ್ತಿವೆ ಎಂದಿಟ್ಟುಕೊಳ್ಳೋಣ. ಬಿಜೆಪಿಯ ಮಾತೃಸಂಸ್ಥೆ ಯಾದ ಆರ್‌ಎಸ್ ಎಸ್‌ನ ಭಾರತೀಯ ಕಿಸಾನ್ ಸಂಘ (ಬಿಕೆಎಸ್), ಭಾರತೀಯ ಮಜ್ದೂರ್ ಸಂಘ ಮತ್ತು ಸ್ವದೇಶಿ ಜಾಗರಣ ಮಂಚ್ ಕೂಡ ವಿರೋಧ ವ್ಯಕ್ತಪಡಿಸಿವೆ. ಇದಕ್ಕೇನಂತೀರಿ? ಇಷ್ಟೆಲ್ಲ ವಿರೋಧ ಕ್ತವಾಗುತ್ತಿದೆಯೆಂದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿ ಖಂಡಿತವಾಗಿಯೂ ರೈತ ಹಿತಾಸಕ್ತಿ ವಿರೋಧಿ ಅಂಶಗಳು ಇರಲೇಬೇಕು ಅಲ್ಲವೇ? ಭೂಮಿ ಕೊಡುವ ರೈತನಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ, ಅತ್ಯಂತ ಶೀಘ್ರದಲ್ಲೇ ಪರಿಹಾರ ನೀಡುತ್ತೇವೆ ಎಂಬುದು ಮಾತ್ರವೇ ರೈತ ಪರ ಅಂಶವೇ? ಹೀಗೆ, ಕೇವಲ ಹಣದಾಸೆಗೆ ಭೂಮಿ ನೀಡಿದ ರೈತರ ಸ್ಥಿತಿ ಈಗ ಹೇಗಿದೆ ಎಂಬುದನ್ನು ತಾವು ಆಲಮಟ್ಟಿ ಅಣೆಕಟ್ಟೆ ಸಂತ್ರಸ್ತರ ಸದ್ಯದ ಸ್ಥಿತಿ ಚೂರು ಗಮನಿಸಿದರೆ ಅರ್ಥವಾದೀತು. ಇಂಥ ಸ್ಥಿತಿ ದೊಡ್ಡ ದೊಡ್ಡ ಯೋಜನೆಗಳಿಗಾಗಿ ಭೂಮಿ ನೀಡಿದ ದೇಶದ ಬಹುತೇಕ ರೈತರದ್ದಾಗಿದೆ. ಸರ್ಕಾರವೇ ಆಗಿರಲಿ, ಖಾಸಗಿ ಕಂಪನಿಗಳೇ ಆಗಿರಲಿ, ಭೂಮಿ ಪಡೆಯುವಾಗ ಮನೆಗೊಬ್ಬರಿಗೆ ಕೆಲಸ ಕೊಡುತ್ತೇವೆ, ಆಸ್ಪತ್ರೆ ಕಟ್ಟಿ ಕೊಡುತ್ತೇವೆ, ಶಾಲೆ ಕಟ್ಟಿಸ್ತೀವಿ, ರಸ್ತೆ ಮಾಡುತ್ತೇವೆ ಎಂದು ಹೇಳುತ್ತಾರೆ. ಈ ಭರವಸೆಗಳು ಈಡೇರಿವೆಯೇ? ಖಂಡಿತ ಇಲ್ಲ. ಕಾಂಗ್ರೆಸ್ ಇಲ್ಲವೇ ಎಡಪಕ್ಷಗಳ ಜತೆ ಗುರುತಿಸಿಕೊಂಡಿರುವ ರೈತ ಸಂಘಟನೆಗಳ ವಿರೋಧವನ್ನು ಕೂಡ ಒಂದು ಹಂತದಲ್ಲಿ ತಳ್ಳಿ ಹಾಕಬಹು ದಿತ್ತು. ಆದರೆ, ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘಗಳೂ ಅಷ್ಟೇ ಪ್ರಬಲವಾಗಿ ವಿರೋಧಿಸುತ್ತಿವೆ. ಭಾರತೀಯ ಕಿಸಾನ್ಸಂಘವಂತೂ ೨೫೦ ಸಂಸದರಿಗೆ ಪತ್ರ ಬರೆದು, ಸುಗ್ರೀವಾಜ್ಞೆಯನ್ನು
ಬೆಂಬಲಿಸದಂತೆ ಕೋರಿವೆ. ಇನ್ನೂ ಆಸಕ್ತಿಕರ ಸಂಗತಿ ಎಂದರೆ, ಸಂಘ ಯಾವ ಯಾವ ಸಂಸದರನ್ನು ಕೇಳಿಕೊಂಡಿದೆಯೋ ಅವರೆಲ್ಲರೂ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ ಎನ್ನುತ್ತಾರೆ ಭಾರತೀಯ ಕಿಸಾನ್ಸಂ ಘದ ಅಧ್ಯಕ್ಷ ಪ್ರಭಾಕರ್ ಕೇಳ್ಕರ್. ಅಂದರೆ, ಕೇವಲ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು ಮಾತ್ರವಲ್ಲದೆ, ಸಂಸದರು ಕೂಡ ಇದಕ್ಕೆ ತಮ್ಮ ಅಸಮ್ಮತಿ ತೋರುತ್ತಿದ್ದಾರೆ ಎಂದರ್ಥವಲ್ಲವೇ? ಅಷ್ಟೇ ಅಲ್ಲ, ಸುಗ್ರೀವಾಜ್ಞೆ ಖಂಡಿತವಾಗಿಯೂ ಕಾರ್ಪೊರೇಟ್ ಕಂಪನಿಗಳ ಪರವಾಗಿಯೇ ಇದೆ ಎಂಬುದು ಖಚಿತವಾಗುತ್ತಿದೆ.
ಶ್ರೀನಿವಾಸ್ ರಾವ್ ಅವರು ತಮ್ಮ ಲೇಖನದಲ್ಲಿ ಈಗಿರುವ ಸುಗ್ರೀವಾಜ್ಞೆ ಗುಜರಾತ್‌ನಲ್ಲಿ ಈಗಾಗಲೇ ಜಾರಿಯಲ್ಲಿರುವ ಕಾಯ್ದೆಯ ಸಂಗತಿಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿದೆ. ಅಲ್ಲಿ ರೈತರು ಇದನ್ನು ಒಪ್ಪಿಕೊಂಡಿರುವಾಗ ದೇಶದ ಇತರೆ ರೈತರು ಯಾಕೆ ಒಪ್ಪಿಕೊಳ್ಳಬಾರದು ಎಂಬ ಧಾಟಿಯಲ್ಲಿ ಹೇಳಿದ್ದಾರೆ. ಇದು ಒಪ್ಪತಕ್ಕ ಮಾತಲ್ಲ. ಗುಜರಾತ್ ರೈತರು ಒಪ್ಪಿಕೊಂಡ ತಕ್ಷಣ ಬೇರೆಯವರು ಒಪ್ಪಿಕೊಳ್ಳಲೇಬೇಕೆಂಬ ಸರ್ವಾಧಿಕಾರದ ದನಿ ಸಲ್ಲ. ಇನ್ನು ಸುಪ್ರೀಂ ಕೋರ್ಟ್‌ನ ಉದಾಹರಣೆ ನೀಡಿದ್ದಾರೆ. ಆದರೆ, ಕೋರ್ಟ್ ಆ ಮಾತು ಹೇಳಬೇಕಾದರೆ, ಯಾವ ಸಂದರ್ಭದಲ್ಲಿ ಮತ್ತು ಏತಕ್ಕಾಗಿ ಹಾಗೆ ಹೇಳಿದೆ ಎಂಬುದನ್ನು ಕೂಡ ಅಷ್ಟೇ ಮುಖ್ಯವಾಗುತ್ತದೆ. ಅದೇ ರೀತಿ, ಈ ಸುಗ್ರೀವಾಜ್ಞೆ ವಿರುದಟಛಿ ಕಾಂಗ್ರೆಸ್‌ನ ಪಿತೂರಿಯೇ ಹೆಚ್ಚಾಗಿ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅದನ್ನು ಒಪ್ಪಿಕೊಳ್ಳಲಾಗದು. ಅದು ಅಷ್ಟೇ ಆಗಿದ್ದರೆ ಈ ಪರಿ, ಇಷ್ಟೊಂದು ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿರಲಿಲ್ಲ. ಅಣ್ಣಾ ಹಜಾರೆ ಕೂಡ ಧರಣಿಗೆ ಧುಮುಕುತ್ತಿರಲಿಲ್ಲ. ದೇಶದ ರೈತ ಸಂಘಟನೆಗಳು ಒಂದೇ ದನಿಯಲ್ಲಿ ಮಾತನಾಡುತ್ತಿರಲಿಲ್ಲ. ಭ್ರಷ್ಟಾಚಾರ ವಿರುದಟಛಿ ಚಳವಳಿ ನಡೆಸಿದ ಅಣ್ಣಾ ಹಜಾರೆ ಆಗ ಬಿಜೆಪಿಗೆ ಹೀರೋ ಆಗಿದ್ದರು. ಈಗ ಭೂಸ್ವಾಧೀನ ಸುಗ್ರೀವಾಜ್ಞೆ ವಿರುದಟಛಿ ದನಿ ಎತ್ತುತ್ತಿದ್ದಂತೆ ಅವರು ವಿಲನ್ ಥರ
ಕಾಣಿಸುತ್ತಿದ್ದಾರೆ. ಎಂಥ ವಿಪರ್ಯಾಸ ನೋಡಿ!
ಅಷ್ಟಕ್ಕೂ ಈ ಸುಗ್ರೀವಾಜ್ಞೆಗೆ ಯಾಕೆ ವಿರೋಧ ವ್ಯಕ್ತವಾಗುತ್ತಿದೆಯೆಂದರೆ: ೨೦೧೪ ಜನವರಿ ೧ರಿಂದ ಜಾರಿಯಾಗಿರುವ ಛಿ ್ಕಜಿಜಠಿ ಠಿಟ ಊಜ್ಟಿ ಇಟಞಛ್ಞಿಠಿಜಿಟ್ಞ ಚ್ಞ ಖ್ಟಚ್ಞಚ್ಟಛ್ಞ್ಚಿ ಜ್ಞಿ ಔಚ್ಞ ಅಟ್ಠಿಜಿಜಿಠಿಜಿಟ್ಞ, ್ಕಛಿಚಿಜ್ಝಿಜಿಠಿಠಿಜಿಟ್ಞ ಚ್ಞ ್ಕಛಿಛಿಠಿಠ್ಝಿಛಿಞಛ್ಞಿಠಿ ಕಾಯ್ದೆಗೆ ಸಂಬಂಧಿಸಿದಂತೆ ತರಲಾಗಿರುವ ಸುಗ್ರೀವಾಜ್ಞೆಯಲ್ಲಿ ಕೆಲವು ಅಂಶಗಳು ಸಂಪೂರ್ಣವಾಗಿ ರೈತ ಹಿತಾಸಕ್ತಿ ಯನ್ನು ಕಡೆಗಣಿಸಿವೆ. ಅದರಲ್ಲೂ ವಿಶೇಷವಾಗಿ ಸೆಕ್ಷನ್ ೧೦(ಎ)ಗೆ ಸಂಬಂಧಿಸಿ ದಂತೆ, ಕಾಯ್ದೆಯಲ್ಲಿ ಹೇಳಿರುವ ರಾಷ್ಟ್ರೀಯ
ಹೆದ್ದಾರಿ, ಭದ್ರತೆ, ರಕ್ಷಣೆ, ಗ್ರಾಮೀಣ ಮೂಲಭೂತ ಸೌಕರ್ಯ,
ಕೈಗಾರಿಕಾ ಕಾರಿಡಾರ್‌ಗಳಿಗೆ ಸಂಬಂಧಿಸಿದಂತೆ ಈ ಭೂಸ್ವಾಧೀನ ಮಾಡುವಾಗ ರೈತರ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಲೇ ಬೇಕಿಲ್ಲ. ಈ ಹಿಂದೆ ಸರ್ಕಾರಿ ಪ್ರಯೋಜ ನಕ್ಕೆ ಭೂಸ್ವಾಧೀನ ಮಾಡಿಕೊಳ್ಳುವಾಗ ಸಂಬಂಧಿಸಿದ ಶೇ.೭೦ರಷ್ಟು ಮತ್ತು ಖಾಸಗಿ ಉದ್ದೇಶಕ್ಕಾಗಿ ಸ್ವಾಧೀನ ಮಾಡಿಕೊಳ್ಳುವಾಗ ಶೇ.೮೦ರಷ್ಟು ರೈತರ ಒಪ್ಪಿಗೆ ಪಡೆಯಲೇಬೇಕಿತ್ತು. ಈಗಿರುವ ಸುಗ್ರೀವಾಜ್ಞೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಸರ್ಕಾರಕ್ಕೆ ಬೇಕಾದ ಜಮೀನನ್ನು ನೇರವಾಗಿ ಸ್ವಾಧೀನಪಡಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಈ ಹಿಂದೆ ಇದ್ದ ಕಾಯ್ದೆಯಲ್ಲಿ ಸೋಷಿಯಲ್ ಇಂಪ್ಯಾಕ್ಟ್ ಅಸೆಸ್ ಮೆಂಟ್(ಎಸ್‌ಎಐ) ಕೂಡ ಮಾನ್ಯ ಮಾಡಬೇಕಾದ
ಅಗತ್ಯವಿಲ್ಲ. ಸ್ವಾಧೀನ ಪ್ರಕ್ರಿಯೆಯ ವೇಳೆ ನಿಯಮಗಳನ್ನು ಉಲ್ಲಂಘಿಸಿದ ಯಾವುದೇ ಅಧಿಕಾರ ವಿರುದಟಛಿ ನೇರವಾಗಿ ಕ್ರಮ ಕೈಗೊಳ್ಳುವ ಅಧಿಕಾರವಿತ್ತು. ಈಗಿನ ತಿದ್ದುಪಡಿಯಲ್ಲಿ ಹಾಗೇನಾದರೂ ಆದರೆ, ಅದಕ್ಕೆ ಸರ್ಕಾರದಿಂದ ಒಪ್ಪಿಗೆ ಪಡೆಯಲೇಬೇಕು. ಒಂದು ವೇಳೆ, ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಕೈಗಾರಿಕೆಗಳನ್ನು ೫ ವರ್ಷಗಳವರೆಗೂ ಸ್ಥಾಪಿಸಲಿಲ್ಲ ಎಂದಿಟ್ಟುಕೊಳ್ಳಿ. ಆಗ, ಮತ್ತೆ ಸ್ವಾಧೀನಕ್ಕೆ ಮೊದಲಿನಿಂದ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದರೆ, ಈಗ ಈ ಮಿತಿಯನ್ನು ತೆಗೆದು ಹಾಕಲಾಗಿದೆ. ಒಮ್ಮೆ ಸ್ವಾಧೀನವಾದರೆ ಮುಗೀತು. ಅದು ಸರ್ಕಾರದ ವಶದಲ್ಲೇ ಇರುತ್ತದೆ. ಹೀಗೆ, ಭೂಮಿಯನ್ನು ಸರ್ಕಾರದ ಉದ್ದೇಶಕ್ಕಾಗಿ ಇಲ್ಲವೇ ಖಾಸಗಿ ಉದ್ದೇಶಕ್ಕಾಗಲಿ ವಶಪಡಿಸಿಕೊಂಡಾಗ, ರೈತರು ತಮ್ಮ ಜಮೀನಿನ ಹಕ್ಕನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಇಂಥ ಸೂಕ್ಷ್ಮವಾದ ಅನೇಕ ಸಂಗತಿಗಳು ಮೋದಿ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿವೆ. ಈ ಎಲ್ಲದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕೆಂಬುದು ಎಲ್ಲರ ಅಪೇಕ್ಷೆ. ಕೇವಲ ವಶಪಡಿಸಿಕೊಂಡ ಭೂಮಿಗೆ ಪಾರದರ್ಶಕವಾಗಿ, ಶೀಘ್ರವಾಗಿ ಹಣ ನೀಡುತ್ತೇವೆ, ನೀವು ಭೂಮಿ ಕೊಡಿ ಎಂದರೆ ಹೇಗೆ? ಸ್ವಾಧೀನಕ್ಕೆ ಇದೇ ಪ್ರಮುಖ ಸಂಗತಿಯಾದರೆ ಹೇಗೆ? ಭೂ ಸ್ವಾಧೀನ ನಂತರ ಸಂತ್ರಸ್ತರಾಗುವ ಜನರ ಸ್ಥಿತಿ ಏನಾಗಬೇಡ? ಇಂಥ ಎಲ್ಲ ಅಂಶಗಳ ಬಗ್ಗೆ
ಚರ್ಚೆಯಾಗದೆ, ‘ಮೇಕ್ ಇನ್ ಇಂಡಿಯಾ’ಗೋಸ್ಕರ, ಅತಿ ಕಡಿಮೆ ಅವಧಿಯಲ್ಲೇ ಜನರಿಗೆ ‘ಅಚ್ಛೇ ದಿನಗಳ ್ಛಛಿಛ್ಝಿ’ ಕೊಡುವುದಕ್ಕೆ ಫಲವತ್ತಾದ ಕೃಷಿ ಭೂಮಿಯನ್ನು ಕೂಡ ಕೊಡಲೇಬೇಕು ಎಂಬ ಸರ್ಕಾರದ ಸರ್ವಾಧಿಕಾರದ ಧೋರಣೆ ವಿರುದಟಛಿ ಸಿಡಿದೇಳುವುದು ಅಪರಾಧವೇ? ಪ್ರಧಾನಿ ಮೋದಿ ಎಲ್ಲವನ್ನೂ ಸರಿಯಾಗೇ ಮಾಡುತ್ತಾರೆ. ಅವರನ್ನು ನಂಬಿ ಎಂದರೆ ಹೇಗೆ? ಒಂದು ಕಾಯ್ದೆಯಾಗಿ ರೂಪಗೊಳ್ಳಬೇಕಿದ್ದರೆ ಅದು ಸಾರ್ವಜನಿಕವಾಗಿ ಚರ್ಚೆಯಾಗಲೇಬೇಕು. ಅದನ್ನೇ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು, ರೈತ ಸಂಘಟನೆಗಳು ಕೇಳುತ್ತಿವೆ. ಅದನ್ನೇ ತಪ್ಪು ಎಂದರೆ ಹೇಗೆ?

ಕಾಮೆಂಟ್‌ಗಳಿಲ್ಲ: