ನೀನಿಲ್ಲದ ಈ ಮನಸ್ಸು
ಮಾಗಿ ಕಾಲದ ಎಲೆ
ಉದುರಿಸಿದ ಗಿಡದಂಗಾಗೇತಿ
ಮನಸ್ಸಿನ್ಯಾಗಿನ ಮಾತು
ಹೊರಗ ಬರದ ಗಂಟಲೋಳಗ
ಕೂತು, ತಕರಾರು ಮಾಡೈತಿ
ನೆನಪಿನ ಮರದೊಳಗ
ಕೇರೀದಸ್ಟು ನಿನ್ನ
ಸಂಗಡದ ಆ ಗಳಿಗೆಗಳು
ಮತ್ತ ಹೊಳ್ಳಿ ಹೊಳ್ಳಿ ಬರ್ತಾವ
ಕೇರೀದಾಗ ತೂರಿ ಹೋದ
ಜೋಳ್ಳ ನೆನಪುಗಳೆಲ್ಲಾ ನಂದು
ಉಳಿದ ಗಟ್ಟಿ ಮಾತೆಲ್ಲಾ ನಿಂದು
ಮರೀಬೇಕಂತ ಮನಸ್ಸಿನ್ಯಾಗಿನ
ಮಾತು ಹೊರ ಬಿಟ್ಟಿಲ್ಲ
ಆದ್ರೂ ನೀ ಯಾಕ್ ಹಂಗ ಕಾಡ್ತಿ...?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
-
ಮೂರೂ ಮಾದರಿಯ ಕ್ರಿಕೆಟ್ನಲ್ಲಿಭಾರತೀಯ ಕ್ರಿಕೆಟ್ ತಂಡದ ಕಾಯಂ ಸದಸ್ಯರಾಗಿರುವ ರವೀಂದ್ರ ಜಡೇಜಾ ಅವರೀಗ ಐಪಿಎಲ್ನಲ್ಲಿಸಿಎಸ್ಕೆ ತಂಡದ ನಾಯಕ. - ಮಲ್ಲಿಕಾರ್ಜುನ ತಿಪ್ಪಾ...
-
ಎದೆಯ ನೋವು ಹೂವಾಗಲು, ಸೂರ್ಯನ ಕಿರಣಬೇಕೀಗ, ಮೋಡ ಸರಿದು, ಕತ್ತಲೆ ಚಿಮ್ಮಿ, ಬೆಳಕು ಬರುವ ಮುನ್ನ ಹೋಗಬೇಡ ಕವಲು ದಾರಿಗಳ ನಡುವೆ ನಿಂತಿದೆ ಪ್ರಾಣ, ಅದಕೆ ನೀನೇ ಉಸಿರು, ಬಿಕ...
-
ಹೇ ಒರಟ, "ಈ ಪ್ರೀತಿನೇ ಹಾಗೆ, ಬಾ ಅಂದ್ರ ಬರಲ್ಲ, ಹೋಗು ಅಂದ್ರ ಹೋಗಲ್ಲ" ಅಂತ್ ನೀನೇ ಹೇಳಿದ್ದು. ನೆನಪು ಮಾಡ್ಕೊ. ಶುದ್ಧ ಒರಟ ನೀನು. ನನ್ನ ಬೆನ್ನ ಹಿಂದೆ ಬಿ...