- ಮಲ್ಲಿಕಾರ್ಜುನ ತಿಪ್ಪಾರ
ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಈಗಲೂ ಜಗತ್ತಿನ ಅತ್ಯಂತ ಜನಪ್ರಿಯ ಮೆಸೆಂಜರ್ ಆ್ಯಪ್ ಎನ್ನುವುದು ನಿರ್ವಿವಾದ. ಆದರೆ, ಯಾವಾಗ ವಾಟ್ಸ್ ಆ್ಯಪ್ನಲ್ಲಿರುವ ಮಾಹಿತಿಯನ್ನು ಫೇಸ್ಬುಕ್ ಜತೆ ಹಂಚಿಕೊಳ್ಳಬೇಕು ಎಂಬ ನೀತಿಯನ್ನು ತರುವುದಾಗಿ ಫೇಸ್ಬುಕ್ ಹೇಳಿತೋ ಆಗ ಬಳಕೆದಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಪರಿಣಾಮ, ಫೇಸ್ಬುಕ್ ವಾಟ್ಸ್ಆ್ಯಪ್ ಪ್ರೈವೆಸಿ ಪಾಲಿಸಿಯನ್ನು ಒಂದಿಷ್ಟು ಕಾಲ ಮುಂದೂಡಿದೆ. ಏತನ್ಮಧ್ಯೆ, ಸಿಗ್ನಲ್ ಮತ್ತು ಟೆಲಿಗ್ರಾಮ್ನಂಥ ಪರ್ಯಾಯ ಮೆಸೆಂಜರ್ ಆ್ಯಪ್ಗಳ ಬಗ್ಗೆ ಜನರು ಹೆಚ್ಚೆಚ್ಚು ಮೋಹ ಬೆಳೆಸಿಕೊಳ್ಳುತ್ತಿದ್ದಾರೆ. ಸದ್ಯ 56 ಲಕ್ಷ ಕ್ಕೂ ಅಧಿಕ ಟೆಲಿಗ್ರಾಮ್ ಆ್ಯಪ್ ಡೌನ್ಲೋಡ್ ಆಗಿದ್ದರೆ, ಸಿಗ್ನಲ್ನ ಈ ಪ್ರಮಾಣ 75 ಲಕ್ಷ ಕ್ಕೇರಿಕೆಯಾಗಿದೆ. ಇದೆಲ್ಲವೂ ವಾಟ್ಸ್ಆ್ಯಪ್ಗೆ ಪರ್ಯಾಯವಾಗಿ ಜನರು ಕಂಡುಕೊಳ್ಳುತ್ತಿರುವ ಡಿಜಿಟಲ್ ದಾರಿಗಳಾಗಿವೆ.
ವಾಟ್ಸ್ಆ್ಯಪ್ ಪ್ರೈವೆಸಿ ಪಾಲಿಸಿ ಘೋಷಣೆ ಬಳಿಕ ಸಿಗ್ನಲ್ ಮತ್ತು ಟೆಲಿಗ್ರಾಮ್ಗೆ ಸಿಕ್ಕಾಪಟ್ಟೆ ಬಳಕೆದಾರರು ಹೆಚ್ಚುತ್ತಿರುವ ಸಂಗತಿಗಳು ಈಗ ಗುಟ್ಟಾಗಿ ಉಳಿದಿಲ್ಲ. ಹಾಗೆಂದಮಾತ್ರಕ್ಕೆ ಈ ಎರಡೂ ಆ್ಯಪ್ಗಳು ಗರಿಷ್ಠ ಸುರಕ್ಷಿತವಾಗಿವೆಯೇ? ಖಂಡಿತ ಇಲ್ಲ. ಇಲ್ಲೂಒಂದಿಷ್ಟು ಆತಂಕಗಳಿವೆ. ಆದರೆ, ವಾಟ್ಸ್ಆ್ಯಪ್ನ ಹೊಸ ಪ್ರೈವೆಸಿ ಪಾಲಿಸಿಯಷ್ಟು (ಈಗ ಮುಂದೂಡಲಾಗಿದೆ) ಆತಂಕಕಾರಿಯಲ್ಲ! ಇದು ಒಂದು ಬಾಜುವಿನ ಚರ್ಚೆ; ಮತ್ತೊಂದು ಬಾಜು ನೋಡುವುದಾದರೆ, ಟೆಲಿಗ್ರಾಮ್ ಅನ್ನು ಅತ್ಯಂತ ಸುರಕ್ಷಿತವಾಗಿ ಬಳಸುವುದು ಹೇಗೆ ಪ್ರಶ್ನೆ ಮೂಡುತ್ತದೆ. ನಿಮ್ಮ ಮಾಹಿತಿಯನ್ನು ಬೇರೆಯವರು ನೋಡದಂತೆ ಅಥವಾ ನಿಮ್ಮ ಖಾತೆಯನ್ನು ಹೆಚ್ಚು ಸುರಕ್ಷಿತವಾಗಿಸಲು ಕಂಪನಿಯೇ ಒದಗಿಸುವ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಆ ಪೈಕಿ ‘ಟು ಸ್ಟೆಪ್ ವೆರಿಫಿಕೇಷನ್ ಕೂಡ ಒಂದು.
ಟು ಸ್ಟೆಪ್ ವೆರಿಫಿಕೇಷನ್
ಹೇಗೆ?
ಮೊದಲಿಗೆ ಸ್ಮಾರ್ಟ್ಫೋನ್ನಲ್ಲಿಟೆಲಿಗ್ರಾಮ್ ಆ್ಯಪ್ ಓಪನ್
ಮಾಡಿ. ಬಳಿಕ ಎಡಗಡೆ ಸ್ವೈಪ್ ಮಾಡುವ ಮೂಲಕ ಮೆನು ಓಪನ್ ಮಾಡಿ ಇಲ್ಲವೇ ಹೆಂಬರ್ಗರ್
ಐಕಾನ್ ಮೇಲೆ ಟ್ಯಾಪ್ ಮಾಡಿ.
ಆಗ ಸೆಟ್ಟಿಂಗ್ಸ್ಗೆ ಹೋಗುತ್ತೀರಿ. ಸೆಟ್ಟಿಂಗ್ಸ್ ಮೆನುವಿನಲ್ಲಿಪ್ರೈವೆಸಿ ಮತ್ತು ಸೆಕ್ಯುರಿಟಿ
ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ಟು
ಸ್ಟೆಪ್ ವೆರಿಫಿಕೇಷನ್ ಆಯ್ಕೆ ಮೇಲೆ ಟ್ಯಾಪ್
ಮಾಡಿ. ಪಾಸ್ವರ್ಡ್ ಹಾಕಿದ ಬಳಿಕ
ನೀವು ಪಾಸ್ವರ್ಡ್ ಹಿಂಟ್ ಮತ್ತು ರಿಕವರಿ ಇಮೇಲ್
ಸೇರಿಸಬೇಕಾಗುತ್ತದೆ. ಇಷ್ಟಾದ ಮೇಲೆ, ಟೆಲಿಗ್ರಾಮ್ ಕಳುಹಿಸುವ ಕೋಡ್ ನಮೂದಿಸಿ.
ಅಲ್ಲಿಗೆ ಟು ಸ್ಟೆಪ್ ವೆರಿಫಿಕೇಷನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಇದು ಟೆಲಿಗ್ರಾಮ್ನಲ್ಲಿ ಟು
ಸ್ಟೆಪ್ ವೆರಿಫಿಕೇಷನ್ ಮಾಡಲು ಅನುಸರಿಸಬೇಕಾದ
ಮಾದರಿಯಾಗಿದೆ. ಟು ಸ್ಟೆಪ್ ವೆರಿಫಿಕೇಷನ್ ಸಕ್ರಿಯಗೊಂಡ ಮೇಲೆ, ಹೊಸ ಸಾಧನದಲ್ಲಿಟೆಲಿಗ್ರಾಮ್ ಓಪನ್ ಮಾಡಲು ಈ ಹಿಂದೆ ಟು ಸ್ಟೆಪ್ ವೆರಿಫಿಕೇಷನ್ಗೆ ನೀಡಿದ ಪಾಸ್ವರ್ಡ್ ಅನ್ನು ಹಾಕಬೇಕಾಗುತ್ತದೆ ಮತ್ತು ಎಸ್ಸೆಮ್ಮೆಸ್ ಮೂಲಕ ಟೆಲಿಗ್ರಾಮ್ ರವಾನಿಸುವ ಕೋಡ್ ಅನ್ನು ಕೂಡ ಹಾಕಬೇಕು. ಆಗ ಮಾತ್ರವೇ ಟೆಲಿಗ್ರಾಮ್ ನಿಮ್ಮ ಬಳಕೆಗೆ ತೆರೆದುಕೊಳ್ಳುತ್ತದೆ.
ಲಾಸ್ಟ್ ಸೀನ್
ಮುಚ್ಚಿಡುವುದು ಹೇಗೆ?
ಟೆಲಿಗ್ರಾಮ್ ಆ್ಯಪ್
ಓಪನ್ ಮಾಡಿ, ಸ್ಕ್ರೀನ್ನ ಎಡಮೂಲೆಯಲ್ಲಿರುವ ಹೆಂಬರ್ಗರ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಆಗ ಸೆಟ್ಟಿಂಗ್ಸ್
ಬಾಕ್ಸ್ನಲ್ಲಿರುವ ಪ್ರೈವೆಸಿ ಮತ್ತು ಸೆಕ್ಯುರಿಟಿ ಆಪ್ಷನ್
ಮೇಲೆ ಟ್ಯಾಪ್ ಮಾಡಿ. ಬಳಿಕ
ಲಾಸ್ಟ್ ಸೀನ್ ಆಪ್ಷನ್ ಮೇಲೆ ಟ್ಯಾಪ್ ಮಾಡಿ. ಆಗ ಯಾರು ನಿಮ್ಮ
ಲಾಸ್ಟ್ ಸೀನ್ ನೋಡಬಹುದು ಎಂಬುದಕ್ಕೆ ಆಯ್ಕೆಗಳು
ಕಾಣುತ್ತವೆ. Every one to my contacts and Nobody ಪೈಕಿ ಲಾಸ್ಟ್
ಸೀನ್ ಕಾಣಿಸದಂತೆ ಮಾಡಲು ನೀವು ನೋಬಡಿ ಆಪ್ಷನ್
ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಸ್ಕ್ರೀನ್ನ ರೈಟ್ ಸೈಡ್ನಲ್ಲಿರುವ ಚೆಕ್
ಮಾರ್ಕ್ ಮೇಲೆ ಟ್ಯಾಪ್ ಮಾಡಿ.
ಆಗ ಎದುರಾಗುವ ಪಾಪ್ ಅಪ್ನಲ್ಲಿ
ನೀವು ಯಾರೊಂದಿಗೆ ನಿಮ್ಮ ಲಾಸ್ಟ್ ಸೀನ್ ಟೈಮ್
ನೋಡಲು ಅವಕಾಶ ಕಲ್ಪಿಸುವುದಿಲ್ಲವೋ ಅವರ ಲಾಸ್ಟ್ ಸೀನ್
ಅನ್ನು ನೀವು ನೋಡಲು ಸಾಧ್ಯವಾಗುವುದಿಲ್ಲಎಂಬ ಸಂದೇಶವನ್ನು ಕಾಣಬಹುದು. ಇಷ್ಟಾದ ಬಳಿಕ ನೀವು ಎಂದು ಓಕೆ ಎಂದು ಒಪ್ಪಿಗೆ ಕೊಟ್ಟರೆ ಲಾಸ್ಟ್ ಸೀನ್ ಮುಚ್ಚಿಡುವ ಪ್ರಕ್ರಿಯೆ ಪೂರ್ಣಗೊಳಿಸಿದಂತಾಗುತ್ತದೆ.